विष्णुसहस्रनाम-नमस्कार-श्लोकभाष्यम्

ವಿಷ್ಣುಸಹಸ್ರನಾಮ-ನಮಸ್ಕಾರ-ಶ್ಲೋಕಭಾಷ್ಯಮ್

 विष्णुसहस्रनाम-नमस्कार-श्लोकभाष्यम्



ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |

ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ || ೧ ||


विश्वं विष्णुर्वषट्कारो भूतभव्यभवत्प्रभुः ।

भूतकृद्भूतभृद्भावो भूतात्मा भूतभावनः ॥ १ ॥


|| ಓಂ ವಿಶ್ವಸ್ಮೈ ನಮ ಓ೩ಮ್ || ೧ ||

|| ॐ विश्वस्मै नम ओ३म् ॥ १ ॥


ವಿಶ್ವಸ್ಮೈ ಸೃಷ್ಟಿಸಂಹರ್ತ್ರೇऽವಿತ್ರೇ ಪೂರ್ಣಾಯ ತೇ ನಮಃ |

ವಿರಾಜೇ ವಿಶ್ವವಪುಷೇ ಭೂಃಪಾಚ್ಚನ್ದ್ರಾರ್ಕಚಕ್ಷುಷೇ || ೧ || 


विश्वस्मै सृष्टिसंहर्त्रेऽवित्रे पूर्णाय ते नमः ।

विराजे विश्ववपुषे भूःपाच्चन्द्रार्कचक्षुषे ॥ १ ॥


ಹೇ ವಿಶ್ವನೆ ! ಎಲ್ಲವೂ ನೀನೆ.  ಸಮಸ್ತ ವಿಶ್ವವನ್ನು ಸೃಜಿಸಿ, ಸಲಹಿ, ಸಂಹರಿಸುವವನೆ ! ವಿಶ್ವವನ್ನೆಲ್ಲ ಸಂಪೂರ್ಣವಾಗಿ ತುಂಬಿರುವವನೆ ! ಪರಿಪೂರ್ಣನೆ ! ತೋರುವ ತೋರದಿರುವ ಎಲ್ಲವೂ ಆಗಿರುವವನೆ ! ಬ್ರಹ್ಮಾಂಡಕಾಯನಾಗಿ ಸೃಷ್ಟಿಯ ಸಮಷ್ಟಿಸೂಕ್ಷ್ಮಶರೀರವಾಗಿ ವಿರಾಜಮಾನನಾಗಿರುವ ವಿರಾಟ್ಪುರುಷನೆ ! ಭೂಮಿಯನ್ನೇ ತನ್ನ ಪಾದವಾಗಿ ಉಳ್ಳವನೆ ! ಚಂದ್ರ-ಸೂರ್ಯರನ್ನೇ ಕಣ್ಣುಗಳಾಗಿ ಮಾಡಿಕೊಂಡವನೆ ! ಹೇ ಶ್ರೀಮನ್ನಾದಿಲಕ್ಷ್ಮೀನಾರಾಯಣ ಮಹಾವಿಷ್ಣೋ ! ನಿನಗಿದೋ ನನ್ನ ಆತ್ಮೀಯ ಪ್ರೀತಿಪೂರ್ವಕ ಹಾರ್ದಿಕ ಮನಃಪೂರ್ವಕ ನಿಷ್ಕಲ್ಮಷ ಭಕ್ತಿಯ ಸಪ್ರೇಮ ಪ್ರಣಾಮಗಳು.


|| ಓಂ ವಿಷ್ಣವೇ ನಮ ಓ೩ಮ್ || ೨ ||

॥ ॐ विष्णवे नम ओ३म् ॥ २ ॥


 ವಿಷ್ಣವೇ ವ್ಯಾಪಿನೇऽಮುತ್ರ ನಮೋऽತ್ರಾಪಿ ವಿಶತ್ಯಥ |

ಅನ್ತರ್ಬಹಿಶ್ಚ ತತ್ಸರ್ವಂ ಪ್ರವಿಷ್ಟಂ ವ್ಯಾಪಕಂ ನುಮಃ || ೨ ||


विष्णवे व्यापिनेऽमुत्र नमोऽत्रापि विशत्यथ ।

अन्तर्बहिश्च तत्सर्वं प्रविष्टं व्यापकं नुमः ॥ २ ॥


ಹೇ ವಿಷ್ಣುವೆ ! "ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ " — ಇಹಪರಗಳೆರಡನ್ನೂ ವ್ಯಾಪಿಸಿ ಪ್ರವೇಶಿಸಿರುವವನೆ ! ಒಳಹೊರಗೆಲ್ಲವನ್ನೂ ವ್ಯಾಪಿಸಿ, ಎಲ್ಲವನ್ನೂ ಪ್ರವೇಶಿಸಿರುವ ನಿನ್ನನ್ನು ನುತಿಸುತ್ತೇವೆ. ನಿನಗೆ ನಮನಗಳು.


|| ಓಂ ವಷಟ್ಕಾರಾಯ ನಮ ಓ೩ಮ್ || ೩ ||

॥ ॐ वषट्काराय नम ओ३म् ॥ ३ ॥


 ವಷಟ್ಕಾರ ನಮಸ್ತೇऽಸ್ತು ವಶೀಕೃತಜಗತ್ತ್ರಯ |

ಷಾಡ್ಗುಣ್ಯಶ್ಚ ವಷಡ್ಯಜ್ಞೇ ಯಜ್ಞಭೋಕ್ತಾ ಚ ಕಾರಣಃ || ೩ ||


वषट्कार नमस्तेऽस्तु वशीकृतजगत्त्रय ।

षाड्गुण्यश्च वषड्यज्ञे यज्ञभोक्ता च कारणः ॥ ३ ॥


ಹೇ ವಷಟ್ಕಾರನೆ ! "ಜಗದ್ ವಶೇ ವರ್ತತೇದಂ ಕೃಷ್ಣಸ್ಯ ಸಚರಾಚರಮ್ " — ಮೂರುಲೋಕಗಳನ್ನೂ ತನ್ನ ವಶದಲ್ಲಿಟ್ಟುಕೊಂಡಿರುವವನೆ ! ಸಮಗ್ರವಾದ— ಐಶ್ವರ್ಯ / ಈಶ್ವರತ್ವ, ವೀರ್ಯ / ಪರಾಕ್ರಮ, ಯಶಸ್ಸು / ಕೀರ್ತಿ, ಶ್ರೀ / ಸಿರಿ ಸಂಪದ, ಜ್ಞಾನ ಮತ್ತು ವೈರಾಗ್ಯಗಳೆಂಬ ಷಡ್ ಗುಣ ಪರಿಪೂರ್ಣನೆ ! ಅಸ್ತಿ ಜಾಯತೇ ವರ್ಧತೇ ವಿಪರಿಣಮತೇ ಅಪಕ್ಷೀಯತೇ ವಿನಶ್ಯತಿ ಎಂಬ, ಜೀವರ ಷಡ್ ಭಾವ ವಿಕಾರಗಳಿಗೆ ಕಾರಣನಾದವನೆ ! ಅಗ್ನಿಹೋತ್ರದ ಪಂಚಮಂತ್ರಪೂರ್ವಕ ಆಹುತಿಗಳಲ್ಲಿ ಯಜ್ಞಭೋಕ್ತೃವೆಂಬ ಪಂಚಮರೂಪೀ ವಿಷ್ಣುವೆ !  ಯಜ್ಞದಲ್ಲಿ ವಷಟ್ ಕಾರ ಸ್ವರೂಪನೆ ! ಯಜ್ಞಸ್ವರೂಪನೆ ! ನಿನಗೆ ನಮಸ್ಕಾರವಿರಲಿ.


|| ಓಂ ಭೂತಭವ್ಯಭವತ್-ಪ್ರಭವೇ ನಮ ಓ೩ಮ್ || ೪ ||

॥ ॐ भूतभव्यभवत्प्रभवे नम ओ३म् ॥ ४ ॥


ಭೂತಭವ್ಯಭವತ್ಪ್ರಭುಂ ವನ್ದೇ ಕಾಲತ್ರಯೇಶ್ವರಮ್ |

 ಕಾಲಾತೀತಂ ಕಾಲಕಾಲಂ ನಿತ್ಯಂ ಸತ್ಯಂ ನಮಾಮ್ಯಹಮ್ || ೪ ||


भूतभव्यभवत्प्रभुं वन्दे कालत्रयेश्वरम् ।

कालातीतं कालकालं नित्यं सत्यं नमाम्यहम् ॥ ४ ॥


ಹೇ ಭೂತ-ಭವ್ಯ-ಭವತ್-ಪ್ರಭುವೆ ! ಭೂತ ಭವಿಷ್ಯದ್ ವರ್ತಮಾನವೆಂಬ ೩ ಕಾಲಗಳ ಈಶ್ವರನೆ ! ತ್ರಿಕಾಲಾತೀತನೆ ! ಕಾಲಕ್ಕೂ ಕಾಲನಾದ ಕಾಲವನ್ನೂ ಮೀರಿದ ನಿತ್ಯವೂ ಸತ್ಯವೂ ಆದ ಪರಾತ್ಪರತತ್ತ್ವವೆ ! ನಿನ್ನನ್ನು ನಾನು ವಂದಿಸುತ್ತೇನೆ, ನಮಿಸುತ್ತೇನೆ.


|| ಓಂ ಭೂತಕೃತೇ ನಮ ಓ೩ಮ್ || ೫ ||

॥ ॐ भूतकृते नम ओ३म् ॥ ५ ॥


ಭೂತಕೃತೇ ನಮಸ್ತುಭ್ಯಂ ಯಃ ಕರೋತಿ ಕೃಣೋತಿ ಚ |

ಸರ್ವಾನಾದೌ ಪ್ರಪದ್ಯೇ ತಂ ಜೀವಾನನ್ತೇ ಪರಾತ್ಪರಮ್ || ೫ ||  


भूतकृते नमस्तुभ्यं यः करोति कृणोति च ।

सर्वानादौ प्रपद्ये तं जीवानन्ते परात्परम् ॥ ५ ॥


ಹೇ ಭೂತಕೃತ್ ! ನಿನಗೆ ನಮನಗಳು. ಯಾವನು ಸೃಷ್ಟಿಯ ಆದಿಯಲ್ಲಿ ಎಲ್ಲ ಜೀವರನ್ನೂ ಉಂಟುಮಾಡುತ್ತಾನೋ, ಕೊನೆಯ ಪ್ರಲಯಕಾಲದಲ್ಲಿ ಸಂಹರಿಸುತ್ತಾನೋ, ಅಂತಹ ಶ್ರೇಷ್ಠಾತಿಶ್ರೇಷ್ಠತಮನಾದ ಮಹಾವಿಷ್ಣುವೂ, ಪರಮೇಶ್ವರನೂ ಎನಿಸಿರುವ ಪರಾತ್ಪರ ಪರಬ್ರಹ್ಮವನ್ನು ಪ್ರಪತ್ತಿ / ಶರಣು ಹೊಂದುತ್ತೇನೆ.  


|| ಓಂ ಭೂತಭೃತೇ ನಮ ಓ೩ಮ್ || ೬ ||

॥ ॐ भूतभृते नम ओ३म् ॥ ६ ॥


ಭೂತಭೃತ್ ಪ್ರಾಣಿನಾಂ ಭರ್ತಾ ಧರ್ತಾ ಪಾತಾ ಭವಾಧಿಪಃ |

ಪರಿತಾऽನ್ತರ್ಬಹಿರ್ಭೂತ್ವಾ ಪಞ್ಚಭೂತಾತ್ಮಕೋ ಹರಿಃ || ೬ ||


भूतभृत् प्राणिनां भर्ता धर्ता पाता भवाधिपः ।

परिताऽन्तर्बहिर्भूत्वा पञ्चभूतात्मको हरिः ॥ ६ ॥


ಹೇ ಭೂತಭೃತ್ ! ನೀನು ಸಕಲ ಪ್ರಾಣಿಯೇ ಮೊದಲಾದ ಭೂತಜಗತ್ತಿನ ಪತಿಯಾಗಿರುವಿ, ಭರಿಸಿರುವಿ, ಧರಿಸಿರುವಿ, ಪಾಲಿಸುತ್ತಿರುವಿ. ಸಕಲ ಲೋಕದ, ಭವಸಾಗರದ, ಸಂಸಾರದ, ಜನನಮರಣಚಕ್ರದ ಅಧಿಪತಿಯಾಗಿರುವಿ. ಶ್ರೀಹರಿಯಾದ ನೀನು ಪಂಚಭೂತಗಳೊಳಗಿದ್ದು / ಪಂಚಭೂತಗಳಾಗಿ ಒಳಹೊರಗೆಲ್ಲವನ್ನೂ ತುಂಬಿ ಪರಿಪೂರ್ಣನಾಗಿರುವಿ.


|| ಓಂ ಭಾವಾಯ ನಮ ಓ೩ಮ್ || ೭ ||

॥ ॐ भावाय नम ओ३म् ॥ ७ ॥


ನಮೋ ಭಾವಾಯ ದೇವಾಯ ಭಾವಾऽಭಾವವಿವರ್ಜಿತ |

ಭವಸ್ಯೇತಜ್ಜಗತ್ಸರ್ವಂ ಸ್ವಯಂ ತ್ವಾಂ ಪ್ರಣಮಾಮ್ಯಹಮ್   || ೭ ||


नमो भावाय देवाय भावाऽभावविवर्जित ।

भवस्येतज्जगत्सर्वं स्वयं त्वां प्रणमाम्यहम् ॥ ७ ॥


ಹೇ ಭಾವನೆ  ! ದೇವದೇವನೆ ! ಭಾವ / ಇರುವಿಕೆ ಹಾಗೂ ಅಭಾವ / ಇಲ್ಲದಿರುವಿಕೆ ಗಳನ್ನು ಮೀರಿದವನೆ ! ಸ್ವಯಂ ನೀನೇ ಈ ಎಲ್ಲ ಜಗತ್ತಾಗಿರುವಿ, ಜಗತ್ತಿನ ಮೂಲ ಅಸ್ತಿತ್ವವಾಗಿರುವಿ. "ಭವತಿ ಇತಿ ಭಾವಃ "...ಅಂತಹ ವಿಷ್ಣುವೆ ! ನಿನ್ನನ್ನು ನಾನು ಪ್ರಣಾಮಮಾಡುತ್ತೇನೆ.


