ಸ್ತೋತ್ರಸಂಹಿತಾ ೫.೫ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)
೨೮. ಶ್ರೀ ಅರವಿನ್ದಾಷ್ಟಕಮ್ (ತ್ರಿಷ್ಟುಪ್-ಛನ್ದೋಜಾತಂ "ಉಪಜಾತಿ" ವೃತ್ತಮ್, ಏಕಾದಶಾಕ್ಷರಾ ವೃತ್ತಿಃ) ಗೋವಿನ್ದಪಾದಾಮ್ಬುಜಜಾತಗಾತ್ರಾ -ऽರವಿನ್ದನಾಮಾಙ್ಕಿತ ವಿಷ್ಣುನೇತ್ರ | ಆನನ್ದಸಚ್ಚಿದ್ಘನ ಭಕ್ತಿಪಾತ್ರಾ- -ऽರವಿನ್ದಮೂರ್ತೇ ಶರಣಂ ಪ್ರಪದ್ಯೇ || ೧ || (ಗೋವಿನ್ದಪಾದಾಮ್ಬುಜ-ಜಾತಗಾತ್ರ) ಪರಮಾತ್ಮನಾದ ಗೋವಿಂದನ ಚರಣಾರವಿಂದದಿಂದ ಅವತರಿಸಿದ ತನುವುಳ್ಳವನೆ! (ಅರವಿನ್ದನಾಮಾಙ್ಕಿತ-ವಿಷ್ಣುನೇತ್ರ) ಅರವಿಂದನೆಂಬ ಅಂಕಿತನಾಮವುಳ್ಳ ಸಾಕ್ಷಾತ್ ಮಹಾವಿಷ್ಣುವಿನ ನಯನಾರವಿಂದವೇ ಆದ, (ಆನಂದಸಚ್ಚಿದ್ಘನ ಭಕ್ತಿಪಾತ್ರ) ಸಚ್ಚಿದಾನಂದದ ನಿಧಿಯೇ ಆದ, ಎಲ್ಲರ ಭಕ್ತಿಗೂ ಪಾತ್ರನಾದ, (ಅರವಿನ್ದಮೂರ್ತೇ!) ಹೇ ಅರವಿಂದಮಹರ್ಷಿಯೇ! (ಶರಣಂ ಪ್ರಪದ್ಯೇ) ನಿನ್ನ ಚರಣಾರವಿಂದಗಳಲ್ಲಿ ಶರಣುಹೊಂದುತ್ತೇನೆ. ಶ್ರೀಶಾಂಕರೀ ವೈಷ್ಣವಗಾಣಪತ್ಯೇ ರಾಮಾನುಜೀಯಾ ಮಥಿತಾನುಭೂತಾ | ಯೇನೋಪದಿಷ್ಟಾ ಬಹುಸಾರಭೂತಾ ऽರವಿನ್ದಮೂರ್ತೇ ಶರಣಂ ಪ್ರಪದ್ಯೇ || ೨ || (ಶ್ರೀಶಾಂಕರೀ) ಆದಿಶಂಕರಾಚಾರ್ಯರ ಅದ್ವೈತತತ್ತ್ವಬೋಧನೆಯೂ, (ವೈಷ್ಣವಗಾಣಪತ್ಯೇ) ಮಾಧ್ವ ದ್ವೈತ, ವೈಷ್ಣವ, ಗಾಣಪತ್ಯ ಸಿದ್ಧಾಂತಗಳೂ, (ರಾಮಾನುಜೀಯಾ) ಶ್ರೀರಾಮಾನುಜರ ವಿಶಿಷ್ಟಾದ್ವೈತಸಿದ್ಧಾಂತವೂ, ಶಾಕ್ತ, ಸೌರ, ಶೈವಾದಿಸಿದ್ಧಾಂತಗಳೂ, (ಯೇನ) ಯಾರಿಂದ, (ಮಥಿತಾ) ಚೆನ್ನಾಗಿ ಮಥನಗೊಳಿಸಲ್ಪಟ್ಟು, ಅನುಭೂತಿಯಾಗಿ, (ಬಹುಸಾರಭೂತಾ) ಅವೆಲ್ಲದರ ಸಾರವು, (ಉಪದಿಷ್ಟಾ) ಉಪದೇಶಿಸಲ್ಪಟ್ಟಿತೋ, (ಅರವಿನ್ದಮೂರ್ತೇ) ಅಂತಹ ...