ಶ್ರೀಶಂಕರಾಚಾರ್ಯಸ್ತೋತ್ರಾಣಿ

 (೩) ಶಙ್ಕರಾಚಾರ್ಯಸ್ತೋತ್ರಾಣಿ—


(ಅ) ಏಕಶ್ಲೋಕ-ಶಙ್ಕರವಿಜಯಃ


ಆರ್ಯಾಮ್ಬಾಜಠರೇ ಜನಿಃ ದ್ವಿಜಸತೀದಾರಿದ್ರ್ಯನಿರ್ಮೂಲನಂ

ಸಂನ್ಯಾಸಾಶ್ರಯಣಂ ಗುರೂಪಸದನಂ ಶ್ರೀಮಣ್ಡನಾದೇರ್ಜಯಃ |

ಶಿಷ್ಯೌಘಗ್ರಹಣಂ ಸುಭಾಷ್ಯರಚನಂ ಸರ್ವಜ್ಞಪೀಠಾಶ್ರಯಃ

ಪೀಠಾನಾಂ ರಚನೇತಿ ಸಙ್ಗ್ರಹಮಯೀ ಸೈಷಾ ಕಥಾ ಶಾಙ್ಕರೀ || ೧ || 


ಕೇರಳದ ಕಾಲಡಿಯ ಶಿವಗುರು-ಆರ್ಯಾಂಬಾ ಎಂಬ ಭಕ್ತಶ್ರೇಷ್ಠ ಪರಮವೈದಿಕಸಂಪ್ರದಾಯನಿಷ್ಠ ನಂಬೂದಿರಿ ಕುಟುಂಬದ  ದಂಪತಿಗಳ ಸುಪುತ್ರರಾಗಿ ಸಾಕ್ಷಾತ್ ಪರಶಿವನ ಶಂಕರಾಚಾರ್ಯರೂಪೀ ಅವತಾರ, ಭಿಕ್ಷೆಗೆ ಏನೂ ಇರದಿದ್ದರಿಂದ ಒಣಗಿದ ನೆಲ್ಲಿಕಾಯಿಯನ್ನಿತ್ತ ಬಡ ಬ್ರಾಹ್ಮಣಪತ್ನಿಯ ಬಡತನವನ್ನು,  ಕನಕಧಾರಾಸ್ತೋತ್ರದ ಆಶುರಚನೆಯ ಮೂಲಕ ಮಹಾಲಕ್ಷಿಯನ್ನೊಲಿಸಿ ಬಂಗಾರದ ನೆಲ್ಲಿಕಾಯಿಗಳ ಸುರಿಮಳೆಯನ್ನೇ ಕರೆದು ಹೋಗಲಾಡಿಸಿದ, ವೃಷಭಾಚಲೇಶ್ವರನ ಕೃಪೆಯಿಂದ ಅಪುತ್ರದಂಪತಿಗಳಿಗೆ ಹುಟ್ಟಿದರೂ ಜನ್ಮತಃ ಅಲ್ಪಾಯುವಾಗಿ ಪೂರ್ಣಾನದಿಯಲ್ಲೊಮ್ಮೆ ಮಕರಗ್ರಾಹವ್ಯಾಜದಿಂದ ಆಯುರ್ವೃದ್ಧಿಗೆ ಸಂನ್ಯಾಸವಲ್ಲದೆ ಅನ್ಯಮಾರ್ಗವಿಲ್ಲವೆಂದು ನುಡಿದು ಮಾತೆಯ ಅನುಮತಿಪಡೆದು ಬಳಿಕ ಗೋವಿಂದಭಗವತ್ಪಾದರ ಬಳಿ ಸಂನ್ಯಾಸದೀಕ್ಷೆಯನ್ನು ಪಡೆದ, ಗುರುಸನ್ನಿಧಿಯಲ್ಲಿದ್ದು ವಿದ್ಯಾರ್ಜನೆಮಾಡಿದ, ತರುವಾಯ ಕರ್ಮವಾದಿ ಮಂಡನಮಿಶ್ರಾದಿ ನಾನಾಸಿದ್ಧಾಂತಿಗಳನ್ನು ವಾದದಲ್ಲಿ ಗೆದ್ದ, ತನ್ನನ್ನಾಶ್ರಯಿಸಬಂದ ಶಿಷ್ಯಸ್ತೋಮವನ್ನು ಪರಿಗ್ರಹಿಸಿದ, ಪ್ರಸ್ಥಾನತ್ರಯಭಾಷ್ಯಾದಿಗಳನ್ನು ವಿರಚಿಸಿದ, ಸರ್ವಮತಗಳನ್ನೂ ಸೋಲಿಸಿ ಕಾಶ್ಮೀರಪುರವಾಸಿನಿಯಾದ ಶ್ರೀಶಾರದಾಂಬಾಸನ್ನಿಧಿಯ ಸರ್ವಜ್ಞಪೀಠವನ್ನಲಂಕರಿಸಿದ, ಬಳಿಕ ಚತುರಾಮ್ನಾಯ ಪೀಠಗಳನ್ನು ಶೃಂಗೇರಿ ದ್ವಾರಕಾ ಪುರೀ ಬದರೀಗಳಲ್ಲೂ, ಇತರೆಡೆಗಳಲ್ಲೂ ಶಾಂಕರಮಠಗಳನ್ನು ಪ್ರತಿಷ್ಠಾಪಿಸಿದ ಈ ದಿವ್ಯ ಲೀಲಾವತಾರಕಥೆಯು ಶ್ರೀಶಂಕರಭಗವತ್ಪಾದಪೂಜ್ಯರ ಜೀವನಚರಿತೆಯ ಸಂಗ್ರಹರೂಪವಾಗಿ ಲೋಕದಲ್ಲಿ ಆಚಂದ್ರಾರ್ಕ ವಿರಾಜಮಾನವಾಗಿರುವುದು. 


