ಶ್ರೀಗುರುಕವಚಸ್ತೋತ್ರಮ್
ಶ್ರೀಗುರುಕವಚಸ್ತೋತ್ರಮ್
ಧ್ಯಾನಮ್
(ಶಿಖರಿಣೀವೃತ್ತಮ್)
ಸ್ಮರೇದ್ದಿವ್ಯೌ ಪಾದೌ ಬಹುವಿರಲಪುಣ್ಯೌ ಪ್ರತಿದಿನಂ
ನರೋ ದೇವೋ ರಕ್ಷೋ ನತಜನಸುದೀಪ್ತೌ ತಿಮಿರಹೌ |
ಮನಶ್ಶಾರೀರಾದಿಪ್ರಭವಸಕಲಾಘ:ಪ್ರಶಮನೌ
ಗುರೋರ್ಬ್ರಹ್ಮಾನಂದೌ ನಿಖಿಲದುರಿತಾರ್ತಿಪ್ರಮಥನೌ ||೧||
(ಶಾರ್ದೂಲವಿಕ್ರೀಡಿತವೃತ್ತಮ್)
ವಂದೇ ಲೋಕಗುರುಂ ಹರಿಂ ಸುರಗುರುಂ ವ್ಯಾಸಂ ಚ ದತ್ತಪ್ರಭುಂ
ವಂದೇ ಜ್ಞಾನಗುರುಂ ಹರಂ ಹಿ ಚ ನಮ: ಶ್ರೀದಕ್ಷಿಣಾಮೂರ್ತಯೇ |
ವಂದೇ ಶಂಕರರೂಪಿಣಂ ಪ್ರತಿದಿನಂ ಚಾದ್ವೈತಮೂರ್ತಿಂ ಮುದಾ
ವಂದೇ ಸರ್ವಗುರೂನನಾದಿಗುರುರೂಪಾಂ ಮಾತೃರೂಪಾಂ ಶಿವಾಮ್ ||೨||
ಇತಿ ಧ್ಯಾನಮ್
(ಅನುಷ್ಟುಭ್ ವೃತ್ತಮ್)
ಕೃಪಾ ವೈ ಸದ್ಗುರೋರ್ನಾಂತಮೇತಿ ಲೋಕೇऽಪರೇऽಪಿ ಚ |
ಗುರೋ: ಕೃಪಾವಿಶೇಷೇಣ ಜನ್ಮ ಸಾಫಲ್ಯತಾಂ ವ್ರಜೇತ್ ||೧||
ನೋ ಚೇನ್ನಾಸ್ತಿ ಫಲಂ ನೄಣಾಂ ಪರಿಪೂರ್ಣೇನ ಸಿದ್ಧ್ಯತಿ |
ಯತ್ಕಿಂಚಿದಪಿ ಕಾರ್ಯಂ ವೈ ತದರ್ಥಂ ಗುರುಪೂಜನಮ್ ||೨||
ಕುರ್ಯಾತ್ಸರ್ವಸಮಾರಂಭೇ ಗಣೇಶಾರ್ಚನಪೂರ್ವಕಮ್ |
ಗುರುರ್ದದಾತಿ ಸಂಸಿದ್ಧಿಂ ಗಣೇಶೋऽವಿಘ್ನತಾಂ ಚ ನ: ||೩||
ಶೀರ್ಷಂ ಮೇ ಪಾತು ಶ್ರೀಕೃಷ್ಣೋ ಲಲಾಟಂ ಚ ತ್ರಿನೇತ್ರಕ: |
ದೃಶೌ ದತ್ತ: ಶ್ರುತೀ ದೇವ|ಗುರು: ಪಾತು ಬೃಹಸ್ಪತಿ: ||೪||
ಘ್ರಾಣಂ ಚಾವತು ಶ್ರೀದಕ್ಷಿ|ಣಾಮೂರ್ತಿರ್ವಾಸನಾಪಹ: |
ಆನನಂ ಶಂಕರಾಚಾರ್ಯೋ ಜಿಹ್ವಾಂ ಚ ಬಾದರಾಯಣ: ||೫||
ದಂತಾನ್ ರಕ್ಷತು ಧರ್ಮಾತ್ಮಾ ಯಮ: ಕಂಠಂ ಸುಮಧ್ವಕ: |
ಗ್ರೀವಾಮವತು ರಾಮಾನು|ಜ: ಸ್ಕಂಧೌ ಬಸವೇಶ್ವರ: ||೬||
ಭುಜೌ ತು ರಾಮಕೃಷ್ಣಶ್ಚ ಕರೌ ವಿವೇಕರೂಪವಾನ್ |
ಉರ: ಪಾತು ಚ ವಿಶ್ವೇಶೋ ಹೃದಯಂ ರಾಘವೇಶ್ವರ: ||೭||
ಉದರಂ ನಾಥರೂಪಶ್ಚ ಜಠರಂ ಜಾತವೇದಕ: |
ಭಾರ್ಗವಸ್ತು ಕಟೀ ಪಾತು ಗುಹ್ಯಂ ರಕ್ಷತು ಸದ್ಗುರು: ||೮||
ಮೇರುದಂಡಂ ಚ ಚೈತನ್ಯೋ ಮೂಲಾಧಾರಂ ವಿನಾಯಕ: |
ನಿತ್ಯಾನಂದಶ್ಚ ಪಾತೂರೂ ಬ್ರಹ್ಮಾನಂದಶ್ಚ ಜಾನುನೀ ||೯||
ಯೋಗಾನಂದ: ಪಾತು ಜಂಘೇ ಗುಲ್ಫೌ ಪಾತು ಪ್ರಜಾಪಿತ: |