|| ಓಂ ಭೂತಾತ್ಮನೇ ನಮ ಓ೩ಮ್ || ೮ ||

॥ ॐ भूतात्मने नम ओ३म् ॥ ८ ॥


ಭೂತಾತ್ಮನ್ ತೇ ನಮಸ್ತೇऽಸ್ತು ಸರ್ವಾನ್ತರ್ಯಾಮಿರೂಪಧೃತ್ |

ಅಹಂತಾ ಮಮತಾऽತ್ಮಾ ವೈ ಜೀವಯತ್ಯಖಿಲಂ ಜಗತ್ || ೮ ||


भूतात्मन् ते नमस्तेऽस्तु सर्वान्तर्यामिरूपधृत् ।

अहंता ममताऽत्मा वै जीवयत्यखिलं जगत् ॥ ८ ॥


ಹೇ ಭೂತಾತ್ಮನೆ ! ನಿನಗೆ ನಮಸ್ಕಾರವಿರಲಿ. ನೀನು ಎಲ್ಲರೊಳಗಿರುವ ಸ್ವರೂಪನು. ನಾನು, ನನ್ನದು ಎಂಬ ಪ್ರತ್ಯಗಾತ್ಮಭಾವವನ್ನುಂಟುಮಾಡುವವನು. ಆತ್ಮಸ್ವರೂಪನು. ಸಮಸ್ತ ಸೃಷ್ಟಿಯನ್ನು ಅಂತರಾತ್ಮನಾಗಿದ್ದು ಸಚೇತನಗೊಳಿಸುವವನು ನೀನು. 


|| ಓಂ ಭೂತಭಾವನಾಯ ನಮ ಓ೩ಮ್ || ೯ ||

॥ ॐ भूतभावनाय नम ओ३म् ॥ ९ ॥


ಭೂತಭಾವನನಾಮ್ನೇ ತೇ ವಿಷ್ಣವೇ ಹರಯೇ ನಮಃ |

ಸೃಜತ್ಯವತಿ ಸರ್ವಾಂಶ್ಚ ವರ್ಧಯತ್ಯಹಮಿತ್ಯಪಿ || ೯ ||


भूतभावननाम्ने ते विष्णवे हरये नमः ।

सृजत्यवति सर्वांश्च वर्धयत्यहमित्यपि ॥ ९ ॥


ಹೇ ಭೂತಭಾವನ ಎಂಬ ಹೆಸರುಳ್ಳವನೆ ! ಹರಿಯೂ ವಿಷ್ಣುವೂ ಎನಿಸಿದ ನಿನಗೆ ನಮನವು. ನೀನು ಸಕಲ ಜೀವರನ್ನು ಸೃಜಿಸುತ್ತೀಯೆ, ರಕ್ಷಿಸುತ್ತೀಯೆ ಹಾಗೂ ವರ್ಧಿಸುವಂತೆ ಮಾಡುತ್ತಿ. ಹಾಗೆಯೇ ಎಲ್ಲರಿಗೂ ನಾನೆಂಬ ಪ್ರತ್ಯೇಕ ಅಸ್ತಿತ್ವದ (ಭೂತ) ಭಾವನೆಯನ್ನು ಉಂಟುಮಾಡುವವನೂ ನೀನೇ. 



ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿಃ |

ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಜ್ಞೋऽಕ್ಷರ ಏವ ಚ || ೨ ||


पूतात्मा परमात्मा च मुक्तानां परमा गतिः ।

अव्ययः पुरुषः साक्षी क्षेत्रज्ञोऽक्षर एव च ॥ २ ॥


|| ಓಂ ಪೂತಾತ್ಮನೇ ನಮ ಓ೩ಮ್ || ೧೦ ||

॥ ॐ पूतात्मने नम ओ३म् ॥ १० ॥


ಪೂತಾತ್ಮಾನಂ ಸದಾಶುದ್ಧಂ ಪವಿತ್ರಂ ಪೂತಮುತ್ತಮಮ್ |

ಮನೋ-ಧೀ-ದೇಹಜಂ ಪಾಪಂ ಹರನ್ತಂ ಪಾವನಂ ನುಮಃ || ೧೦ ||


पूतात्मानं सदाशुद्धं पवित्रं पूतमुत्तमम् ।

मनो-धी-देहजं पापं हरन्तं पावनं नुमः ॥ १० ॥


ಹೇ ಪೂತಾತ್ಮನೆ! ನೀನು ಸದಾ ಶುದ್ಧನೂ ಪವಿತ್ರನೂ ಪೂತನೂ ಉತ್ತಮನೂ (ಶ್ರೇಷ್ಠತಮನೂ) ಆಗಿರುವಿ. ನಮ್ಮ ಮನಸ್ಸು, ಬುದ್ಧಿ, ದೇಹಾದಿಗಳಲ್ಲಿ ಉಂಟಾದ ಪಾಪವನ್ನು ನಾಶಮಾಡುತ್ತಿರುವ ಪಾವನಸ್ವರೂಪನಾದ ಹೇ ಮಹಾವಿಷ್ಣುವೆ!! ನಿನ್ನನ್ನು ನಮಿಸುತ್ತೇವೆ.


|| ಓಂ ಪರಮಾತ್ಮನೇ ನಮ ಓ೩ಮ್ || ೧೧ ||

॥ ॐ परमात्मने नम ओ३म् ॥ ११ ॥


ಪರಮಾತ್ಮಾನಮೀಡೇऽಹಂ ಪ್ರಕೃತೇಃ ಪುರುಷಃ ಪರಮ್  |

ನಿತ್ಯಂ ಶುದ್ಧಂ ಬುದ್ಧಮುಕ್ತಂ ಕಾರ್ಯಹೇತುವಿಲಕ್ಷಣಮ್ || ೧೧ ||


परमात्मानमीडेऽहं प्रकृतेः पुरुषः परम् ।

नित्यं शुद्धं बुद्धमुक्तं कार्यहेतुविलक्षणम् ॥ ११ ॥


ಅಯ್ಯಾ ಪರಮಾತ್ಮನೆ! ನಿನ್ನನ್ನು ನಾನು ಸ್ತುತಿಸುತ್ತೇನೆ. ನೀನು ಪ್ರಕೃತಿಯನ್ನು ಮೀರಿದ ಪುರುಷತತ್ತ್ವವು. ಜನನ-ಮರಣವರ್ಜಿತನಾಗಿ ನಿತ್ಯನೂ, ಸಂಗರಹಿತನಾಗಿರುವುದರಿಂದ ಶುದ್ಧನೂ, ಸ್ವಭಾವತಃ ಜ್ಞಾನಿಯಾಗಿ ಬುದ್ಧನೂ, ಸಂಸಾರಧರ್ಮವಿಲ್ಲದವನಾಗಿ ಮುಕ್ತನೂ, ಪರಮನಾದ (ಶ್ರೇಷ್ಠನಾದ) ಆತ್ಮನಾಗಿರುವುದರಿಂದ ಕಾರ್ಯ-ಕಾರಣಾತೀತನೂ ಪರಮಾತ್ಮನೂ ಆದ ಪಾರ್ವತೀಪರಮೇಶ್ವರ ಸಾಂಬಸದಾಶಿವ ಪರಾಶಕ್ತಿಪರಬ್ರಹ್ಮ ಶ್ರೀಮನ್ನಾದಿಲಕ್ಷ್ಮೀನಾರಾಯಣ ಮಹಾವಿಷ್ಣುವನ್ನು  ನಮಿಸಿ ಶರಣಾಗುತ್ತೇನೆ.


|| ಓಂ ಮುಕ್ತಾನಾಂ-ಪರಮಾ-ಗತಯೇ ನಮ ಓ೩ಮ್ || ೧೨ ||

॥ ॐ मुक्तानां-परमा-गतये नम ओ३म् ॥ १२ ॥


ಪ್ರಪದ್ಯೇ ಪ್ರಣವಾತ್ಮಾನಂ ಮುಕ್ತಾನಾಂ ಪರಮಾಂ ಗತಿಮ್ |

ಪುನರಾವೃತ್ತಿರಹಿತಾಂ ಗನ್ತವ್ಯಾಂ ದೇವತಾಂ ಹರಿಮ್ || ೧೨ ||


प्रपद्ये प्रणवात्मानं मुक्तानां परमां गतिम् ।

पुनरावृत्तिरहितां गन्तव्यां देवतां हरिम् ॥ १२ ॥


ಹೇ ಮುಕ್ತರಿಗೆ ಪರಮಗತಿಸ್ವರೂಪಿಯೆ! ಅವ್ಯಯವಾದ ಓಂಕಾರಸ್ವರೂಪಿಯಾದ ಪ್ರಣವಾತ್ಮಕನಾದ, ಪುನರಾವೃತ್ತಿ (ಮತ್ತೆ ಹುಟ್ಟುವಿಕೆ) ಇಲ್ಲದಂಥ ಗಮ್ಯಸ್ಥಾನವಾದ ಶ್ರೀಹರಿನಾಮಕ ದೇವತೆಯ ಪರಮಪದವನ್ನು ಶರಣುಹೊಂದುತ್ತೇನೆ.


|| ಓಮವ್ಯಯಾಯ ನಮ ಓ೩ಮ್ || ೧೩ ||

॥ ओमव्ययाय नम ओ३म् ॥ १३ ॥


ಅವ್ಯಯಾಯ ನಮಸ್ತುಭ್ಯಂ ವ್ಯಯವರ್ಜಿತರೂಪಿಣೇ |

ವಿಕಾರರಹಿತಾಯೇತ್ಥಂ ನಿರ್ಜರಾಯಾಮರಾಯ ತೇ || ೧೩ ||

अव्ययाय नमस्तुभ्यं व्ययवर्जितरूपिणे ।

विकाररहितायेत्थं निर्जरायामराय ते ॥ १३ ॥   


ಹೇ ಅವ್ಯಯನೆ! ನಿನಗೆ ನಮಸ್ಕಾರ. ವ್ಯಯವಾಗದ, ಕರಗಿಹೋಗದ, ನಾಶವಾಗದ, ಕ್ಷಯವಾಗದ, ವಿಕಾರಗೊಳ್ಳದ, ಜರಾವಸ್ಥೆ / ವೃದ್ಧಾಪ್ಯ ಇಲ್ಲದ, ಮರಣವಿರದ ಅವಿನಾಶಿ ಅಕ್ಷಯ ಅವಿಕಾರಿ ಅಜರ ಅಮರನಾದ ಮಹಾವಿಷ್ಣುವಿಗೆ ನಮೋ ನಮಸ್ತೇ. 


|| ಓಂ ಪುರುಷಾಯ ನಮ ಓ೩ಮ್ || ೧೪ ||

॥ ॐ पुरुषाय नम ओ३म् ॥ १४ ॥


ಪುರುಷಾಯ ನಮಸ್ತೇऽಸ್ತು ಶಯನಾಯ ಪುರೇ ತನೌ |

ಸರ್ಗಪೂರ್ವಸ್ಥತತ್ತ್ವಾಯ ಪರಿತ್ರೇ ಪೋಷಕಾಯ ಚ || ೧೪ ||

पुरुषाय नमस्तेऽस्तु शयनाय पुरे तनौ ।

सर्गपूर्वस्थतत्त्वाय परित्रे पोषकाय च ॥ १४ ॥


ಅಯ್ಯಾ ಪುರುಷನೆ! ನಿನಗೆ ನಮಸ್ಕಾರವಿರಲಿ. ಪುರವೆನಿಸಿದ ನವದ್ವಾರಯುಕ್ತ ದೇಹದಲ್ಲಿ ನೆಲೆಸಿದ, ಸೃಷ್ಟಿಗೂ ಹಿಂದೆಯೇ ಇದ್ದ ತತ್ತ್ವವಾದ, ಎಲ್ಲವನ್ನೂ ಎಲ್ಲರನ್ನೂ ತುಂಬಿ ಪರಿಪೂರ್ಣಗೊಳಿಸುವ, ಸಕಲಪೋಷಕನಾದ ಮಹಾವಿಷ್ಣುವೇ! ನಿನಗೆ ಮತ್ತೆ ಮತ್ತೆ ಶರಣು ಶರಣು.


|| ಓಂ ಸಾಕ್ಷಿಣೇ ನಮ ಓ೩ಮ್ || ೧೫ ||

॥ ॐ साक्षिणे नम ओ३म् ॥ १५ ॥


ವಿಷ್ಣುಂ ವನ್ದೇऽರ್ಕರೂಪಂ ತಂ ಸಾಕ್ಷಿಣಂ ಸರ್ವಸಾಕ್ಷಿಣಮ್ |

ಶ್ರೋತೃ-ರಸಯಿತೃ-ಸ್ಪ್ರಷ್ಟೃ-ದ್ರಷ್ಟೃ-ಘ್ರಾತೄನ್ ಪ್ರಸೂಯತೇ || ೧೫ ||


विष्णुं वन्देऽर्करूपं तं  साक्षिणं सर्वसाक्षिणम् ।

श्रोतृ-रसयितृ-स्प्रष्टृ-द्रष्टृ-घ्रातॄन् प्रसूयते  ॥ १५ ॥


ಎಲ್ಲಕ್ಕೂ ಎಲ್ಲರಿಗೂ ಎಲ್ಲದಕ್ಕೂ ಎಲ್ಲ ಕಾಲದಲ್ಲೂ ಸಾಕ್ಷಿಯಾದ ಆ ಸರ್ವಸಾಕ್ಷಿರೂಪನಾದ ಮಹಾವಿಷ್ಣುವನ್ನು ವಂದಿಸುತ್ತೇನೆ. ಹೇ ಸಾಕ್ಷಿಯೆ! ನೀನು ಸಕಲರ ಇಂದ್ರಿಯಗಳೊಡೆಯನಾಗಿ ಹೃಷೀಕೇಶನೆನಿಸಿ, ಕೇಳುವ ರುಚಿನೋಡುವ ಮುಟ್ಟುವ ನೋಡುವ ಮೂಸುವ / ಆಘ್ರಾಣಿಸುವ ಎಲ್ಲರನ್ನೂ ಪ್ರೇರಿಸುವ ಮೂಲಕಾರಣನೂ ಆಗಿರುವಿ. ನಿನಗೆ ಪುನಃ ಪುನಃ ಅನಂತ ಪ್ರಣತಿಗಳು.


|| ಓಂ ಕ್ಷೇತ್ರಜ್ಞಾಯ ನಮ ಓ೩ಮ್ || ೧೬ ||

॥ ॐ क्षेत्रज्ञाय नम ओ३म् ॥ १६ ॥


ಕ್ಷೇತ್ರಜ್ಞಾಯ ನಮಸ್ತೇऽಸ್ತು ದೇಹಂ ಕ್ಷೇತ್ರಮಿತೀರಿತಮ್ |

ಕ್ಷೇತ್ರಂ ಜಾನಾತಿ ತಚ್ಚೇಷ್ಟಾಂ ತಸ್ಯಾನುಭವಮೇವ ಸಃ || ೧೬ ||


क्षेत्रज्ञाय नमस्तेऽस्तु देहं क्षेत्रमितीरितम् ।

क्षेत्रं जानाति तच्चेष्टां तस्यानुभवमेव सः ॥ १६ ॥


ಅಯ್ಯಾ ಕ್ಷೇತ್ರಜ್ಞನೆ! ನಿನಗೆ ನಮಸ್ಕಾರವಿರಲಿ. ಈ ನಮ್ಮ ದೇಹವೇ ಕ್ಷೇತ್ರವೆನಿಸಿದೆ. ಅದರ ಒಳಹೊರಗೆಲ್ಲವನ್ನೂ, ಅದರ ಚೇಷ್ಟಿತ / ಕರ್ಮಗಳೆಲ್ಲವನ್ನೂ, ದೇಹದ ಅನುಭವವೆಲ್ಲವನ್ನೂ ಬಲ್ಲ ಆ ಶ್ರೀಹರಿಯೇ ಅದರೊಳಗಿರುವ ಕ್ಷೇತ್ರಜ್ಞನು.


|| ಓಮಕ್ಷರಾಯ ನಮ ಓ೩ಮ್ || ೧೭ ||

॥ ओमक्षराय नम ओ३म् ॥ १७ ॥


ಅಕ್ಷರಾಯ ನಮಸ್ತೇऽಸ್ತು ನ ಕ್ಷರತೀತಿ ಚಾಕ್ಷರಃ |

ದೇಶಕಾಲಾನತೀತ್ಯೈಷೋऽವಿನಾಶ್ಯಾತ್ಮೈವ ಸೋऽವ್ಯಯಃ || ೧೭ ||


अक्षराय नमस्तेऽस्तु न क्षरतीति चाक्षरः ।

देशकालानतीत्यैषोऽविनाश्यात्मैव सोऽव्ययः ॥ १७ ॥


ಅಕ್ಷರನಿಗೆ ನಮಸ್ಕಾರವಿರಲಿ. ನಾಶವಿಲ್ಲದವನೇ ಅಕ್ಷರನು. ಈತನು ದೇಶ-ಕಾಲಗಳನ್ನು ಮೀರಿದ ಅವಿನಾಶಿಯಾದ ಕ್ಷೇತ್ರಜ್ಞನೂ ಕ್ಷೇತ್ರಸ್ಥನೂ ಅವ್ಯಯನೂ ಸರ್ವಸಾಕ್ಷಿಯೂ ಆದ ಪರಮಪುರುಷ ಶ್ರೀಹರಿಯು.



