ಸ್ತೋತ್ರಸಂಹಿತಾ ೫.೫ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)
೨೮. ಶ್ರೀ ಅರವಿನ್ದಾಷ್ಟಕಮ್
(ತ್ರಿಷ್ಟುಪ್-ಛನ್ದೋಜಾತಂ "ಉಪಜಾತಿ" ವೃತ್ತಮ್, ಏಕಾದಶಾಕ್ಷರಾ ವೃತ್ತಿಃ)
ಗೋವಿನ್ದಪಾದಾಮ್ಬುಜಜಾತಗಾತ್ರಾ
-ऽರವಿನ್ದನಾಮಾಙ್ಕಿತ ವಿಷ್ಣುನೇತ್ರ |
ಆನನ್ದಸಚ್ಚಿದ್ಘನ ಭಕ್ತಿಪಾತ್ರಾ-
-ऽರವಿನ್ದಮೂರ್ತೇ ಶರಣಂ ಪ್ರಪದ್ಯೇ || ೧ ||
(ಗೋವಿನ್ದಪಾದಾಮ್ಬುಜ-ಜಾತಗಾತ್ರ) ಪರಮಾತ್ಮನಾದ ಗೋವಿಂದನ ಚರಣಾರವಿಂದದಿಂದ ಅವತರಿಸಿದ ತನುವುಳ್ಳವನೆ! (ಅರವಿನ್ದನಾಮಾಙ್ಕಿತ-ವಿಷ್ಣುನೇತ್ರ) ಅರವಿಂದನೆಂಬ ಅಂಕಿತನಾಮವುಳ್ಳ ಸಾಕ್ಷಾತ್ ಮಹಾವಿಷ್ಣುವಿನ ನಯನಾರವಿಂದವೇ ಆದ, (ಆನಂದಸಚ್ಚಿದ್ಘನ ಭಕ್ತಿಪಾತ್ರ) ಸಚ್ಚಿದಾನಂದದ ನಿಧಿಯೇ ಆದ, ಎಲ್ಲರ ಭಕ್ತಿಗೂ ಪಾತ್ರನಾದ, (ಅರವಿನ್ದಮೂರ್ತೇ!) ಹೇ ಅರವಿಂದಮಹರ್ಷಿಯೇ! (ಶರಣಂ ಪ್ರಪದ್ಯೇ) ನಿನ್ನ ಚರಣಾರವಿಂದಗಳಲ್ಲಿ ಶರಣುಹೊಂದುತ್ತೇನೆ.
ಶ್ರೀಶಾಂಕರೀ ವೈಷ್ಣವಗಾಣಪತ್ಯೇ
ರಾಮಾನುಜೀಯಾ ಮಥಿತಾನುಭೂತಾ |
ಯೇನೋಪದಿಷ್ಟಾ ಬಹುಸಾರಭೂತಾ
ऽರವಿನ್ದಮೂರ್ತೇ ಶರಣಂ ಪ್ರಪದ್ಯೇ || ೨ ||
(ಶ್ರೀಶಾಂಕರೀ) ಆದಿಶಂಕರಾಚಾರ್ಯರ ಅದ್ವೈತತತ್ತ್ವಬೋಧನೆಯೂ, (ವೈಷ್ಣವಗಾಣಪತ್ಯೇ) ಮಾಧ್ವ ದ್ವೈತ, ವೈಷ್ಣವ, ಗಾಣಪತ್ಯ ಸಿದ್ಧಾಂತಗಳೂ, (ರಾಮಾನುಜೀಯಾ) ಶ್ರೀರಾಮಾನುಜರ ವಿಶಿಷ್ಟಾದ್ವೈತಸಿದ್ಧಾಂತವೂ, ಶಾಕ್ತ, ಸೌರ, ಶೈವಾದಿಸಿದ್ಧಾಂತಗಳೂ, (ಯೇನ) ಯಾರಿಂದ, (ಮಥಿತಾ) ಚೆನ್ನಾಗಿ ಮಥನಗೊಳಿಸಲ್ಪಟ್ಟು, ಅನುಭೂತಿಯಾಗಿ, (ಬಹುಸಾರಭೂತಾ) ಅವೆಲ್ಲದರ ಸಾರವು, (ಉಪದಿಷ್ಟಾ) ಉಪದೇಶಿಸಲ್ಪಟ್ಟಿತೋ, (ಅರವಿನ್ದಮೂರ್ತೇ) ಅಂತಹ ಹೇ ಅರವಿಂದಮಹರ್ಷಿಯೇ! (ಶರಣಂ ಪ್ರಪದ್ಯೇ) ನಿನಗಿದೋ ಶರಣು ಶರಣು.
ತದ್ಬ್ರಹ್ಮ ನಿತ್ಯಂ ಜಗದಸ್ತಿ ಸತ್ಯಂ
ಬ್ರಹ್ಮೈವ ಸರ್ವಂ ರವಿತೇಜವದ್ಧಿ |
ಲೋಕೇಷು ಪೂರ್ಣಂ ಭಗವಾನ್ ಸ್ವಶಕ್ತ್ಯಾ
ऽರವಿನ್ದಮೂರ್ತೇ ಶರಣಂ ಪ್ರಪದ್ಯೇ || ೩ ||
(ತದ್ ಬ್ರಹ್ಮ ನಿತ್ಯಮ್) ಆ ಪರಬ್ರಹ್ಮವು ನಿತ್ಯವಾದದ್ದು. (ಜಗತ್ ಅಸ್ತಿ ಸತ್ಯಮ್) ಈ ಜಗತ್ತೂ ಕೂಡ ಸತ್ಯವಾದುದು. (ರವಿತೇಜವತ್ ಲೋಕೇಷು ಪೂರ್ಣಮ್) ಸೂರ್ಯನ ಪ್ರಕಾಶವು ಎಲ್ಲೆಡೆ ಹರಡಿರುವಂತೆಯೇ ಸೃಷ್ಟಿಯಲ್ಲೆಲ್ಲ ತುಂಬಿಕೊಂಡಿರುವ, (ಸರ್ವಂ ಬ್ರಹ್ಮ ಏವ ಹಿ) ತೋರುವುದೆಲ್ಲವೂ ತಾತ್ತ್ವಿಕವಾಗಿ ಬ್ರಹ್ಮವೇ ಆಗಿರುವುದಷ್ಟೆ? (ಭಗವಾನ್ ಸ್ವಶಕ್ತ್ಯಾ) ಆ ಭಗವಂತನೇ / ಬ್ರಹ್ಮವೇ ತನ್ನದಾದ ಮಾಯಾಶಕ್ತಿಯಿಂದ ಸೃಷ್ಟಿಯಾಗಿ ತೋರುತ್ತಿರುವುದು. ಈ ರೀತುಯಲ್ಲಿ ಪರಮಾರ್ಥವನ್ನೂ ಲೌಕಿಕವನ್ನೂ, ಜೀವ-ಜಗತ್-ಈಶ್ವರರ ಸಂಬಂಧವನ್ನು ವಿವರಿಸಿದ, (ಅರವಿನ್ದಮೂರ್ತೇ) ಹೇ ಮಹರ್ಷಿ ಅರವಿಂದನೇ! (ಶರಣಂ ಪ್ರಪದ್ಯೇ) ನಿನಗಿದೋ ನಾನು ಶರಣುಬಂದಿದ್ದೇನೆ.
