ಶ್ರೀವಿಷ್ಣುಸಾಹಸ್ರೀ ೧— ವಿಶ್ವಮ್ ೧
ಶ್ರೀವಿಷ್ಣುಸಹಸ್ರನಾಮಸ್ತೋತ್ರಮ್ (ನಾಮಾವಲಿಸಹಿತಂ ಬೃಹತೀಸಹಸ್ರಮಂತ್ರಾಧಾರಸಮೇತಂ ಚ) ೧
(ದಂಬೆಕೃಷ್ಣಮೂರ್ತಿಶಾಸ್ತ್ರಿಕೃತಯಾ ಸಾನುವಾದ-ವಿಷ್ಣುಸಹಸ್ರನಾಮನಮಸ್ಕಾರಶ್ಲೋಕಭಾಷ್ಯೇನ, ವಿಷ್ಣುಸಾಹಸ್ರ್ಯಾಖ್ಯಯಾ ಶ್ಲೋಕರೂಪವ್ಯಾಖ್ಯಯಾ-ಕರ್ಣಾಟಭಾಷಯಾ ತದನುವಾದೇನ ಚ, ಸಮಲಂಕೃತಮ್)
★ ಸಂದರ್ಭ—
ಮಹಾಭಾರತ ಯುದ್ಧ ಮುಗಿದಿದೆ. ಭೀಷ್ಮಾಚಾರ್ಯರು ಶರಶಯ್ಯದಲ್ಲಿದ್ದಾರೆ. ಇತ್ತ ಧರ್ಮರಾಯನ ಪಟ್ಟಾಭಿಷೇಕ ಶ್ರೀಕೃಷ್ಣ ಮತ್ತು ವ್ಯಾಸರ ಸಮ್ಮುಖದಲ್ಲಿ ನಡೆದಿದೆ. ಒತ್ತಾಯದಲ್ಲಿ ಪಟ್ಟಾಭಿಷೇಕಕ್ಕೆ ಒಪ್ಪಿದ್ದ ಯುಧಿಷ್ಠಿರನ ಮನಸ್ಸಿಗೆ ಕಿಂಚಿತ್ತೂ ಸಮಾಧಾನವಿಲ್ಲ. ಎಲ್ಲಾ ವೀರರು, ಹಿರಿಯರು, ಲಕ್ಷ-ಲಕ್ಷ ಮಂದಿ ಸೈನಿಕರ ನಾಶದ ಅನಂತರ, ಸಿಂಹಾಸನವೇರಿದ ಆತನಿಗೆ ಪಾಪ ಪ್ರಜ್ಞೆ ಕಾಡುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿದ್ದ ಧರ್ಮರಾಯನನ್ನು ಶ್ರೀಕೃಷ್ಣ ಭೀಷ್ಮಾಚಾರ್ಯರ ಬಳಿಗೆ ಕರೆತಂದು, ಆತನಿಗೆ ಧರ್ಮದ ಪಾಠವನ್ನು ಬೋಧಿಸುವಂತೆ ಕೇಳಿಕೊಳ್ಳುತ್ತಾನೆ. ಧರ್ಮದ ಪರ ಹೋರಾಡಿ ಗೆದ್ದ ಧರ್ಮರಾಯನನ್ನು ಕೊಂಡಾಡಿದ ಭೀಷ್ಮಾಚಾರ್ಯರು, "ಒಂದು ವೇಳೆ ನೀನು ಅನ್ಯಾಯದ ವಿರುದ್ಧದ ಈ ಯುದ್ಧದಲ್ಲಿ ಹೋರಾಡದೆ ಇದ್ದಿದ್ದರೆ, ನಿನ್ನನ್ನು ಹೇಡಿ ಎನ್ನುತ್ತಿದ್ದೆ" ಎನ್ನುತ್ತಾರೆ. ಈ ಮಾತಿನಿಂದ ಧರ್ಮರಾಯನಲ್ಲಿದ್ದ ಪಾಪ ಪ್ರಜ್ಞೆ ಹೊರಟುಹೋಗಿ , ತನಗೆ ಧರ್ಮೋಪದೇಶ ಮಾಡಬೇಕೆಂದು ಭೀಷ್ಮಾಚಾರ್ಯರಲ್ಲಿ ಕೇಳಿಕೊಳ್ಳುತ್ತಾನೆ. ಈ ರೀತಿ ಭೀಷ್ಮಾಚಾರ್ಯರು ಧರ್ಮರಾಯನಿಗೆ ಧರ್ಮೋಪದೇಶ ಮಾಡಿದ ಮಹಾಭಾರತದ ಅನುಶಾಸನ ಪರ್ವದ ಕೊನೆಯ ಅಪೂರ್ವ ಉಪದೇಶ ಈ ವಿಷ್ಣು ಸಹಸ್ರನಾಮ. ವ್ಯಾಸ ಮಹರ್ಷಿಗಳು ಈ ಸಾವಿರ ನಾಮವನ್ನು ಸ್ತೋತ್ರ ರೂಪದಲ್ಲಿ ನಮಗೆ ಕಾಣಿಕೆಯಾಗಿ ನೀಡಿದ್ದಾರೆ. ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಗುಣವಾಚಕ ನಾಮಗಳಾಗಿವೆ. ನಮಗೆ ಇರುವ ಹೆಸರು ಗುಣವಾಚಕವಲ್ಲ. ಕರೆದಾಗ ಓಗೊಡಲು ಇಟ್ಟ ಹೆಸರು. ಆದರೆ ಭಗವಂತನ ಪ್ರತೀ ನಾಮ ಆತನ ಗುಣವನ್ನು ವರ್ಣಿಸುತ್ತದೆ. ನಮ್ಮಲ್ಲಿ ಅನೇಕ ಸಹಸ್ರನಾಮಗಳಿವೆ. ಬಹಳ ಪ್ರಸಿದ್ಧವಾದ ಲಲಿತಾ ಸಹಸ್ರನಾಮ, ಶಿವ ಸಹಸ್ರನಾಮ, ಗಣೇಶ ಸಹಸ್ರನಾಮ, ನರಸಿಂಹ ಸಹಸ್ರನಾಮ ಇತ್ಯಾದಿ. ಈ ಎಲ್ಲಾ ಸಹಸ್ರನಾಮಗಳಿಗಿಂತ ಹೆಚ್ಚು ವ್ಯಾಖ್ಯಾನವಿರುವ, ಹೆಚ್ಚು ಮಂದಿ ವಿದ್ವಾಂಸರು ಭಾಷ್ಯ ಬರೆದಿರುವ, ಮಹಾಭಾರತದ ಭಾಗವಾಗಿರುವ, ಸುಪ್ರಸಿದ್ಧ ಸಹಸ್ರನಾಮ-ವಿಷ್ಣು ಸಹಸ್ರನಾಮ. ಪದ್ಮ ಪುರಾಣದಲ್ಲಿ ಒಂದು ವಿಷ್ಣು ಸಹಸ್ರನಾಮವನ್ನು ಕಾಣುತ್ತೇವೆ. ಆದರೆ ಅದು ಅಷ್ಟೊಂದು ಪ್ರಚಲಿತದಲ್ಲಿಲ್ಲ. ವಿಷ್ಣು ಸಹಸ್ರನಾಮದಲ್ಲಿ ಕೆಲವೊಂದು ನಾಮಗಳು ಒಂದಕ್ಕಿಂತ ಹೆಚ್ಚು ಬಾರಿ ಪುನರಾವರ್ತನೆ ಆಗಿರುವುದನ್ನು ನಾವು ಕಾಣುತ್ತೇವೆ. ವಿಷ್ಣು ಸಹಸ್ರನಾಮದಲ್ಲಿ ಬರುವ ಒಂದೊಂದು ನಾಮಕ್ಕೆ ನೂರು ಅರ್ಥವಿದೆಯಂತೆ. ಒಂದು ವೇಳೆ ಒಂದು ನಾಮ ಎರಡು ಬಾರಿ ಬಂದರೆ ಆ ನಾಮಕ್ಕೆ ಇನ್ನೂರು ಅರ್ಥಗಳಿವೆ ಎಂದು ತಿಳಿಯಬೇಕಾಗುತ್ತದೆ. ಆದರೆ ಇಷ್ಟೊಂದು ಅರ್ಥವನ್ನು ಕಂಡುಕೊಳ್ಳುವುದು ಸಾಮಾನ್ಯರಿಗೆ ಅಸಾಧ್ಯ.
ಮಹಾಭಾರತ ಯುದ್ಧ ಮುಗಿದಿದೆ. ಭೀಷ್ಮಾಚಾರ್ಯರು ಶರಶಯ್ಯದಲ್ಲಿದ್ದಾರೆ. ಇತ್ತ ಧರ್ಮರಾಯನ ಪಟ್ಟಾಭಿಷೇಕ ಶ್ರೀಕೃಷ್ಣ ಮತ್ತು ವ್ಯಾಸರ ಸಮ್ಮುಖದಲ್ಲಿ ನಡೆದಿದೆ. ಒತ್ತಾಯದಲ್ಲಿ ಪಟ್ಟಾಭಿಷೇಕಕ್ಕೆ ಒಪ್ಪಿದ್ದ ಯುಧಿಷ್ಠಿರನ ಮನಸ್ಸಿಗೆ ಕಿಂಚಿತ್ತೂ ಸಮಾಧಾನವಿಲ್ಲ. ಎಲ್ಲಾ ವೀರರು, ಹಿರಿಯರು, ಲಕ್ಷ-ಲಕ್ಷ ಮಂದಿ ಸೈನಿಕರ ನಾಶದ ಅನಂತರ, ಸಿಂಹಾಸನವೇರಿದ ಆತನಿಗೆ ಪಾಪ ಪ್ರಜ್ಞೆ ಕಾಡುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿದ್ದ ಧರ್ಮರಾಯನನ್ನು ಶ್ರೀಕೃಷ್ಣ ಭೀಷ್ಮಾಚಾರ್ಯರ ಬಳಿಗೆ ಕರೆತಂದು, ಆತನಿಗೆ ಧರ್ಮದ ಪಾಠವನ್ನು ಬೋಧಿಸುವಂತೆ ಕೇಳಿಕೊಳ್ಳುತ್ತಾನೆ. ಧರ್ಮದ ಪರ ಹೋರಾಡಿ ಗೆದ್ದ ಧರ್ಮರಾಯನನ್ನು ಕೊಂಡಾಡಿದ ಭೀಷ್ಮಾಚಾರ್ಯರು, "ಒಂದು ವೇಳೆ ನೀನು ಅನ್ಯಾಯದ ವಿರುದ್ಧದ ಈ ಯುದ್ಧದಲ್ಲಿ ಹೋರಾಡದೆ ಇದ್ದಿದ್ದರೆ, ನಿನ್ನನ್ನು ಹೇಡಿ ಎನ್ನುತ್ತಿದ್ದೆ" ಎನ್ನುತ್ತಾರೆ. ಈ ಮಾತಿನಿಂದ ಧರ್ಮರಾಯನಲ್ಲಿದ್ದ ಪಾಪ ಪ್ರಜ್ಞೆ ಹೊರಟುಹೋಗಿ , ತನಗೆ ಧರ್ಮೋಪದೇಶ ಮಾಡಬೇಕೆಂದು ಭೀಷ್ಮಾಚಾರ್ಯರಲ್ಲಿ ಕೇಳಿಕೊಳ್ಳುತ್ತಾನೆ. ಈ ರೀತಿ ಭೀಷ್ಮಾಚಾರ್ಯರು ಧರ್ಮರಾಯನಿಗೆ ಧರ್ಮೋಪದೇಶ ಮಾಡಿದ ಮಹಾಭಾರತದ ಅನುಶಾಸನ ಪರ್ವದ ಕೊನೆಯ ಅಪೂರ್ವ ಉಪದೇಶ ಈ ವಿಷ್ಣು ಸಹಸ್ರನಾಮ. ವ್ಯಾಸ ಮಹರ್ಷಿಗಳು ಈ ಸಾವಿರ ನಾಮವನ್ನು ಸ್ತೋತ್ರ ರೂಪದಲ್ಲಿ ನಮಗೆ ಕಾಣಿಕೆಯಾಗಿ ನೀಡಿದ್ದಾರೆ. ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಗುಣವಾಚಕ ನಾಮಗಳಾಗಿವೆ. ನಮಗೆ ಇರುವ ಹೆಸರು ಗುಣವಾಚಕವಲ್ಲ. ಕರೆದಾಗ ಓಗೊಡಲು ಇಟ್ಟ ಹೆಸರು. ಆದರೆ ಭಗವಂತನ ಪ್ರತೀ ನಾಮ ಆತನ ಗುಣವನ್ನು ವರ್ಣಿಸುತ್ತದೆ. ನಮ್ಮಲ್ಲಿ ಅನೇಕ ಸಹಸ್ರನಾಮಗಳಿವೆ. ಬಹಳ ಪ್ರಸಿದ್ಧವಾದ ಲಲಿತಾ ಸಹಸ್ರನಾಮ, ಶಿವ ಸಹಸ್ರನಾಮ, ಗಣೇಶ ಸಹಸ್ರನಾಮ, ನರಸಿಂಹ ಸಹಸ್ರನಾಮ ಇತ್ಯಾದಿ. ಈ ಎಲ್ಲಾ ಸಹಸ್ರನಾಮಗಳಿಗಿಂತ ಹೆಚ್ಚು ವ್ಯಾಖ್ಯಾನವಿರುವ, ಹೆಚ್ಚು ಮಂದಿ ವಿದ್ವಾಂಸರು ಭಾಷ್ಯ ಬರೆದಿರುವ, ಮಹಾಭಾರತದ ಭಾಗವಾಗಿರುವ, ಸುಪ್ರಸಿದ್ಧ ಸಹಸ್ರನಾಮ-ವಿಷ್ಣು ಸಹಸ್ರನಾಮ. ಪದ್ಮ ಪುರಾಣದಲ್ಲಿ ಒಂದು ವಿಷ್ಣು ಸಹಸ್ರನಾಮವನ್ನು ಕಾಣುತ್ತೇವೆ. ಆದರೆ ಅದು ಅಷ್ಟೊಂದು ಪ್ರಚಲಿತದಲ್ಲಿಲ್ಲ. ವಿಷ್ಣು ಸಹಸ್ರನಾಮದಲ್ಲಿ ಕೆಲವೊಂದು ನಾಮಗಳು ಒಂದಕ್ಕಿಂತ ಹೆಚ್ಚು ಬಾರಿ ಪುನರಾವರ್ತನೆ ಆಗಿರುವುದನ್ನು ನಾವು ಕಾಣುತ್ತೇವೆ. ವಿಷ್ಣು ಸಹಸ್ರನಾಮದಲ್ಲಿ ಬರುವ ಒಂದೊಂದು ನಾಮಕ್ಕೆ ನೂರು ಅರ್ಥವಿದೆಯಂತೆ. ಒಂದು ವೇಳೆ ಒಂದು ನಾಮ ಎರಡು ಬಾರಿ ಬಂದರೆ ಆ ನಾಮಕ್ಕೆ ಇನ್ನೂರು ಅರ್ಥಗಳಿವೆ ಎಂದು ತಿಳಿಯಬೇಕಾಗುತ್ತದೆ. ಆದರೆ ಇಷ್ಟೊಂದು ಅರ್ಥವನ್ನು ಕಂಡುಕೊಳ್ಳುವುದು ಸಾಮಾನ್ಯರಿಗೆ ಅಸಾಧ್ಯ.
(— ಸಂಗ್ರಹ)
★ ವಿಷ್ಣು ಸಹಸ್ರನಾಮಸ್ತೋತ್ರಮ್— ಮೂಲಮ್—
ಪೂರ್ವ ಪೀಠಿಕಾ
ಶ್ರೀ ಗುರುಭ್ಯೋ ನಮಃ || ಹರಿಃ ಓಂ ||
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ||
ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ||
ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ |
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ||
ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ |
ಸದೈಕರೂಪರೂಪಾಯ ವಿಷ್ಣವೇ ಸರ್ವಜಿಷ್ಣವೇ ||
ಯಸ್ಯ ಸ್ಮರಣಮಾತ್ರೇಣ ಜನ್ಮಸಂಸಾರಬಂಧನಾತ್ |
ವಿಮುಚ್ಯತೇ ನಮಸ್ತಸ್ಮೈ ವಿಷ್ಣವೇ ಪ್ರಭವಿಷ್ಣವೇ ||
ಓಂ ನಮೋ ವಿಷ್ಣವೇ ಪ್ರಭವಿಷ್ಣವೇ ||
ಶ್ರೀ ವೈಶಂಪಾಯನ ಉವಾಚ
ಶ್ರುತ್ವಾ ಧರ್ಮಾನಶೇಷೇಣ ಪಾವನಾನಿ ಚ ಸರ್ವಶಃ |
ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯಭ್ಯಾಷತ || ೧ ||
ಶ್ರೀ ಯುಧಿಷ್ಠಿರ ಉವಾಚ
ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಂ |
ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ || ೨ ||
ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ |
ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್ || ೩ ||
ಶ್ರೀ ಭೀಷ್ಮ ಉವಾಚ
ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಮ್ |
ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ || ೪ ||
ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್ |
ಧ್ಯಾಯನ್ ಸ್ತುವನ್ನಮಸ್ಯಂಶ್ಚ ಯಜಮಾನಸ್ತಮೇವ ಚ || ೫ ||
ಅನಾದಿ ನಿಧನಂ ವಿಷ್ಣುಂ ಸರ್ವಲೋಕಮಹೇಶ್ವರಮ್ |
ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವದುಃಖಾತಿಗೋ ಭವೇತ್ || ೬ ||
ಬ್ರಹ್ಮಣ್ಯಂ ಸರ್ವಧರ್ಮಜ್ಞಂ ಲೋಕಾನಾಂ ಕೀರ್ತಿವರ್ಧನಮ್ |
ಲೋಕನಾಥಂ ಮಹದ್ಭೂತಂ ಸರ್ವಭೂತಭವೋಧ್ಭವಮ್ || ೭ ||
ಏಷ ಮೇ ಸರ್ವಧರ್ಮಾಣಾಂ ಧರ್ಮೋಧಿಕತಮೋ ಮತಃ
ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ || ೮ ||
ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ |
ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ || ೯ ||
ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಮ್ |
ದೈವತಂ ದೇವತಾನಾಂ ಚ ಭೂತಾನಾಂ ಯೋವ್ಯಯಃ ಪಿತಾ || ೧೦ ||
ಯತಃ ಸರ್ವಾಣಿ ಭೂತಾನಿ ಭವಂತ್ಯಾದಿಯುಗಾಗಮೇ |
ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ || ೧೧ ||
ತಸ್ಯ ಲೋಕಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ |
ವಿಷ್ಣೋರ್ನಾಮಸಹಸ್ರಂ ಮೇ ಶ್ರುಣು ಪಾಪಭಯಾಪಹಮ್ || ೧೨ ||
ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ |
ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ || ೧೩ ||
ಋಷಿರ್ನಾಮ್ನಾಂ ಸಹಸ್ರಸ್ಯ ವೇದವ್ಯಾಸೋ ಮಹಾಮುನಿಃ |
ಛಂದೋನುಷ್ಟುಪ್ ತಥಾ ದೇವೋ ಭಗವಾನ್ ದೇವಕೀಸುತಃ || ೧೪ ||
ಅಮೃತಾಂಶೂದ್ಭವೋ ಬೀಜಂ ಶಕ್ತಿರ್ದೇವಕಿನಂದನ: |
ತ್ರಿಸಾಮಾ ಹೃದಯಂ ತಸ್ಯ ಶಾಂತ್ಯರ್ಥೇ ವಿನಿಯುಜ್ಯತೇ || ೧೫ ||
ವಿಷ್ಣುಂ ಜಿಷ್ಣುಂ ಮಹಾವಿಷ್ಣುಂ ಪ್ರಭವಿಷ್ಣುಂ ಮಹೇಶ್ವರಮ್ |
ಅನೇಕರೂಪದೈತ್ಯಾಂತಂ ನಮಾಮಿ ಪುರುಷೋತ್ತಮಮ್ || ೧೬ ||
ಅಸ್ಯ ಶ್ರೀ ವಿಷ್ಣೋರ್ದಿವ್ಯಸಹಸ್ರನಾಮಸ್ತೋತ್ರಮಹಾಮಂತ್ರಸ್ಯ |
ಶ್ರೀ ವೇದವ್ಯಾಸೋ ಭಗವಾನ್ ಋಷಿಃ |
ಅನುಷ್ಟುಪ್ ಛಂದಃ |
ಶ್ರೀಮಹಾವಿಷ್ಣುಃ ಪರಮಾತ್ಮಾ ಶ್ರೀಮನ್ನಾರಾಯಣೋ ದೇವತಾ |
ಅಮೃತಾಂಶೂದ್ಭವೋ ಭಾನುರಿತಿ ಬೀಜಮ್ |
ದೇವಕೀನಂದನಃ ಸ್ರಷ್ಟೇತಿ ಶಕ್ತಿಃ |
ಉಧ್ಭವಃ, ಕ್ಷೋಭಣೋ ದೇವ ಇತಿ ಪರಮೋ ಮಂತ್ರಃ |
ಶಂಖಭೃನ್ನಂದಕೀ ಚಕ್ರೀತಿ ಕೀಲಕಮ್ |
ಶಾರ್ಙ್ಗಧನ್ವಾ ಗದಾಧರ ಇತ್ಯಸ್ತ್ರಮ್ |
ರಥಾಂಗಪಾಣಿರಕ್ಷೋಭ್ಯ ಇತಿ ನೇತ್ರಮ್ |
ತ್ರಿಸಾಮಾ ಸಾಮಗಃ ಸಾಮೇತಿ ಕವಚಮ್ |
ಆನಂದಂ ಪರಬ್ರಹ್ಮೇತಿ ಯೋನಿಃ |
ಋತುಸ್ಸುದರ್ಶನ: ಕಾಲ ಇತಿ ದಿಗ್ಭಂಧಃ |
ಶ್ರೀ ವಿಶ್ವರೂಪ ಇತಿ ಧ್ಯಾನಮ್ |
ಶ್ರೀಮಹಾವಿಷ್ಣುಪ್ರೀತ್ಯರ್ಥೇ ಸಹಸ್ರನಾಮ ಪಾರಾಯಣೇ ವಿನಿಯೋಗಃ |
ಧ್ಯಾನಮ್
ಕ್ಷೀರೋದನ್ವತ್ಪ್ರದೇಶೇ ಶುಚಿಮಣಿವಿಲಸತ್ಸೈಕತೇ ಮೌಕ್ತಿಕಾನಾಂ
ಮಾಲಾಕ್ಲೃಪ್ತಾಸನಸ್ಥಃ ಸ್ಫಟಿಕಮಣಿನಿಭೈರ್ಮೌಕ್ತಿಕೈರ್ಮಂಡಿತಾಂಗಃ |
ಶುಭ್ರೈರಭ್ರೈರದಭ್ರೈರುಪರಿವಿರಚಿತೈರ್ಮುಕ್ತಪೀಯೂಷವರ್ಷೈಃ
ಆನಂದೀನಃ ಪುನೀಯಾದರಿನಳಿನಗದಾಶಂಖಪಾಣಿರ್ಮುಕುಂದಃ ||
ಭೂಃ ಪಾದೌ ಯಸ್ಯ ನಾಭಿರ್ವಿಯದಸುರನಿಲಶ್ಚಂದ್ರಸೂರ್ಯೌ ಚ ನೇತ್ರೇ
ಕರ್ಣಾವಾಶಾಃ ಶಿರೋ ದ್ಯೌರ್ಮುಖಮಪಿ ದಹನೋ ಯಸ್ಯ ವಾಸೋऽಯಮಬ್ಧಿಃ
ಅಂತಃಸ್ಥಂ ಯಸ್ಯ ವಿಶ್ವಂ ಸುರನರಖಗಗೋ ಭೋಗಿಗಂಧರ್ವದೈತ್ಯೈಃ
ಚಿತ್ರಂ ರಂ ರಮ್ಯತೇ ತಂ ತ್ರಿಭುವನವಪುಷಂ ವಿಷ್ಣುಮೀಶಂ ನಮಾಮಿ ||
|| ಓಂ ನಮೋ ಭಗವತೇ ವಾಸುದೇವಾಯ ||
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಮ್ |
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃದ್ಧ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್ ||
ಮೇಘಶ್ಯಾಮಂ ಪೀತಕೌಶೇಯವಾಸಂ
ಶ್ರೀವತ್ಸಾಂಕಂ ಕೌಸ್ತುಭೋದ್ಭಾಸಿತಾಂಗಮ್ |
ಪುಣ್ಯೋಪೇತಂ ಪುಂಡರೀಕಾಯತಾಕ್ಷಂ
ವಿಷ್ಣುಂ ವಂದೇ ಸರ್ವಲೋಕೈಕನಾಥಮ್ ||
ನಮಃ ಸಮಸ್ತಭೂತಾನಾಮಾದಿಭೂತಾಯ ಭೂಭೃತೇ |
ಅನೇಕರೂಪರೂಪಾಯ ವಿಷ್ಣವೇ ಪ್ರಭವಿಷ್ಣವೇ ||
ಸಶಂಖಚಕ್ರಂ ಸಕಿರೀಟಕುಂಡಲಂ ಸಪೀತವಸ್ತ್ರಂ ಸರಸೀರುಹೇಕ್ಷಣಮ್ |
ಸಹಾರವಕ್ಷಃಸ್ಥಲಶೋಭಿಕೌಸ್ತುಭಂ ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಮ್ ||
ಛಾಯಾಯಾಂ ಪಾರಿಜಾತಸ್ಯ ಹೇಮಸಿಂಹಾಸನೋಪರಿ |
ಆಸೀನಮಂಬುದಶ್ಯಾಮಮಾಯತಾಕ್ಷಮಲಂಕೃತಮ್ ||
ಚಂದ್ರಾನನಂ ಚತುರ್ಬಾಹುಂ ಶ್ರೀವತ್ಸಾಂಕಿತವಕ್ಷಸಮ್ |
ರುಕ್ಮಿಣೀಸತ್ಯಭಾಮಾಭ್ಯಾಂ ಸಹಿತಂ ಕೃಷ್ಣಮಾಶ್ರಯೇ ||
ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಪ್ರಾರಂಭಃ
ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ || ೧ ||
ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿಃ |
ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಜ್ಞೋsಕ್ಷರ ಏವ ಚ || ೨ ||
ಯೋಗೋ ಯೋಗವಿದಾಂ ನೇತಾ ಪ್ರಧಾನಪುರುಷೇಶ್ವರಃ |
ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ || ೩ ||
ಸರ್ವಃ ಶರ್ವಃ ಶಿವಃ ಸ್ಥಾಣುಃ ರ್ಭೂತಾದಿರ್ನಿಧಿರವ್ಯಯಃ |
ಸಮ್ಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || ೪ ||
ಸ್ವಯಮ್ಭೂಃ ಶಮ್ಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ |
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || ೫ ||
ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋsಮರಪ್ರಭುಃ |
ವಿಶ್ವಕರ್ಮಾ ಮನುಸ್ವ್ತಷ್ಟಾ ಸ್ಥವಿಷ್ಠಸ್ಸ್ಥವಿರೋ ಧ್ರುವಃ || ೬ ||
ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |
ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಙ್ಗಲಂ ಪರಮ್ || ೭ ||
ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ |
ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ || ೮ ||
ಈಶ್ವರೋ ವಿಕ್ರಮೀ ಧನ್ವೀ ಮೇಧಾವೀ ವಿಕ್ರಮಃ ಕ್ರಮಃ |
ಅನುತ್ತಮೋ ದುರಾಧರ್ಷಃ ಕೃತಜ್ಞಃ ಕೃತಿರಾತ್ಮವಾನ್ || ೯ ||
ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ |
ಅಹಃ ಸಂವತ್ಸರೋ ವ್ಯಾಲಃ ಪ್ರತ್ಯಯಸ್ಸರ್ವದರ್ಶನಃ || ೧೦ ||
ಅಜಃ ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ |
ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಸ್ಸೃತಃ || ೧೧ ||
ವಸುರ್ವಸುಮನಾಃ ಸತ್ಯಃ ಸಮಾತ್ಮಾ ಸಂಮಿತಃ ಸಮಃ |
ಅಮೋಘಃ ಪುಣ್ಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ || ೧೨ ||
ರುದ್ರೋ ಬಹುಶಿರಾ ಬಭ್ರುಃ ವಿಶ್ವಯೋನಿಃ ಶುಚಿಶ್ರವಾಃ |
ಅಮೃತಃ ಶಾಶ್ವತಃ ಸ್ಥಾಣುರ್ವರಾರೋಹೋ ಮಹಾತಪಾಃ || ೧೩ ||
ಸರ್ವಗಃ ಸರ್ವವಿದ್ಭಾನುಃ ವಿಷ್ವಕ್ಸೇನೋ ಜನಾರ್ದನಃ |
ವೇದೋ ವಿದವ್ಯಙ್ಗೋ ವೇದಾಙ್ಗೋ ವೇದವಿತ್ ಕವಿಃ || ೧೪ ||
ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ |
ಚತುರಾತ್ಮಾ ಚತುರ್ವ್ಯೂಹಃ ಚತುರ್ದಂಷ್ಟ್ರಶ್ಚತುರ್ಭುಜಃ || ೧೫ ||
ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ |
ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ || ೧೬ ||
ಉಪೇನ್ದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ |
ಅತೀನ್ದ್ರಃ ಸಙ್ಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ || ೧೭ ||
ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ |
ಅತೀನ್ದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ ||೧೮ ||
ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ |
ಅನಿರ್ದೇಶ್ಯವಪುಃ ಶ್ರೀಮಾನ್ ಅಮೇಯಾತ್ಮಾ ಮಹಾದ್ರಿಧೃಕ್ || ೧೯ ||
ಮಹೇಷ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂ ಗತಿಃ |
ಅನಿರುದ್ಧಃ ಸುರಾನನ್ದೋ ಗೋವಿನ್ದೋ ಗೋವಿದಾಮ್ಪತಿಃ || ೨೦ ||
ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ |
ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿಃ || ೨೧ ||
ಅಮೃತ್ಯುಃ ಸರ್ವದೃಕ್ ಸಿಂಹಃ ಸನ್ಧಾತಾ ಸನ್ಧಿಮಾನ್ ಸ್ಥಿರಃ |
ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ || ೨೨ ||
ಗುರುರ್ಗುರುತಮೋ ಧಾಮಃ ಸತ್ಯಃ ಸತ್ಯಪರಾಕ್ರಮಃ |
ನಿಮಿಷೋsನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀಃ || ೨೩ ||
ಅಗ್ರಣೀರ್ಗ್ರಾಮಣೀಃ ಶ್ರೀಮಾನ್ ನ್ಯಾಯೋ ನೇತಾ ಸಮೀರಣಃ |
ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್ || ೨೪ ||
ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಮ್ಪ್ರಮರ್ದನಃ |
ಅಹಃ ಸಂವರ್ತಕೋ ವಹ್ನಿಃ ಅನಿಲೋ ಧರಣೀಧರಃ || ೨೫ ||
ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಭುಃ |
ಸತ್ಕರ್ತಾ ಸತ್ಕೃತಃ ಸಾಧುಃ ಜಹ್ನುರ್ನಾರಾಯಣೋ ನರಃ || ೨೬ ||
ಅಸಙ್ಖ್ಯೇಯೋsಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ |
ಸಿದ್ಧಾರ್ಥಃ ಸಿದ್ಧ ಸಙ್ಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ || ೨೭ ||
ವೃಷಾಹೀ ವೃಷಭೋ ವಿಷ್ಣುರ್ವೃಷಪರ್ವಾ ವೃಷೋದರಃ |
ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶ್ರುತಿಸಾಗರಃ || ೨೮ ||
ಸುಭುಜೋ ದುರ್ಧರೋ ವಾಗ್ಮೀ ಮಹೇಂದ್ರೋ ವಸುದೋ ವಸುಃ |
ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ || ೨೯ ||
ಓಜಸ್ತೇಜೋದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ |
ಋದ್ಧಃ ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾಂಶುರ್ಭಾಸ್ಕರದ್ಯುತಿಃ || ೩೦ ||
ಅಮೃತಾಂಶೂದ್ಭವೋ ಭಾನುಃ ಶಶಬಿಂದುಃ ಸುರೇಶ್ವರಃ |
ಔಷಧಂ ಜಗತಃ ಸೇತುಃ ಸತ್ಯಧರ್ಮಪರಾಕ್ರಮಃ || ೩೧ ||
ಭೂತಭವ್ಯಭವನ್ನಾಥಃ ಪವನಃ ಪಾವನೋನಲಃ |
ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ || ೩೨ ||
ಯುಗಾದಿಕೃದ್ಯುಗಾವರ್ತೋ ನೈಕಮಾಯೋ ಮಹಾಶನಃ |
ಅದೃಶ್ಯೋ ವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್ || ೩೩ ||
ಇಷ್ಟೋ ವಿಶಿಷ್ಟಃ ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ |
ಕ್ರೋಧಹಾ ಕ್ರೋಧಕೃತ್ಕರ್ತಾ ವಿಶ್ವಬಾಹುರ್ಮಹೀಧರಃ || ೩೪ ||
ಅಚ್ಯುತಃ ಪ್ರಥಿತಃ ಪ್ರಾಣಃ ಪ್ರಾಣದೋ ವಾಸವಾನುಜಃ |
ಅಪಾಂ ನಿಧಿರಧಿಷ್ಠಾನಮಪ್ರಮತ್ತಃ ಪ್ರತಿಷ್ಠಿತಃ || ೩೫ ||
ಸ್ಕಂದಃ ಸ್ಕಂದಧರೋ ಧುರ್ಯೋ ವರದೋ ವಾಯುವಾಹನಃ |
ವಾಸುದೇವೋ ಬೃಹದ್ಭಾನುರಾದಿದೇವಃ ಪುರಂದರಃ || ೩೬ ||
