ಸ್ತೋತ್ರಸಂಹಿತಾ ೨.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

 ॐ श्रीगणेशाय नमः

ಶ್ರೀಕೃಷ್ಣರಕ್ಷಾಸ್ತೋತ್ರಮ್

ಧ್ಯಾನಮ್

(ಸ್ರಗ್ಧರಾವೃತ್ತಮ್)

ಧ್ಯಾಯೇದ್ಗೋಮಂಡಲಸ್ಥಂ ಸುಲಲಿತಮುರಲೀಗಾನಲೋಲಂ ಸುಮಾಲಂ

ಸೌಗಂಧಾದ್ಯೈಃ ಸುಲಿಪ್ತಂ ಹಲಧರಸಹಿತಂ ರುಕ್ಮಿಣೀಶಂ ಸದೀಶಮ್ |

ರಾಧಾರಾಸಪ್ರಸಕ್ತಂ ನಿಖಿಲಜನಹಿತಂ ಸರ್ವಲೋಕಪ್ರಕರ್ಷಂ

ಮಂದಸ್ಮೇರಂ ಹ್ಯನಾಥಂ ಪ್ರಣತಸುಗತಿದಂ ದೇವಕೀಕೃಷ್ಣರೂಪಮ್ ||

ಇತಿ ಧ್ಯಾನಮ್ |


ಮುರಲಿಮೋಹನ ಗೋಕುಲಾಧಿಪ

ಚಾರುಮಾಲಾಧಾರಿ ಕೃಷ್ಣನ

ವೀರ ಬಲರಾಮಾದಿ ಸಹಿತನ ರುಕ್ಮಿಣೀಪತಿಯ |

ಅರಸ ಸುಜನರ ಗಂಧಲೇಪಿತ

ಚಾರು ರಾಧಾರಾಸಪ್ರೀಯನ

ಮೂರುಲೋಕದ ಜನರ ಹಿತಕಾಯ್ವವನ ಸುಂದರನ ||

ಸಕಲಲೋಕಾಕರ್ಷಣನ ಮಿಗೆ

ಮುಕುಳಹಸಿತನ ಲೋಕನಾಥನ

ಭಕುತಜನರಕ್ಷಕನ ದೇವಕಿನಂದನನ ನೆನೆವೆ ||


‌(ಗೋ-‌ಮಂಡಲಸ್ಥಂ—ಗೋಕುಲಾಧಿಪ) ಗೋವುಗಳ / ಹಸುಗಳ / ಆಕಳುಗಳ / ದನಗಳ / ಧೇನುಗಳ / ಜ್ಞಾನಕಿರಣಗಳ / ಇಂದ್ರಿಯಗಳ / ಪೃಥ್ವೀ  ಸಮೂಹದಲ್ಲಿ ಸಾಕಾರ-ನಿರಾಕಾರ-ಸಗುಣ-ನಿರ್ಗುಣ-ಸೋಪಾಧಿಕ-ನಿರುಪಾಧಿಕನಾಗಿ ಸರ್ವವ್ಯಾಪಕನಾಗಿ ಸಾನ್ನಿಧ್ಯವಹಿಸಿರುವಂತೆ ತೋರುವ, ‌‌(ಸು-ಲಲಿತ-ಮುರಲೀ-ಗಾನ-ಲೋಲಂ—ಮುರಲಿಮೋಹನ) ಅತ್ಯಂತ ಸುಂದರವೂ ಸುಶ್ರಾವ್ಯವೂ ಶ್ರವಣಮನೋಹರವೂ ಆದ ಸುಮಧುರ ಕೊಳಲನಾದವನ್ನು ಅತ್ಯಂತ ಸರಾಗವಾಗಿ ನಿರರ್ಗಳವಾಗಿ ಲೀಲಾಜಾಲವಾಗಿ ಉಂಟುಮಾಡುವುದರಲ್ಲೇ ತನ್ಮಯನಾದಂತೆ ತೋರುವ, (ಸುಮಾಲಂ—ಚಾರು-ಮಾಲಾ-ಧಾರಿ) ಚಂದದ ಪುಷ್ಪ-ಆಭರಣ-ಕೌಸ್ತುಭ-ತುಲಸೀ-ವನಮಾಲಾದಿಗಳಿಂದ ವಿಭೂಷಿತನಾಗಿರುವಂತೆ ತೋರುವ,

(ಸೌಗಂಧಾದ್ಯೈಃ ಸುಲಿಪ್ತಂ—ಚಾರುಗಂಧಲೇಪಿತ) ಸುಗಂಧವುಳ್ಳದ್ದೂ, ಆಘ್ರೇಯವೂ, ಸುವಾಸನಾಭರಿತವಾದುದೂ ಆದ ಶ್ರೀಗಂಧ-ಚಂದನ-ಅಗರು ಮುಂತಾದ ಸುಗಂಧದ್ರವ್ಯಗಳಿಂದ ಚೆನ್ನಾಗಿ ಲೇಪಿಸಲ್ಪಟ್ಟ ದೇಹವುಳ್ಳವನಂತೆ ತೋರುವ, (ಹಲಧರಸಹಿತಂ—ವೀರ ಬಲರಾಮಾದಿ ಸಹಿತನ) ಹಲ / ನೇಗಿಲನ್ನು ಧರಿಸಿದ ವೀರನಾದ ಅಣ್ಣ ಬಲರಾಮಸಮೇತನಾಗಿರುವಂತೆ ತೋರುವ, (ರುಕ್ಮಿಣೀಶಂ—ರುಕ್ಮಿಣೀಪತಿಯ) ಸಾಕ್ಷಾತ್ ಮಹಾಲಕ್ಷ್ಮಿಯ ಅವತಾರವಾದ ರುಕ್ಮಿಣೀದೇವಿಯ ರಮಣನಾಗಿರುವಂತೆ ತೋರುವ, (ಸದೀಶಮ್—ಸುಜನರ ಅರಸ) ಸಜ್ಜನರ, ಶಿಷ್ಟರ, ಸಾಧು-ಸಂತರ, ಸತ್ಪುರುಷರ, ಧಾರ್ಮಿಕರ, ಲೋಕಹಿತಕಾರಕರ ಅಧಿಪನಾಗಿರುವಂತೆ ಗೋಚರಿಸುವ,

(ರಾಧಾರಾಸಪ್ರಸಕ್ತಂ—ರಾಧಾರಾಸಪ್ರೀಯನ) ಸಾಕ್ಷಾತ್ ಆದಿಮಾಯೆಯ ಸ್ವರೂಪವಾದ ಶ್ರೀರಾಧಾದೇವಿಯೆಂಬ ಪ್ರಕೃತಿತತ್ತ್ವಾತ್ಮಕಿಯೊಡನೆ ಸದಾ ಸಂಲಗ್ನನಾಗಿದ್ದು ಪ್ರಕೃತಿ-ಪುರುಷಸಂಮಿಶ್ರಣರೂಪವಾದ ಸೃಷ್ಟಿನಾಟಕಲೀಲಾವಿಶಾರದನಾಗಿರುವಂತೆ ತೋರುವ, (ನಿಖಿಲಜನಹಿತಂ—ಮೂರುಲೋಕದ ಜನರ ಹಿತ ಕಾಯ್ವವನ) ಸಮಗ್ರ ಸೃಷ್ಟಿಯ ಹಿತವನ್ನೇ ಸದಾ ಕಾಯುವವನಂತಿರುವ, (ಸರ್ವಲೋಕಪ್ರಕರ್ಷಂ—ಸುಂದರನ, ಸಕಲಲೋಕಾಕರ್ಷಣನ, ಮಿಗೆ) ವಿಶ್ವದ ಎಲ್ಲರನ್ನೂ ಎಲ್ಲವನ್ನೂ ತನ್ನೆಡೆಗೆ, ತನ್ನ ಸೌಂದರ್ಯಾತಿಶಯದಿಂದಲೋ, ಮಹಿಮೆಯಿಂದಲೋ, ಆಕರ್ಷಕಶಕ್ತಿಯಿಂದಲೋ, ಸೃಷ್ಟಿ-ಸ್ಥಿತಿ-ಲಯಕ್ಕಾಗಿ ಸೆಳೆದುಕೊಳ್ಳುತ್ತಿರುವನೋ ಎಂಬಂತಿರುವ ("ಯತೋ ವಾ ಇಮಾನಿ ಭೂತಾನಿ ಜಾಯಂತೇ | ಯೇನ ಜಾತಾನಿ ಜೀವಂತಿ | ಯತ್ಪ್ರಯಂತ್ಯಭಿಸಂವಿಶಂತಿ |...ತದ್ ಬ್ರಹ್ಮ |"—ತೈತ್ತಿರೀಯೋಪನಿಷತ್),

(ಮಂದಸ್ಮೇರಂ—ಮುಕುಳಹಸಿತನ) ಮೆಲುನಗೆ / ಮಂದಸ್ಮಿತ / ಮುಗುಳುನಗೆ ಯಿಂದ ಕೂಡಿರುವ, (ಅನಾಥಂ ಹಿ‍—ಲೋಕನಾಥನ) ತನಗೆ ಬೇರೊಬ್ಬ ನಾಥನಾರೂ ಇಲ್ಲದೆ ತಾನೇ ಲೋಕನಾಥನಾದ್ದರಿಂದ ಅ-ನಾಥನೂ ಎಂಬಂತಿರುವ ("ನಾಸ್ತಿ ಅಸ್ಯ ನಾಥಃ, ಇತಿ ಅನಾಥಃ") (ಪ್ರಣತಸುಗತಿದಂ—ಭಕುತಜನ ರಕ್ಷಕನ) ತನ್ನನ್ನು ಪ್ರಣಾಮಮಾಡಿ ಶರಣುಹೊಂದಿರುವ ಭಕ್ತರಿಗೆ ಉತ್ತಮ ಗತಿಯನ್ನು ಕೊಡುವ ಭಕ್ತರಕ್ಷಕನೆನಿಸಿರುವ(ಪ್ರ-ನತ-ಸು-ಗತಿ-ದಂ—ಪ್ರಕೃಷ್ಟೇನ ನಮನ್ತಃ ಪ್ರಣತಾಃ, ತೇಷಾಂ ಸಮ್ಯಕ್ ಗತಿಂ ದದಾತಿ ಇತಿ"), (ದೇವಕೀಕೃಷ್ಣರೂಪಮ್—ದೇವಕಿನಂದನನ ಕೃಷ್ಣನ) ಅದಿತೀದೇವಿಯ ಅಂಶಳಾದ ದೇವಕೀದೇವಿಯ ಪುತ್ರನೂ ಆಕೆಗೆ ಆನಂದವನ್ನುಂಟುಮಾಡಿದವನೂ ಆದ ವಾಸುದೇವ ಪರಮಾತ್ಮಾ ಶ್ರೀಕೃಷ್ಣನನ್ನು, (ಧ್ಯಾಯೇತ್—ನೆನೆವೆ) ಧ್ಯಾನಿಸಬೇಕು, ನೆನೆಯಬೇಕು, ಸ್ಮರಿಸಬೇಕು. 


ಜ್ಞಾನಿಗಳಿಗೆ ನಿರ್ಗುಣ ನಿರುಪಾಧಿಕ ನಿರಾಕಾರ ಪರಬ್ರಹ್ಮಸ್ವರೂಪನಾದ ಕೃಷ್ಣನ ಇಂತಹ  ಸಗುಣ ಸಾಕಾರ ಸೋಪಾಧಿಕರೂಪವನ್ನು ಉಪಾಸಕರು, ಸಾಧಕರು ಉಪಾಸಿಸಬೇಕೆಂದರ್ಥ. ಉಪಾಧಿಯೆಂದರೆ ದೇಹ, ಸಂಬಂಧಾದಿ ಗುರುತುಗಳೆಂದರ್ಥ. ಅಂತಹ ಉಪಾಧಿರಹಿತನು ಪರಮಾತ್ಮನು, ಸರ್ವಾತ್ಮನು, ಆತ್ಮನು. ಆದರೆ, ಇಂತಹ ನಿರುಪಾಧಿಕತತ್ತ್ವವನ್ನು ಅರಿಯಲಾರದ ಸಾಧಕರ ಹಂತದಲ್ಲಿರುವವರು ಮೊದಲಿಗೆ ಉಪಾಧಿಗಳಿರುವ ವಾಸುದೇವ ದೇವಕೀಪುತ್ರ ಕೃಷ್ಣನನ್ನು ಪರಬ್ರಹ್ಮಸ್ವರೂಪನಾಗಿ ಉಪಾಸಿಸಬೇಕೆಂಬುದು ತಾತ್ಪರ್ಯ.



(ಅನುಷ್ಟುಬ್-ವೃತ್ತಮ್)

ಲೀಲಾ ವೈ ವಾಸುದೇವಸ್ಯ ನಾಂತಮೇತಿ ಗತಿಪ್ರದಾ|

ತತ್ರೈಕಾಕ್ಷರಮಾತ್ರಂ ತು ಮಹಾಪಾಪವಿನಾಶನಮ್ ||೧||


ವಾಸುದೇವನ ಲೀಲೆ ಕೊನೆಯಿರ

ದಾ ಸುಗತಿ ಮೋಕ್ಷವನೆ ತೋರ್ಪುದು

ಲೇಸಹುದು ಲೀಲೆಯದದೊಂದಕ್ಷರದ ಪುಣ್ಯದಲಿ ||


(ವಾಸುದೇವಸ್ಯ—ವಾಸುದೇವನ) ವಾಸುದೇವನ, (ಲೀಲಾ—ಲೀಲೆ) ಲೀಲೆಯು, (ಅಂತಂ ನ ಏತಿ—ಕೊನೆಯರದ) ಕೊನೆಮುಟ್ಟಲಾರದು, ನಿಶ್ಚಯವಾಗಿಯೂ ಅದು ಅನಂತ. (ಗತಿಪ್ರದಾ—ಆ ಸುಗತಿ ಮೋಕ್ಷವನೆ ತೋರ್ಪುದು) ಅಂತೆಯೇ, ಸದ್ಗತಿಯನ್ನೀಯುವಂಥದ್ದು. (ತತ್ರ—ಲೀಲೆಯು ಅದು) ಅಂತಹ ಲೀಲೆಯ, (ಏಕಾಕ್ಷರಮಾತ್ರಂ ತು—ಅದೊಂದಕ್ಷರದ ಪುಣ್ಯದಲಿ) ಒಂದಕ್ಷರಮಾತ್ರದ ಪುಣ್ಯವೂ, (ಮಹಾಪಾಪ-ವಿನಾಶನಮ್—ಲೇಸು ಅಹುದು) ಮಹಾಪಾಪವನ್ನೇ ನಾಶಮಾಡುವಂಥದ್ದು.


ಟಿಪ್ಪಣಿ—

ನ+ಅಂತಮ್—ನಾಂತಮ್ (ಸವರ್ಣದೀರ್ಘಸಂಧಿಃ)

ತತ್ರ+ಏಕ+ಅಕ್ಷಮಾತ್ರಮ್—ತತ್ರೈಕ(ವೃದ್ಧಿಸಂಧಿಃ)+ಅಕ್ಷಮಾತ್ರಮ್—ತತ್ರೈಕಾಕ್ಷರಮಾತ್ರಮ್(ಸವರ್ಣದೀರ್ಘಸಂಧಿಃ)



ಧ್ಯಾತ್ವಾ ನೀಲಾಂಬರಶ್ಯಾಮಂ ಕೃಷ್ಣಂ ಕಮಲಲೋಚನಮ್ |

ರುಕ್ಮಿಣೀಬಲರಾಮಾಭ್ಯಾಂ ಸಹಿತಂ ಗೋಪತಿಂ ಹರಿಮ್ ||೨||


ನೀಲಮೇಘಶ್ಯಾಮ ಕೃಷ್ಣನ

ವ್ಯಾಲಶಯನನ ಪದುಮನೇತ್ರನ

ಆ ಲಲನೆ ರುಕುಮಿಣಿಯ ರಮಣನ ಗೋಪತಿಯ ನೆನೆದು ||


(ಕಮಲ-ಲೋಚನಮ್—ಪದುಮ-ನೇತ್ರನ) ತಾವರೆಯಂಥ ಕಣ್ಗಳುಳ್ಳ, (ನೀಲಾಂಬರ-ಶ್ಯಾಮಮ್—ನೀಲಮೇಘಶ್ಯಾಮ) ನೀಲಾಗಸದಂತಹ, ನೀಲವಾದ ಮೋಡದಂತಹ ಶ್ಯಾಮಲ ಮೈಬಣ್ಣವುಳ್ಳ, (ವ್ಯಾಲಶಯನನ) ಪನ್ನಗದ ಮೇಲೊರಗಿರುವ ನಾರಾಯಣನ ಪೂರ್ಣಾವತಾರಿಯಾದ, (ರುಕ್ಮಿಣೀಬಲರಾಮಾಭ್ಯಾಂ ಸಹಿತಂ—ಆ ಲಲನೆ ರುಕುಮಿಣಿಯ ರಮಣನ) ಆ ಸ್ತ್ರೀರನ್ನೆಯಾದ (ರತ್ನ—ರನ್ನ) ರುಕ್ಮಿಣಿಯ ಪತಿಯಾಗಿ ಆಕೆಯೊಂದಿಗೂ ಅಣ್ಣ ಬಲರಾಮನೊಂದಿಗೂ ದರ್ಶನವನ್ನೀವ, (ಗೋಪತಿಂ—ಗೋಪತಿಯ) ಗೋಪಾಲನಾದ, ಪೃಥ್ವೀಪತಿಯಾದ, ಇಂದ್ರಿಯಾಧಿಪನಾದ, ಜ್ಞಾನಸ್ವರೂಪನಾದ, (ಹರಿಂ) ಸಕಲಭಕ್ತರ ಪಾಪವನ್ನು, ಕಷ್ಟವನ್ನು ಪರಿಹರಿಸಿ ಶ್ರೀಹರಿಯೆನಿಸಿದ, (ಧ್ಯಾತ್ವಾ—ನೆನೆದು) ಧ್ಯಾನಿಸಿ, ಸ್ಮರಿಸಿಕೊಂಡು,


ಟಿಪ್ಪಣಿ—

ಗೋ(ಗೋಃ)—ಗೋವು, ಭೂಮಿ, ವಾಕ್ / ಮಾತು, ಕಿರಣ, ತೇಜಸ್ಸು, ಬೆಳಕು, ನಿಯಂತ್ರಕ, ವೃಷಭ / ಎತ್ತು, ಮಾತೆ, ಇಂದ್ರಿಯ, ಕಣ್ಣು, ಜಲ, ಸ್ವರ್ಗ, ಇಷು / ಬಾಣ, ಪಶು, ವಜ್ರ, ದಿಕ್—ಇತ್ಯಾದಿ ಅರ್ಥಗಳಿವೆ.

ಭೂರ್ಭೂಮಿರಚಲಾನನ್ತಾ ರಸಾ ವಿಶ್ವಂಭರಾ ಸ್ಥಿರಾ |

ಧರಾ ಧರಿತ್ರೀ ಧರಣಿಃ ಕ್ಷೋಣಿರ್ಜ್ಯಾ ಕಾಶ್ಯಪೀ ಕ್ಷಿತಿಃ ||

ಸರ್ವಂಸಹಾ ವಸುಮತೀ ವಸುಧೋರ್ವೀ ವಸುಂಧರಾ |

ಗೋತ್ರಾ ಕು ಪೃಥಿವೀ ಪೃಥ್ವೀ ಕ್ಷ್ಮಾऽವನಿರ್ಮೇದಿನೀ ಮಹೀ ||

ವಿಪುಲಾ ಗಹ್ವರೀ ಧಾತ್ರೀ ಗೌರಿಲಾ ಕುಂಭಿನೀ ಕ್ಷಮಾ |

ಭೂತಧಾತ್ರೀ ರತ್ನಗರ್ಭಾ ಜಗತೀ ಸಾಗರಾಂಬರಾ ||

ಇಡಾ ಭೂತ ಇರಾ ರೋದಸ್ ರೋದಸೀ (ಸ್ತ್ರೀಷು ಪೂಜಿತಾ) |


ಅನಡ್ವಾನ್ ಸೌರಭೇಯೋ ಗೌರುಕ್ಷ್ಣಾಂ ಸಂಹತಿರೌಕ್ಷಕಮ್ |

ಗವ್ಯಾ ಗೋತ್ರಾ ಗವಾಂ ವತ್ಸಧೇನ್ವೋರ್ವಾತ್ಸಕಧೈನುಕೇ ||

ಸ ತು ಸರ್ವಧುರೀಣಃ ಸ್ಯಾದ್ಯೋ ವೈ ಸರ್ವಧುರಾವಹಃ |

ಮಾಹೇಯೀ ಸೌರಭೇಯೀ ಗೌರುಸ್ರಾ ಮಾತಾ ಚ ಶೃಂಗಿಣೀ ||


ಸ್ವರ್ಗೇಷುಪಶುವಾಗ್ವಜ್ರದಿಙ್ನೇತ್ರಘೃಣಿಭೂಜಲೇ |

ಲಕ್ಷ್ಯದೃಷ್ಟ್ಯಾ ಸ್ತ್ರಿಯಾಂ ಪುಂಸಿ ಗೌರ್ಲಿಂಗಂ ಚಿಹ್ನಶೇಫಸೋಃ ||


ಶಂಖಚಕ್ರಗದಾಪದ್ಮಧರಂ ವೇಣುವಿನೋದಿನಮ್ |

ಧರ್ಮಸಂಸ್ಥಾಪನಾರ್ಥಾಯ ಸಮ್ಭವಂ ಚ ಯುಗೇ ಯುಗೇ ||೩||


ಶಂಖಚಕ್ರವ ಧರಿಸಿ ಗದೆಯನು

ಪಂಕಜವ ಕರದೊಳಗೆ ಪಿಡಿದಿಹ

ಸಂಕರುಷಣಾತ್ಮಕನು ವೇಣುವಿನೋದಿ ಕೇಶವನು |

ಬಿಂಕವಿಲ್ಲದೆ ಸಕಲರೂಪದಿ

ಶಂಕೆಯಳಿಸುತ ಭಕುತಲೋಕದ

ಪಂಕ ಕಳೆಯಲು ಕಾಲ ಕಾಲಕೆ ಜಗದಲವತರಿಪ ||


(ಶಂಖಚಕ್ರಗದಾಪದ್ಮಧರಂ—ಶಂಖಚಕ್ರವ ಧರಿಸಿ ಗದೆಯನು ಪಂಕಜವ ಕರದೊಳಗೆ ಪಿಡಿದಿಹ) ತನ್ನ ಚತುರ್ಭುಜಗಳಲ್ಲಿ ಅಸುರಗರ್ಭವನ್ನು ಸೀಳಬಲ್ಲ ನಾದವುಂಟುಮಾಡುವ ಪಾಂಚಜನ್ಯಶಂಖವನ್ನೂ ("ಗರ್ಭಾ ದೇವಾರಿನಾರೀಣಾಂ ವಿಶೀರ್ಯಂತೇ ಸಹಸ್ರಧಾ | ತವ ನಾದೇನ ಪಾತಾಲೇ ಪಾಂಚಜನ್ಯ ನಮೋऽಸ್ತು ತೇ ||"), ಸೃಷ್ಟಿ/ಕಾಲಚಕ್ರಸ್ವರೂಪವಾದ ಸುದರ್ಶನಚಕ್ರವನ್ನೂ, ದುಷ್ಟಶಿಕ್ಷಣಕ್ಕಾಗಿ ಕೌಮೋದಕೀಗದಾಯುಧವನ್ನೂ, ಭಕ್ತಪ್ರೇಮದ ದ್ಯೋತಕವಾಗಿಯೂ, ಪುತ್ರನಾದ ಪದ್ಮಾಸನನಾದ ಚತುರ್ಮುಖಬ್ರಹ್ಮನ ಮೇಲಿನ ವಾತ್ಸಲ್ಯದ ದ್ಯೋತಕವಾಗಿಯೂ, ಸೃಷ್ಟಿಯಲ್ಲಿ ಶಾಂತಿಪರಿಪಾಲನಾರ್ಥವಾಗಿಯೂ, ನಿತ್ಯವೂ ಅನಪಾಯಿನಿಯಾದ (ಅ-ಪಾಯವೆಂದರೆ ದೂರ ಹೋಗುವುದು. ನಿತ್ಯ ಅನಪಾಯಿನಿಯೆಂದರೆ ಸದಾ ಜೊತೆಗಿರುವುದು) ಕಮಲಾಸನೆಯಾದ ಮಹಾಲಕ್ಷ್ಮಿಯ ದ್ಯೋತಕವೂ ಆಗಿರುವ ಕಮಲವನ್ನೂ ಧರಿಸಿರುವ, (ವೇಣುವಿನೋದಿನಮ್—ವೇಣುವಿನೋದಿ) ಕೊಳಲಗಾನದಲ್ಲೇ ಮೈಮರೆತಂತಿರುವ (ವೇಣು—ಬಿದಿರು, ಬಿದಿರಿನಿಂದ ಮಾಡಿದ ಕೊಳಲು, ವಂಶೀ, ಮುರಲೀ), (ಚ) ಹಾಗೆಯೇ, (ಬಿಂಕವಿಲ್ಲದೆ ಸಕಲರೂಪದಿ) ಇಂತಹ ಶ್ರೀಕೃಷ್ಣರೂಪವಲ್ಲದೆ, ಮತ್ಸ್ಯ-ಕೂರ್ಮ-ವರಾಹ-ನರಸಿಂಹ-ವಾಮನ-ಪರಶುರಾಮ-ರಾಮ-ಕೃಷ್ಣ-ಬುದ್ಧ-ಕಲ್ಕಿಯೆಂಬ ಪ್ರಸಿದ್ಧವಾದ ದಶಾವತಾರವಲ್ಲದೆ ವ್ಯಾಸ-ಋಷಭದೇವ-ಕಪಿಲ-ಪೃಥು-ದತ್ತಾತ್ರೇಯ-ಆಚಾರ್ಯತ್ರಯರು-ಗುರುಸ್ವರೂಪ ಮುಂತಾದ ಅನಂತ ಅವತಾರಗಳನ್ನು ಯಾವುದೇ ಜೀವಜಾತಿಭೇದಭಾವವಿಲ್ಲದೆ ಧರಿಸಿ,  (ಶಂಕೆಯಳಿಸುತ ಭಕುತಲೋಕದ) ಜ್ಞಾನ-ಭಕ್ತಿ-ವೈರಾಗ್ಯ-ಧರ್ಮಾಧರ್ಮಾದಿ ವಿಚಾರಗಳಲ್ಲಿ ಭಕ್ತಸಮೂಹಕ್ಕಿರಬಹುದಾದ ಸಮಸ್ತ ಸಂದೇಹಗಳನ್ನೂ ಪರಿಹರಿಸುತ್ತಾ, ಶಿಷ್ಟಪರಿಪಾಲನೆಯನ್ನು ಮಾಡುತ್ತಾ, (ಪಂಕ ಕಳೆಯಲು) ಲೋಕದ ಅಜ್ಞಾನ, ಅಧರ್ಮ, ಅನ್ಯಾಯಾದಿ ಕೊಳೆಯನ್ನು ನಿವಾರಿಸಲು, (ಸಂಕರುಷಣಾತ್ಮಕನು) ಸಂಕರ್ಷಣನ / ಶೇಷನ ಅಂತರಾತ್ಮನೂ ತಾನಾಗಿ, ಅವನ ಮೇಲೆ  ಕ್ಷೀರಸಾಗರದಲ್ಲಿ ಪವಡಿಸಿದಂತಿರುವ, (ಕೇಶವನು) ಶ್ರೀಮನ್ನಾದಿನಾರಾಯಣನು / ಪರಮಾತ್ಮನು / ಪರಮೇಶ್ವರನು / ಸರ್ವೇಶ್ವರನು / ಪರಬ್ರಹ್ಮಸ್ವರೂಪನು, (ಧರ್ಮಸಂಸ್ಥಾಪನಾರ್ಥಾಯ ಯುಗೇ ಯುಗೇ ಸಮ್ಭವಂ—ಕಾಲ ಕಾಲಕೆ ಜಗದಲವತರಿಪ) ಅಧರ್ಮದ ಹೆಚ್ಚಳವೂ ಧರ್ಮದ ನ್ಯೂನತೆಯೂ ಬಂದೊದಗಿದಾಗ ಆಯಾ ಕಾಲಕಾಲಕ್ಕೆ ಲೋಕವ್ಯವಹಾರಾನುಕೂಲವಾದ ಧರ್ಮಸಂಸ್ಥಾಪನೆಗಾಗಿ ಮತ್ತೆ ಮತ್ತೆ ಅವತರಿಸಿದಂತೆ ತೋರುವನು. ಹಾಗೆ ಅವತರಿಸುವ ಪರತತ್ತ್ವವನ್ನು ಸರ್ವಥಾ ಶರಣುಹೊಂದುತ್ತೇನೆ.


ಕೃಷ್ಣರಕ್ಷಾಂ ಪಠೇದ್ದಿವ್ಯಂ ಸರ್ವಾರ್ಥದಂ ದಿನೇ ದಿನೇ |

ಯಸ್ಯ ಸ್ಮರಣಮಾತ್ರೇಣ ಜೀವನ್ಮುಕ್ತೋ ಭವೇತ್ಸುಧೀಃ ||೪||


ದಿವ್ಯವಾಗಿಹ ಕೃಷ್ಣರಕ್ಷಾ

ಭವ್ಯವಾಗಿಹ ಸ್ತೋತ್ರ ದಿನ ದಿನ

ನವ್ಯಭಕ್ತಿಯ ಸಹಿತ ಪಠಿಸಲು ಜೀವನದಿ ಮುಕ್ತಿ ||


(ದಿವ್ಯಂ—ದಿವ್ಯವಾಗಿಹ ಭವ್ಯವಾಗಿಹ) ಇಂತಹ ದಿವ್ಯವಾದ, ಭವ್ಯವಾದ, (ಸರ್ವಾರ್ಥದಂ) ಎಲ್ಲ ಇಷ್ಟಾರ್ಥಗಳನ್ನೂ ಕೊಡಬಲ್ಲ, (ಕೃಷ್ಣರಕ್ಷಾಂ—ಕೃಷ್ಣರಕ್ಷಾ ಸ್ತೋತ್ರ) ಕೃಷ್ಣರಕ್ಷಾಸ್ತೋತ್ರವನ್ನು, (ದಿನೇ ದಿನೇ—ದಿನ ದಿನ ನವ್ಯ ಭಕ್ತಿಯ ಸಹಿತ) ಪ್ರತಿದಿನವೂ ಶ್ರದ್ಧಾಭಕ್ತಿಗಳಿಂದಲೂ, ಪರಿಶುದ್ಧ ಮನಸ್ಸಿನಿಂದಲೂ, (ಪಠೇತ್—ಪಠಿಸಲು) ಪಠಿಸಬೇಕು. (ಯಸ್ಯ) ಯಾವ ಆ ಪರಮಾತ್ಮನ ಹಾಗೂ ಈ ಸ್ತೋತ್ರದ (ಸ್ಮರಣಮಾತ್ರೇಣ) ಕೇವಲ ಸ್ಮರಣೆ/ಮನನಮಾತ್ರದಿಂದಲೇ, (ಸುಧೀಃ) ಜ್ಞಾನಿಯಾದವನು / ಬುದ್ಧಿವಂತನಾದವನು, (ಜೀವನ್ಮುಕ್ತಃ, ಭವೇತ್—ಜೀವನದಿ ಮುಕ್ತಿ) ಜೀವನ್ಮುಕ್ತನಾಗುತ್ತಾನೆ / ಬದುಕಿರುವಾಗಲೇ ಮುಕ್ತನಾಗಿ ಬಾಳುತ್ತಾನೆ, ಭವಬಂಧನದಿಂದ ಬಿಡುಗಡೆಯನ್ನು ಹೊಂದಿ ಸಚ್ಚಿದಾನಂದಸ್ವರೂಪನಾಗಿ ಬೆಳಗುತ್ತಾನೆ.