(ಆ) ಶಂಕರಾಚಾರ್ಯಸ್ತುತಿಃ


ನಮಸ್ತಸ್ಮೈ ಭಗವತೇ ಶಂಕರಾಚಾರ್ಯರೂಪಿಣೇ |

ಯೇನ ವೇದಾನ್ತವಿದ್ಯೇऽಯಮುದ್ಧೃತಾ ವೇದಸಾಗರಾತ್ || ೧ ||


(ಇ) ತೋಟಕಾಷ್ಟಕಮ್

(ಶ್ರೀತೋಟಕಾಚಾರ್ಯಕೃತಮ್)


ವಿದಿತಾಖಿಲಶಾಸ್ತ್ರಸುಧಾಜಲಧೇ

ಮಹಿತೋಪನಿಷತ್ಕಥಿತಾರ್ಥನಿಧೇ |

ಹೃದಯೇ ಕಲಯೇ ವಿಮಲಂ ಚರಣಂ

ಭವ ಶಂಕರದೇಶಿಕ ಮೇ ಶರಣಮ್ || ೧ ||

ಕರುಣಾವರುಣಾಲಯ ಪಾಲಯ ಮಾಂ

ಭವಸಾಗರದುಃಖವಿದೂನಹೃದಮ್ |

ರಚಿತಾಖಿಲದರ್ಶನತತ್ತ್ವಮಿದಂ

ಭವ ಶಂಕರದೇಶಿಕ ಮೇ ಶರಣಮ್ || ೨ ||

ಭವತಾ ಜನತಾ ಸುಹಿತಾ ಭವಿತಾ

ನಿಜಬೋಧವಿಚಾರಣಚಾರುಮತೇ |

ಕಲಯೇಶ್ವರಜೀವವಿವೇಕಮಿದಂ

ಭವ ಶಂಕರದೇಶಿಕ ಮೇ ಶರಣಮ್ || ೩ ||

ಭವ ಏವ ಭವಾನಿತಿ ಮೇ ನಿತರಾಂ

ಸಮಜಾಯತ ಚೇತಸಿ ಕೌತುಕಿತಾ |

ಮಮ ವಾರಯ ಮೋಹಮಹಾಜಲಧಿಂ

ಭವ ಶಂಕರದೇಶಿಕ ಮೇ ಶರಣಮ್ || ೪ ||

ಸುಕೃತೇऽಧಿಕೃತೇ ಬಹುಧಾ ಭವತೋ

ಭವಿತಾ ಸಮದರ್ಶನಲಾಲಸತಾ |

ಅತಿದೀನಮಿಮಂ ಪರಿಪಾಲಯ ಮಾಂ

ಭವ ಶಂಕರದೇಶಿಕ ಮೇ ಶರಣಮ್ || ೫ ||

ಜಗತೀಮವಿತುಂ ಕಲಿತಾಕೃತಯೋ

ವಿಚರನ್ತಿ ಮಹಾಮಹಸಚ್ಛಲತಃ |