ಯಾ ಸರ್ವಮಾತಾ ಗದಿತಾ ಪ್ರಜಾಭಿಃ
ಸಾ ಸರ್ವಲೋಕಸ್ಯ ಪಿತಾ ತಥೈವ |
ಯೇನಾದ್ವಯಾ ಬೋಧಿತಾ ಜೀವಮೂಲಾ
ऽರವಿನ್ದಮೂರ್ತೇ ಶರಣಂ ಪ್ರಪದ್ಯೇ || ೪ ||
(ಯಾ ಸರ್ವಮಾತಾ ಪ್ರಜಾಭಿಃ ಗದಿತಾ) ಯಾವಳು ಎಲ್ಲರ ಜನನಿಯೆಂದು ಜನರಿಂದ ಕರೆಯಲ್ಪಟ್ಟಿರುವಳೋ, (ತಥಾ) ಅಂತೆಯೇ, (ಸಾ ಏವ) ಅವಳೇ, (ಸರ್ವಲೋಕಸ್ಯ ಪಿತಾ) ಎಲ್ಲ ಜನರಿಗೂ ತಂದೆಯೂ ಹೌದು. (ಅದ್ವಯಾ ಜೀವಮೂಲಾ) ಎರಡಿಲ್ಲದ ಏಕಮೇವಾದ್ವಿತೀಯವಾದ ಪರತತ್ತ್ವವೊಂದೇ ಸಕಲ ಜೀವಕ್ಕೂ ಮೂಲವೆಂಬುದಾಗಿ, (ಯೇನ ಬೋಧಿತಾ) ಯಾವನಿಂದ ಬೋಧಿಸಲ್ಪಟ್ಟಿರುವುದೋ, (ಅರವಿನ್ದಮೂರ್ತೇ) ಅಂತಹ ಹೇ ಅರವಿಂದಮಹರ್ಷಿಯೇ!, (ಶರಣಂ ಪ್ರಪದ್ಯೇ) ನಿನ್ನನ್ನು ಶರಣುಹೊಂದುತ್ತೇನೆ.
ಮನಃಪ್ರಧಾನೋ ಮನುಜಸ್ತಥಾ ಚ
ಮನೋऽತಿವರ್ತಿನ್ಯಪಿ ಶಕ್ತಿರಸ್ತಿ |
ಋಷಿರ್ಭವೇತ್ ತಾದೃಶಶಕ್ತಿಮಾನ್ಯೋ
ऽರವಿನ್ದಮೂರ್ತೇ ಶರಣಂ ಪ್ರಪದ್ಯೇ || ೫ ||
(ಉಪೇನ್ದ್ರವಜ್ರಾ ಜತಜಾಸ್ತತೋ ಗೌ)
(ಮನುಜಃ) ಮನುಷ್ಯನು, (ಮನಃಪ್ರಧಾನಃ) ಮನಸ್ಸನ್ನೇ ಪ್ರಧಾನಶಕ್ತಿಯಾಗಿ ಹೊಂದಿ ಶ್ರೇಷ್ಠನಾಗಿದ್ದಾನೆ. (ತಥಾ ಚ) ಹಾಗೆಯೇ, (ಮನಃ ಅತಿವರ್ತಿನೀ ಶಕ್ತಿಃ) ಮನಸ್ಸನ್ನೂ ಮೀರಿದ ಶಕ್ತಿಯೊಂದು, (ಅಪಿ ಅಸ್ತಿ) ಕೂಡ ಇದೆ. (ಯಃ ತಾದೃಶಶಕ್ತಿಮಾನ್) ಯಾವನು ಅಂತಹ ಶಕ್ತಿಯನ್ನು ಜಾಗೃತಗೊಳಿಸಿಕೊಂಡಿರುವನೋ ಅವನು, (ಋಷಿಃ ಭವೇತ್) ಋಷಿಯೆನಿಸುವನು. (ಅರವಿನ್ದಮೂರ್ತೇ) ಇದನ್ನು ಬೋಧಿಸಿದ ಮಹರ್ಷಿಅರವಿಂದರೇ! (ಶರಣಂ ಪ್ರಪದ್ಯೇ) ನಿಮ್ಮನ್ನು ಶರಣುಹೊಂದುತ್ತೇನೆ.
ವಿಶ್ವಸ್ತರೀಯಂ ಮನಸೋ ಮನೋ ಯತ್
ತದಸ್ತಿ ಸರ್ವೇಷ್ವತಿಗೂಢರೀತ್ಯಾ |
ತಸ್ಯಾನುಭೂತ್ಯೈವ ಹಿ ಯೋಗಸಿದ್ಧೋ
ऽರವಿನ್ದಮೂರ್ತೇ ಶರಣಂ ಪ್ರಪದ್ಯೇ || ೬ ||
(ವಿಶ್ವಸ್ತರೀಯಂ ಮನಸಃ ಮನಃ ಯತ್) ವಿಶ್ವಸ್ತರದ, ಜಾಗತಿಕ ಮಟ್ಟದ, ಮನಸ್ಸಿಗೂ ಮನಸ್ಸಾಗಿರುವ ಯಾವ ತತ್ತ್ವವಿದೆಯೋ, (ತದ್ ಸರ್ವೇಷು ಅತಿಗೂಢರೀತ್ಯಾ ಅಸ್ತಿ) ಅದು ಸಕಲರಲ್ಲೂ ಅತ್ಯಂತ ರಹಸ್ಯವಾಗಿ ನೆಲೆಸಿರುವುದು. (ತಸ್ಯ ಅನುಭೂತ್ಯಾ ಏವ) ಅದರ ಅನುಭೂತಿಯಿಂದಲೇ, (ಹಿ ಯೋಗಸಿದ್ಧಃ) ನಿಶ್ಚಯವಾಗಿಯೂ ಯೋಗಸಿದ್ಧನಾದ ಯೋಗಾರೂಢನಾದ ಯೋಗಿಯಾಗುತ್ತಾನೆ. (ಅರವಿನ್ದಮೂರ್ತೇ) ಅಂತಹ ಯೋಗಿಯಾದ ಹಾಗೂ ಈ ಪರಿಪೂರ್ಣಯೋಗವನ್ನು ಬೋಧಿಸಿದ ಹೇ ಅರವಿಂದಮಹರ್ಷಿಯೆ! (ಶರಣಂ ಪ್ರಪದ್ಯೇ) ನಿನ್ನನ್ನು ಶರಣುಹೊಂದುತ್ತೇನೆ.
ಜಿಜೀವಿಷೇದ್ದಿವ್ಯತಯಾಪಿ ಶಾಂತ್ಯಾ
ಯೋಗೀ ಚ ಕರ್ಮಸ್ವತಿಕೌಶಲೇನ |
ಅಧ್ಯಾತ್ಮಗೂಢಾರ್ಥದ ಯೋಗಮೌಲಾ
ऽರವಿನ್ದಮೂರ್ತೇ ಶರಣಂ ಪ್ರಪದ್ಯೇ || ೭ ||
(ಯೋಗೀ) ಯೋಗಿಯಾಗಬಯಸುವವನು, (ದಿವ್ಯತಯಾ ಶಾಂತ್ಯಾ ಅಪಿ) ದಿವ್ಯತ್ವದಿಂದ, ದೈವೀಗುಣಗಳೊಂದಿಗೆ, ಹಾಗೂ ಶಾಂತಮನಸ್ಕನಾಗಿ (ಜಿಜೀವಿಷೇತ್) ಜೀವಿಸಲು ಇಚ್ಛಿಸಬೇಕು, ಯತ್ನಿಸಬೇಕು ("ಜೀವಿತುಮ್ ಇಚ್ಛಾ ಜಿಜೀವಿಷಾ"). (ಕರ್ಮಸು) ಮಾಡುವ ಸರ್ವಕರ್ಮಗಳಲ್ಲೂ, (ಅತಿಕೌಶಲೇನ) ಅತ್ಯಂತ ಹೆಚ್ಚು ಕುಶಲತೆಯೊಂದಿಗೆ ಪ್ರವರ್ತಿಸಬೇಕು. "ಯೋಗಃ ಕರ್ಮಸು ಕೌಶಲಮ್" (ಗೀತಾ)— ಕರ್ಮಗಳಲ್ಲಿನ ಕುಶಲತೆಯೇ ಯೋಗವು. (ಅಧ್ಯಾತ್ಮಗೂಢಾರ್ಥದ) ಅಧ್ಯಾತ್ಮದ ರಹಸ್ಯವಾದ ಅಂತರಾರ್ಥವನ್ನು ಲೋಕಕ್ಕೆ ದಯಪಾಲಿಸಿದವನೆ! (ಯೋಗಮೌಲ) ಹೇ ಯೋಗದ ಮೂಲವನ್ನರಿತವನೆ! ಯೋಗಿವರೇಣ್ಯನೆ! (ಅರವಿನ್ದಮೂರ್ತೇ) ಅಂತಹ ಹೇ ಅರವಿಂದಮಹರ್ಷಿಯೆ! (ಶರಣಂ ಪ್ರಪದ್ಯೇ) ನಿನ್ನನ್ನು ಶರಣು ಹೊಂದುತ್ತೇನೆ.