ಅಶೋಕಸ್ತಾರಣಸ್ತಾರಃ ಶೂರಃ ಶೌರಿರ್ಜನೇಶ್ವರಃ |
ಅನುಕೂಲಃ ಶತಾವರ್ತಃ ಪದ್ಮೀ ಪದ್ಮನಿಭೇಕ್ಷಣಃ || ೩೭ ||
ಪದ್ಮನಾಭೋರವಿಂದಾಕ್ಷಃ ಪದ್ಮಗರ್ಭಃ ಶರೀರಭೃತ್ |
ಮಹರ್ದ್ಧಿರೃದ್ಧೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜಃ || ೩೮ ||
ಅತುಲಃ ಶರಭೋ ಭೀಮಃ ಸಮಯಜ್ಞೋ ಹವಿರ್ಹರಿಃ |
ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯಃ || ೩೯ ||
ವಿಕ್ಷರೋ ರೋಹಿತೋ ಮಾರ್ಗೋ ಹೇತುರ್ದಾಮೋದರಸ್ಸಹಃ |
ಮಹೀಧರೋ ಮಹಾಭಾಗೋ ವೇಗವಾನಮಿತಾಶನಃ || ೪೦ ||
ಉದ್ಭವಃ, ಕ್ಷೋಭಣೋ ದೇವಃ ಶ್ರೀಗರ್ಭಃ ಪರಮೇಶ್ವರಃ |
ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ || ೪೧ ||
ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ |
ಪರರ್ದ್ಧಿಃ ಪರಮಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷಣಃ || ೪೨ ||
ರಾಮೋ ವಿರಾಮೋ ವಿರಜೋ ಮಾರ್ಗೋ ನೇಯೋ ನಯೋನಯಃ |
ವೀರಃ ಶಕ್ತಿಮತಾಂ ಶ್ರೇಷ್ಠೋ ಧರ್ಮೋ ಧರ್ಮವಿದುತ್ತಮಃ || ೪೩ ||
ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ |
ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || ೪೪ ||
ಋತುಃ ಸುದರ್ಶನಃ ಕಾಲಃ ಪರಮೇಷ್ಠೀ ಪರಿಗ್ರಹಃ |
ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ || ೪೫ ||
ವಿಸ್ತಾರಃ ಸ್ಥಾವರಃಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ |
ಅರ್ಥೋನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ|| ೪೬ ||
ಅನಿರ್ವಿಣ್ಣಃ ಸ್ಥವಿಷ್ಠೋಭೂರ್ಧರ್ಮಯೂಪೋ ಮಹಾಮಖಃ |
ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ, ಕ್ಷಾಮಃ ಸಮೀಹನಃ || ೪೭ ||
ಯಜ್ಞ ಇಜ್ಯೋ ಮಹೇಜ್ಯಶ್ಚ ಕ್ರತುಃ ಸತ್ರಂ ಸತಾಂ ಗತಿಃ |
ಸರ್ವದರ್ಶೀ ವಿಮುಕ್ತಾತ್ಮಾ ಸರ್ವಜ್ಞೋ ಜ್ಞಾನಮುತ್ತಮಮ್ || ೪೮ ||
ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್ |
ಮನೋಹರೋ ಜಿತಕ್ರೋಧೋ ವೀರಬಾಹುರ್ವಿದಾರಣಃ || ೪೯ ||
ಸ್ವಾಪನಸ್ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕರ್ಮಕೃತ್ |
ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ || ೫೦ ||
ಧರ್ಮಗುಬ್ಧರ್ಮಕೃದ್ಧರ್ಮೀ ಸದಸತ್ಕ್ಷರಮಕ್ಷರಮ್ |
ಅವಿಜ್ಞಾತಾ ಸಹಸ್ರಾಂಶುರ್ವಿಧಾತಾ ಕೃತಲಕ್ಷಣಃ || ೫೧ ||
ಗಭಸ್ತಿನೇಮಿಃ ಸತ್ತ್ವಸ್ಥಃ ಸಿಂಹೋ ಭೂತಮಹೇಶ್ವರಃ |
ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರುಃ || ೫೨ ||
ಉತ್ತರೋ ಗೋಪತಿರ್ಗೋಪ್ತಾ ಜ್ಞಾನಗಮ್ಯಃ ಪುರಾತನಃ |
ಶರೀರಭೂತಭೃದ್ಭೋಕ್ತಾ ಕಪೀಂದ್ರೋ ಭೂರಿದಕ್ಷಿಣಃ || ೫೩ ||
ಸೋಮಪೋಮೃತಪಃ ಸೋಮಃ ಪುರುಜಿತ್ ಪುರುಸತ್ತಮಃ |
ವಿನಯೋ ಜಯಃ ಸತ್ಯಸಂಧೋ ದಾಶಾರ್ಹಸ್ಸಾತ್ವತಾಂ ಪತಿಃ || ೫೪ ||
ಜೀವೋ ವಿನಯಿತಾಸಾಕ್ಷೀ ಮುಕುಂದೋಮಿತವಿಕ್ರಮಃ |
ಅಂಭೋನಿಧಿರನಂತಾತ್ಮಾ ಮಹೋದಧಿಶಯೋಂತಕಃ || ೫೫ ||
ಅಜೋ ಮಹಾರ್ಹಃ ಸ್ವಾಭಾವ್ಯೋ ಜಿತಾಮಿತ್ರಃ ಪ್ರಮೋದನಃ |
ಆನಂದೋ ನಂದನೋ ನಂದಃ ಸತ್ಯಧರ್ಮಾ ತ್ರಿವಿಕ್ರಮಃ || ೫೬ ||
ಮಹರ್ಷಿಃ ಕಪಿಲಾಚಾರ್ಯಃ ಕೃತಜ್ಞೋ ಮೇದಿನೀಪತಿಃ |
ತ್ರಿಪದಸ್ತ್ರಿದಶಾಧ್ಯಕ್ಷೋ ಮಹಾಶೃಂಗಃ ಕೃತಾಂತಕೃತ್ || ೫೭ ||
ಮಹಾವರಾಹೋ ಗೋವಿಂದಃ ಸುಷೇಣಃ ಕನಕಾಂಗದೀ |
ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರಗದಾಧರಃ || ೫೮ ||
ವೇಧಾಸ್ಸ್ವಾಂಗೋಜಿತಃ ಕೃಷ್ಣೋ ದೃಢಸ್ಸಂಕರ್ಷಣೋಚ್ಯುತಃ |
ವರುಣೋ ವಾರುಣೋ ವೃಕ್ಷಃ ಪುಷ್ಕರಾಕ್ಷೋ ಮಹಾಮನಾಃ || ೫೯ ||
ಭಗವಾನ್ ಭಗಹಾನಂದೀ ವನಮಾಲೀ ಹಲಾಯುಧಃ |
ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ || ೬೦ ||
ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ |
ದಿವಸ್ಪೃಕ್ ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ || ೬೧ ||
ತ್ರಿಸಾಮಾ ಸಾಮಗಃ ಸಾಮ ನಿರ್ವಾಣಂ ಭೇಷಜಂ ಭಿಷಕ್ |
ಸಂನ್ಯಾಸಕೃಚ್ಛಮಶ್ಯಾಂತೋ ನಿಷ್ಠಾ ಶಾಂತಿಃ ಪರಾಯಣಮ್ || ೬೨ ||
ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ |
ಗೋಹಿತೋ ಗೋಪತಿರ್ಗೋಪ್ತಾ ವೃಷಭಾಕ್ಷೋ ವೃಷಪ್ರಿಯಃ || ೬೩ ||
ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಛಿವಃ |
ಶ್ರೀವತ್ಸವಕ್ಷಾಃ ಶ್ರೀವಾಸಃ ಶ್ರೀಪತಿಃ ಶ್ರೀಮತಾಂ ವರಃ || ೬೪ ||
ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ |
ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ || ೬೫ ||
ಸ್ವಕ್ಷಃ ಸ್ವಂಗಃ ಶತಾನಂದೋ ನಂದಿರ್ಜ್ಯೋತಿರ್ಗಣೇಶ್ವರಃ |
ವಿಜಿತಾತ್ಮಾ ವಿಧೇಯಾತ್ಮಾ ಸತ್ಕೀರ್ತಿಶ್ಛಿನ್ನಸಂಶಯಃ || ೬೬ ||
ಉದೀರ್ಣಃ ಸರ್ವತಶ್ಚಕ್ಷುರನೀಶಃ ಶಾಶ್ವತಸ್ಥಿರಃ |
ಭೂಶಯೋ ಭೂಷಣೋ ಭೂತಿರ್ವಿಶೋಕಃ ಶೋಕನಾಶನಃ || ೬೭ ||
ಅರ್ಚಿಷ್ಮಾನರ್ಚಿತಃ ಕುಂಭೋ ವಿಶುದ್ಧಾತ್ಮಾ ವಿಶೋಧನಃ |
ಅನಿರುದ್ಧೋಪ್ರತಿರಥಃ ಪ್ರದ್ಯುಮ್ನೋಮಿತವಿಕ್ರಮಃ || ೬೮ ||
ಕಾಲನೇಮಿನಿಹಾ ವೀರಃ ಶೌರಿಃ ಶೂರಜನೇಶ್ವರಃ |
ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿಃ || ೬೯ ||
ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ |
ಅನಿರ್ದೇಶ್ಯವಪುರ್ವಿಷ್ಣುರ್ವೀರೋನಂತೋ ಧನಂಜಯಃ || ೭೦ ||
ಬ್ರಹ್ಮಣ್ಯೋ ಬ್ರಹ್ಮಕೃದ್ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ |
ಬ್ರಹ್ಮವಿದ್ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಜ್ಞೋ ಬ್ರಾಹ್ಮಣಪ್ರಿಯಃ || ೭೧ ||
ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ |
ಮಹಾಕ್ರತುರ್ಮಹಾಯಜ್ವಾ ಮಹಾಯಜ್ಞೋ ಮಹಾಹವಿಃ || ೭೨ ||
ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿಃ ಸ್ತೋತಾ ರಣಪ್ರಿಯಃ |
ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ || ೭೩ ||
ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದಃ |
ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿಃ || ೭೪ ||
ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ |
ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ || ೭೫ ||
ಭೂತಾವಾಸೋ ವಾಸುದೇವಃ ಸರ್ವಾಸುನಿಲಯೋನಲಃ |
ದರ್ಪಹಾ ದರ್ಪದೋ ದೃಪ್ತೋ ದುರ್ಧರೋಥಾಪರಾಜಿತಃ || ೭೬ ||
ವಿಶ್ವಮೂರ್ತಿರ್ಮಹಾಮೂರ್ತಿರ್ದೀಪ್ತಮೂರ್ತಿರಮೂರ್ತಿಮಾನ್ |
ಅನೇಕಮೂರ್ತಿರವ್ಯಕ್ತಃ ಶತಮೂರ್ತಿಃ ಶತಾನನಃ || ೭೭ ||
ಏಕೋ ನೈಕಃ ಸವಃ ಕಃ ಕಿಂ ಯತ್ತತ್ಪದಮನುತ್ತಮಮ್ |
ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ || ೭೮ ||
ಸುವರ್ಣವರ್ಣೋ ಹೇಮಾಂಗೋ ವರಾಂಗಶ್ಚಂದನಾಂಗದೀ |
ವೀರಹಾ ವಿಷಮಃ ಶೂನ್ಯೋ ಘೃತಾಶೀರಚಲಶ್ಚಲಃ || ೭೯ ||
ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃತ್ |
ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ || ೮೦ ||
ತೇಜೋವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂ ವರಃ |
ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕಶೃಂಗೋ ಗದಾಗ್ರಜಃ || ೮೧ ||
ಚತುರ್ಮೂರ್ತಿಶ್ಚತುರ್ಬಾಹುಶ್ಚತುರ್ವ್ಯೂಹಶ್ಚತುರ್ಗತಿಃ |
ಚತುರಾತ್ಮಾ ಚತುರ್ಭಾವಶ್ಚತುರ್ವೇದವಿದೇಕಪಾತ್ || ೮೨ ||
ಸಮಾವರ್ತೋ ನಿವೃತ್ತಾತ್ಮಾ ದುರ್ಜಯೋ ದುರತಿಕ್ರಮಃ |
ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ || ೮೩ ||
ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ |
ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ || ೮೪ ||
ಉದ್ಭವಃ ಸುಂದರಃ ಸುಂದೋ ರತ್ನನಾಭಃ ಸುಲೋಚನಃ |
ಅರ್ಕೋ ವಾಜಸನಃ ಶೃಂಗೀ ಜಯಂತಃ ಸರ್ವವಿಜ್ಜಯೀ || ೮೫ ||
ಸುವರ್ಣಬಿಂದುರಕ್ಷೋಭ್ಯಃ ಸರ್ವವಾಗೀಶ್ವರೇಶ್ವರಃ |
ಮಹಾಹ್ರದೋ ಮಹಾಗರ್ತೋ ಮಹಾಭೂತೋ ಮಹಾನಿಧಿಃ || ೮೬ ||
ಕುಮುದಃ ಕುಂದರಃ ಕುಂದಃ ಪರ್ಜನ್ಯಃ ಪಾವನೋನಿಲಃ
ಅಮೃತಾಶೋಮೃತವಪುಃ ಸರ್ವಜ್ಞಃ ಸರ್ವತೋಮುಖಃ || ೮೭ ||
ಸುಲಭಃ ಸುವ್ರತಃ ಸಿದ್ಧಃ ಶತ್ರುಜಿಚ್ಛತ್ರುತಾಪನಃ |
ನ್ಯಗ್ರೋಧೋದುಂಬರೋಶ್ವತ್ಥಶ್ಚಾಣೂರಾಂಧ್ರನಿಷೂದನಃ || ೮೮ ||
ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ |
ಅಮೂರ್ತಿರನಘೋಚಿಂತ್ಯೋ ಭಯಕೃದ್ಭಯನಾಶನಃ || ೮೯ ||
ಅಣುರ್ಬೃಹತ್ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ |
ಅಧೃತಸ್ಸ್ವಧೃತಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || ೯೦ ||
ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ |
ಆಶ್ರಮಃ ಶ್ರಮಣಃ, ಕ್ಷಾಮಃ ಸುಪರ್ಣೋ ವಾಯುವಾಹನಃ || ೯೧ ||
ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮಃ |
ಅಪರಾಜಿತಸ್ಸರ್ವಸಹೋ ನಿಯಂತಾ ನಿಯಮೋ ಯಮಃ || ೯೨ ||
ಸತ್ತ್ವವಾನ್ ಸಾತ್ತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ |
ಅಭಿಪ್ರಾಯಃ ಪ್ರಿಯಾರ್ಹೋರ್ಹಃ ಪ್ರಿಯಕೃತ್ ಪ್ರೀತಿವರ್ಧನಃ || ೯೩ ||
ವಿಹಾಯಸಗತಿರ್ಜ್ಯೋತಿಃ ಸುರುಚಿರ್ಹುತಭುಗ್ವಿಭುಃ |
ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ || ೯೪ ||
ಅನಂತೋ ಹುತಭುಗ್ಭೋಕ್ತಾ ಸುಖದೋ ನೈಕಜೋಗ್ರಜಃ |
ಅನಿರ್ವಿಣ್ಣಃ ಸದಾಮರ್ಷೀ ಲೋಕಾಧಿಷ್ಠಾನಮದ್ಭುತಃ || ೯೫ ||
ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ |
ಸ್ವಸ್ತಿದಃ ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ || ೯೬ ||
ಅರೌದ್ರಃ ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನಃ |
ಶಬ್ದಾತಿಗಃ ಶಬ್ದಸಹಃ ಶಿಶಿರಃ ಶರ್ವರೀಕರಃ || ೯೭ ||
ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ, ಕ್ಷಮಿಣಾಂ ವರಃ |
ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ || ೯೮ ||
ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ |
ವೀರಹಾ ರಕ್ಷಣಸ್ಸಂತೋ ಜೀವನಃ ಪರ್ಯವಸ್ಥಿತಃ || ೯೯ ||
ಅನಂತರೂಪೋನಂತಶ್ರೀರ್ಜಿತಮನ್ಯುರ್ಭಯಾಪಹಃ |
ಚತುರಶ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ || ೧೦೦ ||
ಅನಾದಿರ್ಭೂರ್ಭುವೋ ಲಕ್ಷ್ಮೀಸ್ಸುವೀರೋ ರುಚಿರಾಂಗದಃ |
ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ || ೧೦೧ ||
ಆಧಾರನಿಲಯೋಧಾತಾ ಪುಷ್ಪಹಾಸಃ ಪ್ರಜಾಗರಃ |
ಊರ್ಧ್ವಗಸ್ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ || ೧೦೨ ||
ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ |
ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ || ೧೦೩ ||
ಭೂರ್ಭುವಃಸ್ವಸ್ತರುಸ್ತಾರಃ ಸವಿತಾ ಪ್ರಪಿತಾಮಹಃ |
ಯಜ್ಞೋ ಯಜ್ಞಪತಿರ್ಯಜ್ವಾ ಯಜ್ಞಾಂಗೋ ಯಜ್ಞವಾಹನಃ || ೧೦೪ ||
ಯಜ್ಞಭೃದ್ಯಜ್ಞಕೃದ್ಯಜ್ಞೀ ಯಜ್ಞಭುಗ್ಯಜ್ಞಸಾಧನಃ |
ಯಜ್ಞಾಂತಕೃದ್ಯಜ್ಞಗುಹ್ಯಮನ್ನಮನ್ನಾದ ಏವ ಚ || ೧೦೫ ||
ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ |
ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ || ೧೦೬ ||
ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರಃ |
ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || ೧೦೭ ||
|| ಸರ್ವಪ್ರಹರಣಾಯುಧ ಓಂ ನಮಃ ಇತಿ ||
ವನಮಾಲೀ ಗದೀ ಶಾರ್ಙ್ಗೀ ಶಂಖೀ ಚಕ್ರೀ ಚ ನಂದಕೀ |
ಶ್ರೀಮಾನ್ ನಾರಾಯಣೋ ವಿಷ್ಣುರ್ವಾಸುದೇವೋಭಿರಕ್ಷತು || (ಈ ಶ್ಲೋಕವನ್ನು ಮೂರು ಸಲ ಪಠಿಸಬೇಕು)
ಫಲಶ್ರುತಿಃ
ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ |
ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್ || ೧ ||
ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ |
ನಾಶುಭಂ ಪ್ರಾಪ್ನುಯಾತ್ ಕಿಂಚಿತ್ ಸೋಮುತ್ರೇಹ ಚ ಮಾನವಃ || ೨ ||
ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್ |
ವೈಶ್ಯೋ ಧನಸಮೃದ್ಧಃ ಸ್ಯಾತ್ ಶೂದ್ರಸ್ಸುಖಮವಾಪ್ನುಯಾತ್ || ೩ ||
ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಂ ಅರ್ಥಾರ್ಥೀ ಚಾರ್ಥಮಾಪ್ನುಯಾತ್ |
ಕಾಮಾನವಾಪ್ನುಯಾತ್ ಕಾಮೀ ಪ್ರಜಾರ್ಥೀ ಚಾಪ್ನುಯಾತ್ ಪ್ರಜಾಮ್ || ೪ ||
ಭಕ್ತಿಮಾನ್ ಯಃ ಸದೋತ್ಥಾಯ ಶುಚಿಸ್ತದ್ಗತಮಾನಸಃ |
ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್ || ೫ ||
ಯಶಃ ಪ್ರಾಪ್ನೋತಿ ವಿಪುಲಂ ಯಾತಿ ಪ್ರಾಧಾನ್ಯಮೇವ ಚ |
ಅಚಲಾಂ ಶ್ರಿಯಮಾಪ್ನೋತಿ ಶ್ರೇಯಃ ಪ್ರಾಪ್ನೋತ್ಯನುತ್ತಮಮ್ || ೬ ||
ನ ಭಯಂ ಕ್ವಚಿದಾಪ್ನೋತಿ ವೀರ್ಯಂ ತೇಜಶ್ಚ ವಿಂದತಿ |
ಭವತ್ಯರೋಗೋ ದ್ಯುತಿಮಾನ್ ಬಲರೂಪಗುಣಾನ್ವಿತಃ || ೭ ||
ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ |
ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ || ೮ ||
ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್ |
ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ || ೯ ||
ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣಃ |
ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್ || ೧೦ ||
ನ ವಾಸುದೇವಭಕ್ತಾನಾಮಶುಭಂ ವಿದ್ಯತೇ ಕ್ವಚಿತ್ |
ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ || ೧೧ ||
ಇಮಂ ಸ್ತವಮಧೀಯಾನಃ ಶ್ರದ್ಧಾಭಕ್ತಿಸಮನ್ವಿತಃ |
ಯುಜ್ಯೇತಾತ್ಮಾಸುಖಕ್ಷಾಂತಿಶ್ರೀಧೃತಿಸ್ಮೃತಿಕೀರ್ತಿಭಿಃ || ೧೨ ||
ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿಃ |
ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ || ೧೩ ||
ದ್ಯೌಸ್ಸಚಂದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿಃ |
ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನಃ || ೧೪ ||
ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್ |
ಜಗದ್ವಶೇ ವರ್ತತೇದಂ ಕೃಷ್ಣಸ್ಯ ಸಚರಾಚರಮ್ || ೧೫ ||
ಇಂದ್ರಿಯಾಣಿ ಮನೋ ಬುದ್ಧಿಃ ಸತ್ತ್ವಂ ತೇಜೋ ಬಲಂ ಧೃತಿಃ |
ವಾಸುದೇವಾತ್ಮಕಾನ್ಯಾಹುಃ, ಕ್ಷೇತ್ರಂ ಕ್ಷೇತ್ರಜ್ಞ ಏವ ಚ || ೧೬ ||
ಸರ್ವಾಗಮಾನಾಮಾಚಾರಃ ಪ್ರಥಮಂ ಪರಿಕಲ್ಯ್ಪತೇ |
ಆಚಾರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ || ೧೭ ||
ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ |
ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್ || ೧೮ ||
ಯೋಗೋ ಜ್ಞಾನಂ ತಥಾ ಸಾಂಖ್ಯಂ ವಿದ್ಯಾಃ ಶಿಲ್ಪಾದಿಕರ್ಮ ಚ |
ವೇದಾಶ್ಶಾಸ್ತ್ರಾಣಿ ವಿಜ್ಞಾನಮೇತತ್ಸರ್ವಂ ಜನಾರ್ದನಾತ್ || ೧೯ ||
ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ |
ತ್ರೀನ್ಲೋಕಾನ್ವ್ಯಾಪ್ಯ ಭೂತಾತ್ಮಾ ಭುಂಕ್ತೇ ವಿಶ್ವಭುಗವ್ಯಯಃ || ೨೦ ||
ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಮ್ |
ಪಠೇದ್ಯ ಇಚ್ಛೇತ್ಪುರುಷಃ ಶ್ರೇಯಃ ಪ್ರಾಪ್ತುಂ ಸುಖಾನಿ ಚ || ೨೧ ||
ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭವಾಪ್ಯಯಮ್ |
ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಮ್ || ೨೨ ||
|| ನ ತೇ ಯಾಂತಿ ಪರಾಭವಮ್ ಓಂ ನಮ ಇತಿ ||
ಅರ್ಜುನ ಉವಾಚ
ಪದ್ಮಪತ್ರ ವಿಶಾಲಾಕ್ಷ ಪದ್ಮನಾಭ ಸುರೋತ್ತಮ |
ಭಕ್ತಾನಾಮನುರಕ್ತಾನಾಂ ತ್ರಾತಾ ಭವ ಜನಾರ್ದನ ||
ಶ್ರೀಭಗವಾನುವಾಚ
ಯೋ ಮಾಂ ನಾಮಸಹಸ್ರೇಣ ಸ್ತೋತುಮಿಚ್ಛತಿ ಪಾಂಡವ |
ಸೋಹಮೇಕೇನ ಶ್ಲೋಕೇನ ಸ್ತುತ ಏವ ನ ಸಂಶಯಃ ||
|| ಸ್ತುತ ಏವ ನ ಸಂಶಯ ಓಂ ನಮ ಇತಿ ||
ವ್ಯಾಸ ಉವಾಚ
ವಾಸನಾದ್ವಾಸುದೇವಸ್ಯ ವಾಸಿತಂ ತೇ ಜಗತ್ರಯಮ್ |
ಸರ್ವಭೂತನಿವಾಸೋಸಿ ವಾಸುದೇವ ನಮೋಸ್ತು ತೇ ||
|| ಶ್ರೀವಾಸುದೇವ ನಮೋಸ್ತುತ ಓಂ ನಮ ಇತಿ ||
ಪಾರ್ವತ್ಯುವಾಚ
ಕೇನೋಪಾಯೇನ ಲಘುನಾ ವಿಷ್ಣೋರ್ನಾಮಸಹಸ್ರಕಮ್ |
ಪಠ್ಯತೇ ಪಂಡಿತೈರ್ನಿತ್ಯಂ ಶ್ರೋತುಮಿಚ್ಛಾಮ್ಯಹಂ ಪ್ರಭೋ ||
ಈಶ್ವರ ಉವಾಚ
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರನಾಮತತ್ತುಲ್ಯಂ ರಾಮನಾಮ ವರಾನನೇ || (ಮೂರು ಸಲ)
|| ಶ್ರೀ ರಾಮನಾಮ ವರಾನನ ಓಂ ನಮ ಇತಿ ||
ಬ್ರಹ್ಮೋವಾಚ
ನಮೋಸ್ತ್ವನಂತಾಯ ಸಹಸ್ರಮೂರ್ತಯೇ
ಸಹಸ್ರಪಾದಾಕ್ಷಿಶಿರೋರುಬಾಹವೇ |
ಸಹಸ್ರನಾಮ್ನೇ ಪುರುಷಾಯ ಶಾಶ್ವತೇ
ಸಹಸ್ರಕೋಟಿಯುಗಧಾರಿಣೇ ನಮಃ ||
|| ಸಹಸ್ರಕೋಟಿಯುಗಧಾರಿಣೇ ನಮ ಓಂ ನಮ ಇತಿ ||
ಸಂಜಯ ಉವಾಚ
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ |
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ ||
ಶ್ರೀಭಗವಾನುವಾಚ
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ |
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||
ಆರ್ತಾ ವಿಷಣ್ಣಾಃ ಶಿಥಿಲಾಶ್ಚ ಭೀತಾಃ
ಘೋರೇಷು ಚ ವ್ಯಾಧಿಷು ವರ್ತಮಾನಾಃ |
ಸಂಕೀರ್ತ್ಯ ನಾರಾಯಣಶಬ್ದಮಾತ್ರಂ
ವಿಮುಕ್ತದುಃಖಾಃ ಸುಖಿನೋ ಭವಂತಿ ||
ಓಂ ತತ್ಸದಿತಿ ಶ್ರಿಮನ್ಮಾಹಾಭಾರತೇ ಶತಸಾಹಸ್ರಿಕಾಯಾಂ ಸಂಹಿತಾಯಾಂ ವೈಯಾಸಿಕ್ಯಾಮ್ ಆನುಶಾಸನಿಕಪರ್ವಣಿ ಮೋಕ್ಷಧರ್ಮೇ ಶ್ರೀಭೀಷ್ಮ-ಯುಧಿಷ್ಠಿರಸಂವಾದೇ ಶ್ರೀವಿಷ್ಣೋರ್ದಿವ್ಯಸಹಸ್ರನಾಮಸ್ತೋತ್ರಂ ನಾಮ ಏಕೋನಪಂಚಾಶದಧಿಕಶತತಮೋsಧ್ಯಾಯಃ
ಇತಿ ಶ್ರೀ ವಿಷ್ಣು ಸಹಸ್ರನಾಮಸ್ತೋತ್ರಂ ಸಮಾಪ್ತಮ್
|| ಓ೩ಮ್ ||
ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ || ೧ ||
ವಿಶ್ವನು; ವಿಷ್ಣುವು; ವಷಟ್ಕಾರನು; ಭೂತಭವ್ಯಭವತ್ಪ್ರಭುವು; ಭೂತಕೃತ್ತು; ಭೂತಭೃತ್ತು; ಭಾವನು; ಭೂತಾತ್ಮನು; ಭೂತಭಾವನನು.