ಅಹಿಮಾಂಶುರಿವಾತ್ರ ವಿಭಾಸಿ ಗುರೋ

ಭವ ಶಂಕರದೇಶಿಕ ಮೇ ಶರಣಮ್ || ೬ ||

ಗುರುಪುಂಗವ ಪುಂಗವ ಕೇತನ ತೇ

ಸಮತಾಮಯತಾಂ ನ ಹಿ ಕೋऽಪಿ ಸುಧೀಃ |

ಶರಣಾಗತವತ್ಸಲತತ್ತ್ವನಿಧೇ

ಭವ ಶಂಕರದೇಶಿಕ ಮೇ ಶರಣಮ್ || ೭ ||

ವಿದಿತಾ ನ ಮಯಾ ವಿಶದೈಕಕಲಾ

ನ ಚ ಕಿಂಚನ ಕಾಂಚನಮಸ್ತಿ ಗುರೋ |

ದ್ರುತಮೇವ ವಿಧೇಹಿ ಕೃಪಾಂ ಸಹಜಾಂ

ಭವ ಶಂಕರದೇಶಿಕ ಮೇ ಶರಣಮ್ || ೮ ||


(ಈ) ಶ್ರೀ-ಆದಿಶಙ್ಕರಾಚಾರ್ಯ-ಅಷ್ಟೋತ್ತರ-ಶತನಾಮಾವಲಿಃ

ರಚಯಿತಾ : ಪರಂಪರಾನುಗತಮ್

ದೇವತಾ : ಶ್ರೀ-ಆದಿ-ಶಙ್ಕರಾಚಾರ್ಯಃ

ಬ್ರಹ್ಮಾನನ್ದಪ್ರದಾಯಕಾಯ ನಮಃ
ಅಜ್ಞಾನತಿಮಿರಾದಿತ್ಯಾಯ ನಮಃ
ಸುಜ್ಞಾನಾಮ್ಬುಧಿಚನ್ದ್ರಮಸೇ ನಮಃ
ವರ್ಣಾಶ್ರಮಪ್ರತಿಷ್ಠಾತ್ರೇ ನಮಃ ॥೫॥

ಶ್ರೀಮತೇ ನಮಃ
ಮುಕ್ತಿಪ್ರದಾಯಕಾಯ ನಮಃ
ಶಿಷ್ಯೋಪದೇಶನಿರತಾಯ ನಮಃ
ಭಕ್ತಾಭೀಷ್ಟಪ್ರದಾಯಕಾಯ ನಮಃ
ಸೂಕ್ಷ್ಮತತ್ತ್ವರಹಸ್ಯಜ್ಞಾಯ ನಮಃ ॥೧೦॥

ಕಾರ್ಯಾಕಾರ್ಯಪ್ರಬೋಧಕಾಯ ನಮಃ
ಜ್ಞಾನಮುದ್ರಾಞ್ಚಿತಕರಾಯ ನಮಃ
ಶಿಷ್ಯಹೃತ್ತಾಪಹಾರಕಾಯ ನಮಃ
ಪರಿವ್ರಾಜಾಶ್ರಮೋದ್ಧರ್ತ್ರೇ ನಮಃ
ಸರ್ವತನ್ತ್ರಸ್ವತನ್ತ್ರಧಿಯೇ ನಮಃ ॥೧೫॥