ಘೋಷೋಪನಾಮಾ ಹ್ಯರವಿನ್ದಮೌನೇ
ಭಾಷಾತಿವರ್ತೀ ಚ ವಿವಿಕ್ತಸೇವೀ |
ದೇಶಾದಿದೂರೋऽಹ್ಯತಿರಿಕ್ತಕಾಲೋ
ऽರವಿನ್ದಮೂರ್ತೇ ಶರಣಂ ಪ್ರಪದ್ಯೇ || ೮ ||
(ಘೋಷ-ಉಪನಾಮಾ ಹಿ) ಘೋಷ್ ಎಂಬ ಕುಲನಾಮದವನೆ! (ಅರವಿನ್ದಮೌನೇ) ಹೇ ಅರವಿಂದಮುನಿಯೆ! (ಭಾಷಾತಿವರ್ತೀ ಚ) ನೀನು ಭಾಷೆಗೆ ಅತೀತನಾದವನು ಹಾಗೂ, (ವಿವಿಕ್ತಸೇವೀ) ನಿರ್ಜನಪ್ರದೇಶದಲ್ಲೇ ಸದಾ ಧ್ಯಾನನಿರತನು. (ದೇಶಾದಿದೂರಃ ಹಿ) ನೀನು ದೇಶ, ನಾಮ, ರೂಪಾದಿಗಳನ್ನೂ ಮೀರಿದ ತತ್ತ್ವವಲ್ಲವೆ? (ಅತಿರಿಕ್ತಕಾಲಃ) ನೀನು ಕಾಲವನ್ನೂ ಮೀರಿದವನಲ್ಲವೆ?, (ಅರವಿನ್ದಮೂರ್ತೇ) ಅಂತಹ ಹೇ ಅರವಿಂದಮಹರ್ಷಿಯೆ! (ಶರಣಂ ಪ್ರಪದ್ಯೇ) ನಾನು ನಿನ್ನನ್ನು ಶರಣುಹೊಂದುತ್ತೇನೆ, ಆಶ್ರಯಿಸುತ್ತೇನೆ.
೨೯. ಹರಿಹರಾಷ್ಟಕಮ್
[ಉಪಜಾತಿವೃತ್ತಮ್—ವಂಶಸ್ಥವೃತ್ತಮ್ (೧೨, ಜಗತೀಚ್ಛನ್ದೋಜಾತಮ್)+ ಉಪೇನ್ದ್ರವಜ್ರಾ / ಇನ್ದ್ರವಜ್ರಾ (೧೧, ತ್ರಿಷ್ಟುಪ್-ಛನ್ದೋಜಾತಮ್) ]
("ಜತೌ ತು ವಂಶಸ್ಥಮುದೀರಿತಂ ಜರೌ")
("ಉಪೇನ್ದ್ರವಜ್ರಾ ಜತಜಾಸ್ತತೋ ಗೌ")
("ಸ್ಯಾದಿನ್ದ್ರವಜ್ರಾ ಯದಿ ತೌ ಜಗೌ ಗಃ")
ಶರಣ್ಯಮೀಡೇऽಹಮುದಾರವಿಗ್ರಹಂ
ವರೇಣ್ಯಮೀಶಾತ್ಮಕವಿಷ್ಣುರೂಪಿಣಮ್ |
ಗುರೂಣಿ ದುಃಖಾನಿ ನಿವಾರಿತಾನಿ
ಯಸ್ಯಾಶ್ರಯೇಣೈವ ಹರಿಂ ಹರಂ ತ್ವಾಮ್ || ೧ ||
(ಯಸ್ಯ ಆಶ್ರಯೇಣ ಏವ) ಯಾವನ ಆಶ್ರಯದಿಂದಲೇ, (ಗುರೂಣಿ ದುಃಖಾನಿ ನಿವಾರಿತಾನಿ) ದೊಡ್ಡ ದೊಡ್ಡ ದುಃಖಗಳು ನಿವಾರಿಸಲ್ಪಟ್ಟವೋ, ಅಂತಹ (ಉದಾರವಿಗ್ರಹಂ ವರೇಣ್ಯಂ ಶರಣ್ಯಮ್) ಅತ್ಯಂತ ಕರುಣಾಸಾಗರನೂ, ಉದಾರಮೂರ್ತಿಯೂ, ಭಕ್ತರಿಗೆ ಆರ್ತರಿಗೆ ಶರಣಾಗಲು ಅತಿಶಯವಾಗಿ ಯೋಗ್ಯನಾದವನೂ, (ಈಶಾತ್ಮಕ-ವಿಷ್ಣುರೂಪಿಣಂ ಹರಿಂ ಹರಂ ತ್ವಾಮ್) ಈಶ್ವರ/ಹರ ಹಾಗೂ ವಿಷ್ಣು/ಹರಿ—ಇವರೀರ್ವರ ಅಂಶಸಂಭೂತನೂ ಆದ, ಹರಿಹರನಾದ / ಅಯ್ಯಪ್ಪಸ್ವಾಮಿಯಾದ ನಿನ್ನನ್ನು, (ಅಹಮ್ ಈಡೇ) ನಾನು ಸ್ತುತಿಸುತ್ತೇನೆ.
ರಂಬಾತ್ಮಜಂ ಬ್ರಹ್ಮವರಾತ್ಸುದೃಪ್ತಂ
ಜಘಾನ ಚಣ್ಡೀ ಮಹಿಷಂ ಮಹೋಗ್ರಮ್ |
ಮಹಿಷ್ಯತಾಪ್ಸೀದ್ವಿಧಿಮಸ್ಯ ಸೋದರೀ
ವರಂ ತ್ವವಾಪ್ತಂ ಹರಿರುದ್ರಜೋ ಮೃತಿಃ || ೨ ||
(ರಂಬಾತ್ಮಜಂ) ರಂಬಾ ಎಂಬ ರಕ್ಕಸಿಯ ಮಗನೂ, (ಮಹೋಗ್ರಂ) ಅತ್ಯಂತ ಕ್ರೂರಿಯೂ, (ಬ್ರಹ್ಮವರಾತ್ ಸುದೃಪ್ತಂ) ಬ್ರಹ್ಮದೇವನ ವರಬಲದಿಂದ ದರ್ಪಿಷ್ಠನಾಗಿ ಕೊಬ್ಬಿದ, (ಮಹಿಷಂ) ಮಹಿಷನೆಂಬ ರಾಕ್ಷಸನನ್ನು, (ಚಣ್ಡೀ ಜಘಾನ) ಚಂಡಿಕೆಯು ಸಂಹರಿಸಿದಳು. (ಅಸ್ಯ ಸೋದರೀ ಮಹಿಷೀ) ಈತನ ತಂಗಿಯಾದ ಮಹಿಷಿಯು, (ವಿಧಿಮ್ ಅತಾಪ್ಸೀತ್) ಬ್ರಹ್ಮದೇವನನ್ನು ಕುರಿತು ತಪಸ್ಸು ಮಾಡಿದಳು. (ಹರಿ-ರುದ್ರಜಃ, ಮೃತಿಃ) ಹರಿ-ಹರರಿಗೆ ಜನಿಸಿದವನೇ ತನಗೆ ಮೃತ್ಯುವೆಂಬ, (ವರಂ ತು ಅವಾಪ್ತಮ್) ವರವಾದರೋ ಆಕೆಗೆ ಸಿಕ್ಕಿತು.
