ಶ್ರೀವಿಷ್ಣುಸಾಹಸ್ರೀ ೨— ವಿಷ್ಣುಃ ೨

 ಛಂದೋಭಿಮಾನಿದೇವಾನಾಂ ಸ್ವಾಮಿತ್ವಾಲ್ಲೋಕಸಂಹತೇಃ |

ಕಾರಣೇನ ತು ಕಾರ್ಯಸ್ಯ ಜಯಃ ಸುಕರ ಇತ್ಯಪಿ || ೧೦೧ ||

ಲೋಕಸಮೂಹಕ್ಕೆ ವಿವಿಧ ಛಂದಸ್ಸಿನ ಅಭಿಮಾನಿದೇವತೆಗಳು ಪ್ರತ್ಯೇಕವಾಗಿ ಒಡೆಯರಾಗಿರುವುದರಿಂದಾಗಿ, ಆಯಾ ಲೋಕಕ್ಕೆ ಕಾರಣರಾಗಿರುವುದರಿಂದಾಗಿ, ಕಾರಣದಿಂದ ಕಾರ್ಯದ ಜಯವು ಸುಲಭವಾಗಿರುವುದರಿಂದಲೂ,

ಗಾಯತ್ರ್ಯಾ ಪೃಥಿವೀಂ ಚೈವಾಂ|ತರಿಕ್ಷಂ ತ್ರೈಷ್ಟುಭೇನ ಚ |
ಜಾಗತ್ಯಾ ಹಿ ದಿವಂ ಚೈವಾ|ನುಷ್ಟುಭೇನ ದಿಶಸ್ತಥಾ || ೧೦೨ ||

ಗಾಯತ್ರೀಚ್ಛಂದೋಭಿಮಾನಿನಿ ದೇವತೆಯ ಸಹಾಯದಿಂದ (ಗಾಯತ್ರೀಚ್ಛಂದಸ್ಸಿನ ಮಂತ್ರೋಚ್ಚಾರಣೆಯಿಂದ ಆಕೆಯನ್ನು ಪ್ರಸನ್ನೀಕರಿಸಿ)  ಪೃಥಿವಿ / ಭೂಮಿಯನ್ನೂ, ತ್ರಿಷ್ಟುಪ್ ಛಂದೋಭಿಮಾನಿನಿಯ ಸಹಾಯದಿಂದ / ತ್ರೈಷ್ಟುಭದೇವತೆಯ ಸಹಾಯದಿಂದ ಅಂತರಿಕ್ಷವನ್ನೂ, ಜಗತೀಚ್ಛಂದೋಭಿಮಾನಿನಿ ಜಾಗತ್ಯದೇವತೆಯ ಸಹಾಯದಿಂದ ಸ್ವರ್ಗವನ್ನೂ, ಹಾಗೂ ಅನುಷ್ಟುಪ್ ಛಂದೋದೇವತೆಯ ಅನುಗ್ರಹದಿಂದ ದಶದಿಕ್ಕುಗಳನ್ನೂ,

ಯಥಾ ದೇವಾಸ್ತಥಾ ಯಷ್ಟೇ|ಮಾನ್ ಲೋಕಾನ್ ಜಯತೀತ್ಯಹೋ |
ಅನುಕ್ರಮೇಣ ಛಂದೋಭಿರ್ಯಜಮಾನಸ್ತಥೈವ ಚ || ೧೦೩ ||

ಹೇಗೆ ಹಿಂದೆ ಇಂದ್ರಾದಿ ಸುಮನಸರು / ದೇವತೆಗಳು ಜಯಿಸಿದರೋ ಹಾಗೆಯೇ ಯಜ್ಞಮಾಡುವ ಯಷ್ಟಾ / ಯಷ್ಟೃ / ಯಜಮಾನನು ಈ ಲೋಕಗಳನ್ನೆಲ್ಲ ಇದೇ ಅನುಕ್ರಮದಲ್ಲಿ ಆಯಾ ಛಂದೋದೇವತೆಗಳ ಸಹಕಾರದಿಂದ ಜಯಿಸುವನೆಂಬುದು ಅಹೋ!! ಎಷ್ಟು ಅಚ್ಚರಿಯುಂಟುಮಾಡುವಂಥದ್ದಲ್ಲವೆ?! ವೇದಮಂತ್ರಗಳ, ಛಂದಸ್ಸುಗಳ ಶಕ್ತಿಯೆಂದರೆ ಅಂಥದ್ದು. 