ಯೋಗೋ ಯೋಗವಿದಾಂ ನೇತಾ ಪ್ರಧಾನಪುರುಷೇಶ್ವರಃ |

ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ || ೩ ||


योगो योगविदां नेता प्रधानपुरुषेश्वरः ।

नारसिंहवपुः श्रीमान् केशवः पुरुषोत्तमः ॥ ३ ॥


|| ಓಂ ಯೋಗಾಯ ನಮ ಓ೩ಮ್ || ೧೮ ||

॥ ॐ योगाय नम ओ३म् ॥


ಪ್ರಪದ್ಯೇ ಯೋಗನಾಮಾನಂ ಯೋಗೇನಾಪ್ಯೋ ಹಿ ಮಾಧವಃ |

ಚಿತ್ತೇನ್ದ್ರಿಯನಿರೋಧೇನ ಬ್ರಹ್ಮಾತ್ಮೈಕತ್ವಭಾವತಃ || ೧೮ ||


प्रपद्ये योगनामानं योगेनाप्यो हि माधवः ।

चित्तेन्द्रियनिरोधेन ब्रह्मात्मैकत्वभावतः ॥ १८ ॥


ಯೋಗ ನಾಮಕನಾದ ಮಾ-ಧವನನ್ನು ಶರಣುಹೊಂದುತ್ತೇನೆ. ಆತನು ಯೋಗದಿಂದಲೇ ಪ್ರಾಪ್ಯನಾದವನಾದ್ದರಿಂದ ಆತನ ಹೆಸರೂ ಯೋಗನೆಂದಾಯಿತು. ಮನಸ್ಸು, ಇಂದ್ರಿಯಗಳನ್ನು ತಡೆಹಿಡಿದು ನಮ್ಮೊಳಗಿನ ಪ್ರತ್ಯಗಾತ್ಮನೇ ಬ್ರಹ್ಮವೆಂಬ ಭಾವದಲ್ಲಿರುವುದೇ ಯೋಗವು.


|| ಓಂ ಯೋಗವಿದಾಂ ನೇತ್ರೇ ನಮ ಓ೩ಮ್ || ೧೯ ||

॥ ॐ योगविदां नेत्रे नम ओ३म् ॥ १९ ॥


ವಿಚಾರಯನ್ತಿ ಜಾನನ್ತಿ ಲಭನ್ತೇ ವಿದನ್ತೀತಿ ವಿತ್ |

ಯೋಗಂ ಯೋಗವಿದಾಂ ನೇತಾ ಯೋಗಕ್ಷೇಮಂ ವಹತ್ಯಸೌ || ೧೯ ||


विचारयन्ति जानन्ति विन्दन्ति विदन्तीति वित् । 

योगं योगविदां नेता योगक्षेमं वहत्यसौ ॥ १९ ॥


" ವಿದ ವಿಚಾರಣೇ ಜ್ಞಾನೇ ಲಾಭೇ ನಿವಾಸೇ ಚೇತನೇ ವಾ " ಎಂಬ ಧಾತುವಿನಂತೆ ಯೋಗವನ್ನು ಕುರಿತು ವಿಚಾರಮಾಡುವವರು, ತಿಳಿದವರು, ಯೋಗವನ್ನು ಹೊಂದಿದವರು, ಯೋಗವನ್ನಾಶ್ರಯಿಸಿರುವವರು, ಯೋಗಚೇತನರು— ಇಂತಹ ಯೋಗಿಗಳೇ ಯೋಗವಿದರು. ಅಂತಹ ಯೋಗಸಾಧಕರ ಯೋಗಸಿದ್ಧರ ಯೋಗಕ್ಷೇಮವನ್ನು ನಿರ್ವಹಿಸುವ ನೇತಾರ / ನಾಯಕ / ಯೋಗೇಶ್ವರ / ಯೋಗೀಶ್ವರನೇ ಈ ಪರಮಾತ್ಮನು, ಪರಮೇಶ್ವರನು, ಮಹಾವಿಷ್ಣುವು.


|| ಓಂ ಪ್ರಧಾನಪುರುಷೇಶ್ವರಾಯ ನಮ ಓ೩ಮ್ || ೨೦ ||

॥ ॐ प्रधानपुरुषेश्वराय नम ओ३म् ॥ २० ॥


ಪ್ರಧಾನಂ ಪ್ರಕೃತಿರ್ಮಾಯಾ ಪುರುಷೋ ಜೀವ ಈರಿತಃ |

ಈಶ್ವರಂ ಚ ತಯೋರ್ವನ್ದೇ ಪ್ರಧಾನಪುರುಷೇಶ್ವರಮ್ || ೨೦ ||


प्रधानं प्रकृतिर्माया पुरुषो जीव ईरितः ।

ईश्वरं च तयोर्वन्दे प्रधानपुरुषेश्वरम् ॥ २० ॥


ಮಾಯಾಸ್ವರೂಪಿಣಿಯಾದ ಪ್ರಕೃತಿಮಾತೆಯು ಪ್ರಧಾನತತ್ತ್ವವೆಂದೂ, ಪಾಂಚಭೌತಿಕ ಇಂದ್ರಿಯಾದಿ ಅವಿದ್ಯಾ ಉಪಾಧಿ ಸಹಿತನಾದ ಚಿದಾಭಾಸ ಜೀವನೇ ಪುರುಷನೆಂದೂ ಹೇಳಿದೆ. ಈ ಪ್ರಕೃತಿ-ಪುರುಷರೀರ್ವರ ಒಡೆಯನಾದ ಪುರುಷೋತ್ತಮ ಪರಮಪುರುಷ ಮಹಾವಿಷ್ಣುವನ್ನು, ಪ್ರಧಾನಪುರುಷೇಶ್ವರನನ್ನು ವಂದಿಸುತ್ತೇನೆ.


|| ಓಂ ನಾರಸಿಂಹವಪುಷೇ ನಮ ಓ೩ಮ್ || ೨೧ ||

॥ ॐ नारसिंहवपुषे नम ओ३म् ॥ २१ ॥


ನಾರಸಿಂಹವಪುರ್ವಿಷ್ಣುರ್ಹರೇರ್ನರಸ್ಯ ದೇಹಧೃತ್ |

ತಂ ವನ್ದೇ ನರಸಿಂಹಾಖ್ಯಂ ನೃಸಿಂಹಾವಯವಂ ಹರಿಮ್ || ೨೧ ||

नारसिंहवपुर्विष्णुर्हरेर्नरस्य देहधृत् ।

तं वन्दे नरसिंहाख्यं नृसिंहावयवं हरिम् ॥ २१ ॥


ನಾರಸಿಂಹವಪುವೂ ವಿಷ್ಣುವೇ. ಹರಿ / ಸಿಂಹ ಹಾಗೂ ನರ / ನೃ / ಮನುಷ್ಯ ದೇಹದ ಭಾಗಗಳನ್ನು / ಅವಯವಗಳನ್ನು ಹೊಂದಿ ನೃಸಿಂಹ, ನರಸಿಂಹ, ನಾರಸಿಂಹವಪು ಎನಿಸಿದ ಶ್ರೀಹರಿಯನ್ನು ವಂದಿಸುತ್ತೇನೆ.


|| ಓಂ ಶ್ರೀಮತೇ ನಮ ಓ೩ಮ್ || ೨೨ ||

॥ ॐ श्रीमते नम ओ३म् ॥ २२ ॥


ವಕ್ಷಸ್ಯಸ್ಯ ಹರೇರ್ನಿತ್ಯಂ ವಸತ್ಯೇಷಾ ರಮಾ ಚ ತಮ್ |

ಶ್ರೀರಸ್ತ್ಯಸ್ಮಿನ್ನಿತಿ ಪ್ರೋಕ್ತಂ ಶ್ರೀಮನ್ತಂ ಪ್ರಣಮಾಮ್ಯಹಮ್ || ೨೨ ||

वक्षस्यस्य हरेर्नित्यं वसत्येषा रमा च तम् ।

श्रीरस्त्यस्मिन्निति प्रोक्तं श्रीमन्तं प्रणमाम्यहम् ॥ २२ ॥


ಈ ಶ್ರೀಹರಿಯ ಎದೆಯಲ್ಲಿ / ವಕ್ಷಸ್ಥಳದಲ್ಲಿ ರಮಾದೇವಿ / ಶ್ರೀದೇವಿ / ಮಹಾಲಕ್ಷ್ಮಿಯು ನಿತ್ಯವೂ ವಾಸವಾಗಿರುವಳು. ಹಾಗೆಯೇ, ಈತನಲ್ಲೇ ಸದಾ ಅನಪಾಯಿನಿಯಾಗಿ / ಎಂದೂ ಅಗಲದೆ  ಶ್ರೀಯು ನೆಲೆಸಿರುವುದರಿಂದ ಶ್ರೀಮಾನ್ ಎನಿಸಿದ ಶ್ರೀಮಂತನಾದ ಮಹಾವಿಷ್ಣುವನ್ನು ಪ್ರಣಾಮಮಾಡುತ್ತೇನೆ.


|| ಓಂ ಕೇಶವಾಯ ನಮ ಓ೩ಮ್ || ೨೩ ||

॥ ॐ केशवाय नम ओ३म् ॥ २३ ॥


ಕೇಶವಾಯ ನಮಸ್ತುಭ್ಯಮಭಿರೂಪಾಶ್ಚ ಯಸ್ಯ ಸಃ |

ಕೇಶಾಸ್ತ್ರಿಮೂರ್ತಯೋ ಯದ್ವಶೇ ಸನ್ತಿ ಕೇಶಿಹೇತಿ ವಾ |

ಕೇ ಜಲೇ ಶಯನಂ ಯಸ್ಮಾತ್ ಕೇಶವೇತಿ ಪ್ರಕೀರ್ತಿತಃ || ೨೩ ||

केशवाय नमस्तुभ्यमभिरूपाश्च यस्य सः ।

केशास्त्रिमूर्तयो यद्वशे सन्ति केशिहेति वा ।

के जले शयनं यस्मात् केशवेति प्रकीर्तितः॥ २३ ॥


ಹೇ ಕೇಶವನೆ! ನಿನಗೆ ನಮಸ್ಕಾರ. ಸುಂದರವೂ ಮನೋಹರವೂ ಆದ ಗುಂಗುರುಗೂದಲುಗಳು / ಕೇಶಗಳು ಯಾವನದೋ ಅಂತಹ ವಿಷ್ಣುವೇ ಕೇಶವನು. ವ ಕಾರವು ಪ್ರಶಂಸನೆಯ ದ್ಯೋತಕ. ಕಕಾರವು ಬ್ರಹ್ಮವಾಚಕ, ಅಕಾರವು ವಿಷ್ಣುವಾಚಕ ಹಾಗೂ ಈಶನೆಂದರೆ ರುದ್ರನು. ಹೀಗೆ ಕೇಶವೆಂದರೆ ತ್ರಿಮೂರ್ತಿವಾಚಕ. ಯಾರ ವಶದಲ್ಲಿ ಈ ಕೇಶವೆನಿಸಿದ ತ್ರಿಮೂರ್ತಿಗಳೂ ಇರುವರೋ ಅಂತಹ ಪರಮಾತ್ಮನೇ ಕೇಶವನು. ಹಾಗೆಯೇ ಕೇಶಿಯೆಂಬ ದುಷ್ಟನನ್ನು ಕೊಂದು ಕೇಶಿಸೂದನ, ಕೇಶಿಹಾ ಎನಿಸಿದ ಮಹಾವಿಷ್ಣುವೇ ಕೇಶವನು. ಕಂ ಎಂದರೆ ನೀರು. ಸಾಗರ ಮಧ್ಯೆ ಶೇಷನ ಮೇಲೆ ಪವಡಿಸಿರುವುದರಿಂದ / ಶೇಷಶಯನನಾಗಿರುವುದರಿಂದಲೂ (?ಕೇವಲ ಶವದಂತೆ ತೋರಬಹುದಾದುರಿಂದ) ಶ್ರೀಮನ್ನಾರಾಯಣನು ಕೇಶವನೆಂದು ಕೀರ್ತಿಸಲ್ಪಡುತ್ತಿರುವನು.


|| ಓಂ ಪುರುಷೋತ್ತಮಾಯ ನಮ ಓ೩ಮ್ || ೨೪ ||

॥ ॐ पुरुषोत्तमाय नम ओ३म् ॥ २४ ॥


ಪುರುಷಾಣಾಮುತ್ತಮಂ ತಂ ಕ್ಷರಾಕ್ಷರದ್ವಯೋರಪಿ |

ಲೋಕೇ ಚ ಕೀರ್ತಿತಂ ವೇದೇ ವನ್ದೇऽಜಂ ಪುರುಷೋತ್ತಮಮ್ || ೨೪ ||   

पुरुषाणामुत्तमं तं क्षराक्षरद्वयोरपि ।

लोके च कीर्तितं वेदे वन्देऽजं पुरुषोत्तमम् ॥ २४ ॥


ಹೇ ಪುರುಷೋತ್ತಮನೆ! ಸಕಲ ಪುರುಷರಲ್ಲಿ ಉತ್ತಮನಾದ, ಪುರವೆಂಬ ದೇಹದಲ್ಲಿರುವುದರಲ್ಲಿ ಪರಮಶ್ರೇಷ್ಠನಾಗಿ ಪರಮಾತ್ಮನೆನಿಸಿದ, ನಾಶವಾಗುವ ಕ್ಷರ ಹಾಗೂ ನಾಶವಾಗದ ಅಕ್ಷರ—ಇವೆರಡಕ್ಕೂ ಅತೀತನೂ ಮೂಲನೂ ಆದ, ಜನ್ಮರಹಿತನೂ ಆಗಿ ಅಜನೆಂಬುದಾಗಿಯೂ ಲೌಕಿಕವಾಗಿಯೂ ವೈದಿಕವಾಗಿಯೂ ಕೀರ್ತಿತನಾದ ಮಹಾವಿಷ್ಣುವಾದ ನಿನ್ನನ್ನು ವಂದಿಸುತ್ತೇನೆ.