ಸುಪಾಲ್ಯತಾಂ ದ್ವಾದಶವರ್ಷಸಂಯಮಂ
ಧರಾವತಾರೋऽವನಿಪಾಲಮಸ್ಕರೇ |
ನನೃತ್ಯತಾಂ ಮನ್ಮೃತಿಪೂರ್ವಮಙ್ಗೇ
ತಚ್ಛಕ್ತಿನೈಷಾऽಪಿಪೀಡದೇವ || ೩ ||
ಅಲ್ಲದೆ, ಆ ಹರಿ-ಹರರ ಸುತನು, (ಅವನಿಪಾಲಮಸ್ಕರೇ ಧರಾವತಾರಃ) ರಾಜವಂಶದಲ್ಲಿ ಭೂಮಿಯಲ್ಲಿ ಅವತರಿಸಿ, (ದ್ವಾದಶವರ್ಷಸಂಯಮಂ ಸುಪಾಲ್ಯತಾಮ್) ಆತನಿಂದ ೧೨ ವರ್ಷಗಳ ಕಾಲ ಇಂದ್ರಿಯನಿಗ್ರಹ ಹಾಗೂ ಮನಃಸಂಯಮ ಸಹಿತವಾದ ಬ್ರಹ್ಮಚರ್ಯವು ಚೆನ್ನಾಗಿ ಪಾಲಿಸಲ್ಪಡಬೇಕು. (ಮತ್-ಮೃತಿಪೂರ್ವಂ) ನನ್ನನ್ನು ಕೊಲ್ಲುವ ಮೊದಲು, ನನ್ನ ಮರಣಕ್ಕೆ ಮುಂಚೆ, (ಅಙ್ಗೇ ನನೃತ್ಯತಾಮ್) ನನ್ನ ಶರೀರದ ಮೇಲೆ ಆತನು ನರ್ತಿಸಬೇಕು. (ತತ್-ಶಕ್ತಿನಾ ಏವ ಏಷಾ ಅಪಿಪೀಡತ್) ಈ ರೀತಿಯ ವರಬಲದಿಂದಲೇ ಆ ಮಹಿಷಿಯೆಂಬ ದಾನವಿಯು ಲೋಕವನ್ನೆಲ್ಲ ಪೀಡಿಸಿದಳು.
ಹರೇಣ ಮೋಹಿನ್ಯವತಾರಗರ್ಭೇ
ಹರೌ ಪ್ರಜಾತೋ ಮಣಿಕಣ್ಠನಾಮಾ |
ಸ ಉತ್ತರಾಯಾಂ ವರಫಲ್ಗುಣೇ ತಥಾ
ಸುಪೌರ್ಣಮೀಪುಣ್ಯದಿನೇ ಪ್ರಸೂತಃ || ೪ ||
ಹೀಗಿರಲು, ಒಮ್ಮೆ ದೇವತೆಗಳು ದುರ್ವಾಸರನ್ನು ಸುರಪನು ತಿರಸ್ಕರಿಸಿದ ದೆಸೆಯಿಂದ ಸ್ವರ್ಗಲಕ್ಷ್ಮಿಯನ್ನು ಕಳಕೊಂಡು, ನಾಕದ ಸಕಲ ಸುವಸ್ತುಗಳ ಮರುಪ್ರಾಪ್ತಿಗೆ ಅಸುರರೊಂದಿಗೆ ಸೇರಿ ಕ್ಷೀರಸಾಗರಮಥನವನ್ನು ಗೈಯಲು, ಕೊನೆಗೆ ಬಂದ ಅಮೃತವನ್ನು ಹಂಚುವುದಕ್ಕೋಸ್ಕರ ವಿಷ್ಣುವು ಅಸುರಮೋಹನಕ್ಕಾಗಿ ಮೋಹಿನಿಯಾಗಿ ಅವತರಿಸಿದ ಬಳಿಕ, ಶಿವನು ಆಕೆಯ ಸೌಂದರ್ಯಕ್ಕೆ ಮನಸೋತು, (ಹರೇಣ) ಆ ಹರನಿಂದ, (ಮೋಹಿನ್ಯವತಾರಗರ್ಭೇ ಹರೌ) ಮೋಹಿನಿಯೆಂಬ ಹರಿಯ ಅವತಾರದ ಗರ್ಭದಲ್ಲಿ, (ಮಣಿಕಣ್ಠನಾಮಾ) ಹುಟ್ಟುವಾಗಲೇ ಕೊರಳಲ್ಲಿ ಮಣಿಹಾರವನ್ನು ಧರಿಸಿ ಮಣಿಕಂಠನೆನಿಸಿದ ಹರಿಹರ ಅಯ್ಯಪ್ಪ ಸ್ವಾಮಿಯು, (ಪ್ರಜಾತಃ) ಅವತರಿಸಿದನು. (ಸಃ) ಆತನು, (ವರಫಲ್ಗುಣೇ) ಶ್ರೇಷ್ಠವಾದ ಫಾಲ್ಗುಣಮಾಸದಲ್ಲಿ, (ತಥಾ, ಸುಪೌರ್ಣಮೀ-ಪುಣ್ಯದಿನೇ ಉತ್ತರಾಯಾಂ) ಅಂತೆಯೇ, ಪುಣ್ಯತಮವಾದ ಹುಣ್ಣಿಮೆಯ ತಿಥಿಯಲ್ಲಿ, ಉತ್ತರಾನಕ್ಷತ್ರದಲ್ಲಿ, (ಪ್ರಸೂತಃ) ಜನಿಸಿದನು.
ಪಾಂಡ್ಯಾನ್ವಯಸ್ಥೋ ನೃಪರಾಜವರ್ಯೋ
ಸಶೇಖರಃ ಪಂದಲರಾಜ್ಯನೇತಾ |
ಸುಪುತ್ರಹೀನಃ ಶಿವದತ್ತಪುತ್ರಕಂ
ಸ ಆಪ ಪಂಪಾತಟದೇಶಶಾಯಿನಮ್ || ೫ ||
(ಪಾಂಡ್ಯಾನ್ವಯಸ್ಥಃ) ಪಾಂಡ್ಯರಾಜನ ಕುಲದವನಾದ, (ನೃಪರಾಜವರ್ಯಃ, ಸಶೇಖರಃ) ರಾಜಶೇಖರನೆಂಬ ನೃಪತಿಯು, (ಪಂದಲರಾಜ್ಯನೇತಾ) ಪಂದಲವೆಂಬ ರಾಜ್ಯವನ್ನಾಳುತ್ತಿದ್ದನು. (ಸುಪುತ್ರಹೀನಃ) ಅವನಿಗೆ ಸಂತಾನವಿರಲಿಲ್ಲ. (ಶಿವದತ್ತಪುತ್ರಕಂ ಪಂಪಾತಟದೇಶಶಾಯಿನಮ್) ಪರಶಿವನು ಒಲಿದು ಅನುಗ್ರಹಿಸಿದ ಶಿಶುವನ್ನು ಪಂಪಾತೀರದಲ್ಲಿ, (ಸಃ, ಆಪ) ಆತನು ಪಡೆದನು.