ಅದ್ವೈತಸ್ಥಾಪನಾಚಾರ್ಯಾಯ ನಮಃ
ಸಾಕ್ಷಾಚ್ಛಙ್ಕರರೂಪಧೃತೇ ನಮಃ
ಷಣ್ಮತಸ್ಥಾಪನಾಚಾರ್ಯಾಯ ನಮಃ
ತ್ರಯೀಮಾರ್ಗಪ್ರಕಾಶಕಾಯ ನಮಃ
ವೇದವೇದಾನ್ತತತ್ತ್ವಜ್ಞಾಯ ನಮಃ ॥೨೦॥

ದುರ್ವಾದಿಮತಖಣ್ಡನಾಯ ನಮಃ
ವೈರಾಗ್ಯನಿರತಾಯ ನಮಃ
ಶಾನ್ತಾಯ ನಮಃ
ಸಂಸಾರಾರ್ಣವತಾರಕಾಯ ನಮಃ
ಪ್ರಸನ್ನವದನಾಮ್ಭೋಜಾಯ ನಮಃ ॥೨೫॥

ಪರಮಾರ್ಥಪ್ರಕಾಶಕಾಯ ನಮಃ
ಪುರಾಣಸ್ಮೃತಿಸಾರಜ್ಞಾಯ ನಮಃ
ನಿತ್ಯತೃಪ್ತಾಯ ನಮಃ
ಮಹತೇ ನಮಃ
ಶುಚಯೇ ನಮಃ ॥೩೦॥

ನಿತ್ಯಾನನ್ದಾಯ ನಮಃ
ನಿರಾತಙ್ಕಾಯ ನಮಃ
ನಿಃಸಙ್ಗಾಯ ನಮಃ
ನಿರ್ಮಲಾತ್ಮಕಾಯ ನಮಃ
ನಿರ್ಮಮಾಯ ನಮಃ ॥೩೫॥

ನಿರಹಙ್ಕಾರಾಯ ನಮಃ
ವಿಶ್ವವನ್ದ್ಯಪದಾಮ್ಬುಜಾಯ ನಮಃ
ಸತ್ತ್ವಪ್ರಧಾನಾಯ ನಮಃ
ಸದ್ಭಾವಾಯ ನಮಃ
ಸಙ್ಖ್ಯಾತೀತಗುಣೋಜ್ಜ್ವಲಾಯ ನಮಃ ॥೪೦॥

ಅನಘಾಯ ನಮಃ
ಸಾರಹೃದಯಾಯ ನಮಃ
ಸುಧಿಯೇ ನಮಃ
ಸಾರಸ್ವತಪ್ರದಾಯ ನಮಃ
ಸತ್ಯಾತ್ಮನೇ ನಮಃ ॥೪೫॥

ಪುಣ್ಯಶೀಲಾಯ ನಮಃ
ಸಾಙ್ಖ್ಯಯೋಗವಿಚಕ್ಷಣಾಯ ನಮಃ
ತಪೋರಾಶಯೇ ನಮಃ
ಮಹಾತೇಜಸೇ ನಮಃ
ಗುಣತ್ರಯವಿಭಾಗವಿದೇ ನಮಃ ॥೫೦॥

ಕಲಿಘ್ನಾಯ ನಮಃ
ಕಾಲಕರ್ಮಜ್ಞಾಯ ನಮಃ
ತಮೋಗುಣನಿವಾರಕಾಯ ನಮಃ
ಭಗವತೇ ನಮಃ
ಭಾರತೀಜೇತ್ರೇ ನಮಃ ॥೫೫॥

ಶಾರದಾಹ್ವಾನಪಣ್ಡಿತಾಯ ನಮಃ
ಧರ್ಮಾಧರ್ಮವಿಭಾಗಜ್ಞಾಯ ನಮಃ
ಲಕ್ಷ್ಯಭೇದಪ್ರದರ್ಶಕಾಯ ನಮಃ
ನಾದಬಿನ್ದುಕಲಾಭಿಜ್ಞಾಯ ನಮಃ
ಯೋಗಿಹೃತ್ಪದ್ಮಭಾಸ್ಕರಾಯ ನಮಃ ॥೬೦॥