ಪರತತ್ತ್ವವೆನಿಸಿದ ವಿಷ್ಣುವಿನ ಪ್ರತಿಪಾದ್ಯವಾದ ವೇದರಾಶಿಯ ಬಲದಿಂದ ಸಾಮಾನ್ಯ ಜೀವಾತ್ಮನೂ ವಿಷ್ಣುತ್ವವನ್ನು ಹೊಂದಬಲ್ಲನೆಂಬುದನ್ನು ಇದು ಸಾರುವುದು. ಇದನ್ನೇ ಬಹುಶಃ ಆದಿಶಂಕರರೂ ತಮ್ಮ “ಭಜ ಗೋವಿಂದಮ್” ಸ್ತೋತ್ರದಲ್ಲಿ “ತ್ವಯಿ ಮಯಿ ಚಾನ್ಯತ್ರೈಕೋ ವಿಷ್ಣುಃ | ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ || ಭವ ಸಮಚಿತ್ತಃ ಸರ್ವತ್ರ ತ್ವಂ | ವಾಂಛಸ್ಯಚಿರಾದ್ಯದಿ ವಿಷ್ಣುತ್ವಮ್ ||”— ಅಂದರೆ, “ನಿನ್ನಲ್ಲಿ, ನನ್ನಲ್ಲಿ ಹಾಗೆಯೇ ಬೇರೆಲ್ಲೆಡೆಯಲ್ಲೂ ಒಬ್ಬನೇ ದೇವನು ವ್ಯಾಪಿಸಿದ್ದು ವಿಷ್ಣುವೆನಿಸಿರುವನು. ಸುಮ್ಮನೆ ನನ್ನಲ್ಲಿ / ಪರಸ್ಪರ ಸಹನೆಯಿಲ್ಲದ ಅಸಹಿಷ್ಣುವಿನಂತೆ ಯಾಕೆ ಸಿಟ್ಟು? ನೀನೂ ಸಹ ವಿಷ್ಣುತ್ವ / ಸರ್ವವ್ಯಾಪಕತ್ವವನ್ನು ಬಹುಬೇಗನೆ ಹೊಂದಬಯಸುವೆಯಾದರೆ, ಸುಖದುಃಖಾದಿ ಸಕಲದ್ವಂದ್ವಗಳಲ್ಲೂ, ಎಲ್ಲದರಲ್ಲೂ, ಎಲ್ಲೆಡೆಯಲ್ಲೂ ಸಮಚಿತ್ತ ಉಳ್ಳವನಾಗು” ಎಂದಿರುವರು. 
(ಆಧಾರ ೧೦— ಕೃಷ್ಣಯಜುರ್ವೇದೀಯ ತೈತ್ತಿರೀಯಸಂಹಿತಾ ಸಾಯಣ-ಭಟ್ಟಭಾಸ್ಕರಭಾಷ್ಯಗಳು)



