Posts

Showing posts from September, 2023

ಸ್ತೋತ್ರಸಂಹಿತಾ ೫.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

  ಶ್ರೀನಾರಾಯಣಾಷ್ಟಾಕ್ಷರಸ್ತೋತ್ರಮ್   (ಅನುಷ್ಟುಪ್ ಛಂದ:) ಓಂ ಕಾರನಾದಮೂಲಾಯ | ಪ್ರಣವಾಕ್ಷರರೂಪಿಣೇ || ವರನಿರ್ಗುಣತತ್ತ್ವಾಯ | ನಮೋ ನಾರಾಯಣಾಯ ತೇ || ೧ || ಓಂ ಕಾರನಾದಮೂಲಾಯ— ಓಂಕಾರನಾದಕ್ಕೆ ಮೂಲಕಾರಣಸ್ವರೂಪನಾದ ,   ಪ್ರಣವಾಕ್ಷರರೂಪಿಣೇ— ಹಾಗೆಯೇ, ಪ್ರಣವವಾಚ್ಯವಾದ ಓಂಕಾರಸ್ವರೂಪಿಯೂ ಆದ ,  ವರನಿರ್ಗುಣತತ್ತ್ವಾಯ— ಶ್ರೇಷ್ಠವಾದ ಸತ್ತ್ವ-ರಜ-ತಮರಹಿತಸ್ವರೂಪನಾದ , ನಾರಾಯಣಾಯ— ನಾರಾಃ= ನೀರು,ಮೋಕ್ಷ; ಅಯನ= ಮನೆ,ಆಶ್ರಯಸ್ಥಾನ; ನೀರಲ್ಲೇ/ಕ್ಷೀರಸಾಗರದಲ್ಲೇ ವಾಸವಾಗಿರುವ/ಶೇಷತಲ್ಪದಲ್ಲಿ ಮಲಗಿರುವ,ಮೋಕ್ಷಮೂಲನಾದ ಶ್ರೀಮನ್ನಾರಾಯಣನೇ!,   ತೇ ನಮಃ— ನಿನಗೆ ನಮಸ್ಕಾರ. ನ ರಸಿಂಹಾಯ ದತ್ತಾಯ | ಪ್ರಹ್ಲಾದವರದಾಯ ಚ || ಮತ್ಸ್ಯೇಂದ್ರನಾಥವಂದ್ಯಾಯ | ನಮೋ ನಾರಾಯಣಾಯ ತೇ || ೨ || ಪ್ರಹ್ಲಾದವರದಾಯ ನ ರಸಿಂಹಾಯ— ಶ್ರೀಹರಿಯ ಭಕ್ತನೂ,ದೇವರ್ಷಿ ನಾರದರಿಂದ ಗರ್ಭಸ್ಥ ಶಿಶುವಾಗಿದ್ದಾಗಲೇ ತಾಯಿ ಕಯಾದುವಿಗೆ ಹೇಳಿದ ಹರಿಭಕ್ತಿಯುಕ್ತಕಥೆಯನ್ನು ಕೇಳಿ, ಶ್ರೀಹರಿಮಂತ್ರೋಪದೇಶ ಪಡೆದವನೂ, (ವೈಕುಂಠದ್ವಾರಪಾಲಕರಾದ ಜಯ-ವಿಜಯರು ನಿತ್ಯಬ್ರಹ್ಮಚಾರಿಗಳೂ,ಬ್ರಹ್ಮಮಾನಸಪುತ್ರರೂ ಆದ ಸನಕ-ಸನಂದನ-ಸನತ್ಕುಮಾರ ಹಾಗೂ ಸನತ್ಸುಜಾತರ ಶಾಪಕ್ಕೆ ತುತ್ತಾಗಿ ಕೃತಯುಗದಲ್ಲಿ  ಹಿರಣ್ಯಕಶಿಪು-ಹಿರಣ್ಯಾಕ್ಷರಾಗಿ ಜನಿಸಿದರು.)ಹಿರಣ್ಯಕಶಿಪುವಿನ ಮಗನೂ ಆದ ಪ್ರಹ್ಲಾದನಿಗೆ (ಮುಂದೆ ಮಂತ್ರಾಲಯದ ರಾಘವೇಂದ್ರಸ್ವಾಮಿಗಳಾಗಿ ಅವತರಿಸಿದವನೂ ಅವನೇ ಎನ್...