ಅತೀನ್ದ್ರಿಯಜ್ಞಾನನಿಧಯೇ ನಮಃ
ನಿತ್ಯಾನಿತ್ಯವಿವೇಕವತೇ ನಮಃ
ಚಿದಾನನ್ದಾಯ ನಮಃ
ಚಿನ್ಮಯಾತ್ಮನೇ ನಮಃ
ಪರಕಾಯಪ್ರವೇಶಕೃತೇ ನಮಃ ॥೬೫॥
ಅಮಾನುಷಚರಿತ್ರಾಢ್ಯಾಯ ನಮಃ
ಕ್ಷೇಮದಾಯಿನೇ ನಮಃ
ಕ್ಷಮಾಕರಾಯ ನಮಃ
ಭವ್ಯಾಯ ನಮಃ
ಭದ್ರಪ್ರದಾಯ ನಮಃ ॥೭೦॥

ಭೂರಿಮಹಿಮ್ನೇ ನಮಃ
ವಿಶ್ವರಞ್ಜಕಾಯ ನಮಃ
ಸ್ವಪ್ರಕಾಶಾಯ ನಮಃ
ಸದಾಧಾರಾಯ ನಮಃ
ವಿಶ್ವಬನ್ಧವೇ ನಮಃ ॥೭೫॥

ಶುಭೋದಯಾಯ ನಮಃ
ವಿಶಾಲಕೀರ್ತಯೇ ನಮಃ
ವಾಗೀಶಾಯ ನಮಃ
ಸರ್ವಲೋಕಹಿತೋತ್ಸುಕಾಯ ನಮಃ
ಕೈಲಾಸಯಾತ್ರಾಸಮ್ಪ್ರಾಪ್ತಚನ್ದ್ರಮೌಲಿಪ್ರಪೂಜಕಾಯ ನಮಃ ॥೮೦॥

ಕಾಞ್ಚ್ಯಾಂ ಶ್ರೀಚಕ್ರರಾಜಾಖ್ಯಯನ್ತ್ರಸ್ಥಾಪನದೀಕ್ಷಿತಾಯ ನಮಃ
ಶ್ರೀಚಕ್ರಾತ್ಮಕತಾಟಙ್ಕತೋಷಿತಾಮ್ಬಾಮನೋರಥಾಯ ನಮಃ
ಶ್ರೀಬ್ರಹ್ಮಸೂತ್ರೋಪನಿಷದ್ಭಾಷ್ಯಾದಿಗ್ರನ್ಥಕಲ್ಪಕಾಯ ನಮಃ
ಚತುರ್ದಿಕ್ಚತುರಾಮ್ನಾಯ-ಪ್ರತಿಷ್ಠಾತ್ರೇ ನಮಃ
ಮಹಾಮತಯೇ ನಮಃ ॥೮೫॥

ದ್ವಿಸಪ್ತತಿಮತೋಚ್ಛೇತ್ತ್ರೇ ನಮಃ
ಸರ್ವದಿಗ್ವಿಜಯಪ್ರಭವೇ ನಮಃ
ಕಾಷಾಯವಸನೋಪೇತಾಯ ನಮಃ
ಭಸ್ಮೋದ್ಧೂಲಿತವಿಗ್ರಹಾಯ ನಮಃ
ಜ್ಞಾನಾತ್ಮಕೈಕದಣ್ಡಾಢ್ಯಾಯ ನಮಃ ॥೯೦॥

ಕಮಣ್ಡಲುಲಸತ್ಕರಾಯ ನಮಃ
ಗುರುಭೂಮಣ್ಡಲಾಚಾರ್ಯಾಯ ನಮಃ
ಭಗವತ್ಪಾದಸಂಜ್ಞಕಾಯ ನಮಃ
ವ್ಯಾಸಸನ್ದರ್ಶನಪ್ರೀತಾಯ ನಮಃ
ಋಷ್ಯಶೃಙ್ಗಪುರೇಶ್ವರಾಯ ನಮಃ ॥೯೫॥