ಗುರೋಃ ಸುತಂ ದೃಷ್ಟಿವಚಾಂಸಿ ದತ್ತವಾನ್
ವಿರಾಜಮಾನಃ ಪ್ರಭುಲಕ್ಷಣೈಃ ಸಹ |
ರಾಜ್ಞೀಸುತೋ ರಾಜರಾಜನ್ ಬಭೂವ
ಚಕಾರ ಮಂತ್ರೀ ಕಪಟಂ ಸಹಾಭ್ಯಾಮ್ || ೬ ||
ಅಂತಹ ಮಣಿಕಂಠನು ಎಳವೆಯಲ್ಲೇ ತನ್ನ ಮಹಿಮೆಯನ್ನು ತೋರಿದನು. (ಗುರೋಃ ಸುತಂ) ತನಗೆ ವಿದ್ಯೆನೀಡಿದ ಗುರುವಿನ ಮಗನು ಕುರುಡನೂ ಮೂಗನೂ ಆಗಿದ್ದರಿಂದ ಆತನಿಗೆ, (ದೃಷ್ಟಿವಚಾಂಸಿ ದತ್ತವಾನ್) ದೃಷ್ಟಿಶಕ್ತಿಯನ್ನೂ, ಮಾತನಾಡುವ ಶಕ್ತಿಯನ್ನೂ ಅನುಗ್ರಹಿಸಿದನು. (ಪ್ರಭುಲಕ್ಷಣೈಃ ಸಹ ವಿರಾಜಮಾನಃ) ಬೆಳೆಬೆಳೆಯುತ್ತಿದ್ದಂತೆಯೇ ಸಕಲ ರಾಜಲಕ್ಷಣಗಳಿಂದ ಸುಶೋಭಿತನಾಗಿ ಕಂಗೊಳಿಸುತ್ತಿದ್ದನು. (ರಾಜ್ಞೀಸುತಃ, ರಾಜರಾಜನ್ ಬಭೂವ) ಬಳಿಕ, ಪಂದಳರಾಜನ ಪತ್ನಿಗೆ ಔರಸಪುತ್ರನೋರ್ವ ಜನಿಸಿ, 'ರಾಜರಾಜನ್ 'ಎಂಬ ನಾಮಾಂಕಿತನಾದನು. (ಮಂತ್ರೀ, ಆಭ್ಯಾಂ ಸಹ ಕಪಟಂ ಚಕಾರ) ಹೀಗಿರಲೊಂದುದಿನ, ಮಂತ್ರಿಯು ಈ ರಾಜಪತ್ನೀ ಹಾಗೂ ರಾಜರಾಜನ್ ರನ್ನು ಬಳಸಿಕೊಂಡು ಅಧಿಕಾರದಾಸೆಯಿಂದ ರಾಜನಿಗೆ ಹಾಗೂ ಹರಿಹರನಿಗೆ ಮೋಸಮಾಡುತ್ತಾನೆ.
ವಧಾಯ ತಸ್ಯ ಪ್ರಭುತಾ ಸುತಸ್ಯ
ತದಾಹಮೇವ ಪ್ರಭವಾಮಿ ಯನ್ತಾ |
ಸ್ವಶೀರ್ಷಶೂಲಂ ಭಿಷಗುಕ್ತಮೌಷಧಂ
ನಿಪೀಯ ವೃಂಜ್ಯಾಮಿತಿ ರಾಜಪತ್ನೀ || ೭ ||
(ತಸ್ಯ ವಧಾಯ) ಮಣಿಕಂಠನನ್ನು ಕೊಲ್ಲಿಸಲು, (ಸುತಸ್ಯ ಪ್ರಭುತಾ) ರಾಣಿಯ ಹೊಟ್ಟೆಯಲ್ಲೇ ಹುಟ್ಟಿದ ಮಗನಾದ ರಾಜರಾಜನ್ ಗೆ ಪ್ರಭುತ್ವ ದೊರಕಲು, (ತದಾ, ಅಹಮ್ ಏವ ಯನ್ತಾ ಪ್ರಭವಾಮಿ) ಆಗ ನಾನೇ ರಾಜನನ್ನು ನಿಯಂತ್ರಿಸಬಲ್ಲೆನೆಂದು ಯೋಚಿಸಿದ ಮಂತ್ರಿಯ ದುರ್ಬೋಧನೆಯಂತೆ, (ರಾಜಪತ್ನೀ) ರಾಣಿಯು, (ಸ್ವಶೀರ್ಷಶೂಲಂ) ತನಗೆ ಅತಿಯಾಗಿ ತಲೆನೋವಿದೆಯೆಂದೂ, (ಭಿಷಗುಕ್ತಮ್ ಔಷಧಂ ನಿಪೀಯ ವೃಂಜ್ಯಾಮಿ ಇತಿ) ಅದಕ್ಕೆ ರಾಜವೈದ್ಯರು ಹುಲಿಯ ಹಾಲೇ ಔಷಧವೆಂದಿರುವರೆಂದೂ, ಅದನ್ನು ಕುಡಿದರೆ ಮಾತ್ರ ನನ್ನ ಶಿರೋವೇದನೆಯು ಪರಿಹಾರವಾಗುವುದೆಂದು ರಾಜನಲ್ಲಿ ನಿವೇದಿಸುತ್ತಾಳೆ.
ಸ್ವಮಾತೃಸೌಖ್ಯಂ ಸುವಿಚಿಂತ್ಯ ಶಾಂಕರೋ
ವ್ಯಾಘ್ರಸ್ಯ ದುಗ್ಧಂ ಸಮವಾಪ್ತುಮೇತಿ |
ವನಂ, ಸುರಾರ್ತ್ಯಾ ಮಹಿಷಿಂ ಜಘಾನ
ಸುವಿಗ್ರಹೋ ಭಾರ್ಗವರಾಮದತ್ತಃ || ೮ ||
(ಶಾಂಕರಃ) ಶಂಕರಸುತನಾದ ಹರಿಹರನು, (ಸ್ವಮಾತೃಸೌಖ್ಯಂ ಸುವಿಚಿಂತ್ಯ) ತನ್ನ ಮಲತಾಯಿಯ ಸುಖವನ್ನು ಕುರಿತು ಮನದಲ್ಲಿ ಚೆನ್ನಾಗಿ ಯೋಚಿಸಿ, (ವ್ಯಾಘ್ರಸ್ಯ ದುಗ್ಧಂ ಸಮವಾಪ್ತುಂ ವನಮ್ ಏತಿ) ಹುಲಿಯ ಹಾಲನ್ನು ಪಡೆಯಲು ಕಾಡಿಗೆ ಹೋಗುತ್ತಾನೆ. ಅಲ್ಲಿ, (ಸುರಾರ್ತ್ಯಾ) ದೇವತೆಗಳು ಆತನನ್ನು ಪ್ರಾರ್ಥಿಸಿದಾಗ, (ಮಹಿಷಿಂ ಜಘಾನ) ಲೋಕಪೀಡಕಳಾಗಿದ್ದ ಮಹಿಷಿಯನ್ನು ಕೊಲ್ಲುತ್ತಾನೆ. ಬಳಿಕ, ಹರಿಹರನ ಆಜ್ಞೆಯಂತೆ ಇಂದ್ರಾದಿದೇವತೆಗಳು ಹುಲಿಗಳಾಗಿ, ಅವನ್ನೇರಿ ಹರಿಹರನು ಊರಿಗೆ ಬಂದು ಮಾತೆಯನ್ನು ಸಂತೋಷಪಡಿಸಿ, ತನ್ನ ಅವತಾರಕಾರ್ಯವು ನೆರವೇರಿತೆಂದೂ, ರಾಜರಾಜನಿಗೇ ಪಟ್ಟಗಟ್ಟಿ, ತಂದೆಯ ಬೇಡಿಕೆಯಂತೆ, ಬಾಣ ಬಿಟ್ಟಲ್ಲಿ, ಶಬರಿಮಲೆಯ ಮೇಲೆ, (ಭಾರ್ಗವರಾಮದತ್ತಃ, ಸುವಿಗ್ರಹಃ) ಸಾಕ್ಷಾತ್ ಪರಶುರಾಮನಿಂದ ಆತನ ಸುಂದರವಾದ ವಿಗ್ರಹವು ಪ್ರತಿಷ್ಠಾಪಿತವಾಗಿ ಹರಿಹರಮಂದಿರವಾಗಿ ಬೆಳಗಿ, ಇಂದಿಗೂ ಲಕ್ಷಾಂತರ ಭಕ್ತರ ಆಶೋತ್ತರಗಳನ್ನು ಈಡೇರಿಸುವ ದಿವ್ಯಕ್ಷೇತ್ರವಾಗಿ ಕಂಗೊಳಿಸುತ್ತಿರುವುದು.