{ ಅಥರ್ವವೇದಸಂಹಿತಾ ೧೨.೩.೫೯—  “ಧ್ರುವಾಯೈ ತ್ವಾ ದಿಶೇ ವಿಷ್ಣವೇऽಧಿಪತಯೇ…..ಏತಂ ಪರಿ ದದ್ಮಸ್ತ ನೋ ಗೋಪಾಯಾತಾಸ್ಮಾಕಮೈತೋಃ ||” ಸುಬೋಧಹಿಂದೀಭಾಷ್ಯಾನುವಾದ (ದಾಮೋದರ ಸಾತವಳೆಕರ್ ಕೃತ ಹಿಂದೀಭಾಷ್ಯ)—  ಧ್ರುವನಕ್ಷತ್ರಸ್ಯ ದಿಶಾಯಾಂ ತದ್ದಿಶಾಧಿಪತಯೇ ವಿಷ್ಣವೇ ತ್ವಾಂ ಪ್ರತಿ (ತುಭ್ಯಂ) ದಾನಮೇತತ್ ಪರಿತಃ ಪ್ರಾಪ್ತಂ ದದಾಮಃ | ನಃ, ಅಸ್ಮಾನ್ ಗೋಪಾಯತ ರಕ್ಷ | ಅಸ್ಮಾಕಂ ಮಾ ಏತೋಃ— ಅಸ್ಮಾಕಂ ಔನ್ನತ್ಯಪ್ರಾಪ್ತ್ಯರ್ಥಂ ತ್ವಂ ಸಹಕಾರೀ ಭವ ಹೇ ವಿಷ್ಣೋ || }

ಧ್ರುವಾಯೈ ತ್ವಾ ದಿಶೇ ವಿಷ್ಣ|ವೇऽಧಿಪತಯೇ-ಇತ್ಯಪಿ |
ದಿಶಾಯಾಂ ಧ್ರುವನಕ್ಷತ್ರ|ಸ್ಯ ತದ್ದಿಶಾಧಿಪಾಯ ತೇ || ೧೦೪ ||
ಏತಂ ನೋ ಪರಿ ದದ್ಮಸ್ತ ಪ್ರಾಪ್ತಂ ಪರಿತ ಏವ ವಾ |
ದಾನಮೇತತ್ ದದಾಮೋ ನೋ ಗೋಪಾಯತ-ಇತಿ ರಕ್ಷ ವಾ || ೧೦೫ ||
ಔನ್ನತ್ಯಸ್ಯ ಹ್ಯವಾಪ್ತ್ಯರ್ಥಂ ಸಹಕಾರೀ ಭವ ಪ್ರಭೋ |
ಅಸ್ಮಾಕಮ್ ಮಾ ಚ ಏತೋಃ-ಚ ಹೇ ವಿಷ್ಣೋ ಪರಿಪಾಲಯ || ೧೦೬ ||

ಧ್ರುವನಕ್ಷತ್ರದ ದಿಕ್ಕಿನಲ್ಲಿ, ಆ ದಿಕ್ಕಿನ ಅಧಿಪನಾದ ವಿಷ್ಣುವಾದ ನಿನಗೆ (ತ್ವಾ / ತ್ವಾಂ— ನಿನ್ನನ್ನು ಕುರಿತು) ನಮಗೆ ಸ್ಥಳೀಯವಾಗಿಯೇ ನಿನ್ನ ಅನುಗ್ರಹದಿಂದಲೇ ಲಭ್ಯವಾದ ಈ ದಾನವನ್ನು ಸಮರ್ಪಿಸುತ್ತಿದ್ದೇವೆ. ನಮ್ಮನ್ನು ಸಂರಕ್ಷಿಸು. ಹೇ ವಿಷ್ಣುವೆ!! ನೀನು ನಮ್ಮ ಪುರೋಗತಿಗೆ / ಪ್ರಗತಿಗೆ / ಉಚ್ಚ ಮಟ್ಟದ ಲೌಕಿಕ-ಪಾರಲೌಕಿಕ ಅಭಿವೃದ್ಧಿಗೆ ಸಹಕಾರಿಯಾಗಿ ನಮ್ಮನ್ನು ಪರಿಪಾಲಿಸು.
(ಆಧಾರ ೧೧— ಅಥರ್ವವೇದಸಂಹಿತಾ ಸಾತವಳೇಕರ್ ಭಾಷ್ಯ)