ಚರಣೌ ನಾರದ: ಪಾತು ನಾರಮಾರ್ಗಪ್ರದರ್ಶಕ: ||೧೦||
ರಾಘವೇಂದ್ರೋ ಹೃಷೀಕಾಣಿ ದೇವೇಂದ್ರೋ ಪಾತು ಮೇ ಮನ: |
ಬುದ್ಧೀ: ಪಾತು ಚ ಸಂಬುದ್ಧೋ ಧಿಯೋ ಯೋ ನ: ಪ್ರಚೋದಯಾತ್ ||೧೧||
ಚಿತ್ತಾನಿ ಚಿನ್ಮಯ: ಪಾತು ಶಿಷ್ಯಚಿತ್ತಾಪಹಾರಕ: |
ಅಹಂತತ್ತ್ವಂ ಬ್ರಹ್ಮತತ್ತ್ವೇ ನಿಯೋಜಯತು ಕೇಶವ: ||೧೨||
ಆತ್ಮಾನಾತ್ಮವಿವೇಕಂ ಚ ಬ್ರಹ್ಮಾತ್ಮೈಕ್ಯಂ ದದಾತು ನ: |
ಪ್ರಜ್ಞಾನಮಾತ್ಮಭಾವಂ ತತ್ತ್ವಮಸೀತಿ ಪ್ರಬೋಧ ಮೇ ||೧೩||
ಇತ್ಥಂ ಪ್ರಕಲ್ಪ್ಯತಾಂ ರಕ್ಷಾಕವಚಂ ಧಾರ್ಯತಾಂ ನರೈ: |
ಗುರೋರಮಿತರಕ್ಷಾರ್ಥಂ ಮಹಾಪ್ರಭಾವಸಂಯುತಮ್ ||೧೪||
ಸಕಲೇಷ್ಟಪ್ರದಂ ದಿವ್ಯಂ ನಿತ್ಯಂ ಭಕ್ತಿಸಮನ್ವಿತೈ: |
ಆಯುರಾರೋಗ್ಯಮೈಶ್ವರ್ಯಂ ಮನ:ಶಾಂತಿಂ ಚ ಯಚ್ಛತಿ ||೧೫||
(ಗಾಯತ್ರೀಚ್ಛಂದ:)
ತತ್ತ್ರಿಮೂರ್ತಿಸ್ವರೂಪಂ ವೈ ಸರ್ವಾರ್ಥದಂ ಚ ಧೀಮಹಿ |
ತನ್ನೋ ಗುರು: ಪ್ರಚೋದಯಾತ್ ||೧೬||
ಇತಿ ಶ್ರೀಸದ್ಗುರುಕೃಪಯಾ ದಂಬೆಕೃಷ್ಣಮೂರ್ತಿವಿರಚಿತಮಿದಂ ಶ್ರೀಗುರುಕವಚಸ್ತೋತ್ರಂ ಸದ್ಗುರುಚರಣತಲೇ ಸಮರ್ಪಿತಮಸ್ತು ||
|| ಹರೇ ರಾಮ ||
೬. ಶ್ರೀಗುರುಕವಚಸ್ತೋತ್ರಮ್
ಧ್ಯಾನಮ್
(ಅತ್ಯಷ್ಟಿಶ್ಛನ್ದೋಜಾತಂ ಶಿಖರಿಣೀವೃತ್ತಮ್; ಸಪ್ತದಶಾಕ್ಷರಾವೃತ್ತಿಃ— "ರಸೈರುದ್ರೈಶ್ಛಿನ್ನಾ ಯಮನಸಭಲಾಗಃ ಶಿಖರಿಣೀ")
ಸ್ಮರೇದ್ದಿವ್ಯೌ ಪಾದೌ ಬಹುವಿರಲಪುಣ್ಯೌ ಪ್ರತಿದಿನಂ
ನರೋ ದೇವೋ ರಕ್ಷೋ ನತಜನಸುದೀಪ್ತೌ ತಿಮಿರಹೌ |
ಮನಶ್ಶಾರೀರಾದಿಪ್ರಭವಸಕಲಾಘಃಪ್ರಶಮನೌ
ಗುರೋರ್ಬ್ರಹ್ಮಾನಂದೌ ನಿಖಿಲದುರಿತಾರ್ತಿಪ್ರಮಥನೌ ||೧||
(ನರಃ) ಮನುಷ್ಯನಾದವನೂ, (ದೇವಃ) ದೇವತೆಗಳೂ, (ರಕ್ಷಃ) ರಾಕ್ಷಸರೂ ಸಹ, (ಪ್ರತಿದಿನಂ) ಪ್ರತಿದಿನವೂ, (ಬಹುವಿರಲಪುಣ್ಯೌ) ಬಹಳ ಅಪರೂಪದ ಪುಣ್ಯವಿಶೇಷಮಾತ್ರದಿಂದ ಪ್ರಾಪ್ತವಾಗುವಂತಹ, (ನತ-ಜನ-ಸುದೀಪ್ತೌ) ನಮಸ್ಕರಿಸುವ ಜನರ ಅಜ್ಞಾನಾಂಧಕಾರವನ್ನು ನಾಶಮಾಡಿ ಜ್ಞಾನದೀಪ್ತಿಯನ್ನು ಬೆಳಗಿಸುವ, (ಮನಃ-ಶಾರೀರಾದಿ-ಪ್ರಭವ-ಸಕಲ-ಅಘಃ-ಪ್ರಶಮನೌ) ಮನಸ್ಸು-ಶರೀರಗಳಿಂದಾದ ಎಲ್ಲ ಪಾಪವನ್ನು ಪರಿಹರಿಸಬಲ್ಲ, (ಬ್ರಹ್ಮಾನಂದೌ) ಬ್ರಹ್ಮಾನಂದವನ್ನುಂಟುಮಾಡುವ, (ನಿಖಿಲ-ದುರಿತ-ಅರ್ತಿ-ಪ್ರಶಮನೌ) ಎಲ್ಲ ಪಾಪ-ಕಷ್ಟ-ಸಂಕಟಗಳನ್ನು ನಾಶಮಾಡುವಂಥ, (ಗುರೋಃ ದಿವ್ಯೌ ಪಾದೌ) ಗುರುವಿನ ದಿವ್ಯವಾದ ಪಾದಕಮಲಗಳನ್ನು, (ಸ್ಮರೇತ್) ಸದಾ ಸ್ಮರಿಸುತ್ತಿರಬೇಕು.