ಅಥ ವಿಷ್ಣುಸಹಸ್ರನಾಮನಮಸ್ಕಾರಶ್ಲೋಕಭಾಷ್ಯಮ್
ವಿಶ್ವಸ್ಮೈ ವಿಷ್ಣವೇ ತುಭ್ಯಂ ವಷಟ್ಕಾರಾಯ ತೇ ನಮಃ |
ಭೂತಭವ್ಯಭವತ್ಪ್ರಭ|ವೇ ತಸ್ಮೈ ಚ ನಮೋ ನಮಃ || ೧ ||
ಭೂತಕೃತೇ ನಮಸ್ತುಭ್ಯಂ ನಮೋ ಭೂತಭೃತೇ ಪುನಃ |
ನಮೋ ಭಾವಾಯ ದೇವಾಯ ಭೂತಾತ್ಮನೇ ನಮೋऽಸ್ತು ತೇ || ೨ ||
ಭೂತಭಾವನನಾಮ್ನೇ ತೇ ವಿಷ್ಣವೇ ಹರಯೇ ನಮಃ |
ಸಹಸ್ರನಾಮವಾಚ್ಯಾಯ ನಮೋऽಸ್ತು ಪರಮಾತ್ಮನೇ || ೩ ||
ವಿಶ್ವರೂಪನಿಗೆ, ವಿಷ್ಣುರೂಪನಾದ ನಿನಗೆ, ವಷಟ್ಕಾರನೆನಿಸಿದ ನಿನಗೆ ನಮಸ್ಕಾರ. ಹಾಗೂ ಭೂತಭವ್ಯಭವತ್ಪ್ರಭುವಾದ ತದ್ ವಾಚ್ಯನಾದ ಅವನಿಗೆ ನಮನವು, ನಮಸ್ಕಾರವು. || ೧ ||
ಭೂತಕೃತ್ತಾದ ನಿನಗೆ ನಮಸ್ಕಾರ. ಭೂತಭೃತ್ತಿಗೆ ಮತ್ತೆ ನಮನ. ಭಾವನಾಮಕ ದೇವನಿಗೆ ನಮಸ್ಕಾರ. ಭೂತಾತ್ಮನಾದ ನಿನಗೆ ನಮಸ್ಕಾರವು ಇರಲಿ. || ೨ ||
ಭೂತಭಾವನನೆಂಬ ಸರ್ವಮೂಲಕಾರಣನೂ, ಸಹಸ್ರನಾಮಗಳಿಂದ ಸ್ತುತ್ಯನೂ, ವಾಚ್ಯನೂ ಆದ ಪರಮಾತ್ಮನಾದ ನಿನಗೆ ನಮಸ್ಕಾರವಿರಲಿ. ಅಂತಹ ಮಹಾವಿಷ್ಣುವಿಗೆ, ಶ್ರೀಹರಿಗೆ ನಮನಗಳು. || ೩ ||
ಅಥ ಶ್ರೀವಿಷ್ಣುಸಾಹಸ್ರೀ
ಶ್ಲೋಕರೂಪವ್ಯಾಖ್ಯಾ
(೧) ಓಂ ವಿಶ್ವಸ್ಮೈ (/ವಿಶ್ವಾಯ) ನಮಃ ಓಮ್ ||
ಯಾವ ಮಹಾನುಭಾವನು ತನ್ನ ಸ್ವರೂಪ, ರೂಪ, ಗುಣ, ವಿಭವ, ಐಶ್ವರ್ಯಾದಿಗಳಿಂದ ಎಲ್ಲದರಲ್ಲೂ ಪ್ರವೇಶಿಸಿ ಪೂರ್ಣವಾಗಿರುವನೋ, ಅಂತಹ ಪೂರ್ಣರೂಪನಿಗೆ ನಮಸ್ಕಾರವು.
ವಿಘ್ನಾನ್ ನಿಘ್ನಂತಿ ವಿಶ್ವಾಖ್ಯೋ ವಿಶ್ವಂಭರೋ ಹರಿಃ ಸ್ವಯಮ್ |
ಜಾಗ್ರತ್-ಸ್ಥಿತಿನಿಯಂತಾ ನೋ ಹರೇ ಜಾಗರಿತಾನ್ ಕುರು || ೧ ||
ಭಗವಂತನು “ವಿಶ್ವ” ನಾಮಕನಾಗಿ ನಮ್ಮೆಲ್ಲರ ವಿಘ್ನಗಳನ್ನು ನಿವಾರಿಸುವ ವಿಘ್ನೇಶ್ವರನೂ ಹೌದು. ಸಾಕ್ಷಾತ್ ಶ್ರೀಹರಿಯು ತಾನೇ ವಿಶ್ವವನ್ನೆಲ್ಲ ಧರಿಸಿದವನಾಗಿ ವಿಶ್ವಂಭರನೂ ಎನಿಸಿದ್ದಾನೆ. ಈ “ವಿಶ್ವ” ನಾಮಕ ರೂಪಿನಿಂದ ಭಗವಂತನು ನಮ್ಮ ಎಚ್ಚರಾವಸ್ಥೆಯ ನಿಯಂತ್ರಕನಾಗಿದ್ದಾನೆ. (ಜಾಗ್ರತ್ / ಎಚ್ಚರ, ಸ್ವಪ್ನ / ಕನಸು, ಸುಷುಪ್ತಿ / ಗಾಢನಿದ್ದೆ ಹಾಗೂ ತುರೀಯ / ನಾಲ್ಕನೆಯದಾದ ಸಮಾಧಿಸ್ಥಿತಿ— ಇವು ಜೀವರ ನಾಲ್ಕು ಅವಸ್ಥೆಗಳು.) ಅಯ್ಯಾ ಹರಿಯೇ! ನಮ್ಮನ್ನೆಲ್ಲ ಜಾಗೃತ ಬುದ್ಧಿಯವರನ್ನಾಗಿ ಮಾಡಿ, ವಿಷ್ಣುಸಹಸ್ರನಾಮದ ನಾನಾ ಭಾವ-ಅರ್ಥಾದಿಗಳನ್ನೂ, ಭಗವಂತನ ನಾನಾ ಗುಣ-ರೂಪ-ಲೀಲಾದಿಗಳನ್ನೂ ಅರಿಯಲು ಸಮರ್ಥರನ್ನಾಗಿ ಮಾಡು / ಪ್ರೇರಿಸು / ಪ್ರಚೋದಿಸು. ಇಂತಹ ಜೀವಿತದ ಚರಮಸಾಧನಾ ಪಥಕ್ಕೆ ವಿಘ್ನಗಳು ಬಾರದಂತೆ ತಡೆಯಲು ಬಹುಶಃ “ವಿಶ್ವಮ್” ಎಂಬ ವಿಘ್ನನಿವಾರಣಾವಾಚಕವಾದ ನಾಮವನ್ನು ಆರಂಭದಲ್ಲಿ ಹೇಳಲಾಗಿದೆ.
ವಿಕಾರೋ ವಿಹಗೋ ಜ್ಞೇಯಃ ಶ್ವಕಾರಶ್ಚಲನಾರ್ಥಕಃ |
ವೈನತೇಯಂ ಸಮಾರುಹ್ಯ ವಿಶ್ವಂ ವಿಷ್ಣುಃ ಪ್ರಗಚ್ಛತಿ || ೨ ||
“ ವಿಶ್ವ”— ಪದದಲ್ಲಿ “ವಿ” ಎಂದರೆ ವಿಯತಿ ಗಚ್ಛತಿ ಇತಿ ವಿಹಗಃ— ಗಗನದಲ್ಲಿ ಗಮನ ಮಾಡುವಂಥದ್ದು— ವಿಹಗ / ಪಕ್ಷಿ / ಹಕ್ಕಿ; “ಶ್ವ” ಎಂದರೆ ಶ್ವಲ್ಲ ಆಶುಗಮನೇ— ವೇಗವಾಗಿ ಗಮಿಸುವಂಥದ್ದು. ಆದ್ದರಿಂದ “ವಿಶ್ವಮ್”— ಎಂದರೆ ವಿಹಗಾರೂಢಃ ಆಶುಗಮನಶೀಲಃ— ಹಕ್ಕಿಯ ಬೆನ್ನೇರಿ ತ್ವರಿತವಾಗಿ ಸಂಚರಿಸಬಲ್ಲವನು. ವಿಷ್ಣುವಿನ ವಾಹನ ಕಶ್ಯಪ-ವಿನತೆಯರ ಸುತ ವೈನತೇಯ ಗರುಡ. ವೇದಗಳ ಅಭಿಮಾನಿ ದೇವತೆಯಾದ ಗರುಡನನ್ನೇರಿ ಗಮಿಸುವವನು “ವಿಶ್ವಮ್” ನಾಮಕನಾದ ವಿಷ್ಣುವೇ. ಗರುಡವಾಹನನಾಗಿ ವಿಷ್ಣುವು ಸಕಲಕಾರಣನಾಗಿ, ಸಕಲಕಾರ್ಯನೂ ಆಗಿ ವಿಶ್ವದೆಲ್ಲೆಡೆಯೂ ಸಂಚರಿಸುತ್ತಾನಾದ್ದರಿಂದ ಆತನು “ವಿಶ್ವನು”.
ಟು ಓ ಶ್ವಿ ಗತಿವೃದ್ಧ್ಯೋಸ್ತ್ವ|ವಗತಿರ್ಗತಿರುಚ್ಯತೇ |
ತೇನ ಪೂರ್ಣಮಿತಿ ಜ್ಞಾನಂ ವಿಷ್ಣುರ್ವಿಶ್ವಮಿತೀರ್ಯತೇ || ೩ ||
“ಟು ಓ ಶ್ವಿ ಗತಿ-ವೃದ್ಧ್ಯೋಃ” ಎಂಬ ಅವಗತಿ (ಗತಿ, ದುರ್ಗತಿ, ಪತನ, ಕೆಳಮುಖದ ಗತಿ, ಸಾಮಾನ್ಯಜ್ಞಾನ, ಬೋಧಮಾತ್ರ) ಹಾಗೂ ವೃದ್ಧಿ (ಗಮನಶೀಲತೆ, ಗತಿಶೀಲತೆ, ಸದ್ಗತಿ, ವಿಶೇಷಜ್ಞಾನ, ಜ್ಞಾನವೃದ್ಧಿ) ಎಂಬರ್ಥ ಕೊಡುವ ಧಾತುವಿನಂತೆ, “ವಿಶ್ವಮ್” ಎಂಬ ಭಗವನ್ನಾಮವು “ಪೂರ್ಣಜ್ಞಾನರೂಪನು” ಎಂಬ ತಾತ್ಪರ್ಯವನ್ನುಂಟುಮಾಡುತ್ತದೆ.
ನಿತ್ಯವೃದ್ಧಂ ತಥಾ ಭಕ್ತ್ಯಾ ವಿಶಿಷ್ಟಾನ್ ಶ್ವಯತೀತಿ ವಾ |
ಉದ್ಧರ್ತುಂ ಧಾವತೀತ್ಥಂ ವೈ ವಿಷ್ಣುರ್ವಿಶ್ವಮಿತಿ ಸ್ಮೃತಃ || ೪ ||
ನಿತ್ಯವೂ ವರ್ಧಿಸುತ್ತಿರುವುದೂ (ಬೆಳೆಯುತ್ತಿರುವುದೂ), ನಿತ್ಯವೂ ಎಲ್ಲರಿಗಿಂತಲೂ ಹಿರಿದಾದ ತತ್ತ್ವವೂ ಆದ ವಿಷ್ಣುತತ್ತ್ವವು “ವಿಶ್ವಮ್”. ಭಕ್ತಿಯಿಂದ ವಿಶಿಷ್ಟರಾದವರನ್ನು (ಭಕ್ತಶ್ರೇಷ್ಠರನ್ನು) ಉದ್ಧಾರಮಾಡಲು ಕೂಗಿ ಕರೆದವರ ದನಿಗೆ, ಆರ್ತತೆಯ ಮೊರೆಗೆ, ಭಕ್ತಿ-ಪ್ರೇಮಗಳಿಗೆ ಓಗೊಟ್ಟು ಓಡೋಡಿ ಬರುವವನೇ (ಭಕ್ತ್ಯಾ ವಿಶಿಷ್ಟಾನ್ ಉದ್ಧರ್ತುಂ ಶ್ವಯತಿ ಧಾವತೀತಿ ವಾ) “ವಿಶ್ವಮ್” ನಾಮಕನಾದ ಮಹಾವಿಷ್ಣುವು.
ಭಕ್ತ್ಯಾವಿರಹಿತಾನ್ ದೈತ್ಯಾನ್ಸಂಹರ್ತುಂ ಶ್ವಯತೀತಿ ಚ |
ಅವನ್ಯಾಮವತಾರಂ ವಾ ಧರತ್ಯೇಷಸ್ತು ವಿಶ್ವಮೋಮ್ || ೫ ||
ಭಗವದ್ಭಕ್ತಿವಿರಹಿತರಾದ (ಭಕ್ತಿಹೀನರಾದ, ಭಕ್ತಿಯಿಲ್ಲದ) ದಿತಿಸುತರಾದ ದೈತ್ಯರೇ ಮುಂತಾದ ದುಷ್ಟರನ್ನು ಸಂಹರಿಸುವುದಕ್ಕಾಗಿ ಅವನಿಯಲ್ಲಿ (ಭೂಲೋಕದಲ್ಲಿ) ಅವತಾರವೆತ್ತಿ ಬರುತ್ತಾನೆಂಬುದರಿಂದಾಗಿಯೂ (ಶ್ವಯತಿ, ಅವತರತಿ ಇತಿ) ಈ ಪ್ರಣವಸ್ವರೂಪನಾದ ಶ್ರೀಹರಿಯು “ವಿಶ್ವಮ್” ಎನಿಸಿರುವನು.
ವಿವಿಧಾನಿ ತು ರೂಪಾಣಿ ಗಚ್ಛತಿ ಶ್ವಯತೀತಿ ವಾ |
ನಾನಾವತಾರಕಾರ್ಯೇಷು ಶ್ರೀಹರಿರ್ವಿಶ್ವಮೀರಿತಃ || ೬ ||
ನಾನಾ ಅವತಾರಗಳನ್ನೆತ್ತುವ ಕಾಲದಲ್ಲಿ ವಿವಿಧ ರೂಪಗಳನ್ನು ಹೊಂದುತ್ತಾನೆ ಎಂಬುದರಿಂದಾಗಿಯೂ ಶ್ರೀಹರಿಯು “ವಿಶ್ವಮ್” ಎನ್ನಲ್ಪಟ್ಟಿರುವನು.
ಪಕ್ಷಿಣೋ ವಾ ವಯಃ ಪ್ರೋಕ್ತಾಃ ಶ್ವಯನ್ತಿ ವಿಯತೀತಿ ಚ |
ಗಚ್ಛನ್ತಿ ಗಗನೇऽನೇನೈ|ವೇತಿ ವಿಶ್ವಂ ಹರಿಃ ಸ್ವಯಮ್ || ೭ ||
ವಯಃ ಎಂದರೆ ಪಕ್ಷಿಗಳು. ವಿಯತ್ ಎಂದರೆ ಆಕಾಶ. ಪಕ್ಷಿಗಳು ಆಕಾಶದಲ್ಲಿ (ವಿಯತಿ ಶ್ವಯನ್ತಿ ಅನೇನ ಇತಿ) ಈತನಿಂದಾಗಿಯೇ ಹಾರಾಡುತ್ತವೆ ಎಂದೂ ಸಾಕ್ಷಾತ್ ಶ್ರೀಹರಿಯು “ವಿಶ್ವಮ್” ಎಂದು ಕರೆಯಲ್ಪಡುವನು.
ಜ್ಞಾನಿನೋ ವಾ ವಯಃ ಪ್ರೋಕ್ತಾ|ऽವಗಚ್ಛನ್ತಿ ಶ್ವಯನ್ತಿ ತೇ |
ವಿಷ್ಣುನಾऽನೇನ ಸರ್ವಂ ವೈ ವಿಷ್ಣುರ್ವಿಶ್ವಮತಃ ಸ್ಮೃತಃ || ೮ ||
ವಯಃ ಎಂದರೆ ಜ್ಞಾನಿಗಳು ಎಂಬರ್ಥವೂ ಇದೆ. ಇಂತಹ ಜ್ಞಾನಿಗಳು ಸರ್ವವನ್ನೂ ಆತ್ಮಸಾತ್ಕರಿಸುವುದು, ಪೂರ್ಣವಾಗಿ ಅರ್ಥೈಸಿ ಅನುಭವಿಸುವುದು ಈ ವಿಷ್ಣುವಿನ ಕೃಪೆಯಿಂದಲೇ. ಹೀಗಾಗಿಯೂ ವಿಷ್ಣುವು “ವಿಶ್ವಮ್” ಎಂದು ಸ್ಮರಿಸಲ್ಪಡುತ್ತಾನೆ.
ಅವಗಮೇನ ಚ ತೇನೈವ ಶ್ವಯನ್ತಿ ಜ್ಞಾನಿನೋऽಮುನಾ |
ವರ್ಧನ್ತೇ ವಿಷ್ಣುನಾ ತಸ್ಮಾತ್|ಸ ವಿಶ್ವಂ ಪರಿಕೀರ್ತಿತಃ || ೯ ||
ಹೀಗೆ ಜ್ಞಾನವಂತರಾಗಿ ಭಗವತ್ಕೃಪೆಯಿಂದಲೇ ಪಡೆದ ಜ್ಞಾನದಿಂದ ಉನ್ನತೋನ್ನತವಾದ ಕೀರ್ತಿ-ಪ್ರಗತಿಗಳನ್ನು ಹೊಂದುವುದರಿಂದ, ವಿಷ್ಣುವೇ “ವಿಶ್ವಮ್” ಎಂದು ಪರಿಕೀರ್ತಿತನಾಗಿರುವನು.
ವಿಶಿಷ್ಟಸ್ತು ಜಡೇಭ್ಯಶ್ಚ ಚೇತನಃ ಶ್ವಯತೀತಿ ವಾ |
ವಿಷ್ಣುನೈವ ಚಲತ್ಯಸ್ಮಾದ್|ವಿಶ್ವಂ ವಿಷ್ಣುರಿತೀರ್ಯತೇ || ೧೦ ||
ಜಡವಸ್ತುಗಳಿಗಿಂತ ವಿಶಿಷ್ಟವಾದ ಸಚೇತನನು ಅಂತರ್ಯಾಮಿಯಾದ ವಿಷ್ಣುವಿನಿಂದಲೇ ಚಲಿಸುತ್ತಾನಾದ್ದರಿಂದಲೂ ವಿಷ್ಣುವು “ವಿಶ್ವಮ್” ಎಂದು ಕರೆಯಲ್ಪಡುತ್ತಾನೆ.