೩೦. ಕುಮಾರಸ್ತುತಿಪಞ್ಚಕಮ್
(ಭುಜಂಗಪ್ರಯಾತಂ ಚತುರ್ಭಿರ್ಯಕಾರೈಃ)
ಕುಮಾರಂ ಗುಹಂ ಕಾರ್ತಿಕೇಯಂ ಸುರೇಶಂ
ಮಹಾದೇವಸೂನುಂ ಮಹಾಗೌರಿಪುತ್ರಮ್ ।
ಗಣೇಶಾನುಜಂ ವಿಶ್ವವನ್ದ್ಯಂ ಮಹೇಶಂ
ಸದಾ ಬಾಲರೂಪಂ ಸ್ಮರಾಮಿ ಸ್ಮರಾಮಿ ॥ ೧ ॥
(ಕುಮಾರಂ) ಶಿವಕುಮಾರನಾದ, (ಗುಹಂ) ಗುಹೆಯಲ್ಲಿ ತಪೋಮಗ್ನನಾಗಿ ಗುಹನೆನಿಸಿದ, (ಕಾರ್ತಿಕೇಯಂ) ಕೃತ್ತಿಕಾದೇವಿಯರಿಂದ ಸಲಹಲ್ಪಟ್ಟು ಕಾರ್ತಿಕೇಯನಾದ, (ಸುರೇಶಂ) ತಾರಕಾಸುರಸಂಹಾರಕಾಲದಲ್ಲಿ ದೇವತೆಗಳ ಸೇನಾನಿಯಾದ, (ಮಹಾದೇವಸೂನುಂ) ಮಹಾದೇವನಾದ ಶಂಕರನ ಔರಸಪುತ್ರನಾದ, (ಮಹಾಗೌರಿಪುತ್ರಂ) ಮಹಾಗೌರಿಯ, ಪಾರ್ವತಿಯ ಮಗನಾದ, (ಗಣೇಶಾನುಜಂ) ಮಹಾಗಣಪತಿಯ ತಮ್ಮನಾದ, (ವಿಶ್ವವನ್ದ್ಯಂ) ಜಗತ್ತಿಗೆಲ್ಲ ವಂದ್ಯನಾದ, ಪೂಜ್ಯನಾದ, (ಮಹೇಶಂ) ಸಕಲದೇವಗಣಗಳೊಡೆಯನಾದ, (ಬಾಲರೂಪಂ) ಬಾಲಕನ ರೂಪದಲ್ಲಿ ಕಂಗೊಳಿಸುವ ಷಣ್ಮುಖ ಸುಬ್ರಹ್ಮಣ್ಯದೇವನನ್ನು, (ಸದಾ ಸ್ಮರಾಮಿ ಸ್ಮರಾಮಿ) ಯಾವಾಗಲೂ ಸ್ಮರಿಸುತ್ತೇನೆ, ಧ್ಯಾನಿಸುತ್ತೇನೆ.
ಕುಮಾರಾದ್ರಿಸಾನೌ ವಸನ್ತಂ ಕುಮಾರಂ
ಕುಮಾರಾಖ್ಯಧಾರಾಸುತೀರಾಧಿವಾಸಮ್ ।
ಕುಮಾರಾಖ್ಯರುದ್ರಾತ್ಮಜಂ ಶಕ್ತಿಪುತ್ರಂ
ಕುಮಾರಂ ಭಜೇ ಕಾರ್ತಿಕೇಯಂ ಸದಾಽಹಮ್ ॥ ೨ ॥
(ಕುಮಾರಾದ್ರಿಸಾನೌ ವಸನ್ತಂ ಕುಮಾರಂ) ಕುಮಾರಪರ್ವತದ ತಪ್ಪಲಿನಲ್ಲಿ ನೆಲೆಸಿರುವ ಶಿವಸುತನಾದ, (ಕುಮಾರಾಖ್ಯಧಾರಾ-ಸುತೀರಾಧಿವಾಸಮ್) ಕುಮಾರಧಾರೆಯೆಂಬ ನದೀತೀರದಲ್ಲಿ ವಾಸವಾಗಿರುವ, (ಕುಮಾರಾಖ್ಯ-ರುದ್ರಾತ್ಮಜಂ ಶಕ್ತಿಪುತ್ರಂ) ರುದ್ರ-ಶಕ್ತಿಯರ ಸುತನಾಗಿ ಕುಮಾರನಾಮಾಂಕಿತನಾದ, (ಕಾರ್ತಿಕೇಯಂ ಕುಮಾರಂ ಸದಾ ಅಹಂ ಭಜೇ) ಕಾರ್ತಿಕೇಯನಾದ ಕುಮಾರಸುಬ್ರಹ್ಮಣ್ಯನನ್ನು ಯಾವಾಗಲೂ ನಾನು ಭಜಿಸುತ್ತೇನೆ.
ಭಜೇ ಗಾಙ್ಗಸೂನುಂ ಭಜೇ ವಹ್ನಿಸೂನುಂ
ಭಜೇ ಪಾರ್ವತೇಯಂ ಭಜೇ ಷಣ್ಮುಖಾಖ್ಯಮ್ ।
ಭಜೇ ಸ್ಕನ್ದನಾಮಪ್ರಜೋತ್ಪತ್ತಿಮೂಲಂ
ಮನೋರೋಗನಾಶಂ ಸುಚರ್ಮಾದಿಮೂಲಮ್ ॥ ೩ ॥
(ಗಾಙ್ಗಸೂನುಂ ಭಜೇ) ಶಿವವೀರ್ಯವನ್ನು ಗಂಗೆಯು ಧರಿಸಿದ್ದರಿಂದ ಗಾಂಗೇಯನೆಂಬ ಹೆಸರು ಪಡೆದ ಸುಬ್ರಹ್ಮಣ್ಯನನ್ನು ಭಜಿಸುತ್ತೇನೆ. (ವಹ್ನಿಸೂನುಂ ಭಜೇ) ಅಗ್ನಿಯೂ ಅದನ್ನು ಧರಿಸಿದ್ದರಿಂದ ಅಗ್ನಿಪುತ್ರನೆನಿಸಿದ ಕುಮಾರನನ್ನು ಭಜಿಸುತ್ತೇನೆ. (ಪಾರ್ವತೇಯಂ ಭಜೇ) ಪಾರ್ವತೀಸುತನಾದ ಗುಹನನ್ನು ಭಜಿಸುತ್ತೇನೆ. (ಷಣ್ಮುಖಾಖ್ಯಂ ಭಜೇ) ಷಣ್ಮುಖನೆಂಬ ಹೆಸರಿನ ಮಯೂರವಾಹನನನ್ನು ಭಜಿಸುತ್ತೇನೆ. (ಸ್ಕನ್ದನಾಮಪ್ರಜೋತ್ಪತ್ತಿಮೂಲಂ ಭಜೇ) ಸಂತಾನಕ್ಕೆ ಕಾರಣನಾದ ಸ್ಕಂದದೇವನನ್ನು ಭಜಿಸುತ್ತೇನೆ. (ಮನೋರೋಗನಾಶಂ ಸುಚರ್ಮಾದಿಮೂಲಮ್) ಮನೋರೋಗ, ಚರ್ಮರೋಗಗಳನ್ನು ನಿವಾರಿಸುವ ಸುಬ್ರಹ್ಮಣ್ಯನನ್ನು ಭಜಿಸುತ್ತೇನೆ.