ಶಿರೋ ಮೇ ಕೇಶವಃ ಪಾತು ಭಾಲಂ ಗೋಪಾಲನಂದನಃ |

ವಾಸುದೇವೋ ದೃಶೌ ಪಾತು ದೇವಕೀತನಯಃ ಶ್ರುತೀ ||೫||


ನನ್ನ ಶಿರ ಕೇಶವನು ಸಲಹಲಿ

ನನ್ನ ಫಾಲವ ಗೋಪಬಾಲನು

ನನ್ನ ಕಣ್ ಕಿವಿ ವಾಸುದೇವನು ದೇವಕೀಸುತನು ||


(ಮೇ)ನನ್ನ, (ಶಿರಃ) ಶಿರವನ್ನು / ತಲೆಯನ್ನು, (ಕೇಶವಃ) ಕೇಶವನು, (ಪಾತು) ಪಾಲಿಸಲಿ. (ಭಾಲಂ)ಹಣೆಯನ್ನು, (ಗೋಪಾಲನಂದನಃ) ಗೋಪಾಲನಂದನನು ರಕ್ಷಿಸಲಿ. (ವಾಸುದೇವಃ) ವಾಸುದೇವನು, (ದೃಶೌ) ಕಣ್ಣುಗಳೆರಡನ್ನು, (ಪಾತು) ಕಾಪಾಡಲಿ. (ದೇವಕೀತನಯಃ) ದೇವಕೀತನಯನು, (ಶ್ರುತೀ) ಕಿವಿಗಳನ್ನು ಸಲಹಲಿ.


ಟಿಪ್ಪಣಿ—


೧) ಮೇ— ಮಮ, ನನ್ನ. ದಕಾರಾಂತಃ, ತ್ರಿಲಿಂಗಕಃ ಸರ್ವನಾಮಃ, "ಅಸ್ಮದ್ " ಶಬ್ದಃ, ಷಷ್ಠೀವಿಭಕ್ತಿಃ, ಏಕವಚನಮ್ | 

                            ಏಕವಚನಮ್                  ದ್ವಿವಚನಮ್                     ಬಹುವಚನಮ್

ಪ್ರಥಮಾವಿಭಕ್ತಿಃ     ಅಹಮ್(ನಾನು)             ಆವಾಮ್(ನಾವಿಬ್ಬರು)          ವಯಮ್(ನಾವು)


ದ್ವಿತೀಯಾ…    ಮಾಮ್/ಮಾ(ನನ್ನನ್ನು)  ಆವಾಮ್ / ನೌ(ನಮ್ಮಿಬ್ಬರನ್ನು) ಅಸ್ಮಾನ್ / ನಃ(ನಮ್ಮನ್ನು)


ತೃತೀಯಾ…   ಮಯಾ(ನನ್ನಿಂದ)         ಆವಾಭ್ಯಾಮ್(ನಮ್ಮಿಬ್ಬರಿಂದ)       ಅಸ್ಮಾಭಿಃ(ನಮ್ಮಿಂದ) 


ಚತುರ್ಥೀ…   ಮಹ್ಯಮ್/ಮೇ(ನನಗೆ)  ಆವಾಭ್ಯಾಮ್/ನೌ(ನಮ್ಮಿಬ್ಬರಿಗೆ)   ಅಸ್ಮಭ್ಯಮ್/ನಃ(ನಮಗೆ)


ಪಂಚಮೀ…   ಮತ್(ನನ್ನ ದೆಸೆಯಿಂದ)  ಆವಾಭ್ಯಾಮ್(ನಮ್ಮಿಬ್ಬರಿಂದಾಗಿ)  ಅಸ್ಮತ್(ನಮ್ಮಿಂದಾಗಿ)


ಷಷ್ಠೀ…     ಮಮ/ಮೇ(ನನ್ನ)    ಆವಯೋಃ/ನೌ(ನಮ್ಮಿಬ್ಬರ)   ಅಸ್ಮಾಕಮ್/ನಃ(ನಮ್ಮ)


ಸಪ್ತಮೀ…  ಮಯಿ(ನನ್ನಲ್ಲಿ)  ಆವಯೋಃ(ನಮ್ಮೀರ್ವರಲ್ಲಿ)   ಅಸ್ಮಾಸು(ನಮ್ಮಲ್ಲಿ)


೨) ದೃಶೌ— ಶಕಾರಾಂತಃ ಸ್ತ್ರೀಲಿಂಗಃ ದೃಶ್ ಶಬ್ದಃ, ದ್ವಿತೀಯಾವಿಭಕ್ತಿಃ, ದ್ವಿವಚನಮ್ | 

ದೃಕ್, ದೃಶೌ, ದೃಶಃ (ಪ್ರಥಮಾವಿಭಕ್ತಿಃ)| ದೃಶಂ ದೃಶೌ ದೃಶಃ (ದ್ವಿತೀಯಾವಿಭಕ್ತಿಃ)| "ಪಶ್ಯತಿ ಅನೇನ ಇತಿ"— ನೋಡುತ್ತಾನೆ ಇದರಿಂದ ಎಂಬುದಾಗಿ ದೃಕ್ ಎಂದರೆ ಕಣ್ಣು.


೩) ತನಯಃ— ಅಕಾರಾಂತಪುಲ್ಲಿಙ್ಗಃ, ತನಯಶಬ್ದಃ, ಪ್ರಥಮಾವಿಭಕ್ತಿಃ, ಏಕವಚನಮ್ | "ತನೋತಿ ವಿಸ್ತಾರಯತಿ ಕುಲಮ್ ಇತಿ"- ವಂಶವನ್ನು ಮುಂದುವರೆಸಿ ವಿಸ್ತರಿಸುವವನೇ ತನಯನು, ಮಗನು.


೪) ನಂದನಃ— "ನಂದಯತಿ ಇತಿ"- ಆನಂದವನ್ನುಂಟುಮಾಡುತ್ತಾನಾದ್ದರಿಂದ ಮಗನು ನಂದನನೆನಿಸುತ್ತಾನೆ. ನಂದತಿ ಎಂದರೆ ತಾನೇ ಆನಂದಪಡುತ್ತಾನೆ. ನಂದಯತಿ ಎಂದರೆ ಇತರರನ್ನು ಆನಂದಪಡಿಸುತ್ತಾನೆ.


೫) ಶ್ರುತೀ— ಶ್ರುತಿಃ, ಶ್ರುತೀ, ಶ್ರುತಯಃ (ಪ್ರಥಮಾ ಹಾಗೂ ದ್ವಿತೀಯಾ ವಿಭಕ್ತಿಗಳು) | ಇಕಾರಾಂತಸ್ತ್ರೀಲಿಂಗಃ ಶ್ರುತಿಶಬ್ದಃ | ಇಲ್ಲಿ ಕನ್ನಡದ "ಅನ್ನು" ಪ್ರತ್ಯಯಾಂತವಾಗಿರುವ ದ್ವಿತೀಯಾವಿಭಕ್ತಿ, ದ್ವಿವಚನ. ಕಿವಿಗಳೆರಡನ್ನು ಎಂದರ್ಥ.


೬) ಪಾತು— ಪಾ ರಕ್ಷಣೇ ಧಾತುಃ, ಲೋಟ್ ಲಕಾರಃ, ಪ್ರಥಮಾವಿಭಕ್ತಿಃ, ಏಕವಚನಮ್ | ಸಂಸ್ಕೃತದಲ್ಲಿ ಕ್ರಿಯಾಪದಗಳಿಗೆ ವಿವಿಧ ಕಾಲವಾಚಕವಾದ ೧೦ ಲಕಾರರೂಪಗಳಿವೆ.


ಲಟ್-ವರ್ತಮಾನೇ ಲೇಟ್-ವೇದೇ ಭೂತೇ ಲುಙ್-ಲಙ್-ಲಿಟಸ್ತಥಾ |

ವಿಧ್ಯಾಶಿಷೋಶ್ಚ ಲಿಙ್-ಲೋಟೌ ಲುಟ್-ಲೃಟ್-ಲೃಙ್ ಚ ಭವಿಷ್ಯತಿ ||


ವರ್ತಮಾನಕಾಲಕ್ಕೆ ಲಟ್ ಲಕಾರ (ಭವತಿ, ಪಾತಿ, ಪಠತಿ, ಕರೋತಿ—ಪರಸ್ಮೈಪದಿ; ಭೂಯತೇ, ಪಠ್ಯತೇ, ಕುರುತೇ—ಆತ್ಮನೇಪದಿ, …), ವೇದದಲ್ಲಿ ಮಾತ್ರ ವಿಶೇಷವಾಗಿರುವ ಲೇಟ್ ಲಕಾರ (ಇದರ ಕುರಿತು ಹೆಚ್ಚಿನ ಮಾಹಿತಿಗೆ, ಇದೇ ಲೇಖಕರ "ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ" ಎಂಬ ಕೃತಿಯನ್ನು ನೋಡಿ), ಭೂತಕಾಲಕ್ಕೆ ಲುಙ್(ಅದ್ಯತನಭೂತ— ಅಭೂತ್)– ಲಙ್(ಅನದ್ಯತನಭೂತ— ಅಭವತ್)-ಲಿಟ್(ಪರೋಕ್ಷಭೂತ— ಬಭೂವ) ಲಕಾರಗಳು, ವಿಧಿಸಲು / ಶಾಸನಮಾಡಲು ಹಾಗೂ ಆಶೀರ್ವದಿಸಲು / ಹಾರೈಸಲು / ಹರಸಲು ಲಿಙ್(ವಿಧಿಲಿಙ್— ಭವೇತ್; ಆಶೀರ್ಲಿಙ್— ಭೂಯಾತ್), ಲೋಟ್ (ಆಜ್ಞಾರ್ಥ— ಭವತು/ಭವತಾತ್) ಲಕಾರಗಳು ಹಾಗೂ ಭವಿಷ್ಯತ್ಕಾಲವಾಚಕವಾಗಿ ಲುಟ್ (ಅನದ್ಯತನಭವಿಷ್ಯತ್— ಭವಿತಾ), ಲೃಟ್ (ಅದ್ಯತನಭವಿಷ್ಯತ್— ಭವಿಷ್ಯತಿ), ಲೃಙ್ (ಪರೋಕ್ಷಭವಿಷ್ಯತ್— ಅಭವಿಷ್ಯತ್) ಲಕಾರಗಳು ಬಳಸಲ್ಪಡುತ್ತವೆ.


ನಾಸಾಂ ಪಾತು ಚ ಕಂಸಾರಿರ್ಮುಖಂ ಪಾಂಡವವತ್ಸಲಃ |

ರಸನಾಂ ಪಾತು ರಾಸೇಶಃ ಕಂಠಂ ಚ ಹಾಟಕಾಂಬರಃ ||೬||


ಆಸಿಯವ ಪಾಂಡವರ ನೇಹಿಗ

ನಾಸಿಕವ ಕಂಸಾರಿ ಸಲಹಲಿ

ರಾಸಪನು ನಾಲಗೆಯ ಕಂಠವ ಚಿನ್ನದಂಬರನು ||


(ಮುಖಂ—ಆಸಿಯವ /ಆಸ್ಯವ) ನನ್ನ ಮುಖ / ಬಾಯಿಯನ್ನು, (ಪಾಂಡವವತ್ಸಲಃ—ಪಾಂಡವರ ನೇಹಿಗ) ಪಾಂಡವರ ಮೇಲೆ ವತ್ಸ (ಮಕ್ಕಳ) ಭಾವ / ವಾತ್ಸಲ್ಯವನ್ನಿಟ್ಟ, "ಮಮ ಪ್ರಾಣಾ ಹಿ ಪಾಂಡವಾಃ" — "೫ ಜನ ಪಾಂಡವರೆಂದರೆ ನನ್ನ ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನವೆಂಬ ಪಂಚಪ್ರಾಣಗಳು, ನನಗೆ ಪಂಚಪ್ರಾಣ"ಎಂದು ಹೇಳಿ, ಅಂತೆಯೇ ಆಚರಿಸಿ, ಪಾಂಡವವತ್ಸಲನೆನಿಸಿದ ಶ್ರೀಕೃಷ್ಣನು, (ಪಾತು—ಸಲಹಲಿ) ರಕ್ಷಿಸಲಿ. (ಕಂಸಾರಿಃ—ಕಂಸಾರಿ) ಕಂಸನ ಶತ್ರುವಾದ ಶ್ರೀಕೃಷ್ಣನು, (ನಾಸಾಂ—ನಾಸಿಕವ) ನನ್ನ ಮೂಗನ್ನು, ಘ್ರಾಣೇಂದ್ರಿಯವನ್ನು ರಕ್ಷಿಸಲಿ. (ರಾಸೇಶಃ—ರಾಸಪನು) ಯಮುನಾತೀರದಲ್ಲೂ, ವೃಂದಾವನದಲ್ಲೂ ಗೋಪಿಕೆಯರೊಂದಿಗೆ ರಾಸಲೀಲೆಯನ್ನು ತೋರಿದ ಶ್ರೀಕೃಷ್ಣನು, (ರಸನಾಂ—ನಾಲಗೆಯ) ನನ್ನ ಜಿಹ್ವೆ / ನಾಲಿಗೆಯನ್ನು, (ಪಾತು) ರಕ್ಷಿಸಲಿ. (ಚ) ಮತ್ತು, (ಕಂಠಂ—ಕಂಠವ) ನನ್ನ ಕಂಠ / ಕುತ್ತಿಗೆಯ ಮುಂಭಾಗವನ್ನು / ಧ್ವನಿಯನ್ನು / ಸ್ವರವನ್ನು, (ಹಾಟಕಾಂಬರಃ—ಚಿನ್ನದ ಅಂಬರನು) ಹಳದಿಬಣ್ಣದ ಲೋಹವಾದ ಚಿನ್ನದ್ದೇ ಬಣ್ಣದ ರೇಷ್ಮೆಬಟ್ಟೆಯನ್ನುಟ್ಟು ಪೀತಾಂಬರನೆನಿಸಿದ ಶ್ರೀಹರಿಯು, ಸರ್ವಾಭರಣಗಳಿಂದ ಸರ್ವಾಂಗಭೂಷಿತನಾಗಿರುವ ಶ್ರೀಕೃಷ್ಣನು ಕಾಪಾಡಲಿ.


ಗ್ರೀವಾಂ ತು ತುಲಸೀಹಾರೀ ಸ್ಕಂಧೌ ಶಾರ್ಙ್ಗೀ ಚ ರಕ್ಷತು  |

ಬಾಹೂ ಪಾತು ಮಹಾಬಾಹುಶ್ಚಕ್ರೀ ಹಸ್ತೌ ಚ ರಕ್ಷತು ||೭||


ಎನ್ನ ಕೊರಳನು ತುಲಸಿಹಾರನು

ನನ್ನ ಹೆಗಲನು ಶಾರ್ಙ್ಗಧಾರನು

ನನ್ನ ಬಾಹುಕರಂಗಳನು ಮಹಬಾಹುಚಕ್ರಿಯು ತಾ ||


(ಗ್ರೀವಾಂ ತು—ಎನ್ನ ಕೊರಳನು) ನನ್ನ ಕುತ್ತಿಗೆಯ / ಕೊರಳಿನ ಹಿಂಭಾಗವನ್ನಾದರೋ, (ತುಲಸೀಹಾರೀ—ತುಲಸಿಹಾರನು) ತಳಸೀಮಾಲೆಯನ್ನು ಕೊರಳಲ್ಲಿ ಧರಿಸಿದ ಶ್ರೀಕೃಷ್ಣನು, (ರಕ್ಷತು) ರಕ್ಷಿಸಲಿ. (ಚ) ಹಾಗೆಯೇ, (ಸ್ಕಂಧೌ—ನನ್ನ ಹೆಗಲನು) ನನ್ನ ಭುಜಗಳೆರಡನ್ನು, (ಶಾರ್ಙ್ಗೀ—ಶಾರ್ಙ್ಗಧಾರನು) ಶಾರ್ಙ್ಗವೆಂಬ ಧನುಸ್ಸನ್ನು / ಬಿಲ್ಲನ್ನು ಧರಿಸಿರುವ ಪರಮಾತ್ಮನು ಕಾಪಾಡಲಿ. (ಬಾಹೂ ಮಹಾಬಾಹುಃ ಪಾತು, ಚ, ಹಸ್ತೌ ಚಕ್ರೀ ರಕ್ಷತು—ನನ್ನ ಬಾಹು-ಕರಂಗಳನು ಮಹಬಾಹು ಚಕ್ರಿಯು ತಾ) ನನ್ನ ತೋಳು/ಬಾಹುಗಳೆರಡನ್ನು ಮಹಾಬಾಹುವೆನಿಸಿದ ಭಗವಂತನು ಪಾಲಿಸಲಿ. ಹಾಗೂ, ನನ್ನ ಹಸ್ತ / ಕರ / ಅಂಗೈಗಳೆರಡನ್ನು ತನ್ನ ಕರಗಳಲ್ಲಿ ಸುದರ್ಶನಚಕ್ರಧಾರಿಯಾಗಿ ಚಕ್ರೀ ಎನಿಸಿದ ಶ್ರೀಕೃಷ್ಣನೇ ಸ್ವಯಂ ತಾನೇ ರಕ್ಷಿಸಲಿ.


ಟಿಪ್ಪಣಿ—


೧) ಗ್ರೀವಾಮ್— ಆಕಾರಾಂತಸ್ತ್ರೀಲಿಂಗಃ ಗ್ರೀವಾಶಬ್ದಃ, ದ್ವಿತೀಯಾವಿಭಕ್ತಿಃ, ಏಕವಚನಮ್ | ಗ್ರೀವಾ, ಗ್ರೀವೇ ಗ್ರೀವಾಃ | ಗ್ರೀವಾಮ್, ಗ್ರೀವೇ, ಗ್ರೀವಾಃ ||


೨) ಹಾರೀ— "ಹ್ರಿಯತೇ ಮನೋ ಯೇನ ಇತಿ ಹಾರಃ | ಹಾರಃ, ಅಸ್ಯ ಅಸ್ತೀತಿ ಹಾರೀ"— ಮನಸ್ಸು ಯಾವುದರಿಂದ ಅಪಹರಿಸಲ್ಪಡುವುದೋ ಅಂತಹ ಆಕರ್ಷಣೀಯ ವಸ್ತುವೇ ಹಾರವು. ಹಾರವು ಯಾವನಲ್ಲಿದೆಯೋ ಆತನೇ ಹಾರೀ. ಹಾರಿನ್ ಎಂಬ ನಕಾರಾಂತಪುಲ್ಲಿಂಗಶಬ್ದದ ಪ್ರಥಮಾವಿಭಕ್ತಿ, ಏಕವಚನರೂಪ. ಹಾರೀ, ಹಾರಿಣೌ, ಹಾರಿಣಃ | 


೩) ತು—ಅವ್ಯಯ. ಆದರೋ ಎಂದರ್ಥ. 

"ಸದೃಶಂ ತ್ರಿಷು ಲಿಂಗೇಷು ಸರ್ವಾಸು ಚ ವಿಭಕ್ತಿಷು |

ವಚನೇಷು ಚ ಸರ್ವೇಷು ಯನ್ನ ವ್ಯೇತಿ ತದವ್ಯಯಮ್ ||"


ಪುಲ್ಲಿಂಗ-ಸ್ತ್ರೀಲಿಂಗ-ನಪುಂಸಕಲಿಂಗಗಳೆಂಬ ಮೂರೂ ಲಿಂಗಗಳಲ್ಲೂ, ಪ್ರಥಮಾದಿಂದ ಸಪ್ತಮೀ ವರೆಗಿನ ಎಲ್ಲ ವಿಭಕ್ತಿಗಳಲ್ಲೂ, ಏಕ-ದ್ವಿ-ಬಹುವಚನಗಳಲ್ಲೂ, ಯಾವ ಶಬ್ದವು ವ್ಯತ್ಯಾಸಹೊಂದುವುದಿಲ್ಲವೋ ಅದೇ ಅವ್ಯಯವು.


೪) ತುಲಸೀಹಾರೀ—ತುಲಸ್ಯಾಃ ಹಾರಃ, ತುಲಸೀಹಾರಃ, ತದಸ್ಯ ಗ್ರೀವಾಯಾಮ್ ಅಸ್ತೀತಿ ತುಲಸೀಹಾರೀ | ತುಲಸಿಯ ಹಾರ— ತುಲಸೀಹಾರ (ಷಷ್ಠೀತತ್ಪುರುಷಸಮಾಸ). ಅದು ಇವನ ಕುತ್ತಿಗೆಯಲ್ಲಿದೆಯಾದ್ದರಿಂದ ಕೃಷ್ಣನು ತುಲಸೀಹಾರೀ. 


೫) ಸ್ಕಂಧೌ—"ಸ್ಕಂದ್ಯತೇऽಸೌ ಇತಿ"— ಚಲಿಸುತ್ತದೆ ಇದು ಎಂಬುದರಿಂದ ಚಲಿಸುವ ಅವಯವ, ಭುಜ. ಅಕಾರಾಂತಪುಲ್ಲಿಂಗ, ಸ್ಕಂಧಶಬ್ದ, ದ್ವಿತೀಯಾವಿಭಕ್ತಿ, ದ್ವಿವಚನ. ಸ್ಕಂಧಃ, ಸ್ಕಂಧೌ, ಸ್ಕಂಧಾಃ (ಪ್ರಥಮಾ)| ಸ್ಕಂಧಮ್, ಸ್ಕನ್ಧೌ, ಸ್ಕನ್ಧಾನ್ (ದ್ವಿತೀಯಾ)| ಭುಜಗಳೆರಡನ್ನು ಎಂದರ್ಥ.


೬) ಶಾರ್ಙ್ಗೀ—"ಶಾರ್ಙ್ಗಮ್ ಅಸ್ಯ ಅಸ್ತಿ ಇತಿ"— ಶಾರ್ಙ್ಗವೆಂಬ ಧನುಸ್ಸು ಇವನಿಗಿರುವುದರಿಂದ ವಿಷ್ಣುವು ಶಾರ್ಙ್ಗೀ, ಶಾರ್ಙ್ಗಪಾಣೀ(ಶಾರ್ಙ್ಗಂ ಪಾಣೌ ಯಸ್ಯ ಸಃ— ಶಾರ್ಙ್ಗವು ಯಾವನ ಕೈಯಲ್ಲಿದೆಯೋ ಅವನು). 


೭) ಚ—ಅವ್ಯಯ. ಮತ್ತು, ಹಾಗೂ ಎಂದರ್ಥ.


೮) ರಕ್ಷತು, ಪಾತು— ಲೋಟ್ ಲಕಾರದ ಪ್ರಥಮಪುರುಷ ಏಕವಚನ ರೂಪಗಳು. ರಕ್ಷಿಸಲಿ, ಪಾಲಿಸಲಿ ಎಂದರ್ಥ. ರಕ್ಷ್ ಪಾಲನೇ ಹಾಗೂ ಪಾ ರಕ್ಷಣೇ ಧಾತುಗಳು. ಧಾತುವೆಂದರೆ ಕ್ರಿಯಾಪದದ ಮೂಲರೂಪ. ಪ್ರಾತಿಪದಿಕವೆಂದರೆ ನಾಮಪದದ ಮೂಲರೂಪ. ಸುಬಂತ(ಸುಪ್ ಪ್ರತ್ಯಯಾಂತ) ವೆಂದರೆ ನಾಮಪದ. ತಿಙಂತವೆಂದರೆ (ತಿಙ್ ಪ್ರತ್ಯಯಾಂತ) ಕ್ರಿಯಾಪದ. "ಸುಪ್-ತಿಙನ್ತಂ ಪದಮ್"— ಸುಪ್ / ತಿಙ್ ಪ್ರತ್ಯಯಾಂತವಾದುದೇ ಪದವು. ಅಂದರೆ, ಸುಬಂತ / ನಾಮಪದ ಹಾಗೂ ತಿಙಂತ / ಕ್ರಿಯಾಪದಗಳನ್ನು "ಪದ" ಗಳೆನ್ನುತ್ತಾರೆ. ಉಳಿದವುಗಳನ್ನು "ಶಬ್ದ" ಗಳೆನ್ನುತ್ತಾರೆ. ವರ್ಣ / ಅಕ್ಷರಗಳಿಂದ ಕೂಡಿದ್ದು / ಕಿವಿಗೆ ಕೇಳಿಸಿದ್ದು (ಶ್ರೋತ್ರೇಂದ್ರಿಯಗ್ರಾಹ್ಯವಾದದ್ದು) / ಆಕಾಶದ ತನ್ಮಾತ್ರೆ ಅಥವಾ ಗುಣ— ಇವುಗಳನ್ನು ಶಬ್ದವೆನ್ನುವರು. ಪಂಚಭೂತಗಳಿಗೂ ಪಂಚತನ್ಮಾತ್ರೆಗಳಿವೆ.

"ಪೃಥ್ವೀ ಸಗನ್ಧಾ ಸರಸಾಸ್ತಥಾऽಪಃ

ಸ್ಪರ್ಶೀ ಚ ವಾಯುರ್ಜ್ವಲಿತಂ ಚ ತೇಜಃ |

ನಭಃ ಸಶಬ್ದಂ ಮಹತಾ ಸಹೈವ

ಕುರ್ವನ್ತು ಸರ್ವೇ ಮಮ ಸುಪ್ರಭಾತಮ್ ||"

ಪೃಥ್ವಿಯು ಗಂಧದಿಂದಲೂ, ಅಪ್ / ಜಲವು ರಸದಿಂದಲೂ, ತೇಜಸ್ / ಅಗ್ನಿಯು ರೂಪದಿಂದಲೂ, ವಾಯುವು ಸ್ಪರ್ಶದಿಂದಲೂ, ಆಕಾಶವು ಶಬ್ದವೆಂಬ ಗುಣದಿಂದಲೂ ಪ್ರಧಾನವಾಗಿ ಕೂಡಿರುವುದು. ಆಕಾಶಕ್ಕೆ ಶಬ್ದಮಾತ್ರ, ವಾಯುವಿಗೆ ಶಬ್ದ-ಸ್ಪರ್ಶಗಳೂ, ತೇಜಸ್ಸಿಗೆ / ಅಗ್ನಿಗೆ ಶಬ್ದ-ಸ್ಪರ್ಶ-ರೂಪಗಳೂ, ಅಪ್ಪಿಗೆ / ಜಲಕ್ಕೆ ಶಬ್ದ-ಸ್ಪರ್ಶ-ರೂಪ-ರಸಗಳೂ, ಪೃಥ್ವಿಗೆ ಇವುಗಳೊಂದಿಗೆ ಗಂಧವೂ ಗುಣವಾಗಿವೆ. 


೯) ಬಾಹೂ— ಉಕಾರಾಂತಃ ಪುಲ್ಲಿಂಗಃ, ಬಾಹುಶಬ್ದಃ, ದ್ವಿತೀಯಾವಿಭಕ್ತಿಃ (ದ್ವಿ.ವಿ.), ದ್ವಿವಚನಮ್ | ಬಾಹುಃ, ಬಾಹೂ, ಬಾಹವಃ (ಪ್ರ.ವಿ.)| ಬಾಹುಮ್, ಬಾಹೂ, ಬಾಹೂನ್ || ಬಾಹುಗಳೆರಡನ್ನು ಎಂದರ್ಥ.


೧೦) ಮಹಾಬಾಹುಃ— "ಮಹಾನ್ತೌ ಬಾಹೂ ಯಸ್ಯ ಸಃ"—ಮಹಾ ಬಾಹುಗಳು ಯಾವನದೋ ಅವನು (ಇಲ್ಲಿ ಕೃಷ್ಣ ಎಂದರ್ಥ. ಸಾಮಾನ್ಯವಾಗಿ ವೀರ ಎಂದರ್ಥ. ಬಹುವ್ರೀಹಿ ಸಮಾಸ). "ಅನ್ಯಪದಾರ್ಥಪ್ರಧಾನಃ ಬಹುವ್ರೀಹಿಃ"— ಯಾವ ಸಮಸ್ತಪದದ ವಿಗ್ರಹವಾಕ್ಯದಲ್ಲಿ ಬರುವ ಪದಗಳಿಗಿಂತ ಬೇರೆ ಅರ್ಥವನ್ನು ಸಮಸ್ತಪದವು ಕೊಡುತ್ತದೋ, ಹೀಗೆ ಅನ್ಯಪದಾರ್ಥವೇ ಪ್ರಧಾನವಾಗಿರುವ ಸಮಾಸಪ್ರಕ್ರಿಯೆಗೆ ಬಹುವ್ರೀಹಿಸಮಾಸವೆಂದು ಹೆಸರು. ತತ್ಪುರುಷಸಮಾಸವು ಉತ್ತರಪದಪ್ರಧಾನ(ದೇವಾನಾಂ ಗುರುಃ ದೇವಗುರುಃ, ದೇವತೆಗಳ ಗುರು, ದೇವಾನಾಮ್ ಷಷ್ಠೀವಿಭಕ್ತಿ. ಹಾಗಾಗಿ ಷಷ್ಠೀತತ್ಪುರುಷಸಮಾಸ). ಕರ್ಮಧಾರಯಸಮಾಸವು ಪೂರ್ವಪದಪ್ರಧಾನ(ನೀಲಂ ಚ ತತ್ ಅಂಬರಂ ಚ—ನೀಲಾಂಬರಮ್—ನೀಲವಸ್ತ್ರ, ಆಕಾಶ ಎಂಬರ್ಥಗಳಿವೆ). ದ್ವಂದ್ವಸಮಾಸವು ಉಭಯಪದಪ್ರಧಾನ(ರಾಮಶ್ಚ ಕೃಷ್ಣಶ್ಚ ರಾಮಕೃಷ್ಣೌ, ರಾಮನೂ ಕೃಷ್ಣನೂ ರಾಮಕೃಷ್ಣರು; ರಾಮಃ + ಚ— ರಾಮಸ್ + ಚ— ವಿಸರ್ಗಸಂಧಿ; ರಾಮಸ್ + ಚ—ರಾಮಶ್ಚ—ಶ್ಚುತ್ವಸಂಧಿ). ಮಹಾಬಾಹುಃ + ಚಕ್ರೀ— ಮಹಾಬಾಹುಶ್ಚಕ್ರೀ (ಶ್ಚುತ್ವಸಂಧಿ).