ತತ್ರಾಪಿ ಚೋರ್ಧ್ವಂ ತರವೋ ವಿಲಕ್ಷಣಾಃ
ವರ್ಧನ್ತ ಇತ್ಯೇವಮತೀವ ವಿಸ್ತರಮ್ |
ವಿಷ್ಣೋಸ್ತು ಶಕ್ತ್ಯೈವ ನಗಾಃ ಶ್ವಯನ್ತಿ ವೈ
ತಸ್ಮಾದಸೌ ವಿಷ್ಣುರಪೀತಿ ವಿಶ್ವಮೋಮ್ || ೧೧ ||
(ದ್ವಾದಶಾಕ್ಷರವೃತ್ತಿಃ, ಜಗತೀಚ್ಛನ್ದೋಜಾತಂ ವಂಶಸ್ಥವೃತ್ತಮ್ ― “ಜತೌ ತು ವಂಶಸ್ಥಮುದೀರಿತಂ ಜರೌ”)
ಇಂತಹ ಚೇತನರಲ್ಲೂ, ಬಹು ವಿಲಕ್ಷಣವಾದ ಸ್ಥಾವರಯೋನಿಗಳಾದ (ನ ಗಚ್ಛನ್ತಿ ಇತಿ ನಗಾಃ ― ಸಂಚರಿಸಲಶಕ್ತವಾದವು, ಸ್ಥಿರವಾದವುಗಳು) ತರುಗಳು ಮೇಲಕ್ಕೆ (ಊರ್ಧ್ವಮುಖವಾಗಿ) ಬಹು ಎತ್ತರಕ್ಕೂ, ಶಾಖೋಪಶಾಖೆಗಳೊಂದಿಗೆ ಬಹುವಿಸ್ತಾರವಾಗಿಯೂ ಬೆಳೆಯುತ್ತವೆ ಎಂಬುದಾದರೋ ಮಹಾವಿಷ್ಣುವಿನ ಶಕ್ತಿಯಿಂದಲೇ ಆದುದರಿಂದಾಗಿ, ಪ್ರಣವವಾಚ್ಯನಾದ ಈ ವಿಷ್ಣುವು “ವಿಶ್ವಮ್” ಆಗಿರುವನು.
ಚೇತನವೃನ್ದಾऽನೇನ ಹಿ ಯಾನ್ತಿ
ತೇऽಪ್ಯವಗಚ್ಛನ್ತೀತ್ಯಮುನಾ ವೈ |
ವಿಷ್ಣುವಪುಸ್ತದ್ವಿಶ್ವಮಿತೀದಂ
ವಿಶ್ರುತಮೇವಂ ಲೋಕಸಮಸ್ತೇ || ೧೨ ||
(ದಶಾಕ್ಷರಾವೃತ್ತಿಃ, ಪಙ್ಕ್ತಿಶ್ಛನ್ದೋಜಾತಂ ರುಕ್ಮವತೀವೃತ್ತಮ್ ―“ರುಕ್ಮವತೀ ಸಾ ಯತ್ರ ಭಮಸ್ಗಾಃ”; ರುಕ್ಮಮ್ ಅಂದರೆ “ರುಚ್ ಅಭಿಪ್ರೀತೌ ದೀಪ್ತೌ ವಾ” ಎಂಬ ಧಾತುಜನ್ಯ; ರೋಚತೇ ಶೋಭತೇ ಇತಿ ―ರುಚಿರವಾದ, ಶೋಭಾಯಮಾನವಾದ; ರುಕ್ಮವತೀ ಅಂದರೆ ತುಂಬ ಸೌಂದರ್ಯವತಿ. )
ಇವನಿಂದಲೇ ಸಕಲ ಚೇತನರ ಸಮೂಹಗಳು ಚಲಿಸುತ್ತವೆ ಹಾಗೂ ಅವುಗಳು ಈತನಿಂದಲೇ ಅರ್ಥಮಾಡಿಕೊಳ್ಳುವ ಬುದ್ಧಿಶಕ್ತಿಯನ್ನೂ ಪಡೆದಿವೆ. ಹೀಗಾಗಿ ಅಂತಹ ವಿಷ್ಣುರೂಪಧಾರಿಯಾದ ಭಗವಂತನನ್ನೇ “ವಿಶ್ವಮ್” (ಚೇತನಗಣಾಃ ವಿಶೇಷೇಣ ಶ್ವಯನ್ತಿ ಅವಗಚ್ಛನ್ತಿ ಅನೇನ ಇತಿ) ಎನ್ನಲಾಗಿದೆಯೆಂಬುದು ಸಮಸ್ತಲೋಕದಲ್ಲಿ ಈ ರೀತಿಯಾಗಿ ವಿಶ್ರುತವಾಗಿರುವುದು (ಪ್ರಸಿದ್ಧವಾಗಿರುವುದು, ವಿಶೇಷವಾಗಿ ಶ್ರುತವಾಗಿರುವುದು / ಕೇಳಿಬಲ್ಲದ್ದಾಗಿರುವುದು).
ಏತತ್ತು ತತ್ತ್ವಂ ಪರಮಂ ವದನ್ತಿ
ಜಾನನ್ತಿ ವೈಶಿಷ್ಟ್ಯಯುತಂ ಮಹಾನ್ತಃ |
ಸರ್ವೈರ್ಗುಣೈರ್ವೇತಿ ಚ ತಚ್ಛ್ವಯನ್ತಿ
ವಿಶ್ವಂ ಹರಿಂ ಜ್ಞಾನಯುತಾ ವ್ರಜನ್ತಿ || ೧೩ ||
(ಏಕಾದಶಾಕ್ಷರವೃತ್ತಿಃ; ತ್ರಿಷ್ಟುಪ್-ಛನ್ದೋಜಾತಮ್ ಇನ್ದ್ರವಜ್ರಾವೃತ್ತಮ್ ― “ಸ್ಯಾದಿನ್ದ್ರವಜ್ರಾ ಯದಿ ತೌ ಜಗೌ ಗಃ”)
ಹರಿತತ್ತ್ವವನ್ನು ಸಕಲ ವಿಶಿಷ್ಟಗುಣಗಳಿಂದ ಕೂಡಿರುವ ಪರಮತತ್ತ್ವವೆಂದು ಜ್ಞಾನಿಗಳಾದ ಮಹಾತ್ಮರು ತಿಳಿಯುತ್ತಾರೆ ಹಾಗೂ ಹೇಳುತ್ತಾರೆ. ಹೀಗಾಗಿಯೇ ಅಂಥವರು ಕೊನೆಗೆ “ವಿಶ್ವಮ್” ನಾಮಕನಾದ ಶ್ರೀಹರಿಯ ಪರಮಪದವನ್ನೇ ಹೊಂದುವರು.
ಜಾನನ್ತ್ಯಮುಂ ದೂರದೃಶೋ ವಿಲಕ್ಷಣಂ
ತೇ ವಾ ಶ್ವಯನ್ತ್ಯೇನಮಪೀತಿ ಸರ್ವತಃ |
ತಾನ್ ಶ್ವಾಯಯನ್ತಂ ವಿವಿಧಂ ಗತಿಂ ಪ್ರತಿ
ಮೋಕ್ಷಂ ಚ ವಿಷ್ಣುಂ ತು ವದನ್ತಿ ವಿಶ್ವಮೋಮ್ || ೧೪ ||
(ದ್ವಾದಶಾಕ್ಷರಾ ವೃತ್ತಿಃ; ಜಗತೀಚ್ಛನ್ದೋಜಾತಮ್ ಇನ್ದ್ರವಂಶಾವೃತ್ತಮ್; “ಸ್ಯಾದಿನ್ದ್ರವಂಶಾ ತತಜೈರಸಂಯುತಾ”)
ಇವನನ್ನು (ಅಮುಮ್), ದೂರದೃಷ್ಟಿಯುಳ್ಳ ಆ ಜ್ಞಾನಿಗಳು (ದೂರದೃಶಃ), ಎಲ್ಲದಕ್ಕಿಂತಲೂ ವಿಲಕ್ಷಣನಾದವನು (ಸರ್ವತಃ, ವಿಲಕ್ಷಣಂ ಜಾನನ್ತಿ) ಎಂದು ತಿಳಿಯುತ್ತಾರೆ. ಅಥವಾ (ವಾ), ಈತನನ್ನು (ಏನಮ್), ಅಂಥವರು (ತೇ), ಎಲ್ಲಾ ಕಡೆಯಿಂದಲೂ, ಎಲ್ಲಾ ರೀತಿಯಿಂದಲೂ (ಸರ್ವತೋ ವಿಲಕ್ಷಣಃ) ವಿಶಿಷ್ಟನಾದವನು, ಅಸಾಮಾನ್ಯನು ಎಂದೂ ಸಹ (ಇತಿ ಅಪಿ), ತಿಳಿಯುತ್ತಾರೆ (ಶ್ವಯನ್ತಿ). ಅಂತಹ ಜ್ಞಾನಿಗಳನ್ನು (ತಾನ್), ಬಹುವಿಧವಾದ ಪುರೋಗತಿಗಳೆಡೆಗೆ ಹಾಗೂ ಸಾಲೋಕ್ಯ-ಸಾಮೀಪ್ಯ-ಸಾರೂಪ್ಯ-ಸಾರ್ಷ್ಟಿ-ಸಾಯುಜ್ಯಾದಿ ವಿವಿಧ ರೀತಿಯ ಮೋಕ್ಷದೆಡೆಗೂ (ವಿವಿಧಂ ಗತಿಂ ಮೋಕ್ಷಂ ಚ ಪ್ರತಿ), ಚಲಿಸುವಂತೆ ಮಾಡುವ (ಶ್ವಾಯಯನ್ತಮ್), ಅಂತಹ ವಿಷ್ಣುವನ್ನಾದರೋ (ವಿಷ್ಣುಂ ತು), ಪ್ರಣವಾಕಾರನಾದ “ವಿಶ್ವಮ್” (ಓಮ್ ವಿಶ್ವಮ್) ಎಂದು ಹೇಳುತ್ತಾರೆ (ವದನ್ತಿ).
ವಿವಿಧಾಸು ಚ ಸಂಸಾರ|ಗತಿಷು ಶ್ವಾಯಯತ್ಯಪಿ |
ಸಞ್ಚಾರಯತಿ ಜೀವಾನ್ ವಾ ವಿಷ್ಣುರ್ವಿಶ್ವಮಿತೀರ್ಯತೇ || ೧೫ ||
(ಅಷ್ಟಾಕ್ಷರವೃತ್ತಿಃ ; ವೈದಿಕಂ ಅನುಷ್ಟುಪ್-ಛನ್ದೋಜಾತಂ ಲೌಕಿಕಂ ಅನುಷ್ಟುಬ್-ವೃತ್ತಮ್― “ಪಞ್ಚಮಂ ಲಘು ಸರ್ವತ್ರ | ಸಪ್ತಮಂ ದ್ವಿಚತುರ್ಥಯೋಃ || ಗುರು ಷಷ್ಠಂ ಚ ಪಾದಾನಾಂ | ಚತುರ್ಣಾಂ ಸ್ಯಾದನುಷ್ಟುಭಿ ||”)
ಜೀವರನ್ನು ಬಹುವಿಧವಾದ ಸಂಸಾರದ ಪಥಗಳಲ್ಲಿ ಚಲಿಸುವಂತೆ, ಸಂಚರಿಸುವಂತೆ (ಶ್ವಾಯಯತಿ) ಮಾಡುವ ವಿಷ್ಣುವು “ವಿಶ್ವಮ್” ಎನಿಸಿರುವನು.
ವೀನಾಂ ಜ್ಞಾನಿನಾಂ ಮೌಕ್ತಂ ಸುಖಂ ಶಂ ಹ್ಯಮುನಾ ತಥಾ |
ಅಪರೋಕ್ಷಂ ಹಿ ವಂ ಜ್ಞಾನಂ ವಿಷ್ಣುರ್ವಿಶ್ವಮತಃ ಸ್ಮೃತಃ || ೧೬ ||
(“ಗಾಯತ್ರೈಃ” ಅಷ್ಟಾಕ್ಷರೈಃ ಪಾದೈಃ, ಚತುಷ್ಪಾಚ್ಛನ್ದಃ ಅನುಷ್ಟುಪ್-ಸಂಜ್ಞಂ ಭವತಿ ವೇದೇ | “ಪಞ್ಚಮಂ ಲಘು ಸರ್ವತ್ರ | ಸಪ್ತಮಂ ದ್ವಿಚತುರ್ಥಯೋಃ || ಗುರು ಷಷ್ಠಂ ಚ ಜಾನೀಯಾತ್ | ಶೇಷೇಷ್ವನಿಯಮೋ ಮತಃ ||” ಇತಿ ಅನುಷ್ಟುಪ್-ಸಂಜ್ಞಂ ಭವತಿ ಲೋಕೇ)
‘ವಿ’ ಎಂದರೆ ಜ್ಞಾನಿ ಎಂಬರ್ಥವಿದೆ. ‘ಶಮ್’ ಎಂದರೆ ಕಲ್ಯಾಣ, ಶುಭ, ಶಾಸ್ತ್ರ ಎಂಬರ್ಥಗಳಿವೆ. ‘ವಮ್’ ಎಂದರೆ ಜಗದೀಶ್ವರ (“ವಕಾರೋ ವರುಣೋ ಬಾಣಃ ಸ್ವೇದಃ ಖಡ್ಗೀಶ್ವರೋ ಜವಃ”― ರುದ್ರಯಾಮಲೇ ಮನ್ತ್ರಕೋಷಃ) ಅಥವಾ ಅಪರೋಕ್ಷಜ್ಞಾನ (ಬನ್ನಂಜೆಭಾಷ್ಯ). ಹೀಗಾಗಿ, “ವೀನಾಂ ಜ್ಞಾನಿನಾಂ ಮೌಕ್ತಂ ಸುಖಮ್, ತಥಾ, ಅಪರೋಕ್ಷಜ್ಞಾನಮ್ ಪರತತ್ತ್ವಜ್ಞಾನಂ ವಾ ಅಮುನಾ ಅನೇನ ಹಿ ಇತಿ ವಿಶ್ವಮ್”― ಜ್ಞಾನಿಗಳಿಗೆ ಮುಕ್ತಿಯ ಸುಖ, ಅಪರೋಕ್ಷಜ್ಞಾನ ಅಥವಾ ಈಶ್ವರೀಯ ಪರತತ್ತ್ವಜ್ಞಾನವು ಇವನಿಂದಲೇ (ಅಮುನಾ ಹಿ), ಎಂಬುದರಿಂದಾಗಿ (ಅತಃ), ವಿಷ್ಣುವು “ವಿಶ್ವಮ್” ಎಂದು ಸ್ಮೃತನಾಗಿರುವನು (ಸ್ಮರಿಸಲ್ಪಟ್ಟಿರುವನು).
ಚೇತನಾನಾಂ ಚ ಸರ್ವೇಷಾಂ ವಿವಿಧಂ ಶಂ ಸುಖಂ ತಥಾ |
ಜ್ಞಾನಂ ತರತಮೋಪೇತಂ ವಂ ವಿಷ್ಣುರ್ವಿಶ್ವಮ್ಉಚ್ಯತೇ ||೧೭ ||
ಸಕಲ ಚೇತನರಿಗೆ ವಿವಿಧವಾದ ಹಾಗೂ ತರತಮವಾಗಿ ಯಥಾಯೋಗ್ಯವಾದ ಶಮ್ / ಸುಖವನ್ನೂ, ವಮ್ / ಜ್ಞಾನವನ್ನೂ ಉಂಟುಮಾಡುವವನಾದ್ದರಿಂದ ವಿಷ್ಣುವು “ವಿಶ್ವಮ್” ಎನ್ನಲ್ಪಡುವನು.
ಸಞ್ಚಾರಯತಿ ಸಂಸಾರಿ|ಣೋ ಭೂರ್ಭುವಸ್ಸುವೇಷು ವಾ |
ವಿವಿಧಂ ಶ್ವಾಯಯತ್ಯೇಷೋ ವಿಷ್ಣುರ್ವಿಶ್ವಮ್ಇತೀರಿತಃ || ೧೮ ||
ನಿತ್ಯಸಂಸಾರಿಗಳನ್ನು ಭೂಮಿ, ಅಂತರಿಕ್ಷ ಹಾಗೂ ಸ್ವರ್ಗಗಳಲ್ಲಿ ವಿವಿಧ ರೀತಿಯಲ್ಲಿ ಸಂಚರಿಸುವಂತೆ ಮಾಡುವ (ಶ್ವಾಯಯತಿ) ವಿಷ್ಣುವು “ವಿಶ್ವಮ್” ಎಂದು ಕರೆಯಲ್ಪಟ್ಟಿರುವನು.
ತ್ರಿವಿಧಾ ಏವ ಜೀವಾ ವೈ ನಿತ್ಯಮುಕ್ತಾಸ್ತಥೈವ ಚ |
ನಿತ್ಯಸಂಸಾರಿಣಃ ಪ್ರೋಕ್ತಾ ನಿತ್ಯನಾರಕಿನಸ್ತಥಾ || ೧೯ ||
ತತ್ತತ್ಫಲಂ ಚ ತಾನ್ಸರ್ವಾನ್|ತ್ರಿವಿಧಾನ್ ಗಮಯತ್ಯಪಿ |
ಶ್ವಾಯಯತ್ಯಪಿ ವಾ ಚೇತಿ ವಿಷ್ಣುರ್ವಿಶ್ವಮ್ಇತೀರಿತಃ || ೨೦ ||
ಜೀವರಲ್ಲಿ ೩ ವಿಧ― ನಿತ್ಯಮುಕ್ತರು, ನಿತ್ಯಸಂಸಾರಿಗಳು ಹಾಗೂ ನಿತ್ಯನಾರಕಿಗಳು (ಮಾಧ್ವಸಿದ್ಧಾಂತ). ಹೀಗೆ ೩ ವಿಧವಾದ ಈ ಎಲ್ಲ ಜೀವರನ್ನು ಆಯಾಯ ತ್ರಿವಿಧ ಫಲದೆಡೆಗೆ ಹೋಗುವಂತೆ ಮಾಡುವವನಾದ (ಶ್ವಾಯಯತಿ) ವಿಷ್ಣುವು “ವಿಶ್ವಮ್” ಎನ್ನಲ್ಪಟ್ಟಿರುವನು.
ಜಾಗ್ರತ್ಪ್ರವರ್ತನಾಯೇತಿ ದಕ್ಷಿಣಾಕ್ಷಿಪ್ರವೇಶನಮ್ |
ಅನಿರುದ್ಧಸ್ವರೂಪೇಣ ವಿಷ್ಣುರ್ವಿಶ್ವಮ್ಇತೀರಿತಃ || ೨೧ ||
ಸಕಲ ಚೇತನರನ್ನು ಎಚ್ಚರದ ಅವಸ್ಥೆಯಲ್ಲಿಡಲು / ಜಾಗ್ರದವಸ್ಥೆಯ ಪ್ರವರ್ತನೆಗಾಗಿ ಅನಿರುದ್ಧಸ್ವರೂಪನಾಗಿ (ಉಪನಿಷತ್ತುಗಳಲ್ಲಿ ಹೇಳಿದಂತೆ ಪುರುಷರೂಪಿನಿಂದ ಅಥವಾ ವೈಶ್ವಾನರರೂಪಿನಿಂದ)ಅವರ ಬಲಗಣ್ಣನ್ನು ಪ್ರವೇಶಿಸುವುದರಿಂದಲೂ ವಿಷ್ಣುವು “ವಿಶ್ವಮ್” ಎನಿಸಿರುವನು.
ದಕ್ಷಿಣಾಕ್ಷಿ ವಿಶನ್ ವಾಯ|ಯತಿ ಜ್ಞಾಪಯತೀತಿ ವಾ |
ಬಾಹ್ಯಾರ್ಥಾನಾತ್ಮರೂಪೀ ತು ವಿಷ್ಣುರ್ವಿಶ್ವಮ್ಇತಿ ಸ್ಮೃತಃ || ೨೨ ||
ಆತ್ಮರೂಪಿಯಾಗಿ ವಿಷ್ಣುವು ಜೀವರ ಬಲಗಣ್ಣನ್ನು ಪ್ರವೇಶಿಸಿ ಹೊರಗಿನ ಇಂದ್ರಿಯಗ್ರಾಹ್ಯವಾದ ವಿಷಯಗಳ ಕುರಿತಾದ ಸ್ಮರಣೆಯನ್ನುಂಟುಮಾಡುವುದರಿಂದ (ತಿಳುವಳಿಕೆಯನ್ನುಂಟುಮಾಡುವುದರಿಂದ, ಜ್ಞಾಪಿಸುವುದರಿಂದ, ನೆನಪಿಸುವುದರಿಂದ), “ವಿಶ್ವಮ್” ಎನಿಸಿರುವನು.
ಸ್ವಪ್ನಪ್ರವರ್ತನಾಯಾಸೌ ವಿಶತ್ಯನ್ತರ್ಮನಸ್ಯಪಿ |
ಪ್ರದ್ಯುಮ್ನಸ್ಯ ಸ್ವರೂಪೇಣ ವಿಷ್ಣುರ್ವಿಶ್ವಂ ಪ್ರಚಕ್ಷತೇ || ೨೩ ||
ಸಕಲ ಜನರ ಸ್ವಪ್ನಾವಸ್ಥೆಯ ಪ್ರವರ್ತನೆಗಾಗಿ ಅವರ ಮನಸ್ಸಿನೊಳಗೆ ಪ್ರದ್ಯುಮ್ನರೂಪನಾಗಿ ಪ್ರವೇಶಿಸಿ ಅವರನ್ನು ಕನಸಿನಲೋಕದಲ್ಲಿ ವಿಹರಿಸುವಂತೆ ಮಾಡುವ ವಿಷ್ಣುವು “ವಿಶ್ವಮ್” ಎಂದು ಕರೆಯಲ್ಪಡುತ್ತಾನೆ.
ಹೃದಂ ವಿಶತಿ ನಿದ್ರಾಯಾಂ ಸಙ್ಕರ್ಷಣಸ್ವರೂಪವಾನ್ |
ಸುಷುಪ್ತೇಸ್ತು ನಿಯನ್ತುಂ ವೈ ವಿಷ್ಣುರ್ವಿಶ್ವಮ್ಇತಿ ಸ್ಮೃತಃ || ೨೪ ||
ಗಾಢನಿದ್ರಾಸ್ಥಿತಿಯಲ್ಲಿ (ಸುಷುಪ್ತಿಯ ಅವಸ್ಥೆಯಲ್ಲಿ) ಮಹಾವಿಷ್ಣುವು ಸಂಕರ್ಷಣಸ್ವರೂಪನಾಗಿ ನಮ್ಮ ಹೃದಯವನ್ನು ಪ್ರವೇಶಿಸಿ, ನಮ್ಮನ್ನು ನಿದ್ರಾಮಾಯೆಯಿಂದ ಬಿಗಿದಪ್ಪಿ, ಆ ನಿದ್ರಾವಿಶ್ರಾಂತಿಯೆಂಬ ಸುಖ ಅಥವಾ ಪುನಶ್ಚೇತನ ವನ್ನು ಉಂಟುಮಾಡುವವನಾಗಿಯೂ, ನಿದ್ರಾವಸ್ಥೆಯನ್ನು ನಿಯಂತ್ರಿಸುವವನಾಗಿಯೂ ಇರುವುದರಿಂದಲೂ “ವಿಶ್ವಮ್” ಎನಿಸುವನು.
ಮನಸ್ಯನ್ತರ್ವಿಶನ್ ಸ್ವಾಪ್ನಮ್|ಅರ್ಥಂ ಜ್ಞಾಪಯತೀತ್ಯಪಿ |
ವಿಶನ್ ಹೃದಂ ಕೇವಲಾನನ್|ದದಂ ವಿಷ್ಣುಶ್ಚ ವಿಶ್ವಮ್ಓಮ್ || ೨೫ ||
ಪ್ರಣವಸ್ವರೂಪಿಯಾದ ವಿಷ್ಣುವು ಜೀವರ ಮನಸ್ಸಿನೊಳಪ್ರವೇಶಿಸಿ ಕನಸಿನ ವಿಷಯವನ್ನು ಎಚ್ಚರದ ಸ್ಥಿತಿಯಲ್ಲೂ ನೆನಪಿಸುತ್ತಾನೆ. ಹಾಗೆಯೇ, ಆತನು ಜೀವರ ಹೃದಯವನ್ನು (ಮನಸ್ಸನ್ನು) ಪ್ರವೇಶಿಸಿ ಕೇವಲಾನಂದ (ಪರಮಾನಂದ, ಕೈವಲ್ಯಾನಂದ, ಮುಕ್ತಿಸುಖ) ವನ್ನು ಉಂಟುಮಾಡುತ್ತಾನೆ. ಹೀಗಾಗಿ, ಮಹಾವಿಷ್ಣುವು “ವಿಶ್ವಮ್” ಎನಿಸಿರುವನು.
ನಿದ್ರಾಯಾಂ ಚ ವಿಲೀನಂ ತು ಜ್ಞಾನಂ ಜೀವಸ್ಯ ವಾ ಪುನಃ |
ಶ್ವಮನೇನೇತಿ ವಿಷ್ಣುರ್ವೈ ವಿಶ್ವನಾಮ್ನಾ ಸಮೀರಿತಃ || ೨೬ ||
ಜೀವಿಯ ಎಚ್ಚರದ ಬಹಿಃಪ್ರಜ್ಞೆಯ ಜ್ಞಾನವನ್ನು ನಿದ್ರೆಯಲ್ಲಿ ವಿಲೀನಗೊಳಿಸುವಿಕೆಯು ಇವನಿಂದ ಎಂಬುದರಿಂದಾಗಿ (ಜೀವಸ್ಯ ಶ್ವಂ ಜ್ಞಾನಂ ನಿದ್ರಾಯಾಂ ವಿಲೀನಮ್ ಅನೇನ ಭವತಿ ಇತಿ) ವಿಷ್ಣುವು ವಿಶ್ವನಾಮಕನೆಂದು ಕರೆಯಲ್ಪಟ್ಟಿರುವನು.
ಜೀವಾನಾಂ ಹಿ ಸ್ವರೂಪಂ ತು ವಿಶತ್ಯೇಷೋ ಹರಿಃ ಸ್ವಯಮ್ |
ಬಿಮ್ಬತ್ವೇ ಚೇತಿ ವಿಷ್ಣುರ್ವೈ ವಿಶ್ವನಾಮಾ ಭವತ್ಯಪಿ || ೨೭ ||
ಈ ಶ್ರೀಹರಿಯು ಪ್ರತಿಬಿಂಬದಂತಹ ಜೀವರ ಸ್ವರೂಪವನ್ನು ಮೂಲಬಿಂಬವಾಗಿ ಪ್ರವೇಶಿಸುತ್ತಾನೆಂಬುದರಿಂದಾಗಿ ಕೂಡ ವಿಷ್ಣುವು ವಿಶ್ವನಾಮಕನಾಗುವನು.
ಶಂ ಸುಖಂ ಜ್ಞಾನಮಿತ್ಯೇವಂ ವಂ ಚಾಸ್ಯೇತಿ ವಿಲಕ್ಷಣಮ್ |
ವ್ಯಾಪ್ತತ್ವಾಚ್ಚೈವ ವಿಶ್ವಸ್ಮಿನ್ ವಿಷ್ಣುರ್ವಿಶ್ವಮಿತಿ ಸ್ಮೃತಃ || ೨೮ ||
ಶಮ್ ಎಂದರೆ ಸುಖ, ವಮ್ ಎಂದರೆ ಜ್ಞಾನ. ಸಮಗ್ರ ವಿಶ್ವದಲ್ಲಿ ಅನನ್ಯವಿಲಕ್ಷಣವಾಗಿ (ಅನ್ಯರಾರೂ ಈ ರೀತಿಯ ಲಕ್ಷಣದಿಂದ ಇಲ್ಲದಿರುವಂತೆ) ಸುಖಜ್ಞಾನಸ್ವರೂಪನಾಗಿ ವ್ಯಾಪಿಸಿರುವುದರಿಂದಾಗಿಯೂ ವಿಷ್ಣುವು ವಿಶ್ವನೆಂದು ಸ್ಮರಿಸಲ್ಪಟ್ಟಿರುವನು.