ಭಜೇ ಬ್ರಹ್ಮರೂಪಂ ಭಜೇ ಕುಕ್ಕೆನಾಥಂ
ಭಜೇ ಸ್ವಾಮಿನಾಥಂ ಭಜೇ ಕುಕ್ಕುಟೇಶಮ್ ।
ಭಜಾಮೀಶಸೂನುಂ ಭಜೇ ನಾಗರಾಜಂ
ಮಹಾದೇವಬಾಲಂ ಸದಾಽಹಂ ಪ್ರಪದ್ಯೇ ॥ ೪ ॥
(ಬ್ರಹ್ಮರೂಪಂ ಭಜೇ) ಪರಬ್ರಹ್ಮಸ್ವರೂಪನಾದ ಕುಮಾರನನ್ನು ಭಜಿಸುತ್ತೇನೆ. (ಕುಕ್ಕೆನಾಥಂ ಭಜೇ) ಕುಕ್ಕೆಸುಬ್ರಹ್ಮಣ್ಯದ ಒಡೆಯನಾದ ಕುಮಾರಸ್ವಾಮಿಯನ್ನು ಭಜಿಸುತ್ತೇನೆ. (ಸ್ವಾಮಿನಾಥಂ ಭಜೇ) ದೇವಗಣಗಳ ಸ್ವಾಮಿಯಾಗಿ ಸ್ವಾಮಿನಾಥನೆನಿಸಿದ ಕುಮಾರನನ್ನು ಭಜಿಸುತ್ತೇನೆ. (ಕುಕ್ಕುಟೇಶಂ ಭಜೇ) ಕುಕ್ಕುಟೇಶನೆಂಬ ಕೀರ್ತಿಯುಳ್ಳ ಗುಹನನ್ನು ಭಜಿಸುತ್ತೇನೆ. (ಈಶಸೂನುಂ ಭಜಾಮಿ) ಈಶಪುತ್ರನನ್ನು ಭಜಿಸುತ್ತೇನೆ. (ನಾಗರಾಜಂ ಭಜೇ) ನಾಗರಾಜನಿಗೆ ವರವನ್ನಿತ್ತ, ನಾಗರೂಪದಿಂದ ಪೂಜಿತನಾದ ಗುಹನನ್ನು ಭಜಿಸುತ್ತೇನೆ. (ಮಹಾದೇವಬಾಲಂ ಸದಾ ಅಹಂ ಪ್ರಪದ್ಯೇ) ಮಹಾದೇವನ ಮಗನನ್ನು ಸದಾ ನಾನು ಶರಣುಹೊಂದುತ್ತೇನೆ.
(ನನಮಯಯಯುತೇಯಂ ಮಾಲಿನೀ ಭೋಗಿಲೋಕೈಃ)
ಶರವಣಭವದೇವಂ ಶಕ್ತಿಹಸ್ತಂ ಪ್ರಸನ್ನಂ
ನಿಜಗುರುವರಮೀಶಂ ವಲ್ಲಿನಾಥಂ ಚಮೂಪಮ್ ।
ಪರಗತಿವರಬೋಧಂ ಸರ್ಪರಾಜಂ ಮಯೂರಂ
ಅಗಣಿತಗುಣಧಾಮಂ ವಾರಿಮೂಲಂ ಪ್ರಪದ್ಯೇ ॥ ೫ ॥
(ಶರವಣಭವದೇವಂ) ಗಂಗಾತೀರದ ಜೊಂಡುಹುಲ್ಲಿನಲ್ಲಿ ಜನಿಸಿದ ದೇವನಾದ, (ಶಕ್ತಿಹಸ್ತಂ ಪ್ರಸನ್ನಂ) ಶಕ್ತ್ಯಾಯುಧವನ್ನು ಕೈಯಲ್ಲಿ ಧರಿಸಿದ, (ಪ್ರಸನ್ನಂ) ಪ್ರಸನ್ನವದನ / ನಗುಮೊಗದವನಾದ, (ನಿಜಗುರುವರಮ್, ಈಶಮ್) ಬ್ರಹ್ಮವಿದ್ಯೋಪದೇಶಕ್ಕೆ ನಿಜವಾದ ಗುರುಶ್ರೇಷ್ಠನಾದ, ಈಶ್ವರನಾದ, (ವಲ್ಲಿನಾಥಂ ಚಮೂಪಮ್) ಶ್ರೀವಲ್ಲಿಯ ಪತಿಯಾದ, ದೇವಸೇನಾನಿಯಾದ, (ಪರಗತಿವರಬೋಧಂ) ಹೆಚ್ಚಿನದಾದ ಪರಗತಿ / ಮೋಕ್ಷ / ಬ್ರಹ್ಮಾತ್ಮ ಜ್ಞಾನವನ್ನು ಬೋಧಿಸುವ, (ಸರ್ಪರಾಜಂ ಮಯೂರಂ) ನಾಗರಾಜನ ರೂಪಿನಿಂದಲೂ ಪೂಜಿತನಾದ, ನವಿಲನ್ನೇರಿ ಸಂಚರಿಸುವ, (ಅಗಣಿತಗುಣಧಾಮಂ, ವಾರಿಮೂಲಂ ಪ್ರಪದ್ಯೇ) ಅಸಂಖ್ಯ ಸದ್ಗುಣಗಳ ಗಣಿಯಾದ, ಜಲಮೂಲಕ್ಕೆ ಆಶ್ರಯನಾದ ಕುಮಾರಸುಬ್ರಹ್ಮಣ್ಯದೇವನನ್ನು ಆಶ್ರಯಿಸುತ್ತೇನೆ.
|| ಇತಿ ಶಮ್ ||
೩೧. ಪುಣಚಮಹಿಷಮರ್ದಿನೀಸ್ತೋತ್ರಮ್
ಮಹಿಷಮರ್ದಿನಿ ಶಾನ್ತರೂಪಿಣಿ ಪುಣಚಪುರನಿಲಯೇ
ತುಹಿನಪರ್ವತರಾಜನಂದಿನಿ ಪುಣಚಪುರನಿಲಯೇ |
ವಿಹಿತಕರ್ಮ-ಸ್ವಧರ್ಮಕಾರಿಣಿ ಪುಣಚಪುರನಿಲಯೇ
ಪಾಹಿ ಶಾಂಭವಿ ಕೃಷ್ಣಸೋದರಿ ಪುಣಚಪುರನಿಲಯೇ || ೧ ||
ಹೇ ಮಹಿಷಮರ್ದಿನಿಯೆ! ಶಾಂತಸ್ವರೂಪಿಣಿಯೆ! ಪುಣಚವೆಂಬ ಪುರದಲ್ಲಿ ತನ್ನ ಮನೆಯನ್ನು ಮಾಡಿಕೊಂಡಿರುವವಳೆ! ಹಿಮವತ್ಪರ್ವತರಾಜನ ಮಗಳೆ! ಪುಣಚವೆಂಬ ದೇಹದಲ್ಲಿ ನೆಲೆಸಿರುವವಳೆ! ಮಾಡಬೇಕಾದ ಕರ್ತವ್ಯಕರ್ಮ ಹಾಗೂ ತನ್ನ ವರ್ಣಾಶ್ರಮಕುಟುಂಬಗ್ರಾಮರಾಷ್ಟ್ರವೃತ್ತಿಪ್ರವೃತ್ತ್ಯಾದಿ ಸ್ವ-ಧರ್ಮಗಳನ್ನು ಆಚರಿಸುವಂತೆ ಪ್ರೇರಿಸಿ ಮಾಡಿಸುವವಳೆ! ಹೇ ಪುಣಚಕ್ಷೇತ್ರನಿವಾಸಿನಿಯೆ! ಶಂಭುಪತ್ನಿಯಾದ ಶಾಂಭವಿಯೆ! ಕೃಷ್ಣನ ಸೋದರಿಯಾದ ದುರ್ಗಾಸ್ವರೂಪಿಣಿಯೆ! ಪುಣಚದ ಗ್ರಾಮದೇವತೆಯೆ! (ನೀನು) ನಮ್ಮೆಲ್ಲರನ್ನು ಪಾಲಿಸು, ರಕ್ಷಿಸು.