೧೧) ಚಕ್ರೀ— "ಚಕ್ರಮಸ್ಯಾಸ್ತೀತಿ (ಚಕ್ರಮ್ + ಅಸ್ಯ + ಅಸ್ತಿ + ಇತಿ— ಚಕ್ರಮ್ + ಅಸ್ಯ, ಚಕ್ರಮಸ್ಯ— ಅನುನಾಸಿಕಸಂಧಿ, ಚಕ್ರಮಸ್ಯ+ಅಸ್ತಿ—ಚಕ್ರಮಸ್ಯಾಸ್ತಿ—ಸವರ್ಣದೀರ್ಘಸಂಧಿ, ಚಕ್ರಮಸ್ಯಾಸ್ತಿ+ಇತಿ—ಚಕ್ರಮಸ್ಯಾಸ್ತೀತಿ—ಸವರ್ಣದೀರ್ಘಸಂಧಿ)" ಚಕ್ರವು ಇವನಲ್ಲಿದೆಯೆಂಬುದರಿಂದ ಶ್ರೀಕೃಷ್ಣನು ಚಕ್ರೀ. ಇದೇ ರೀತಿ ಶಂಖೀ, ಗದೀ ಇತ್ಯಾದಿ. ಚಕ್ರಿನ್ ಶಬ್ದದ ಪ್ರಥಮಾವಿಭಕ್ತಿ ಏಕವಚನ. ಚಕ್ರೀ, ಚಕ್ರಿಣೌ, ಚಕ್ರಿಣಃ ||


೧೨) ಹಸ್ತೌ— "ಹಸತಿ ವಿಕಸತೀತಿ" ಅರಳುತ್ತದೆ, ವಿಕಸಿಸುತ್ತದೆಯೆಂಬುದರಿಂದ ಕರತಲಕ್ಕೆ ಹಸ್ತವೆನ್ನಲಾಗಿದೆ. ಪ್ರತಿಯೊಂದು ಶಬ್ದಕ್ಕೂ ಈ ರೀತಿಯ ನಿಷ್ಪತ್ತಿ / ವ್ಯುತ್ಪತ್ತಿಯಿರುವುದು ಸಂಸ್ಕೃತಭಾಷೆಯ ವಿಶೇಷತೆ. ಅಕಾರಾಂತ ಪುಲ್ಲಿಂಗ ಹಸ್ತಶಬ್ದದ ದ್ವಿ.ವಿ. ದ್ವಿವಚನ. ಹಸ್ತಃ, ಹಸ್ತೌ, ಹಸ್ತಾಃ | ಹಸ್ತಮ್, ಹಸ್ತೌ, ಹಸ್ತಾನ್ || ಕರತಲಗಳನ್ನು / ಅಂಗೈಗಳನ್ನು ಎಂದರ್ಥ.



ಹೃದಯಂ ಪಾತು ಗೋಪೀಶೋ ಮಧ್ಯಂ ಚ ಪಾರ್ಥಸಾರಥಿಃ |

ನಾಭಿಂ ವೈ ಪದ್ಮನಾಭಶ್ಚ ಕಟೀ ಪ್ರಾಣಪ್ರಿಯೋऽವತು ||೮||


ಹೃದಯವನು ಗೋಪೀಶ ಕಾಯಲಿ

ಮಧ್ಯದೇಹವ ಪಾರ್ಥಸಾರಥಿ

ಪದುಮನಾಭನು ನಾಭಿ ಕಟಿಯನು ಪ್ರಾಣಪ್ರಿಯತಮನು ||


(ಗೋಪೀಶಃ—ಗೋಪೀಶ) ಗೋ-ಪಾಲಕರಾದ ಗೋಪಿಯರ ಒಡೆಯನಾದ ಗೋಪೀಶ, ಗೋಪರ ಈಶನಾದ ಗೋಪೇಶ ಶ್ರೀಕೃಷ್ಣನು, (ಹೃದಯಮ್—ಹೃದಯವನು) ನನ್ನ ಹೃದಯವನ್ನು, (ಪಾತು—ಕಾಯಲಿ) ರಕ್ಷಿಸಲಿ. (ಚ) ಹಾಗೆಯೇ, (ಮಧ್ಯಮ್—ಮಧ್ಯದೇಹವ) ದೇಹದ ಮಧ್ಯಭಾಗವನ್ನು, (ಪಾರ್ಥಸಾರಥಿ—ಪಾರ್ಥಸಾರಥಿ) ಅರ್ಜುನನ ಸಾರಥಿಯಾದ ಶ್ರೀಕೃಷ್ಣನು ಕಾಪಾಡಲಿ. (ನಾಭಿಮ್—ನಾಭಿ) ನಾಭಿ / ಹೊಕ್ಕುಳವನ್ನು, (ವೈ) ನಿಶ್ಚಯವಾಗಿಯೂ, (ಪದ್ಮನಾಭಃ—ಪದುಮನಾಭನು) ಪದ್ಮನಾಭನೆನಿಸಿದ ಶ್ರೀಹರಿಯು ಪಾಲಿಸಲಿ. (ಚ) ಅಂತೆಯೇ, (ಪ್ರಾಣಪ್ರಿಯಃ—ಪ್ರಾಣಪ್ರಿಯತಮನು) ನನ್ನ ಪ್ರಾಣಪ್ರಿಯನಾದ, ಮುಖ್ಯಪ್ರಾಣನಿಗೂ ಪ್ರಿಯನಾದ, ಮುಖ್ಯಪ್ರಾಣನನ್ನೂ ಪ್ರೀತಿಯಿಂದ ಕಾಣುವ, ಪ್ರಾಣಕ್ಕೆ ಅತ್ಯಂತ ಪ್ರಿಯನೂ ಆಧಾರನೂ ಆದ ಆತ್ಮಸ್ವರೂಪನಾದ ಶ್ರೀಕೃಷ್ಣನು, (ಕಟೀ—ಕಟಿಯನು)  ಸೊಂಟ / ಕಟಿಯ ಎಡಬಲಗಳನ್ನು, (ಅವತು) ರಕ್ಷಿಸಲಿ.


ಟಿಪ್ಪಣಿ—


೧) ಗೋಪೀಶಃ— "ಗೋಪೀನಾಮ್ ಈಶಃ, ಗೋಪೀಶಃ"— ಗೋಪಿಯರ ಈಶನು ಗೋಪೀಶನು (ಷಷ್ಠೀ-ತತ್ಪುರುಷ ಸಮಾಸ). "ಗವಾಂ ಪಾಲಿಕಾಃ, ಗೋಪ್ಯಃ"— ಗೋವುಗಳನ್ನು ಪಾಲಿಸುವವರು ಗೋಪಿಯರು. ಗೋಪೀ, ಗೋಪ್ಯೌ, ಗೋಪ್ಯಃ | ಗೋಪೀ+ಈಶಃ—ಗೋಪೀಶಃ (ಸವರ್ಣದೀರ್ಘ ಸಂಧಿ). "ಗವಾಂ ಪಾಲಕಾಃ, ಗೋಪಾಃ"— ಗೋವುಗಳ ಪಾಲಕರು / ಪತಿಗಳು / ಒಡೆಯರು ಗೋಪರು, ಗೋಪಾಲರು, ಗೋಪಾಲಕರು. "ಗೋಪಾನಾಮ್ ಈಶಃ, ಗೋಪೇಶಃ"— ಗೋಪರ ಒಡೆಯನು / ನಾಯಕನು ಗೋಪೇಶನು (ಷ.ತ.ಸಮಾಸ). ಗೋಪ+ಈಶಃ—ಗೋಪೇಶಃ (ಗುಣಸಂಧಿ). 


೨) ಹೃದಯಮ್— "ಹೃತಃ ಅಯಂ ವಿಷಯೈಃ ಇತಿ" (ಹೃತ್ ಅಯಮ್— ಹೃದಯಮ್), "ಹ್ರಿಯತೇ ವಿಷಯೈರಿತಿ"— ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳೆಂಬ ಪಂಚವಿಷಯಗಳಿಂದ ಅಪಹೃತವಾಗುವುದೇ / ಅಪಹರಿಸಲ್ಪಡುವುದೇ ಹೃದಯವು / ಮನಸ್ಸು. ಹೃಞ್ ಹರಣೇ ಧಾತುಜನ್ಯ. ಹೃತ್ ಎಂದರೂ ಹೃದಯವೇ. ಅಯಮ್ ಎಂದರೆ ಇವನು ಎಂಬರ್ಥದ "ಇದಮ್" ಶಬ್ದದ ಪುಲ್ಲಿಂಗ ಪ್ರಥಮಾವಿಭಕ್ತಿ ಏಕವಚನರೂಪ. ಇಂದ್ರಿಯವಿಷಯಗಳಿಂದ ಅಪಹೃತವಾದ ಇವನು / ಮನಸ್ಸು ಎಂದರ್ಥ. ಹೃದಯವೆಂದರೆ ರಕ್ತಪರಿಚಲನೆಯ ಅಂಗವೆಂದೂ, ಮನಸ್ಸೆಂದೂ, ಅನಾಹತ / ಹೃದಯಚಕ್ರ / ದ್ವಾದಶದಲಪದ್ಮದ ಸ್ಥಾನವೆಂದೂ ಕರೆಯಲ್ಪಟ್ಟಿದೆ. ಮೂಲಾಧಾರ(ಲಿಂಗ-ಗುದಗಳ ಅಂತರದ ಮಧ್ಯಭಾಗ)-ಸ್ವಾಧಿಷ್ಠಾನ(ಲಿಂಗ)-ಮಣಿಪುರ(ನಾಭಿ)-ಅನಾಹತ(ಹೃದಯ)-ವಿಶುದ್ಧ(ಕಂಠ)-ಆಜ್ಞಾ(ಭ್ರೂಮಧ್ಯ)-ಸಹಸ್ರಾರ(ಶಿರೋಮಧ್ಯ)ವೆಂಬ ಯೌಗಿಕ ಸಪ್ತ ಚಕ್ರಗಳಲ್ಲಿ ಒಂದರ ಸ್ಥಾನವಿದು. ಅಕಾರಾಂತ ನಪುಂಸಕಲಿಂಗ ಹೃದಯಶಬ್ದ, ದ್ವಿತೀಯಾವಿಭಕ್ತಿ, ಏಕವಚನ. ಹೃದಯಮ್, ಹೃದಯೇ, ಹೃದಯಾನಿ (ಪ್ರ.ವಿ. / ದ್ವಿ.ವಿ. ಸಮಾನ) ||


೩) ಪಾರ್ಥಸಾರಥಿಃ— "ಪೃಥಾಯಾಃ, ಅಪತ್ಯಂ ಪುಮಾನ್ ಪಾರ್ಥಃ"— ಪೃಥೆಯ / ಕುಂತಿಯ / ಶೂರಪುತ್ರಿಯ / ವಸುದೇವಸೋದರಿಯ ಗಂಡು ಸಂತಾನ / ಮಗನೇ ಪಾರ್ಥನು / ಅರ್ಜುನನು (ಅಪತ್ಯಾರ್ಥಕ ತದ್ಧಿತ). "ಪಾರ್ಥಸ್ಯ ಸಾರಥಿಃ ಪಾರ್ಥಸಾರಥಿಃ"— ಪಾರ್ಥನ ರಥದ ಸಾರಥಿಯು ಪಾರ್ಥಸಾರಥಿಯು / ಕೃಷ್ಣನು (ಷ.ತ.ಸಮಾಸ). 


೪) ವೈ— ಅವ್ಯಯ. ಪದ್ಯದ ಪಾದವನ್ನು ಛಂದಃಪೂರ್ತಿಗೊಳಿಸಲು ಬಳಸುವ ಶಬ್ದವೂ ಹೌದು. ಇದಕ್ಕೆ ಪಾದಪೂರಣವೆನ್ನುತ್ತಾರೆ. ಪಾದವೆಂದರೆ ಕಾಲುಭಾಗ. ೪ ಪಾದಗಳಿಂದಾದುದೇ ಪದ್ಯವು. ಪಾದಪೂರಣ, ಸಂಬೋಧನ, ಅನುನಯ (ಹವ್ಯಕಭಾಷೆಯಲ್ಲಿ ಬಹುಶಃ ಇದೇ ವೈ, ಓಯ್ ಆಗಿರಬಹುದು. ಪತ್ನಿ ಪತಿಯನ್ನು ಅನುನಯದಿಂದ ಹೀಗೂ ಸಂಬೋಧಿಸುವುದಿದೆ), ನಿಶ್ಚಯ (—ಮನುಸ್ಮೃತಿ) ಎಂಬರ್ಥಗಳಿವೆ. 

"ಆಹೋ ಉತಾಹೋ ಕಿಮುತ ವಿಕಲ್ಪೇ ಕಿಂ ಕಿಮೂತ ಚ |

ತು ಹಿ ಚ ಸ್ಮ ಹ ವೈ ಪಾದ|ಪೂರಣೇ ಪೂಜನೇ ಸ್ವತಿ ||"

(ಅಮರಕೋಶ)


೫) ಪದ್ಮನಾಭಃ— "ಪದ್ಮಂ ನಾಭೌ ಯಸ್ಯ ಸಃ "— ಯಾವನ ನಾಭಿಯಲ್ಲಿ / ಹೊಕ್ಕುಳದಲ್ಲಿ ಪದ್ಮ / ತಾವರೆಯಿದೆಯೋ ಅವನು (ವಿಷ್ಣುವೆಂದರ್ಥ; ಬಹುವ್ರೀಹಿಸಮಾಸ). ವಿಷ್ಣುವಿನ ಆ ನಾಭೀಕಮಲದಲ್ಲೇ ಸೃಷ್ಟಿಕರ್ತಾ ಚತುರ್ಮುಖಬ್ರಹ್ಮನು ಹುಟ್ಟಿದನು.


೬) ಪ್ರಾಣಪ್ರಿಯಃ— "ಪ್ರಾಣ ಇವ ಪ್ರಿಯಃ "— ಪ್ರಾಣದಂತೆಯೇ ಪ್ರಿಯನಾದವನು. ಇಲ್ಲಿ ಪ್ರಾಣಃ + ಇವ— ಪ್ರಾಣ ಇವ, ಎಂಬಲ್ಲಿ ವಿಸರ್ಗಲೋಪಸಂಧಿ. ಅಕಾರದ ಮುಂದೆ ವಿಸರ್ಗ ಬಂದು, ಅದರ ಮುಂದೆ ಸ್ವರಾಕ್ಷರ ಬಂದರೆ ವಿಸರ್ಗಲೋಪವಾಗುವುದು. ಉದಾ— ರಾಮ ಏವ, ವೃಕ್ಷ ಇವ. ಇಕಾರ, ಉಕಾರಗಳ ಮುಂದೆ ವಿಸರ್ಗ ಬಂದು, ಬಳಿಕ ಸ್ವರವು ಪರವಾದರೆ, ರಕಾರಾದೇಶವಾಗಿ ವಿಸರ್ಗರೇಫಸಂಧಿಯಾಗುವುದು. ಉದಾ— ಪತಿಃ+ಏವ—ಪತಿರೇವ, ಗುರುಃ+ಇವ—ಗುರುರಿವ.


೭) ಕಟೀ— ಸೊಂಟಗಳೆರಡನ್ನು. ಅಂದರೆ ಎರಡೂ ಪಾರ್ಶ್ವ/ಬದಿ /ಮಗ್ಗುಲುಗಳನ್ನೆಂದರ್ಥ. ಕಟಿಃ, ಕಟೀ, ಕಟ್ಯಃ | ಕಟಿಮ್, ಕಟೀ, ಕಟ್ಯಃ (ಸ್ತ್ರೀ) || ಕಟಿಃ, ಕಟೀ, ಕಟಯಃ | ಕಟಿಮ್, ಕಟೀ, ಕಟೀನ್ (ಪುಂ)|| "ಕಟ್ಯತೇ ವಸ್ತ್ರಾದಿನಾ ವ್ರಿಯತೇऽಸೌ "— ಬಟ್ಟೆಯೇ ಮುಂತಾದುವುಗಳಿಂದ ಆವರಿಸಲ್ಪಡುವುದೆಂಬುದರಿಂದಾಗಿ ದೇಹದ ಮಧ್ಯಭಾಗವು ಕಟಿಯೆನಿಸಿದೆ. ವ್ರಿಯತೇ + ಅಸೌ— ವ್ರಿಯತೇऽಸೌ, ಪೂರ್ವರೂಪಸಂಧಿ. ಪರಪದದ / ಉತ್ತರಪದದ ಅಕಾರವು ಲೋಪವಾಗಿ ಪೂರ್ವಪದದ ಏಕಾರವೇ ಉಳಿದಿರುವುದರಿಂದ ಪೂರ್ವರೂಪವು. "ऽ" ಇದಕ್ಕೆ ಅವಗ್ರಹಚಿಹ್ನೆಯೆಂದು ಹೆಸರು. ಉದಾ—ರಾಮೋऽಪಿ (ರಾಮಃ+ಅಪಿ, ರಾಮೋ+ಅಪಿ), ದೇವೇऽಸ್ತಿ (ದೇವೇ+ಅಸ್ತಿ). "ರಾಮೋऽಪಿ" ಯಲ್ಲಿ ಮೊದಲು ವಿಸರ್ಗಲೋಪಸಂಧಿಯೂ, ಬಳಿಕ ಪೂರ್ವರೂಪಸಂಧಿಯೂ ಇವೆ. ಕಟೀಶಬ್ದವು ಇಕಾರಾಂತ ಪುಂ/ಸ್ತ್ರೀಲಿಂಗ ಕಟಿಶಬ್ದದ ದ್ವಿತೀಯಾವಿಭಕ್ತಿ, ದ್ವಿವಚನ. ಕಟಿಗಳೆರಡನ್ನು ಎಂದರ್ಥ. 


೮) ಅವತು— ಅವ ರಕ್ಷಣೇ ಧಾತು, ಲೋಟ್ ಲಕಾರ ಪ್ರಥಮಪುರುಷ, ಏಕವಚನ. ರಕ್ಷಿಸಲಿ ಎಂದರ್ಥ. 

ಅವತು / ಅವತಾತ್,  ಅವತಾಮ್,  ಅವನ್ತು |

ಅವ / ಅವತಾತ್,  ಅವತಮ್,  ಅವತ |

ಅವಾನಿ,  ಅವಾವ,  ಅವಾಮ ||


ಊರೂದ್ಧವಪ್ರಿಯಃ ಪಾತು ಶೌರಿಃ ಪಾತು ಚ ಸಕ್ಥಿನೀ |

ಜಾನುನೀ ನವನೀತಾಪ್ತೋ ಜಂಘೇ ಚ ಶಿಶುಪಾಲಹಾ ||೯||


ಕಾಯಲೀ ತೊಡೆಗಳನುದ್ಧವಪ್ರಿಯ

ಕಾಯಲೀ ತೊಡೆಯೆಲುಬ ಶೌರಿಯು

ಕಾಯಲೀ ಮೊಣಕಾಲ ಬೆಣ್ಣೆಪ್ರಿಯನು ದುಷ್ಟಾರಿ |

ಕಾಯಲೀ ಕೆಳಕಾಲ ಜಂಘೆಯ

ಕಾಯಲೀ ಶಿಶುಪಾಲಶಿಕ್ಷಕ

ಕಾಯಲೀ ತೆರ ಕೃಷ್ಣನೆಲ್ಲೆಡೆಯಿಂದಲನವರತ ||


(ಉದ್ಧವಪ್ರಿಯಃ) ಯಾದವಶ್ರೇಷ್ಠನೂ, ಭಕ್ತಾಗ್ರಗಣ್ಯನೂ, ಜ್ಞಾನಿವರೇಣ್ಯನೂ ಆದ ಉದ್ಧವನು ಕೃಷ್ಣನಿಗತಿಪ್ರಿಯ ಭಕ್ತನು. ಅಂತಹ ಉದ್ಧವನಿಗೂ ಅತ್ಯಂತ ಪ್ರಿಯನಾದ್ದರಿಂದ ಕೃಷ್ಣನು ಉದ್ಧವಪ್ರಿಯನು. ಅಂತಹ ಉದ್ಧವಪ್ರಿಯನು, (ಊರೂ) ನನ್ನ ತೊಡೆಗಳೆರಡನ್ನು ಪಾಲಿಸಲಿ. (ಚ) ಹಾಗೆಯೇ, (ಶೌರಿಃ) ಶೂರಪುತ್ರ ವಸುದೇವನ ಸುತನಾಗಿ ಶೌರಿಯೆನಿಸಿದ ಕೃಷ್ಣನು, (ಸಕ್ಥಿನೀ) ನನ್ನ ತೊಡೆಮೂಳೆ(ಸಕ್ಥಿ)ಗಳೆರಡನ್ನು, (ಪಾತು) ಕಾಪಾಡಲಿ. (ನವನೀತಾಪ್ತಃ) ನವನೀತಪ್ರಿಯನಾದ ಕೃಷ್ಣನು, (ಜಾನುನೀ) ನನ್ನ ಮೊಣಕಾಲುಗ(ಜಾನು)ಗಳೆರಡನ್ನು ರಕ್ಷಿಸಲಿ. (ಚ) ಅಂತೆಯೇ, (ಶಿಶುಪಾಲಹಾ) ಶಿಶುಪಾಲನಂಥ ದುಷ್ಟರ ಶಿಕ್ಷಣ-ಹನನ ಮಾಡಿದ ದುಷ್ಟರ ಶತ್ರುವಾದ ಕೃಷ್ಣನು, (ಜಂಘೇ) ನನ್ನ ಕೆಳಕಾಲು (ಜಂಘೆ)ಗಳೆರಡನ್ನು ಕಾಪಾಡಲಿ. ಈ ರೀತಿ, ಶ್ರೀಕೃಷ್ಣ ಪರಮಾತ್ಮನು ನಮ್ಮನ್ನು ಎಲ್ಲ ರೀತಿಯಿಂದಲೂ, ಎಲ್ಲ ಕಡೆಗಳಿಂದಲೂ, ಯಾವಾಗಲೂ ಎಡೆಬಿಡದೆ ಅನವರತವೂ ರಕ್ಷಿಸಲಿ.


ವ್ಯಾಕರಣವಿಶೇಷ—

  1. ಉದ್ಧವಪ್ರಿಯಃ—ಉದ್ಧವಸ್ಯ ಪ್ರಿಯಃ (ಷಷ್ಠೀ-ತತ್ಪುರುಷ-ಸಮಾಸಃ) |

  2. ಊರೂ—ಊರುಃ, ಊರೂ, ಊರವಃ (ಪ್ರಥಮಾವಿಭಕ್ತಿಃ) | ಊರುಮ್, ಊರೂ, ಊರೂನ್ (ದ್ವಿತೀಯಾವಿಭಕ್ತಿಃ) || ತೊಡೆಗಳೆರಡನ್ನು ಎಂದರ್ಥ. ಉಕಾರಾಂತಃ ಪುಲ್ಲಿಂಗಃ, ಊರುಶಬ್ದಃ, ದ್ವಿ.ವಿ., ದ್ವಿವಚನಮ್ ||

  3. ಶೌರಿಃ—ಶೂರಸ್ಯ ಗೋತ್ರಾಪತ್ಯಂ ಪುಮಾನ್ (ಶೂರನ ಗೋತ್ರ / ವಂಶ / ಕುಲದಲ್ಲಿ ಹುಟ್ಟಿದವನು, ಕೃಷ್ಣ). ಅಪತ್ಯಾರ್ಥಕ ತದ್ಧಿತಾಂತ. ಇಕಾರಾಂತ, ಪುಲ್ಲಿಂಗ, ಪ್ರ.ವಿ., ಏ.ವ.

  4. ಸಕ್ಥಿನೀ—ನಕಾರಾಂತೋ ನಪುಂಸಕಲಿಂಗಃ ಸಕ್ಥಿನ್-ಶಬ್ದಃ, ದ್ವಿ.ವಿ., ದ್ವಿ.ವ. |"ಸಜ್ಯತೇ ಇತಿ" ಸಂಜ ಸಂಗೇ ಧಾತುಃ |

  5. ನವನೀತಾಪ್ತಃ—"ನವನೀತಮ್ ಆಪ್ತಂ ಯಸ್ಯ ಯೇನ ವಾ ಸಃ"— ಯಾವನಿಗೆ ಬೆಣ್ಣೆಯು ಆತ್ಮೀಯವೋ, ಅಥವಾ ಯಾವನಿಂದ ಬೆಣ್ಣೆಯು ಪ್ರಾಪ್ತವಾಯಿತೋ / ಪಡೆಯಲ್ಪಟ್ಟಿತೋ ಅವನೇ ನವನೀತಾಪ್ತನಾದ ಬಾಲಕೃಷ್ಣನು. ಅಕಾರಾಂತ ಪುಲ್ಲಿಂಗ, ಪ್ರ.ವಿ., ಏ.ವ.

  6. ಜಾನುನೀ—ಉಕಾರಾಂತೋ ನಪುಂಸಕಲಿಂಗೋ ಜಾನುಶಬ್ದಃ, ದ್ವಿ.ವಿ., ದ್ವಿ.ವ. | ಜಾನು, ಜಾನುನೀ, ಜಾನೂನಿ (ಪ್ರ. / ದ್ವಿ. ವಿ.) || 

  7. ಶಿಶುಪಾಲಹಾ— "ಶಿಶುಪಾಲಂ ಹನ್ತೀತಿ "— ಶಿಶುಪಾಲನನ್ನು ಕೊಲ್ಲುತ್ತಾನಾದ್ದರಿಂದ ಕೃಷ್ಣನಿಗೆ ಈ ಹೆಸರು. 

  8. ಜಂಘೇ— ಆಕಾರಾಂತಃ ಸ್ತ್ರೀಲಿಂಗೋ ಜಙ್ಘಾಶಬ್ದಃ, ದ್ವಿ.ವಿ., ದ್ವಿ.ವ. | ಜಙ್ಘಾ, ಜಙ್ಘೇ, ಜಙ್ಘಾಃ (ಪ್ರ.ವಿ.) | ಜಙ್ಘಾಮ್, ಜಙ್ಘೇ, ಜಙ್ಘಾಃ (ದ್ವಿ.ವಿ.) ||

  9. ಪಾತು— ಪಾ ರಕ್ಷಣೇ ಪರಸ್ಮೈಪದೀ ಧಾತುಃ, ಲೋಟ್(ಆಜ್ಞಾರ್ಥ)-ಲಕಾರಃ, ಪ್ರ.ಪು., ಏ.ವ. |

                          ಏಕವಚನಮ್                       ದ್ವಿವಚನಮ್               ಬಹುವಚನಮ್

ಪ್ರಥಮಪುರುಷಃ     ಪಾತು / ಪಾತಾತ್                   ಪಾತಾಮ್                           ಪಾನ್ತು

ಮಧ್ಯಮಪುರುಷಃ   ಪಾಹಿ / ಪಾತಾತ್                    ಪಾತಮ್                             ಪಾತ

ಉತ್ತಮಪುರುಷಃ    ಪಾನಿ                                   ಪಾವ                                 ಪಾಮ


ಪಾದೌ ಭೀಷ್ಮಸ್ತುತಶ್ಚೈವ ಮಾರತಾತಶ್ಚ ಸನ್ಮನಃ |

ಇಂದ್ರಿಯಾಣಿ ಹೃಷೀಕೇಶಃ ಪಾತು ಕೃಷ್ಣೋऽಖಿಲಂ ವಪುಃ ||೧೦||


ಪಾದ ಕಾಯಲಿ ಭೀಷ್ಮಸ್ತುತನು

ಮೋದಮನವನು ಮಾರಜನಕನು

ನಾದಕರಣಾದಿಗಳ ದೇಹವ ಕೃಷ್ಣ ಕರಣೇಶ ||


(ಭೀಷ್ಮಸ್ತುತಃ) ಭೀಷ್ಮನಿಂದ ಸ್ತುತಿಸಲ್ಪಟ್ಟ ಶ್ರೀಕೃಷ್ಣನು (ಪಾದೌ) ನಮ್ಮ ಪಾದಗಳೆರಡನ್ನು ರಕ್ಷಿಸಲಿ. (ಚ ಏವ) ಹಾಗೆಯೇ, (ಮಾರತಾತಃ) ಮಾರನ / ಮನ್ಮಥನ / ಪ್ರದ್ಯುಮ್ನನ ಜನಕನಾದ ಶ್ರೀಕೃಷ್ಣನು (ಸನ್ಮನಃ) ನಮ್ಮ ಮನಸ್ಸಿನ ಪರಿಶುದ್ಧತೆ ಹಾಗೂ ಶಾಂತಿಯನ್ನು ಕಾಪಿಡಲಿ. (ಚ) ಅಂತೆಯೇ, (ಇಂದ್ರಿಯಾಣಿ) ನಮ್ಮ ಪಂಚಜ್ಞಾನೇಂದ್ರಿಯಗಳನ್ನೂ ಪಂಚಕರ್ಮೇಂದ್ರಿಯಗಳನ್ನೂ (ಹೃಷೀಕೇಶಃ) ಇಂದ್ರಿಯಗಳೊಡೆಯನಾದ ಶ್ರೀಕೃಷ್ಣನು ಕಾಪಾಡಲಿ. ಹೀಗೆ, ನಮ್ಮ (ಅಖಿಲಂ ವಪುಃ) ಇಡೀ ಶರೀರವನ್ನು (ಕೃಷ್ಣಃ) ಶ್ರೀಕೃಷ್ಣಪರಮಾತ್ಮನು (ಪಾತು) ಸಂರಕ್ಷಿಸಲಿ.