ವಿಶ್ವಸ್ಯ ಪ್ರಭವತ್ವಾಚ್ಚ ವಿಶ್ವಪಾಲನಕಾರಣಾತ್ |
ವಿಶ್ವಾಪ್ಯಯಸ್ಯ ಹೇತುತ್ವಾದ್ ವಿಷ್ಣುರಾಪ್ನೋತಿ ವಿಶ್ವತಾಮ್ || ೨೯ ||
ವಿಶ್ವದ ಸೃಷ್ಟಿಗೆ ಮೂಲನಾಗಿರುವಿಕೆ, ವಿಶ್ವದ ಸ್ಥಿತಿ (ಪಾಲನೆ) ಯ ಕಾರಣನಾಗಿರುವಿಕೆ ಹಾಗೂ ವಿಶ್ವಲಯದ ಕಾರಣನಾಗಿರುವಿಕೆ ― ಇವುಗಳಿಂದಾಗಿ ವಿಷ್ಣುವು ವಿಶ್ವತ್ವವನ್ನೂ, ವಿಶ್ವನಾಮವನ್ನೂ ಹೊಂದುತ್ತಾನೆ.
ಸರ್ವೇಶತ್ವಾತ್ ಸರ್ವಗತ್ವಾತ್ ಸರ್ವಸ್ಯ ಪ್ರಭವಾಪ್ಯಯಾತ್ |
ಸರ್ವಸ್ಯ ಸರ್ವದಾ ಜ್ಞಾನಾತ್ ಸರ್ವಂ ತಂ ವಿಶ್ವಮೀರ್ಯತೇ || ೩೦ ||
ಎಲ್ಲದರ ಒಡೆಯನೂ, ಎಲ್ಲೆಡೆ ಗಮನಶೀಲನೂ, ಎಲ್ಲದರ ಸೃಷ್ಟಿಲಯಕಾರಣನೂ, ಸದಾ ಸರ್ವಜ್ಞನೂ, ಎಲ್ಲವೂ ಆಗಿರುವ ಆ ವಿಷ್ಣುವನ್ನು ವಿಶ್ವಮ್ ಎನ್ನಲಾಗಿದೆ.
ವಿವಿಧಂ ಶ್ವಂ ಚರಂ ವೇತಿ ಲೀಲಾಸೃಷ್ಟಿರಿದಂ ಜಗತ್ |
ಯಸ್ಯ ತಸ್ಮಾನ್ಮಹಾವಿಷ್ಣುರ್|ವಿಶ್ವಮಿತ್ಯಭಿಧೀಯತೇ || ೩೧ ||
ಶ್ವಮ್ ಎಂದರೆ ಚರವಾದದ್ದು. ವಿವಿಧ ಚಲನಶೀಲಜೀವರನ್ನುಂಟುಮಾಡುವ ಈ ವಿಶ್ವಸೃಷ್ಟಿಲೀಲೆಯು ಯಾವನದೋ, ಅಂತಹ ಮಹಾವಿಷ್ಣುವು ಆ ಕಾರಣಕ್ಕಾಗಿ “ವಿಶ್ವಮ್” ಎಂಬ ಅಭಿಧಾನವು (ಹೆಸರು)ಳ್ಳವನಾಗುತ್ತಾನೆ.
ವಿಗತಶ್ವಂ ಗತಿವಿರಹಿತ-
-ಮಚರಂ ಜಗದಪ್ಯಸ್ಯೇತಿ ವಿಶ್ವಂ ಹಿ |
ನ ಶ್ವಯತಿ ನ ಕರ್ಮಣೇತಿ
ವರ್ಧತೇ ಜಗದಿತಿ ತು ವಿಷ್ಣುರ್ವಿಶ್ವಮ್ || ೩೨ ||
(ಆರ್ಯಾಜಾತಿಃ― ೧೨,೧೮,೧೨,೧೮ ಮಾತ್ರೆಗಳು ಅನುಕ್ರಮವಾಗಿ ೧,೨,೩,೪ನೇ ಪಾದಗಳಲ್ಲಿ)
ಚಲನಶಕ್ತಿಯಿರದಂತಹ, ಅಚರಯುತವಾದ ಜಗತ್ತೂ ಈತನದೇ ಎಂಬುದರಿಂದಲೂ ವಿಷ್ಣುವು ವಿಶ್ವನು (ವಿಗತಂ ವಿರಹಿತಂ ಶ್ವಂ ಚರಣಶಕ್ತಿಃ— ಅಚರಜಗತ್, ತದಪ್ಯಸ್ಯೇತಿ ವಿಷ್ಣುರ್ವಿಶ್ವಮ್). ಯಾವ ಜಗತ್ತು ಯಾವುದೇ ಕರ್ಮದಿಂದಲೂ ಬೆಳೆಯಲಾರದೋ ಅಂತಹ ಜಗತ್ತು ವಿಷ್ಣುವಿನದೇ ಆದುದರಿಂದ ಆತನು ವಿಶ್ವನು.
ವಿಶ್ವಂ ನಿಶ್ಚಲಮಿತ್ಯೇವಮ್|ಅಥಾಪಿ ಸ್ವತ ಇತ್ಯಪಿ |
ರೂಪೈಸ್ತು ವಿವಿಧೈರೇತದ್|ವಿಚಿತ್ರಂ ವಿವಿಧಂ ಸ್ಮೃತಮ್ || ೩೩ ||
ಶ್ವಯತೀತಿ ಚಲತ್ಯೇವ ವಿಶ್ವಂ ವ್ಯಕ್ತಂ ಹರೇರಿತಿ || ೩೪ ||
ವಿಶ್ವವು ಸ್ವಯಂ ನಿಶ್ಚಲವೆಂದೂ (ವಿರಹಿತಂ ಶ್ವಮ್ ಚಲನಮ್ ಸ್ವತಃ, ಕಿನ್ತು ಹರಿಣೈವ ಚಲತೀತಿ), ಶ್ರೀಹರಿಯ ಸಂಕರ್ಷಣಾದಿ ಶಕ್ತಿಗಳಿಂದಲೇ ಚಲಿಸುವುದೆಂದೂ ಹರಿಯು ವಿಶ್ವನು. ವಿವಿಧ ನಾಮರೂಪಾತ್ಮಕವಾದ ವ್ಯಕ್ತ ಜಗತ್ತಾಗಿ ಚಲಿಸುತ್ತಿರುವವನು ಅವ್ಯಕ್ತ ವಿಷ್ಣುವೇ ಎಂಬುದರಿಂದಾಗಿ ಮಹಾವಿಷ್ಣುವು “ವಿಶ್ವಮ್”.
ವೇತಿ ಗಚ್ಛತಿ ಜೀವಂ ತ್ವ|ನ್ತರ್ಯಾಮಿತ್ವೇನ ವಿಷ್ಣುರೋಮ್ |
ಗತ್ವಾವಗಮಯತ್ವಾಚ್ಚ ಶ್ವಾಯಿತತ್ವಾದಿತಿ ಪ್ರಭುಃ |
ವಿಷಯಜಾತಮಿತ್ಯೇವಂ ವಿಷ್ಣುರ್ವಿಶ್ವಮಿತೀರಿತಃ || ೩೫ ||
ಪ್ರಣವಸ್ವರೂಪನಾದ ವಿಷ್ಣುವು ಜೀವನನ್ನು ಅಂತರ್ಯಾಮಿಯಾಗಿ ಒಳಹೋಗುವುದರಿಂದ ವಿಶ್ವನು. ಹೀಗೆ ಒಳಹೋಗಿ, ವಿವಿಧ ಇಂದ್ರಿಯವಿಷಯಗಳ ಅವಗಮನ (ಅರ್ಥಮಾಡಿಕೊಳ್ಳುವ ಜ್ಞಾನಶಕ್ತಿ, sensory) ಹಾಗೂ ಚಲಿಸುವ ಶಕ್ತಿಗಳನ್ನುಂಟುಮಾಡುವುದರಿಂದ (motor) ವಿಷ್ಣುವು ವಿಶ್ವನು.
ವೇತಿ ವರ್ಧಯತೀತ್ಯೇವಂ ಜೀವಾನ್ವಿಷ್ಣುಸ್ತು ವಿಶ್ವಮೋಮ್ |
ಆದೌ ವಿಶತಿ ಗರ್ಭಂ ಜೀ|ವಮಾದಾಯೇತಿ ವಿಶ್ವಮೋಮ್ || ೩೬ ||
ವೇತಿ ಎಂದರೆ ವರ್ಧಯತಿ, ಬೆಳೆಸುತ್ತಾನೆ. ಸಕಲ ಜೀವರನ್ನು ಪೋಷಿಸಿ, ಸಲಹಿ, ಬೆಳೆಸುವವನು ವಿಷ್ಣುವಾದ್ದರಿಂದಲೂ ಆತನು ವಿಶ್ವನು. ಮೊದಲು ಗರ್ಭದಲ್ಲಿ ಪ್ರವೇಶಿಸಿ ಜೀವವನ್ನು ತುಂಬುವವನು ವಿಷ್ಣುವೇ ಆದ್ದರಿಂದಲೂ “ವಿಶ್ವಮ್” ಎನಿಸಿರುವನು ಪ್ರಣವಸ್ವರೂಪಿ, ಪ್ರಣವಪ್ರತಿಪಾದ್ಯ, ಪ್ರಣವವಾಚ್ಯನಾದ ವಿಷ್ಣುವು.
ಆದೌ ವಿಷ್ಟೋ ಹರಿರ್ಗರ್ಭಂ ಜನಯತ್ಯಪಿ ವೇತಿ ವಾ |
ವೀ ಗತೌ ಪ್ರಜನೇ ಕಾನ್ತೌ ಹ್ಯಸನೇ ಖಾದನೇ ತಥಾ || ೩೭ ||
ಜೀವಮಾದಾಯ ಚಾನ್ತೇ ದೇ|ಹಾದ್ವಿಷ್ಣುಸ್ತ್ವಪಗಚ್ಛತಿ |
ಶ್ವಯತ್ಯಪಿ ಚ ವೇತ್ಯತ್ತಿ ವಿಷ್ಣುರ್ವಿಶ್ವಂ ಪ್ರಚಕ್ಷತೇ || ೩೮ ||
“ವೀ ಗತೌ ಪ್ರಜನೇ ಕಾನ್ತೌ, ಅಸನೇ ಖಾದನೇ ಚ” ಎಂಬ ಧಾತುಪಾಠದಂತೆ, ವೀ ಧಾತುವಿಗೆ ಗತಿಶೀಲತೆ / ಗಮನ, ಪ್ರಜನನ / ಉತ್ಪತ್ತಿ, ಕಾಂತಿ / ಬೆಳಗುವಿಕೆ / ಆಕರ್ಷಕ ಕಾಂತಶಕ್ತಿ, ಅಸನ / ಪ್ರಕ್ಷೇಪ / ನಿಕ್ಷೇಪ, ಖಾದನ / ತಿನ್ನುವಿಕೆ ಎಂಬ ಅರ್ಥಗಳಿವೆ. ಜನನಪೂರ್ವದಲ್ಲಿ ಗರ್ಭವನ್ನು ವಿಷ್ಣುವು ಪ್ರವೇಶಿಸಿದವನಾಗಿ (ವಿಶ ಪ್ರವೇಶನೇ), ಪ್ರಾಣಾದಿಗಳನ್ನಾಕರ್ಷಿಸಿ (ವೀ ಕಾನ್ತೌ) ಜೀವವುಂಟುಮಾಡಿ, ಗರ್ಭದಲ್ಲಿ ಜೀವವನ್ನು ನಿಕ್ಷೇಪಿಸಿ (ವೀ ಅಸನೇ) ಜೀವದ ಜನನಕ್ಕೆ ಕಾರಣವಾಗುತ್ತಾನೆ (ವೀ ಪ್ರಜನೇ). ಜೀವಿತಪೂರ್ತಿ ಜೀವನೊಳಗಿದ್ದು ತಾನೇ ನಿಜವಾಗಿ ಸರ್ವವನ್ನೂ ಉಣ್ಣುತ್ತಾನೆ (ಅತ್ತಿ― ಅದ ಭಕ್ಷಣೇ ; ವೇತಿ―ವೀ ಖಾದನೇ―“ಭೋಕ್ತಾऽಹಂ”). ಜೀವಿಯ ಆಯುಷ್ಯಪೂರ್ತಿಯಾದಾಗ, ಕೊನೆಗೆ ವಿಷ್ಣುವು ಜೀವವನ್ನು ತೆಗೆದುಕೊಂಡು ದೇಹದಿಂದ ಹೊರಹೋಗುತ್ತಾನೆ (ವೀ ಗತೌ). ಇವೆಲ್ಲದರಿಂದಲೂ ಮಹಾವಿಷ್ಣುವು (ಪರಮೇಶ್ವರನು / ಪರಾಶಕ್ತಿಯು) “ವಿಶ್ವಮ್” ಎಂಬ ಹೆಸರಿನಿಂದ ಕರೆಯಲ್ಪಟ್ಟು ವಿಶ್ವವ್ಯಾಪಿಯೂ, ವಿಶ್ವರೂಪಿಯೂ ಆಗಿರುವನು.
ಕಮನೀಯೋ ಹರಿರ್ವೇತಿ ಭವತೀತಿ ತಥಾ ಪುನಃ |
ಜ್ಞಾನಾನನ್ದಗುಣಾಭ್ಯಾಂ ವೈ ಶ್ವಾಭ್ಯಾಂ ವಿಶ್ವಮಿತೀರಿತಃ || ೩೯ ||
(ತಥಾ)ಹಾಗೆಯೇ, (ಹರಿಃ)ಶ್ರೀಹರಿಯು ತನ್ನದಾದ, (ಶ್ವಾಭ್ಯಾಂ, ಜ್ಞಾನಾನನ್ದಗುಣಾಭ್ಯಾಂ ವೈ)ಜ್ಞಾನ-ಆನಂದಗಳಿಂದಲೇ, (ವೇತಿ, ಕಮನೀಯೋ ಭವತಿ ಇತಿ)ಕಮನೀಯನಾಗಿ (ಸುಂದರರೂಪನಾಗಿ) ತೋರುತ್ತಾನೆಂಬುದರಿಂದಲೂ, (ವಿಶ್ವಮ್ ಇತಿ ಈರಿತಃ) "ವಿಶ್ವಮ್ " ಎನಿಸಿರುವನು / ಎಂದು ಕರೆಯಲ್ಪಟ್ಟಿರುವನು.
ವೀ ಕಾನ್ತೌ ಕಾನ್ತಿರಿಚ್ಛಾಯಾಮಿಚ್ಛಾವಿರಹಿತೋऽಪಿ ಸಃ |
ಸ್ವೇಚ್ಛಯಾ ಶ್ವಯತ್ಯತ್ರಾವತೀರ್ಯ ಚರತಿ ಪ್ರಭುಃ |
ವಿನೇಚ್ಛಯಾ ಶ್ವಯತ್ಯತ್ರ ಲೋಕಾರ್ಥಮಿತಿ ವಿಶ್ವತಾ || ೪೦ ||
(ವೀ ಕಾನ್ತೌ)"ವೀ ಕಾನ್ತೌ" ಎಂಬ ಧಾತುವಿನಂತೆಯೂ, (ಕಾನ್ತಿಃ ಇಚ್ಛಾಯಾಮ್)ಕಾಂತಿಯೆಂದರೆ ಇಚ್ಛೆಯೆಂಬರ್ಥದಿಂದಲೂ, (ಇಚ್ಛಾವಿರಹಿತಃ, ಇಚ್ಛಯಾ ವಿನಾ ಅಪಿ)"ವಿ" ಎಂದರೆ ಇಚ್ಛಾ ವಿರಹಿತನಾಗಿಯೂ, ಯಾವುದೇ ಬಯಕೆಗಳಿಲ್ಲದೆಯೂ, (ಲೋಕಾರ್ಥಮ್)ಕೇವಲ ಲೋಕದ ಹಿತದೃಷ್ಟಿಯಿಂದಲೇ, (ಸಃ ಪ್ರಭುಃ)ಆ ಲೋಕದೊಡೆಯನಾದ ಶ್ರೀಹರಿಯು, (ಸ್ವೇಚ್ಛಯಾ)ಸ್ವೇಚ್ಛೆಯಿಂದಲೇ / ಸ್ವತಂತ್ರನಾಗಿಯೇ, (ಅತ್ರ ಅವತೀರ್ಯ)ಈ ಲೋಕದಲ್ಲವತರಿಸಿ, (ಅತ್ರ ಶ್ವಯತಿ ಚರತಿ ಇತಿ)ಇಲ್ಲಿ ಲೀಲಾಮಯನಾಗಿ ಸಂಚರಿಸುತ್ತಾನೆಂಬುದರಿಂದಾಗಿಯೂ, (ವಿಶ್ವತಾ)ಆತನಿಗೆ "ವಿಶ್ವಮ್" ಎಂಬ ಹೆಸರು ಹಾಗೂ ವಿಶ್ವರೂಪವು / ವಿಶ್ವತ್ವವು / ವಿಶ್ವತೆಯು ಬಂದಿರುವುದು.
(ಅನುಷ್ಟುಪ್)
ವಂ ಬಲಂ ಚ ತಥೇರಿಚ್ಛಾ ಶ್ವಂ ಕ್ರಿಯಾ ವಿಶ್ವಮೀರ್ಯತೇ || ೪೧ ||
(ಉಪಜಾತಿವೃತ್ತಮ್— ಇಂದ್ರವಜ್ರಾ+ಉಪೇಂದ್ರವಜ್ರಾ)
ಸ್ವಾಭಾವಿಕೀ ಜ್ಞಾನಬಲಕ್ರಿಯಾ ಚ ಶ್ರುತ್ಯುಕ್ತವಾಕ್ಯಂ ಪ್ರವದನ್ತಿ ತಸ್ಮಾತ್ |
ವೇತ್ಯಸ್ಯತಿ ಸ್ಥಾಪಯತೀತಿ ಶಂ ವ -|-ಮಸತ್ಸು ಸಜ್ಜೀವಗತೇಷು ವಿಶ್ವಮ್ || ೪೨ ||
ವಂ ಎಂದರೆ ಬಲ. ಹಾಗೆಯೇ, ಇ ಎಂದರೆ ಇಚ್ಛಾ. ಶ್ವಂ ಎಂದರೆ ಕ್ರಿಯಾ. ಹೀಗೆ, ಸರ್ವಬಲ-ಸರ್ವೇಚ್ಛಾ-ಸರ್ವಕ್ರಿಯಾಮೂಲನಾದ ಭಗವಂತನು ವಿಶ್ವನು. ಸ್ವಾಭಾವಿಕವಾಗಿ ಭಗವಂತನು ಜ್ಞಾನ-ಬಲ-ಕ್ರಿಯಾಪರಿಪೂರ್ಣನೆಂಬ ವೇದೋಕ್ತವಾಕ್ಯವಿರುವುದರಿಂದಾಗಿಯೂ ವಿಶ್ವನೆಂದು ಭಗವಂತನನ್ನು ಹೇಳುವರು. ಸುಖವನ್ನೂ / ಆನಂದವನ್ನೂ, ಬಲವನ್ನೂ ಜೀವರಲ್ಲಿ ನೆಲೆಗೊಳಿಸುವುದರಿಂದಲೂ, ನಿರ್ಜೀವರಲ್ಲಿ ಇವೆರಡನ್ನೂ ಇಲ್ಲದಂತೆ ಮಾಡಿರುವುದರಿಂದಲೂ ಪರಮಾತ್ಮನಾದ ಮಹಾವಿಷ್ಣುವನ್ನು ವಿಶ್ವಮ್ ಎನ್ನಲಾಗಿದೆ (ಸಜ್ಜೀವೇಷು ವೇತಿ ಅಸ್ಯತಿ ಸ್ಥಾಪಯತಿ ಶಂ ವಮ್, ಅಸತ್ಸು ವೇತಿ ನಿರಸ್ಯತಿ ಶಂ ವಮ್ ಇತಿ ವಿಶ್ವಮ್).
ವೇತಿ ಖಾದತಿ ಸರ್ವಂ ತು ಪ್ರಲಯೇ ವಿಷ್ಣುರೇವ ಹಿ |
ಶ್ವಾಯಯತ್ಯಪಿ ಸರ್ಗೇ ವಿ|ಶ್ವಂ ಬಹಿರ್ಗಮಯತ್ಯಥ || ೪೩ ||
ಪ್ರಲಯಕಾಲದಲ್ಲಿ ಸಕಲಲೋಕಗಳನ್ನೂ ನುಂಗುತ್ತಾನೆ ಹಾಗೂ ಸೃಷ್ಟಿಕಾಲದಲ್ಲಿ ಮತ್ತೆ ಸಮಗ್ರವಿಶ್ವವನ್ನೂ ಹೊರತರುತ್ತಾನಾದ್ದರಿಂದ ವಿಷ್ಣುವು ವಿಶ್ವನು. (ಗ್ರಸಿಷ್ಣುಃ ಪ್ರಭವಿಷ್ಣುಃ ಚ— ಗ್ರಾಸವಾಗಿ / ಆಹಾರವಾಗಿ ಉಣ್ಣುವವನು ಹಾಗೂ ಪುನಃ ಪ್ರಭವಕ್ಕೆ / ಸೃಜನೆಗೆ ಕಾರಣನು)
ವಿಷ್ಣುಃ ಶ್ವಾಯಯತೀತ್ಯೇವಂ ವಿಶ್ವಂ ಪಾಲಯತೀತಿ ಚ |
ಪಾಲನೇನಾಭಿವರ್ಧಯ|ತೀತ್ಥಂ ವಿಶ್ವಾಖ್ಯಮಿತ್ಯಪಿ || ೪೪ ||
ವಿಷ್ಣುವು ವಿಶ್ವವೆಲ್ಲವನ್ನೂ ಪಾಲಿಸುತ್ತಾ (ಸಲಹುತ್ತಾ, ಪೋಷಿಸುತ್ತಾ) ತನ್ಮೂಲಕ ಬೆಳೆಸುವುದರಿಂದಾಗಿ ವಿಶ್ವಮ್ ಎಂಬ ಹೆಸರುಳ್ಳವನಾದನು.
ಇಚ್ಛಯಾ ತು ವಿನಾ ಶ್ವಾಯ|ಯತಿ ಚಾರಯತೀತಿ ವಾ |
ಜಗತ್ಸರ್ವಮಿದಂ ವಿಷ್ಣುರ್ವಿಶ್ವಮಿತ್ಯಭಿಧೀಯತೇ || ೪೫ ||
ತನಗಾಗಿ ಯಾವುದೇ ಕಾಮನೆಗಳಿಲ್ಲದೆ ಇಡೀ ಜಗತ್ತನ್ನು ಸದಾ ಕ್ರಿಯಾಶೀಲವನ್ನಾಗಿ, ಸಚೇತನವನ್ನಾಗಿ ಮಾಡುವುದರಿಂದಾಗಿಯೂ ವಿಷ್ಣುವು ವಿಶ್ವನು.
ಇಚ್ಛಯಾ ತು ವಿನಾ ರಾಮ|ರೂಪೇ ವಿಷ್ಣುರ್ವನಾದ್ವನಮ್ |
ಶ್ವಯತ್ಯಪಿ ಚರತ್ಯೇವಂ ವಿಶ್ವನಾಮ್ನಾ ಸಮೀರಿತಃ || ೪೬ ||
ಸ್ವಂತಕ್ಕಾಗಿ ಅಲ್ಲದೆ, ಲೋಕದಿಗ್ದರ್ಶನಕ್ಕಾಗಿಯೇ ರಾಮಾವತಾರದಲ್ಲಿ ಕಾಡುಮೇಡುಗಳನ್ನಲೆದಾಡಿದ್ದರಿಂದಲೂ ವಿಷ್ಣುವು ವಿಶ್ವನು.
ಇಚ್ಛಾವಿರಹಿತತ್ವಾದ್ವೈ ಕೃಷ್ಣೋ ವೃನ್ದಾವನೇ ಸ್ವಯಮ್ |
ಗೋಪಗೋಭಿಶ್ಚರತ್ಯೇವಂ ಸಹ ವಿಶ್ವಮಿತೀರಿತಃ || ೪೭ ||
ಕೃಷ್ಣನಾಗಿ ಬೃಂದಾವನದಲ್ಲಿ ಗೋಪಾಲಕರು ಹಾಗೂ ಗೋವುಗಳೊಂದಿಗೆ ಅವರ ಸಂತೋಷಕ್ಕಾಗಿ ಹಾಗೂ ಲೋಕಕಾರುಣ್ಯದಿಂದಾಗಿ ಸಂಚರಿಸಿದ್ದರಿಂದಲೂ ವಿಷ್ಣುವು ವಿಶ್ವನು. (ವಿನಾ ಇಚ್ಛಯಾ ಶ್ವಯತಿ ಚರತಿ ಇತಿ)
ವಿಷು ಪಕ್ಷಿಷು ಸಞ್ಚಾರಃ ಶ್ವಯನಂ ವಿಶ್ವನಾಮದಮ್ |
ವಿಷು ವೇತ್ತೃಷು ಸಞ್ಚಾರಾತ್ ಹೃತ್ಸು ವಿಶ್ವಂ ಹರಿಃ ಸ್ವಯಮ್ || ೪೮ ||
ವಿ ಎಂದರೆ ಪಕ್ಷಿ. ಮಹಾವಿಷ್ಣುವು ಪಕ್ಷಿವಾಹನನೂ, ಪಕ್ಷಿಗಳ ಅಂತರ್ಯಾಮಿಯೂ ಆಗಿ ಸಂಚರಿಸುವುದರಿಂದಾಗಿ ವಿಶ್ವನಾಮವು ಆತನಿಗೆ ನೀಡಲ್ಪಟ್ಟಿತು. ಹಾಗೆಯೇ, ವಿ ಎಂದರೆ ಬ್ರಹ್ಮಜ್ಞಾನಿ, ಬ್ರಹ್ಮವೇತ್ತಾ / ಬ್ರಹ್ಮವೇತೃ. ಇಂತಹ ಬ್ರಹ್ಮಜ್ಞರಲ್ಲೂ, ಅವರ ಹೃದಯದಲ್ಲೂ ವಿಶೇಷವಾಗಿ ಸ್ವತಃ ಸಂಚರಿಸುವುದರಿಂದಲೂ ಶ್ರೀಹರಿಯು ವಿಶ್ವಮ್ ಎನಿಸಿರುವನು.
ಅರ್ಜುನಾದಿಷು ಪುಣ್ಯೇಷು ವಿಶನ್ ವಾತಿ ಚರತ್ಯಪಿ |
ವಿಶನ್ ವಾಯಯತೀತ್ಥಂ ಚ ವಿಶ್ವಂ ಚಾಲಯತಿ ಪ್ರಭುಃ || ೪೯ ||
ಅರ್ಜುನನಂತಹ ಪುಣ್ಯಾತ್ಮರನ್ನು ಪ್ರವೇಶಿಸಿ ಸಂಚರಿಸುವುದರಿಂದಲೂ, ಅಂಥವರನ್ನೂ ಪ್ರೇರಿಸುವುದರಿಂದಲೂ ಲೋಕಪ್ರಭುವಾದ ವಿಷ್ಣುವು ವಿಶ್ವನೆನಿಸಿರುವನು.