*_ವಿಶ್ವಶಬ್ದೇನ ವಾಚ್ಯೋ ವೈ ಪರಬ್ರಹ್ಮಸ್ವರೂಪವಾನ್ |_*
*_ಅನ್ತರ್ಬಹಿಶ್ಚ ಸುವ್ಯಾಪ್ತೋ ವಿಶ್ವೇ ವಿಶ್ವಂ ಪ್ರವಿಷ್ಟವಾನ್ || ೧೦೭ ||_*

_ವಿಶ್ವ ಎಂಬ ಶಬ್ದದಿಂದ ವಾಚ್ಯನಾದ ಪರಬ್ರಹ್ಮಸ್ವರೂಪನಾದ, ವಿಶ್ವದಲ್ಲಿ ಎಲ್ಲದರ ಒಳಹೊರಗೂ ವ್ಯಾಪಿಸಿದ ಹಾಗೂ ಅವೆಲ್ಲವನ್ನೂ ಪ್ರವೇಶಿಸಿದವನಾದ,_

*_ಸ್ವನಿಜಭಕ್ತಸಮ್ಯಗ್ಜ್ಞಾ|ನಾರ್ಥಾಯ ವಿಹಿತೈರುರು |_*
*_ನಾಮಸಙ್ಕೀರ್ತನೈರ್ಯುಕ್ತೋ ದೇವೋ ವಿಷ್ಣುರಿತೀರ್ಯತೇ || ೧೦೮ ||_*

_ತನ್ನ ನಿಜಭಕ್ತರಿಗೆ ಸಮ್ಯಗ್ ಜ್ಞಾನವುಂಟುಮಾಡಲು ವಿಹಿತವಾದ ಬಹುವಿಪುಲವಾದ (ವಿಹಿತೈಃ ಉರು), ನಾಮ-ಸಂಕೀರ್ತನಾದಿಗಳಿಂದ ಕೂಡಿದದ ದೇವನು ವಿಷ್ಣುವೆನಿಸಿರುವನು._
(ಆಧಾರ ೧೨— ನಮಸ್ಕಾರಭಾಷ್ಯಾರ್ಥ) 


ಹರಿರ್ವೇವೇಷ್ಟಿ ತಾನೀತಿ ವಿಷ್ಣುರ್ವ್ಯಾಪ್ನೋತಿ ವಿಶ್ವತಃ |
ವಿಷೇಃ ಕಿಚ್ಚೇತಿ ಕಿತ್ಸಂಜ್ಞೋ ನುಪ್ರತ್ಯಯೋ ಭವೇದಿತಿ || ೧೦೯ ||

ಶ್ರೀಹರಿಯು ವಿಶ್ವವನ್ನು ಎಲ್ಲೆಡೆಯಿಂದಲೂ ಆವರಿಸಿ, ವ್ಯಾಪಿಸಿ, ಹಬ್ಬಿರುವುದರಿಂದಾಗಿ ವಿಷ್ ಧಾತುವಿಗೆ ಕಿತ್ ಸಂಜ್ಞೆ ಹಾಗೂ ನು ಪ್ರತ್ಯಯಗಳು ಆದೇಶವಾಗಿ ವಿಷ್ಣುವೆನಿಸಿದನು.
(ಆಧಾರ ೧೩— ಶ್ರೀಬಲದೇವಭಾಷ್ಯ)


ವಿಷ್-ಲೃ ವ್ಯಾಪಕತ್ವಾದ್ವಾ ವ್ಯಕ್ತಾವ್ಯಕ್ತೌ ಸಮನ್ತತಃ |
ಸ್ವೇಚ್ಛಾಮಾತ್ರವಿಶೇಷೇಣ ವಿಷ್ಣುರಿತ್ಯಭಿಧೀಯತೇ || ೧೧೦ ||