ಸರ್ವಶ್ಶರ್ವಶ್ಶಿವಸ್ಸ್ಥಾಣುರ್ಭೂತಾದಿರ್ನಿಧಿರವ್ಯಯಃ |

ಸಮ್ಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || ೪ ||

सर्वश्शर्वश्शिवस्स्थाणुर्भूतादिर्निधिरव्ययः ।

सम्भवो भावनो भर्ता प्रभवः प्रभुरीश्वरः ॥ ४ ॥


|| ಓಂ ಸರ್ವಾಯ ನಮ ಓ೩ಮ್ || ೨೫ ||

॥ ॐ सर्वाय नम ओ३म् ॥ २५ ॥


ನಿಃಶೇಷಮಖಿಲಂ ವಿಶ್ವಂ ತತ್ಸೃಷ್ಟಿಸ್ಥಿತಿನಾಶಕಃ |

ಸರ್ವಜ್ಞಃ ಸರ್ವದಾ ತಾದೃಗ್ ವಿಷ್ಣುಂ ಸರ್ವಂ ನಮಾಮ್ಯಹಮ್ || ೨೫ ||

निःशेषमखिलं विश्वं तत्सृष्टिस्थितिनाशकः ।

सर्वज्ञः सर्वदा तादृग् विष्णुं सर्वं नमाम्यहम् ॥ २५ ॥


ಸದಸದಾತ್ಮಕವಾದ ಅಶೇಷವಾದ ವ್ಯಕ್ತಾವ್ಯಕ್ತ ಸಮಸ್ತಪ್ರಪಂಚವೂ ತಾನೇ ಆಗಿರುವ, ಅಂತೆಯೇ ಅದೆಲ್ಲವನ್ನೂ ಸೃಜಿಸಿ, ಪಾಲಿಸಿ, ಲಯಗೈಯುವವನಾದ, ಸರ್ವಕಾಲಕ್ಕೂ ಸರ್ವವನ್ನೂ ಬಲ್ಲವನಾದಂತಹ ಸರ್ವನಾಮಕನಾದ ವಿಷ್ಣುವನ್ನು ನಾನು ನಮಿಸುತ್ತೇನೆ.


|| ಓಂ ಶರ್ವಾಯ ನಮ ಓ೩ಮ್ || ೨೬ ||

॥ ॐ शर्वाय नम ओ३म् ॥ २६ ॥


ಶರಿತಃ! ಸರ್ವಪಾಪಾನಾಂ ಸಂಹರ್ತಃ! ಪ್ರಲಯೇऽಖಿಲಮ್ |

ಸಂಹಾರಯಿತ (!) ಈಡೇऽಹಂ ಹರೇ! ತ್ವಾಂ ಶರ್ವನಾಮಕ!  || ೨೬ ||

शरितः! सर्वपापानां संहर्तः! प्रलयेऽखिलम् ।

संहारयित (!) ईडेऽहं हरे! त्वां शर्वनामक! ॥ २६ ॥


ಹೇ ಶರ್ವನೆಂಬ ಹೆಸರಿನ ಹರಿಯೆ! ಸಕಲರ ಸಕಲ ಪಾಪಗಳನ್ನೂ ಪರಿಹಾರ ಮಾಡುವವನೆ / ಮಾಡಿಸುವವನೆ! ಪ್ರಳಯಕಾಲದಲ್ಲಿ ಸಮಗ್ರ ಸೃಷ್ಟಿಯನ್ನು ಸಂಹಾರ ಮಾಡುವವನೆ! ರುದ್ರನ / ಇತರರ ಮೂಲಕ ಸಂಹಾರ ಮಾಡಿಸುವವನೆ! ನಿನ್ನನ್ನು ನಾನು ಸ್ತುತಿಸುತ್ತೇನೆ.


|| ಓಂ ನಮಶ್ಶಿವಾಯ ಓ೩ಮ್ || ೨೭ ||

॥ ॐ नमश्शिवाय ओ३म् ॥ २७ ॥


ನಮಶ್-ಶಿವಾಯ ದೇವಾಯ ಹರಯೇ ಪರಮಾತ್ಮನೇ |

ನಿಸ್ತ್ರೈಗುಣ್ಯಾಯ ಶುದ್ಧಾಯ ಬ್ರಹ್ಮಣೇऽಭೇದವಿಷ್ಣವೇ || ೨೭ ||

नमश्-शिवाय देवाय हरये परमात्मने ।

निस्त्रैगुण्याय शुद्धाय ब्रह्मणेऽभेदविष्णवे ॥ २७ ॥


ತ್ರಿಗುಣರಹಿತನೂ, ಶುದ್ಧನೂ, ಪರಬ್ರಹ್ಮಸ್ವರೂಪನೂ, ಭೇದರಹಿತನೂ, ಶಿವನಾಮಕನೂ ಆದ ಪರಮಾತ್ಮ ಶ್ರೀಹರಿ-ವಿಷ್ಣು-ದೇವನಿಗೆ ನಮಸ್ಕಾರವು.


|| ಓಂ ಸ್ಥಾಣವೇ ನಮ ಓ೩ಮ್ || ೨೮ ||

॥ ॐ स्थाणवे नम ओ३म् ॥ २८ ॥


ಸ್ಥಿರತ್ವಾತ್ ಸ್ಥಾಣುರಿತ್ಯಾಹುರಚಲೋऽಚ್ಛೇದ್ಯ ಏವ ಚ |

ಅಭೇದ್ಯಮವಿಕಾರ್ಯಂ ತಂ ಸ್ಥಾಣುಂ ವಿಷ್ಣುಂ ನಮಾಮ್ಯಹಮ್ || ೨೮ ||

स्थिरत्वात् स्थाणुरित्याहुरचलोऽच्छेद्य एव च ।

अभेद्यमविकार्यं तं स्थाणुं विष्णुं नमाम्यहम् ॥ २८ ॥


ಸ್ಥಿರತ್ವಗುಣದಿಂದಾಗಿ ಪರಮಾತ್ಮನು ಸ್ಥಾಣು (=ಶಿವ, ಬ್ರಹ್ಮಾ, ಗೆಲ್ಲಿಲ್ಲದ ಮೋಟುಮರ, ಕೀಲಕ / ಕೀಲು, ಸ್ಥಿರ, ಶಂಕು, ಜೀವಕಗಂಧದ್ರವ್ಯ, ಅಸ್ತ್ರವಿಶೇಷ, ಧ್ರುವ, ಶಾಶ್ವತ, ಧರಣಿ, ಕಂಬ, ಹುತ್ತ…) ಎನಿಸಿರುವನು. ಆತನು ಚಲಿಸದೇ ಸ್ಥಿರವಾಗಿ ಸರ್ವತ್ರ ವ್ಯಾಪ್ತವಾಗಿ ಅಚಲನೂ, ತುಂಡರಿಸಲಾಗದ ಛೇದಿಸಲಸಾಧ್ಯನಾಗಿ ಅಚ್ಛೇದ್ಯನೂ, ಪತನವಾಗದೆ ಚ್ಯುತನಾಗದೆ ಅಚ್ಯುತನೂ ಆಗಿರುವನು. ಹೀಗೆ, ಭೇದಿಸಲಾಗದೆ ಅಭೇದ್ಯನಾದ, ಯಾವುದೇ ವಿಕಾರವನ್ನು ಹೊಂದದೆ ಅವಿಕಾರ್ಯನಾದ ಆ ಸ್ಥಾಣುನಾಮಕನಾದ ವಿಷ್ಣುವನ್ನು ನಾನು ನಮಿಸುತ್ತೇನೆ.


|| ಓಂ ಭೂತಾದಯೇ ನಮ ಓ೩ಮ್ || ೨೯ ||

॥ ॐ भूतादये नम ओ३म् ॥ २९ ॥


ಭೂತಾನಾಮಾದಿರೇಷೋऽಸ್ತಿ ಭೂತಾದಯೇ ನಮೋ ನಮಃ |

ಯೇನ ಸೃಷ್ಟಮಿದಂ ಸರ್ವಂ ತದ್ವಿಷ್ಣುಂ ಪ್ರಣಮಾಮ್ಯಹಮ್ || ೨೯ ||

भूतानामादिरेषोऽस्ति भूतादये नमो नमः ।

येन सृष्टमिदं सर्वं तद्विष्णुं प्रणमाम्यहम् ॥ २९ ॥


ಈ ಮಹಾವಿಷ್ಣುವೇ ಸಕಲ ಭೂತಗಳ, ಚರಾಚರಗಳ ಆದಿಮೂಲ ಕಾರಣನಾಗಿರುವನು. ಅಂತಹ ಭೂತಾದಿಗೆ ನಮಸ್ಕಾರಗಳು. ಯಾವನಿಂದ ಇದೆಲ್ಲವೂ ಸೃಜಿಸಲ್ಪಟ್ಟಿವೆಯೋ ಅಂತಹ ವಿಷ್ಣುವನ್ನು ನಾನು ಪ್ರಣಾಮಮಾಡುತ್ತೇನೆ.


|| ಓಮವ್ಯಯಾಯ ನಿಧಯೇ ನಮ ಓ೩ಮ್ || ೩೦ ||

॥ ॐ अव्ययाय निधये नम ओ३म् ॥ ३० ॥


ನಿಧೀಯತೇ ಹರೌ ಸರ್ವಂ ಲಯಕಾಲೇ ವಿಶತ್ಯಮುಮ್ |

ಅವ್ಯಯೋऽಕ್ಷಯ ಏವಾಸ್ತಿಅವ್ಯಯಾಯ ನಿಧಯೇ ನಮಃ || ೩೦ ||

निधीयते हरौ सर्वं लयकाले विशत्यमुम् ।

अव्ययोऽक्षय एवास्तिअव्ययाय निधये नमः ॥ ३० ॥


ಪ್ರಳಯಕಾಲದಲ್ಲಿ ಬ್ರಹ್ಮಾಂಡಭಾಂಡೋದರನಾದ ಶ್ರೀಹರಿಯನ್ನೇ ಸೃಷ್ಟಿಯೆಲ್ಲವೂ ಪ್ರವೇಶಿಸುತ್ತದೆ ಹಾಗೂ ಆತನಲ್ಲೇ ನ್ಯಾಸವಾಗಿ ಇಡಲ್ಪಡುತ್ತದೆ, ಧರಿಸಲ್ಪಡುತ್ತದೆ. ಇದರಿಂದಾಗಿ ಪರಮಾತ್ಮನು ಭೂತಗಳ ಆದಿಯೂ ಅಂತ್ಯನೂ ಆದ ನಿಧಿಯು. ಪರಮಾತ್ಮನು ಎಂದೂ ವ್ಯಯವಾಗದ, ಮುಗಿದುಹೋಗದ, ಕ್ಷಯಿಸದ ಅಕ್ಷಯ ಅವ್ಯಯ ನಿಧಿಯಾಗಿರುವನು. ಅಂತಹ ಅವ್ಯಯನಿಧಿಯಾದ ಮಹಾವಿಷ್ಣುವಿಗೆ ನಮಸ್ಕಾರ.


|| ಓಂ ಸಮ್ಭವಾಯ ನಮ ಓ೩ಮ್ || ೩೧ ||

॥ ॐ सम्भवाय नम ओ३म् ॥ ३१ ॥


ಸಮ್ಭವಾಯ ನಮಸ್ತುಭ್ಯಂ ಸ್ವೇಚ್ಛಯಾ ಸಮ್ಭವಸ್ಯಥ |

ಸಮ್ಯಗ್ಭವಸಿ ಹೇ ವಿಷ್ಣೋ ಧರ್ಮಸಂಸ್ಥಾಪನಾಯ ವೈ ||

ಶಿಷ್ಟತ್ರಾತೋ ದುಷ್ಟಹರ್ತೋ ಗರ್ಭದುಃಖವಿವರ್ಜಿತ || ೩೧ ||

सम्भवाय नमस्तुभ्यं स्वेच्छया सम्भवस्यथ ।

सम्यग्भवसि हे विष्णो धर्मसंस्थापनाय वै ॥

शिष्टत्रातो दुष्टहर्तो गर्भदुःखविवर्जित ॥ ३१ ॥


ಹೇ ಸಮ್ಭವನಾಮಕನಾದ ವಿಷ್ಣುವೆ! ನೀನು ಲೋಕದಲ್ಲಿ ಧರ್ಮವನ್ನು ಚೆನ್ನಾಗಿ ಕಾಪಾಡಲು ನಿನ್ನದೇ ಇಚ್ಛೆಯಂತೆ ಸೂಕ್ತವಾಗಿ ಸಂಭವಿಸುತ್ತೀಯೆ, ಅವತರಿಸುತ್ತೀಯೆ! ಹೇ ಸಜ್ಜನರ ರಕ್ಷಕನೆ ! ದುರ್ಜನರನ್ನು ತಿದ್ದಲು  ಶಿಕ್ಷಣವನ್ನೀಯುವವನೆ! ತಿದ್ದಿಕೊಳ್ಳದವರಿಗೆ ಶಿಕ್ಷೆ ನೀಡುವವನೆ / ಸಂಹರಿಸುವವನೆ! ಗರ್ಭವಾಸದ ದುಃಖವಿಲ್ಲದ ಅವತಾರಪುರುಷನೆ! ನಿನಗಿದೋ ನಮಸ್ಕಾರಗಳು.