ವಿಶನ್ ವಾತಿ ಹರಿರ್ದುಷ್ಟಾನ್ ದೋಷಾನ್ ವಾ ಹಿ ಸಮನ್ತತಃ |
ಮರ್ದಯತ್ಯಖಿಲಾಂಸ್ತಾನ್ ವೈ ವಿಷ್ಣುರ್ವಿಶ್ವಂ ಪ್ರಚಕ್ಷತೇ || ೫೦ ||
ಶ್ರೀಹರಿಯು ದುಷ್ಟರನ್ನು ಎಲ್ಲೆಡೆಯಿಂದಲೂ ಪ್ರವೇಶಿಸಿ ಅವರಲ್ಲಿನ ದೋಷಗಳೆಲ್ಲವನ್ನೂ ಅಥವಾ ಅನಿವಾರ್ಯವಾದರೆ ಅವರೆಲ್ಲರನ್ನೂ ಮರ್ದಿಸುತ್ತಾನಾದ್ದರಿಂದ (ನಾಶಮಾಡುತ್ತಾನಾದ್ದರಿಂದ) ಅಂತಹ ವಿಷ್ಣುವು ವಿಶ್ವಮ್ ಎನಿಸಿರುವನು.
ವಿಶತೀತಿ ಹಿ ವಾಯುಂ ಸ ವಿಷ್ಣುರ್ವಿಶ್ವಮಿತೀರಿತಃ |
ಸಾತ್ತ್ವಿಕಾನಾಂ ಚ ವಂ ಜ್ಞಾನಂ ವಿಶತಿ ಜ್ಞಾನಗೋಚರಃ || ೫೧ ||
ವಾಯುವನ್ನು ಪ್ರವೇಶಿಸುವುದರಿಂದಲೂ ವಿಷ್ಣುವು ವಿಶ್ವನು (ವಿಶತಿ ವಾಯುಮ್ ಇತಿ ವಿಶ್ವಮ್). ಸಾತ್ತ್ವಿಕಗುಣಯುತರ ಜ್ಞಾನವನ್ನು ಪ್ರವೇಶಿಸುವುದರಿಂದಲೂ, ಅವರ ಜ್ಞಾನವಿಷಯನಾಗಿರುವುದರಿಂದಲೂ ವಿಷ್ಣುವು ವಿಶ್ವನು (ವಿಶತಿ ವಂ ಜ್ಞಾನಮ್ ಸಾತ್ತ್ವಿಕಾನಾಮ್ ಇತಿ ವಿಶ್ವಮ್).
ಬಲಿನಾಂ ವಂ ಬಲಂ ವಿಷ್ಣುರ್ವಿಶ್ವಂ ವೈ ವಿಶತೀತ್ಯಥ |
ವಿಂ ಜ್ಞಾನಂ ಚ ಶ್ಯತೀತ್ಯೇವಂ ತನೂಕರೋತಿ ಕೇಷುಚಿತ್ || ೫೨ ||
ಬಲಶಾಲಿಗಳ ಬಲದೊಳಗೂ ವಿಷ್ಣುವೇ ಪ್ರವೇಶಿಸಿ ಇರುವುದರಿಂದ ವಿಶ್ವನು (ವಿಶತಿ ವಂ ಬಲಂ ಬಲಿನಾಮ್ ಇತಿ ವಿಶ್ವಮ್). ತನ್ನ ಇಚ್ಛಾನುಸಾರ ಕೆಲವರಲ್ಲಿ ಜ್ಞಾನವನ್ನು ನಾಶಮಾಡುವವನಾದ ವಿಷ್ಣುವು ವಿಶ್ವನು (ವಿಂ ಜ್ಞಾನಂ ಶ್ಯತಿ ಕೇಷುಚಿತ್ ಇತಿ ವಿಶ್ವಮ್).
ಕೇಷುಚಿತ್ ಜ್ಞಾನವೃದ್ಧಿಂ ಚ ವಿಶ್ವಂ ಕರೋತಿ ವೈ ಹರಿಃ |
ಜ್ಞಾನಿನಾಂ ತು ವಿನಾಂ ಶಂ ಚ ಸುಖಂ ವರ್ಧಯತೀತ್ಯಪಿ || ೫೩ ||
ತನ್ನಿಚ್ಛೆಯಂತೆ ಕೆಲವರಲ್ಲಿ ಜ್ಞಾನವನ್ನು ಹೆಚ್ಚಿಸುವನಾದ್ದರಿಂದ ಶ್ರೀಹರಿಯು ವಿಶ್ವನು (ವಿಂ ಜ್ಞಾನಂ ಶ್ಯತಿ ವರ್ಧಯತಿ ಕೇಷುಚಿತ್ ಇತಿ ವಿಶ್ವಮ್). ಜ್ಞಾನಿಗಳ ಸುಖವನ್ನು ಹೆಚ್ಚಿಸುವವನಾದ್ದರಿಂದಲೂ ವಿಷ್ಣುವು ವಿಶ್ವನು (ವಿನಾಂ ಜ್ಞಾನಿನಾಂ ಶಂ ಸುಖಂ ವರ್ಧಯತಿ ಇತಿ ವಿಶ್ವಮ್).
ಸ ವಿಶಾಂ ವಧಕರ್ತೃತ್ವಾದ್ವರ್ಧನಾದ್ವಿಶ್ವಮೀರಿತಃ |
ಶ್ವಾಯಯತ್ಯಪಿ ಪುಣ್ಯಾಘೌ ವಿಶಿಷ್ಟೈಸ್ತತ್ತ್ವಮಾನಿಭಿಃ || ೫೪ ||
ಪ್ರಜೆಗಳ ಸಂಹಾರ ಹಾಗೂ ವರ್ಧನೆಗಳೆರಡನ್ನೂ ಮಾಡುವುದರಿಂದ ಆ ಶ್ರೀಮನ್ನಾರಾಯಣನು ವಿಶ್ವನು (ವಿಶಾಂ ವಧಕರ್ತೃತ್ವಾತ್ ವರ್ಧನಾತ್ ವಾ ವಿಶ್ವಮ್). ಪುಣ್ಯಪಾಪಗಳನ್ನು ಆಯಾ ವಿಶಿಷ್ಟವಾದ ತತ್ತ್ವಗಳಿಂದ ಲೋಕಗಳಲ್ಲಿ ಸಂಚರಿಸುವಂತೆ ಮಾಡುವುದರಿಂದಾಗಿ ವಿಷ್ಣುವು ವಿಶ್ವನು.
ಗಮಯತ್ಯಪಿ ಪುಣ್ಯೈಸ್ತು ವಿಶಿಷ್ಟಾನ್ ಪುಣ್ಯವಿಷ್ಟಪಮ್ |
ಗಮಯತ್ಯಥ ಪುಣ್ಯೈಸ್ತು ವಿಹೀನಾನ್ ಪಾಪವಿಷ್ಟಪಮ್ || ೫೫ ||
ಪುಣ್ಯವಿಶಿಷ್ಟತೆಯಿಂದ ಕೂಡಿದವರನ್ನು ಪುಣ್ಯಲೋಕಕ್ಕೂ, ಪುಣ್ಯವಿಹೀನರನ್ನು ಪಾಪಲೋಕಕ್ಕೂ ಕಳುಹಿಸುವವನು ವಿಶ್ವನಾಮಕ ವಿಷ್ಣುವು (ಪುಣ್ಯವಿಶಿಷ್ಟಾನ್ ಪುಣ್ಯಲೋಕಂ ಶ್ವಾಯಯತಿ ಗಮಯತೀತಿ, ಪುಣ್ಯವಿಹೀನಾನ್ ಪಾಪಲೋಕಂ ಶ್ವಾಯಯತಿ ಇತಿ ಚ ವಿಶ್ವಮ್ ).
ಪ್ರಕೃತಿಂ ವಿಕೃತಿಂ ವಿಷ್ಣುರ್ಗಮಯತ್ಯಥ ವಿಶ್ವತಾ |
ವಿಧಿಂ ವರ್ಧಯತೀತ್ಯೇಷಃ ಸಮಸ್ತಚೇತನೋಪರಿ || ೫೬ ||
ವಿಷ್ಣುವು ಮೂಲಪ್ರಕೃತಿಯನ್ನು ಪ್ರಪಂಚವಾಗಿ ವಿಕೃತಿಗೊಳಿಸುವುದರಿಂದಲೂ ವಿಶ್ವನು. ಸಮಸ್ತ ಜೀವರಿಂದಲೂ ಮೇಲ್ಮಟ್ಟದವನಾಗಿ ಚತುರ್ಮುಖಬ್ರಹ್ಮನನ್ನು ಬೆಳೆಸುವುದರಿಂದಲೂ ವಿಷ್ಣುವು ವಿಶ್ವನು (ಪ್ರಕೃತಿಂ ವಿಕೃತಿಂ ಶ್ವಾಯಯತಿ ಗಮಯತಿ ವಾ ಇತಿ ವಿಶ್ವಮ್; ವಿಧಿಂ ಶ್ವಾಯಯತಿ ವರ್ಧಯತಿ ವಾ ಸರ್ವಚೇತನೇಭ್ಯೋ ಅಧಿಕಮ್ ಇತಿ ವಿಶ್ವಮ್).
ವೇತಿ(ವಿ-ಏತಿ) ಮತ್ಸ್ಯಾದಿರೂಪೇಣಾತ್ಮಾನಂ ಜನಯತೀತ್ಯಪಿ |
ತೇನ ದುಷ್ಟಾನ್ ಶ್ಯತೀತ್ಯೇವಂ ವರ್ಧಯತ್ಯಪಿ ಸಜ್ಜನಾನ್ || ೫೭ ||
ಮತ್ಸ್ಯಾದಿ ವಿವಿಧ ಅವತಾರರೂಪಗಳಿಂದ ಶ್ರೀಹರಿಯು ತನ್ನನ್ನು ತಾನೇ ಹುಟ್ಟಿಸಿಕೊಂಡು, ಆ ಮೂಲಕ ದುಷ್ಟಶಿಕ್ಷಣ-ಶಿಷ್ಟರಕ್ಷಣವನ್ನು ಮಾಡಿ ಲೋಕದಲ್ಲಿ ಧರ್ಮವನ್ನು ಹೆಚ್ಚಿಸುವುದರಿಂದ ವಿಶ್ವನೆನಿಸುವನು.
ವಿಶಿಷ್ಟಂ ತು ವಿಶಂ ಮೋಕ್ಷಂ ಸುಖಂ ವಾಯಯತೀತ್ಯಪಿ |
ಗಮಯತ್ಯಥ ವಿಷ್ಣುರ್ವೈ ವಿಶ್ವನಾಮ್ನಾ ಸಮೀರಿತಃ || ೫೮ ||
ವಿಷ್ಣುವು ವಿಶಿಷ್ಟವಾದ ಸುಖವೆನಿಸಿದ ಮೋಕ್ಷಕ್ಕೆ ಕರೆದೊಯ್ಯುವುದರಿಂದ ವಿಶ್ವನು (ವಿ-ಶಂ ವಿಶಿಷ್ಟಂ ಸುಖಂ ವಾಯಯತಿ ಗಮಯತಿ ವಾ ಇತಿ ವಿಶ್ವಮ್).
ವಿಕೃತಾನಾಂ ತು ಶಂ ವೇತಿ ನಾಶಯತ್ಯತ್ತಿ ವೈ ಹರಿಃ |
ವಿಲಕ್ಷಣಂ ಸುಖಂ ಹ್ಯತ್ತಿ ಭುನಕ್ತಿ ವಿಶ್ವಮೀರಿತಃ || ೫೯ ||
ಶ್ರೀಹರಿಯು ಪ್ರಕೃತಿಗೆ ವಿರುದ್ಧವಾಗಿ ವರ್ತಿಸುವ ವಿಕೃತರ ಸುಖವನ್ನು ನಾಶಮಾಡುತ್ತಾನಾದ್ದರಿಂದಲೂ, ಲೋಕವಿಲಕ್ಷಣವೂ ವಿಶಿಷ್ಟವೂ ಯಾರೂ ಅನುಭವಿಸದಂಥದ್ದೂ ಆದ ಪರಮಸುಖವನ್ನುಣ್ಣುತ್ತಾನಾದ್ದರಿಂದಲೂ ವಿಶ್ವನೆನಿಸಿರುವನು.
ವಿಶೋऽನ್ತೇ ವೇತಿ ಭುಂಕ್ತೇ ಸಂ|ಹರತ್ಯೇಷೋ ರಮಾಧವಃ |
ವಿಜ್ಞಾನೇನ ಶ್ವಯನ್ತ್ಯೇನದ್ಗಚ್ಛನ್ತೀತಿ ಚ ವಿಶ್ವತಾ || ೬೦ ||
ಸೃಷ್ಟಿಯ ಕೊನೆಯಲ್ಲಿ ಪ್ರಜೆಗಳನ್ನು ಸಂಹರಿಸುತ್ತಾನಾದ್ದರಿಂದಲೂ, ವಿಶೇಷವಾದ ಕೇವಲಜ್ಞಾನದಿಂದ ಮಾತ್ರ ಕೈವಲ್ಯಪದವಾದ ಈತನ ಪರಮಪದವಾದ ವೈಕುಂಠವನ್ನು ಹೊಂದುವುದರಿಂದಲೂ ("ಜ್ಞಾನಾದೇವ ಹಿ ಕೈವಲ್ಯಮ್", "ಪ್ರಜ್ಞಾನಂ ಬ್ರಹ್ಮ"— ಶ್ರುತಿ), ರಮಾವಲ್ಲಭನಾದ ವಿಷ್ಣುವು ವಿಶ್ವನೆನಿಸಿರುವನು.
ವಿಜ್ಞಾನಂ ಶ್ವಾಯಯತ್ಯೇವ ಗಮಯತ್ಯಪಿ ವೈ ಹರಿಃ |
ವರ್ಧಯತ್ಯೇವಮಾಖ್ಯಾತೋ ವಿಷ್ಣುರ್ವಿಶ್ವಮಿತೀರಿತಃ || ೬೧ ||
ವಿಜ್ಞಾನವನ್ನು / ವಿಶೇಷವಾದ ಜ್ಞಾನವನ್ನು ಜಗದಗಲ ಸಂಚರಿಸಿ ಪಸರಿಸುವಂತೆ ಮಾಡುವ ಶ್ರೀಹರಿಯು ವಿಶ್ವನು. ವಿಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಮೂಲಪ್ರೇರಕನಾದ ವಿಷ್ಣುವು ವಿಶ್ವನೆನಿಸಿದ್ದಾನೆ.
ವೇತಿ ಶ್ವಾಯಯತೀತ್ಯೇವಂ ಜನಯತ್ಯಭಿವರ್ಧಕಃ |
ಲೋಕಾನ್ ನಾರಾಯಣಃ ಸರ್ವಾನಿಮಾನ್ ವಿಶ್ವಂ ಪ್ರಕೀರ್ತಿತಃ || ೬೨ ||
ಈ ಸೃಷ್ಟಿಯ ಸಮಸ್ತವನ್ನೂ ಆ ಶ್ರೀಮನ್ನಾರಾಯಣನೇ ಉಂಟುಮಾಡಿ, ಬೆಳೆಸುವುದರಿಂದ ವಿಶ್ವನೆಂದು ಕೀರ್ತಿತನಾಗಿರುವನು.
ವಿಲಕ್ಷಣಮನನ್ತಂ ಶಂ ಸುಖಂ ಗಚ್ಛತಿ ವಾತಿ ವಾ |
ವಿಶ್ವಯತ್ಯಪಿ ಮತ್ಸ್ಯತ್ವೇ ವಿವರ್ಧತೇऽಥ ವಿಶ್ವತಾ || ೬೩ ||
ಲೋಕಸಾಮಾನ್ಯಲಕ್ಷಣಕ್ಕಿಂತ ವಿಭಿನ್ನವಾಗಿ ವಿಲಕ್ಷಣವೆನಿಸಿದ ಮೋಕ್ಷವೆಂಬ ಪರಮಸುಖವನ್ನು ಸದಾ ಹೊಂದಿರುವವನೂ, ಮೋಕ್ಷದ ಮೂಲಸ್ಥಾನವೂ ಆದ ವಿಷ್ಣುವು ವಿಶ್ವನು. ಮತ್ಸ್ಯಾವತಾರದಲ್ಲಿ ಬೃಹದಾಕಾರವನ್ನು ತಾಳಿ ಬೆಳೆದದ್ದರಿಂದ ವಿಷ್ಣುವಿಗೆ ವಿಶ್ವತ್ವವು.
ವಿಶ್ವಯತ್ಯಥ ವಾರಾಹೇ ವಿಶ್ವಂ ವಿಷ್ಣುರ್ವಿವರ್ಧತೇ |
ವಿಭಿದ್ಯ ಸ್ತಮ್ಭಮೇಷೋ ನಿರ್ಗಚ್ಛತಿ ಶ್ವಯತಿ ಪ್ರಭುಃ || ೬೪ ||
ಬೃಹತ್ತಾದ ವರಾಹಾವತಾರರೂಪವನ್ನು ತಾಳಿದ್ದರಿಂದಲೂ ವಿಷ್ಣುವು ವಿಶ್ವನು (ವಿಶೇಷೇಣ ಶ್ವಯತಿ ವರ್ಧತೇ ವರಾಹರೂಪೇಣ ಇತಿ ವಿಶ್ವಮ್). ನರಸಿಂಹಾವತಾರದಲ್ಲಿ ಕಂಬವನ್ನೊಡೆದು ಬಂದಿದ್ದರಿಂದಲೂ ವಿಷ್ಣುವು ವಿಶ್ವನು (ವಿಭಿದ್ಯ ಸ್ತಂಭಂ ಶ್ವಯತಿ ನಿರ್ಗಚ್ಛತಿ ಇತಿ ವಿಶ್ವಮ್).
ವಂ ಜಲಂ ಸ್ವ-ಇಚ್ಛಯಾ ಕೂರ್ಮ|ರೂಪೇಣ ಶ್ವಯತಿ ಪ್ರಭುಃ |
ವಿನಾ ತ್ರೈಪದಭೂಮೀಚ್ಛ|ಯಾ ಶ್ವಯತ್ಯಪಿ ವಾಮನೇ |
ವಿಭಿದ್ಯಾಣ್ಡಂ ಶ್ವಯತ್ಯೇಷೋ ವರ್ಧತೇ ಹಿ ತ್ರಿವಿಕ್ರಮಃ || ೬೫ ||
ವಂ ಎಂದರೆ ಜಲವೆಂದೂ ಅರ್ಥವಿದೆ. ತನ್ನಿಚ್ಛೆಯಂತೆ ಕೂರ್ಮಾವತಾರ ತಾಳಿ ಜಲವನ್ನು ಕುರಿತು (ಸಾಗರದೆಡೆಗೆ) ಸಂಚರಿಸುತ್ತಾನಾದ್ದರಿಂದಲೂ ವಿಷ್ಣುವು ವಿಶ್ವನು. ವಾಮನಾವತಾರದಲ್ಲಿ ಭೂರಮಣನಾದ ಹರಿಯು ತನಗಾಗಿ ಅಪೇಕ್ಷೆ ಪಡದೆ, ಲೋಕಹಿತಕ್ಕಾಗಿ ಮೂರು ಹೆಜ್ಜೆ ಭೂಮಿಯನ್ನು ಬಲಿಯಿಂದ ಬೇಡುವುದಕ್ಕಾಗಿ ಬಲಿಯಲ್ಲಿಗೆ ಹೋಗಿದ್ದರಿಂದಲೂ ವಿಶ್ವನು. ಸಮಗ್ರ ಬ್ರಹ್ಮಾಂಡವನ್ನೇ ಭೇದಿಸಿ ಬೃಹದಾಕಾರವಾಗಿ ವರ್ಧಿಸಿ ಮೂರಡಿಯಿಟ್ಟು ತ್ರಿ-ವಿಕ್ರಮನೆನಿಸಿದ್ದರಿಂದಲೂ ವಿಷ್ಣುವು ವಿಶ್ವನು.
ದೈತ್ಯಾನಾಂ ವಿಪರೀತಂ ಶಂ ಮೋಹಿನೀ ವಾಯಯತ್ಯಪಿ || ೬೬ ||
ಮೋಹಿನೀರೂಪಿನಿಂದ ದಿತಿಸುತರಾದ ದೈತ್ಯರ ವಿಪರೀತವಾದ, ಧರ್ಮವಿರುದ್ಧವಾದ ಕಾಮನೆಯನ್ನು / ಸುಖಾಪೇಕ್ಷೆಯನ್ನು ನಾಶಗೊಳಿಸಿದ್ದರಿಂದಲೂ ವಿಷ್ಣುವು ವಿಶ್ವನು.
ವಿವಿಧಾನ್ ಶಮಯನ್ರೋಗಾನ್ ವಾತಿ ಧನ್ವನ್ತರಿರ್ಹರಿಃ |
ವಿಶಾನತ್ತಿ ತಥಾ ಕ್ಷಾತ್ರಾನ್ ವೇತಿ ದುಷ್ಟಾಂಸ್ತು ಭಾರ್ಗವಃ || ೬೭ ||
ಶ್ರೀಹರಿಯು ವಿವಿಧ ರೋಗಗಳನ್ನು ನಿವಾರಿಸಲು ಧನ್ವಂತರಿರೂಪೀ ಅವತಾರ ತಾಳಿ ಧನ್ವಂತರಿನಿಘಂಟುವನ್ನು ರಚಿಸಿ, ಲೋಕಕ್ಕೆ ವಿವಿಧ ಚಿಕಿತ್ಸೆಗಳನ್ನೂ, ರೋಗಬರದಂತೆ ಮುನ್ನೆಚ್ಚರಿಕೆಗಳನ್ನೂ ಉಪದೇಶಿಸಿದ್ದರಿಂದಲೂ ವಿಷ್ಣುವು ವಿಶ್ವನು.
ವಿಶೇಷೇಣ ಶ್ವಯತ್ಯೇಷೋऽಭಿವರ್ಧಯತಿ ರಾಘವಃ |
ಸೂರ್ಯವಂಶಂ ಪ್ರದೀಪತ್ವೇ ವಿಷ್ಣುರ್ವಿಶ್ವಮಿತೀರಿತಃ || ೬೮ ||
ಸೂರ್ಯವಂಶದಲ್ಲಿ ದಾಶರಥಿರಾಮನಾಗಿ ಅವತರಿಸಿ ಕುಲದೀಪಕನಾದ್ದರಿಂದಲೂ ವಿಷ್ಣುವು ವಿಶ್ವನೆನಿಸಿದನು.
ರಾವಣಂ ಚ ವಿಹತ್ಯೈಷೋ ವಿಭೀಷಣಂ ಶ್ವಯತ್ಯಥ |
ಯದುವಂಶಂ ವಿಶೇಷೇಣ ಕೃಷ್ಣಾತ್ಮಾऽಸೌ ಶ್ವಯತ್ಯಪಿ || ೬೯ ||
ರಾಮನಾಗಿ ರಾವಣನನ್ನು ವಧಿಸಿ, ವಿಭೀಷಣನಿಗೆ ಪಟ್ಟಗಟ್ಟಿದ್ದರಿಂದಲೂ, ಕೃಷ್ಣನಾಗಿ ವಿಶೇಷರೀತಿಯಿಂದ ಯದುಕುಲವರ್ಧಕನಾದ್ದರಿಂದಲೂ ವಿಷ್ಣುವು ವಿಶ್ವನೆನಿಸಿದನು.
ಗೋಕುಲಂ ಗೋಕುಲೇ ಚೈವ ವಿವರ್ಧಯತಿ ವರ್ಧತೇ |
ವಿದುರಂ ಚ ವಿಶಿಷ್ಯಾನುಗೃಹ್ಣನ್ ವಿಶಂಶ್ಚ ತದ್ಗೃಹಮ್ |
ಶ್ವಯತ್ಯೇನಂ ಹರಿಸ್ಸಾಕ್ಷಾದ್ವರ್ಧಯತ್ಯಪಿ ವಿಶ್ವತಾ || ೭೦ ||
ಗೋಕುಲದಲ್ಲಿ ಬೆಳೆದು, ಗೋಕುಲವನ್ನೇ ಬೆಳೆಸಿದ್ದರಿಂದಲೂ, ವಿದುರನನ್ನು ವಿಶೇಷವಾಗಿ ಅನುಗ್ರಹಿಸಿ, ಆತನ ಮನೆಯನ್ನು ಪ್ರವೇಶಿಸಿ, ವಿದುರನ ಕುಡುತೆಹಾಲನ್ನು ಪಾಲ್ಗಡಲಿನಂತೆ ವರ್ಧಿಸಿದ್ದರಿಂದಾಗಿಯೂ ಶ್ರೀಹರಿಯು ವಿಶ್ವನು.
ದುರ್ಜನಂ ವಿಗತಶ್ವಂ ತು ಬುದ್ಧರೂಪೇ ಚಕಾರ ಹ |
ವಿಗತಜ್ಞಾನಮಿತ್ಯೇವಂ ವಿಷ್ಣುರ್ವಿಶ್ವಮಿತೀರಿತಃ || ೭೧ ||
ಬುದ್ಧಾವತಾರದಲ್ಲಿ ದುಷ್ಟರಾದ ತ್ರಿಪುರಾಸುರರನ್ನು ಅವರ ಜ್ಞಾನವನ್ನು ಮಾಯೆಯಿಂದ ಮರೆಮಾಚಿ ನಾಶಪಡಿಸಿದ್ದರಿಂದಲೂ ವಿಷ್ಣುವು ವಿಶ್ವನು.
ವಿಮಾತ್ಮಾನಂ ಪರಂ ಶ್ಯನ್ತಿ ತನೂಕುರ್ವನ್ತಿ ಯೇ ತು ತಾನ್ |
ಮ್ಲೇಚ್ಛಾನ್ ನಾಶಯತೀತ್ಯೇವಂ ವೇತಿ ಕಲ್ಕಿತನುರ್ಹರಿಃ || ೭೨ ||
(ವಿ) ಪರಮಾತ್ಮನನ್ನು ಯಾವ ಮ್ಲೇಚ್ಛರು ನಿಂದಿಸುವರೋ ಅಂಥವರನ್ನು ಕಲ್ಕಿರೂಪನಾಗಿ ನಾಶಮಾಡುವುದರಿಂದಲೂ ಶ್ರೀಮನ್ನಾರಾಯಣನು ವಿಶ್ವಮ್ ಎನಿಸಿರುವನು.
ವಿವಿಧೈರವತಾರೈರ್ಧಾರ್ಮಿಕಾನ್ ಧರ್ಮಂ ಶ್ವಯತ್ಯಪಿ || ೭೩ ||
ಹೀಗೆ, ನಾನಾ ಅವತಾರಗಳನ್ನು ಧರಿಸಿ ಧರ್ಮವನ್ನೂ, ಧಾರ್ಮಿಕರನ್ನೂ ಬಲಪಡಿಸುವುದರಿಂದಾಗಿಯೂ ವಿಷ್ಣುವು ವಿಶ್ವನು.