"ವಿಷ್ ಲೃ ವ್ಯಾಪ್ತೌ" ಎಂಬ ವ್ಯಾಪಿಸುವಿಕೆ ಎಂಬರ್ಥದ ಧಾತುಜನ್ಯವಾದದ್ದು ವಿಷ್ಣುಶಬ್ದ. ಕಾಣಿಸುವ ಹಾಗೂ ಕಾಣಿಸದ ಎಲ್ಲವನ್ನೂ ಎಲ್ಲೆಡೆಯಿಂದಲೂ ವಿಶೇಷವಾಗಿ ಯಾರ ಅಂಕೆಗೂ ಒಳಪಡದೆ ಸ್ವತಂತ್ರನಾಗಿ ಸ್ವೇಚ್ಛೆಯಿಂದಲೇ ವ್ಯಾಪಿಸುತ್ತಾನಾದ್ದರಿಂದ ಭಗವಂತನು ವಿಷ್ಣುವೆನಿಸಿರುವನು.

ವಿಷ್ಟ್ವಾ ಯಥಾ ಬ್ರಹ್ಮ ಜಗದ್ದಧಾತಿ 
ವಿಷ್ಟಂ ಜಗದ್ವಾ ಸುಖಮೇತಿ ಯಸ್ಮಿನ್ |
ತಥಾ ಸ್ವಕೇ ಯಃ ಸುಖಮೇತಿ ವರ್ಗೇ 
ವರ್ಗಶ್ಚ ಯಸ್ಮಿನ್ ಸ ನರೋऽಸ್ತಿ ವಿಷ್ಣುಃ || ೧೧೧ ||

ಯಾವ ಆ ಮೂಲಶಕ್ತಿಯಾದ ಪರಬ್ರಹ್ಮತತ್ತ್ವವು ಜಗತ್ತನ್ನು ಸೃಜಿಸಿ, ಅದರೊಳಗೆ ಪ್ರವೇಶಿಸಿ, ಅದಕ್ಕೆ ಆಧಾರವಾಗಿದ್ದು, ಅದರ ಸಕಲ ಚರಾಚರಗಳ ಬದುಕೆಂಬ ನಾಟಕವನ್ನು ನೋಡಿ ಆನಂದವನ್ನು ಹೊಂದುತ್ತದೋ, ಹಾಗೆಯೇ ತನ್ನಲ್ಲೇ ತಾನೂ ದಿವ್ಯಲೋಕ (ಸುವರ್ಗ)ದಲ್ಲಿ ಬ್ರಹ್ಮಾನಂದವನ್ನೂ ಹೊಂದುತ್ತಿರುವುದೋ, ಆ ಪರಮಧಾಮವೂ ಯಾವುದರಲ್ಲೇ ಅಂತರ್ಗತವಾಗಿರುವುದೋ ಅಂತಹ ನರ-ನಾರಾಯಣಾವತಾರಿಯಾಗಿಯೂ ಅವತರಿಸಿದ ಭಗವತ್ತತ್ತ್ವವೇ ವಿಷ್ಣುವೆನಿಸಿರುವುದು. 
(ಆಧಾರ ೧೪— ಸತ್ಯಭಾಷ್ಯ)