|| ಓಂ ಭಾವನಾಯ ನಮ ಓ೩ಮ್ || ೩೨ ||

॥ ॐ भावनाय नम ओ३म् ॥ ३२ ॥


ಭಾವನಾಯ ನಮಸ್ತೇऽಸ್ತು ಭಾವಯತ್ಯಖಿಲಾನ್ಯಪಿ |

ಫಲಾನಿ ಸರ್ವಭೋಕ್ತೄಣಾಂ 

ಫಲದಾತಾ ಹರಿಃ ಸ್ವಯಮ್ || ೩೨ ||

भावनाय नमस्तेऽस्तु भावयत्यखिलान्यपि ।

फलानि सर्वभोक्तॄणां फलदाता हरिः स्वयम् ॥ ३२ ॥


ಹೇ ಭಾವನನೆ! ನಿನಗೆ ನಮಸ್ಕಾರವಿರಲಿ. ಎಲ್ಲ ಫಲವುಣ್ಣುವ ಭೋಕ್ತೃಗಳ ಎಲ್ಲ ಫಲಗಳನ್ನೂ ಪರಿಭಾವಿಸುವವನು, ಕೊಡುವವನು ದೇವದೇವನಾದ ಸ್ವಯಂ ಶ್ರೀಹರಿಯೇ ಆಗಿರುವನು. ಹೀಗಾಗಿಯೇ ಆತನು ಭಾವನನು.


|| ಓಂ ಭರ್ತ್ರೇ ನಮ ಓ೩ಮ್ || ೩೩ ||

॥ ॐ भर्त्रे नम ओ३म् ॥ ३३ ॥


ಲೋಕಾಧಿಷ್ಠಾನರೂಪೇಣ ವಿಷ್ಣುರ್ಭರ್ತಾ ತಮಾಶ್ರಯೇ || ೩೩ ||

लोकाधिष्ठानरूपेण विष्णुर्भर्ता तमाश्रये ॥ ३३ ॥


ವಿಷ್ಣುವು ಸೃಷ್ಟಿಗೆಲ್ಲ ತಾನೇ ಆಧಾರನಾಗಿರುವುದರಿಂದ "भरणात् भर्ता " ಭರ್ತೃ / ಭರ್ತಾ ಎನಿಸಿರುವನು. ಅಂತಹ ಭರ್ತೃನಾಮಕ ವಿಷ್ಣುವನ್ನು ಆಶ್ರಯಿಸುತ್ತೇನೆ. 


|| ಓಂ ಪ್ರಭವಾಯ ನಮ ಓ೩ಮ್ || ೩೪ ||

॥ ॐ प्रभवाय नम ओ३म् ॥ ३४ ॥


ಜಾಯನ್ತೇऽಖಿಲಭೂತಾನಿ ಪ್ರಕರ್ಷೇಣ ಯತಃ ಸದಾ |

ಪ್ರಕೃಷ್ಟೋ ಭವ ಇತ್ಯಸ್ಯ ಜನ್ಮ ಪ್ರಭವಮಾಶ್ರಯೇ || ೩೪ ||

जायन्तेऽखिलभूतानि प्रकर्षेण यतः सदा ।

प्रकृष्टो भव इत्यस्य जन्म प्रभवमाश्रये ॥ ३४ ॥


ಎಲ್ಲ ಚರಾಚರಗಳೂ ಯಾವನಿಂದ ಶ್ರೇಷ್ಠ / ಪ್ರಕೃಷ್ಟ ರೀತಿಯಿಂದ ಜನಿಸುತ್ತವೆಯೋ, ಯಾವಾತನ ಇರುವಿಕೆ / ಜನ್ಮವು ಅತ್ಯಂತ ಶ್ರೇಷ್ಠ / ಪ್ರಕೃಷ್ಟವಾಗಿ ಸ್ವೇಚ್ಛೆಯ ಅವತಾರರೂಪವಾಗಿರುವುದೋ ಅಮತಹ ಮಹಾವಿಷ್ಣುವು ಪ್ರಭವನೆನಿಸಿರುವನು. ಅವನನ್ನು ನಾನು ಶರಣುಹೊಂದುತ್ತೇನೆ.


|| ಓಂ ಪ್ರಭವೇ ನಮ ಓ೩ಮ್ || ೩೫ ||

॥ ॐ प्रभवे नम ओ३म् ॥ ३५ ॥


ಸರ್ವಕ್ರಿಯಾಸು ಸಾಮರ್ಥ್ಯಾತಿಶಯಾದಚ್ಯುತಃ ಪ್ರಭುಃ || ೩೫ ||

सर्वक्रियासु सामर्थ्यातिशयादच्युतः प्रभुः ॥ ३५ ॥


ಎಲ್ಲ ಕ್ರಿಯೆಗಳಲ್ಲೂ, ಕೆಲಸ-ಕಾರ್ಯಗಳಲ್ಲೂ, ಕರ್ಮಗಳಲ್ಲೂ ಸರ್ವಾತಿಶಯವಾದ (ಎಲ್ಲರಿಗಿಂತ ಹೆಚ್ಚಿನದಾದ) ಸಾಮರ್ಥ್ಯವಿರುವುದರಿಂದಾಗಿ ಮಹಾವಿಷ್ಣುವು ಪ್ರಭುವೆನಿಸಿರುವನು.


|| ಓಮೀಶ್ವರಾಯ ನಮ ಓ೩ಮ್ || ೩೬ ||

॥ ॐ ईश्वराय नम ओ३म् ॥ ३६ ॥


ನಿರುಪಾಧಿಕಮೈಶ್ವರ್ಯಮಸ್ಯೇತಿ ವಿಷ್ಣುರೀಶ್ವರಃ |

ವ್ಯಾಪ್ನೋತ್ಯಶ್ನುತ ಇತ್ಯೇನಮೀಶ್ವರಂ ಪ್ರಣಮಾಮ್ಯಹಮ್ || ೩೬ ||

निरुपाधिकमैश्वर्यमस्येति विष्णुरीश्वरः ।

व्याप्नोत्यश्नुत इत्येनमीश्वरं प्रणमाम्यहम् ॥ ३६ ॥


ಯಾವುದೇ ಉಪಾಧಿಯಿಲ್ಲದ, ಗುರುತಿಲ್ಲದ, ವಿಶೇಷವಿಲ್ಲದ ನಿರ್ವಿಶೇಷಕ ನಿರುಪಾಧಿಕ ಐಶ್ವರ್ಯವು / ಈಶ್ವರತ್ವವು / ಒಡೆತನವು ಇವನದೆಂಬುದರಿಂದಾಗಿ ವಿಷ್ಣುವು ಈಶ್ವರನು. ಸರ್ವವನ್ನೂ ವ್ಯಾಪಿಸುತ್ತಾನೆ, ಹೊಂದುತ್ತಾನೆ ಎಂಬುದರಿಂದಲೂ ಈಶ್ವರನೆನಿಸಿದ ಪರಮಾತ್ಮನನ್ನು ನಾನು ಪ್ರಣಾಮ ಮಾಡುತ್ತೇನೆ.



ಸ್ವಯಮ್ಭೂಶ್ಶಮ್ಭುರಾದಿತ್ಯಫ್-ಪುಷ್ಕರಾಕ್ಷೋ ಮಹಾಸ್ವನಃ |

ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || ೧೮ ||

स्वयम्भूश्शम्भुरादित्यफ्-पुष्कराक्षो महास्वनः ।

अनादिनिधनो धाता विधाता धातुरुत्तमः ॥ १८ ॥


|| ಓಂ ಸ್ವಯಮ್ಭುವೇ ನಮ ಓ೩ಮ್ ||

॥ ॐ स्वयम्भुवे नम ओ३म् ॥


ಸ್ವಯಮ್ಭುವೇ ನಮಸ್ತುಭ್ಯಂ ಭವತ್ಯೇವ ಹರಿಸ್ಸ್ವಯಮ್ |

ಸರ್ವಾಧಾರಸ್ಸ್ವತನ್ತ್ರಶ್ಚ ಸರ್ವೋಪರಿ ಭವತ್ಯುತ || ೩೭ ||

स्वयम्भुवे नमस्तुभ्यं भवत्येव हरिस्स्वयम् ।

सर्वाधारस्स्वतन्त्रश्च सर्वोपरि भवत्युत ॥ ३७ ॥


ಹೇ ಸ್ವಯಂ-ಭೂ ನಾಮಕನಾದ ಮಹಾವಿಷ್ಣುವೆ! ನಿನಗಿದೋ ನಮನಗಳು. ಶ್ರೀಹರಿಯು ಸ್ವಯಂ ತಾನೋರ್ವನೇ ತಾನೇ ತಾನಾಗಿ ಇರುತ್ತಾನಾದ್ದರಿಂದ ಸ್ವಯಂ-ಭೂಃ | ಎಲ್ಲಕ್ಕೂ ಆಧಾರವಾಗಿ ಎಲ್ಲದರ ಅಧೋಭಾಗದಲ್ಲಿರುವುದರಿಂದಲೂ ಸ್ವಯಂ-ಭೂಃ | ಶ್ರೀಮನ್ನಾದಿಲಕ್ಷ್ಮೀನಾರಾಯಣನು ಯಾರ ಅಂಕೆಗೂ ಒಳಪಡದೆ, ಪರತಂತ್ರನಲ್ಲದೆ, ತನ್ನದೇ ಶಾಸನದಂತೆ, ಸ್ವೇಚ್ಛೆಯಿಂದ ಪ್ರವರ್ತಿಸುವುದರಿಂದಲೂ ಸ್ವಯಂ-ಭೂಃ | ಅಥವಾ ಶ್ರೀಹರಿಯು ಎಲ್ಲರಿಗಿಂತಲೂ ಉನ್ನತತಮನಾಗಿ ಸರ್ವಾಧಿಕನಾಗಿ, ಎಲ್ಲ ಅನಾತ್ಮಕ್ಕಿಂತ ಮೇಲಿನ ಪರಮ ಆತ್ಮನಾಗಿ ಸರ್ವರ ಸಂಚಾಲಕನಾಗಿ ಇರುವುದರಿಂದಲೂ ಸ್ವಯಂ-ಭೂಃ ಎನಿಸಿರುವನು.


|| ಓಂ ಶಮ್ಭವೇ ನಮ ಓ೩ಮ್ || ೩೮ ||

॥ ॐ शम्भवे नम ओ३म् ॥ ३८ ॥


ಪ್ರಪದ್ಯೇ ಶಮ್ಭುನಾಮಾನಂ ಯಸ್ಸುಖಂ ಶಂ ತನೋತಿ ನಃ |

ಭಾವಯತೀತಿ ಭಕ್ತಾನಾಂ ವಿಷ್ಣುಂ ತಂ ಪ್ರಣಮಾಮ್ಯಹಮ್ || ೩೮ ||

प्रपद्ये शम्भुनामानं यस्सुखं शं तनोति नः ।

भावयतीति भक्तानां विष्णुं तं प्रणमाम्यहम् ॥ ३८ ॥


ಶಂಭುವೆಂಬ ಹೆಸರಿರುವ ಮಹಾವಿಷ್ಣುವನ್ನು ನಾನು ಶರಣುಹೊಂದುತ್ತೇನೆ. ಯಾವ ಈತನು ತನ್ನ ಭಕ್ತರಾದ ನಮಗೆ ಶಂ / ಸುಖವನ್ನು ಉಂಟುಮಾಡುತ್ತಾನೆಯೋ ಅಂತಹ ಆ ವಿಷ್ಣುವನ್ನು ನಾನು ಪ್ರಣಾಮಮಾಡುತ್ತೇನೆ.


|| ಓಮಾದಿತ್ಯಾಯ ನಮ ಓ೩ಮ್ || ೩೯ ||

॥ ॐ आदित्याय नम ओ३म् ॥ ३९ ॥


ಅದಿತೇಃ ಪುತ್ರ ಆದಿತ್ಯ ವಿಷ್ಣೋ ತ್ವಾಂ ಭಾತಿ ಕೀರ್ತಯೇ |

ಅದಿತೇರಖಣ್ಡಿತಾಯಾಃ ಕೋಃ ಪತ ಏಕೋ ಹ್ಯನೇಕವತ್ || ೩೯ ||

अदितेः पुत्र आदित्य विष्णो त्वां भाति कीर्तये ।

अदितेरखण्डितायाः कोः पत एको ह्यनेकवत् ॥ ३९ ॥


ಆದಿತ್ಯಮಂಡಲಮಧ್ಯಸ್ಥನಾದ ಹಿರಣ್ಮಯಪುರುಷರೂಪಿಯಾದ ಸೂರ್ಯನಾರಾಯಣಾತ್ಮಕನಾದ ಅದಿತಿದೇವಿಗೆ ಕಶ್ಯಪಮಹರ್ಷಿಯಿಂದುದಿಸಿ ಆದಿತ್ಯನೆನಿಸಿದ ಅಯ್ಯಾ ವಿಷ್ಣುವೆ!  ಅಖಂಡವಾಗಿ ಅ-ದಿತಿಯೆನಿಸಿದ ಬ್ರಹ್ಮಾಂಡದ / ("ಕು" ಅಥವಾ )ಪೃಥಿವಿಯ ಪತಿಯಾಗಿ ಆದಿತ್ಯನೆನಿಸಿದ ನಾರಾಯಣನೆ!! ಒಬ್ಬನೇ ಸೂರ್ಯನು ಹಲವು ಜಲಾಶಯಗಳಲ್ಲಿ ಅನೇಕವಾಗಿ ತೋರಿದಂತೆ ಏಕಮೇವಾದ್ವಿತೀಯ ಪರಮ ಆತ್ಮಸ್ವರೂಪಿಯಾಗಿದ್ದೂ ಸೃಷ್ಟಿಯಲ್ಲಿ ಅನೇಕವಾಗಿ ತೋರಿ ಬೆಳಗುವುದರಿಂದ ಗಗನಸ್ಥ ಆದಿತ್ಯನ ಸಾಧರ್ಮ್ಯದಿಂದಾಗಿ (ಸಮಾನಗುಣಧರ್ಮದಿಂದಾಗಿ) ಆದಿತ್ಯನೆನಿಸಿದ ಸರ್ವವ್ಯಾಪಕ ಮಹಾವಿಷ್ಣುವೆ!!! ನಿನ್ನ ನಾಮ, ರೂಪ, ಗುಣ, ಚರಿತೆ, ಅವತಾರ, ಲೀಲೆ ಇತ್ಯಾದಿಗಳನ್ನು ಕೀರ್ತಿಸುತ್ತೇನೆ / ಪಾಡಿ ಪೊಗಳುತ್ತೇನೆ.