ಪದಸ್ವಾರಸ್ಯ—

  • ಪಾದೌ—ಅಕಾರಾಂತಪುಲ್ಲಿಂಗಃ, ಪಾದಶಬ್ದಃ, ದ್ವಿ.ವಿ., ದ್ವಿ.ವ. | ಪಾದಃ, ಪಾದೌ, ಪಾದಾಃ (ಪ್ರ.ವಿ.) | ಪಾದಮ್, ಪಾದೌ, ಪಾದಾನ್ (ದ್ವಿ.ವಿ.) ||

  • ಭೀಷ್ಮಸ್ತುತಃ—"ಭೀಷ್ಮೇಣ ಸ್ತುತಃ" (ತೃತೀಯಾ-ತತ್ಪುರುಷ-ಸಮಾಸಃ) | ಸ್ತುತಃ ಎಂಬುದು ಷ್ಟು ಸ್ತುತೌ ಧಾತುವಿನ ಕ್ತ ಪ್ರತ್ಯಯಾಂತ ಕೃದಂತ, ಪುಲ್ಲಿಂಗ, ಪ್ರ.ವಿ., ಏ.ವ. ಉದಾ— ಕೃತಃ, ಪಠಿತಃ, ಲಿಖಿತಾ (ಸ್ತ್ರೀ), ಪೀತಃ, ಹೃತಮ್ (ನಪುಂ.)….

  • ಭೀಷ್ಮಸ್ತುತಶ್ಚೈವ— ಭೀಷ್ಮಸ್ತುತಃ + ಚ (+ಏವ)— ಭೀಷ್ಮಸ್ತುತಶ್ಚ (ವಿಸರ್ಗಲೋಪ+ಶ್ಚುತ್ವಸಂಧಿಃ) | 

  • ಚೈವ— ಚ + ಏವ (ವೃದ್ಧಿಸಂಧಿಃ) | ಇವೆರಡೂ ಅವ್ಯಯಗಳು.

  • ಮಾರತಾತಶ್ಚ— ಮಾರತಾತಃ + ಚ (ವಿಸರ್ಗಲೋಪ+ಶ್ಚುತ್ವಸಂಧಿ) | "ಮಾರಸ್ಯ ತಾತಃ"— ಮಾರತಾತಃ (ಷಷ್ಠೀತತ್ಪುರುಷಸಮಾಸಃ) | "ಮಾರಸ್ಯ ತಾತಃ ಯಃ ಸಃ"— ಶ್ರೀಕೃಷ್ಣಃ (ಬಹುವ್ರೀಹಿಸಮಾಸಃ) |

  • ಸನ್ಮನಃ— ಸತ್ + ಮನಃ (ಅನುನಾಸಿಕಸಂಧಿಃ) | ಒಳ್ಳೆಯ ಮನಸ್ಸೆಂದರ್ಥ.

  • ಇಂದ್ರಿಯಾಣಿ— ಅಕಾರಾಂತ ನಪುಂಸಕಲಿಂಗ ಇಂದ್ರಿಯಶಬ್ದ, ದ್ವಿ.ವಿ., ಬ.ವ. | ಇಂದ್ರಿಯಮ್, ಇಂದ್ರಿಯೇ, ಇಂದ್ರಿಯಾಣಿ (ಪ್ರ./ದ್ವಿ.ವಿ.) || ಇಂದ್ರಿಯಗಳನ್ನು ಎಂದರ್ಥ. "ಇಂದ್ರಸ್ಯ ಆತ್ಮನಃ, ಲಿಂಗಮ್, ಅನುಮಾಪಕಮ್ "— ತನ್ನ / ಆತ್ಮನ ಚಿಹ್ನೆ, ಗುರುತು, ಉಪಾಧಿಗಳ ಅಳತೆಗೋಲುಗಳು. "ಇಂದ್ರೇಣ ಈಶ್ವರೇಣ ಸೃಷ್ಟಮ್ "— ಇಂದ್ರನಿಂದ / ಪರಮೇಶ್ವರ ಪರಮಾತ್ಮನಿಂದ ಸೃಷ್ಟವಾದುವು. "ಇಂದ್ರೇಣ ಆತ್ಮನಾ ಮಮ ಚಕ್ಷುಃ, ಮಮ ಶ್ರೋತ್ರಮಿತ್ಯಾದಿ ಕ್ರಮೇಣ ಜ್ಞಾತಮ್ "— ಇಂದ್ರ / ಆತ್ಮನಿಂದ ನನ್ನ ಕಣ್ಣು, ನನ್ನ ಕಿವಿ ಮುಂತಾಗಿ ಕ್ರಮವಾಗಿ ತಿಳಿಯಲ್ಪಡುವಂಥವು. ಇವು ಅಂತರಿಂದ್ರಿಯ, ಬಹಿರಿಂದ್ರಿಯವೆಂದು ೨ ಬಗೆ. ಅಂತಃಕರಣವು ಮನಸ್, ಬುದ್ಧಿ, ಚಿತ್ತ, ಅಹಂ / ಚಿದಾಭಾಸ ಎಂಬುದಾಗಿ ೪ ವೃತ್ತಿಗಳಾಗಿ ತೋರುತ್ತವೆ. "ಸಂಕಲ್ಪವಿಕಲ್ಪಾತ್ಮಕಂ ಮನಃ "— ವಿವಿಧ ಸಂಕಲ್ಪ / ಇಚ್ಛೆ / ಬಯಕೆ / ಕಾಮನೆ, ವಿಕಲ್ಪ / ಆಯ್ಕೆಗಳೆಂದ ಕೂಡಿದ ವೃತ್ತಿಯೇ ಮನಸ್. "ನಿಶ್ಚಯಾತ್ಮಿಕಾ ಬುದ್ಧಿಃ "— ಇದಮಿತ್ಥಮ್, ಇದು ಹೀಗೆಯೇ ಎಂದು ನಿಶ್ಚಯಿಸುವ ವೃತ್ತಿಯೇ ಬುದ್ಧಿ. "ಚೇತತಿ ಅನೇನ ಇತಿ "— ನಮ್ಮನ್ನು ಸಚೇತನಗೊಳಿಸುವ, ಪೂರ್ವಸಂಸ್ಕಾರ / ಕರ್ಮವಾಸನೆ / ನೆನಪುಗಳ ಮೂಟೆಯೇ ಚಿತ್ತ. ಸತ್, ಚಿತ್, ಆನಂದ ರೂಪವಾದ ಆತ್ಮನ ಜೀವರೂಪೀ ಹುಸಿತೋರಿಕೆಯೇ ಚಿತ್ತಿನ ಆಭಾಸರೂಪೀ ಚಿದಾಭಾಸ / ಅಹಮ್ / ದೇಹೇಂದ್ರಿಯಾದಿಸಂಘಾತದೊಂದಿಗಿರುವ ನಾನೆಂಬ ಭಾವ. ಇವೆಲ್ಲವುಗಳ ಸಾಕ್ಷಿಯಾದ ಆತ್ಮನೇ ನಮ್ಮ ನಿಜಸ್ವರೂಪ. ಜೀವಭಾವವು ಆತ್ಮನ ಪ್ರತಿಬಿಂಬದಂತೆ ಹುಸಿತೋರಿಕೆ(ಕನ್ನಡಿಯೊಳಗಣ ಮಿಥ್ಯಾ ಪ್ರತಿಬಿಂಬದಂತೆ). ಇನ್ನು ಬಹಿಃಕರಣಗಳು ಜ್ಞಾನ-ಕರ್ಮಗಳೆಂದು ೨ ಬಗೆ. ೫ ಜ್ಞಾನೇಂದ್ರಿಯಗಳು— ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ. ೫ ಕರ್ಮೇಂದ್ರಿಯಗಳು— ವಾಕ್ / ಮಾತಿನ ಇಂದ್ರಿಯ, ಪಾಣಿ / ಕೈಯ ಇಂದ್ರಿಯ, ಪಾದ, ಪಾಯು / ಗುದ, ಉಪಸ್ಥ / ಗುಹ್ಯ / ಲಿಂಗ. 

  • ಹೃಷೀಕೇಶಃ— "ಹೃಷಿಕಾಣಾಮ್ (ಇಂದ್ರಿಯಾಣಾಮ್) ಈಶಃ "— ಇಂದ್ರಿಯಗಳ ಒಡೆಯ (ಷಷ್ಠೀ ತತ್ಪುರುಷ ಸಮಾಸ), ಪರಮಾತ್ಮಾ.

  • ಅಖಿಲಮ್— "ನ ಖಿಲಮ್ ಶೇಷಮ್ ಅಸ್ಯ "— ಉಳಿಕೆಯಿಲ್ಲದ, ಎಲ್ಲ, ಸಮಗ್ರ. ತ್ರಿಲಿಂಗಕಶಬ್ದ. "ವಿಶ್ವಮ್-ಅಶೇಷಂ ಕೃತ್ಸ್ನಂ ಸಮಸ್ತ-ನಿಖಿಲ-ಅಖಿಲಾನಿ | ನಿಃಶೇಷಂ ಸಮಗ್ರಂ ಸಕಲಂ ಪೂರ್ಣಮ್-ಅಖಣ್ಡಂ ಸ್ಯಾದ್-ಅನೂನಕೇ ||" ಯಾವುದೇ ಊನ, ಕುಂದು, ಕಡಿಮೆಯಿಲ್ಲದ್ದು. 

  • ವಪುಃ— ಸಕಾರಾಂತ ನಪುಂಸಕಲಿಂಗ ವಪುಸ್ ಶಬ್ದ, ದ್ವಿ.ವಿ., ಏ.ವ. | "ಉಪ್ಯನ್ತೇ ದೇಹಾನ್ತರ-ಭೋಗಸಾಧನ-ಬೀಜೀಭೂತಾನಿ ಕರ್ಮಾಣಿ ಅತ್ರ ಇತಿ "— ಹಿಂದಿನ ಜನ್ಮದ ಕರ್ಮಬೀಜಗಳು ಬೇರೆ ಹೊಸ ದೇಹವನ್ನು ಧರಿಸಿ ಭೋಗಿಸಲಿಕ್ಕಾಗಿ ಇದರಲ್ಲಿ ಬಿತ್ತಲ್ಪಡುವುದರಿಂದ, ದೇಹವು ವಪುವೆನಿಸಿದೆ. "ವಪ್ ಬೀಜಸನ್ತಾನೇ " ಧಾತುಜನ್ಯವಾದದ್ದು. 



ಏತಾಂ ಕೃಷ್ಣಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್ |

ಸ ಚಿರಾಯುಃ ಸುಖೀ ಪುತ್ರೀ ವಿಜಯೀ ವಿನಯೀ ಭವೇತ್ ||೧೧||


ಈ ಪರಿಯ ಶ್ರೀಕೃಷ್ಣರಕ್ಷೆಯ

ನೀ ಪುಣ್ಯಸುಕೃತಿಗಳು ಪಠಿಸಲು

ಸತ್ಪುತ್ರ ಧನ ಧಾನ್ಯಾದಿ ಪಡೆವರು ಸಕಲ ವಿಜಯಗಳ ||


(ಏತಾಮ್—ಈ ಪರಿಯ) ಇಂತಹ, (ಕೃಷ್ಣಬಲೋಪೇತಾಮ್) ಕೃಷ್ಣನ ಬಲದಿಂದ ಕೂಡಿರುವ, (ರಕ್ಷಾಮ್—ಶ್ರೀಕೃಷ್ಣರಕ್ಷೆಯನು) ಶ್ರೀಕೃಷ್ಣರಕ್ಷಾಸ್ತೋತ್ರವನ್ನು, (ಯಃ—ಈ) ಯಾವ, (ಸುಕೃತೀ ಪಠೇತ್—ಪುಣ್ಯಸುಕೃತಿಗಳು ಪಠಿಸಲು) ಪುಣ್ಯವಂತನು ಪಠಿಸುವನೋ (ಸಃ) ಅಂಥವನು, (ಚಿರಾಯುಃ)ದೀರ್ಘಾಯುಷ್ಮಾನನೂ, (ಸುಖೀ) ಸುಖಿಯೂ, (ಪುತ್ರೀ—ಸತ್ಪುತ್ರ ಧನ ಧಾನ್ಯಾದಿ ಪಡೆವರು) ಸತ್ಪುತ್ರಪುತ್ರೀಯುತನೂ, ಧನಸಂಪತ್ತು ಧಾನ್ಯಾದಿಸಂಪದಗಳನ್ನು ಪಡೆದು, (ವಿಜಯೀ—ಸಕಲ ವಿಜಯಗಳ) ಸಕಲ ಕಾರ್ಯಗಳಲ್ಲಿ ಜಯಶಾಲಿಯೂ, (ವಿನಯೀ ಭವೇತ್) ವಿನಯಶೀಲನೂ ಆಗುವನು.


ವ್ಯಾಕರಣಾಂಶ—

  • ಏತಾಮ್— ದಕಾರಾನ್ತ ಸ್ತ್ರೀಲಿಂಗ ಏತದ್ ಶಬ್ದ, ದ್ವಿ.ವಿ., ಏ.ವ. | ಏಷಾ, ಏತೇ, ಏತಾಃ (ಪ್ರ.ವಿ.) | ಏತಾಮ್ / ಏನಾಮ್, ಏತೇ / ಏನೇ, ಏತಾಃ / ಏನಾಃ (ದ್ವಿ.ವಿ.) ||

  • ಕೃಷ್ಣಬಲೋಪೇತಾಮ್—ಕೃಷ್ಣಬಲ + ಉಪೇತಾಮ್ (ಗುಣಸನ್ಧಿಃ) | ಕೃಷ್ಣಸ್ಯ ಬಲಮ್ ಕೃಷ್ಣಬಲಮ್ (ಷಷ್ಠೀ ತತ್ಪುರುಷ ಸಮಾಸ) | ತೇನ ಉಪೇತಾಂ ಪ್ರಾಪ್ತಾಮ್ (ತೃತೀಯಾ ತತ್ಪುರುಷ ಸಮಾಸ) || ಕೃಷ್ಣನ ಬಲದಿಂದ ಕೂಡಿದ ಎಂದರ್ಥ. ಆಕಾರಾನ್ತ ಸ್ತ್ರೀಲಿಂಗ ಕೃಷ್ಣಬಲೋಪೇತಾ ಶಬ್ದ, ದ್ವಿ.ವಿ., ಏ.ವ. |

  • ರಕ್ಷಾಮ್—ಆಕಾರಾಂತ ಸ್ತ್ರೀಲಿಂಗ ರಕ್ಷಾಶಬ್ದ, ದ್ವಿ.ವಿ., ಏ.ವ. | ರಕ್ಷಾ, ರಕ್ಷೇ, ರಕ್ಷಾಃ (ಪ್ರ.ವಿ.) | ರಕ್ಷಾಮ್, ರಕ್ಷೇ, ರಕ್ಷಾಃ (ದ್ವಿ.ವಿ.) ||

  • ಯಃ— ದಕಾರಾಂತ ಪುಲ್ಲಿಂಗ ಯದ್ ಶಬ್ದ, ಪ್ರ.ವಿ., ಏ.ವ. | ಯಾವನು ಎಂದರ್ಥ. ಯಃ, ಯೌ, ಯೇ ||

  • ಸುಕೃತೀ—ನಕಾರಾನ್ತ ತ್ರಿಲಿಂಗ ಸುಕೃತಿನ್ ಶಬ್ದ, ಪ್ರ.ವಿ., ಏ.ವ. | ಸುಕೃತೀ, ಸುಕೃತಿನೌ, ಸುಕೃತಿನಃ | ಸುಕೃತಿನಮ್…| ಸುಕೃತಿನಾ…| ಸುಕೃತಿನೇ…| ಸುಕೃತಿನಃ…| ಸುಕೃತಿನಃ…| ಸುಕೃತಿನಿ, ಸುಕೃತಿನೋಃ, ಸುಕೃತಿಷು (ಪು) || ಸುಕೃತಿನೀ, ಸುಕೃತಿನ್ಯೌ, ಸುಕೃತಿನ್ಯಃ | ಸುಕೃತಿನೀಮ್…| ಸುಕೃತಿನ್ಯಾ…| ಸುಕೃತಿನ್ಯೈ…| ಸುಕೃತಿನ್ಯಾಃ…| ಸುಕೃತಿನ್ಯಾಃ…| ಸುಕೃತಿನ್ಯಾಮ್, ಸುಕೃತಿನ್ಯೋಃ, ಸುಕೃತಿನೀಷು (ಸ್ತ್ರೀ) | ಸುಕೃತಿ, ಸುಕೃತಿನೀ, ಸುಕೃತೀನಿ | ಸುಕೃತಿ…| ಸುಕೃತಿನಾ…| ಸುಕೃತಿನೇ…| ಸುಕೃತಿನಃ…| ಸುಕೃತಿನಃ…| ಸುಕೃತಿನಿ, ಸುಕೃತಿನೋಃ, ಸುಕೃತಿಷು (ನಪುಂ) ||

  • ಪಠೇತ್— ಪಠ ವ್ಯಕ್ತಾಯಾಂ ವಾಚಿ ಧಾತು, ಪರಸ್ಮೈಪದೀ, ವಿಧಿಲಿಙ್ ಲಕಾರ, ಪ್ರ.ಪು., ಏ.ವ. | ಪಠೇತ್, ಪಠೇತಾಮ್, ಪಠೇಯುಃ | ಪಠೇಃ, ಪಠೇತಮ್, ಪಠೇತ | ಪಠೇಯಮ್, ಪಠೇವ, ಪಠೇಮ || ಓದಬೇಕು, ಪಠಿಸಬೇಕು, ಉಚ್ಚರಿಸಬೇಕು ಎಂದರ್ಥ.

  • ಸಃ— ದಕಾರಾನ್ತಃ ಪುಲ್ಲಿಂಗಃ, ತದ್-ಶಬ್ದಃ, ಪ್ರವಿ., ಏ.ವ | ಸಃ(ಅವನು), ತೌ(ಅವರಿಬ್ಬರು), ತೇ(ಅವರು) (ಪ್ರ.ವಿ.) | ತಮ್(ಅವನನ್ನು), ತೌ, ತಾನ್ (ದ್ವಿ) | ತೇನ(ಅವನಿಂದ), ತಾಭ್ಯಾಮ್, ತೈಃ (ತೃ) | ತಸ್ಮೈ(ಅವನಿಗೆ), ತಾಭ್ಯಾಮ್, ತೇಭ್ಯಃ (ಚ) | ತಸ್ಮಾತ್(ಅವನ ದೆಸೆಯಿಂದ/ಅವನಿಂದಾಗಿ), ತಾಭ್ಯಾಮ್, ತೇಭ್ಯಃ (ಪಂ.) | ತಸ್ಯ(ಅವನ), ತಯೋಃ, ತೇಷಾಮ್ (ಷ) | ತಸ್ಮಿನ್(ಅವನಲ್ಲಿ), ತಯೋಃ, ತೇಷು (ಸ) ||

  • ಚಿರಾಯುಃ— "ಚಿರಮ್ ಆಯುರ್ ಯಸ್ಯ "(ಬಹುವ್ರೀಹಿಸಮಾಸಃ) | ದೀರ್ಘಕಾಲ ಆಯುಷ್ಯವು ಯಾವನದೋ ಅವನೇ ಚಿರಾಯುವು. ಚಿರ + ಆಯುಃ (ಸವರ್ಣದೀರ್ಘಸನ್ಧಿಃ) | ಸಕಾರಾನ್ತ ಪುಲ್ಲಿಂಗ, ಚಿರಾಯುಸ್ ಶಬ್ದ, ಪ್ರ.ವಿ., ಏ.ವ. | ಚಿರಾಯುಃ, ಚಿರಾಯುಷೀ, ಚಿರಾಯೂಂಷಿ (ಪ್ರಥಮಾ /ದ್ವಿತೀಯಾ.ವಿ.) | ಚಿರಾಯುಷಾ, ಚಿರಾಯುಭ್ಯಾಮ್, ಚಿರಾಯುಭಿಃ (ತೃತೀಯಾ) | ಚಿರಾಯುಷೇ, ಚಿರಾಯುಭ್ಯಾಮ್, ಚಿರಾಯುಭ್ಯಃ (ಚತುರ್ಥೀವಿಭಕ್ತಿಃ) | ಚಿರಾಯುಷಃ, ಚಿರಾಯುಭ್ಯಾಮ್, ಚಿರಾಯುಭ್ಯಃ (ಪಂಚಮೀ) | ಚಿರಾಯುಷಃ, ಚಿರಾಯುಷೋಃ, ಚಿರಾಯುಷಾಮ್ (ಷಷ್ಠೀ) | ಚಿರಾಯುಷಿ, ಚಿರಾಯುಷೋಃ, ಚಿರಾಯುಸ್ಸು (ಸಪ್ತಮೀ) ||

  • ಸುಖೀ— ನಕಾರಾನ್ತಃ, ತ್ರಿಲಿಂಗಃ, ಸುಖಿನ್-ಶಬ್ದಃ, ಪ್ರ.ವಿ., ಏ.ವ. | ಸುಖೀ, ಸುಖಿನೌ, ಸುಖಿನಃ | ಸುಖಿನಮ್… | ಸುಖಿನಾ… | ಸುಖಿನೇ…| ಸುಖಿನಃ…| ಸುಖಿನಃ…| ಸುಖಿನಿ, ಸುಖಿನೋಃ, ಸುಖಿಷು (ಪು) || ಸುಖಿನೀ, ಸುಖಿನ್ಯೌ, ಸುಖಿನ್ಯಃ | ಸುಖಿನೀಮ್…| ಸುಖಿನ್ಯಾ…| ಸುಖಿನ್ಯೇ…| ಸುಖಿನ್ಯಾಃ…| ಸುಖಿನ್ಯಾಃ…| ಸುಖಿನ್ಯಾಮ್, ಸುಖಿನ್ಯೋಃ, ಸುಖಿನೀಷು  (ಸ್ತ್ರೀ) || ಸುಖಿ, ಸುಖಿನೀ, ಸುಖೀನಿ | ಸುಖಿ…| (ನಪುಂ.) ಉಳಿದವು ಪುಲ್ಲಿಂಗದಂತೆಯೇ ನಡೆಯುತ್ತವೆ.

  • ಪುತ್ರೀ—"ಪುತ್ರಾಃ, ಅಸ್ಯ ಸನ್ತೀತಿ ಪುತ್ರವಾನ್ / ಪುತ್ರೀ"— ಮಕ್ಕಳು ಇವನಿಗೆ ಇದ್ದಾರೆಂಬುದರಿಂದ ಪುತ್ರೀ. ಉದಾ—ಧನವಿರುವವನು ಧನೀ. ನಕಾರಾನ್ತ ತ್ರಿಲಿಂಗ ಪುತ್ರಿನ್-ಶಬ್ದ, ಪ್ರ.ವಿ., ಏ.ವ. | ಪುತ್ರೀ, ಪುತ್ರಿಣೌ, ಪುತ್ರಿಣಃ ||

  • ವಿಜಯೀ—"ವಿಶೇಷೇಣ ಜೇತುಂ ಶೀಲಮ್ ಅಸ್ಯ"— ವಿಶೇಷವಾಗಿ ಜಯಿಸುವ ಗುಣವುಳ್ಳವನೇ ವಿಜಯೀ. ನಕಾರಾನ್ತ ತ್ರಿಲಿಂಗ ವಿಜಯಿನ್-ಶಬ್ದ, ಪ್ರ.ವಿ., ಏ.ವ. | ವಿಜಯೀ, ವಿಜಯಿನೌ, ವಿಜಯಿನಃ ||

  • ವಿನಯೀ—"ವಿಶೇಷೇಣ ನಯತೀತಿ ವಿನಯಃ | ವಿನಯಃ, ಅಸ್ಯ ಅಸ್ತೀತಿ ವಿನಯೀ"— ವಿಶೇಷವಾಗಿ ಕರೆದೊಯ್ಯುವಂಥದ್ದೇ ವಿನಯವು. ವಿನಯವು ಇವನಿಗಿರುವುದರಿಂದ ವಿನಯೀ. ನಕಾರಾನ್ತ ತ್ರಿಲಿಂಗ ವಿನಯಿನ್-ಶಬ್ದ, ಪ್ರ.ವಿ., ಏ.ವ. | ವಿನಯೀ, ವಿನಯಿನೌ, ವಿನಯಿನಃ (ಪು) ||

  • ಭವೇತ್—"ಭೂ ಸತ್ತಾಯಾಮ್ " ಧಾತು, ವಿಧಿಲಿಙ್ ಲಕಾರ, ಪ್ರ.ಪು., ಏ.ವ. | ಭವೇತ್, ಭವೇತಾಮ್, ಭವೇಯುಃ | ಭವೇಃ, ಭವೇತಮ್, ಭವೇತ | ಭವೇಯಮ್, ಭವೇವ, ಭವೇಮ || ಆಗಬೇಕು ಎಂದರ್ಥ. ಈ ಶ್ಲೋಕದಲ್ಲಿ ನಿಶ್ಚಯವಾಗಿಯೂ ಆಗಿಯೇ ತೀರುವನೆಂದು ತಾತ್ಪರ್ಯ. 



ಭೂತಪ್ರೇತಪಿಶಾಚಾದ್ಯೈರ್ಬಹ್ಮರಾಕ್ಷಸಮಾಂತ್ರಿಕೈಃ |

ನ ಕಾಚಿದಪಿ ಪೀಡಾ ಸ್ಯಾತ್ಸರ್ವೋಪದ್ರವಶಕ್ತಿಭಿಃ ||೧೨||


ಭೂತಪ್ರೇತಪಿಶಾಚಿಗಳ ಬಲು

ಪಾತಕದ ರಕ್ಕಸರ ಕುಪಥರ

ಯಾತುಧಾನಾದಿಗಳ ಪೀಡೆಯು ಸೋಕದಿನ್ನೆಂದೂ ||


(ಭೂತಪ್ರೇತಪಿಶಾಚಾದ್ಯೈಃ, ಬ್ರಹ್ಮರಾಕ್ಷಸ-ಮಾಂತ್ರಿಕೈಃ—ಭೂತ ಪ್ರೇತ ಪಿಶಾಚಿಗಳ ಬಲು ಪಾತಕದ ರಕ್ಕಸರ ಕುಪಥರ, ಯಾತುಧಾನಾದಿಗಳ) ಈ ರಕ್ಷಾಸ್ತೋತ್ರದ ಪಠನದಿಂದ ಭೂತ-ಪ್ರೇತ-ಪಿಶಾಚಿ-ಬ್ರಹ್ಮರಾಕ್ಷಸ-ಯಾತುಧಾನ-ಮಾಂತ್ರಿಕ—ಕೆಟ್ಟ ದಾರಿಯಲ್ಲಿರುವವರ, ರಾಕ್ಷಸರೇ ಮುಂತಾದ, (ಸರ್ವೋಪದ್ರವಶಕ್ತಿಭಿಃ) ಯಾವುದೇ ದುಷ್ಟಶಕ್ತಿಗಳಿಂದ, (ಕಾಚಿತ್ ಅಪಿ ಪೀಡಾ ನ ಸ್ಯಾತ್—ಪೀಡೆಯು ಸೋಕದು ಇನ್ನೆಂದೂ) ಯಾವುದೇ ತರಹದ ತೊಂದರೆಗಳು ಉಂಟಾಗಲಾರವು.


ವಿಶೇಷ ವಿಚಾರ—

  • ಭೂತಪ್ರೇತಪಿಶಾಚಾದ್ಯೈಃ— ಭೂತಾಶ್ಚ ಪ್ರೇತಾಶ್ಚ ಪಿಶಾಚಾಶ್ಚ ಆದ್ಯಾಶ್ಚ—ಭೂತಪ್ರೇತಪಿಶಾಚಾದ್ಯಾಃ (ದ್ವಂದ್ವಸಮಾಸ)| ತೈಃ |

  • ಬ್ರಹ್ಮರಾಕ್ಷಸಮಾಂತ್ರಿಕೈಃ—ಬ್ರಹ್ಮರಾಕ್ಷಸಾಶ್ಚ ಮಾಂತ್ರಿಕಾಶ್ಚ ಬ್ರಹ್ಮರಾಕ್ಷಸಮಾಂತ್ರಿಕಾಃ (ದ್ವಂದ್ವಸಮಾಸ) | ತೈಃ ||

  • ಕಾಚಿದಪಿ— ಕಾಚಿತ್ + ಅಪಿ (ಜಶ್ತ್ವಸಂಧಿಃ) | ಚಿತ್, ಚನ ಪ್ರತ್ಯಯಗಳ ಸೇರುವಿಕೆಯಿಂದ ಕಿಮ್ ಶಬ್ದವು ಯಾವುದೋ ಎಂಬರ್ಥವನ್ನು ಕೊಡುತ್ತದೆ. "ಕಾ" ಎಂಬುದು ಮಕಾರಾನ್ತ ಸ್ತ್ರೀಲಿಂಗ ಕಿಮ್ ಶಬ್ದ, ಪ್ರ.ವಿ., ಏ.ವ. | ಯಾವಳು ಎಂದರ್ಥ. ಕಾ + ಚಿತ್ ಎಂದರೆ ಯಾವಳೋ ಎಂದರ್ಥ. "ಯಲ್ಲಿಂಗಂ ಯದ್ವಚನಂ ಯಾ ಚ ವಿಭಕ್ತಿಃ, ವಿಶೇಷ್ಯಸ್ಯ, ತಲ್ಲಿಂಗಂ ತದ್ವಚನಂ ಸಾ ಚ ವಿಭಕ್ತಿಃ ವಿಶೇಷಣಸ್ಯ"—ವಿಶೇಷ್ಯಕ್ಕೆ ಯಾವ ಲಿಂಗ-ವಿಭಕ್ತಿ-ವಚನಗಳೋ ವಿಶೇಷಣಕ್ಕೂ ಅವೇ ಲಿಂಗ-ವಿಭಕ್ತಿ-ವಚನಗಳಾಗಬೇಕೆಂಬ ನಿಯಮದಂತೆ, ಪೀಡಾ ಎಂಬುದು ಸ್ತ್ರೀಲಿಂಗ ಪ್ರ.ವಿ., ಏ.ವ. ವಾದ್ದರಿಂದ, ಕಿಮ್ ಶಬ್ದಕ್ಕೂ ಅವೇ ಬಂದಿವೆ. ಹೀಗಾಗಿ ಕಾಚಿತ್ ಪೀಡಾ | ಉದಾ— ಕಸ್ಮೈ ದೇವಾಯ, ಸುಂದರಂ ಪುಷ್ಪಮ್, ಸುಂದರೀ ಸ್ತ್ರೀ, ಸುಂದರಃ ಪುರುಷಃ, ಧೀಮತಾ ವ್ಯಾಸೇನ…

  • ಸ್ಯಾತ್— ಅಸ ಭುವಿ ಧಾತು, ವಿಧಿಲಿಙ್ ಲಕಾರ, ಪ್ರ.ಪು., ಏ.ವ. | ಆಗಬೇಕು ಎಂದರ್ಥ. ಸ್ಯಾತ್, ಸ್ಯಾತಾಮ್, ಸ್ಯುಃ | ಸ್ಯಾಃ, ಸ್ಯಾತಮ್, ಸ್ಯಾತ | ಸ್ಯಾಮ್, ಸ್ಯಾವ, ಸ್ಯಾಮ ||

  • ಸರ್ವೋಪದ್ರವಶಕ್ತಿಭಿಃ— ಸರ್ವ + ಉಪದ್ರವ— ಸರ್ವೋಪದ್ರವ (ಗುಣಸಂಧಿಃ) | ಸರ್ವಾಃ ಉಪದ್ರವಶಕ್ತಯಃ ಸರ್ವೋಪದ್ರವಶಕ್ತಯಃ (ಕರ್ಮಧಾರಯಸಮಾಸಃ)| ತಾಭಿಃ ||



ಕೃಷ್ಣ ಕೃಷ್ಣೇತಿ ಕೃಷ್ಣೇತಿ ಕೃಷ್ಣ ಕೃಷ್ಣೇತಿ ಚ ಸ್ಮರನ್ |

ನರೋ ನ ಲಿಪ್ಯತೇ ಪಾಪೈರ್ಭುಕ್ತಿಂ ಮುಕ್ತಿಂ ಚ ವಿಂದತಿ ||೧೩||


ಕೃಷ್ಣ ಕೃಷ್ಣಾ ಕೃಷ್ಣ ಎನುತಲಿ

ಕೃಷ್ಣನಾಮವ ಕೃಷ್ಣರೂಪವ

ಕೃಷ್ಣಚರಿತೆಯ ಸ್ಮರಿಸುತಲಿ ನಿಜಮುಕ್ತಿ ಕರಗತವು ||


(ಕೃಷ್ಣ) ಕೃಷ್ಣ, (ಕೃಷ್ಣ ಇತಿ) ಕೃಷ್ಣ ಎಂದು, (ಕೃಷ್ಣ ಇತಿ) ಕೃಷ್ಣ ಎಂದು, (ಚ) ಅಂತೆಯೇ, (ಕೃಷ್ಣ ಕೃಷ್ಣ ಇತಿ—ಕೃಷ್ಣ ಕೃಷ್ಣಾ ಕೃಷ್ಣ ಎನುತಲಿ ಕೃಷ್ಣನಾಮವ ಕೃಷ್ಣರೂಪವ ಕೃಷ್ಣಚರಿತೆಯ) ಹೇ ಕೃಷ್ಣ ಕೃಷ್ಣ! ಎಂದು ಕೃಷ್ಣನ ನಾಮ-ರೂಪ-ಚರಿತೆಗಳನ್ನು, (ಸ್ಮರನ್—ಸ್ಮರಿಸುತಲಿ) ಸ್ಮರಿಸುತ್ತಿದ್ದರೆ, (ನರಃ) ಅಂತಹ ಮನುಷ್ಯನು, (ಪಾಪೈಃ) ಪಾಪಗಳಿಂದ, (ನ ಲಿಪ್ಯತೇ) ಲಿಪ್ತನಾಗುವುದಿಲ್ಲ / ಅಂಟಿಸಿಕೊಳ್ಳಲ್ಪಡುವುದಿಲ್ಲ. (ಚ) ಹಾಗೆಯೇ, (ಭುಕ್ತಿಂ) ಸಕಲ ಇಷ್ಟಾರ್ಥಭೋಗಗಳನ್ನೂ, (ಮುಕ್ತಿಂ—ನಿಜಮುಕ್ತಿ ಕರಗತವು) ನಿಜವಾದ ಮುಕ್ತಾನಂದವನ್ನೂ ಅಂಗೈಯಲ್ಲಿನ ನೆಲ್ಲಿಕಾಯಿಯಂತೆಯೇ ತನ್ನ ಕರಗತ ಮಾಡಿಕೊಳ್ಳುವನು / ಜೀವನ್ಮುಕ್ತಿಯನ್ನು, (ವಿನ್ದತಿ) ಹೊಂದುವನು.