ವಿಪ್ರಾಃ ಷಟ್ಕರ್ಮಯುಕ್ತಾಸ್ತು 

ಪುರೋಹಿತಾಶ್ಚ ಚಿನ್ತಕಾಃ |

ವಿಶಾಲದೃಷ್ಟ್ಯುದಾರಾಶ್ಚ

ಜಾಗರೂಕಾಶ್ಚ ಸಕ್ರಿಯಾಃ || ೧೧೫ ||

ಪ್ರಯಾನ್ತಿ ತಾದೃಶಾ ಏವ

ವಿಷ್ಣೋಸ್ತತ್ಪರಮಂ ಪದಮ್ | 

ಯೋಗಿಸೂರಿಜ್ಞಾನಿನೋ ಯೇ

ಪಶ್ಯನ್ತಿ ಹೃದಿ ಸರ್ವದಾ || ೧೧೬ ||


"ವಿಶೇಷೇಣ ಪ್ರಾತಿ ಪೂರಯತಿ ಷಟ್ ಕರ್ಮಾಣಿ ಇತಿ ವಿಪ್ರಃ "— ಯಜನ (ಸ್ವಯಂ ಯಜ್ಞ, ದೇವಪೂಜಾದಿ ಮಾಡುವಿಕೆ) -ಯಾಜನ (ಬೇರೆಯವರಿಗಾಗಿ ಯಜ್ಞ, ಪೂಜೆ ಮಾಡಿಸುವಿಕೆ) -ಅಧ್ಯಯನ (ವೇದ ಪುರಾಣ ಶಾಸ್ತ್ರಾದಿಗಳ ಸ್ವಾಧ್ಯಾಯ, ಸ್ವಂತ ಅಧ್ಯಯನ) -ಅಧ್ಯಾಪನ (ಬೇರೆಯವರಿಗೆ ಪ್ರವಚನ, ಉಪದೇಶಾದಿಗಳ ಮೂಲಕ ಪಾಠಮಾಡುವುದು) -ದಾನ (ವಸ್ತು, ದ್ರವ್ಯ, ಧನ, ವಿದ್ಯಾದಿಗಳನ್ನು ದಾನಮಾಡುವಿಕೆ) -ಪ್ರತಿಗ್ರಹ (ಇತರರು ದಾನಮಾಡಿದ್ದನ್ನು ಸ್ವೀಕರಿಸುವಿಕೆ)— ಇವೇ ಆರು ವಿಪ್ರರಿಗೆ ವಿಧಿಸಿದ ಷಟ್ ಕರ್ಮಗಳು. "ಜನ್ಮನಾ ಜಾಯತೇ ಜನ್ತುಃ ಕರ್ಮಣಾ ಜಾಯತೇ ದ್ವಿಜಃ | ವೇದಾಧ್ಯಯನತೋ ವಿಪ್ರೋ ಬ್ರಹ್ಮಜ್ಞಾನೇನ ಬ್ರಾಹ್ಮಣಃ ||", "ಜನ್ಮನಾ ಬ್ರಾಹ್ಮಣೋ ಜ್ಞೇಯಃ ಸಂಸ್ಕಾರೈರ್ದ್ವಿಜ ಉಚ್ಯತೇ | ವಿದ್ಯಯಾ ಯಾತಿ ವಿಪ್ರತ್ವಂ ತ್ರಿಭಿಃ ಶ್ರೋತ್ರಿಯಲಕ್ಷಣಮ್ ||" ಎಂಬಂತೆ ವೇದಾಧ್ಯಯನಾದಿ ವಿದ್ಯಾಸಂಪನ್ನತೆಯುಳ್ಳವರೇ ವಿಪ್ರರು. ಪುರದ ಹಿತವನ್ನು ಸದಾ  ಬಯಸುವವರು ಪುರೋಹಿತರು. 


ಇಂತಹ ವಿಪ್ರರು, ಪುರೋಹಿತರು, ಶ್ರೇಷ್ಠ ಚಿಂತಕರು, ದಾರ್ಶನಿಕರು, ವಿಶಾಲದೃಷ್ಟಿಯುಳ್ಳವರು, ಉದಾರಹೃದಯಿಗಳು, ತತ್ತ್ವಜ್ಞಾನಿಗಳು, ಜಾಗೃತರು / ಅಜ್ಞಾನತಮಸ್ಸೆಂಬ ನಿದ್ದೆಯಿಂದ ಎಚ್ಚರಗೊಂಡವರು, ಸದಾ ಜಾಗರೂಕತೆಯಿಂದ ಕ್ರಿಯಾಶೀಲರಾಗಿರುವವರು— ಯಾವ ಇಂಥವರು ಯಾವಾಗಲೂ ತಮ್ಮ ಹೃದಯಾಕಾಶದಲ್ಲಿ ಧ್ಯಾನಮುಖೇನ ಮಹಾವಿಷ್ಣುವಿನ ಶ್ರೇಷ್ಠವೂ ಪಾವನತಮವೂ ಆದ ಪದಕಮಲಗಳನ್ನು ಕಾಣುತ್ತಾರೋ ಅಂಥವರೇ ವಿಷ್ಣುವಿನ ಆ ಪರಮಪದವನ್ನು / ವಿಷ್ಣುತ್ವವನ್ನು / ವೈಕುಂಠವನ್ನು / ಸಾಯುಜ್ಯವನ್ನು ಹೊಂದುತ್ತಾರೆ.