|| ಓಂ ಪುಷ್ಕರಾಕ್ಷಾಯ ನಮ ಓ೩ಮ್ || ೪೦ ||

॥ ॐ पुष्कराक्षाय नम ओ३म् ॥ ४० ॥


ಯಸ್ಯಾಕ್ಷಿಣೀ ಹಿ ವರ್ತೇತೇ ಪುಷ್ಕರಾವಿವ ಸುನ್ದರೌ |

ಕೋಮಲೌ ಮೃದುಲೌ ವಿಷ್ಣೋಃ ಪುಷ್ಕರಾಕ್ಷಾಯ ತೇ ನಮಃ || ೪೦ ||

यस्याक्षिणी हि वर्तेते पुष्कराविव सुन्दरौ ।

कोमलौ मृदुलौ विष्णोः पुष्कराक्षाय ते नमः ॥ ४० ॥


ಯಾವನ ಅಕ್ಷಿದ್ವಯವು (ಕಣ್ಣೆರಡು) ಪುಷ್ಕರ / ತಾವರೆಗಳಂತೆ ಸುಂದರವೂ ಕೋಮಲವೂ ಮೃದುಲವೂ ಆಗಿವೆಯೋ ಅಂತಹ ಪುಷ್ಕರಾಕ್ಷನಾಮಕ ವಿಷ್ಣುವಾದ ನಿನಗೆ ನಮಸ್ಕಾರ.


|| ಓಂ ಮಹಾಸ್ವನಾಯ ನಮ ಓ೩ಮ್ || ೪೧ ||

|| ॐ महास्वनाय नम ओ३म् || ४१ ||


ಮಹಾಸ್ವನಮಹಂ ವನ್ದೇ ನಾದ ಊರ್ಜಿತ ಈರಿತಃ । 

ಶ್ರುತಿಲಕ್ಷಣ ಏತಸ್ಯ ತಂ ವಿಷ್ಣುಂ ಪ್ರಣಮಾಮ್ಯಹಮ್ ।। ೪೧ ।।

महास्वनमहं वन्दे नाद ऊर्जित ईरितः ।

श्रुतिलक्षण एतस्य तं विष्णुं प्रणमाम्यहम् ।। ४१ ।।


ಮಹತ್ತಮ ಊರ್ಜಾಯುತವಾದ, ಶ್ರೇಷ್ಠವಾದ, ಶ್ರುತಿ / ವೇದ ಎಂಬ ರೂಪು-ಲಕ್ಷಣಗಳುಳ್ಳ ಬ್ರಹ್ಮನಾದವು ಯಾವನ ನಿಃಶ್ವಾಸರೂಪವಾಗಿ ಹೊರಹೊಮ್ಮಿತೆಂದು ಹೇಳಲಾಗಿದೆಯೋ, ಅಂತಹ "ಮಹಾಸ್ವನ" ನಾಮಕನಾದ ಮಹಾವಿಷ್ಣುವನ್ನು ವಂದಿಸುತ್ತೇನೆ, ಪ್ರಣಾಮಮಾಡುತ್ತೇನೆ.


|| ಓಮನಾದಿನಿಧನಾಯ ನಮ ಓ೩ಮ್ || ೪೨ ||

|| ॐ अनादिनिधनाय नम ओ३म् || ४२ ||


ಆದಿರ್ಜನ್ಮ ನ ಯಸ್ಯಾಸ್ತಿ ನಿಧನಂ ನಾಶ ಏವ ಚ |

ಅನಾದಿನಿಧನಂ ವಿಷ್ಣುಂ ಪ್ರಪದ್ಯೇ ತಂ ಸದಾ ಸ್ಥಿರಮ್ || ೪೨ ||


आदिर्जन्म न यस्यास्ति निधनं नाश एव च ।

अनादिनिधनं विष्णुं प्रपद्ये तं सदा स्थिरम् ॥ ४२ ॥


ಯಾವನಿಗೆ ಆದಿ-ಅಂತ್ಯ ಜನನ-ಮರಣ ಜನ್ಮ-ನಿಧನ/ನಾಶಗಳಿಲ್ಲವೋ ಅಂತಹ ಸದಾ ಸುಸ್ಥಿರನಾದ ಅನಾದಿ-ನಿಧನನಾದ ವಿಷ್ಣುವನ್ನು ಸರ್ವದಾ ಶರಣುಹೊಂದುತ್ತೇನೆ.


|| ಓಂ ಧಾತ್ರೇ ನಮ ಓ೩ಮ್ || ೪೩ ||

॥ ॐ धात्रे नम ओ३म् ॥ ४३ ॥


ನಮೋऽಸ್ತು ಧಾ‍‍‌ತ್ರೇ ಹರಯೇ ಚ ತಸ್ಮೈ |

ಅನನ್ತರೂಪೇಣ ಬಿಭರ್ತಿ ವಿಶ್ವಮ್ || ೪೩ ||

(" ಉಪೇನ್ದ್ರವಜ್ರಾ ಜತಜಾಸ್ತತೋ ಗೌ "— ತ್ರಿಷ್ಟುಪ್ ಛನ್ದಸ್ಸು– ಉಪೇನ್ದ್ರವಜ್ರಾವೃತ್ತಮ್)


नमोऽस्तु धात्रे हरये च तस्मै ।

अनन्तरूपेण बिभर्ति विश्वम् ॥ ४३ ॥

(" उपेन्द्रवज्रा जतजास्ततो गौ "— त्रिष्टुप् छन्दः – उपेन्द्रवज्रावृत्तम् )


ಅನಂತ / ವಾಸುಕಿ / ಆದಿಶೇಷ, ಆದಿಕೂರ್ಮ ಮುಂತಾದ ರೂಪಗಳಿಂದ ಬ್ರಹ್ಮಾಂಡಕ್ಕೆ ಆಧಾರನಾಗಿರುವುದರಿಂದ ಧಾತೃವೆನಿಸಿರುವ ಶ್ರೀಹರಿಗೆ ನಮಸ್ಕಾರ.


|| ಓಂ ವಿಧಾತ್ರೇ ನಮ ಓ೩ಮ್ || ೪೪ ||

॥ ॐ विधात्रे नम ओ३म् ॥ ४४ ॥


ನಮೋ ವಿಧಾತ್ರೇ ಕ್ರಿಯಮಾಣಕರ್ತ್ರೇ |

ಫಲಪ್ರದಾತ್ರೇ ಹರಯೇ ನಮಸ್ತೇ || ೪೪ ||

(" ಉಪೇನ್ದ್ರವಜ್ರಾ ಜತಜಾಸ್ತತೋ ಗೌ "— ೧೧ ಅಕ್ಷರಪಾದದ ತ್ರಿಷ್ಟುಪ್ ಛನ್ದಸ್ಸು– ಉಪೇನ್ದ್ರವಜ್ರಾವೃತ್ತಮ್)


नमो विधात्रे क्रियमाणकर्त्रे ।

फलप्रदात्रे हरये नमस्ते ॥ ४४ ॥    

(" उपेन्द्रवज्रा जतजास्ततो गौ "— एकादशाक्षरपादं त्रिष्टुप् छन्दः – उपेन्द्रवज्रावृत्तम् )


ಸರ್ವ ಕರ್ಮಗಳನ್ನೂ ಹಾಗೂ ಅವುಗಳ ಫಲಗಳನ್ನೂ ಮಾಡಿಕೊಡುವುದರಿಂದ, ವಿಧಿವತ್ತಾಗಿಯೂ ವಿಶೇಷವಾಗಿಯೂ ವಿಧಾನ-ಪ್ರದಾನಮಾಡುವುದರಿಂದ ವಿಧಾತೃವೆನಿಸಿದ ವಿಷ್ಣುವಿಗೆ ನಮನಗಳು.


|| ಓಂ ಧಾತುರುತ್ತಮಾಯ ನಮ ಓ೩ಮ್ || ೪೫ || 

{ ಓಂ ಧಾತವೇ ನಮ ಓ೩ಮ್ |

 ಓಮುತ್ತಮಾಯ ನಮ ಓ೩ಮ್ || }

॥ ॐ धातुरुत्तमाय नम ओ३म् ॥ ४५ ॥

{ ॐ धातवे नम ओ३म् । 

ॐ उत्तमाय नम ओ३म् ॥ }


(" ಸೂರ್ಯಾಶ್ವೈರ್ಮಸಜಸ್ತತಾಸ್ಸಗುರವಃ ಶಾರ್ದೂಲವಿಕ್ರೀಡಿತಮ್ "— ೧೯ ಅಕ್ಷರಪಾದದ ಶಕ್ವರೀಚ್ಛನ್ದಸ್ಸು— ಶಾರ್ದೂಲವಿಕ್ರೀಡಿತವೃತ್ತ )

ಧರ್ತಾऽನನ್ತವಿಧೀ ವಿಶೇಷವಿಧಿನಾ ವಿಷ್ಣುಸ್ಸ್ವಯಂ ಸನ್ತತಂ

ಸರ್ವಾಧಿಕ್ಯಚಿದಾತ್ಮಕೋ ಹರಿರಯಂ ಧಾತೂತ್ತಮಃ ಕ್ವಾದಿಭಿಃ ।

ವಿಶ್ವಾಧಾರಚಿದೇವ ಧಾತುರಿತಿ ವಾ ನಾಮದ್ವಯಂ ಚಿನ್ತ್ಯತಾಂ

ಸರ್ವೇಷಾಮುಪರಿಸ್ಥಿತ-ಉತ್ತಮ-ಮಿಮಂ ನಾರಾಯಣಂ ಭಾವಯೇತ್ || ೪೫ || 


(" सूर्याश्वैर्मसजस्ततास्सगुरवः शार्दूलविक्रीडितम् "— नवदशाक्षरपादं शक्वरीच्छन्दः – शार्दूलविक्रीडितवृत्तम्)

धर्ताऽनन्तविधी विशेषविधिना विष्णुस्स्वयं सन्ततं

सर्वाधिक्यचिदात्मको हरिरयं धातूत्तमः क्वादिभिः ।

विश्वाधारचिदेव धातुरिति वा नामद्वयं चिन्त्यतां

सर्वेषामुपरिस्थित-उत्तम-मिमं नारायणं भावयेत् || ४५ ||


ಬಹುವಿಸ್ತಾರವಾದ ಬ್ರಹ್ಮಾಂಡವನ್ನು ಹೊರುವ ಅನಂತಾದಿಗಳನ್ನೂ ತಾನು ಸತತವೂ ಆಧರಿಸಿ ವಿಷ್ಣುವು ಧಾತುರುತ್ತಮನೆನಿಸಿರುವನು. ಧಾತೃವೆನಿಸಿರುವ ವಿಧಿ ಸೃಷ್ಟಿಕರ್ತ ಚತುರ್ಮುಖ ಬ್ರಹ್ಮನಿಗೂ ತಾನೇ ಆಧಾರನಾಗಿ ಹರಿಯು ಧಾತುರುತ್ತಮನು. ಕು ಎಂದರೆ ಭೂಮಿ, ಕು-ಜ ಎಂದರೆ ಭೂಮಿಗೆ ಜನಿಸಿದ ಪುತ್ರ ಮಂಗಳ. ಅಂತಹ ಭೂಮಿಯೇ ಮುಂತಾದ ಸಕಲ ಗ್ರಹನಕ್ಷತ್ರಾದಿ ಧಾತುಗಳೆಲ್ಲಕ್ಕಿಂತಲೂ ಶ್ರೇಷ್ಠವಾದ ಜ್ಞಾನ-ಪ್ರಕಾಶ-ಚೈತನ್ಯರೂಪೀ ಚಿತ್ ಧಾತುಸ್ವರೂಪನಾದ ಮಹಾವಿಷ್ಣುವು ಧಾತುರುತ್ತಮನು. ಅಥವಾ, ಧಾತುಃ, ಉತ್ತಮಃ ಎಂದು ೨ ಹೆಸರುಗಳನ್ನೂ ಚಿಂತಿಸಬಹುದು. ವಿಶ್ವಕ್ಕೇ ಆಧಾರನಾದ ಚಿದ್ರೂಪಿಯೂ, ಚಿನ್ಮಯನೂ ಆದ ಹರಿಯೇ ಸರ್ವಮೂಲ ಧಾತುವು. ಮೇಲಿರುವ, ಊರ್ಧ್ವಲೋಕಗಳಲ್ಲಿರುವ, ಶ್ರೇಷ್ಠವಾಗಿರುವ, ಉನ್ನತಮಟ್ಟದ ಎಲ್ಲಕ್ಕಿಂತಲೂ ಎಲ್ಲರಿಗಿಂತಲೂ ಸರ್ವೋಚ್ಚನಾಗಿರುವುದರಿಂದ ಶ್ರೀಮನ್ನಾರಾಯಣನು ಉತ್ತಮನೆಂದು ಭಾವಿಸಬೇಕು, ಪೂಜಿಸಬೇಕು ("ಹರಿ ಸರ್ವೋತ್ತಮ" —ಮಾಧ್ವಪರಂಪರೆ). ಇಲ್ಲಿ ತ್ರಿಮೂರ್ತಿರೂಪಾತೀತ ಏಕಮೇವಾದ್ವಿತೀಯ ಸರ್ವೇಶ್ವರ ಪರಮಾತ್ಮಾ ಭಗವಂತ ಪರತತ್ತ್ವ ಆದಿಶಕ್ತಿ ಪರಬ್ರಹ್ಮ ಸರ್ವಾಂತರ್ಯಾಮಿಯನ್ನು ಹೇಳಿರುವುದೆಂದು ತಿಳಿಯಬೇಕು.


ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋऽಮರಪ್ರಭುಃ |

ವಿಶ್ವಕರ್ಮಾ ಮನುಸ್ತ್ವಷ್ಟಾ ಸ್ಥವಿಷ್ಠಃ ಸ್ಥವಿರೋ ಧ್ರುವಃ || ೧೯ ||


अप्रमेयो हृषीकेशः पद्मनाभोऽमरप्रभुः ।

विश्वकर्मा मनुस्त्वष्टा स्थविष्ठः स्थविरो ध्रुवः ॥ १९ ॥


|| ಓಮಪ್ರಮೇಯಾಯ ನಮ ಓ೩ಮ್ || ೪೬ ||

॥ ॐ अप्रमेयाय नम ओ३म् ॥ ४६ ॥


ಅಪ್ರಮೇಯಂ ಹರಿಂ ವನ್ದೇ ನ ಪ್ರಮೇಯೇಣ ಗೋಚರಃ |

ಕೇನಾಪಿ ಭಗವಾನ್ ವಿಷ್ಣುಃ ಸರ್ವಸಾಕ್ಷೀ ಭ್ರಮಾಪಹಾ || ೪೬ ||


अप्रमेयं हरिं वन्दे न प्रमेयेण गोचरः |

केनापि भगवान् विष्णुः सर्वसाक्षी भ्रमापहा || ४६ ||


ಶ್ರೀಹರಿಯು ಪ್ರತ್ಯಕ್ಷ , ಅನುಮಾನ ,  ಉಪಮಾನ ,  ಅರ್ಥಾಪತ್ತಿ  , ಅಭಾವ  , ಶಬ್ದ ಎಂಬ ಆರೂ ಪ್ರಮಾಣಗಳಿಗೂ ನಿಲುಕದವನೂ, ಇವೆಲ್ಲಕ್ಕೂ ಸಾಕ್ಷಿಯೂ, ಅಜ್ಞಾನಭ್ರಮೆಯನ್ನು ಹೋಗಲಾಡಿಸುವವನೂ ಆಗಿರುವನು. ಅಂತಹ ಅಪ್ರಮೇಯನಾಮಕನಾದ ಭಗವಾನ್ ಮಹಾವಿಷ್ಣುವನ್ನು ವಂದಿಸುತ್ತೇನೆ.


|| ಓಂ ಹೃಷೀಕೇಶಾಯ ನಮ ಓಮ್ || ೪೭ ||

॥ ॐ हृषीकेशाय नम ओ३म् ॥


ಹೃಷೀಕೇಶ ನಮಸ್ತುಭ್ಯಮಿನ್ದ್ರಿಯೇಶ್ವರ ತಾವಕಾಃ |

ಹೃಷ್ಟಾಃ ಕೇಶಾ ರಶ್ಮಯೋऽರ್ಕಶಶಿನೋಃ ಸ್ವಾಪಬೋಧಕಾಃ || ೪೭ ||


हृषीकेश नमस्तुभ्यमिन्द्रियेश्वर तावकाः।

हृष्टाः केशा रश्मयोऽर्कशशिनोः स्वापबोधकाः ॥ ४७ ॥


ಹೃಷಿಕೇಶನೆ! ನಿನಗಿದೋ ವಂದನೆಗಳು. ನೀನು ಇಂದ್ರಿಯಗಳ ಅಧಿಸ್ವಾಮಿಯು. ನಿನ್ನ ಕೇಶಪಾಶರೂಪವಾದ ಸೂರ್ಯ-ಚಂದ್ರರ ಉಷ್ಣ-ಶೀತಕಿರಣಗಳು ಲೋಕಕ್ಕೆ ಎಚ್ಚರ-ನಿದ್ರಾರೂಪವಾದ ಹರ್ಷವನ್ನುಂಟುಮಾಡುಮಾಡುವವುಗಳಾಗಿವೆ.


|| ಓಂ ಪದ್ಮನಾಭಾಯ ನಮ ಓ೩ಮ್ || ೪೮ ||

॥ ॐ पद्मनाभाय नम ओ३म् ॥ ४८ ॥


ಪದ್ಮನಾಭ ನಮಸ್ತುಭ್ಯಂ ಪದ್ಮಾಸನಪಿತೋ ಹರೇ |

ಪದ್ಮಾಪತೇ ಯಸ್ಯ ನಾಭೌ ಪದ್ಮಂ ಸರ್ಗಸ್ಯ ಕಾರಣಮ್ || ೪೮ ||


पद्मनाभ नमस्तुभ्यं पद्मासनपितो हरे ।

पद्मापते यस्य नाभौ पद्मं सर्गस्य कारणम् ॥ ४८ ॥


ಅಯ್ಯಾ ಪದ್ಮನಾಭನೆ! ನಿನಗೆ ನಮಸ್ಕಾರವು. ನೀನು ಪದ್ಮದಲ್ಲೇ ಆಸೀನನಾದ ಚತುರ್ಮುಖ ಬ್ರಹ್ಮನ ಪಿತನು. ಹೇ ಶ್ರೀಹರಿಯೆ! ನೀನು ಸಕಲಲೋಕಕ್ಕೆ ಕಾರಣವಾದ ನಾಭೀಪದ್ಮವನ್ನು / ತಾವರೆಯನ್ನು ನಿನ್ನ ನಾಭಿಯಲ್ಲಿ / ಹೊಕ್ಕುಳಲ್ಲಿ ಧರಿಸಿ, ಪದ್ಮಾನಾಮಕ ಮಹಾಲಕ್ಷ್ಮಿಯ ಪತಿಯೂ ಆಗಿರುವಿ.


|| ಓಮ್ ಅಮರಪ್ರಭವೇ ನಮ ಓ೩ಮ್ || ೪೯ ||

॥ ॐ अमरप्रभवे नम ओ३म् ॥ ४९ ॥


ಅಮರಪ್ರಭುಮೀಡೇऽಹಂ ವಿಷ್ಣುಂ ತ್ವಾಮಮರಾಧಿಪಮ್ |

ಮೃತಿರ್ನಾಸ್ತೀತಿ ದೇವಾನಾಂ ತೇಷಾಂ ನಾರಾಯಣಃ ಪ್ರಭುಃ || ೪೯ ||


अमरप्रभुमीडेऽहं विष्णुं त्वाममराधिपम् ।

मृतिर्नास्तीति देवानां तेषां नारायणः प्रभुः ॥ ४९ ॥


ಅಮೃತವನ್ನು ಕುಡಿದು ಮರಣರಹಿತರಾದ ದೇವತೆಗಳೇ ಅಮರರು. ಅಂತಹ ಇಂದ್ರ, ಅಗ್ನಿ, ಯಮ, ವರುಣ, ವಾಯು, ಕುಬೇರಾದಿ ಸಕಲ ಅಮರರ ಸರ್ವಾಧಿಪತಿಯು ಸಾಕ್ಷಾತ್ ಕ್ಷೀರಸಾಗರವಾಸಿ ಶೇಷಶಾಯಿ ಶ್ರೀಮನ್ನಾದಿಲಕ್ಷ್ಮೀನಾರಾಯಣನು. ಅಂತಹ ಹೇ ಅಮರಪ್ರಭುವೆ! ನಿನ್ನನ್ನು ಸಾದರಾತಿಶಯಪ್ರೇಮಭಕ್ತಿಗಳಿಂದ ಅನವರತವೂ ಸ್ತುತಿಸುತ್ತಾ ಶರಣುಹೊಂದುತ್ತೇನೆ. ನನ್ನ ಕಾಮ-ಕ್ರೋಧಾದಿ ಸಕಲ ಅರಿಷಡ್ವರ್ಗವನ್ನೂ ನಾಶಮಾಡು ತಂದೆಯೇ!!


|| ಓಂ ವಿಶ್ವಕರ್ಮಣೇ ನಮ ಓ೩ಮ್ || ೫೦ ||

॥ ॐ विश्वकर्मणे नम ओ३म् ॥ ५० ॥


ವಿಶ್ವಕರ್ಮನ್ ನಮಸ್ತುಭ್ಯಂ ಸರ್ವಕರ್ಮನ್ ಜಗತ್ ಕೃತಮ್ |

ನಿರ್ಮಾಣಶಕ್ತಿಮಾನ್ಯಸ್ಯ ಕರ್ಮ ವೈಚಿತ್ರ್ಯಮಚ್ಯುತ |

ವಿಶ್ವರೂಪಾಖ್ಯಕರ್ಮಾಪಿ ಯಸ್ಯ ತದ್ಧರಿಮಾಶ್ರಯೇ || ೫೦ ||


विश्वकर्मन् नमस्तुभ्यं सर्वकर्मन् जगत् कृतम् ।

निर्माणशक्तिमान् यस्य कर्म वैचित्र्यमच्युत |

विश्वरूपाख्यकर्मापि यस्य तद्धरिमाश्रये

॥ ५० ॥


ಹೇ ವಿಶ್ವಕರ್ಮನೆ! ನಿನಗೆ ನಮಸ್ಕಾರವು. ನೀನು ವಿಶ್ವದ ಎಲ್ಲ ಕರ್ಮಗಳನ್ನೂ ಮಾಡುವವನೇ ಆಗಿರುವಿ ಸಕಲ ಜೀವರ ಅಂತರಾತ್ಮನಾಗಿ. ಈ ಜಗತ್ತೇ ಯಾವನಿಗೆ ಒಂದು ಕರ್ಮವಾಗಿ ತೋರುವುದೋ ಅಥವಾ ಯಾವನ ಕರ್ಮವೋ ಅವನೇ ವಿಶ್ವಕರ್ಮನು. ಇಂದ್ರಿಯಗೋಚರವಾದ ಚಿತ್ರವಿಚಿತ್ರವಾದ ವೈವಿಧ್ಯಮಯವಾದ ಯಾವ ಪ್ರಪಂಚವಿದೆಯೋ ಇಂಥದ್ದನ್ನು ನಿರ್ಮಿಸುವ ಶಕ್ತಿಯುಳ್ಳ ನಾಶರಹಿತವಾದ ಅ-ಚ್ಯುತವಾದ ಪರತತ್ತ್ವವೇ ವಿಶ್ವಕರ್ಮ. ತ್ವಷ್ಟಾ / ವಿಶ್ವಕರ್ಮಾ ಎಂಬ ಹೆಸರಿನ ದೇವಶಿಲ್ಪಿ / ಪ್ರಜಾಪತಿ / ತ್ವಷ್ಟೃಬ್ರಹ್ಮನೂ ನೀನೇ. ಅಲ್ಲದೆ, ಭಗವಂತನಾದ ಶ್ರೀಹರಿಯು ಅನೇಕ ಬಾರಿ ತನ್ನ ವಿಶ್ವರೂಪವನ್ನೂ ಭಕ್ತರಿಗೆ ತೋರಿಕೊಂಡೂ ವಿಶ್ವಕರ್ಮನೆನಿಸಿರುವನು. ಅಂತಹ ವಿಶ್ವಕರ್ಮನಾಮಕನೂ ಆದ ಮಹಾವಿಷ್ಣುವನ್ನು ಆಶ್ರಯಿಸುತ್ತೇನೆ / ಶರಣುಹೊಂದುತ್ತೇನೆ.   


|| ಓಂ ಮನವೇ ನಮ ಓ೩ಮ್ || ೫೧ ||

॥ ॐ मनवे नम ओ३म् ॥ ५१ ॥


ಮನವೇ ತೇ ನಮಸ್ತುಭ್ಯಂ ಮನನಾನ್ಮನುರಚ್ಯುತ |

ಸರ್ವಜ್ಞೋ ಮನುತೇ ಕೃತ್ಸ್ನಂ

ಮನುರ್ಮನ್ತ್ರಃ ಪ್ರಜಾಪತಿಃ || ೫೧ ||


मनवे ते नमस्तुभ्यं मननान्मनुरच्युतः ।

सर्वज्ञो मनुते कृत्स्नं मनुर्मन्त्रः प्रजापतिः ॥ ५१ ॥


ಹೇ ಮನುವೆ! ನಿನಗೆ ನಮಸ್ಕಾರವು. ಸದಾ ಮನನಶೀಲನಾದ್ದರಿಂದ, ನಿನಗಿಂತ ಅಧಿಕ ಮನನಶೀಲರಿಲ್ಲದ್ದರಿಂದ ಹೇ ಅಚ್ಯುತನೆ! ನೀನೇ ಮನುವೆನಿಸಿರುವಿ. ಎಲ್ಲವನ್ನೂ ಅರಿತ ಸರ್ವಜ್ಞನೂ ನೀನೇ ಆದ್ದರಿಂದಲೂ ಮನುವು. ಮನುವೆಂದರೆ ಮಂತ್ರ, ವೇದ, ಶ್ರುತಿ, ಬ್ರಹ್ಮ. ವೇದಪುರುಷನೂ ನೀನೇ. ಸ್ವಾಯಂಭುವಾದಿ ಪ್ರಜಾಪತಿರೂಪರಾದ ೧೪ ಮನುಗಳೂ ನೀನೇ ಆಗಿರುವಿ.


|| ಓಂ ಮನವೇ ನಮ ಓ೩ಮ್ || ೫೧ ||

॥ ॐ मनवे नम ओ३म् ॥ ५१ ॥


ಮನನಾನ್ಮನುರಿತ್ಯಾಹುರ್ಮನ್ತಾऽದ್ವಿತೀಯ ಈರಿತಃ |

ಮನ್ತ್ರಃ ಪ್ರಜಾಪತಿರ್ವಿಷ್ಣುಸ್ತಂ ಮನುಂ ಪ್ರಣಮಾಮ್ಯಹಮ್ || ೫೧ ||


मननान्मनुरित्याहुर्मन्ताऽद्वितीय ईरितः ।

मन्त्रः प्रजापतिर्विष्णुस्तं मनुं प्रणमाम्यहम् ॥ ५१ ॥


ಮನನ ಮಾಡುವುದರಿಂದಾಗಿ ಮನುವೆನ್ನುವರು. ಈತನೇ ಅದ್ವಿತೀಯ ಮನುವು, ಇವನಿಗಿಂತ ಬೇರೆ ಮನನಶೀಲರಿಲ್ಲವೆನ್ನಲಾಗಿದೆ. ಮನುವೆಂದರೆ ಮಂತ್ರವೆಂದೂ, ೧೪ ಮನ್ವಂತರಾಧಿಪತಿ ಪ್ರಜಾಪತಿಗಳೆಂದೂ ಅರ್ಥ. ಹೀಗೆ ಮನುವೆನಿಸಿದ ವಿಷ್ಣುವನ್ನು ನಾನು ಪ್ರಣಮಿಸುತ್ತೇನೆ (ಪ್ರ-ನಮಿಸುತ್ತೇನೆ).


|| ಓಂ ತ್ವಷ್ಟ್ರೇ ನಮ ಓ೩ಮ್ || ೫೨ ||

॥ ॐ त्वष्ट्रे नम ओ३म् ॥ ५२ ॥


ಸಂಹಾರೇ ಸರ್ವಭೂತಾನಾಂ ತನೂಕರಣತೋ ಹರಿಃ |

ತ್ವಕ್ಷತೇಸ್ತೃಚ್ ಕ್ಷಯಾರ್ಥೇ ತು ತ್ವಷ್ಟಾರಂ ಹರಿಮಾಶ್ರಯೇ || ೫೨ ||


संहारे सर्वभूतानां तनूकरणतो हरिः ।

त्वक्षतेस्तृच् क्षयार्थे तु त्वष्टारं हरिमाश्रये ॥ ५२ ॥


ಸಕಲ ಚರಾಚರಗಳ ಸಂಹಾರಕಾಲದಲ್ಲಿ ಅವುಗಳ ಶರೀರಗಳನ್ನು ಕ್ಷೀಣಗೊಳಿಸಿ ನಾಶಪಡಿಸುವುದರಿಂದಾಗಿ ಆ ಅರ್ಥ ಕೊಡುವ ತ್ವಕ್ಷ ತನೂಕರಣೇ ಧಾತುವಿಗೆ ತೃಚ್ ಪ್ರತ್ಯಯವು ಬಂದು ಸಿದ್ಧವಾದ ತ್ವಷ್ಟಾ ಪದವು ಆ ಸೃಷ್ಟಿ-ಸ್ಥಿತಿ-ಸಂಹಾರಕ ಪರಮಾತ್ಮವಾಚಕವೇ ಆಗಿದೆ. ಅಂತಹ ತ್ವಷ್ಟೃನಾಮಕ ಹರಿಯನ್ನು ಶರಣಾಗುತ್ತೇನೆ.


