ದೇವೀಭಾಗವತಪುರಾಣಾನ್ತರ್ಗತ ಆದಿಪರಾಶಕ್ತಿಸ್ತೋತ್ರಗಳು देवीभागवतपुराणान्तर्गत-आदिपराशक्तिस्तोत्राणि
ದೇವೀಭಾಗವತಪುರಾಣಾನ್ತರ್ಗತ ಆದಿಪರಾಶಕ್ತಿಸ್ತೋತ್ರಗಳು
देवीभागवतपुराणान्तर्गत-आदिपराशक्तिस्तोत्राणि
॥ ॐ श्रीगुरुगणपतिभ्यां नमः ॥
॥ उमामहेश्वरः प्रसीदतु ॥
॥ ಓಂ ಶ್ರೀಗುರುಗಣಪತಿಭ್ಯಾಂ ನಮಃ ॥
॥ ಉಮಾಮಹೇಶ್ವರಃ ಪ್ರಸೀದತು ॥
अकारण-कृपानिधिं, सगुण-निर्गुण-कारिणीं
नतार्ति-हरण-क्षमां, प्रकृतिम्-आदिशक्तिं पराम् ।
गुण-त्रय-मयीं दया,-रस-सुधां जगन्मातरं
महेश्वर-मनः-प्रियां, महिष-मर्दिनीम्-आश्रये ॥१।१।ध्यानश्लोकः॥
ಅಕಾರಣ-ಕೃಪಾನಿಧಿಂ, ಸಗುಣ-ನಿರ್ಗುಣ-ಕಾರಿಣೀಂ
ನತಾರ್ತಿ-ಹರಣ-ಕ್ಷಮಾಂ, ಪ್ರಕೃತಿಮ್-ಆದಿಶಕ್ತಿಂ ಪರಾಮ್ ।
ಗುಣ-ತ್ರಯ-ಮಯೀಂ ದಯಾ,-ರಸ-ಸುಧಾಂ ಜಗನ್ಮಾತರಂ
ಮಹೇಶ್ವರ-ಮನಃ-ಪ್ರಿಯಾಂ, ಮಹಿಷ-ಮರ್ದಿನೀಮ್-ಆಶ್ರಯೇ ॥೧।೧।ಧ್ಯಾನಶ್ಲೋಕಃ॥
ಯಾವುದೇ ಕಾರಣವಿಲ್ಲದೆಯೇ ಕೃಪಾಮೃತವೆಂಬ ದಯಾಸಾಗರವನ್ನೇ ತೋರುವ, ಸತ್ತ್ವ-ರಜ-ತಮಗಳೆಂಬ ತ್ರಿಗುಣಾತ್ಮಕವಾದ ನಾಮರೂಪ ಪ್ರಪಂಚವನ್ನುಂಟುಮಾಡುವ ಹಾಗೂ ನಿರ್ಗುಣಳೂ ತ್ರಿಗುಣಾತೀತಳೂ ಆಗಿ ಪರಬ್ರಹ್ಮಸ್ವರೂಪಳೂ ಕೂಡ ಆಗಿರುವ, ತನ್ನನ್ನು ನಮಿಸುವವರ ಕಷ್ಟ-ದುಃಖ-ಅರ್ತಿಗಳನ್ನು ನಿವಾರಿಸುವ ಕ್ಷಮತೆಯುಳ್ಳ, ಪ್ರಕೃತಿಸ್ವರೂಪಿಣಿಯಾಗಿ ಪುರುಷಸ್ವರೂಪಿಯಾದ ಮಹೇಶ್ವರನ ಮಡದಿಯಾದ / ಪ್ರಿಯೆಯಾದ, ಮಹಿಷಾಸುರಮರ್ದಿನಿಯಾದ, ಜಗನ್ಮಾತೆಯಾದ, ಆದಿಪರಾಶಕ್ತಿಯನ್ನು ಆಶ್ರಯಿಸುತ್ತೇನೆ.
सर्व-चैतन्य-रूपां ताम्, आद्यां विद्यां च धीमहि ।
बुद्धिं या नः प्रचोदयात् ॥१।१।१॥
ಸರ್ವ-ಚೈತನ್ಯ-ರೂಪಾಂ ತಾಮ್, ಆದ್ಯಾಂ ವಿದ್ಯಾಂ ಚ ಧೀಮಹಿ ।
ಬುದ್ಧಿಂ ಯಾ ನಃ ಪ್ರಚೋದಯಾತ್ ॥೧।೧।೧॥
ಚೈತನ್ಯ / ಶಕ್ತಿಯ ಎಲ್ಲ ರೂಪಗಳೂ ಆಗಿರುವ, ಆದ್ಯಾಶಕ್ತಿಯೂ ಶ್ರೀವಿದ್ಯಾಸ್ವರೂಪೆಯೂ ಆದ ಆದಿಪರಾಶಕ್ತಿಯನ್ನು ಧ್ಯಾನಿಸೋಣ. ಯಾವ ಆಕೆಯು, ನಮ್ಮ ಬುದ್ಧಿಯನ್ನು ಸನ್ಮಾರ್ಗದಲ್ಲಿ ಪ್ರಚೋದಿಸಲಿ.
Comments
Post a Comment