ವಿ-ಗಮಯತ್ಯಧರ್ಮಂ ಚಾಧಾರ್ಮಿಕಾಂಶ್ಚ ಶ್ವಯತ್ಯಪಿ |
ವ್ಯಸ್ಯ ವೇದಂ ತಥಾ ವ್ಯಾಸೋ ಜ್ಞಾನಂ ವರ್ಧಯತೀತ್ಯಪಿ || ೭೪ ||
ಅಧರ್ಮ ಹಾಗೂ ಅಧಾರ್ಮಿಕರನ್ನೂ ಹೋಗಲಾಡಿಸುವುದರಿಂದಾಗಿ ವಿಷ್ಣುವು ವಿಶ್ವನು. ವೇದವನ್ನು ವಿಭಾಗಿಸಿ ಪ್ರತ್ಯೇಕವೇದದ ಜ್ಞಾನವನ್ನು ಪ್ರತ್ಯೇಕವರ್ಗದ ಜನರಲ್ಲಿ ಹೆಚ್ಚಿಸಿರುವುದರಿಂದಾಗಿ ವ್ಯಾಸಾವತಾರಿ ವಿಷ್ಣುವು ವಿಶ್ವನೆನಿಸುವನು.
ವಿನಾ ಜ್ಞಾನೇನ ದತ್ತಶ್ಚ ಕಪಿಲಾದಿಃ ಶ್ವಯತ್ಯಥ |
ವರ್ಧಯತ್ಯಪಿ ಶಂ ವಿಷ್ಣುರ್ವಿಶ್ವಮಿತ್ಯಭಿಚಕ್ಷತೇ || ೭೫ ||
(ವಿ)ಜ್ಞಾನದಿಂದ ಪರಮ(ಮೋಕ್ಷ)ಸುಖವನ್ನು ಲೋಕದಲ್ಲಿ ವರ್ಧಿಸಿದ ಸರ್ವಭಗವಾನ್— ದತ್ತಾತ್ರೇಯ, ಕಪಿಲ ಮುಂತಾದ ರೂಪಗಳಿಂದಾಗಿ ವಿಷ್ಣುವು ವಿಶ್ವನೆನಿಸಿರುವನು.
ವಿಂ ವಿಘ್ನಂ ಗಮಯತ್ಯೇಷೋ ವೈ ಶ್ವಯತ್ಯಪಗಮಯತಿ |
ವಿವಿಧಂ ಜ್ಞಾನಿಭಿಶ್ಚೈವಮಾದಿರೂಪೇಣ ಚಿನ್ತಿತಮ್ || ೭೬ ||
ವಿಘ್ನವನ್ನುಂಟುಮಾಡುವ ಹಾಗೂ ಹೋಗಲಾಡಿಸುವ ಸಾಮರ್ಥ್ಯದಿಂದಾಗಿ ವಿಷ್ಣುವು ವಿಶ್ವನು. ಹೀಗೆ, ಜ್ಞಾನಿಗಳಿಂದ ಎಲ್ಲರೀತಿಯ ವಿವಿಧರೂಪಾದಿಗಳಿಂದ ಧ್ಯಾನಿಸಲ್ಪಡುವ ವಿಷ್ಣುವು ವಿಶ್ವನೆನಿಸುವನು.
(ಆಧಾರ ೧— ಬನ್ನಂಜೆ ಗೋವಿಂದಾಚಾರ್ಯರ ಗದ್ಯವ್ಯಾಖ್ಯಾನ)
{ ಆಧಾರ ೨— ಬೃಹತೀಸಹಸ್ರಮ್— ವಿಷ್ಣುಸಹಸ್ರನಾಮಗಳ ವೈದಿಕಮೂಲವೆಂದು ದ್ವೈತಪರಂಪರೆಯಲ್ಲಿ ಪರಿಗಣಿತವಾದ ಋಙ್ಮಂತ್ರಗಳ ವಿಶಿಷ್ಟ ಸಂಯೋಜನೆಯೇ ಬೃಹತೀಚ್ಛಂದಸ್ಸಿನಲ್ಲಿರುವ ೧,೦೦೦ ಮಂತ್ರಗಳ “ಬೃಹತೀಸಹಸ್ರಮ್”. ಇದರಲ್ಲಿ, ವಿಷ್ಣುವಿನ ಸಾವಿರನಾಮಗಳಿಗೂ ಋಕ್ಕುಗಳ ಆಧಾರವಿದೆ. ಮೊದಲಿಗೆ “ವಿಶ್ವಂ” ಎಂಬುದರ ಮೂಲವನ್ನು ನೋಡೋಣ.
ಓಂ ತದಿದಾಸ ಭುವನೇಷು ಜ್ಯೇಷ್ಠಂ (ಋ.೧೦.೧೨೦.೧) (ಪು) ನದಂ ವ ಓದತೀನಾಮ್ (ಋ.೦೮.೬೯.೦೨)| ಯತೋ ಜಜ್ಞ ಉಗ್ರಸ್ತ್ವೇಷನೃಮ್ಣೋ (ಋ.೧೦.೧೨೦.೧) (ರು) ನದಂ ಯೋ ಯುವತೀನಾಮ್ / ಯುವತೀನೋಮ್ (ಋ.೦೮.೬೯.೦೨) ||
ಸಾಯಣಭಾಷ್ಯಾದ್ಯನುವ್ಯಾಖ್ಯಾನಮ್— ತತ್ ಜಗತ್ಕಾರಣಪ್ರಸಿದ್ಧಮ್ ಬ್ರಹ್ಮ, ಇತ್ ಏವ / ಇತ್ಥಂ ಭುವನೇಷು ಸತ್ಸು ಪೃಥಿವ್ಯಾದಿಷು ಲೋಕೇಷು ಮಧ್ಯೇ ತಸ್ಯ ಪರಮಾರ್ಥತ್ವಾತ್, ತದ್ವ್ಯತಿರಿಕ್ತಾನಾಂ ವ್ಯಾವಹಾರಿಕತ್ವಾಚ್ಚ ಜ್ಯೇಷ್ಠಂ ಪ್ರಶಸ್ತತಮಂ, ಜಗತ್ಕಾರಣತ್ವೇನ ಸರ್ವೇಷಾಮಾದಿಭೂತಂ ಜ್ಯೈಷ್ಠಂ ವೃದ್ಧತಮಂ ವಾ ಆಸ ಬಭೂವ ಸ್ವಪ್ರಕಾಶತಯಾ ದಿದೀಪೇ ವಾ | ಅಸ ಗತಿದೀಪ್ತ್ಯಾದಾನೇಷು ||
ಯತಃ, ಉಪಾದಾನಭೂತಾದ್ಯಸ್ಮಾದ್ ಪರಬ್ರಹ್ಮಣಃ ವಿಷ್ಣೋಃ ವಾ, ಉಗ್ರಃ, ಉದ್ಗೂರ್ಣಃ, ಉದ್ದೀಪ್ತಃ, ಉದ್ಧೃತಃ, ಕೃತೋದ್ಯಮಃ / ಉದ್ಯಮಿತಃ / ಉದ್ಯತಃ / ಉನ್ನಿಯತಃ, ಸನ್ನದ್ಧಃ, ಪ್ರಶಿಕ್ಷಿತಃ (ಗೂರ್ ಹಿಂಸಾಗತ್ಯೋಃ), ತ್ವೇಷನೃಮ್ಣಃ, ಪ್ರದೀಪ್ತಬಲಃ ಸೂರ್ಯಾತ್ಮಕಃ, ಇಂದ್ರಃ, ಜಜ್ಞೇ, ಜಾತಃ ಬಭೂವ ||
ಹೇ ಯಜಮಾನಾಃ ! ಓದತೀನಾಂ, ಭಾಸ್ವತೀನಾಮ್ ಉಷಸಾಂ, ಕ್ಲೇದಯತೀನಾಂ ನದೀನಾಂ ಅಪಾಂ ವಾ, ಭಕ್ತಿಜಲೇನ ಕ್ಲೇದಯತೀನಾಂ ವಾ, ನದಂ, ಉತ್ಪಾದಕಂ ಪರಂಬ್ರಹ್ಮ ಪರಮಾತ್ಮಾನಂ ಪರಮೇಶ್ವರಂ ಭಗವನ್ತಂ ಮಹಾವಿಷ್ಣುಂ, ವಾಯುದೇವಂ ಚ ವಾ,
ಕ್ಲೇದಯಿತೄನ್ ನದಾನ್ ವಾ, ವಃ, ಯುಷ್ಮದರ್ಥಂ, ಯುಷ್ಮಾಕಂ, ಪು, (ಪೃ ಪೂರಣೇ ಪಾಲನೇ, ಪುಷ ಪೋಷಣೇ ಪುಷ್ಟೌ ವಾ) ಪರಿಪೂರಣಾರ್ಥಂ, ಪಾಲನಾರ್ಥಂ, ಪೋಷಣಾರ್ಥಂ / ಪುಷ್ಟ್ಯರ್ಥಂ ಚ, ಆಹ್ವಯತ || ತಥಾ, ಯೋಯುವತೀನಾಂ, ಸರ್ವತ್ರ ಮಿಶ್ರಯನ್ತೀನಾಂ ನದೀನಾಮ್ ಅಪಾಮ್, ಮಿಶ್ರಾಮಿಶ್ರಾಣಾಂ ಸಕಾಮನಿಷ್ಕಾಮಾನಾಂ ಕರ್ಮಾಣಾಮ್, ಅಮಿಶ್ರಾಣಾಮ್ ಅಪೌರುಷೇಯಾಣಾಂ ವೇದಮಂತ್ರಾಣಾಂ, ಮಿಶ್ರಾಮಿಶ್ರಾಣಾಂ ಪೌರುಷೇಯಾಣಾಂ ಸಾಮೂಹಿಕಾನಾಂ ಭಕ್ತಿಸ್ತೋತ್ರಾಣಾಂ ವಾ, ನದಂ, (“ಪ್ರಾಣೋ ವೈ ನದಃ”) ಶಬ್ದಯಿತಾರಮ್, ಸ್ವಾಮಿನಂ ಮುಖ್ಯಪ್ರಾಣಂ ವಾ, ರು, (ವಧೇ, ಗತ್ಯಾಮ್, ಶಬ್ದೇ) ನದ-ನದೀನಾಂ ಸಂಹರ್ತಾರಂ ಶೋಷಿತಾರಂ, ಸ್ವಪಥೇಷು ಸುಗಮಯಿತಾರಂ, ಶಬ್ದಯಿತಾರಂ, ಕರ್ಮಾಣಾಂ ಶಬ್ದಯಿತಾರಂ ಚೋದಯಿತಾರಂ ವಾ, ಕರ್ತಾರಂ ಸಂಹರ್ತಾರಂ, ತೇನ ಮುಕ್ತಿದಾತಾರಂ, ಸ್ತೋತ್ರಮಂತ್ರಾಣಾಂ ಕರ್ತಾರಂ, ಶಬ್ದಯಿತಾರಂ ವಕ್ತಾರಂ ವಾ, ತಥಾನ್ತೇ ಪ್ರಲಯೇ ಸಂಹರ್ತಾರಂ ವಾ ಮಹಾವಿಷ್ಣುಂ ಪರಮೇಶ್ವರಮ್ ಚ, ಪ್ರಾರ್ಥಯನ್ತಃ, ಆಹ್ವಯತ ||
“ವಿಶ್ವೇ ವಾಯುಃ - ಇತಿ ಶ್ರುತೇಃ ವಿಶ್ವಂ ವಾಯುಂ ಅಭೀಷ್ಟದಾನಾದಿನಾ ವಾತಿ ಗಂಧಯತಿ ಇತಿ ‘ವಿಶ್ವಃ’ ವರ್ಣಿತಃ ||”}
ತಜ್ಜಗತ್ಕಾರಣಂ ಬ್ರಹ್ಮ ತದ್ವಿಷ್ಣುರ್ವೇತಿ ಚೈವ ವೈ |
ಇತ್ಥಂ ಸತ್ಸು ಚ ಸರ್ವೇಷು ಭುವನೇಷು ಪ್ರತಿಷ್ಠಿತಃ || ೭೭ ||
“ತದಿದಾಸ ಭುವನೇಷು”— ತತ್ ಇತ್ ಆಸ ಭುವನೇಷು— ಅದು, ಜಗತ್ತಿಗೇ ಕಾರಣವಾದ ಬ್ರಹ್ಮವಸ್ತುವು / ಪರಬ್ರಹ್ಮವು / ಆದಿಮೂಲಶಕ್ತಿಯು ನಿಶ್ಚಯವಾಗಿಯೂ ವಿಷ್ಣುವೆಂದೂ (ವಿಷ್ಣುಃ ವಾ ಇತಿ ಚ ಏವ ವೈ) ಅರ್ಥಾತ್ “ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ” ಎಂಬಂತೆ ವಿಶ್ವವನ್ನೆಲ್ಲ ವ್ಯಾಪಿಸುತ್ತದೆ ಹಾಗೂ ಅದರೊಳಗೆ ಪ್ರವೇಶಿಸುತ್ತದೆಯಾದ್ದರಿಂದ ವಿಷ್ಣುವೆಂದೂ, ಹೀಗೆ ಜಗತ್ಕಾರಣವಾದ್ದರಿಂದ (ಇತ್— ಇತ್ಥಮ್), ಇರುವ ಸಕಲ ಲೋಕಗಳಲ್ಲೂ (ಸತ್ಸು ಸರ್ವೇಷು ಭುವನೇಷು), ಆ ಶಕ್ತಿಯು ಪ್ರ-ತಿಷ್ಠಿತವಾಗಿದೆ / ಪ್ರಕೃಷ್ಟವಾಗಿ, ಚೆನ್ನಾಗಿ, ಉತ್ಕೃಷ್ಟವಾಗಿ ನೆಲೆನಿಂತಿರುವುದು (ಪ್ರತಿಷ್ಠಿತಃ).
ಪರಮಾರ್ಥತಯಾऽಸ್ಯ ವ್ಯಾ|ವಹಾರಿಕತಯೇತರಾಃ |
ಜಗದಾದಿತಯಾ ಚೈವ ತತ್ ಜ್ಯೇಷ್ಠಮ್-ಇತಿ ಕಥ್ಯತೇ || ೭೮ ||
ಆ ಪರವಸ್ತುವು ಪಾರಮಾರ್ಥಿಕವಾದುದು. ಪುರುಷಾರ್ಥಗಳಲ್ಲೇ ಶ್ರೇಷ್ಠವಾದ ಮೋಕ್ಷಸಂಪದವೇ ಅದಾದುದರಿಂದ, ಅದು ಪರಮ-ಅರ್ಥವು. ಅದು ಬಿಟ್ಟು ಉಳಿದೆಲ್ಲವೂ ಕೇವಲ ವ್ಯಾವಹಾರಿಕ ಸತ್ಯ ಮಾತ್ರವಾದವುಗಳೇ ಹೊರತು, ಆತ್ಯಂತಿಕ ಶಾಶ್ವತಸತ್ಯಗಳಲ್ಲ. ಹಾಗೆಯೇ, ಜಗತ್ತಿಗೇ ಕಾರಣವಾದುದರಿಂದ ಆ ಬ್ರಹ್ಮವಸ್ತುವು ಎಲ್ಲಕ್ಕೂ ಮೊದಲೇ ಇದ್ದ ಅನಾದಿ (ಆದಿಯಿಲ್ಲದ)ತತ್ತ್ವವೂ ಆಗಿದೆ. ಹಾಗಾಗಿಯೇ, ತದ್ ವಾಚ್ಯನಾದ, ಪರಮೇಶ್ವರನಾದ, ಸರ್ವ ವ್ಯಾಪಕನಾದ ವಿಷ್ಣುವು / ಪರಬ್ರಹ್ಮವಸ್ತುವು ಶ್ರೇಷ್ಠನೂ, ಜ್ಯೇಷ್ಠನೂ ಆಗಿರುವನೆಂದು ಹೇಳಲ್ಪಡುತ್ತದೆ.
ತದಿದಾಸ ದಿದೀಪೇऽದಃ ಬಭೂವ ಸ್ವಪ್ರಕಾಶತಃ |
ಯತೋ ಜಜ್ಞೇऽಥ ವಾऽऽವಿರ್ಬ|ಭೂವ-ಉಗ್ರಃ ಶಕ್ರ ಏವ ಚ || ೭೯ ||
ಹೀಗೆ, ಅದು, ಆ ಬ್ರಹ್ಮವಸ್ತುವು ಒಂದೇ ಇದ್ದಿತು ಸೃಷ್ಟಿಗೂ ಮೊದಲು (ಇತ್ ತತ್ ಆಸ ಬಭೂವ). ಇದು (ಅದಃ), ತನ್ನದೇ ಆದ ಪ್ರಕಾಶದಿಂದ (ಸ್ವ-ಪ್ರಕಾಶತಃ), ಬೆಳಗುತ್ತಿತ್ತು (ದಿದೀಪೇ). ಯಾವ ಇದರಿಂದ (ಯತಃ), ದೇವತೆಗಳಲ್ಲಿ ಅಗ್ರಗಣ್ಯನೂ, ಸದಾ ಕ್ರಿಯಾಶೀಲನೂ, ಸನ್ನದ್ಧನೂ, ಆತ್ಮಸಂಯಮಿಯೂ, ಜಗದ ಆಗುಹೋಗುಗಳಿಗೆ ತ್ವರಿತವಾಗಿ ಹಾಗೂ ತೀಕ್ಷ್ಣವಾಗಿ ಪ್ರತಿಸ್ಪಂದಿಸುವವನೂ ಆಗಿ “ಉಗ್ರ”ನೆನಿಸಿದ, ಶತಕ್ರತುಗಳನ್ನು ಮಾಡಿ ಶಕ್ರನೆನಿಸಿದ, ಇಂದ್ರಿಯನಿಯಂತ್ರಕನಾದ ಇಂದ್ರನೇ (ಉಗ್ರಃ ಶಕ್ರಃ, ಏವ ಚ), ಜನಿಸಿದನು (ಜಜ್ಞೇ), ಅಥವಾ ಆವಿರ್ಭವಿಸಿದನು (ಅಥ ವಾ ಆವಿರ್ಬಭೂವ).
ಯಸ್ಮಾದ್ವಿಷ್ಣೋರಾವಿರಾಸೀದ್ಬ್ರಹ್ಮಾ ರುದ್ರಸ್ತಥಾ ಪುನಃ |
ಏವಂ ತ್ವೇಷನೃಮ್ಣಸ್ತು ಹರಿಃ ಕಾನ್ತ್ಯಾ ಸುಶೋಭಿತಃ || ೮೦ ||
ಯಾವ ಆ ವಿಶ್ವವ್ಯಾಪಕ ಪರಬ್ರಹ್ಮವಸ್ತುವಾದ ವಿಷ್ಣುವಿನಿಂದಲೇ (ಯಸ್ಮಾದ್ ವಿಷ್ಣೋಃ ಪುನಃ), ಸೃಷ್ಟಿಕರ್ತನಾದ ಚತುರ್ಮುಖ ಬ್ರಹ್ಮಾ (ಬ್ರಹ್ಮಾ), ಹಾಗೂ (ತಥಾ), ರುದ್ರನೂ (ರುದ್ರಃ), ಆವಿರ್ಭವಿಸಿದರು (ಆವಿರಾಸೀತ್). ಹೀಗೆ (ಏವಂ), ಸಕಲಪಾಪಗಳನ್ನು ಪರಿಹರಿಸುವವನಾಗಿ ಶ್ರೀಹರಿಯೆನಿಸಿದ ವಿಷ್ಣುವು (ಹರಿಃ), ವಿಶೇಷವಾದ ದಿವ್ಯಕಾಂತಿಯಿಂದ ಸುಂದರವಾಗಿ ಶೋಭಿತನಾಗಿರುವನು (ತ್ವೇಷನೃಮ್ಣಃ— ಕಾನ್ತ್ಯಾ ಸು-ಶೋಭಿತಃ).
ಭಕ್ತ್ಯಾ ಪರಿಪ್ಲುತಾನಾಂ ಹಿ ಓದತೀನಾಂ ನದಂ ಪು ವಃ |
ನದೀನಾಂ ಕ್ಲೇದಯಿತೄಣಾ|ಮಪಾಂ ವಾ ಭಾಯುತೋಷಸಾಮ್ || ೮೧ ||
ನದಮುತ್ಪಾದಕಂ ವಿಷ್ಣುಂ ಬ್ರಹ್ಮೇಶ್ವರಪ್ರಭಂಜನಾನ್ |
ಆಹ್ವಯತ ಹಿ ಯುಷ್ಮಾಕಂ ಪುಷ್ಟಿಪಾಲನಪೂರಕಾನ್ || ೮೨ ||
(ಓದತೀನಾಂ— ಭಾಯುತ-ಉಷಸಾಂ / ಉನ್ದಿ ಕ್ಲೇದನೇ ಧಾತುಃ— ಕ್ಲೇದಯಿತೄಣಾಂ ನದೀನಾಂ / ಭಕ್ತ್ಯಾ ಪರಿಪ್ಲುತಾನಾಂ ಅಪಾಂ) ಪ್ರಭಾಯುಕ್ತ ಬೆಳಕಿನ ಕಿರಣಗಳ / ಒದ್ದೆ ಮಾಡುವ, ತೋಯಿಸುವ ನದಿಗಳ / ಭಕ್ತಿಯಿಂದ ತುಂಬಿ ತುಳುಕುವ ಭಾವರಸಗಳ, (ನದಮ್— ಉತ್ಪಾದಕಂ ವಿಷ್ಣುಂ / ಬ್ರಹ್ಮ-ಈಶ್ವರ-ಪ್ರಭಂಜನಾನ್) ಉತ್ಪಾದಕನಾದ / ಜನಕನಾದ / ಮೂಲಕಾರಣನಾದ, ವಿಷ್ಣುವನ್ನು / ಪರಬ್ರಹ್ಮವನ್ನು / ಪರಮೇಶ್ವರನನ್ನು / ಪ್ರಭಂಜನ ಅಥವಾ ವಾಯುದೇವರನ್ನು, (ವಃ— ಯುಷ್ಮಾಕಂ) ನಿಮ್ಮ, (ಪು— ಪುಷ್ಟಿ-ಪಾಲನ-ಪೂರಕಾನ್ ಹಿ) ಮನೋದೇಹಗಳ ಪುಷ್ಟಿ / ಪೋಷಣೆ, ಪಾಲನೆ ಮಾಡುವ ಹಾಗೂ ಬೇಡಿಕೆಗಳನ್ನು ಪೂರೈಸುವವರಾದ ಇವರನ್ನಾದರೋ, (ಆಹ್ವಯತ) ಭಕ್ತ್ಯಾದರಾತಿಶಯದಿಂದ ಪ್ರಾರ್ಥಿಸಿ, ಆಮಂತ್ರಿಸಿ, ಆಹ್ವಾನಿಸಿ, ಪ್ರಸನ್ನಗೊಳಿಸಿರಿ.
ತಥಾ ಯೋಯುವತೀನಾಂ ಮಿ|ಶ್ರಾಮಿಶ್ರಾಣಾಮಪಾಂಸ್ತಥಾ |
ನದೀನಾಂ ಸ್ತೋತ್ರಮನ್ತ್ರಾಣಾಂ ಕರ್ಮಾಣಾಂ ನದಮ್ಇತ್ಯಪಿ || ೮೩ ||
ಸ್ವಾಮಿನಂ ಶಬ್ದಯಿತಾರಂ ಮುಖ್ಯಪ್ರಾಣಂ ತಥೈವ ಚ |
ಪ್ರಾಣೋ ವೈ ನದ ಇತ್ಯೇವಂ ಶ್ರುತಿವಾಕ್ಯಮುದೀರಿತಮ್ || ೮೪ ||
ಹಾಗೆಯೇ (ತಥಾ), ಮಿಶ್ರ-ಅಮಿಶ್ರವಾದ (ಯೋಯುವತೀನಾಮ್— ಮಿಶ್ರಾಮಿಶ್ರಾಣಾಂ), ನಾನಾನದಿ-ಸಮುದ್ರಗಳ ಜಲರಾಶಿಯ (ನದೀನಾಮ್ ಅಪಾಮ್), ಅಂತೆಯೇ (ತಥಾ), ಅಮಿಶ್ರವೂ ಶುದ್ಧವೂ ಆದ ಅಪೌರುಷೇಯ ವೇದಮಂತ್ರಗಳ ಹಾಗೂ ಮಿಶ್ರಾಮಿಶ್ರವಾದ ಪೌರುಷೇಯ ಸಾಮೂಹಿಕ ಸ್ತೋತ್ರಗಳ (ಸ್ತೋತ್ರಮನ್ತ್ರಾಣಾಮ್), ಹಾಗೆಯೇ, ಅಮಿಶ್ರವಾದ ನಿಷ್ಕಾಮಕರ್ಮಗಳ ಹಾಗೂ ಮಿಶ್ರವಾದ ಸಕಾಮಕರ್ಮಗಳ (ಕರ್ಮಾಣಾಮ್), “ನದವೆಂದರೆ ಪ್ರಾಣನು” ಎಂಬರ್ಥದ ವೇದಮಂತ್ರದಂತೆ, ಒಡೆಯನೂ, ನದಿಗಳ ಭೋರ್ಗರೆತ ಶಬ್ದವುಂಟುಮಾಡುವವನೂ, ಸ್ತೋತ್ರ-ಮಂತ್ರಗಳ ಮೂಲನೂ ಆದ ಸಕಲ ಪ್ರಾಣಗಳಲ್ಲಿ ಮುಖ್ಯನಾದ ಮುಖ್ಯಪ್ರಾಣನೆನಿಸಿದ ವಾಯುದೇವರನ್ನು (ನದಂ— ಸ್ವಾಮಿನಂ ಶಬ್ದಯಿತಾರಂ ಮುಖ್ಯಪ್ರಾಣಂ; “ಪ್ರಾಣೋ ವೈ ನದಃ” ಇತಿ ಶ್ರುತಿಃ), ಹಾಗೆಯೇ (ತಥಾ ಏವ ಚ),
ರು ಸಂಹರ್ತಾರಮೇವಂ ತು ನದೀನಾಂ ಶೋಷಿತಾರಮೋಮ್ |
ಸ್ವಪಥೇಷು ಗಮಯಿತಾ|ರಂ ವಾ ಶಬ್ದಯಿತಾರಮೋಮ್ || ೮೫ ||
ಕರ್ತಾರಂ ಸರ್ವಕರ್ಮಾಣಾಂ ಹನ್ತಾರಂ ಮುಕ್ತಯೇ ತಥಾ |
ಸ್ತೋತ್ರಮನ್ತ್ರಪ್ರವಕ್ತಾರಂ ಮಹಾವಿಷ್ಣುಮಹೇಶ್ವರಮ್ |
ಸಮಾಹ್ವಯತ ಯಷ್ಟಾರಃ ಸದ್ಭಕ್ತ್ಯಾ ಪರಯೇತಿ ಚ || ೮೬ ||
( ರು— ವಧೇ, ಗತ್ಯಾಂ, ಶಬ್ದೇ ಚ— ನದೀನಾಂ ಶೋಷಿತಾರಮ್, ಏವಂ ಸಂಹರ್ತಾರಮ್ ಓಮ್) ವಧೆ, ಗತಿ, ಶಬ್ದ ಎಂಬರ್ಥದ ರು ಶಬ್ದವನ್ನು ಇಲ್ಲಿ ಹೀಗೆ ಅರ್ಥೈಸಬಹುದು— ನದ-ನದಿಗಳ ಸಂಹಾರಕನನ್ನು ಅರ್ಥಾತ್ ಅವುಗಳನ್ನು ಬೇಸಿಗೆಯಲ್ಲಿ ಒಣಗಿಸಿ, ಮುಂದಿನ ವರ್ಷಾಕಾಲದ ಜಲಚಕ್ರಪ್ರವರ್ತನೆಗೆ ಪೂರಕನಾಗುವ ಸೂರ್ಯನಾರಾಯಣರೂಪೀ ಭಗವಂತನನ್ನು ಸ್ವಾಗತಿಸೋಣ. (ಸ್ವಪಥೇಷು ಗಮಯಿತಾರಂ ಶಬ್ದಯಿತಾರಂ ವಾ ಓಮ್) ನದ-ನದಿಗಳನ್ನು ಆಯಾಯ ನದೀಪಥಗಳಲ್ಲಿ ಗಮಿಸುವಂತೆಯೂ, ಮಳೆಗಾಲದಲ್ಲಿ ಭೋರ್ಗರೆವ ಶಬ್ದದೊಂದಿಗೆ ತುಂಬಿ ಹರಿದು ಧುಮ್ಮಿಕ್ಕುವಂತೆಯೂ ಮಾಡುವ ಇಂದ್ರ, ವರುಣ, ವಾಯು, ಅಗ್ನ್ಯಾದಿ ದೇವತಾರೂಪಿಯಾಗಿಯೂ ಇರುವ ಮಹಾವಿಷ್ಣುವನ್ನು ಸ್ವಾಗತಿಸೋಣ. (ಸರ್ವಕರ್ಮಾಣಾಂ ಕರ್ತಾರಂ, ತಥಾ ಮುಕ್ತಯೇ ಹನ್ತಾರಮ್) ಜೀವರ ಸಕಲ ಕರ್ಮಗಳನ್ನೂ ಅವುಗಳ ಅಂತರ್ಯಾಮಿಯಾಗಿದ್ದು ಪ್ರೇರಿಸಿ ಮಾಡಿಸುವವನನ್ನೂ, ಹಾಗೆಯೇ, ಅವರ ಮುಕ್ತಿಗಾಗಿ ಕರ್ಮಗಳನ್ನು ಮಾಡಿಯೂ ಮಾಡದವನಂತೆ ಭಾವಿಸುವ ಭಾವವನ್ನು ಕೊಟ್ಟು, ಕರ್ಮಗಳನ್ನು ಇಲ್ಲವಾಗುವಂತೆ ಮಾಡಿ ಮುಕ್ತಿ ನೀಡುವವನನ್ನೂ, (ಸ್ತೋತ್ರ-ಮನ್ತ್ರ-ಪ್ರವಕ್ತಾರಮ್) ವೈದಿಕ-ಲೌಕಿಕ, ಅಪೌರುಷೇಯ-ಪೌರುಷೇಯ ವೇದಮಂತ್ರ-ದೇವತಾಸ್ತೋತ್ರಗಳ ಮೂಲಕಾರಣನಾದುದರಿಂದ ಅವುಗಳ ಅಧಿಕೃತ ವಕ್ತಾರನೂ ಆಗಿರುವ, (ಮಹಾವಿಷ್ಣು-ಮಹೇಶ್ವರಮ್) ಸಕಲರ ಪರಮೇಶ್ವರನಾದ ಮಹಾವಿಷ್ಣುವನ್ನು, (ಯಷ್ಟಾರಃ) ಹೇ ಯಜ್ಞಕರ್ತೃಗಳೇ ! ನೀವು, (ಪರಯಾ ಸದ್ಭಕ್ತ್ಯಾ) ಶ್ರೇಷ್ಠವಾದ ಸದ್ಭಕ್ತಿಯಿಂದ, (ಸಮ್ ಆಹ್ವಯತ) ಚೆನ್ನಾಗಿ, ಕ್ರಮಬದ್ಧವಾಗಿ ಆಹ್ವಾನಿಸಿ, ಬರಮಾಡಿ, ಪ್ರಸನ್ನೀಕರಿಸಿರಿ, (ಚ ಇತಿ) ಎಂಬುದಾಗಿ.