(ಅತಿಧೃತಿಶ್ಛನ್ದೋಜಾತಂ ಶಾರ್ದೂಲವಿಕ್ರೀಡಿತವೃತ್ತಮ್; ನವದಶಾಕ್ಷರಾ ವೃತ್ತಿಃ; "ಸೂರ್ಯಾಶ್ವೈರ್ಮಸಜಸ್ತತಾಃ ಸಗುರವಃ ಶಾರ್ದೂಲವಿಕ್ರೀಡಿತಮ್")
ವಂದೇ ಲೋಕಗುರುಂ ಹರಿಂ ಸುರಗುರುಂ ವ್ಯಾಸಂ ಚ ದತ್ತಪ್ರಭುಂ
ವಂದೇ ಜ್ಞಾನಗುರುಂ ಹರಂ ಹಿ ಚ ನಮಃ ಶ್ರೀದಕ್ಷಿಣಾಮೂರ್ತಯೇ |
ವಂದೇ ಶಂಕರರೂಪಿಣಂ ಪ್ರತಿದಿನಂ ಚಾದ್ವೈತಮೂರ್ತಿಂ ಮುದಾ
ವಂದೇ ಸರ್ವಗುರೂನನಾದಿಗುರುರೂಪಾಂ ಮಾತೃರೂಪಾಂ ಶಿವಾಮ್ ||೨||
(ಲೋಕಗುರುಂ ಹರಿಂ) ಜಗದ್ಗುರುವಾದ ಶ್ರೀಕೃಷ್ಣನನ್ನೂ, (ಸುರಗುರುಂ) ದೇವಗುರುವಾದ ಬೃಹಸ್ಪತಿಯನ್ನೂ, (ವ್ಯಾಸಂ ಚ) ಭಗವಾನ್ ವೇದವ್ಯಾಸರನ್ನೂ, ಹಾಗೆಯೇ, (ದತ್ತಪ್ರಭುಂ) ಭಗವಾನ್ ದತ್ತಾತ್ರೇಯನನ್ನೂ, (ವನ್ದೇ) ವಂದಿಸುತ್ತೇನೆ. (ಚ) ಹಾಗೆಯೇ, (ಶ್ರೀದಕ್ಷಿಣಾಮೂರ್ತಯೇ) ದಕ್ಷಿಣಾಮೂರ್ತಿಸ್ವರೂಪನಿಗೆ, (ನಮಃ) ನಮಿಸುತ್ತೇನೆ. (ಜ್ಞಾನಗುರುಂ ಹಿ) ಜ್ಞಾನಗುರುವೇ ಆದ, (ಹರಂ) ಶಂಭುಸ್ವರೂಪನನ್ನೂ, (ವನ್ದೇ) ವಂದಿಸುತ್ತೇನೆ. ("ಆರೋಗ್ಯಂ ಭಾಸ್ಕರಾದಿಚ್ಛೇತ್, ಶ್ರಿಯಮಿಚ್ಛೇತ್ ಹುತಾಶನಾತ್ | ಜ್ಞಾನಂ ಮಹೇಶ್ವರಾದಿಚ್ಛೇತ್, ಮೋಕ್ಷಮಿಚ್ಛೇತ್ ಜನಾರ್ದನಾತ್ ||"— ಆರೋಗ್ಯವನ್ನು ಸೂರ್ಯನಿಂದಲೂ, ಸಂಪತ್ತನ್ನು ಅಗ್ನಿಯಿಂದಲೂ, ಜ್ಞಾನವನ್ನು ಮಹೇಶ್ವರನಿಂದಲೂ, ಮೋಕ್ಷವನ್ನು ಜನಾರ್ದನನಿಂದಲೂ ಬೇಡಬೇಕು.) (ಅದ್ವೈತಮೂರ್ತಿಂ) ಅದ್ವೈತದ ಮೂರ್ತರೂಪರಾದ, (ಶಂ-ಕರರೂಪಿಣಂ) ಶ್ರೀ ಶಂಕರಭಗವತ್ಪಾದಾಚಾರ್ಯರನ್ನೂ, (ಪ್ರತಿದಿನಂ) ದಿನದಿನವೂ, (ಮುದಾ) ಸಂತೋಷದಿಂದ, (ವನ್ದೇ) ವಂದಿಸುತ್ತೇನೆ. (ಸರ್ವಗುರೂನ್) ಸಮಸ್ತಗುರುಪರಂಪರೆಯನ್ನೂ, (ಅನಾದಿಗುರುರೂಪಾಂ) ಅನಾದಿಗುರುರೂಪಳೂ, (ಮಾತೃರೂಪಾಂ) ಮಾತೃರೂಪಳೂ ಆದ, (ಶಿವಾಂ) ಶಿವೆಯನ್ನೂ, (ವನ್ದೇ) ವಂದಿಸುತ್ತೇನೆ.