ವಿಶೇಷ ವಿಚಾರ—


  1. ಕೃಷ್ಣಶಬ್ದದ ಸವಿಸ್ತಾರ ವಿವರಣೆಗೆ ಮುಂದೆ ಬರುವ "ಶ್ರೀಕೃಷ್ಣಸಹಸ್ರನಾಮಸ್ತೋತ್ರ" ದ ಭಾಷ್ಯವನ್ನು ಪರಿಶೀಲಿಸಿರಿ.

  2. ಕೃಷ್ಣ + ಇತಿ— ಕೃಷ್ಣೇತಿ (ಗುಣಸನ್ಧಿಃ) | ಅಕಾರಾನ್ತಃ ಪುಲ್ಲಿಂಗಃ ಕೃಷ್ಣಶಬ್ದಃ, ಸಂಬೋಧನಾವಿಭಕ್ತಿಃ, ಏಕವಚನಮ್ | ಕೃಷ್ಣಃ, ಕೃಷ್ಣೌ, ಕೃಷ್ಣಾಃ (ಪ್ರಥಮಾ) | ಹೇ ಕೃಷ್ಣ, ಹೇ ಕೃಷ್ಣೌ, ಹೇ ಕೃಷ್ಣಾಃ (ಸಂಬೋಧನಾಪ್ರಥಮಾ) | ಕೃಷ್ಣಮ್, ಕೃಷ್ಣೌ, ಕೃಷ್ಣಾನ್ (ದ್ವಿತೀಯಾ) | ಕೃಷ್ಣೇನ, ಕೃಷ್ಣಾಭ್ಯಾಮ್, ಕೃಷ್ಣೈಃ (ತೃತೀಯಾ) | ಕೃಷ್ಣಾಯ, ಕೃಷ್ಣಾಭ್ಯಾಮ್, ಕೃಷ್ಣೇಭ್ಯಃ (ಚತುರ್ಥೀ) | ಕೃಷ್ಣಾತ್, ಕೃಷ್ಣಾಭ್ಯಾಮ್, ಕೃಷ್ಣೇಭ್ಯಃ (ಪಂಚಮೀ) | ಕೃಷ್ಣಸ್ಯ, ಕೃಷ್ಣಯೋಃ, ಕೃಷ್ಣಾನಾಮ್ (ಷಷ್ಠೀ) | ಕೃಷ್ಣೇ, ಕೃಷ್ಣಯೋಃ, ಕೃಷ್ಣೇಷು (ಸಪ್ತಮೀ) ||

  3. ಇತಿ— ಅವ್ಯಯಮ್ | "ಪ್ರತಿ ಪ್ರತಿನಿಧೌ ವೀಪ್ಸಾಲಕ್ಷಣಾದೌ ಪ್ರಯೋಗತಃ | ಇತಿ ಹೇತುಪ್ರಕರಣಪ್ರಕರ್ಷಾದಿಸಮಾಪ್ತಿಷು ||" (ಅಮರಕೋಶಃ); ಹೇತು (ಕಾರಣ), ಪ್ರಕರಣ(ಎಂಬ ಸಂದರ್ಭ), ಪ್ರಕರ್ಷ/ಪ್ರಕಾಶ(ಎಂಬ ಊರು), ಸಮಾಪ್ತಿ (ಇಲ್ಲಿಗೆ ಮುಕ್ತಾಯ) ಎಂದರ್ಥ. 

  4. ಸ್ಮರನ್— ಸ್ಮರಿಸುತ್ತಿರುವವನು ಎಂದರ್ಥ. ಸ್ಮೃ ಚಿನ್ತಾಯಾಮ್ ಧಾತುವಿನ ಶತೃ (ಅತ್) ಪ್ರತ್ಯಯಾಂತ ಕೃದಂತ, ಪುಲ್ಲಿಂಗ, ಪ್ರ.ವಿ., ಏ.ವ. | ಸ್ಮರನ್, ಸ್ಮರನ್ತೌ, ಸ್ಮರನ್ತಃ (ಪುಂ., ಪ್ರಥಮಾ)| ಸ್ಮರನ್ತಮ್, ಸ್ಮರನ್ತೌ, ಸ್ಮರತಃ (ದ್ವಿ.ವಿ.) | ಸ್ಮರತಾ, ಸ್ಮರದ್ಭ್ಯಾಮ್, ಸ್ಮರದ್ಭಿಃ (ತೃತೀಯಾ) | ಸ್ಮರತೇ, ಸ್ಮರದ್ಭ್ಯಾಮ್, ಸ್ಮರದ್ಭ್ಯಃ (ಚತುರ್ಥೀ) | ಸ್ಮರತಃ, ಸ್ಮರದ್ಭ್ಯಾಮ್, ಸ್ಮರದ್ಭ್ಯಃ (ಪಞ್ಚಮೀ) | ಸ್ಮರತಃ, ಸ್ಮರತೋಃ, ಸ್ಮರತಾಮ್ (ಷಷ್ಠೀ) | ಸ್ಮರತಿ, ಸ್ಮರತೋಃ, ಸ್ಮರತ್ಸು (ಸಪ್ತಮೀ) || ಸ್ಮರನ್ತೀ, ಸ್ಮರನ್ತ್ಯೌ, ಸ್ಮರನ್ತ್ಯಃ (ಸ್ತ್ರೀ, ಪ್ರಥಮಾ) ||

  5. ನರಃ— ಅಕಾರಾನ್ತಃ, ಪುಲ್ಲಿಂಗಃ, ನರಶಬ್ದಃ, ಪ್ರ.ವಿ., ಏ.ವ. | ನರಃ, ನರೌ, ನರಾಃ (ಪ್ರಥಮಾ) | ಉಳಿದ ರೂಪಗಳು ಮೇಲಿರುವ ಕೃಷ್ಣಶಬ್ದದಂತೆಯೇ ನಡೆಯುತ್ತವೆ. ಇನ್ನೊಂದು, ಋಕಾರಾಂತ ಪುಲ್ಲಿಂಗ ನೃಶಬ್ದ | ನಾ, ನರೌ, ನರಃ (ಪ್ರಥಮಾ) | ಇದರಲ್ಲಿ ನರಃ ಬಹುವಚನ ರೂಪ. ಎರಡೂ ಪದಗಳಿಗೂ ಒಂದೇ ಅರ್ಥ ಪುರುಷ, ಮನುಷ್ಯ ಎಂದು. "ನಯತಿ ನೀಯತೇ ವಾ, ನೀ ಪ್ರಾಪಣೇ ಧಾತುಃ "— ಒಯ್ಯುತ್ತಾನೆ ಅಥವಾ ಒಯ್ಯಲ್ಪಡುತ್ತಾನೆ ಮೋಕ್ಷದೆಡೆಗೆ ಎಂಬುದು ನೃಶಬ್ದದ ನಿಷ್ಪತ್ತಿ. "ನೃಣಾತಿ ನರಯತಿ ವಾ ಇತಿ ನೄ ನೀತೌ ಪ್ರಾಪಣೇ ವಾ ಧಾತುಃ"— ಮೋಕ್ಷಪ್ರಾಪ್ತಿ ಮಾಡಿಸುವ ಅವಕಾಶವಿರುವ ಏಕಮೇವಾದ್ವಿತೀಯವಾದ ಜನ್ಮವೇ ನರಜನ್ಮ. ಅದಕ್ಕೇ ದಾಸರೆಂದರು— "ಮಾನವ ಜನ್ಮ ದೊಡ್ಡದು, ಅದ ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ" ಎಂದು. ಶಂಕರಾಚಾರ್ಯರೆಂದರು— "ಜನ್ತೂನಾಂ ನರಜನ್ಮ ದುರ್ಲಭಂ….". 

  6. ಪಾಪೈಃ— ಪಾಪಗಳಿಂದ. ಅಕಾರಾನ್ತಃ, ನಪುಂಸಕಲಿಙ್ಗಃ, ಪಾಪಶಬ್ದಃ, ತೃ.ವಿ., ಬ.ವ. | ಪಾಪಮ್, ಪಾಪೇ, ಪಾಪಾನಿ (ಪ್ರಥಮಾ/ದ್ವಿತೀಯಾ) | ಪಾಪೇನ, ಪಾಪಾಭ್ಯಾಮ್, ಪಾಪೈಃ (ತೃತೀಯಾ) | ಪಾಪಾಯ, ಪಾಪಾಭ್ಯಾಮ್, ಪಾಪೇಭ್ಯಃ (ಚತುರ್ಥೀ) | ಪಾಪಾತ್, ಪಾಪಾಭ್ಯಾಮ್, ಪಾಪೇಭ್ಯಃ (ಪಞ್ಚಮೀ) | ಪಾಪಸ್ಯ, ಪಾಪಯೋಃ, ಪಾಪಾನಾಮ್ (ಷಷ್ಠೀ) | ಪಾಪೇ, ಪಾಪಯೋಃ, ಪಾಪೇಷು (ಸಪ್ತಮೀ) ||

  7. ಲಿಪ್ಯತೇ— ಲಿಪ್ ಉಪದೇಹೇ ಧಾತುವಿನ ಲಟ್ ಲಕಾರ ಆತ್ಮನೇಪದೀ, ಪ್ರ.ಪು., ಏ.ವ. | ಲಿಪ್ಯತೇ, ಲಿಪ್ಯೇತೇ, ಲಿಪ್ಯನ್ತೇ | ಲಿಪ್ಯಸೇ, ಲಿಪ್ಯೇಥೇ, ಲಿಪ್ಯಧ್ವೇ | ಲಿಪ್ಯೇ, ಲಿಪ್ಯಾವಹೇ, ಲಿಪ್ಯಾಮಹೇ || ಇದೇ ರೀತಿ ವೃತ್ ವರ್ತನೇ ಧಾತುವಿನ ರೂಪಗಳೂ ನಡೆಯುತ್ತವೆ. ವರ್ತತೇ (=ಇದೆ, ನಡೆಯುತ್ತದೆ), ವರ್ತೇತೇ, ವರ್ತನ್ತೇ ಇತ್ಯಾದಿ. 

  8. ಭುಕ್ತಿಮ್— ಇಕಾರಾನ್ತಃ ಸ್ತ್ರೀಲಿಙ್ಗೋ ಭುಕ್ತಿಶಬ್ದೋ ದ್ವಿತೀಯಾವಿಭಕ್ತಿರೇಕವಚನಮ್ | ಭುಕ್ತಿಃ, ಭುಕ್ತೀ, ಭುಕ್ತಯಃ (ಪ್ರಥಮಾ) | ಭುಕ್ತಿಮ್, ಭುಕ್ತೀ, ಭುಕ್ತೀಃ | ಭುಕ್ತ್ಯಾ, ಭುಕ್ತಿಭ್ಯಾಮ್, ಭುಕ್ತಿಭಿಃ (ತೃತೀಯಾ) | ಭುಕ್ತ್ಯೈ / ಭುಕ್ತಯೇ, ಭುಕ್ತಿಭ್ಯಾಮ್, ಭುಕ್ತಿಭ್ಯಃ (ಚತುರ್ಥೀ) | ಭುಕ್ತ್ಯಾಃ / ಭುಕ್ತೇಃ, ಭುಕ್ತಿಭ್ಯಾಮ್, ಭುಕ್ತಿಭ್ಯಃ (ಪಞ್ಚಮೀ) | ಭುಕ್ತ್ಯಾಃ / ಭುಕ್ತೇಃ, ಭುಕ್ತ್ಯೋಃ, ಭುಕ್ತೀನಾಮ್ (ಷಷ್ಠೀ) | ಭುಕ್ತ್ಯಾಮ್, ಭುಕ್ತ್ಯೋಃ, ಭುಕ್ತಿಷು (ಸಪ್ತಮೀ) || ಇದೇ ರೀತಿ, ಭಕ್ತಿ, ಮುಕ್ತಿ ಶಬ್ದಗಳನ್ನೂ ತಿಳಿಯಬೇಕು. "ಭುಜ್ ಪಾಲನೇ ಅಭ್ಯವಹಾರೇ ಚ" ಧಾತುಜನ್ಯ ಶಬ್ದ ಭುಕ್ತಿ. ಭೋಗವೆಂದರ್ಥ.

  9. ಮುಕ್ತಿಮ್— ಮುಚ್ ಧಾತುಜನ್ಯ ಶಬ್ದ ಮುಕ್ತಿ. ಮೋದ, ಪ್ರಮೋಚನೆ, ಆತ್ಯಂತಿಕ ಬಿಡುಗಡೆ, ಆತ್ಯಂತಿಕ ಅನಂತ ಸುಖ, ಮೋಕ್ಷ ಎಂದರ್ಥ. ಮುಕ್ತಿಯನ್ನು ಎಂದರ್ಥ.

  10. ವಿನ್ದತಿ— ವಿದ ಲಾಭೇ ಧಾತುವಿನ ಲಟ್ ಲಕಾರ, ಪ್ರ.ಪು., ಏ.ವ. | ವಿನ್ದತಿ, ವಿನ್ದತಃ, ವಿನ್ದನ್ತಿ | ವಿನ್ದಸಿ, ವಿನ್ದಥಃ, ವಿನ್ದಥ | ವಿನ್ದಾಮಿ, ವಿನ್ದಾವಃ, ವಿನ್ದಾಮಃ ||


ಜಗಜ್ಜೈತ್ರೈಕಮಂತ್ರೇಣ ಕೃಷ್ಣನಾಮ್ನಾಭಿರಕ್ಷಿತಮ್ |

ಯಃ ಸ್ಮರೇತ್ ಸರ್ವದಾ ತಸ್ಯ ಕರಸ್ಥಾಃ ಸರ್ವಸಿದ್ಧಯಃ ||೧೪||


ಒಂದು ಮಂತ್ರದಿ ಲೋಕವಿಜಯವ

ದೊಂದು ಕೃಷ್ಣನ ನಾಮಮಾತ್ರದಿ

ಸಂದುವುದು ಸಕಲಾರ್ಥ ಸಂತತ ಸ್ಮರಣೆಯೊಂದಿರಲಿ ||


(ಜಗಜ್ಜೈತ್ರೈಕಮನ್ತ್ರೇಣ—ಒಂದು ಮಂತ್ರದಿ ಲೋಕವಿಜಯವದು) ಇಡೀ ಜಗವನ್ನೇ ಗೆಲ್ಲಬಲ್ಲ ಏಕಮೇವ ಮಂತ್ರವಾದ, (ಕೃಷ್ಣನಾಮ್ನಾಭಿರಕ್ಷಿತಮ್—ಕೃಷ್ಣನ ಒಂದು ನಾಮಮಾತ್ರದಿ) ಕೃಷ್ಣನಾಮದಿಂದ ಎಲ್ಲೆಡೆಯಿಂದಲೂ ಸುರಕ್ಷಿತವಾದ ಈ ಶ್ರೀಕೃಷ್ಣರಕ್ಷಾಸ್ತೋತ್ರವನ್ನು, (ಯಃ) ಯಾವನು, (ಸರ್ವದಾ ಸ್ಮರೇತ್—ಸಂತತ ಸ್ಮರಣೆಯೊಂದಿರಲಿ) ಯಾವಾಗಲೂ ಸ್ಮರಿಸುವನೋ, (ತಸ್ಯ) ಅವನಿಗೆ, (ಸರ್ವಸಿದ್ಧಯಃ—ಸಕಲಾರ್ಥ) ಸಕಲ ಸಿದ್ಧಿಗಳೂ, ಅಭೀಷ್ಟಗಳೂ (ಕರಸ್ಥಾಃ—ಸಂದುವುದು) ಕೈವಶವಾಗಿರುವುವು. 


ಟಿಪ್ಪನೀ—

("ಟೇಪಯತಿ ವ್ಯಾಖ್ಯಾಯತೇऽನಯಾ"— ವ್ಯಾಖ್ಯಾನಿಸಲ್ಪಡುತ್ತದೆ ಇದರಿಂದ ಎಂಬುದರಿಂದಾಗಿ ಟಿಪ್ಪಣಿ ಎನಿಸಿದೆ. ಸಂಸ್ಕೃತದಲ್ಲಿ ಟಿಪ್ಪನೀ)

  • ಜಗಜ್ಜೈತ್ರೈಕಮನ್ತ್ರೇಣ—ಜಗವನ್ನೇ ಗೆಲ್ಲಬಲ್ಲ ಒಂದು ಮಂತ್ರದಿಂದ ಎಂದರ್ಥ. ಅಕಾರಾನ್ತ ಪುಲ್ಲಿಂಗ ಜಗಜ್ಜೈತ್ರೈಕಮನ್ತ್ರ-ಶಬ್ದ ತೃ.ವಿ., ಏ.ವ. | ಜಗತ್ + ಜೈತ್ರಃ— ಜಗಜ್ಜೈತ್ರಃ (ಜಶ್ತ್ವಸನ್ಧಿಃ) | ಜಗಜ್ಜೈತ್ರ + ಏಕಮನ್ತ್ರೇಣ— ಜಗಜ್ಜೈತ್ರೈಕಮನ್ತ್ರೇಣ (ವೃದ್ಧಿಸನ್ಧಿಃ) | 

  • ತಕಾರಾನ್ತ ನಪುಂಸಕಲಿಂಗ ಜಗತ್ ಶಬ್ದ— ("ಗಚ್ಛತೀತಿ"— ಸದಾ ಚಲನಶೀಲವಾದದ್ದು, ಕ್ಷಣ ಕ್ಷಣವೂ ಪರಿವರ್ತನಶೀಲವಾದದ್ದೆಂಬುದರಿಂದ ಸೃಷ್ಟಿಯು ಜಗತ್ತೆನಿಸಿರುವುದು) ಜಗತ್, ಜಗತೀ, ಜಗನ್ತಿ (ಪ್ರಥಮಾ / ದ್ವಿತೀಯಾ / ಸಂಬೋಧನಕ್ಕೆ ಮೊದಲು 'ಹೇ ' ಸೇರಿಸಿ) | ಜಗತಾ, ಜಗದ್ಭ್ಯಾಮ್, ಜಗದ್ಭಿಃ (ತೃತೀಯಾ) | ಜಗತೇ, ಜಗದ್ಭ್ಯಾಮ್, ಜಗದ್ಭ್ಯಃ (ಚತುರ್ಥೀ) | ಜಗತಃ, ಜಗದ್ಭ್ಯಾಮ್, ಜಗದ್ಭ್ಯಃ (ಪಞ್ಚಮೀ) | ಜಗತಃ, ಜಗತೋಃ, ಜಗತಾಮ್ (ಷಷ್ಠೀ) | ಜಗತಿ, ಜಗತೋಃ, ಜಗತ್ಸು (ಸಪ್ತಮೀ) || 


"ತ್ರಿಷ್ವಥೋ ಜಗತೀ ಲೋಕೋ ವಿಷ್ಟಪಂ ಭುವನಂ ಜಗತ್ | " (ಅಮರಕೋಶ)


 ಮೂರೂ ಲಿಂಗಗಳಲ್ಲಿ, ಸ್ತ್ರೀ—ಜಗತೀ, ಪುಂ—ಲೋಕಃ, ನಪುಂ—ವಿಷ್ಟಪಮ್, ಭುವನಮ್, ಜಗತ್ |

  • ಈಕಾರಾನ್ತ ಸ್ತ್ರೀಲಿಂಗ ಜಗತೀ ಶಬ್ದ— ("ಗಚ್ಛತಿ ಕಾರ್ಯತ್ವಾತ್ ನಷ್ಟಾ ಭವತೀತಿ "—ಕಾರಣವಾದ ಬ್ರಹ್ಮದ ಕಾರ್ಯವಾದ್ದರಿಂದಾಗಿ ನಾಶವಾಗಿ ಹೋಗುವ ನಶ್ವರವಾದುದೆಂಬುದರಿಂದ ಜಗತೀ ಎನಿಸಿದೆ ಈ ಸೃಷ್ಟಿ) ಜಗತೀ, ಜಗತ್ಯೌ, ಜಗತ್ಯಃ (ಪ್ರಥಮಾ) | ಜಗತೀಮ್, ಜಗತ್ಯೌ, ಜಗತೀಃ (ದ್ವಿತೀಯಾ) | ಜಗತ್ಯಾ, ಜಗತೀಭ್ಯಾಮ್, ಜಗತಿಭಿಃ (ತೃತೀಯಾ) | ಜಗತ್ಯೈ, ಜಗತೀಭ್ಯಾಮ್, ಜಗತೀಭ್ಯಃ (ಚತುರ್ಥೀ) | ಜಗತ್ಯಾಃ, ಜಗತೀಭ್ಯಾಮ್, ಜಗತೀಭ್ಯಃ (ಪಞ್ಚಮೀ) | ಜಗತ್ಯಾಃ, ಜಗತ್ಯೋಃ, ಜಗತೀನಾಮ್ (ಷಷ್ಠೀ) | ಜಗತ್ಯಾಮ್, ಜಗತ್ಯೋಃ, ಜಗತೀಷು (ಸಪ್ತಮೀ) | ಹೇ ಜಗತಿ, ಹೇ ಜಗತ್ಯೌ, ಹೇ ಜಗತ್ಯಃ (ಸಮ್ಬೋಧನಮ್) || 

"ಸರ್ವಂಸಹಾ ವಸುಮತೀ ವಸುಧೋರ್ವೀ ವಸುನ್ಧರಾ | 

ಗೋತ್ರಾ ಕುಃ ಪೃಥಿವೀ ಪೃಥ್ವೀ ಕ್ಷ್ಮಾऽವನಿರ್ಮೇದಿನೀ ಮಹೀ || 

ವಿಪುಲಾ ಗಹ್ವರೀ ಧಾತ್ರೀ ಗೌರಿಲಾ ಕುಮ್ಭಿನೀ ಕ್ಷಮಾ | 

ಭೂತಧಾತ್ರೀ, ರತ್ನಗರ್ಭಾ, ಜಗತೀ ಸಾಗರಾಮ್ಬರಾ || 

ರವೇರರ್ಚಿಶ್ಚ ಶಸ್ತ್ರಂ ಚ ವಹ್ನಿಜ್ವಾಲಾ ಚ ಹೇತಯಃ | 

ಜಗತೀ ಜಗತಿಚ್ಛನ್ದೋವಿಶೇಷೇऽಪಿ ಕ್ಷಿತಾವಪಿ ||" (ಅಮರಕೋಶಃ) 

ಸರ್ವಂಸಹಾ (ಎಲ್ಲವನ್ನೂ ಸಹಿಸುವಂಥವಳು), ವಸುಮತೀ (ಸಂಪತ್ತುಳ್ಳವಳು), ವಸುಧಾ (ಸಂಪತ್ತನ್ನು ಧಾರಣೆ ಮಾಡಿದವಳು), ಉರ್ವೀ (ಉರು ಬಹು, ವಿತತ ವಿಸ್ತಾರವಾಗಿ ಹಬ್ಬಿರುವವಳು), ವಸುಂಧರಾ (ಸಂಪತ್ತನ್ನು ಧರಿಸಿದವಳು), ಗೋತ್ರಾ (ಗಾಃ ಪಶೂನ್ ಸರ್ವಾನ್ ಜೀವಾನ್ ತ್ರಾಯತೇ, ಇತಿ—ಸಕಲ ಜೀವರನ್ನು ರಕ್ಷಿಸುವವಳು), ಕುಃ (ಕು + ಮಿತಾದಿತ್ವಾತ್ ಡುಃ, ಪರಿಮಿತಿಯುಳ್ಳ ಭೂಮಿ), ಪೃಥಿವೀ (ಪ್ರಥನಾತ್ | ಪ್ರಥಿಃ ಪ್ರಸರಣೇ— ಯಾಸ್ಕ ನಿರುಕ್ತಮ್ ೧ |೪— ಪ್ರಥತೇ ವಿಸ್ತಾರಂ ಯಾತೀತಿ ಪ್ರಥೇಃ ಸಂಪ್ರಸಾರಣಂ ಚ— ವಿಸ್ತಾರವಾಗಿ ಹಬ್ಬಿರುವುದು), ಪೃಥ್ವೀ (ಪೃಥುಃ ಸ್ಥೂಲಗುಣಯುಕ್ತಾ— ವಿಸ್ತಾರವಾದದ್ದು, "ಮಧುಕೈಟಭಯೋರ್ಮೇದಸಂಯೋಗಾನ್ಮೇದಿನೀ ಸ್ಮೃತಾ | ಧಾರಣಾಚ್ಚ ಧರಾ ಪ್ರೋಕ್ತಾ ಪೃಥ್ವೀ ವಿಸ್ತಾರಯೋಗತಃ "— ದೇವೀಭಾಗವತ ೩ | ೧೩ | ೮), ಕ್ಷ್ಮಾ (ಕ್ಷಮತೇ ಸಹತೇ ಭಾರಂ ಅಪರಾಧಜನಿತಂ ವಾ ಆತ್ಮಸ್ಥಾನಾಂ ಜೀವಾನಾಂ ಚತುರ್ವಿಧಾನಾಂ ಜರಾಯುಜ-ಅಣ್ಡಜ-ಸ್ವೇದಜ-ಉದ್ಭಿಜ್ಜಾನಾಮ್— ಜರಾಯುವಿನಿಂದ ಜನಿಸಿದ ಮನುಷ್ಯಾದಿಗಳ, ಮೊಟ್ಟೆಯಿಂದುದಿಸಿದ ಪಕ್ಷ್ಯಾದಿಗಳ, ಬೆವರಿನಿಂದುದಿಸಿದ, ನೆಲ / ಬೀಜಗಳನ್ನು ಭೇದಿಸಿ ಜನಿಸಿದ— ಹೀಗೆ ತನ್ನಲ್ಲಿರುವ ೪ ವಿಧದ ಸಮಸ್ತ ಜೀವರ ಅಪರಾಧಗಳಿಂದಾದ ಭಾರ ನೋವುಗಳನ್ನು ಸಹಿಸಿ ಕ್ಷಮಿಸುವವಳು), ಅವನಿಃ (ಅವನೀ, ಅವ ರಕ್ಷಣೇ ಧಾತುಜನ್ಯ, ಅವತಿ ಸರ್ವಾನ್ ಜೀವಾನ್—ಎಲ್ಲ ಜೀವರನ್ನೂ ರಕ್ಷಿಸುವವಳು), ಮೇದಿನೀ (ಪೃಥ್ವೀ ಪದದ ವಿವರಣೆಯಲ್ಲಿ ನೋಡಿ; ಮೇದೋऽಸ್ಯಾಮ್ ಅಸ್ತೀತಿ—ಮಧು ಕೈಟಭರ ಮೇದಸ್ಸು ಇವಳಲ್ಲಿರುವುದರಿಂದ), ಮಹೀ (ಮಹ್ಯತೇ ಪೂಜ್ಯತೇ ಇತಿ— ಪೂಜಿಸಲ್ಪಡುವುದರಿಂದ), 