ಸೌನ್ದರ್ಯಲಹರೀಮುಖ್ಯಬಹುಸ್ತೋತ್ರವಿಧಾಯಕಾಯ ನಮಃ
ಚತುಷ್ಷಷ್ಟಿಕಲಾಭಿಜ್ಞಾಯ ನಮಃ
ಬ್ರಹ್ಮರಾಕ್ಷಸಮೋಕ್ಷದಾಯ ನಮಃ
ಶ್ರೀಮನ್ಮಣ್ಡನಮಿಶ್ರಾಖ್ಯಸ್ವಯಮ್ಭೂಜಯಸನ್ನುತಾಯ ನಮಃ
ತೋಟಕಾಚಾರ್ಯಸಮ್ಪೂಜ್ಯಾಯ ನಮಃ ॥೧೦೦॥

ಪದ್ಮಪಾದಾರ್ಚಿತಾಙ್ಘ್ರಿಕಾಯ ನಮಃ
ಹಸ್ತಾಮಲಕಯೋಗೀನ್ದ್ರ ಬ್ರಹ್ಮಜ್ಞಾನಪ್ರದಾಯಕಾಯ ನಮಃ
ಸುರೇಶ್ವರಾಖ್ಯಸಚ್ಛಿಷ್ಯಸನ್ನ್ಯಾಸಾಶ್ರಮದಾಯಕಾಯ ನಮಃ
ನೃಸಿಂಹಭಕ್ತಾಯ ನಮಃ
ಸದ್ರತ್ನಗರ್ಭಹೇರಮ್ಬಪೂಜಕಾಯ ನಮಃ ॥೧೦೫॥

ವ್ಯಾಖ್ಯಾಸಿಂಹಾಸನಾಧೀಶಾಯ ನಮಃ
ಜಗತ್ಪೂಜ್ಯಾಯ ನಮಃ
ಜಗದ್ಗುರವೇ ನಮಃ ॥೧೦೮॥ 

॥ ಇತಿ ಶ್ರೀ-ಆದಿಶಙ್ಕರಾಚಾರ್ಯ-ಅಷ್ಟೋತ್ತರ-ಶತನಾಮಾವಲಿಃ ॥



(ಉ) ಸಪ್ತಶ್ಲೋಕೀ ಆಚಾರ್ಯಸ್ತುತಿಃ
        *******************
ಶಂಕರಂ ಶಂಕರಾಚಾರ್ಯಂ ಕೇಶವಂ ಬಾದರಾಯಣಮ್ |
ಸೂತ್ರಭಾಷ್ಯಕೃತೌ ವಂದೇ ಭಗವಂತೌ ಪುನ: ಪುನ:  ||೧||


ಸಾಕ್ಷಾತ್ ಭಗವಾನ್ ಶಂಕರನೇ ಆಗಿರುವ ಶ್ರೀ ಆದಿ ಶಂಕರ ಭಗವತ್ಪಾದರನ್ನೂ, ಸಾಕ್ಷಾತ್ ಕೇಶವನೇ ಆಗಿರುವ ಬಾದರಾಯಣ ವ್ಯಾಸಮಹರ್ಷಿಗಳವರನ್ನೂ ಸ್ಮರಿಸುತ್ತಾ, ಬ್ರಹ್ಮಸೂತ್ರವನ್ನು ರಚಿಸಿ ಅದಕ್ಕೆ ಭಾಷ್ಯವನ್ನು ಬರೆದಂತಹಾ ಈ ಈರ್ವರು ಭಗವಾನ್ ಸ್ವರೂಪಿಗಳಿಗೆ ಶಿರಸಾ ನಮಸ್ಕರಿಸುವೆ.


ಶ್ರುತಿಸ್ಮೃತಿಪುರಾಣಾನಾಮ್ ಆಲಯಂ ಕರುಣಾಲಯಂ |
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ  ||೨||


ವೇದ,ಸ್ಮೃತಿ,ಪುರಾಣಗಳಿಗೆ ಆಶ್ರಯತಾಣವಾಗಿರುವ, ಕರುಣೆಯ ನೆಲೆಯಾಗಿರುವ, ವಿಶ್ವಕ್ಕೆಲ್ಲಾ ಸುಖವನ್ನು ಉಂಟು ಮಾಡುವ ಸಾಕ್ಷಾತ್ ಶಂಕರ ಸ್ವರೂಪೀ ಶ್ರೀ ಶಂಕರ ಭಗವತ್ಪಾದಾಚಾರ್ಯರಿಗೆ ನಮಸ್ಕರಿಸುವೆ.