ಇತಿ ಧ್ಯಾನಮ್
(ಅನುಷ್ಟುಭ್ ವೃತ್ತಮ್)
ಕೃಪಾ ವೈ ಸದ್ಗುರೋರ್ನಾಂತಮೇತಿ ಲೋಕೇऽಪರೇऽಪಿ ಚ |
ಗುರೋಃ ಕೃಪಾವಿಶೇಷೇಣ ಜನ್ಮ ಸಾಫಲ್ಯತಾಂ ವ್ರಜೇತ್ ||೧||
(ಸದ್ಗುರೋಃ) ಸದ್ಗುರುವಿನ, (ಕೃಪಾ, ಲೋಕೇ ಅಪರೇ ಅಪಿ ಚ ನ ಅಂತಮ್ ಏತಿ ವೈ) ಕೃಪಾಕಟಾಕ್ಷಕ್ಕೆ ಇಹಲೋಕದಲ್ಲೂ, ಪರಲೋಕದಲ್ಲೂ ನಿಶ್ಚಯವಾಗಿಯೂ ಎಣೆಯಿಲ್ಲ. (ಗುರೋಃ ಕೃಪಾವಿಶೇಷೇಣ) ಗುರುವಿನ ಕೃಪಾಮಹಿಮೆಯಿಂದ, (ಜನ್ಮ) ಜನ್ಮವೇ, (ಸಾಫಲ್ಯತಾಂ ವ್ರಜೇತ್) ಸಫಲವಾಗುವುದು.
ನೋ ಚೇನ್ನಾಸ್ತಿ ಫಲಂ ನೄಣಾಂ ಪರಿಪೂರ್ಣೇನ ಸಿದ್ಧ್ಯತಿ |
ಯತ್ಕಿಂಚಿದಪಿ ಕಾರ್ಯಂ ವೈ, ತದರ್ಥಂ ಗುರುಪೂಜನಮ್ ||೨||
(ನೋ ಚೇತ್) ಗುರುಕೃಪೆಯಿಲ್ಲವಾದರೆ, (ಫಲಂ ನ ಅಸ್ತಿ) ಫಲವಿಲ್ಲ. (ನೄಣಾಂ) ಮನುಜರ, (ಯತ್ ಕಿಂಚಿತ್ ಕಾರ್ಯಮ್ ಅಪಿ) ಯಾವುದೇ ಕಾರ್ಯವೂ, (ಪರಿಪೂರ್ಣೇನ ನ ಸಿದ್ಧ್ಯತಿ) ಪರಿಪೂರ್ಣವಾಗಿ ಸಿದ್ಧಿಸದು. (ತದರ್ಥಂ ವೈ) ಹಾಗಾಗಿಯೇ, (ಗುರುಪೂಜನಂ) ಗುರುಪೂಜೆಯು, (ಕಾರ್ಯಂ) ಕರ್ತವ್ಯವಾಗಿರುವುದು.
ಕುರ್ಯಾತ್ಸರ್ವಸಮಾರಂಭಾನ್ ಗಣೇಶಾರ್ಚನಪೂರ್ವಕಮ್ |
ಗುರುರ್ದದಾತಿ ಸಂಸಿದ್ಧಿಂ ಗಣೇಶೋऽವಿಘ್ನತಾಂ ಚ ನಃ ||೩||
(ಸರ್ವ-ಸಮಾರಂಭಾನ್)ಎಲ್ಲ ಕಾರ್ಯಗಳ ಆರಂಭವನ್ನು, (ಗಣೇಶಾರ್ಚನಪೂರ್ವಕಮ್) ಗಣೇಶನ ಅರ್ಚನೆಯ ಸಹಿತ ಗುರುಪೂಜೆಯೊಂದಿಗೆ ಮಾಡಬೇಕು. (ಗಣೇಶಃ) ದೇವ ಗಣೇಶನು, (ನಃ) ನಮ್ಮ ಕಾರ್ಯಕ್ಕೆ ಅವಿಘ್ನತೆಯನ್ನೂ, (ಗುರುಃ ಸಂಸಿದ್ಧಿಂ ಚ)ಗುರುವು ಪೂರ್ಣಫಲಸಿದ್ಧಿಯನ್ನೂ, (ದದಾತಿ) ಉಂಟುಮಾಡುವನು.