ವಿಪುಲಾ (ವಿ + ಪುಲ ಮಹತ್ತ್ವೇ), ಗಹ್ವರೀ (ಗುಹಾ, ಗುಹೆಯಂತೆ ಗೋಪ್ಯ ಗರ್ಭವುಳ್ಳ), ಧಾತ್ರೀ (ಧೀಯತೇ ಪೀಯತೇ ಇತಿ, ಅಸ್ಯಾಃ ಸ್ತನದುಗ್ಧಪಾನಾತ್—ನವಮಾಸ ಧರಿಸುವುದರಿಂದಲೂ, ಬಳಿಕ ಹಾಲುಣಿಸುವುದರಿಂದಲೂ ಮಾತೆಯು ಧಾತ್ರೀ; ದಧಾತಿ ಧರತೀತಿ ವಾ— ಎಲ್ಲರನ್ನೂ ಧರಿಸಿ ಆಧರಿಸುವುದರಿಂದ ಭೂಮಿಯೂ ಧಾತ್ರೀ), ಗೌಃ (ಗಚ್ಛತಿ ಅನೇನ ಕಾಲವ್ಯವಹಾರಾದಯಃ— ಹಗಲಿರುಳು, ಲೋಕವ್ಯವಹಾರಾದಿಗಳು ಇವಳಿಂದಲೇ ನಡೆಯುವುದರಿಂದ ಭೂಮಿಯು ಗೌಃ / ಗೋ; ಗಮ್ ಗತೌ), ಇಲಾ (ಇಳೆ, ಇಲತಿ ವಿಷ್ಣುವರಾತ್ ಪುಂಸ್ತ್ವಂ ಪ್ರಾಪ್ನೋತಿ; ವಿಷ್ಣುವರದಿಂದ ಗಂಡಸುತನವನ್ನು ಹೊಂದಿ ಸುದ್ಯುಮ್ನನಾದವಳೇ ವೈವಸ್ವತಮನುಪುತ್ರಿ ಇಳಾ. ಮತ್ತೆ ಶಿವಶಾಪಗ್ರಸ್ತ ಕುಮಾರವನಕ್ಕೆ ಹೋದಾಗ ಸ್ತ್ರೀಯಾದಳು, ಬುಧನು ವರಿಸಿದ, ಪುರೂರವನ ಜನನ, ಪುರೋಹಿತ ವಸಿಷ್ಠರ ಶಿವತಪದಿಂದ ಆಕೆಗೆ ೧ ಮಾಸ ಪುಂಸ್ತ್ವ, ೧ ಮಾಸ ಸ್ತ್ರೀತ್ವ ಪರ್ಯಾಯ ಬಂತು ಎಂದಿದೆ ಭಾಗವತಪುರಾಣ. ರಾಮಾಯಣದಂತೆ, ಕರ್ದಮಪ್ರಜಾಪತಿಯ ಪುತ್ರ ಇಲನು ಕಾರ್ತಿಕೇಯಜನ್ಮಭೂಮಿಪ್ರವೇಶದಿಂದ ಸ್ತ್ರೀಯಾದ, ಪಾರ್ವತೀವರದಿಂದ ಪುಂಸ್ತ್ರೀ ಮಾಸ ಪರ್ಯಾಯವನ್ನು ಪಡೆದ. ಇಲ್ಲಿ, ಭೂಮಿ ಎಂದರ್ಥ), ಕುಮ್ಭಿನೀ (ಕುಮ್ಭಮಿವ ಜಲಸಂಗ್ರಹಣಂ ಕರೋತೀತಿ—ಪಾತ್ರೆಯಂತೆ ಅಂತರ್ಜಲವನ್ನು ಸಂಗ್ರಹಿಸಿಡುವವಳು), ಕ್ಷಮಾ (ಕ್ಷಮತೇ ಆತ್ಮೋಪರಿ ಸ್ಥಿತಾನಾಂ ಜೀವಾನಾಮ್ ಅಪರಾಧಂ ಯಾ—ತನ್ನ ಮೇಲಿರುವ ಜೀವರ ಅಪರಾಧಗಳನ್ನು ಕ್ಷಮಿಸುವಾಕೆ), ಭೂತಧಾತ್ರೀ (ಸಕಲ ಭೂತಗಳನ್ನು , ಚರಾಚರಗಳನ್ನು ಧರಿಸಿದವಳು), ರತ್ನಗರ್ಭಾ (ರತ್ನಾನಿ ಸ್ವಾನ್ತಃ ಧರತೀತಿ—ರತ್ನಗಳನ್ನು ತನ್ನೊಳಗೆ ಧರಿಸಿದಾಕೆ), ಸಾಗರಾಮ್ಬರಾ (ಸಾಗರಂ ಸ್ವಾಮ್ಬರಮಿವ ಧರತೀತಿ—ಸಾಗರವನ್ನು ತನ್ನ ಬಟ್ಟೆಯಂತೆ ಧರಿಸಿದವಳು). ಜಗತೀ ಎಂಬುದಕ್ಕೆ ಇತರ ಅರ್ಥಗಳು— ಸೂರ್ಯಕಿರಣ, ಶಸ್ತ್ರ, ಬೆಂಕಿಯ ಜ್ವಾಲೆ, ಖಡ್ಗ / ಹೇತಿಃ, ಜಗತೀ ಎಂಬ ೧೨ ಅಕ್ಷರಗಳ ಪಾದಗಳನ್ನುಳ್ಳ ಛಂದೋಭೇದ, ಕ್ಷಿತಿಃ (ವಸತಿ ಅಸ್ಯಾಮ್— ಇದರಲ್ಲಿ ವಾಸವಾಗಿರುತ್ತಾರೆ, "ಮಹಾಲಯೇ ಕ್ಷಯಂ ಯಾತಿ ಕ್ಷಿತಿಸ್ತೇನ ಪ್ರಕೀರ್ತಿತಾ | ಕಾಶ್ಯಪೀ ಕಶ್ಯಪಸ್ಯೇಯಮಚಲಾ ಸ್ಥಿರರೂಪತಃ"— ಬ್ರಹ್ಮವೈವರ್ತಪುರಾಣ, ಪ್ರಕೃತಿಖಂಡ, ಅಧ್ಯಾಯ ೭ | ಮಹಾಪ್ರಳಯದಲ್ಲಿ ಕ್ಷಯಹೊಂದುವುದರಿಂದ ಭೂಮಿಯು ಕ್ಷಿತಿಯು).

  • ಜೈತ್ರಃ— ಜಯಶೀಲಃ, ಜೇತಾ. ಅಕಾರಾನ್ತ ಪುಲ್ಲಿಂಗ ಜೈತ್ರ ಶಬ್ದ. ರಾಮ, ಕೃಷ್ಣ ಶಬ್ದಗಳಂತೆಯೇ ಏಳೂ ವಿಭಕ್ತಿರೂಪಗಳು. 

  • ಏಕಮನ್ತ್ರೇಣ— ಏಕೋ ಮನ್ತ್ರಃ—ಏಕಮನ್ತ್ರಃ (ಸಙ್ಖ್ಯಾದ್ವಿಗುಸಮಾಸಃ) | ತೇನ— ಒಂದು ಮಂತ್ರದಿಂದ ಎಂದರ್ಥ. ಪೂರ್ವಪದದಲ್ಲಿ ಸಂಖ್ಯಾವಾಚಕಗಳಿರುವ ಸಮಾಸವು ದ್ವಿಗು. ಸಂಖ್ಯಾವಾಚಕಗಳು— ಏಕಮ್, ದ್ವೇ, ತ್ರೀಣಿ, ಚತ್ವಾರಿ, ಪಞ್ಚ, ಷಟ್, ಸಪ್ತ, ಅಷ್ಟ, ನವ, ದಶ…ಇತ್ಯಾದಿ. ಮನ್ತ್ರಃ— ಮನನಾತ್ ತ್ರಾಯತೇ, ಇತಿ— ಮನನ ಮಾಡುವುದರಿಂದ ರಕ್ಷಿಸುವುದೇ ಮಂತ್ರವು.

  • ನಾಮ್ನಾ— ನಕಾರಾನ್ತ ನಪುಂಸಕಲಿಂಗ ನಾಮನ್ ಶಬ್ದ, ತೃ.ವಿ., ಏ.ವ. | ಹೆಸರಿನಿಂದ ಎಂದರ್ಥ. ನಾಮ, ನಾಮನೀ, ನಾಮಾನಿ (ಪ್ರ / ದ್ವಿ) | ನಾಮ್ನಾ, ನಾಮಭ್ಯಾಮ್, ನಾಮಭಿಃ (ತೃ) | ನಾಮ್ನೇ, ನಾಮಭ್ಯಾಮ್, ನಾಮಭ್ಯಃ (ಚ) | ನಾಮ್ನಃ, ನಾಮಭ್ಯಾಮ್, ನಾಮಭ್ಯಃ (ಪಂ) | ನಾಮ್ನಃ, ನಾಮ್ನೋಃ, ನಾಮ್ನಾಮ್ (ಷ) | ನಾಮ್ನಿ, ನಾಮ್ನೋಃ, ನಾಮಸು (ಸ) | ಹೇ ನಾಮನ್, ಹೇ ನಾಮನೀ, ಹೇ ನಾಮಾನಿ (ಸಮ್ಬೋಧನ) ||

  • ಅಭಿರಕ್ಷಿತಮ್— ಅಭಿ ಉಪಸರ್ಗಪೂರ್ವಕ ರಕ್ಷ ಪಾಲನೇ ಧಾತುವಿನ ಕ್ತಪ್ರತ್ಯಯಾನ್ತ ಕೃದಂತ. ಅಭಿ + ರಕ್ಷ್ + ಕ್ತ | ಉದಾ— ಪಠಿತಮ್(ನಪುಂ), ಲಿಖಿತಃ(ಪುಂ), ಪೀತಾ(ಸ್ತ್ರೀ),...

  • ಯಃ— ದಕಾರಾನ್ತ ಪುಲ್ಲಿಂಗ ಯದ್ ಶಬ್ದ, ಪ್ರ.ವಿ., ಏ.ವ. | ಯಾವನು ಎಂದರ್ಥ. ಯಃ, ಯೌ, ಯೇ | ಯಮ್, ಯೌ, ಯಾನ್ | ಯೇನ, ಯಾಭ್ಯಾಮ್, ಯೈಃ | ಯಸ್ಮೈ, ಯಾಭ್ಯಾಮ್, ಯೇಭ್ಯಃ | ಯಸ್ಮಾತ್, ಯಾಭ್ಯಾಮ್, ಯೇಭ್ಯಃ | ಯಸ್ಯ, ಯಯೋಃ, ಯೇಷಾಮ್ | ಯಸ್ಮಿನ್, ಯಯೋಃ, ಯೇಷು || ಯಾ, ಯೇ, ಯಾಃ (ಸ್ತ್ರೀ) || ಯಮ್, ಯೇ, ಯಾನಿ (ನಪುಂ) ||

  • ಸ್ಮರೇತ್— ಸ್ಮೃ ಚಿನ್ತಾಯಾಮ್ ಧಾತುವಿನ ವಿಧಿಲಿಙ್ ಲಕಾರ, ಪ್ರ.ಪು., ಏ.ವ. | ಸ್ಮರಿಸಬೇಕು ಎಂದರ್ಥ. ಸ್ಮರೇತ್, ಸ್ಮರೇತಾಮ್, ಸ್ಮರೇಯುಃ | ಸ್ಮರೇಃ, ಸ್ಮರೇತಮ್, ಸ್ಮರೇತ | ಸ್ಮರೇಯಮ್, ಸ್ಮರೇವ, ಸ್ಮರೇಮ ||

  • ಸರ್ವದಾ— ಅವ್ಯಯಶಬ್ದ. "ಸರ್ವಸ್ಮಿನ್ ಕಾಲೇ "—ಎಲ್ಲ ಕಾಲದಲ್ಲೂ, ಯಾವಾಗಲೂ, ಸದಾ ಎಂದರ್ಥ. "ಹ್ಯೋ ಗತೇऽನಾಗತೇऽಹ್ನಿ ಶ್ವಃ ಪರಶ್ವಸ್ತು ಪರೇऽಹನಿ | ತದಾ ತದಾನೀಂ ಯುಗಪದೇಕದಾ ಸರ್ವದಾ ಸದಾ ||"— ಅಮರಕೋಶಃ | ಹ್ಯಃ— ಗತ, ಕಳೆದುಹೋದ ದಿನ, ನಿನ್ನೆ. ಶ್ವಃ— ಅನಾಗತ ಅಹ್ನದಲ್ಲಿ / ಇನ್ನೂ ಬರದ ದಿನ / ನಾಳೆ. ಪರಶ್ವಃ— ನಾಡಿದ್ದು. ಪರಹ್ಯಃ— ಮೊನ್ನೆ. ಪ್ರಪರಹ್ಯಃ— ಆಚೆ ಮೊನ್ನೆ. ಪ್ರಪರಶ್ವಃ— ಆಚೆ ನಾಡಿದ್ದು.

  • ತಸ್ಯ— ದಕಾರಾನ್ತ ಪುಲ್ಲಿಂಗ ತದ್ ಶಬ್ದ, ಷಷ್ಠೀ ವಿ. ಏಕ ವ. | ಅವನ ಎಂದರ್ಥ. ಸಃ, ತೌ, ತೇ | ತಮ್, ತೌ, ತಾನ್ | ತೇನ, ತಾಭ್ಯಾಮ್, ತೈಃ | ತಸ್ಮೈ, ತಾಭ್ಯಾಮ್, ತೇಭ್ಯಃ | ತಸ್ಮಾತ್, ತಾಭ್ಯಾಮ್, ತೇಭ್ಯಃ | ತಸ್ಯ, ತಯೋಃ, ತೇಷಾಮ್ | ತಸ್ಮಿನ್, ತಯೋಃ, ತೇಷು ||

  • ಕರಸ್ಥಾಃ— ಕರೇ ಸ್ಥಿತಾಃ, ಅಂಗೈಯಲ್ಲಿ ವಶವಾದವುಗಳು ಎಂದರ್ಥ. ಕರಃ— ಅಕಾರಾನ್ತ ಪುಲ್ಲಿಂಗ ಕರ ಶಬ್ದ, ಪ್ರ.ವಿ., ಏ.ವ. |(ರಾಮ, ಕೃಷ್ಣ ಶಬ್ದದಂತೆಯೇ ಶಬ್ದರೂಪಗಳು). ಸ್ಥಾ ಗತಿನಿವೃತ್ತೌ ಧಾತು, ಕ್ತಪ್ರತ್ಯಯಾಂತ ಸ್ಥಃ / ಸ್ಥಿತಃ | 

  • ಸರ್ವಸಿದ್ಧಯಃ— ಸರ್ವಾಃ ಸಿದ್ಧಯಃ (ಕರ್ಮಧಾರಯಸಮಾಸಃ) | ಇಕಾರಾನ್ತಃ ಸ್ತ್ರೀಲಿಙ್ಗಃ, ಸಿದ್ಧಿ-ಶಬ್ದಃ, ಪ್ರ.ವಿ, ಬ.ವ. | ಸಿದ್ಧಿಃ, ಸಿದ್ಧೀ, ಸಿದ್ಧಯಃ | ಸಿದ್ಧಿಮ್, ಸಿದ್ಧೀ, ಸಿದ್ಧೀಃ | ಸಿದ್ಧ್ಯಾ, ಸಿದ್ಧಿಭ್ಯಾಮ್, ಸಿದ್ಧಿಭಿಃ | ಸಿದ್ಧ್ಯೈ / ಸಿದ್ಧಯೇ, ಸಿದ್ಧಿಭ್ಯಾಮ್, ಸಿದ್ಧಿಭ್ಯಃ | ಸಿದ್ಧ್ಯಾಃ / ಸಿದ್ಧೇಃ, ಸಿದ್ಧಿಭ್ಯಾಮ್, ಸಿದ್ಧಿಭ್ಯಃ | ಸಿದ್ಧ್ಯಾಃ / ಸಿದ್ಧೇಃ, ಸಿದ್ಧ್ಯೋಃ, ಸಿದ್ಧೀನಾಮ್ | ಸಿದ್ಧ್ಯಾಮ್, ಸಿದ್ಧ್ಯೋಃ, ಸಿದ್ಧಿಷು | ಹೇ ಸಿದ್ಧಿಃ, ಹೇ ಸಿದ್ಧೀ, ಹೇ ಸಿದ್ಧಯಃ ||



ವಜ್ರಪಂಜರನಾಮೇದಂ ಯೋ ಕೃಷ್ಣಕವಚಂ ಸ್ಮರೇತ್ |

ಅವ್ಯಾಹತಾಜ್ಞಃ ಸರ್ವತ್ರ ಲಭತೇ ಜಯಮಂಗಲಮ್ ||೧೫||


ಸ್ಮರಿಸಿದರೆ ರಕ್ಷೆಯನು ಕೃಷ್ಣನ

ಹರಿಯುವುದು ಸಕಲಾರ್ತಿ ಪಾಪವು

ವೈರಿಸಂಕುಲನಾಶ ವಾಂಛಿತಸಿದ್ಧಿ ಜಯಶುಭವು ||


(ವಜ್ರಪಞ್ಜರನಾಮ) ವಜ್ರಪಂಜರವೆಂಬ, ವಜ್ರದ ಕವಚದಂತಿರುವ, ಇದಂ— ಈ, (ಕೃಷ್ಣಕವಚಂ—ಕೃಷ್ಣನ ರಕ್ಷೆಯನು) ಶ್ರೀಕೃಷ್ಣರಕ್ಷಾಸ್ತೋತ್ರವನ್ನು, ಯಃ—ಯಾವನು, ಯಾವ ಭಕ್ತನು, ಯಾವ ಸಜ್ಜನನು, (ಸ್ಮರೇತ್— ಸ್ಮರಿಸಿದರೆ) ಸ್ಮರಿಸುವನೋ ಅಂಥವನು, ಸರ್ವತ್ರ—ಎಲ್ಲೆಡೆಯಲ್ಲೂ, ಅವ್ಯಾಹತಾಜ್ಞಃ—ತನ್ನ ಆಜ್ಞೆಗೆ ತಡೆಯಿಲ್ಲದವನಾಗಿ, (ಜಯಮಙ್ಗಲಂ—ವೈರಿಸಂಕುಲ ನಾಶ, ವಾಂಛಿತಸಿದ್ಧಿ, ಜಯ ಶುಭವು) ಸಕಲಶತ್ರುಸಮೂಹದ ನಾಶವನ್ನೂ, ಇಷ್ಟಾರ್ಥ ಸಿದ್ಧಿಯನ್ನೂ, ವಿಜಯವನ್ನೂ, ಎಲ್ಲ ರೀತಿಯ ಶುಭ / ಮಂಗಲವನ್ನೂ, ಲಭತೇ—ಹೊಂದುತ್ತಾನೆ. (ಸಕಲ ಅರ್ತಿ ಪಾಪವು ಹರಿಯುವುದು) ಆತನ ಎಲ್ಲ ದುಃಖ, ಪಾಪಗಳು ಪರಿಹಾರವಾಗುವುವು.


ವ್ಯಾಕರಣ ವಿಚಾರ—

  • ವಜ್ರಪಂಜರನಾಮೇದಮ್—ವಜ್ರಪಂಜರನಾಮ + ಇದಮ್ (ಗುಣಸನ್ಧಿಃ) | ವಜ್ರಪಂಜರಃ, ಇತಿ ನಾಮ ಅಸ್ಯ ಇತಿ (ವಜ್ರಪಂಜರವೆಂಬ ಹೆಸರುಳ್ಳದ್ದು)— ವಜ್ರಪಂಜರನಾಮ (ನಪುಂ., ಪ್ರ /ದ್ವಿ.ವಿ., ಏ.ವ., ಕರ್ಮಧಾರಯಸಮಾಸಃ) | ವಜ್ರಪಂಜರನಾಮಾ/ ವಜ್ರಪಂಜರನಾಮಾನಮ್—ಪುಲ್ಲಿಂಗ | ವಜ್ರಪಂಜರನಾಮ್ನೀ / ವಜ್ರಪಂಜರನಾಮ್ನೀಮ್— ಸ್ತ್ರೀಲಿಂಗ | ನಕಾರಾನ್ತ ನಪುಂ. ನಾಮಶಬ್ದಃ— ನಾಮ, ನಾಮನೀ, ನಾಮಾನಿ….(ಹಿಂದಿನ ಶ್ಲೋಕವಿವರಣೆಯಲ್ಲಿದೆ) | ಪುಲ್ಲಿಂಗ—ನಾಮಾ, ನಾಮಾನೌ, ನಾಮಾನಃ | ನಾಮಾನಮ್, ನಾಮಾನೌ, ನಾಮ್ನಃ | ನಾಮ್ನಾ, ನಾಮಭ್ಯಾಮ್, ನಾಮಭಿಃ | ನಾಮ್ನೇ, ನಾಮಭ್ಯಾಮ್, ನಾಮಭ್ಯಃ | ನಾಮ್ನಃ, ನಾಮಭ್ಯಾಮ್, ನಾಮಭ್ಯಃ | ನಾಮ್ನಃ, ನಾಮ್ನೋಃ, ನಾಮ್ನಾಮ್ | ನಾಮ್ನಿ / ನಾಮನಿ, ನಾಮ್ನೋಃ, ನಾಮೇಷು || ಸ್ತ್ರೀಲಿಂಗ— ನಾಮ್ನೀ, ನಾಮ್ನ್ಯೌ, ನಾಮ್ನ್ಯಃ | ನಾಮ್ನೀಮ್, ನಾಮ್ನ್ಯೌ, ನಾಮ್ನ್ಯಃ | ನಾಮ್ನ್ಯಾ, ನಾಮಭ್ಯಾಮ್, ನಾಮಭಿಃ | ನಾಮ್ನ್ಯೈ / ನಾಮ್ನಾಯೈ, ನಾಮಭ್ಯಾಮ್, ನಾಮಭ್ಯಃ | ನಾಮ್ನ್ಯಃ, ನಾಮಭ್ಯಾಮ್, ನಾಮಭ್ಯಃ | ನಾಮ್ನ್ಯಃ, ನಾಮ್ನ್ಯೋಃ, ನಾಮ್ನ್ಯಾನಾಮ್ | ನಾಮ್ನ್ಯಾಮ್, ನಾಮ್ನ್ಯೋಃ, ನಾಮ್ನೀಷು || ಇದಮ್— ಮಕಾರಾನ್ತ ನಪುಂ. ಸರ್ವನಾಮಶಬ್ದಃ, ದ್ವಿ.ವಿ., ಏ.ವ. | ಇದನ್ನು ಎಂದರ್ಥ. ಇದಮ್, ಇಮೇ, ಇಮಾನಿ | ಇದಮ್ / ಏನಮ್, ಇಮೇ / ಏನೇ, ಇಮಾನಿ / ಏನಾನಿ | ಅನೇನ / ಏನೇನ, ಆಭ್ಯಾಮ್, ಏಭಿಃ | ಅಸ್ಮೈ, ಆಭ್ಯಾಮ್, ಏಭ್ಯಃ | ಅಸ್ಮಾತ್, ಆಭ್ಯಾಮ್, ಏಭ್ಯಃ | ಅಸ್ಯ, ಅನಯೋಃ / ಏನಯೋಃ, ಏಷಾಮ್ | ಅಸ್ಮಿನ್, ಅನಯೋಃ / ಏನಯೋಃ, ಏಷು | ಪುಲ್ಲಿಂಗೇ—ಅಯಮ್, ಇಮೌ, ಇಮೇ | ಇಮಮ್ / ಏನಮ್, ಇಮೌ / ಏನೌ, ಇಮಾನ್ | ಅನೇನ / ಏನೇನ, ಆಭ್ಯಾಮ್, ಐಃ | ಅಸ್ಮೈ, ಆಭ್ಯಾಮ್, ಏಭ್ಯಃ | ಅಸ್ಮಾತ್, ಆಭ್ಯಾಮ್, ಏಭ್ಯಃ | ಅಸ್ಯ, ಅನಯೋಃ / ಏನಯೋಃ, ಏಷಾಮ್ | ಅಸ್ಮಿನ್, ಅನಯೋಃ / ಏನಯೋಃ, ಏಷು || ಸ್ತ್ರೀಲಿಂಗೇ—ಇಯಮ್, ಇಮೇ, ಇಮಾಃ | ಇಮಾಮ್ / ಏನಾಮ್, ಇಮೇ / ಏನೇ, ಇಮಾಃ / ಏನಾಃ | ಅನಯಾ / ಏನಯಾ, ಆಭ್ಯಾಮ್, ಆಭಿಃ | ಅಸ್ಯೈ, ಆಭ್ಯಾಮ್, ಆಭ್ಯಃ | ಅಸ್ಯಾಃ, ಆಭ್ಯಾಮ್, ಆಭ್ಯಃ | ಅಸ್ಯಾಃ, ಅನಯೋಃ / ಏನಯೋಃ, ಆಸಾಮ್ | ಅಸ್ಯಾಮ್, ಅನಯೋಃ / ಏನಯೋಃ, ಆಸು ||

  • ಕೃಷ್ಣಕವಚಮ್— ಕೃಷ್ಣರಕ್ಷಾಸ್ತೋತ್ರರೂಪಂ ಕವಚಮ್ (ಮಧ್ಯಮಪದಲೋಪೀ-ಕರ್ಮಧಾರಯಸಮಾಸಃ) |

  • ಸರ್ವತ್ರ— ಅವ್ಯಯ. "ಸರ್ವಸ್ಮಿನ್ ದೇಶೇ"— ಎಲ್ಲ ಕಡೆಯಲ್ಲೂ ಎಂದರ್ಥ. 

  • ಅವ್ಯಾಹತಾಜ್ಞಃ— ಅವ್ಯಾಹತಾ ಆಜ್ಞಾ ಯಸ್ಯ ಸಃ (ಬಹುವ್ರೀಹಿಸಮಾಸಃ) | ಅವ್ಯಾಹತ + ಆಜ್ಞಃ (ಸವರ್ಣದೀರ್ಘಸನ್ಧಿಃ) | ಅ + ವಿ + ಆ + ಹತ + ಆಜ್ಞಃ— ಅ, ವಿ, ಆ ಇತ್ಯುಪಸರ್ಗಪೂರ್ವಕಃ ಹೃಞ್ ಹರಣೇ ಧಾತೋಃ ಕ್ತಪ್ರತ್ಯಯಾನ್ತಃ, ಸ್ತ್ರೀಲಿಂಗಃ ಅವ್ಯಾಹತಾ-ಶಬ್ದಃ |

  • ಲಭತೇ— ಆತ್ಮನೇಪದೀ, ಲಭ್ ಪ್ರಾಪ್ತೌ ಧಾತೋಃ ಲಟ್-ಲಕಾರೇ ಪ್ರ.ಪು., ಏ.ವ. | ಲಭತೇ, ಲಭೇತೇ, ಲಭನ್ತೇ | ಲಭಸೇ, ಲಭೇಥೇ, ಲಭಧ್ವೇ | ಲಭೇ, ಲಭಾವಹೇ, ಲಭಾಮಹೇ ||

  • ಜಯಮಙ್ಗಲಮ್— ಜಯರೂಪಂ ಮಂಗಲಮ್ (ಮಧ್ಯಮಪದಲೋಪೀ-ಕರ್ಮಧಾರಯ-ಸಮಾಸಃ) | ವಿಜಯರೂಪವಾದ ಮಂಗಲವನ್ನು ಎಂದರ್ಥ. ಅಕಾರಾನ್ತ ಪುಲ್ಲಿಂಗ ಜಯ-ಶಬ್ದ | ಜಯಃ, ಜಯೌ, ಜಯಾಃ ಇತ್ಯಾದಿ (ರಾಮಶಬ್ದದಂತೆ). ಮಙ್ಗಲಮ್— ಅಕಾರಾನ್ತ ನಪುಂ. ಮಙ್ಗಲ-ಶಬ್ದ, ದ್ವಿ.ವಿ., ಏ.ವ. | ಮಂಗಲವನ್ನು ಎಂದರ್ಥ. 


ಶಾಸ್ತ್ರಿಣಾ ಪ್ರೇರಣಾ ಲಬ್ಧಾ ಶ್ರೀಕೃಷ್ಣೇನ ಯಥಾ ಹೃದಿ |

ಕೃಷ್ಣಮೂರ್ತಿಃ ಸ ವೈ ತದ್ವಲ್ಲಿಖಿತವಾನಿದಮವ್ಯಯಮ್ ||೧೬||


ಕೃಷ್ಣ ಪ್ರೇರಣೆಯಿಂದ ಹೃದಯದಿ

ಕೃಷ್ಣಮೂರ್ತಿಯು ಶಾಸ್ತ್ರಿಯೆಂಬನು

ಕೃಷ್ಣನಪ್ಪಣೆಯಂತೆ ರಕ್ಷಾಸ್ತೋತ್ರ ಬರೆದಿಹನು ||


(ಯಥಾ ಹೃದಿ—ಹೃದಯದಿ) ಯಾವ ರೀತಿಯಲ್ಲಿ ಸರ್ವದೇಹಗಳೊಳಹೊರಗಿರುವ ಹಾಗೂ ಸರ್ವಹೃದಯವಾಸನಾದ (ಶ್ರೀಕೃಷ್ಣೇನ ಪ್ರೇರಣಾ ಲಬ್ಧಾ ಶಾಸ್ತ್ರಿಣಾ—ಕೃಷ್ಣಪ್ರೇರಣೆಯಿಂದ) ಶ್ರೀಕೃಷ್ಣಪರಮಾತ್ಮನಿಂದ ಪ್ರೇರಣೆಯು ಕೃಷ್ಣಮೂರ್ತಿಶಾಸ್ತ್ರಿಯಿಂದ ಪಡೆಯಲ್ಪಟ್ಟಿತೋ (ತದ್ವತ್—ಕೃಷ್ಣನಪ್ಪಣೆಯಂತೆ) ಅದರಂತೆಯೇ, (ಸಃ, ಕೃಷ್ಣಮೂರ್ತಿಃ—ಕೃಷ್ಣಮೂರ್ತಿಯು ಶಾಸ್ತ್ರಿಯೆಂಬನು) ಆ ಕೃಷ್ಣಮೂರ್ತಿಶಾಸ್ತ್ರಿಯು (ಇದಮ್ ಅವ್ಯಯಮ್—ರಕ್ಷಾಸ್ತೋತ್ರ) ಈ ನಾಶವಿರದ ಶ್ರೀಕೃಷ್ಣರಕ್ಷಾಸ್ತೋತ್ರವನ್ನು, (ಲಿಖಿತವಾನ್—ಬರೆದಿಹನು) ಬರೆದಿರುವನು.