ಸೂತ್ರಭಾಷ್ಯ ಪ್ರಣೇತಾರೌ ವೇದಾಂತಾಬ್ಜಪ್ರಭಾಕರೌ |
ವಂದೇ ಪರಸ್ಪರಾತ್ಮಾನೌ ಬಾದರಾಯಣಶಂಕರೌ  ||೩||


ಶಾರೀರಕಸೂತ್ರಗಳನ್ನು ವಿರಚಿಸಿ, ಅವುಗಳಿಗೆ ಭಾಷ್ಯವನ್ನು ಬರೆದು, ವೇದಾಂತವೆಂಬ ಕಮಲಕ್ಕೆ ಸೂರ್ಯನೋಪಾದಿಯವರೂ ಆಗಿರುವ ಪರಸ್ಪರ ಆತ್ಮ ಸ್ವರೂಪರೂ ಆಗಿರುವ, ಭಗವಾನ್ ಶ್ರೀ ಬಾದರಾಯಣ ಹಾಗೂ ಶ್ರೀಶಂಕರ ಭಗವತ್ಪಾದಾಚಾರ್ಯರೀರ್ವರಿಗೂ ನಾನು ಭಕ್ತಿ ಪುರಸ್ಸರವಾಗಿ ನಮಸ್ಕರಿಸುವೆ.


ಸದಾಶಿವಸಮಾರಂಭಾಂ ಶಂಕರಾಚಾರ್ಯಮಧ್ಯಮಾಮ್ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರುಪರಂಪರಾಮ್  ||೪||


ಭಗವಂತನಾದ ಶಂಕರನಿಂದ ಆರಂಭಗೊಂಡು ಆದಿ ಜಗದ್ಗುರು ಶ್ರೀಶಂಕರಾಚಾರ್ಯರನ್ನು ಮಧ್ಯದಲ್ಲಿ ಇರಿಸಿಕೊಂಡು ನಮ್ಮ ಈಗಿನ ಶ್ರೀ ಶ್ರೀ ಗುರುವರ್ಯರ ತನಕ ಅವಿಚ್ಛಿನ್ನವಾಗಿ ಸಾಗಿ ಬಂದಿರುವ ಸಮಸ್ತ ಗುರು ಪರಂಪರೆಯನ್ನು ನಾನು ಭಕ್ತಿ ಪುರಸ್ಸರವಾಗಿ ನಮಸ್ಕರಿಸುವೆ.



ವಂದೇsಹಂ ಭಗವತ್ಪಾದಂ ಗುರುಂ ಶಂಕರಮವ್ಯಯಮ್ |
ಯಮಾಶ್ರಿತ್ಯ ಜಗತ್ಸರ್ವಂ ಲಭತೇ ಶಾಂತಿಮುತ್ತಮಾಮ್  ||೫||


ಯಾರನ್ನು ಆಶ್ರಯಿಸಿ ಪೂರ್ಣ ಪ್ರಪಂಚವು ಉತ್ಕೃಷ್ಟವಾದ ಶಾಂತಿಯನ್ನು ಪಡೆಯುವುದೋ, ಅಂತಹ ಕಾಲಾತೀತರಾದ ಶ್ರೀಶಂಕರ ಭಗವತ್ಪಾದ ಗುರು ಪರಂಪರೆಯನ್ನು ನಾನು ಭಕ್ತಿ ಪುರಸ್ಸರವಾಗಿ ನಮಸ್ಕರಿಸುವೆ.


ಶಾಸ್ತ್ರಂ ಶಾರೀರಮೀಮಾಂಸಾ ದೇವಸ್ತು ಪರಮೇಶ್ವರ: |
ಆಚಾರ್ಯಾ: ಶಂಕರಾಚಾರ್ಯಾ: ಸಂತು ಮೇ ಜನ್ಮಜನ್ಮನಿ  ||೬||