ಶೀರ್ಷಂ ಮೇ ಪಾತು ಶ್ರೀಕೃಷ್ಣೋ ಲಲಾಟಂ ಚ ತ್ರಿನೇತ್ರಕಃ |
ದೃಶೌ ದತ್ತಃ ಶ್ರುತೀ ದೇವ|ಗುರುಃ ಪಾತು ಬೃಹಸ್ಪತಿಃ ||೪||
(ಶ್ರೀಕೃಷ್ಣಃ) ಸುಮಾರು ೫,೦೦೦ ವರ್ಷಗಳ ಹಿಂದೆ ಗೀತೋಪದೇಶಕನಾಗಿ ಪ್ರಥಮ ಜಗದ್ಗುರುವಾದ ಶ್ರೀಕೃಷ್ಣನು (ಮೇ ಶೀರ್ಷಂ ಪಾತು)ನನ್ನ ಶಿರವನ್ನು ರಕ್ಷಿಸಲಿ. (ಚ) ಹಾಗೆಯೇ, (ತ್ರಿ-ನೇತ್ರ-ಕಃ) "ಜ್ಞಾನಂ ಮಹೇಶ್ವರಾದಿಚ್ಛೇತ್ " ಎಂಬಂತೆ ಜ್ಞಾನಗುರುವಾದ ಮುಕ್ಕಣ್ಣ ಹರನು, (ಲಲಾಟಂ) ಹಣೆಯನ್ನು ಕಾಪಾಡಲಿ. (ದತ್ತಃ) ತ್ರಿಮೂರ್ತಿಸ್ವರೂಪನೂ ಪ್ರಥಮ ಅವಧೂತನೂ ಆದ ಭಗವಾನ್ ದತ್ತಾತ್ರೇಯ ಸದ್ಗುರುವು, (ದೃಶೌ) ಕಣ್ಣುಗಳನ್ನು ರಕ್ಷಿಸಲಿ. (ದೇವಗುರುಃ ಬೃಹಸ್ಪತಿಃ) ಕಿವಿಯಿಂದ ಕೇಳಿಯೇ ಕಲಿಯುವಂಥ ವೇದಗಳ ಅಭಿಮಾನಿಯಾದ ದೇವಗುರು ಬೃಹಸ್ಪತಿಯು, (ಶ್ರುತೀ ಪಾತು) ನಮ್ಮ ಕಿವಿಗಳೆರಡನ್ನು ಪರಿಪಾಲಿಸಲಿ.
ಘ್ರಾಣಂ ಚಾವತು ಶ್ರೀದಕ್ಷಿ|ಣಾಮೂರ್ತಿರ್ವಾಸನಾಪಹಃ |
ಆನನಂ ಶಂಕರಾಚಾರ್ಯೋ ಜಿಹ್ವಾಂ ಚ ಬಾದರಾಯಣಃ ||೫||
(ಚ) ಅಂತೆಯೇ, (ವಾಸನಾಪಹಃ) ನಮ್ಮ ಪೂರ್ವಕರ್ಮವಾಸನೆಗಳನ್ನೆಲ್ಲ ನಿವಾರಿಸಬಲ್ಲ, (ಶ್ರೀದಕ್ಷಿಣಾಮೂರ್ತಿಃ) ಶ್ರೀದಕ್ಷಿಣಾಮೂರ್ತಿಯು, (ಘ್ರಾಣಮ್ ಅವತು) ನಮ್ಮ ನಾಸಿಕವನ್ನು ಸಂರಕ್ಷಿಸಲಿ. (ಶಂಕರಾಚಾರ್ಯಃ) "ಬ್ರಾಹ್ಮಣೋऽಸ್ಯ ಮುಖಮಾಸೀತ್ (ಬ್ರಾಹ್ಮಣನು ಭಗವಂತನ ಮುಖ / ಬಾಯಿಯು)" ಎಂಬ ವೇದವಾಣಿಯನ್ನು ಸಾರ್ಥಕಪಡಿಸಿದ ಜ್ಞಾನಪ್ರಧಾನವಾದ ಅದ್ವೈತಸಿದ್ಧಾಂತದ ಪ್ರವರ್ತಕರಾದ ಆದಿಶಂಕರ ಭಗವತ್ಪಾದಾಚಾರ್ಯರು, (ಆನನಂ) ನಮ್ಮ ಮುಖವನ್ನು ರಕ್ಷಿಸಲಿ. (ಚ) ಮತ್ತು, (ಜಿಹ್ವಾಂ ಬಾದರಾಯಣಃ) ನಾಲಿಗೆಯನ್ನು ಸದಾ ವೇದವಾಣಿಯನ್ನು ನುಡಿಯುವಂತೆ ಮಾಡುವ ಬದರಿಕಾಶ್ರಮವಾಸಿಗಳಾಗಿ ಬಾದರಾಯಣರೆನಿಸಿದ ("ಬದರ್ಯಾಂ ಅಯನಂ ಗೃಹಂ ಯಸ್ಯ ಸಃ") ಭಗವಾನ್ ವೇದವ್ಯಾಸರು ಸಂರಕ್ಷಿಸಲಿ.