|| ಓಂ ಸ್ಥವಿಷ್ಠಾಯ ನಮ ಓ೩ಮ್ || ೫೩ ||

॥ ॐ स्थविष्ठाय नम ओ३म् ॥ ५३ ॥


ಸ್ಥವಿಷ್ಠಂ ಹರಿಮೀಡೇऽಹಂ ಸ್ಥೂಲಂ ಸ್ಥೂಲತಮಂ ವಿಭುಮ್ |

ಸ್ಥೂಲತ್ವೇ ಹ್ಯತಿಶೇತೇऽಯಂ ಸರ್ವಂ ತಂ ಪ್ರಣಮಾಮ್ಯಹಮ್ || ೫೩ ||


स्थविष्ठं हरिमीडेऽहं स्थूलं स्थूलतमं विभुम् ।

स्थूलत्वे ह्यतिशेतेऽयं सर्वं तं प्रणमाम्यहम् ॥ ५३ ॥


ಸ್ಥವಿಷ್ಠನಾಮಕನಾದ ಶ್ರೀಹರಿಯನ್ನು ನಾನು ಸ್ತುತಿಸುತ್ತೇನೆ. ಆ ಮಹಾವಿಷ್ಣುವು ಎಲ್ಲ ಸೃಷ್ಟಿಗಿಂತಲೂ ಅತಿಶಯವಾದ ಸ್ಥೂಲಕಾಯನು; ಬ್ರಹ್ಮಾಂಡರೂಪನು; ವಿರಾಟ್ ಶರೀರಿಯು. ಅಂತಹ ಮಹಾವಿಷ್ಣುವನ್ನು ನಾನು ನಮಸ್ಕರಿಸುತ್ತೇನೆ.


|| ಓಂ ಸ್ಥವಿರಾಯ ಧ್ರುವಾಯ ನಮ ಓ೩ಮ್ || ೫೪ ||

॥ ॐ स्थविराय ध्रुवाय नम ओऽम् ॥ ५४ ॥


ಪುರಾಣಂ ಸ್ಥವಿರಂ ವನ್ದೇ ವರಿಷ್ಠಮಚಲಂ ಸ್ಥಿರಮ್ |

ಧ್ರುವಂ ಸ್ಥಾಣುಂ ಹರಿಂ ನಿತ್ಯಂ ಮಹಾವಿಷ್ಣುಂ ಸನಾತನಮ್ || ೫೪ ||


पुराणं स्थविरं वन्दे वरिष्ठमचलं स्थिरम् ।

ध्रुवं स्थाणुं हरिं नित्यं महाविष्णुं सनातनम् ॥ ५४ ॥


ಸ್ಥವಿರನೆಂದರೆ ಅಚಲನೂ ಪುರಾತನನೂ ವರಿಷ್ಠನೂ ವಯೋವೃದ್ಧನೂ  ಸ್ಥಿರನೂ ಆದವನು. ಧ್ರುವನೆಂದರೆ ಶಾಶ್ವತನೂ, ನಿತ್ಯನೂ ಸನಾತನನೂ ಆದವನು. ಹೀಗೆ ಪುರಾತನನೂ ಶಾಶ್ವತನೂ ಆಗಿ ಸ್ಥವಿರೋ ಧ್ರುವಃ ಎಂಬ ಹೆಸರನ್ನು ಪಡೆದ ಮಹಾವಿಷ್ಣುವನ್ನು / ಶ್ರೀಹರಿಯನ್ನು ವಂದಿಸುತ್ತೇನೆ.




ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |

ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಙ್ಗಲಂ ಪರಮ್ || ೨೦ ||


अग्राह्यः शाश्वतः कृष्णो लोहिताक्षः प्रतर्दनः ।

प्रभूतस्त्रिककुब्धाम पवित्रं मङ्गलं परम् ॥ २० ॥


|| ಓಂ ಅಗ್ರಾಹ್ಯಾಯ ನಮ ಓ೩ಮ್ || ೫೫ ||

॥ ॐ अग्राह्याय नम ओ३म् ॥ ५५ ॥


ಅಗ್ರಾಹ್ಯಾಯ ನಮಸ್ತುಭ್ಯಂ ಕರ್ಮೇನ್ದ್ರಿಯೈರ್ನ ಗೃಹ್ಯತೇ |

ಆತ್ಮಾ ಸ ಪರಮಾತ್ಮಾ ಚ ನಿರಾಕಾರಃ ಪರಾತ್ಪರಃ || ೫೫ ||


अग्राह्याय नमस्तुभ्यं कर्मेन्द्रियैर्न गृह्यते ।

आत्मा स परमात्मा च निराकारः परात्परः ॥ ५५ ॥


ಅಯ್ಯಾ ಅಗ್ರಾಹ್ಯನಾಮಕನಾದ ಮಹಾವಿಷ್ಣುವೆ! ನಿನಗೆ ನಮಸ್ಕಾರವು. ನೀನು ಆತ್ಮಸ್ವರೂಪಿಯೂ, ಪರಮಾತ್ಮಸ್ವರೂಪಿಯೂ, ನಿರಾಕಾರನೂ, ಶ್ರೇಷ್ಠಾತಿಶ್ರೇಷ್ಠನಾಗಿ ಪರಾತ್ಪರನೂ ಆಗಿರುವುದರಿಂದ ವಾಕ್-ಪಾಣಿ-ಪಾದ-ಪಾಯು-ಉಪಸ್ಥಗಳೆಂಬ ಸಮಸ್ತ ಕರ್ಮೇಂದ್ರಿಯಗಳಿಗೂ ಗ್ರಾಹ್ಯನಲ್ಲ / ನಿಲುಕದವನಾಗಿರುವಿ.


|| ಓಂ ಶಾಶ್ವತಾಯ ನಮ ಓ೩ಮ್ || ೫೬ ||

॥ ॐ शाश्वताय नम ओ३म् ॥ ५६ ॥


ಶಶ್ವತ್ ಸರ್ವೇಷು ಕಾಲೇಷು ಭವತೀತಿ ಹಿ ಶಾಶ್ವತಃ |

ವನ್ದೇ ತಂ ಮಾಧವಂ ವಿಷ್ಣುಂ ಶಾಶ್ವತಂ ಶಿವಮಚ್ಯುತಮ್ || ೫೬ ||


शश्वत् सर्वेषु कालेषु भवतीति हि शाश्वतः ।

वन्दे तं माधवं विष्णुं शाश्वतं शिवमच्युतम् ॥ ५६ ॥


ಎಲ್ಲ ಕಾಲಗಳಲ್ಲೂ ಇರುತ್ತಾನಾದ್ದರಿಂದ ಶ್ರೀಮನ್ನಾರಾಯಣನು ಶಾಶ್ವತನೆನಿಸಿರುವನು. ಅಂತಹ ಲಕ್ಷ್ಮೀಮಾತೆಯ ವಲ್ಲಭನೂ (ಮಾಧವನೂ), ಮಂಗಲ (ಶಿವ)ಸ್ವರೂಪನೂ, ನಾಶರಹಿತನೂ (ಅ-ಚ್ಯುತನೂ), ವಿಶ್ವವ್ಯಾಪಿಯಾಗಿ ಅಣುರೇಣುಗಳಲ್ಲೂ ಇದ್ದು ವಿಷ್ಣುವೆನಿಸಿರುವ ("ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ ಇತಿ ವಿಷ್ಣುಃ", "विश्वं व्याप्नोति प्रविशति च इति विष्णुः"), ಸದಾ ಇರುವುದರಿಂದ ಶಾಶ್ವತನೆನಿಸಿರುವ ಆ ಭಗವಂತನನ್ನು ವಂದಿಸುತ್ತೇನೆ.


|| ಓಂ ಕೃಷ್ಣಾಯ ನಮ ಓ೩ಮ್ || ೫೭ ||

॥ ॐ कृष्णाय नम ओ३म् ॥ ५७ ॥


ಶ್ರೀಕೃಷ್ಣಾಯ ನಮಸ್ತುಭ್ಯಂ ಸಚ್ಚಿದಾನನ್ದರೂಪಿಣೇ |

ಕೃಷ್ಣವರ್ಣಾತ್ಮಕತ್ವಾದ್ವಾ ಕೃಷಿರ್ಭೂರ್ಣಶ್ಚ ನಿರ್ವೃತೇಃ || ೫೭ ||


श्रीकृष्णाय नमस्तुभ्यं सच्चिदानन्दरूपिणे ।

कृष्णवर्णात्मकत्वाद्वा कृषिर्भूर्णश्च निर्वृतेः ॥ ५७ ॥


ಹೇ ಶ್ರೀಕೃಷ್ಣನೆ! ನಿನಗೆ ನಮಸ್ಕಾರ.


 "ಕೃಷಿರ್ಭೂವಾಚಕಃ ಶಬ್ದೋ 

ಣಶ್ಚ ನಿರ್ವೃತಿವಾಚಕಃ |

 ವಿಷ್ಣುಸ್ತದ್ಭಾವಯೋಗಾಚ್ಚ 

ಕೃಷ್ಣೋ ಭವತಿ ಶಾಶ್ವತಃ ||" 

"कृषिर्भूवाचकः शब्दो

णश्च निर्वृतिकारकः ।

विष्णुस्तद्भावयोगाच्च

कृष्णो भवति शाश्वतः ॥")

(ಮಹಾಭಾರತ, ಉದ್ಯೋಗಪರ್ವ ೭೦|೫—महाभारत, उद्योगपर्व ७०।५)


ಎಂಬ ವೇದವ್ಯಾಸರ ಹೇಳಿಕೆಯಂತೆ, ಕೃಷಿಯೆಂದರೆ ಭೂಮಿ / ಅಸ್ತಿತ್ವ / ಸೃಷ್ಟಿ / ಸತ್, ಣಃ ಎಂದರೆ ನಿರ್ವೃತಿ / ಸುಸ್ಥಿತಿ / ಸುಖ. ಹೀಗಾಗಿ, ಕೃಷ್ಣ ಎಂದರೆ ಲೋಕಸುಸ್ಥಿತಿಕಾರಕ, ಲೋಕಾನಂದಕಾರಕ, ಲೋಕಾಧಿಷ್ಠಾನಸ್ವರೂಪನಾದ್ದರಿಂದ ಸತ್-ಚಿತ್-ಆನಂದಾತ್ಮಕನು. ಈ ಅರ್ಥದಲ್ಲಿ ಶಾಶ್ವತನಾದ ವಿಷ್ಣುವು ಕೃಷ್ಣನಾಗಿ ಅವತರಿಸಿ ಭೂಭಾರಹರಣ ಮಾಡಿ ಧರ್ಮವನ್ನು ರಕ್ಷಿಸಿದನು. ಹೀಗಾಗಿ ಎಂದೆಂದೂ ಆತನು ಅನ್ವರ್ಥಕವಾಗಿ ಕೃಷ್ಣನಾಗಿರುವನು.


"ಕೃಷಾಮಿ ಪೃಥಿವೀಂ ಪಾರ್ಥ 

ಭೂತ್ವಾ ಕಾರ್ಷ್ಣಾಯಸೋ ಹಲಃ |

ಕೃಷ್ಣೋ ವರ್ಣಶ್ಚ ಮೇ ಯಸ್ಮಾತ್

ತಸ್ಮಾತ್ ಕೃಷ್ಣೋऽಹಮರ್ಜುನ ||"

"कृषामि पृथिवीं पार्थ

भूत्वा कार्ष्णायसो हलः ।

कृष्णो वर्णश्च मे यस्मात्

तस्मात् कृष्णोऽहमर्जुन ॥"

(ಮಹಾಭಾರತ, ಶಾಂತಿಪರ್ವ ೩೪೨|೭೯—महाभारत, शान्तिपर्व ३४२।७९)


"ಎಲೈ ಅರ್ಜುನನೆ! ಪೃಥಾಸುತನೆ!! ನಾನು ಕಪ್ಪಗಿನ / ಕೃಷ್ಣವರ್ಣದ ಕಬ್ಬಿಣದ ನೇಗಿಲಾಗಿ ಭೂಮಿಯನ್ನು ಉಳುತ್ತೇನೆ, ಕೃಷಿಮಾಡುತ್ತೇನೆ. ನನ್ನ ಮೈಬಣ್ಣವೂ ಕಪ್ಪಾದ್ದರಿಂದ ನಾನು ಕೃಷ್ಣನೆನಿಸಿರುವೆನು" ಎಂದಿರುವನು ಶ್ರೀಕೃಷ್ಣಪರಮಾತ್ಮನು.


|| ಓಂ ಲೋಹಿತಾಕ್ಷಾಯ ನಮ ಓ೩ಮ್ || ೫೮ ||

॥ ॐ लोहिताक्षाय नम ओ३म् ॥ ५८ ॥


ಲೋಹಿತಾಕ್ಷ! ನಮಸ್ತುಭ್ಯಂ ರಕ್ತನೇತ್ರಾಯ ವಿಷ್ಣವೇ |

"ಅಸಾವೃಷಭೋ ಲೋಹಿತಾಕ್ಷಃ" ಪರಮಾತ್ಮೇತಿ ಹಿ ಶ್ರುತಿಃ || ೫೮ ||


लोहिताक्ष! नमस्तुभ्यं रक्तनेत्राय विष्णवे ।

"असावृषभो लोहिताक्षः" परमात्मेति हि श्रुतिः ॥ ५८ ॥


ಹೇ ಲೋಹಿತಾಕ್ಷನೆ! ನಿನಗೆ ನಮನಗಳು. ಕೆಂಪುಬಣ್ಣದ ಕಣ್ಣುಳ್ಳವನಾದ್ದರಿಂದ ವಿಷ್ಣುವು ಲೋಹಿತಾಕ್ಷನು. "ಅಸೌ ವೃಷಭಃ ಲೋಹಿತಾಕ್ಷಃ" ಎಂಬುದಾಗಿ ಪರಮಾತ್ಮನನ್ನು ವೇದವು "ಈತನು ಶ್ರೇಷ್ಠನೂ, ಕೆಂಪಾದ ಕಣ್ಣುಳ್ಳವನೂ ಆಗಿರುವನು" ಎಂದು ಸ್ತುತಿಸಿದೆ. ಕಣ್ಣಿಗೆ ನಸುಗೆಂಪು ಬಣ್ಣವು ಸೌಂದರ್ಯವರ್ಧಕ ಹಾಗೂ ಶೋಭೆ. ಅದನ್ನೇ ಇಲ್ಲಿ ಹೇಳಿ, ಪರಮಾತ್ಮನು "ಸತ್ಯಂ ಶಿವಂ ಸುನ್ದರಮ್ (सत्यं शिवं सुन्दरम्) " — "ಸತ್ಯಸ್ವರೂಪಿಯೂ ಮಂಗಲಸ್ವರೂಪನೂ ಸುಂದರರೂಪನೂ / ಸೌಂದರ್ಯವೂ ಆಗಿರುವನು" ಎಂಬುದನ್ನು ಸೂಚಿಸಿದೆ.

Comments

Popular posts from this blog

ಸ್ತೋತ್ರಸಂಹಿತಾ ೫.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೫ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೩ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)