ನನಗೆ ಶಾಸ್ತ್ರವೆಂದರೆ ಶಾರೀರಕಮೀಮಾಂಸೆಯಾಗಿದೆ. ದೇವರೆಂದರೆ ಸಾಕ್ಷಾತ್ ಪರಮೇಶ್ವರನೇ ಆಗಿರುವನು. ಆಚಾರ್ಯರೆಂದರೆ ಸಾಕ್ಷಾತ್ ಶ್ರೀ ಶಂಕರಾಚಾರ್ಯರೇ ಆಗಿರುವರು. ನನ್ನ ಜನ್ಮ ಜನ್ಮಗಳಲ್ಲಿಯೂ ಶ್ರೀಶಂಕರಾಚಾರ್ಯಾದಿ ಅವಿಚ್ಛಿನ್ನ ಗುರುಪರಂಪರೆಯೇ ನನಗೆ ಗುರುಗಳಾಗಿ ದೊರಕಲಿ.


ಶಂಕಾರೂಪೇಣ ಮಚ್ಚಿತ್ತಂ ಪಂಕೀಕೃತಮಭೂದ್ಯಯಾ |
ಕಿಂಕರೀ ಯಸ್ಯ ಸಾ ಮಾಯಾ ಶಂಕರಾಚಾರ್ಯಮಾಶ್ರಯೇ ||೭||



ಸಂಶಯಸ್ವರೂಪಿಣಿಯಾಗಿರುವ ಮಾಯೆಯ ಕಾರಣದಿಂದ ನನ್ನ ಚಿತ್ತವು ಮಲಿನಗೊಂಡಿತ್ತು. ಆ ಮಾಯೆಯು ಯಾರಿಗೆ ದಾಸಿಯೋ ಅಂತಹ ಶ್ರೀಶಂಕರ ಭಗವತ್ಪಾದ ಪರಂಪರೆಯನ್ನು ನಾನು ಆಶ್ರಯಿಸುತ್ತೇನೆ.


++++++++++++++++
    || ಇತಿ ಸಪ್ತಶ್ಲೋಕೀ ಆಚಾರ್ಯಸ್ತುತಿಃ ||  

                                                           || ಈ ತೆರನಾಗಿ ಸಪ್ತಶ್ಲೋಕೀ ಆಚಾರ್ಯಸ್ತುತಿಯ ಭಾವಾರ್ಥವು  ||
************************


(ಊ) ಶ್ರೀಮಚ್ಛಙ್ಕರಭಗವತ್ಪಾದಾಚಾರ್ಯ-ಸಹಸ್ರನಾಮಸ್ತೋತ್ರಮ್


ಶ್ರೀಮತ್-ಕೈಲಾಸನಿಲಯಃ ಪಾರ್ವತೀಪ್ರಾಣವಲ್ಲಭಃ |

ಬ್ರಹ್ಮಾದಿಸುರಸಂಪೂಜ್ಯೋ ಭಕ್ತತ್ರಾಣಪರಾಯಣಃ || ೧ ||


ಹಿಮವತ್ಪರ್ವತಶ್ರೇಣಿಯ ಕೈಲಾಸಗಿರಿಯನ್ನೇ ತನ್ನ ನಿವಾಸವನ್ನಾಗಿಸಿಕೊಂಡ, ಹಿಮವತ್ಪರ್ವತರಾಜಪುತ್ರಿಯಾಗಿ ಪಾರ್ವತಿಯೆನಿಸಿದ ಆದಿಶಕ್ತಿಯ ಪ್ರಾಣಪತಿಯಾದ, ಚತುರ್ಮುಖ ಬ್ರಹ್ಮಾದಿ ಸಕಲ ದೇವಾನುದೇವತೆಗಳಿಂದಲೂ ಭಕ್ತಿಯಿಂದ ಪೂಜ್ಯನಾದ, ತನ್ನ ನಿಜಭಕ್ತರ ರಕ್ಷಣೆಯಲ್ಲೇ ನಿರತನಾದ, ಸಾಕ್ಷಾತ್ ಭಗವಾನ್ ಪರಶಿವನ ಅವತಾರಿಗಳಾದ ಭಗವತ್ಪಾದ ಆಚಾರ್ಯ ಶಂಕರರನ್ನು ಶರಣುಹೊಂದುತ್ತೇನೆ. 



Comments

Popular posts from this blog

ಸ್ತೋತ್ರಸಂಹಿತಾ ೫.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೫ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೩ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)