ದಂತಾನ್ ರಕ್ಷತು ಧರ್ಮಾತ್ಮಾ ಯಮಃ ಕಂಠಂ ಸುಮಧ್ವಕಃ |
ಗ್ರೀವಾಮವತು ರಾಮಾನು|ಜಃ ಸ್ಕಂಧೌ ಬಸವೇಶ್ವರಃ ||೬||
(ಧರ್ಮಾತ್ಮಾ ಯಮಃ) ಧರ್ಮಾಧರ್ಮವಿಚಕ್ಷಣನಾದ, ಸಾಕ್ಷಾತ್ ಮೃತ್ಯುವಿನ ದವಡೆ (ದಂತಪಂಕ್ತಿ)ಯೇ ಆದ ಯಮಧರ್ಮನು, (ದನ್ತಾನ್ ರಕ್ಷತು) ನಮ್ಮ ಹಲ್ಲುಗಳನ್ನು ಕಾಪಾಡಲಿ. (ಸುಮಧ್ವಕಃ ಕಂಠಂ) ಸುಮಧುರವಾಗಿ ನುಡಿಯುವಂತೆ ನಮ್ಮ ಕಂಠಸಿರಿಯನ್ನು ಭಕ್ತಿಪ್ರಧಾನವಾದ ದ್ವೈತಸಿದ್ಧಾಂತದ ಪ್ರವರ್ತಕರಾದ ಪೂಜ್ಯ ಮಧ್ವಾಚಾರ್ಯರು ಪಾಲಿಸಲಿ. (ರಾಮಾನುಜಃ) ಸದಾ ಪರಮಾತ್ಮನಿಗೆ ತಲೆಬಾಗಬೇಕೆಂಬ ಪ್ರಪತ್ತಿ / ಶರಣಾಗತಿಪ್ರಧಾನವಾದ ವಿಶಿಷ್ಟಾದ್ವೈತಸಿದ್ಧಾಂತದ ಪ್ರವರ್ತಕರಾದ ಶ್ರೀಮದ್ರಾಮಾನುಜಾಚಾರ್ಯರು ನಮ್ಮ (ಗ್ರೀವಾಮ್ ಅವತು) ಕುತ್ತಿಗೆಯನ್ನು (ಕೊರಳನ್ನು) ಸಂರಕ್ಷಿಸಲಿ. (ಬಸವೇಶ್ವರಃ) ಕಾಯಕ-ದಾಸೋಹಪ್ರಧಾನವಾದ ಶಕ್ತಿವಿಶಿಷ್ಟಾದ್ವೈತ / ವೀರಶೈವಸಿದ್ಧಾಂತದ ಪ್ರವರ್ತಕರಾದ ಸಾಕ್ಷಾತ್ ಶಿವನಂದಿಯ ಅವತಾರವೆನಿಸಿದ ಬಸವೇಶ್ವರರು (ಉಳುವ ನೇಗಿಲನ್ನು ಹೊರುವಂತೆಯೇ) ಸಂಸಾರಭಾರವನ್ನು ಯಶಸ್ವಿಯಾಗಿ ಹೊರುವಂತೆ, (ಸ್ಕನ್ಧೌ) ನಮ್ಮ ಹೆಗಲನ್ನು ಸುಭದ್ರಗೊಳಿಸಲಿ.
ಭುಜೌ ತು ರಾಮಕೃಷ್ಣಶ್ಚ ಕರೌ ವಿವೇಕರೂಪವಾನ್ |
ಉರಃ ಪಾತು ಚ ವಿಶ್ವೇಶೋ ಹೃದಯಂ ರಾಘವೇಶ್ವರಃ ||೭||
(ರಾಮಕೃಷ್ಣಃ) ತಮ್ಮ ಬಾಹುಗಳನ್ನೆತ್ತಿ ಆರ್ತರನ್ನು ಹರಸಿ ಉದ್ಧರಿಸಿದ ಯುಗಾವತಾರ ಶ್ರೀ ರಾಮಕೃಷ್ಣ ಪರಮಹಂಸರು, (ಭುಜೌ) ನಮ್ಮ ಭುಜಗಳನ್ನು ರಕ್ಷಿಸಲಿ. (ಚ) ಹಾಗೆಯೇ, (ವಿವೇಕರೂಪವಾನ್) ಅವರ ಶಿಷ್ಯರಾದ, ಅಭಿನವ ಶಂಕರರೇ ಆದ ಯುಗಾಚಾರ್ಯ ಸ್ವಾಮಿ ವಿವೇಕಾನಂದರು ಸತ್ಕರ್ಮಗಳನ್ನೇ ಮಾಡುವಂತೆ ಪ್ರೇರೇಪಿಸಿ, (ಕರೌ) ನಮ್ಮ ಕರಗಳನ್ನು ಕಾಪಾಡಲಿ. (ವಿಶ್ವೇಶಃ) ಪೇಜಾವರ ಮಠಾಧೀಶರಾದ ಪರಮಧಾರ್ಮಿಕರೂ ಧರ್ಮಸಂಸ್ಥಾಪಕರೂ ಸಮಾಜಸುಧಾರಕರೂ ದಿಟ್ಟ ಎದೆಗಾರಿಕೆಯುಳ್ಳವರೂ ಆದ ವಿಶ್ವೇಶತೀರ್ಥ ಶ್ರೀಪಾದಂಗಳವರು, (ಉರಃ ಪಾತು) ನಮ್ಮ ಎದೆಯನ್ನು ರಕ್ಷಿಸಲಿ. (ರಾಘವೇಶ್ವರಃ) ಉದಾರಹೃದಯದ ಸಹೃದಯಿಗಳೂ ಮಾತೃಸ್ವರೂಪರೂ ಆದ ಗೋಕರ್ಣಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳು, (ಹೃದಯಂ) ನಮ್ಮ ಹೃದಯವನ್ನು ಸಂರಕ್ಷಿಸಲಿ.