[ಆಧಾರ— ತದ್ ವಿಪ್ರಾಸೋ ವಿಪನ್ಯವೋ ಜಾಗೃವಾಂಸಃ ಸಮಿನ್ಧತೇ |(ಋ.೧.೨೨.೨೧, ಸಾಮ.೧೬೭೩), ಜಾಗೃವಾಂಸಃ ಸಮಿನ್ಧತೇ, ವಿಷ್ಣೋರ್ಯತ್ ಪರಮಂ ಪದಮ್ | (ಋ.೧.೨೨.೨೧, ಶುಕ್ಲಯಜು.೩೪.೪೪), ತದ್ ವಿಷ್ಣೋಃ ಪರಮಂ ಪದಂ ಸದಾ ಪಶ್ಯನ್ತಿ ಸೂರಯಃ |(ಶುಕ್ಲಯಜು.೬.೫, ಸಾಮ.೧೬೭೨, ಅಥರ್ವ.೭.೨೬.೭) ]


ವಿಷ್ಣುರ್ವೀರ್ಯಾರ್ಥಮೀಡ್ಯೋऽಸ್ತಿ

ತದ್ವೀರ್ಯಂ ಚ ಪ್ರಶಂಸ್ಯತೇ |

ಪಶ್ಯತ್ಯಖಿಲಕರ್ಮಾಣಿ

ಪ್ರಾಣಿನಾಂ ಪಶ್ಯ ತತ್ಕ್ರಿಯಾಃ || ೧೧೭ ||


ವಿಷ್ಣುವು ಆತನ ಶೌರ್ಯಕ್ಕಾಗಿ ಸ್ತುತ್ಯನಾಗಿರುವನು. ಹಾಗೂ ಆತನ ವೀರ್ಯ-ಪರಾಕ್ರಮಗಳು ಲೋಕದಲ್ಲೆಲ್ಲ ಹೊಗಳಲ್ಪಡುತ್ತವೆ. ಆತನು ಎಲ್ಲ ಜೀವರ ಅಂತರಾತ್ಮನಾಗಿದ್ದು, ಎಲ್ಲ ಕರ್ಮಗಳನ್ನೂ ಗಮನಿಸುವುದರಿಂದ ಸರ್ವಸಾಕ್ಷಿಯು. ಆತನ ಮಹತ್ತಮವಾದ ಲೀಲೆಗಳನ್ನು ನೋಡು.


[ಆಧಾರ— ಪ್ರ ತದ್ ವಿಷ್ಣುಃ ಸ್ತವತೇ ವೀರ್ಯೇಣ | (ಶುಕ್ಲಯಜು.೫.೨೦, ಅಥರ್ವ.೭.೨೬.೨—ಪ್ರ ತದ್...ವೀರ್ಯಾಣಿ), ಯತೋ ವ್ರತಾನಿ ಪಸ್ಪಶೇ |(ಶು.ಯಜು.೧೩.೩೩, ಸಾಮ.೧೬೭೧, ಅಥರ್ವ.೭.೨೬.೬), ವಿಷ್ಣೋಃ ಕರ್ಮಾಣಿ ಪಶ್ಯತ |(ಶುಕ್ಲಯಜು.೬.೪, ೧೩.೩೩, ಸಾಮ ೧೬೭೧, ಅಥರ್ವ.೭.೨೬.೬) ]


