Posts

Showing posts from January, 2021

ಶ್ರೀಶಂಕರಾಚಾರ್ಯಸ್ತೋತ್ರಾಣಿ

  (೩) ಶಙ್ಕರಾಚಾರ್ಯಸ್ತೋತ್ರಾಣಿ— (ಅ) ಏಕಶ್ಲೋಕ-ಶಙ್ಕರವಿಜಯಃ ಆರ್ಯಾಮ್ಬಾಜಠರೇ ಜನಿಃ ದ್ವಿಜಸತೀದಾರಿದ್ರ್ಯನಿರ್ಮೂಲನಂ ಸಂನ್ಯಾಸಾಶ್ರಯಣಂ ಗುರೂಪಸದನಂ ಶ್ರೀಮಣ್ಡನಾದೇರ್ಜಯಃ | ಶಿಷ್ಯೌಘಗ್ರಹಣಂ ಸುಭಾಷ್ಯರಚನಂ ಸರ್ವಜ್ಞಪೀಠಾಶ್ರಯಃ ಪೀಠಾನಾಂ ರಚನೇತಿ ಸಙ್ಗ್ರಹಮಯೀ ಸೈಷಾ ಕಥಾ ಶಾಙ್ಕರೀ || ೧ ||  ಕೇರಳದ ಕಾಲಡಿಯ ಶಿವಗುರು-ಆರ್ಯಾಂಬಾ ಎಂಬ ಭಕ್ತಶ್ರೇಷ್ಠ ಪರಮವೈದಿಕಸಂಪ್ರದಾಯನಿಷ್ಠ ನಂಬೂದಿರಿ ಕುಟುಂಬದ  ದಂಪತಿಗಳ ಸುಪುತ್ರರಾಗಿ ಸಾಕ್ಷಾತ್ ಪರಶಿವನ ಶಂಕರಾಚಾರ್ಯರೂಪೀ ಅವತಾರ, ಭಿಕ್ಷೆಗೆ ಏನೂ ಇರದಿದ್ದರಿಂದ ಒಣಗಿದ ನೆಲ್ಲಿಕಾಯಿಯನ್ನಿತ್ತ ಬಡ ಬ್ರಾಹ್ಮಣಪತ್ನಿಯ ಬಡತನವನ್ನು,  ಕನಕಧಾರಾಸ್ತೋತ್ರದ ಆಶುರಚನೆಯ ಮೂಲಕ ಮಹಾಲಕ್ಷಿಯನ್ನೊಲಿಸಿ ಬಂಗಾರದ ನೆಲ್ಲಿಕಾಯಿಗಳ ಸುರಿಮಳೆಯನ್ನೇ ಕರೆದು ಹೋಗಲಾಡಿಸಿದ, ವೃಷಭಾಚಲೇಶ್ವರನ ಕೃಪೆಯಿಂದ ಅಪುತ್ರದಂಪತಿಗಳಿಗೆ ಹುಟ್ಟಿದರೂ ಜನ್ಮತಃ ಅಲ್ಪಾಯುವಾಗಿ ಪೂರ್ಣಾನದಿಯಲ್ಲೊಮ್ಮೆ ಮಕರಗ್ರಾಹವ್ಯಾಜದಿಂದ ಆಯುರ್ವೃದ್ಧಿಗೆ ಸಂನ್ಯಾಸವಲ್ಲದೆ ಅನ್ಯಮಾರ್ಗವಿಲ್ಲವೆಂದು ನುಡಿದು ಮಾತೆಯ ಅನುಮತಿಪಡೆದು ಬಳಿಕ ಗೋವಿಂದಭಗವತ್ಪಾದರ ಬಳಿ ಸಂನ್ಯಾಸದೀಕ್ಷೆಯನ್ನು ಪಡೆದ, ಗುರುಸನ್ನಿಧಿಯಲ್ಲಿದ್ದು ವಿದ್ಯಾರ್ಜನೆಮಾಡಿದ, ತರುವಾಯ ಕರ್ಮವಾದಿ ಮಂಡನಮಿಶ್ರಾದಿ ನಾನಾಸಿದ್ಧಾಂತಿಗಳನ್ನು ವಾದದಲ್ಲಿ ಗೆದ್ದ, ತನ್ನನ್ನಾಶ್ರಯಿಸಬಂದ ಶಿಷ್ಯಸ್ತೋಮವನ್ನು ಪರಿಗ್ರಹಿಸಿದ, ಪ್ರಸ್ಥಾನತ್ರಯಭಾಷ್ಯಾದಿಗಳನ್ನು ವಿರಚಿಸಿದ, ಸರ್...