ಉದರಂ ನಾಥರೂಪಶ್ಚ ಜಠರಂ ಜಾತವೇದಕಃ |
ಭಾರ್ಗವಸ್ತು ಕಟಿಂ ಪಾತು ಗುಹ್ಯಂ ರಕ್ಷತು ಸದ್ಗುರುಃ ||೮||
(ಉದರಂ) ನಮ್ಮ ಹೊಟ್ಟೆಯನ್ನು, (ನಾಥರೂಪಃ) ನಾಗಾಭರಣರಾದ ನವನಾಥರು ರಕ್ಷಿಸಲಿ. (ಚ) ಅಂತೆಯೇ, (ಜಠರಂ) ಜಠರವನ್ನು, (ಜಾತವೇದಕಃ ಪಾತು) ಜಾಠರಾಗ್ನಿರೂಪಿಯಾದ ಜಾತವೇದನು (ಅಗ್ನಿದೇವನು) ಪಾಲಿಸಲಿ. (ಕಟಿಂ ತು) ಸೊಂಟವನ್ನಾದರೋ, (ಭಾರ್ಗವಃ) ಭಾರ್ಗವ ಪರಶುರಾಮನೂ, (ಸದ್ಗುರುಃ ಗುಹ್ಯಂ ರಕ್ಷತು) ಸದ್ಗುರುವು ಗುಹ್ಯ (ಲಿಂಗ) ವನ್ನೂ ರಕ್ಷಿಸಲಿ.
ಮೇರುದಂಡಂ ಚ ಚೈತನ್ಯೋ ಮೂಲಾಧಾರಂ ವಿನಾಯಕಃ |
ನಿತ್ಯಾನಂದಶ್ಚ ಪಾತೂರೂ ಬ್ರಹ್ಮಾನಂದಶ್ಚ ಜಾನುನೀ ||೯||
(ಮೇರುದಣ್ಡಂ) ಮೇರುದಂಡವನ್ನು (spinal cord), (ಚೈತನ್ಯಃ) ಚೈತನ್ಯ ಮಹಾಪ್ರಭುವೂ, (ಚ) ಅಂತೆಯೇ, (ಮೂಲಾಧಾರಂ ವಿನಾಯಕಃ) ಮೂಲಾಧಾರವನ್ನು ವಿನಾಯಕನೂ, (ಚ) ಹಾಗೆಯೇ, (ಊರೂ) ತೊಡೆಗಳನ್ನು (ನಿತ್ಯಾನನ್ದಃ) ನಿತ್ಯಾನಂದರೂ, (ಚ ಜಾನುನೀ) ಅಂತೆಯೇ ಮೊಣಕಾಲುಗಳನ್ನು, (ಬ್ರಹ್ಮಾನನ್ದಃ ಪಾತು) ಬ್ರಹ್ಮಾನಂದರೂ ಸಂರಕ್ಷಿಸಲಿ.
ಯೋಗಾನಂದಃ ಪಾತು ಜಂಘೇ ಗುಲ್ಫೌ ಪಾತು ಪ್ರಜಾಪಿತಃ |
ಚರಣೌ ನಾರದಃ ಪಾತು ನಾರಮಾರ್ಗಪ್ರದರ್ಶಕಃ ||೧೦||
(ಯೋಗಾನನ್ದಃ) ಯೋಗಾನಂದರು, (ಜಙ್ಘೇ ಪಾತು) ಮುಂಗಾಲುಗಳನ್ನು ರಕ್ಷಿಸಲಿ. (ಪ್ರಜಾಪಿತಃ) ಪ್ರಜಾಪಿತನು, (ಗುಲ್ಫೌ ಪಾತು) ಮಣಿಕಟ್ಟುಗಳನ್ನು ಕಾಪಾಡಲಿ. ತ್ರಿಲೋಕಸಂಚಾರಿ ಬ್ರಹ್ಮಮಾನಸಪುತ್ರರಾದ (ನಾರ-ಮಾರ್ಗ-ಪ್ರದರ್ಶಕಃ) ಮೋಕ್ಷಪಥದರ್ಶಕರಾದ, (ನಾರದಃ) ದೇವರ್ಷಿ ನಾರದರು, (ಚರಣೌ ಪಾತು) ನಮ್ಮ ಪಾದಗಳನ್ನೂ ಪಾಲಿಸಲಿ.