ಜನನಿ ಶಂಕರಿ ರುದ್ರಕಿಂಕರಿ ಪುಣಚಪುರನಿಲಯೇ
ಮನವಿನೋದಿನಿ ವಿನುತತೋಷಿಣಿ ಪುಣಚಪುರನಿಲಯೇ |
ಮನವಿಶೋಧಿನಿ ದೌಷ್ಟ್ಯಮರ್ದಿನಿ ಪುಣಚಪುರನಿಲಯೇ
ಘನಮಹಿತಪುರುಷಾರ್ಥದಾಯಿನಿ ಪುಣಚಪುರನಿಲಯೇ || ೨ ||
ಹೇ ಜಗಜ್ಜನನಿಯೆ! ಶಂಕರನ ಅರ್ಧಾಂಗಿನಿಯಾದ ಶಂಕರಿಯೆ! ಪತ್ನಿಯಾಗಿ ಶಿವನ ಸೇವೆಯನ್ನು ನಿತ್ಯವೂ ಗೈಯುವವಳೆ! ತನ್ನ ಭಜಕರ ಮನಸ್ಸಿಗೆ ಸದಾನಂದದಾಯಿನಿಯೆ! ಅವರ ಮನವನ್ನು ಶುದ್ಧೀಕರಿಸುವವಳೆ! ದುಷ್ಟಸ್ವಭಾವವನ್ನು ನಿರ್ಮೂಲನಗೊಳಿಸುವವಳೆ! ಮನುಷ್ಯನ ೪ ಪುರುಷಾರ್ಥಗಳಾದ ಧರ್ಮ-ಅರ್ಥ-ಕಾಮ-ಮೋಕ್ಷಗಳಲ್ಲಿ ಶ್ರೇಷ್ಠವಾದ ಮೋಕ್ಷವನ್ನೇ ದಯಪಾಲಿಸುವವಳೆ! (ನಿನಗೆ ಶರಣು.)
ಚಂಡದೈತ್ಯವಿನಾಶಕಾರಿಣಿ ಪುಣಚಪುರನಿಲಯೇ
ಮುಂಡದಾನವಹನನಕಾರಿಣಿ ಪುಣಚಪುರನಿಲಯೇ |
ಚಂಡಿಕಾಯಾಗಾದಿಸೇವಿತ-
ಪುಣಚಪುರನಿಲಯೇ
ಶುಂಡಮುಖ-ಷಣ್ಮುಖಾಂಬೇ ಶ್ರೀ-ಪುಣಚಪುರನಿಲಯೇ || ೩ ||
ಚಂಡಮುಂಡರನ್ನು ಸಂಹರಿಸಿದವಳೆ! ಹೀಗೆ ಚಂಡಿಕೆಯೆನಿಸಿ, ಚಂಡಿಕಾಯಾಗಾದಿಗಳಿಂದ ಸೇವಿತಳಾದವಳೆ! ಆನೆಸೊಂಡಿಲುಳ್ಳ ಮುಖದ ಗಣಪತಿ ಹಾಗೂ ಆರ್ಮೊಗನಾದ ಶಿವಕುಮಾರ ಸುಬ್ರಹ್ಮಣ್ಯ— ಇವರ ತಾಯಿಯೆ! ಶ್ರೀಕ್ಷೇತ್ರ ಪುಣಚದಲ್ಲಿ ಸಾನ್ನಿಧ್ಯವಹಿಸಿರುವವಳೆ! (ನಿನಗಿದೋ ಅನಂತ ನಮನಗಳು.)
ಸುಂದರಾನನಯುಕ್ತರೂಪಿಣಿ ಪುಣಚಪುರನಿಲಯೇ
ಮಂದಿರಾಶ್ರಿತಸಕಲಸೇವಕಭಾಗ್ಯದೇ ಸುಭಗೇ |
ಚಂದ್ರಶೇಖರವಲ್ಲಭೇ ತ್ರೈಲೋಕ್ಯಮಂಗಲದೇ
ನಂದನಂದನನಿತ್ಯಸೇವಿತ-ಪುಣಚಪುರನಿಲಯೇ || ೪ ||
ಸುಂದರವಾದ ಮುಖದಿಂದ ಕೂಡಿದ ರೂಪುಳ್ಳವಳೆ! ನಿನ್ನ ದೇವಳವನ್ನಾಶ್ರಯಿಸಿದ ಸಕಲ ಭಕ್ತರಿಗೂ ಸೌಭಾಗ್ಯಪ್ರದಳಾದ ಲಲಿತಾತ್ರಿಪುರಸುಂದರಿಯೆ! ಚಂದ್ರನನ್ನು ಶುರದಲ್ಲಿ ಧರಿಸಿ ಚಂದ್ರಶೇಖರನಾದ ಪರಶಿವನ ವಲ್ಲಭೆಯೆ! ಮೂರ್ಲೋಕಕ್ಕೂ ಮಂಗಲಪ್ರದಳೆ! ನಂದನಂದನನಾದ ಕೃಷ್ಣನಿಂದ ನಿತ್ಯವೂ ಸೇವಿತಳಾದ ದುರ್ಗಾಂಬೆಯೆ! ಪುಣಚದ ಮಹಿಷಾಸುರಮರ್ದಿನಿಯೆ!
ಸತ್ಯಶಂಕರಿ ಸತ್ಯನಾರಾಯಣಿ ಪರಾಶಕ್ತೇ
ನಿತ್ಯತಾರುಣ್ಯಾದಿಶೋಭಿತ-ಪುಣಚಪುರನಿಲಯೇ |
ಸ್ತುತ್ಯಕಾರುಣಿಕಾದಿಶೀಲೇ ಪುಣಚಪುರನಿಲಯೇ
ನಿತ್ಯಬುದ್ಧವಿಶುದ್ಧಪರಮಾತ್ಮಾತ್ಮಸುಖದಾತ್ರಿ || ೫ ||
ಸತ್ಯಶಂಕರಿಸ್ವರೂಪಿಣೆಯೆ! ಸತ್ಯನಾರಾಯಣಿಸ್ವರೂಪಿಣಿಯೆ! ಆದಿಪರಾಶಕ್ತಿಯೆ! ನಿತ್ಯಯುವತಿಯಾಗಿರುವವಳೆ! ಅತ್ಯಂತವಾಗಿ ಸ್ತುತಿಸುವವರಿಗೆ ಅನಂತಕರುಣಾಸಮುದ್ರಳೆ! ನಿತ್ಯಳೆ! ಜ್ಞಾನಸ್ವರೂಪಿಣೆಯೆ! ಸದಾ ಪರಿಶುದ್ಧವಾದ ಪರಮಾತ್ಮಸ್ವರೂಪಿಣಿಯೆ! ಆತ್ಮಾನಂದದ, ಬ್ರಹ್ಮಾನಂದದ, ಎಂದೂ ನಂದದ ಚಿರಸುಖವನ್ನೀಯುವ ಸಚ್ಚಿದಾನಂದಸ್ವರೂಪಿಣೆಯೆ! (ನಿನ್ನನ್ನೇ ನಾನು ಆಶ್ರಯಿಸುತ್ತೇನೆ.)
|| ಇತಿ ಶಮ್ ||
Comments
Post a Comment