ಸರ್ವತ್ರ ವ್ಯಾಪ್ತಮೇವೈನಂ

 ಪರಿಪೂರ್ಣಂ ಚ ಸರ್ವದಾ |

ಅಣುರೇಣುಂ ತೃಣಕಾಷ್ಠಂ

ಸರ್ವಂ ಸರ್ವಗತಂ ಹರಿಮ್ ||

ಭೂರ್ಭುವಸ್ಸುವ ಇತ್ಯೇವಂ

ಮಹೋಜನಸ್ತಪಾಂಸಿ ಯೇ |

ಸತ್ಯಲೋಕಶ್ಚ ಸುವ್ಯಾಪ್ತಂ

ವಿಶ್ವಂ ತಂ ಯೇನ ಭಾವಯೇ ||

ಭಾಸತೇऽನಲವಾಯ್ವಾದೌ

ಆದಿತ್ಯೇ ಖಾನಿಲಾಗ್ನಿಭಿಃ |

ಅಬ್ಭೂಮಿಭ್ಯಾಂ ತು ಶಬ್ದಸ್ಪರ್-

-ಶರೂಪರಸಗಂಧತಾಮ್ ||

ಪ್ರಕಟ್ಯ ನದಿಶೈಲೇಷು

ಪಶುಪಕ್ಷಿಷು ಭಾಸತೇ |

ವಿಶಿಷ್ಟಜ್ಞಾನರೂಪೇಣ

ತಂ ವಿಷ್ಣುಂ ಪ್ರಣಮಾಮ್ಯಹಮ್ ||


ಎಲ್ಲೆಡೆಯೂ ವ್ಯಾಪಿಸಿರುವ ಪರಿಪೂರ್ಣ. ಎಲ್ಲೆಡೆಯೂ ಇರುವವನು (ಎಲ್ಲದರ ಒಳಗೂ ಹೊರಗೂ ಇರುವವನು). 


ನಕ್ಷತ್ರ, ವನ, ಮನ, ಬೆಟ್ಟ, ದಿಕ್ಕು, ನದಿ, ಸಮುದ್ರ ಎಲ್ಲವೂ ವಿಷ್ಣುವೇ. 


ಭೂಲೋಕ, ಭುವರ್ಲೋಕ, ಸುವರ್ಲೋಕ, ಮಹೋಲೋಕ, ಜನೋಲೋಕ, ತಪೋಲೋಕ, ಸತ್ಯಲೋಕ, ಅಗ್ನಿ-ವಾಯು-ಆದಿತ್ಯನಲ್ಲಿ ಪ್ರಕಾಶಿಸುತ್ತಾ, ನೆಲ ಜಲ ಅನಲ ಅನಿಲ ಆಕಾಶಗಳ ಮೂಲಕ ಶಬ್ದ ಸ್ಪರ್ಶ ರೂಪ ರಸ ಗಂಧಗಳನ್ನು ಪ್ರಕಟಿಸಿ, ನದಿ ಬೆಟ್ಟ ಪಶುಪಕ್ಷಿಗಳನ್ನೂ ಬೆಳಗುವ ಪರಾಕ್ರಮ ವಸ್ತುವೇ ವಿಷ್ಣು. ವಿಶಿಷ್ಟವಾದ ಅರಿವನ್ನು ನೀಡುವವನೇ ವಿಷ್ಣು.


(ಆಧಾರ ೧೬—ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿಯವರ "ವಿಷ್ಣುಸಹಸ್ರನಾಮದ  ಅಪೂರ್ವ ಅರ್ಥಗಳು")


ಇಲ್ಲಿಗೆ ವಿಷ್ಣುಸಹಸ್ರನಾಮದ ೨ನೆಯ ನಾಮವಾದ "ವಿಷ್ಣು" ಎಂಬುದರ ವ್ಯಾಖ್ಯಾನವು ಮುಗಿಯಿತು.

Comments

Popular posts from this blog

ಸ್ತೋತ್ರಸಂಹಿತಾ ೫.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೫ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೩ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)