ವಿಶ್ವೋ ವಾಯುರಿತೀದಂ ತು ಶ್ರುತ್ಯುಕ್ತಂ ವಾಕ್ಯಮೇವ ವೈ |
ವಿಶ್ವಂ ವಾಯುಮಭೀಷ್ಟಾನಾಂ ದಾನಾದಿನಾ ಹಿ ವಾತಿ ಚ || ೮೭ ||
ಗನ್ಧಯತೀತಿ ದೇವೇಶೋ ಮಾಧವೋ ಮಧುಸೂದನಃ |
ನಾರಾಯಣೋ ಮಹಾವಿಷ್ಣುರ್ವಿಶ್ವಮಿತ್ಯಭಿಧೀಯತೇ || ೮೮ ||
“ವಿಶ್ವೋ ವಾಯುಃ”— ಎಂಬುದಾದರೋ ವೇದೋಕ್ತವಾಕ್ಯವೇ ಆಗಿದೆ. ಅಂತಹ ವಿಶ್ವನಾಮಕನಾದ ವಾಯುವನ್ನು, ಆತನ ಅಭೀಷ್ಟಾದಿಗಳನ್ನು ನೀಡುವುದೇ ಮುಂತಾದವುಗಳ ಮೂಲಕ, ದೇವದೇವನಾದ, ರಮಾಪತಿಯಾದ, ಮಧುರಾಕ್ಷಸಸಂಹಾರಿಯಾದ, ಕ್ಷೀರಸಾಗರಶಯನನಾಗಿ ನಾರಾಯಣನೆನಿಸಿದ, ಮಹಾವಿಷ್ಣುವು ವಾಯುವನ್ನು ಬೀಸುವಂತೆಯೂ, ವಾಯುವಿಗೆ ಸುಗಂಧಾದಿ ಸುವಾಸನೆಗಳನ್ನುಂಟುಮಾಡುವಂತೆಯೂ ಪ್ರೇರಿಸುವುದರಿಂದಾಗಿ, ಮಹಾವಿಷ್ಣುವು “ವಿಶ್ವಮ್” ಎಂದು ಕರೆಯಲ್ಪಟ್ಟಿರುವನು.
(ಆಧಾರ ೨— ಬೃಹತೀಸಹಸ್ರಮ್)
ವಿಶನ್ತಿ ಸಕಲಾ ಅಸ್ಮಿನ್ ಗುಣಾಃ ಕಲ್ಯಾಣಕಾರಿಣಃ |
ಆಧಾರಸ್ತು ಪ್ರವೇಶಾಯ ತೇಷಾಂ ವಿಶ್ವ ಇತೀರಿತಃ || ೮೯ ||
ಜ್ಞಾನಾನನ್ದೌ ಚ ಸೌನ್ದರ್ಯಂ ಭಕ್ತಿರ್ವಾತ್ಸಲ್ಯ ಏವ ಚ |
ಭಕ್ತೇಷ್ವಿತ್ಯಾದಯಃ ಪ್ರೋಕ್ತಾ ಗುಣಾಃ ಕಲ್ಯಾಣದಾಯಕಾಃ || ೯೦ ||
ಜಗತ್ತಿಗೇ ಮಂಗಳವನ್ನುಂಟುಮಾಡುವ, ಜ್ಞಾನ, ಆನಂದ, ಸೌಂದರ್ಯ, ಭಕ್ತಿ, ಭಕ್ತರಲ್ಲಿ ವಾತ್ಸಲ್ಯ— ಇತ್ಯಾದಿ ಕಲ್ಯಾಣಕಾರಿಗಳೆಂದೂ, ಕಲ್ಯಾಣಪ್ರದಾಯಕವೆಂದೂ ಪ್ರೋಕ್ತವಾದ ಸಕಲ ಗುಣಗಳೂ ಯಾವ ಇವನಲ್ಲಿ (ವಿಷ್ಣುವಿನಲ್ಲಿ) ಪ್ರವೇಶಿಸುತ್ತವಾದ್ದರಿಂದಲೂ, ಇವುಗಳ ಪ್ರವೇಶಕ್ಕೆ ವಿಷ್ಣುವು ಆಧಾರನಾಗಿರುವುದರಿಂದಲೂ, ವಿಷ್ಣುವು ವಿಶ್ವನೆನಿಸಿರುವನು.
ವಿಶ್ವಃ ಪೂರ್ಣಸ್ತಥಾ ಸರ್ವಃ ಸಮಸ್ತಶ್ಚಾಭಿಧೀಯತೇ |
ಜಗತ್ ಸಮಸ್ತಂ ವಿಶ್ವಂ ಚ ನಿಖಿಲಂ ತೇನ ಪೂರಿತಮ್ || ೯೧ ||
ಸಮಸ್ತ ಜಗತ್ತು, ಅಶೇಷವಾಗಿ, ಖಿಲ / ಉಳಿಕೆಯಿಲ್ಲದೆ, ವಿಷ್ಣುತತ್ತ್ವದಿಂದ ತುಂಬಲ್ಪಟ್ಟಿರುವುದರಿಂದ, ವಿಷ್ಣುವು ವಿಶ್ವನು, ಪೂರ್ಣನು, ಸರ್ವವೂ, ಸಮಸ್ತವೂ ಅವನೇ ಎನ್ನಲಾಗಿದೆ.
ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ || ೯೨ ||
ಅದೂ ಪೂರ್ಣವೇ. ಇದೂ ಪೂರ್ಣವೇ. ಪೂರ್ಣವಾದ ಆ ಪರಬ್ರಹ್ಮವಸ್ತುವೆನಿಸಿದ ವಿಷ್ಣುವಿನಿಂದ ಪೂರ್ಣವಾದ ಈ ವಿಶ್ವವು ಹೊರಬರುತ್ತದೆ (ಉತ್ ಅಚ್ಯತೇ— ಉತ್ ಉಪಸರ್ಗಪೂರ್ವಕ ಅಚಿ ಗತೌ ಧಾತು). ಆ ಪೂರ್ಣನಾದ ವಿಷ್ಣುವಿನಿಂದ ಈ ಪೂರ್ಣವಾದ ವಿಶ್ವವನ್ನು ಹೊರತಂದಾಗ, ಅಲ್ಲಿ ಮೂಲದಲ್ಲಿ ಉಳಿಯುವ ವಿಷ್ಣುವು ಪೂರ್ಣವೇ ಆಗಿರುತ್ತಾನೆಯೇ ಹೊರತು, ಆತನಲ್ಲಿ ಕಿಂಚಿತ್ತೂ ಕುಂದುಂಟಾಗದು. ಹಾಗಾಗಿಯೇ, ವಿಷ್ಣುವೇ ವಿಶ್ವನು, ವಿಶ್ವವೇ ವಿಷ್ಣುವು ಎನ್ನಲಾಗಿದೆ. “ಸರ್ವಂ ವಿಷ್ಣುಮಯಂ ಜಗತ್”.
ಅವತಾರಾ ಮಹಾವಿಷ್ಣೋಃ ಸರ್ವೇ ಪೂರ್ಣಾಃ ಪ್ರಕೀರ್ತಿತಾಃ |
ಪೂರ್ಣಂ ಚ ತತ್ ಪರಂ ರೂಪಂ ವಿಶ್ವಮಿತ್ಯಭಿಧೀಯತೇ || ೯೩ ||
ಹಾಗಾಗಿಯೇ, ಮಹಾವಿಷ್ಣುವಿನ ಎಲ್ಲಾ ಅವತಾರಗಳೂ ಪೂರ್ಣವೆಂದೇ ಪ್ರಶಂಸಿಸಲ್ಪಟ್ಟಿವೆ. ಆ ಪರಮ ಶ್ರೇಷ್ಠವಾದ, ಪರಿಪೂರ್ಣವೂ, ಜಗದ್ರೂಪವನ್ನು ತಾಳಿದುದೂ ಆದ ಪರಬ್ರಹ್ಮ ವಸ್ತುವಾದ ಮಹಾವಿಷ್ಣುವಿನ ರೂಪವನ್ನೇ “ವಿಶ್ವಮ್ ” ಎಂಬ ಅಭಿಧಾನದಿಂದ / ಹೆಸರಿನಿಂದ ಕರೆಯಲಾಗುತ್ತದೆ.
ವಿಶ್ವನಾಮಾ ಸ ಭಗವಾನ್ಯತಃ ಪೂರ್ಣಗುಣಃ ಪ್ರಭುಃ |
ವಿಶ್ವಂ ವಿಷ್ಣುರನನ್ತಕ|ಲ್ಯಾಣಗುಣಪರಿಪೂರ್ಣಃ || ೯೪ ||
ಆ ಭಗವಂತನಾದ, ಜಗದೊಡೆಯನಾದ, ವಿಶ್ವನಾಮಕನಾದ ವಿಷ್ಣುವು ಪರಿಪೂರ್ಣಗುಣಯುತನು. ಹೀಗೆ ವಿಶ್ವನೆನಿಸಿದ ವಿಷ್ಣುವು ಅನಂತಕಲ್ಯಾಣಗುಣಪರಿಪೂರ್ಣನು— ಕೊನೆಯಿಲ್ಲದಷ್ಟು, ಅಂತವಿಲ್ಲದಷ್ಟು ಸರ್ವಹಿತಕಾರಿಯಾದ ಗುಣಗಳ ಗಣಿಯಾಗಿರುವನು.
ಭಗವದ್ರೂಪವಿಶೇಷಾನ್ ಸರ್ವತ್ರ ಪ್ರೇರಕತಯಾ |
ಪ್ರವೇಶನಾತ್ತು ಪ್ರೋಕ್ತೋ ವೈ ವಿಶ್ವೇ ವಿಶ್ವಮಿತಿ ಪ್ರಭುಃ || ೯೫ ||
ಈ ವಿಶ್ವದಲ್ಲಿ (ವಿಶ್ವೇ), ಎಲ್ಲೆಡೆ ಹಬ್ಬಿರುವ (ಸರ್ವತ್ರ), ಭಗವಂತನ ವಿವಿಧ ವಿಶೇಷ ರೂಪಗಳಾದ ಸಕಲ ಚರಾಚರಗಳನ್ನು (ಭಗವದ್ರೂಪವಿಶೇಷಾನ್), ಪ್ರವೇಶಿಸುವಿಕೆಯಿಂದ (ಪ್ರವೇಶನಾತ್), ಹಾಗೂ ಅವುಗಳನ್ನು ವಿವಿಧ ಚಟುವಟಿಕೆಗಾಗಿ ಪ್ರೇರಿಸುವುದರಿಂದಲೇ (ಪ್ರೇರಕತಯಾ ವೈ), ಜಗದೊಡೆಯನು (ಪ್ರಭುಃ), ವಿಶ್ವನು ಎಂದು (ವಿಶ್ವಮ್ ಇತಿ), ಕರೆಯಲ್ಪಟ್ಟಿರುವನು (ಪ್ರೋಕ್ತಃ).
ವಿಶ್ವಂ ಹರಿಃ ಸರ್ವಮಿದಂ ಪ್ರಸೃಜ್ಯ ಪ್ರವಿಷ್ಟವಾನ್ ತದ್ಧಿ ತದೈವ ತಸ್ಯ |
ತೇಜೋಮಯಂ ವಿಶ್ವಮನನ್ತಮಾದ್ಯಂ ರೂಪಂ ಪರಂ ಶರಣಮಹಂ ಪ್ರಪದ್ಯೇ || ೯೬ ||
ಶ್ರೀಹರಿಯು (ಹರಿಃ), ಈ ಇಡೀ ವಿಶ್ವವನ್ನು (ಇದಂ ಸರ್ವಂ ವಿಶ್ವಂ), ಪ್ರಕೃಷ್ಟವಾಗಿ / ಸುವ್ಯವಸ್ಥಿತವಾಗಿ, ಸಂದರವಾಗಿ ಸೃಜಿಸಿ (ಪ್ರಸೃಜ್ಯ— ಪ್ರಕೃಷ್ಟೇನ ಸೃಷ್ಟ್ವಾ), ಆ ಕೂಡಲೇ ಜಡವಾಗಿದ್ದ ಜಗವನ್ನು (ತದಾ ಏವ ಹಿ ತತ್), ಪ್ರವೇಶಿಸಿದನು (ಪ್ರವಿಷ್ಟವಾನ್). ಹೀಗೆ ಪ್ರವೇಶಿಸಿ ಜಗದ ಜೀವವಾದ, ಮೂಲಚೈತನ್ಯವಾದ ಆ ಶ್ರೀಮನ್ನಾರಾಯಣನ / ಮಹಾವಿಷ್ಣುವಿನ / ಭಗವಂತನ / ಪರಮಾತ್ಮನ (ತಸ್ಯ), ತೇಜೋಮಯವಾಗಿ ಬೆಳಗುವ ದೇದೀಪ್ಯಮಾನವಾದ (ತೇಜೋಮಯಂ), ಸರ್ವ ಜಗದ ಆದಿಮವೂ ಅಂತ್ಯವಿಲ್ಲದೆ ಅನಂತವೂ ಆದ (ಆದ್ಯಮ್ ಅನನ್ತಂ), ವಿರಾಡ್ರೂಪಿಯಾಗಿ ವಿಶ್ವವೇ ತಾನಾಗಿ “ವಿಶ್ವಮ್” ಎನಿಸಿದ (ವಿಶ್ವಂ), ಶ್ರೇಷ್ಠತಮವಾದ ಭಗವದ್ರೂಪವನ್ನು, ವಿಶ್ವರೂಪವನ್ನು (ಪರಂ ರೂಪಂ), ನಾನು (ಅಹಂ), ಶರಣುಹೊಂದುತ್ತೇನೆ (ಶರಣಂ ಪ್ರಪದ್ಯೇ).
ಯದೋಷಧೀಭಿಃ ಪುರುಷಾನ್ ಪಶೂಂಶ್ಚ (ಪಶೂಗ್ ಶ್ಚ)
ವಿವೇಶ ಭೂತಾನಿ ಚರಾಚರಾಣಿ |
ಯದೇಕಮವ್ಯಕ್ತಮನನ್ತರೂಪಂ
ವಿಶ್ವಂ ಪುರಾಣಂ ತಮಸಃ ಪರಸ್ತಾತ್ || ೯೭ ||
ಯಾವ ಏಕಮಾತ್ರನೂ ಅದ್ವಿತೀಯನೂ (ಯದ್ ಏಕಮ್), ಅವ್ಯಕ್ತನೂ / ವ್ಯಕ್ತವಾಗಿ ಕಾಣದವನೂ (ಅವ್ಯಕ್ತಮ್), ಅಂತ್ಯವಿಲ್ಲದಷ್ಟು ಅಸಂಖ್ಯರೂಪಗಳಾಗಿ, ನಾಶವಿಲ್ಲದ ಸ್ವರೂಪನಾದ (ಅನಂತರೂಪಂ), ತುಂಬಾ ಹಳೆಯವನೂ ಚಿರನವೀನನೂ ಆಗಿ ಪುರಾಣ (ಪುರಾ ಅಪಿ ನವಮ್ ಇತಿ ಪುರಾಣಮ್— ಹಳೆಯದಾದರೂ ಮತ್ತೆ ಹೊಸದಾಗಿ ಮರುಕಳಿಸುವಂಥದ್ದು, ಕಾಲಚಕ್ರದಂತೆ)ಪುರುಷನೆನಿಸಿದ (ಪುರಾಣಂ), ಕತ್ತಲೆಯಿಂದ ಆಚೆಯ ಬೆಳಕಿನ / ಜ್ಯೋತಿಯ ಸ್ವರೂಪನಾದ ಮಹಾವಿಷ್ಣುವು / ಪರಮೇಶ್ವರ ಸದಾಶಿವನು / ಪರಾತ್ಪರ ಪರಬ್ರಹ್ಮನು / ಪರಮಾತ್ಮಾ ಭಗವಂತನು / ಆದಿಶಕ್ತಿಸ್ವರೂಪನು (ತಮಸಃ ಪರಸ್ತಾತ್),
ಓಷಧಿ-ವನಸ್ಪತಿಗಳಿಂದ ಸಹಿತನಾಗಿ (ಓಷಧೀಭಿಃ), ವಿವೇಕವುಳ್ಳ ಮಾನವರನ್ನೂ (ಪುರುಷಾನ್), ಪ್ರಾಣಿಮಾತ್ರರನ್ನೂ (ಪಶೂನ್ ಚ), ಸಕಲ ಚರ-ಅಚರ ಇರುವುದೆಲ್ಲವನ್ನೂ (ಚರಾಚರಾಣಿ ಭೂತಾನಿ), ಕೊನೆಗೆ ಇಡಿಯ ವಿಶ್ವವನ್ನೂ ವ್ಯಾಪಿಸಿ, ಅದನ್ನು ಪ್ರವೇಶಿಸಿ (ವಿಶ್ವಂ ವಿವೇಶ), “ವಿಶ್ವಮ್” ಎನಿಸಿರುವನು .
ವಿಶಾಂ ವಾನಾತ್ ಪ್ರಜಾನಾಂ ವಾ ಜ್ಞಾನಾದ್ವಾ ಗಮನಾತ್ತಥಾ |
ಪ್ರಜಾಭ್ಯೋ ಜ್ಞಾನದೋ ವಿಶ್ವಃ ಕರ್ಮಣ್ಯಪಿ ಪ್ರಚೋದಕಃ || ೯೮ ||
“ವಿಶಾಂ ಪ್ರಜಾನಾಂ ವಾ, ವಾನಾತ್ ಜ್ಞಾನಾತ್ ಗತಿ-ಕರ್ಮಪ್ರಚೋದನಾತ್ ವಾ ವಿಶ್ವಃ, ತಸ್ಯ ರೂಪಂ ವಿಶ್ವಮ್” -- ಸಮಸ್ತ ಜೀವರ ಜ್ಞಾನವಿರುವಿಕೆ, ಜೀವರಿಗೆ ಜ್ಞಾನಪ್ರದಾನಿಸುವಿಕೆ, ಜೀವರ ಚಲನೆ ಹಾಗೂ ಕರ್ಮಗಳಿಗೆ ಪ್ರಚೋದಿಸುವಿಕೆ -- ಇವುಗಳಿಂದ ವಿಷ್ಣುವು ವಿಶ್ವನೆನಿಸಿದನು. ಅಂತಹ ಭಗವದ್ರೂಪವೇ “ವಿಶ್ವಮ್”. ರೂಪಶಬ್ದವು ನಪುಂಸಕಲಿಂಗವಾದುದರಿಂದ “ವಿಶ್ವಂ ರೂಪಂ” ಎಂಬುದರಿಂದ ನಪುಂಸಕಲಿಂಗರೂಪದ ಪ್ರಯೋಗವಿದೆ. (ಭಗವಂತನು ನಿರಾಕಾರ, ಲಿಂಗಾತೀತ ಪರಬ್ರಹ್ಮವಸ್ತುವೆಂಬ ಮತದಲ್ಲೂ, ತದ್ವಾಚ್ಯವೆಂಬರ್ಥದಲ್ಲೂ ನಪುಂಸಕಲಿಂಗದ ಪ್ರಯೋಗವಾಗುತ್ತದೆ.)
ಬಹಿಃಪ್ರಜ್ಞೋ ವಿಭುರ್ವಿಶ್ವಃ ಪ್ರೇರಕೋ ಜಾಗ್ರತಃ ಸ್ಥಿತೇಃ |
ವೈಶ್ವಾನರಂ ಮಹಾವಿಷ್ಣೋ|ರತ್ರ ರೂಪಂ ವಿವಕ್ಷಿತಮ್ || ೯೯ ||
ಜೀವಿಗಳ ಜಾಗ್ರತ್ / ಎಚ್ಚರದ ಅವಸ್ಥೆಯ ಪ್ರೇರಕನೂ, ಜಗನ್ನಾಥನೂ, ಜೀವಿಗಳ ಹೊರಮುಖ / ಬಾಹ್ಯ ವ್ಯಾವಹಾರಿಕ ಜಗತ್ತಿನ ಪ್ರಜ್ಞೆಗೆ ಕಾರಣನೂ ಆದವನು ವಿಶ್ವನಾಮಕ ವಿಷ್ಣುವು. ಇಲ್ಲಿ, ವಿಷ್ಣುಸಹಸ್ರನಾಮದ ಮೊದಲ ನಾಮವಾದ “ವಿಶ್ವಮ್”ನಲ್ಲಿ ಮಹಾವಿಷ್ಣುವಿನ ಈ ವೈಶ್ವಾನರರೂಪವು (ವಿಶ್ವದಲ್ಲಿರುವ ನರರ ಅಂತರ್ಗತನು, ಜಾಗ್ರದವಸ್ಥಾಕಾರಣನು ವೈಶ್ವಾನರನು) ವಿಶ್ವಮ್ ಎಂದು ವಿವಕ್ಷಿತವಾಗಿದೆ / ಹೇಳಬಯಸಲ್ಪಟ್ಟಿದೆ. (ವಕ್ತುಮ್ ಇಚ್ಛಾ ವಿವಕ್ಷಾ— ಹೇಳಲು ಇಚ್ಛೆಯೇ ವಿವಕ್ಷೆಯು).
ಉತ್ಪನ್ನಸ್ಯಾಪಿ ಯತ್ ಸತ್ತಾ ಹರೇಸ್ತತ್ ಸ ಇತೀರ್ಯತೇ |
ಹರೇರ್ವಿಶ್ವಂ ಭಿನ್ನಮಪಿ ಪರಮೋऽಸೌ ಯತೋ ವಿಭುಃ || ೧೦೦ ||
ಯಾವ ಈ ಸಮಸ್ತ ಸತ್ತೆ / ಸೃಷ್ಟಿಯು ಉತ್ಪನ್ನವಾಗಿದೆಯೋ, ಅದೆಲ್ಲವೂ ಶ್ರೀಹರಿಯ ಕಾರಣದಿಂದಲೇ / ಕಾರುಣ್ಯ / ಪ್ರೇರಣೆಯಿಂದಲೇ, ಚತುರ್ಮುಖ ಬ್ರಹ್ಮಾ, ದಕ್ಷಾದಿ ಪ್ರಜಾಪತಿಗಳು, ಸ್ವಾಯಂಭುವಾದಿ ೧೪ ಮನುಗಳು, ಕಶ್ಯಪಾದಿ ಸಪ್ತರ್ಷಿಗಳು— ಇವರ ಮೂಲಕವೇ ಸೃಜಿಸಲ್ಪಟ್ಟಿತು. ಹಾಗಾಗಿ, ಹೀಗೆ ಸೃಷ್ಟವಾದ ವಿಶ್ವವು ಹರಿಗಿಂತ ಭಿನ್ನವಾಗಿ ತೋರಿದರೂ, ಯಾವ ಇದರ ಪರಮಪ್ರಭುವು ಹರಿಯೇ ಆಗಿರುವನಾದ್ದರಿಂದ ಆತನೂ “ವಿಶ್ವಮ್” (=ಸರ್ವಮ್) / ಎಲ್ಲವೂ ಆತನೇ ಎನಿಸಿದನು.
Comments
Post a Comment