ಕರ್ಷಣಾತ್ಸರ್ವದುಃಖಾನಾಂ ಸ್ವಭಕ್ತಾನಾಂ ಹಿತಾಯ ವೈ |

ಸರ್ವಲೋಕಾಕರ್ಷಣಾಚ್ಚ ಕೃಷ್ಣಮೇವಾಶ್ರಯಾಮ್ಯಹಮ್ ||೧೭||


ಸಕಲ ದುಃಖವಿನಾಶ ಭಕುತರ

ಸಕಲ ಹಿತವನೆ ಕಾಯ್ವ ಸೃಷ್ಟಿಯ

ಸಕಲವಾಕರ್ಷಿಪನ ಕೃಷ್ಣನ ಶರಣು ಹೊಂದುವೆನು ||


(ಸ್ವ-ಭಕ್ತಾನಾಂ—ಭಕುತರ) ತನ್ನ ಭಕ್ತರ, (ಹಿತಾಯ ವೈ—ಸಕಲ ಹಿತವನೆ ಕಾಯ್ವ) ಹಿತಕ್ಕೋಸ್ಕರವಾಗಿಯೇ, (ಸರ್ವದುಃಖಾನಾಂ—ಸಕಲ ದುಃಖ) ಅವರೆಲ್ಲರ ಎಲ್ಲ ದುಃಖಗಳನ್ನೂ, (ಕರ್ಷಣಾತ್—ವಿನಾಶ) ತನ್ನೊಳಗೆ ಆಕರ್ಷಿಸಿ ನಾಶಪಡಿಸುವುದರಿಂದಾಗಿ, (ಚ) ಹಾಗೆಯೇ, (ಸರ್ವ-ಲೋಕ-ಆಕರ್ಷಣಾತ್—ಸೃಷ್ಟಿಯ ಸಕಲವ ಆಕರ್ಷಿಪನ) ಎಲ್ಲ ಲೋಕಗಳ ಎಲ್ಲರನ್ನೂ ತನ್ನೆಡೆಗೆ ಪ್ರಳಯಕಾಲದಲ್ಲಿ ಸೆಳೆದುಕೊಳ್ಳುವುದರಿಂದಲೂ, ಸ್ಥಿತಿಕಾಲದಲ್ಲೂ ಆಕರ್ಷಿಸುವುದರಿಂದಲೂ, (ಕೃಷ್ಣಮ್ ಏವ—ಕೃಷ್ಣನ) ಅಂತಹ ಪರಬ್ರಹ್ಮದ ಸಾಕಾರವಾದ ಶ್ರೀಕೃಷ್ಣಪರಮಾತ್ಮನನ್ನೇ, (ಅಹಮ್) ನಾನು, (ಆಶ್ರಯಾಮಿ—ಶರಣು ಹೊಂದುವೆನು) ಆಶ್ರಯಿಸುತ್ತೇನೆ.


ಬಾಲೌ ಷಡ್ಗುಣಸಂಪನ್ನೌ ಸುಕುಮಾರೌ ಮಹಾಬಲೌ |

ಪುಂಡರೀಕವಿಶಾಲಾಕ್ಷೌ ಪೀತಾಂಬರಸುಶೋಭಿತೌ ||೧೮||


ಬಾಲರೀರ್ವರು ರಾಮ-ಕೃಷ್ಣರು

ಬಾಲರಹ ಷಡ್ಗುಣಸುಪೂರ್ಣರು

ಬಾಲರವಿತೇಜಸರು ಪೀತಾಂಬರಸುಶೋಭಿತರು |

ಮೂಲಬಲಸಂಪನ್ನರೂಪರು

ಶ್ರೀಲಕ್ಷಣದಿ ಶೋಭಿತಾಂಗರು

ಮಾಲಧಾರಿಗಳಾಯತಾಕ್ಷರು ಪದುಮಕೋಮಲರು ||


(ಬಾಲೌ—ಬಾಲರೀರ್ವರು ರಾಮ-ಕೃಷ್ಣರು) ಶ್ರೀಕೃಷ್ಣ ಹಾಗೂ ಅಣ್ಣ ಬಲರಾಮ— ಈ ಇಬ್ಬರೂ ಬಾಲಕರು (ಸುಕುಮಾರೌ—ಪದುಮಕೋಮಲರು) ಕಮಲಪುಷ್ಪದಂತೆ ಅತ್ಯಂತ ಕೋಮಲವಾದ ತನುವುಳ್ಳವರೂ, (ಷಡ್ಗುಣಸಂಪನ್ನೌ—ಬಾಲರು ಅಹ ಷಡ್ಗುಣ ಸುಪೂರ್ಣರು) ಸಕಲ ಸದ್ಗುಣ ಸಂಪನ್ನರೂ, ಸಮಗ್ರ ಐಶ್ವರ್ಯ-ವೀರ್ಯ/ಪರಾಕ್ರಮ-ಯಶಸ್ಸು-ಶ್ರೀ/ಸಿರಿ-ಜ್ಞಾನ-ವೈರಾಗ್ಯಗಳೆಂಬ ಷಟ್(6)ಗುಣಭರಿತರೂ, (ಮಹಾಬಲೌ—ಮೂಲಬಲಸಂಪನ್ನರೂಪರು) ವಿಶ್ವದ ಎಲ್ಲ ಬಲಗಳಿಗೂ ಆಧಾರವಾಗಿ ಮಹಾ ಬಲವಂತರೂ, (ಪುಂಡರೀಕವಿಶಾಲಾಕ್ಷೌ—ಆಯತಾಕ್ಷರು) ಅರಳಿದ ತಾವರೆಯಂತಹ ಅಗಲವಾದ ಕಣ್ಣುಗಳುಳ್ಳವರೂ, (ಪೀತಾಂಬರಸುಶೋಭಿತೌ—ಪೀತಾಂಬರ ಸುಶೋಭಿತರು) ಹಳದಿ ರೇಶಿಮೆಯ ಪಟ್ಟೆವಸ್ತ್ರವನ್ನು ಧರಿಸಿ ಸುಂದರವಾಗಿ ಶೋಭಿಸುತ್ತಿರುವವರೂ, (ಬಾಲರವಿತೇಜಸರು) ಹೊಂಗಿರಣಗಳನ್ನು ಹೊರಸೂಸುತ್ತಾ ಉದಯಿಸುತ್ತಿರುವ ಸೂರ್ಯನಂತಹ ಆಹ್ಲಾದಕರವಾದ ಸರ್ವಚೈತನ್ಯದಾಯಕವಾದ ತೇಜಃಪುಂಜರೂ, (ಶ್ರೀಲಕ್ಷಣದಿ ಶೋಭಿತಾಂಗರು) ಆಭರಣಾದಿಗಳಿಂದಲಂಕೃತರಾಗಿಯೂ, ಸುಲಕ್ಷಣವಾದ ಮುಖ-ದೇಹಗಳುಳ್ಳವರೂ, (ಮಾಲಧಾರಿಗಳು) ಸುಂದರವಾದ ತುಲಸೀಮಾಲೆ, ಕನಕಮಾಲೆ, ಕೌಸ್ತುಭಹಾರ, ವನಮಾಲಾದಿಗಳಿಂದ ಕಂಗೊಳಿಸುವವರೂ ಆಗಿರುವರು.


ನವನೀತವಿಲಿಪ್ತಾಂಗೌ ವಿಷ್ಣುಶೇಷಾವತಾರಿಣೌ |

ಪುತ್ರೌ ಚ ವಸುದೇವಸ್ಯ ರಾಮಕೃಷ್ಣೌ ಸಹೋದರೌ ||೧೯||


ಬೆಣ್ಣೆಮೆತ್ತಿದೆ ಮೈಗೆ ಬಾಲರ

ಸಣ್ಣ ವಿಷ್ಣುವು ಶೇಷನಂಶನು

ಚಿಣ್ಣ ಕೃಷ್ಣನು ರಾಮ ವಸುದೇವಾತ್ಮಕರು ಜಗದಿ ||


(ವಿಷ್ಣು-ಶೇಷ-ಅವತಾರಿಣೌ—ಸಣ್ಣ ವಿಷ್ಣುವು ಚಿಣ್ಣ ಕೃಷ್ಣನು, ರಾಮ ಶೇಷನಂಶನು) ವಿಷ್ಣು ಹಾಗೂ ಆದಿಶೇಷನ ಅವತಾರಿಗಳಾದ, (ರಾಮಕೃಷ್ಣೌ ಸಹೋದರೌ) ತಮ್ಮ ಕೃಷ್ಣ ಹಾಗೂ ಅಣ್ಣ ಬಲರಾಮರೆಂಬ ಸಹೋದರರು, (ಚ) ಹಾಗೆಯೇ, (ವಸುದೇವಸ್ಯ ಪುತ್ರೌ—ವಸುದೇವಾತ್ಮಕರು ಜಗದಿ) ವಸುದೇವನ ಮಕ್ಕಳಾಗಿ ಲೋಕದಲ್ಲಿ ಅವತರಿಸಿರುವರು. ಇವರ ಬಾಲಲೀಲೆಯು ಅನುಪವೂ ದಿವ್ಯವೂ ಆದುದು. (ನವನೀತ-ವಿ-ಲಿಪ್ತಾಂಗೌ—ಬಾಲರ ಮೈಗೆ ಬೆಣ್ಣೆ ಮೆತ್ತಿದೆ) ಬಾಲ್ಯದಲ್ಲಿ ಕೃಷ್ಣನು ಬೆಣ್ಣೆ ಕಳ್ಳ / ನವನೀತಚೋರ / ನವನೀತಪ್ರಿಯನೆಂದೇ ಪ್ರಸಿದ್ಧ. ಹಾಗೆಯೇ, ಅವನ ಅಣ್ಣ ಬಲರಾಮನೂ, ಇತರ ಗೋಪಬಾಲರೂ ಇವರೊಂದಿಗೆ ಸೇರಿಕೊಂಡು ಮೈಗೆಲ್ಲ ಬೆಣ್ಣೆಯನ್ನು ಮೆತ್ತಿಕೊಂಡಿದ್ದರು. ಹೀಗೆ ಬಲರಾಮಕೃಷ್ಣರು ಬಾಲ್ಯದಲ್ಲಿ ಸದಾ ಬೆಣ್ಣೆಯನ್ನು ವಿಶೇಷವಾಗಿ, ವಿಚಿತ್ರವಾಗಿ ಮೈಗೆ, ಅಂಗಾಂಗಗಳಿಗೆ ಲೇಪಿಸಿಕೊಂಡವರಾಗಿದ್ದರು. 


ಶರಣ್ಯೌ ಸರ್ವಸತ್ತ್ವಾನಾಂ ಶ್ರೇಷ್ಠೌ ಸರ್ವಮನಸ್ವಿನಾಮ್ |

ರಕ್ಷಃಕುಲನಿಹಂತಾರೌ ತ್ರಾಯೇತಾಂ ನೋ ಯದೂತ್ತಮೌ ||೨೦||


ಸರ್ವ ಸತ್ತ್ವಾಶ್ರಯರು ನಮ್ಮನು

ಸರ್ವಸುಜನ ವರಿಷ್ಠರೀರ್ವರು

ಸರ್ವದುಷ್ಟವಿಮರ್ದಕರು ಯಾದವರು ರಕ್ಷಿಸಲಿ ||


(ಸರ್ವಸತ್ತ್ವಾನಾಂ ಶರಣ್ಯೌ—ಸರ್ವ ಸತ್ತ್ವಾಶ್ರಯರು) ಎಲ್ಲ ಸತ್ತ್ವಗಳ, ಸಾತ್ತ್ವಿಕತೆಯ, ಸದ್ಗುಣಗಳ ತವನಿಧಿಗಳಾದ, ಆಶ್ರಯಸ್ಥಾನರಾದ, (ಸರ್ವಮನಸ್ವಿನಾಂ ಶ್ರೇಷ್ಠೌ—ಸರ್ವ ಸುಜನವರಿಷ್ಠರೀರ್ವರು) ಉತ್ತಮ ಉದಾರ ಶುದ್ಧ ಮನಸ್ಸುಳ್ಳವರಲ್ಲಿ ಶ್ರೇಷ್ಠರೆನಿಸಿದ, (ರಕ್ಷಃಕುಲನಿಹನ್ತಾರೌ—ಸರ್ವದುಷ್ಟ ವಿಮರ್ದಕರು) ದುಷ್ಟ ರಾಕ್ಷಸರ ಕುಲವನ್ನೇ ನಾಶಮಾಡಿದ, (ಯದೂತ್ತಮೌ—ಯಾದವರು) ಯದುಕುಲ ತಿಲಕರೆನಿಸಿದ ಬಲರಾಮ-ಕೃಷ್ಣರು, (ನಃ/ಅಸ್ಮಾನ್—ನಮ್ಮನು) ನಮ್ಮನ್ನು, (ತ್ರಾಯೇತಾಮ್—ರಕ್ಷಿಸಲಿ) ರಕ್ಷಿಸಲಿ/ಕಾಪಾಡಲಿ/ಕಾಯಲಿ.


(ಶಾರ್ದೂಲವಿಕ್ರೀಡಿತವೃತ್ತಮ್)

ಕೃಷ್ಣೋ ದೇವಕಿನಂದನೋ ಯದುಪತಿರ್ಗೋಲೋಕರಾಜೋ ಹರೀ

ರಾಧಾರಾಧಿತಪೂರ್ಣಸಾತಹೃದಯಸ್ತ್ರೈಲೋಕ್ಯನಾಥೋ ವಿಭುಃ |

ರುಕ್ಮಿಣ್ಯಾದಿಮನೋರಮಾऽಯುತಯುತೋ ಗಂಗಾಧರಾಪ್ತಶ್ಚ ನೋ

ಬ್ರಹ್ಮಜ್ಞಾನಸುಧಾಂಬುಧಿಂ ನಿಜಸುಖಂ ದೀಯಾನ್ನತಾನ್ರಕ್ಷತು ||೨೧||


ದೇವಕೀನಂದನನು ಕೃಷ್ಣನು

ಮಾವ ಕಂಸವಿಮರ್ದನನು ತಾ

ಭಾವಜನ ಪಿತ ಯದುಕುಲೇಶ್ವರ ಗೋಕುಲೋತ್ತಂಸ |

ಹಾವನೋಡಿಸಿ ಕಾದ ಗೋವ್ಗಳ

ಠಾವ ಬದಲಿಸಿ ಕಾಯ್ದ ಗೋಪರ

ಸಾವ ಮೀರಿದ ಹರಿಯು ಸಲಹುಗೆ ಮುಕುತಿಯನ್ನೀಯೆ ||


ಹರಿಯು ಪಾಪವ ಹರಿವ ಭಕುತರ

ಬರಿಯ ರಾಧಾಹೃದಯವಲ್ಲಭ

ಕರಿಯ ಕಾಯ್ದನು ರುಕ್ಮಿಣೀವಲ್ಲಭನು ಜಗಪತಿಯು |

ಹರಿಯು ಸಾಸಿರರಮಣಿರಮಣನು

ಗಿರಿಶಮಿತ್ರನು ಪರಮಭಕುತಿಯ

ಗರಿಮೆ ಬ್ರಹ್ಮಾನಂದವನ್ನೀಯೆನುತ ಬೇಡುವೆನು ||


(ದೇವಕಿನಂದನಃ—ದೇವಕೀನಂದನನು) ದೇವಕಿಯ ಮಗನಾದ, (ಮಾವ ಕಂಸ ವಿಮರ್ದನನು) ತನ್ನ ತಾಯಿಯ ಅಣ್ಣನಾಗಿ ಸೋದರಮಾವನಾದ ದುಷ್ಟ ಕಂಸನನ್ನುೂ ಬಿಡದೆ ಸಂಹರಿಸಿದ, (ತಾ ಭಾವಜನ ಪಿತ) ಭಕ್ತಿ-ಪ್ರೇಮ ಭಾವಪರಿಪೂರ್ಣರಾದ ಮಂದಿಗಳ ನಾಯಕ / ತಂದೆಯಂತಿರುವ,  (ಯದುಪತಿಃ—ಯದುಕುಲೇಶ್ವರ) ಯದುಕುಲದ ರಾಜನಾದ, (ಗೋಲೋಕರಾಜಃ—ಗೋಕುಲ-ಉತ್ತಂಸ) ಗೋಲೋಕದ ಅಧಿಪತಿಯಾದ, (ಹಾವನು ಓಡಿಸಿ ಕಾದ ಗೋವ್ಗಳ) ಯಮುನೆಯ ಮಡುವಿನಲ್ಲಿದ್ದು ಗೋವುಗಳಿಗೆ ಜಲಪಾನ ಮಾಡುವಾಗ ತೊಂದರೆ ನೀಡುತ್ತಿದ್ದ ದುಷ್ಟ ಕಾಳಿಯನಾಗನನ್ನು ಕಾಳಿಂಗಮರ್ದನಗೈದು ಅಲ್ಲಿಂದ ಓಡಿಸಿ ಸಾಧುಸ್ವಭಾವದ, ಸಕಲದೇವಸಾನ್ನಿಧ್ಯವಾದ ಗೋವುಗಳನ್ನು ಕಾಪಾಡಿದ, (ಠಾವ ಬದಲಿಸಿ ಕಾಯ್ದ ಗೋಪರ) ಜರಾಸಂಧನ ಧಾಳಿಯಾದಾಗ ನಂದಗೋಕುಲದಿಂದ ಎಲ್ಲ ಗೋಪಾಲಕರನ್ನೂ ಸಮುದ್ರದಲ್ಲೊಂದು ದ್ವಾರಕಾವತಿಯೆಂಬ ನವನಗರಿಯನ್ನು ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಿ ಅವರನ್ನು ರಕ್ಷಿಸಿದ, (ಸಾವ ಮೀರಿದ ಹರಿಯು ಸಲಹುಗೆ ಮುಕುತಿಯನ್ನೀಯೆ) ಮರಣಾತೀತನಾಗಿ ಚ್ಯುತಿಯಿರದೆ ಅ-ಚ್ಯುತನಾಗಿ ಅಮೃತಸ್ವರೂಪನಾದ ಶ್ರೀಹರಿಯು ನಮ್ಮನ್ನೆಲ್ಲ ಸಲಹಲಿ, ನಮಗೆ ಮುಕ್ತಿಯನ್ನು ದಯಪಾಲಿಸಲಿ.  (ಹರಿಃ—ಹರಿಯು ಪಾಪವ ಹರಿವ ಭಕುತರ) ಸಕಲ ಭಕ್ತರ ಪಾಪಪರಿಹಾರಕ ಶ್ರೀಹರಿಯಾದ, (ರಾಧಾ-ಆರಾಧಿತ-ಪೂರ್ಣ-ಸಾತ-ಹೃದಯಃ—ಬರಿಯ ರಾಧಾಹೃದಯವಲ್ಲಭ) ರಾಧಾದೇವಿಯಿಂದ ಅತ್ಯಂತ ಪ್ರೇಮದಿಂದ ಆರಾಧಿತನಾದ, ಪೂರ್ಣ ಸುಖಮಯ ಮನಸ್ಸುಳ್ಳ ಹಾಗೂ ಪೂರ್ಣಾನಂದಸ್ವರೂಪನಾದ, (ಕರಿಯ ಕಾಯ್ದನು) ಗಜೇಂದ್ರನನ್ನು ಮೊಸಳೆಯಿಂದ ರಕ್ಷಿಸಿ ಕರಿವರದನಾದ,  (ತ್ರೈಲೋಕ್ಯನಾಥಃ—ಜಗಪತಿಯು) ಮೂರ್ಲೋಕಗಳ / ಇಡೀ ಜಗತ್ತಿನ ಒಡೆಯನಾದ, (ವಿಭುಃ) ಸರ್ವವ್ಯಾಪಕನೂ ಸರ್ವಗತನೂ ಬಹು ಮಹತ್ತ್ವಪೂರ್ಣನೂ ಆಗಿ ವಿಭುವೆನಿಸಿದ ("ವಿಭುರ್ವ್ಯಾಪಕತ್ವಾತ್, ಸರ್ವಗತತ್ವಾತ್, ಮಹತ್ತ್ವಾತ್ ಚ", "ವಿಸ್ತರೇಣ ಭೂಯತೇ ಅನೇನ"), (ರುಕ್ಮಿಣೀ-ಆದಿ-ಮನೋರಮಾ-ಅಯುತ-ಯುತಃ—ರುಕ್ಮಿಣೀವಲ್ಲಭನು, ಹರಿಯು, ಸಾಸಿರ ರಮಣಿ ರಮಣನು) ರುಕ್ಮಿಣಿಯೇ ಮುಂತಾದ ಮನವನ್ನು ರಮಿಸುವ ಸಾವಿರಾರು ಮನೋರಮೆಯರಾದ ಪತ್ನಿಯರಿಂದ ಕೂಡಿದ, (ಗಂಗಾಧರ-ಆಪ್ತಃ—ಗಿರಿಶಮಿತ್ರನು) ಶಿವನಿಗೆ ಅತ್ಯಂತ ಪ್ರಿಯನಾದ, (ಕೃಷ್ಣಃ) ಶ್ರೀಕೃಷ್ಣನು, (ನಃ/ಅಸ್ಮಭ್ಯಮ್ ) ನಮಗೆ, (ಪರಮ ಭಕುತಿಯ ಗರಿಮೆ) ಪರಾಭಕ್ತಿಯೆಂಬ ಹೆಚ್ಚುಗಾರಿಕೆಯನ್ನು ಕರುಣಿಸಿ, (ನಿಜಸುಖಮ್) ನಿಜವಾದ ಸುಖವಾದ, (ಬ್ರಹ್ಮಜ್ಞಾನ-ಸುಧಾ-ಅಂಬುಧಿಮ್—ಬ್ರಹ್ಮಾನಂದವನ್ನು) ಬ್ರಹ್ಮಜ್ಞಾನವೆಂಬ ಅಮೃತಸಾಗರವನ್ನು, (ದೀಯಾತ್—ಈಯು) ದಯಪಾಲಿಸಲಿ, (ಚ) ಹಾಗೂ, (ನತಾನ್) ನಮಸ್ಕರಿಸುವ ಎಲ್ಲರನ್ನೂ, (ರಕ್ಷತು) ರಕ್ಷಿಸಲಿ (ಎನುತ ಬೇಡುವೆನು) ಎಂದು ಆ ಪರಮಾತ್ಮನನ್ನು ಪ್ರಾರ್ಥಿಸುತ್ತೇನೆ.


(ಅನುಷ್ಟುಬ್-ವೃತ್ತಮ್)

ಕೃಷ್ಣಾಯ ಪ್ರೇಮರೂಪಾಯ ಯದುಚಂದ್ರಾಯ ಧೀಧೃತೇ |

ಗೀತಾಚಾರ್ಯಾಯ ದಿವ್ಯಾಯ ರುಕ್ಮಿಣೀಪತಯೇ ನಮಃ ||೨೨||


ಪ್ರೇಮಮೂರ್ತಿಗೆ ಕೃಷ್ಣಮೂರ್ತಿಗೆ

ಆ ಮಹಾ ಯದುವಂಶಚಂದ್ರಗೆ

ಸಾಮ ಗೀತಾಚಾರ್ಯ ರುಕ್ಮಿಣಿವಲ್ಲಭಗೆ ನಮನ ||


(ಪ್ರೇಮರೂಪಾಯ—ಪ್ರೇಮಮೂರ್ತಿಗೆ) ಪ್ರೇಮದ ಸಾಕಾರರೂಪನಾದ, (ಯದುಚಂದ್ರಾಯ—ಆ ಮಹಾ ಯದುವಂಶಚಂದ್ರಗೆ) ಆ ವಿಸ್ತಾರವಾದ ಯದುವಂಶವೆಂಬ ತಾರಾಮಂಡಲಕ್ಕೆ ಉಡುಪತಿಯಾದ (ಉಡು—ತಾರೆ, ನಕ್ಷತ್ರ) ಚಂದ್ರಮನಂತಿರುವ, (ಧೀಧೃತೇ) ಸಕಲರ ಧೀಃಪ್ರಚೋದಕನಾದ, ಎಲ್ಲರ ಬುಧ್ಧಿಯನ್ನೂ ಧರಿಸಿರುವ, (ಗೀತಾಚಾರ್ಯಾಯ—ಸಾಮ ಗೀತಾಚಾರ್ಯ) ಸಾಮವೇದಪ್ರಿಯನೂ, ಸಾಮಾದಿ ಚತುರ್ವೇದಸ್ವರೂಪನೂ, ಅರ್ಜುನನನ್ನು ನಿಮಿತ್ತವಾಗಿಸಿ ಲೋಕಕ್ಕೇ ಜೀವನಧರ್ಮವನ್ನು ಗೀತೆಯ ಮೂಲಕ ಬೋಧಿಸಿ ಗೀತಾಚಾರ್ಯನೂ ಆದ, (ರುಕ್ಮಿಣೀಪತಯೇ—ರುಕ್ಮಿಣಿವಲ್ಲಭಗೆ) ಸಾಕ್ಷಾತ್ ಮಹಾಲಕ್ಷ್ಮಿಯ ಸ್ವರೂಪಳಾದ ರುಕ್ಮಿಣೀದೇವಿಯ ಪತಿಯಾದ, (ದಿವ್ಯಾಯ) ದೇವದೇವನಾದ, (ಕೃಷ್ಣಾಯ—ಕೃಷ್ಣಮೂರ್ತಿಗೆ) ವಾಸುದೇವ ಕೃಷ್ಣರೂಪದಲ್ಲಿ ಅವತರಿಸಿದ ಪರಬ್ರಹ್ಮಸ್ವರೂಪನಿಗೆ, (ನಮಃ—ನಮನ) ನಮಸ್ಕಾರ. 


(ವಸಂತತಿಲಕಾವೃತ್ತಮ್)

ಶ್ರೀಕೃಷ್ಣ ಕೃಷ್ಣ ಮುರಳೀಧರ ಕೃಷ್ಣ ಕೃಷ್ಣ

ಶ್ರೀಕೃಷ್ಣ ಕೃಷ್ಣ ಯದುವಂಶಜ ಕೃಷ್ಣ ಕೃಷ್ಣ |

ಶ್ರೀಕೃಷ್ಣ ಕೃಷ್ಣ ಭವಭಂಜನ ಕೃಷ್ಣ ಕೃಷ್ಣ

ಶ್ರೀಕೃಷ್ಣ ಕೃಷ್ಣ ಶರಣಂ ಭವ ಕೃಷ್ಣ ಕೃಷ್ಣ ||೨೩||


ಕೃಷ್ಣ ಕೃಷ್ಣನೆ ವಂಶಿಲೋಲನೆ

ಕೃಷ್ಣ ಕೃಷ್ಣನೆ ಯಾದವೇಂದ್ರನೆ

ಕೃಷ್ಣ ಭವತಾರಕನೆ ಕೃಷ್ಣನೆ ಶರಣು ನಿನಗೆಂಬೆ ||


(ಶ್ರೀಕೃಷ್ಣ ಕೃಷ್ಣ—ಕೃಷ್ಣ ಕೃಷ್ಣನೆ) ಶ್ರೀಕೃಷ್ಣನೆ! ಹೇ ಕೃಷ್ಣನೆ! (ಮುರಳೀಧರ—ವಂಶಿಲೋಲನೆ) ಮುರಲಿ / ಕೊಳಲನ್ನು ತನ್ನ ಕರಗಳಲ್ಲಿ ಧರಿಸಿ ಮುರಳೀಧರನೆನಿಸಿದವನೆ! (ಕೃಷ್ಣ ಕೃಷ್ಣ) ಹೇ ರಾಧಾಕೃಷ್ಣನೆ! ಹೇ ರುಕ್ಮಿಣೀಕೃಷ್ಣನೆ! (ಶ್ರೀಕೃಷ್ಣ ಕೃಷ್ಣ—ಕೃಷ್ಣ ಕೃಷ್ಣನೆ) ಶ್ರೀಕೃಷ್ಣನೆ! ಜಯ ಕೃಷ್ಣನೆ! (ಯದುವಂಶ-ಜ—ಯಾದವೇಂದ್ರನೆ) ಯದುಮಹಾರಾಜನ ವಂಶದಲ್ಲಿ ಜನಿಸಿದವನೆ! (ಕೃಷ್ಣ ಕೃಷ್ಣ) ಹೇ ವಾಸುದೇವ ಕೃಷ್ಣನೆ! ಹೇ ದೇವಕೀಪುತ್ರ ಕೃಷ್ಣನೆ! (ಶ್ರೀಕೃಷ್ಣ ಕೃಷ್ಣ—ಕೃಷ್ಣ) ಹೇ ನಂದನಂದನನೆ! ಹೇ ಗೋಪಾಲಕೃಷ್ಣನೆ! (ಭವಭಂಜನ—ಭವತಾರಕನೆ) ಭವಸಾಗರ / ಸಂಸಾರಸಾಗರ / ಹುಟ್ಟು-ಸಾವುಗಳ ಬಂಧನ ವನ್ನು ನಾಶಮಾಡುವವನೆ! (ಕೃಷ್ಣ ಕೃಷ್ಣ—ಕೃಷ್ಣನೆ) ಹೇ ಗೋವಿಂದನೆ! ಹೇ ಮಾಧವನೆ! (ಶ್ರೀಕೃಷ್ಣ ಕೃಷ್ಣ) ಹೇ ಮಧುಸೂದನನೆ! ಹೇ ತ್ರಿವಿಕ್ರಮನೆ! (ಕೃಷ್ಣ ಕೃಷ್ಣ) ಹೇ ಗೋಪೀಹೃದಯವಾಸನೆ! ಹೇ ಶ್ರೀಮನ್ನಾರಾಯಣನೆ! ಹೇ ಸರ್ವಾತ್ಮಾ ಪರಬ್ರಹ್ಮವೆ! (ಶರಣಂ ಭವ—ಶರಣು ನಿನಗೆ ಎಂಬೆ) ನಿನಗಿದೋ ಶರಣೆನ್ನುವೆನು, ಶರಣಾಗಿರುವೆ. ನಿನ್ನ ಹೃದಯದಲ್ಲಿ, ನಿನ್ನ ಚರಣಕಮಲಗಳಲ್ಲಿ ನಮಗೆ ಆಶ್ರಯವನ್ನು ಕೊಡು.


ಶ್ರೀವಾಸುದೇವಚರಣೌ ಮನಸಾ ಸ್ಮರಾಮಿ

ಶ್ರೀವಾಸುದೇವಚರಣೌ ವಚಸಾ ಗೃಣಾಮಿ |

ಶ್ರೀವಾಸುದೇವಚರಣೌ ಶಿರಸಾ ನಮಾಮಿ

ಶ್ರೀವಾಸುದೇವಚರಣೌ ಶರಣಂ ಗತೋऽಸ್ಮಿ ||೨೪||


ವಾಸುದೇವನ ಚರಣ ನೆನೆವೆನು

ವಾಸುದೇವನ ಚರಣ ನುತಿಪೆನು

ವಾಸುದೇವನ ಚರಣಕಭಿವಂದಿಸುತ ಶರಣಾದೆ ||


(ಶ್ರೀವಾಸುದೇವಚರಣೌ—ವಾಸುದೇವನ ಚರಣ) ಸರ್ವಭೂತಹೃದಯವಾಸನಾದ ಶ್ರೀವಾಸುದೇವನ ಚರಣಗಳನ್ನು, (ಮನಸಾ ಸ್ಮರಾಮಿ—ನೆನೆವೆನು) ಮನಃಪೂರ್ವಕವಾಗಿ ಸ್ಮರಣೆ ಮಾಡುತ್ತೇನೆ. (ಶ್ರೀವಾಸುದೇವಚರಣೌ—ವಾಸುದೇವನ ಚರಣ) ಸರ್ವಾತ್ಮನಾದ ಶ್ರೀವಾಸುದೇವ ಭಗವಂತನ ಚರಣಕಮಲಗಳನ್ನು, (ವಚಸಾ ಗೃಣಾಮಿ—ನುತಿಪೆನು) ಮಾತಿನ ಮೂಲಕವೂ ಸ್ತುತಿಸುತ್ತೇನೆ. (ಶ್ರೀವಾಸುದೇವಚರಣೌ—ವಾಸುದೇವನ ಚರಣಕೆ) ಸರ್ವವೂ ತಾನಾಗಿರುವ ಶ್ರೀವಾಸುದೇವ ಪರಮಾತ್ಮನ ಚರಣಾರವಿಂದಗಳಿಗಿದೋ, (ಶಿರಸಾ ನಮಾಮಿ—ಅಭಿವಂದಿಸುತ) ತಲೆಬಾಗಿ ನಮಿಸುತ್ತಿರುವೆ. (ಶ್ರೀವಾಸುದೇವಚರಣೌ) ಪರಬ್ರಹ್ಮಸ್ವರೂಪಿಯಾದ ಶ್ರೀವಾಸುದೇವಕೃಷ್ಣನ ಚರಣಸರೋಜದ್ವಯವನ್ನು, (ಶರಣಂ ಪ್ರಪದ್ಯೇ—ಶರಣಾದೆ) ಶರಣುಹೊಂದಿದವನಾಗಿದ್ದೇನೆ.


(ಶಾಲಿನೀವೃತ್ತಮ್)

ಮಾತಾ ಕೃಷ್ಣೋ ಮತ್ಪಿತಾ ವಾಸುದೇವಃ

ಸ್ವಾಮೀ ಕೃಷ್ಣೋ ಮತ್ಸಖಾ ವಾಸುದೇವಃ |

ಸರ್ವಸ್ವಂ ಮೇ ವಾಸುದೇವೋ ದಯಾಲುರ್-

-ನಾನ್ಯಂ ಜಾನೇ ನೈವ ಜಾನೇ ನ ಜಾನೇ ||೨೫||


ಎನ್ನ ತಾಯಿಯು ಕೃಷ್ಣ ತಂದೆಯು

ನನ್ನ ಸ್ವಾಮಿಯು ಸಖನು ಸಕಲವು

ನಿನ್ನ ಹೊರತಾರನೂ ಕಾಣೆನು ಹೇ ದಯಾನಿಧಿಯೆ ||


(ಕೃಷ್ಣಃ—ಕೃಷ್ಣ) ಕೃಷ್ಣನೇ, (ಮಾತಾ—ಎನ್ನ ತಾಯಿಯು) ನನ್ನ ಅಮ್ಮ. (ವಾಸುದೇವಃ) ವಾಸುದೇವ ಕೃಷ್ಣನೇ, (ಮತ್ಪಿತಾ—ತಂದೆಯು) ನನ್ನ ತಂದೆಯೂ ಹೌದು. (ಸ್ವಾಮೀ—ನನ್ನ ಸ್ವಾಮಿಯು) ನನ್ನ ಒಡೆಯನು, (ಕೃಷ್ಣಃ) ಕೃಷ್ಣಪರಮಾತ್ಮನೇ. (ವಾಸುದೇವಃ) ಸರ್ವರೊಳು ವಾಸವಾಗಿರುವ ವಾಸುದೇವನೇ, (ಮತ್ಸಖಾ—ಸಖನು) ನನ್ನ ಸಖನು / ಮಿತ್ರನು. (ಮೇ/ಮಮ) ನನ್ನ, (ಸರ್ವಸ್ವಮ್—ಸಕಲವು) ಸರ್ವಸ್ವವೂ, (ದಯಾಲುಃ, ವಾಸುದೇವಃ—ಹೇ ದಯಾನಿಧಿಯೆ) ದಯಾಸಾಗರನಾದ ವಾಸುದೇವಪರಮಾತ್ಮನೇ ಆಗಿರುವನು. (ಅನ್ಯಂ ನ ಜಾನೇ—ನಿನ್ನ ಹೊರತು ಆರನೂ ಕಾಣೆನು) ನಿನ್ನನ್ನು ಬಿಟ್ಟು / ಹೊರತುಪಡಿಸಿ, ಬೇರಾರನ್ನೂ ನಾನು ಅರಿಯೆನು, ಕಾಣೆನು. ಎಲ್ಲೆಲ್ಲೂ ಯಾವಾಗಲೂ ಪರಮಾತ್ಮಸ್ವರೂಪವನ್ನೇ ಜಗದಲ್ಲೆಲ್ಲೆಲ್ಲೆಡೆಯೂ ಸದಾ ತಿಳಿಯುತ್ತಿರುವೆ, ಕಾಣುತ್ತಿರುವೆ, ಅನುಭವಿಸುತ್ತಿರುವೆನೆಂದು ತಾತ್ಪರ್ಯ.


(ಇಂದ್ರವಜ್ರಾವೃತ್ತಮ್)

ಲೋಕಾಭಿಕರ್ಷಂ ರಣನೀತಿಮೂಲಂ

ಪದ್ಮಾಕ್ಷಿಶೋಭಂ ಯದುವಂಶನಾಥಮ್ |

ದೀನಾರ್ತಬಂಧುಂ ಕರುಣಾಕರಂ ತಂ

ಶ್ರೀವಾಸುದೇವಂ ಶರಣಂ ಪ್ರಪದ್ಯೇ ||೨೬||


ಲೋಕವನೆ ಕರ್ಷಿಸುವ ಕೃಷ್ಣನ

ಲೋಕಸಮರದ ನೀತಿ ತಿಳಿದನ

ಆ ಕಮಲದಂತಿರುವ ನೇತ್ರನ ಯಾದವೇಶ್ವರನ |

ನಾಕವಂದಿತ ದೀನಬಂಧುವ

ನಾ ಕರುಣಸಿಂಧುವಿನ ದೇವನ

ಮೂಕ ಗೋವ್ಗಳ ಕಾಯ್ದ ಗೋಪಾಲಕನ ಶರಣಾದೆ ||


(ಲೋಕಾಭಿಕರ್ಷಮ್—ಲೋಕವನೆ ಕರ್ಷಿಸುವ ಕೃಷ್ಣನ) ಲೋಕವನ್ನೆಲ್ಲ, ಲೋಕದ ಜನರನ್ನೆಲ್ಲ, ಎಲ್ಲೆಡೆಯಿಂದಲೂ ತನ್ನೆಡೆಗೆ ಆಕರ್ಷಿಸುವಂತಹ, (ರಣನೀತಿಮೂಲಮ್—ಲೋಕಸಮರದ ನೀತಿ ತಿಳಿದನ) ಧರ್ಮಯುದ್ಧತಂತ್ರಕ್ಕೆ ಮೂಲ ಮಾದರಿಯಾದ, (ಪದ್ಮಾಕ್ಷಿಶೋಭಮ್—ಆ ಕಮಲದಂತಿರುವ ನೇತ್ರನ) ತಾವರೆಯಂತಹ ಸುಂದರವಾದ ಕಣ್ಣುಗಳಿಂದ ಶೋಭಿಸುವ, (ಯದುವಂಶನಾಥಮ್—ಯಾದವೇಶ್ವರನ) ಯದುಮಹಾರಾಜನ ವಂಶದ ಒಡೆಯನಾದ, (ನಾಕವಂದಿತ) ದೇವಲೋಕನಿವಾಸಿಗಳಾದ ಇಂದ್ರಾದಿ ದೇವತೆಗಳಿಂದ ವಂದಿತನಾದ, (ದೀನಾರ್ತಬಂಧುಮ್—ದೀನಬಂಧುವನು) ದೀನರ ಆರ್ತರ ಬಂಧುವಾದ, (ತಂ ಕರುಣಾಕರಮ್—ಆ ಕರುಣಸಿಂಧುವಿನ) ಕರುಣಾಸಾಗರನಾದ, (ಮೂಕ ಗೋವ್ಗಳ ಕಾಯ್ದ ಗೋಪಾಲಕನ) ಮಾತುಬಾರದ ಮೂಕಪ್ರಾಣಿಗಳಾದ ಗೋವುಗಳನ್ನು ಕಾಪಾಡಿದ, ಸಲಹಿದ ಗೋಪಾಲಕನಾದ, (ಶ್ರೀವಾಸುದೇವಂ—ಆ ದೇವನ) ಆ ಶ್ರೀವಾಸುದೇವನನ್ನು, (ಶರಣಂ ಪ್ರಪದ್ಯೇ—ಶರಣಾದೆ) ಶರಣುಹೊಂದುತ್ತೇನೆ.


(ಅನುಷ್ಟುಬ್-ವೃತ್ತಮ್)

ಕೂಜಂತಂ ಕೃಷ್ಣ ಕೃಷ್ಣೇತಿ ಮೋಹಕಂ ಮಾಧವಾಕ್ಷರಮ್ |

ಭಾಗವತಾದ್ರಿಮಾರುಹ್ಯ ವಂದೇ ಶ್ರೀವ್ಯಾಸಕೋಕಿಲಮ್ ||೨೭||


ಭಾಗವತತರುವೇರಿ ನಿತ್ಯವು

ಕೂಗುತಿಹ ಶ್ರೀಕೃಷ್ಣನಾಮವ

ಶ್ರೀಗುರು ವ್ಯಾಸಾಖ್ಯ ಕೋಗಿಲೆಯನ್ನು ವಂದಿಸುವೆ ||


(ಭಾಗವತ-ಅದ್ರಿಮ್ ಆರುಹ್ಯ—ಭಾಗವತತರುವ ಏರಿ ನಿತ್ಯವು)  ಸದಾ ಶ್ರೀಮದ್ಭಾಗವತವೆಂಬ ವೃಕ್ಷವನ್ನು ಹತ್ತಿ / ಆರೋಹಿಸಿ, (ಕೃಷ್ಣ ಕೃಷ್ಣ ಇತಿ ಮೋಹಕಂ ಮಾಧವಾಕ್ಷರಂ ಕೂಜನ್ತಮ್—ಶ್ರೀಕೃಷ್ಣನಾಮವ ಕೂಗುತಿಹ) "ಕೃಷ್ಣ! ಕೃಷ್ಣ!" ಎಂಬ ಅತ್ಯಂತ ಆಕರ್ಷಕವಾದ ಮಾಧವನ ನಾಮವನ್ನು ಕೂಗುತ್ತಿರುವ, (ಶ್ರೀವ್ಯಾಸಕೋಕಿಲಂ ವನ್ದೇ—ಶ್ರೀಗುರು ವ್ಯಾಸಾಖ್ಯ ಕೋಗಿಲೆಯನ್ನು ವಂದಿಸುವೆ) ಜಗದ್ಗುರುಗಳಾದ, ಶ್ರೀ ವೇದವ್ಯಾಸರೆಂಬ ಕೋಗಿಲೆಯನ್ನು ನಮಿಸುತ್ತೇನೆ.


ಕಷ್ಟಾನಾಮಪಕರ್ಷಂತಮಿಷ್ಟಾರ್ಥಾನಾಂ ಪ್ರದಾಯಕಮ್ |

ಸರ್ವಾಕರ್ಷಕಕೃಷ್ಣಂ ತಂ ಭೂಯೋ ಭೂಯೋ ನಮಾಮ್ಯಹಮ್ ||೨೮||


ಕಷ್ಟಗಳ ಪರಿಹರಿಪ ಕೃಷ್ಣನ

ನಿಷ್ಟಗಳ ಪಾಲಿಸುವ ಕೃಷ್ಣನ

ಶಿಷ್ಟದುಷ್ಟರ ಮೋಹಕನ ನಾನನವರತ ನಮಿಪೆ ||


(ಕಷ್ಟಾನಾಮ್ ಅಪಕರ್ಷನ್ತಮ್—ಕಷ್ಟಗಳ ಪರಿಹರಿಪ ಕೃಷ್ಣನನು) ಭಕ್ತರ ಕಷ್ಟಗಳನ್ನು ಪರಿಹರಿಸುವ ಶ್ರೀಕೃಷ್ಣಪರಮಾತ್ಮನನ್ನು, (ಇಷ್ಟಾರ್ಥಾನಾಂ ಪ್ರದಾಯಕಮ್—ಇಷ್ಟಗಳ ಪಾಲಿಸುವ ಕೃಷ್ಣನ) ಭಕ್ತರ ವಾಂಛಿತಾರ್ಥಗಳೆಲ್ಲವನ್ನು / ಬಯಕೆಗಳೆಲ್ಲವನ್ನು ದಯಪಾಲಿಸುವ, (ತಂ ಸರ್ವಾಕರ್ಷಕ ಕೃಷ್ಣಮ್—ಶಿಷ್ಟ-ದುಷ್ಟರ ಮೋಹಕನ) ಅಂತಹ ಶಿಷ್ಟ-ದುಷ್ಟರೆಲ್ಲರನ್ನು / ಸಜ್ಜನ-ದುರ್ಜನರೆಲ್ಲರನ್ನು ಮೋಹದ ಬಲೆಗೆ ಸಿಲುಕಿಸಬಲ್ಲ / ಆಕರ್ಷಿಸಬಲ್ಲ ಶ್ರೀಕೃಷ್ಣ ಭಗವಂತನನ್ನು, (ಅಹಂ ಭೂಯಃ, ಭೂಯಃ, ನಮಾಮಿ—ನಾನು ಅನವರತ ನಮಿಪೆ) ನಾನು ಮತ್ತೆ ಮತ್ತೆ, ಎಡೆಬಿಡದೆ ನಮಿಸುತ್ತೇನೆ. 


ನಾಶಕಂ ಭವಪಾಶಾನಾಂ ದಾಯಕಂ ಸುಖಸಂಪದಾಮ್ |

ಸ್ತಂಭನಂ ಯಮದೂತಾನಾಂ ಕೃಷ್ಣಕೃಷ್ಣೇತಿ ಗಾಯನಮ್ ||೨೯||


ಭವದ ಪಾಶವ ಕಡಿದೊಗೆಯುವುದು

ನವಸುಖವ ತಂದೊದಗಿಸುವುದದು

ಜವಭಟರ ನಿಲಿಸುವುದು ಕೃಷ್ಣನ ನಾಮಕೀರ್ತನೆಯು ||


(ಭವಪಾಶಾನಾಂ ನಾಶಕಮ್—ಭವದ ಪಾಶವ ಕಡಿದೊಗೆಯುವುದು) ಜನನ-ಮರಣರೂಪೀ ಭವ / ಸಂಸಾರದ ಪಾಶ / ಬಂಧಗಳೆಲ್ಲದರ ನಾಶಕವಾದುದು, (ಸುಖಸಂಪದಾಂ ದಾಯಕಮ್—ನವಸುಖವ ತಂದು ಒದಗಿಸುವುದು ಅದು) ಸುಖ-ಸಂಪತ್ತುಗಳನ್ನು ಕೊಡುವಂಥದ್ದು, (ಯಮದೂತಾನಾಂ ಸ್ತಂಭನಮ್—ಜವಭಟರ ನಿಲಿಸುವುದು) ಯಮಭಟರನ್ನೂ ಬಳಿಸಾರದಂತೆ ತಡೆಯೊಡ್ಡುವಂಥದ್ದು, (ಕೃಷ್ಣ ಕೃಷ್ಣ ಇತಿ ಗಾಯನಮ್—ಕೃಷ್ಣನ ನಾಮಕೀರ್ತನೆಯು) ಶ್ರೀಕೃಷ್ಣಪರಮಾತ್ಮನ ಕೃಷ್ಣ ಕೃಷ್ಣ ಎಂಬ ನಾಮಸಂಕೀರ್ತನೆಯು / ಅದರ ಫಲ / ಶಕ್ತಿ. 


(ಶಾರ್ದೂಲವಿಕ್ರೀಡಿತವೃತ್ತಮ್)

ಕೃಷ್ಣೋ ರಕ್ಷತು ಕೇಶವೋ ಮುರರಿಪುಃ ಕೃಷ್ಣಂ ಭಜೇ ಶ್ಯಾಮಲಂ

ಕೃಷ್ಣೇನಾಗತಸರ್ವಕಷ್ಟಹರಣಂ ಕೃಷ್ಣಾಯ ತುಭ್ಯಂ ನಮಃ |

ಕೃಷ್ಣಾನ್ನಾಸ್ತಿ ಪರಾಗತಿರ್ನರಹರೇ ಕೃಷ್ಣಸ್ಯ ಭೃತ್ಯೋऽಸ್ಮ್ಯಹಂ

ಕೃಷ್ಣೇ ನೃತ್ಯತು ಮಾನಸಂ ಪ್ರತಿದಿನಂ ಹೇ ಕೃಷ್ಣ ಹೇ ಮಾಧವ ||೩೦||


ಕೃಷ್ಣ ಕಾಯಲಿ ಕೇಶವನು ಹರಿ

ಕೃಷ್ಣನನ್ನನವರತ ನೆನೆಯುವೆ

ಕೃಷ್ಣನಿಂದಲೆ ಬಂದ ಸಂಕಟವೆಲ್ಲ ಪರಿಹಾರ |

ಕೃಷ್ಣನಿಗೆ ಶತಕೋಟಿ ವಂದನೆ

ಕೃಷ್ಣಗಿಂತನ್ಯಗತಿಯಿಲ್ಲವು

ಕೃಷ್ಣನೋರ್ವನ ದಾಸ ನಾನಾಗಿಹೆನು ಚಣಚಣವು ||

ಕೃಷ್ಣನೊಳು ಮನ ನಾಟ್ಯವಾಡಲಿ 

ಕೃಷ್ಣ ಹೇ ಕೃಷ್ಣನೇ ಬಾರೈ

ಕೃಷ್ಣನೆನ್ನಯ ಹೃದಯಮಂದಿರದಲ್ಲಿ ಸ್ಥಿರವಾಗು ||


(ಮುರರಿಪುಃ, ಕೇಶವಃ, ಕೃಷ್ಣಃ, ರಕ್ಷತು—ಕೃಷ್ಣ ಕಾಯಲಿ ಕೇಶವನು ಹರಿ) ಮುರಾಸುರನ ವೈರಿಯಾದ, ಸಾಗರಶಾಯಿಯಾದ, ಸಕಲರ ಪಾಪಗಳನ್ನು ಪರಿಹರಿಸಿ ಶ್ರೀಹರಿಯೆನಿಸಿದ, ಶ್ರೀಕೃಷ್ಣಾವತಾರ ತಾಳಿದ ನಾರಾಯಣನು ನಮ್ಮನ್ನು ರಕ್ಷಿಸಲಿ. (ಶ್ಯಾಮಲಂ ಕೃಷ್ಣಂ ಭಜೇ—ಕೃಷ್ಣನನ್ನು ಅನವರತ ನೆನೆಯುವೆ) ಆಕಾಶದ ನೀಲವರ್ಣದ ಮೋಡಗಳಂತಹ ಮೈಬಣ್ಣವಿರುವುದರಿಂದ ನೀಲಮೇಘಶ್ಯಾಮನೆನಿಸಿದ ಶ್ರೀಕೃಷ್ಣ ಪರಮಾತ್ಮನನ್ನು ಸದಾ ನಿರಂತರವೂ ಭಜಿಸುತ್ತೇನೆ, ಸ್ಮರಿಸುತ್ತೇನೆ. (ಕೃಷ್ಣೇನ, ಆಗತ-ಸರ್ವಕಷ್ಟ-ಹರಣಮ್—ಬಂದ ಸಂಕಟವೆಲ್ಲ ಕೃಷ್ಣನಿಂದಲೆ ಪರಿಹಾರ) ಬಂದಿರುವ ಸಕಲ ಸಂಕಷ್ಟಗಳೂ ಸಹ ಆ ಶ್ರೀಕೃಷ್ಣಪರಮಾತ್ಮನಿಂದಲೇ ಪರಿಹಾರವಾಗುವುವು. (ಕೃಷ್ಣಾಯ ತುಭ್ಯಂ ನಮಃ—ಕೃಷ್ಣನಿಗೆ ಶತಕೋಟಿ ವಂದನೆ) ಅಂತಹ ಶ್ರೀಕೃಷ್ಣನಾದ ನಿನಗೆ ಅನಂತಾನಂತ ವಂದನೆಗಳು. (ನರಹರೇಃ, ಕೃಷ್ಣಾತ್, ಪರಾಗತಿಃ, ನಾಸ್ತಿ—ಕೃಷ್ಣಗಿಂತ-ನ್ಯಗತಿಯಿಲ್ಲವು) ಮನುಷ್ಯದೇಹ, ಸಿಂಹದ ಮುಖ-ನಖಗಳ ರೂಪದ ನರಹರಿ / ನರಸಿಂಹಾವತಾರವನ್ನೂ ತಾಳಿದ ನಾರಾಯಣನ ಪೂರ್ಣಾವತಾರವಾದ ಶ್ರೀಕೃಷ್ಣನಿಗಿಂತ ಹೆಚ್ಚಿನ ಗತಿ ಬೇರೊಂದಿಲ್ಲ. (ಅಹಂ ಕೃಷ್ಣಸ್ಯ ಭೃತ್ಯಃ, ಅಸ್ಮಿ—ಕೃಷ್ಣನ ಓರ್ವನ ದಾಸ ನಾನು ಆಗಿಹೆನು) ನಾನು ಕೇವಲ ಕೃಷ್ಣಪರಮಾತ್ಮನೊಬ್ಬನ ದಾಸ / ಸೇವಕನಾಗಿದ್ದೇನೆ. (ಪ್ರತಿದಿನಂ ಮಾನಸಂ ಕೃಷ್ಣೇ ನೃತ್ಯತು—ಚಣಚಣವು ಕೃಷ್ಣನೊಳು ಮನ ನಾಟ್ಯವಾಡಲಿ) ಬದುಕಿನ ಪ್ರತಿಕ್ಷಣದಲ್ಲೂ ಸಹ ನನ್ನ ಮನಸ್ಸು ಆ ಶ್ರೀಕೃಷ್ಣಪರಮಾತ್ಮನಲ್ಲೇ ನರ್ತಿಸುತ್ತಿರಲಿ, ಆತನ ಚಿಂತನೆ, ಸ್ಮರಣೆಗಳಲ್ಲೇ ಲಗ್ನವಾಗಿರಲಿ. (ಹೇ ಕೃಷ್ಣ, ಹೇ ಮಾಧವ—ಕೃಷ್ಣ ಹೇ ಕೃಷ್ಣನೇ ಬಾರೈ, ಕೃಷ್ಣನೆ, ಎನ್ನಯ ಹೃದಯಮಂದಿರದಲ್ಲಿ ಸ್ಥಿರವಾಗು) ಹೇ ನಂದಕಿಶೋರ ನವನೀತಚೋರ ಗೀತಾಚಾರ್ಯ ರುಕ್ಮಿಣೀಲೋಲ ಪರಬ್ರಹ್ಮಸ್ವರೂಪ ಶ್ರೀಕೃಷ್ಣನೆ! ಬಾರಯ್ಯ ಬಾರೋ..ಬಾಲಗೋಪಾಲ…ನನ್ನ ಮನವೆಂಬ ಮಂದಿರದಲ್ಲಿ ಶಾಶ್ವತವಾಗಿ ಪ್ರತಿಷ್ಠಾಪಿತನಾಗಿರು, ಸಾನ್ನಿಧ್ಯವಹಿಸು, ವಾಸವಾಗಿರು, ಸುಸ್ಥಿರವಾಗಿ ನೆಲೆನಿಲ್ಲು.


ವ್ಯಾಕರಣವಿಶೇಷ—


ಈ ಶ್ಲೋಕದಲ್ಲಿ ಕೃಷ್ಣಶಬ್ದದ ಏಕವಚನದ ಸರ್ವ ವಿಭಕ್ತಿರೂಪಗಳನ್ನೂ ಕ್ರಮವಾಗಿ ತೋರಿಕೊಡಲಾಗಿದೆ. ಕೃಷ್ಣಃ, ಕೃಷ್ಣಮ್, ಕೃಷ್ಣೇನ, ಕೃಷ್ಣಾಯ, ಕೃಷ್ಣಾತ್, ಕೃಷ್ಣಸ್ಯ, ಕೃಷ್ಣೇ, ಹೇ ಕೃಷ್ಣ—ಎಂಬಿವು ಅನುಕ್ರಮವಾಗಿ ಪ್ರಥಮಾ, ದ್ವಿತೀಯಾ, ತೃತೀಯಾ, ಚತುರ್ಥೀ, ಪಂಚಮೀ, ಷಷ್ಠೀ, ಸಪ್ತಮೀ ಹಾಗೂ ಸಂಬೋಧನಾ ವಿಭಕ್ತಿರೂಪಗಳಾಗಿವೆ. 


( ಅನುಷ್ಟುಬ್-ವೃತ್ತಮ್)

ಕೃಷ್ಣಃ ಕರ್ಷತಿ ಕಷ್ಟಾನಿ ಪಾಪಾನ್ಯಪಾಕರೋತಿ ವೈ |

ಕಲೌ ತಾರಕಮಂತ್ರಂ ತು ಕೃಷ್ಣ ಇತ್ಯಭಿಧೀಯತೇ ||೩೧||


ಕೃಷ್ಣ ಕಳೆವನು ಕಷ್ಟಗಳ ಬಹು

ಕೃಷ್ಣ ಸುಡುವನು ಪಾಪಗಳ ನಿಜ

ಕೃಷ್ಣಮಂತ್ರವೆ ತಾರಕವು ಕಲಿಯುಗದಿ ಕೇಳೆಂದ ||


(ಕೃಷ್ಣಃ ಕಷ್ಟಾನಿ ಕರ್ಷತಿ—ಕೃಷ್ಣ ಬಹು ಕಷ್ಟಗಳ ಕಳೆವನು) ಶ್ರೀಕೃಷ್ಣನು ತನ್ನ ನಿಜಭಕ್ತರ ಸಕಲ ದುಃಖ, ದುಮ್ಮಾನ, ಸಂಕಟಗಳನ್ನು ಸುಟ್ಟು ಭಸ್ಮಮಾಡುವನು. (ಪಾಪಾನಿ ವೈ ಅಪಾಕರೋತಿ—ಕೃಷ್ಣ ಪಾಪಗಳ ಸುಡುವನು, ನಿಜ) ಕೃಷ್ಣಪರಮಾತ್ಮನು ತನ್ನ ಭಕುತರ ದುರಿತ, ಪಾಪರಾಶಿಯನ್ನು ನಿಶ್ಚಯವಾಗಿಯೂ ಇಲ್ಲವಾಗಿಸುವನು, ದೂರಮಾಡುವನು, ನಾಶಗೊಳಿಸುವನು. (ಕಲೌ ತಾರಕಮಂತ್ರಂ ತು ಕೃಷ್ಣಃ, ಇತಿ ಅಭಿಧೀಯತೇ) ಈ ಕಷ್ಟ ಕಲಿಯುಗದಲ್ಲಿಯಾದರೋ, "ಕೃಷ್ಣ" ಎಂಬುದೇ ಭವತಾರಕಮಂತ್ರವೆಂಬುದಾಗಿ ಕರೆಯಲ್ಪಡುತ್ತದೆ (ಕೃಷ್ಣಮಂತ್ರವೆ ತಾರಕವು ಕಲಿಯುಗದಿ ಕೇಳು ಎಂದ).


ಕೃಷ್ಣ ಕೃಷ್ಣೇತಿ ಗೋವಿಂದಂ ಸಂಸ್ಮರೇನ್ಮಧುಸೂದನಮ್ |

ಸಹಸ್ರನಾಮತುಲ್ಯಂ ಸ್ಯಾತ್ ಕೃಷ್ಣ ನಾಮೈವ ಕೇವಲಮ್ ||೩೨||


ಕೃಷ್ಣ ಕೃಷ್ಣ ಗೋವಿಂದ ಮಾಧವ

ಕೃಷ್ಣ ಮಧುಸೂದನನೆ ಶ್ರೀಹರಿ

ಕೃಷ್ಣನೆನ್ನುವ ನಾಮ ಸಾಸಿರನಾಮ ಸಮವಹುದು ||


(ಗೋವಿನ್ದಂ ಮಧುಸೂದನಂ ಕೃಷ್ಣ ಕೃಷ್ಣ ಇತಿ ಸಂಸ್ಮರೇತ್—ಕೃಷ್ಣ ಕೃಷ್ಣ ಗೋವಿಂದ ಮಾಧವ, ಕೃಷ್ಣ ಮಧುಸೂದನನೆ ಶ್ರೀಹರಿ) ಗೋವುಗಳನ್ನುದ್ದರಿಸಿ ಗೋವಿಂದನೆಂದು ಕರೆಯಲ್ಪಟ್ಟವನನ್ನು, ಮಧು-ಕೈಟಭರೆಂಬ ರಾಕ್ಷಸರನ್ನು ಕೊಂದು ಮಧಸೂದನ, ಕೈಟಭಾಂತಕನೆಂದು ಕರೆಯಲ್ಪಟ್ಟ ಪರಮಾತ್ಮನನ್ನು "ಕೃಷ್ಣ ಕೃಷ್ಣ" ಎಂದು ಭಕ್ತಿಪ್ರೇಮಾತಿಶಯದಿಂದ ಸ್ಮರಿಸಬೇಕು. (ಕೇವಲಂ ಕೃಷ್ಣ ನಾಮ ಏವ—ಕೃಷ್ಣನೆನ್ನುವ ನಾಮ) ಭಗವಂತನ ಕೇವಲ ಕೃಷ್ಣನೆನ್ನುವ ನಾಮವೊಂದೇ, (ಸಹಸ್ರನಾಮತುಲ್ಯಂ ಸ್ಯಾತ್—ಸಾಸಿರನಾಮ ಸಮವು ಅಹುದು) ಪರಮಾತ್ಮನ ಸಾವಿರಾರು ಅನಂತ ನಾಮ / ಹೆಸರುಗಳಿಗೆ ಸರಿಸಮವಾಗುವುದು. ಹಾಗಾಗಿ, ಅನಂತವಾದ ಭಗವನ್ನಾಮಗಳ ಬದಲಿಗೆ ಕೃಷ್ಣನಾಮವೊಂದೇ ಆತ್ಮೋದ್ಧಾರಕ್ಕೆ ಸಾಕೆಂಬುದಿದರ ತಾತ್ಪರ್ಯ.


Comments

Popular posts from this blog

ಸ್ತೋತ್ರಸಂಹಿತಾ ೫.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೫ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೩ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)