ರಾಘವೇಂದ್ರೋ ಹೃಷೀಕಾಣಿ ದೇವೇಂದ್ರೋ ಪಾತು ನೋ ಮನಃ |
ಬುದ್ಧಿಂ ಪಾತು ಚ ಸಂಬುದ್ಧೋ ಧಿಯೋ ಯೋ ನಃ ಪ್ರಚೋದಯಾತ್ ||೧೧||
(ರಾಘವೇನ್ದ್ರಃ) ರಾಘವೇಂದ್ರಸ್ವಾಮಿಗಳು (ಹೃಷೀಕಾಣಿ) ಇಂದ್ರಿಯಗಳನ್ನೂ, (ದೇವೇನ್ದ್ರಃ) ದೇವೇಂದ್ರನು, (ನಃ—ಅಸ್ಮಾಕಂ) ನಮ್ಮ (ಮನಃ) ಮನಸ್ಸನ್ನೂ, (ಪಾತು) ಪಾಲಿಸಲಿ. (ಚ) ಹಾಗೆಯೇ, (ಸಂಬುದ್ಧಃ) ಸುಜ್ಞಾನೋದಯವಾದ ಬುದ್ಧನು, (ಬುದ್ಧಿಂ ಪಾತು) ಬುದ್ಧಿಯನ್ನೂ ರಕ್ಷಿಸಲಿ. (ಯಃ) ಯಾವ ಇವರೆಲ್ಲರೂ, (ನಃ) ನಮ್ಮ, (ಧಿಯಃ) ಬುದ್ಧಿಗಳನ್ನು, (ಪ್ರಚೋದಯಾತ್) ಸನ್ಮಾರ್ಗದಲ್ಲಿ ಪ್ರಚೋದಿಸಲಿ.
ಚಿತ್ತಾನಿ ಚಿನ್ಮಯಃ ಪಾತು ಶಿಷ್ಯಚಿತ್ತಾಪಹಾರಕಃ |
ಅಹಂತತ್ತ್ವಂ ಬ್ರಹ್ಮತತ್ತ್ವೇ ನಿಯೋಜಯತು ಕೇಶವಃ ||೧೨||
(ಚಿತ್ತಾನಿ) ನಮ್ಮ ಚಿತ್ತಗಳನ್ನು, (ಚಿನ್ಮಯಃ ಪಾತು) ಶಿಷ್ಯಚಿತ್ತಾಪಹಾರಕರಾದ ಸ್ವಾಮೀ ಚಿನ್ಮಯಾನಂದರು ಕಾಪಾಡಲಿ. (ಅಹಂತತ್ತ್ವಂ) ನಮ್ಮ ಅಹಂತತ್ತ್ವವನ್ನು, (ಕೇಶವಃ) ಆ ಕೇಶವನೇ, (ಬ್ರಹ್ಮತತ್ತ್ವೇ ನಿಯೋಜಯತು) ಬ್ರಹ್ಮತತ್ತ್ವದಲ್ಲಿ ನೆಲೆಗೊಳಿಸಲಿ.
ಆತ್ಮಾನಾತ್ಮವಿವೇಕಂ ಚ ಬ್ರಹ್ಮಾತ್ಮೈಕ್ಯಂ ತನೋತು ನಃ |
ಪ್ರಜ್ಞಾನಮಾತ್ಮಭಾವಂ ತತ್ತ್ವಮಸೀತಿ ಪ್ರಬೋಧ ಮೇ ||೧೩||
ಆ ಗುರು-ಪರಮಾತ್ಮನು, (ನಃ) ನಮಗೆ, (ಆತ್ಮಾನಾತ್ಮವಿವೇಕಂ ಚ) ಆತ್ಮ-ಅನಾತ್ಮ ವಿವೇಕವನ್ನೂ, (ಬ್ರಹ್ಮಾತ್ಮ-ಐಕ್ಯಂ ತನೋತು)ಬ್ರಹ್ಮ-ಆತ್ಮದ ಅಭೇದವನ್ನೂ ಉಂಟುಮಾಡಲಿ. (ಮೇ) ನನಗೆ, (ತ್ವಂ ಪ್ರಜ್ಞಾನಮ್, ಆತ್ಮಭಾವಂ) "ನೀನು ಪ್ರಜ್ಞಾನಸ್ವರೂಪನೂ, ಆತ್ಮಸ್ವರೂಪನೂ, (ತತ್, ಅಸಿ ಇತಿ) ಆ ಪರತತ್ತ್ವ / ಬ್ರಹ್ಮಸ್ವರೂಪನೂ ಆಗಿರುವಿ" ಎಂಬ, (ಪ್ರಬೋಧ) ಅರಿವನ್ನುಂಟುಮಾಡು ಹೇ ಗುರುದೇವನೆ!
ಇತ್ಥಂ ಪ್ರಕಲ್ಪ್ಯತಾಂ ರಕ್ಷಾಕವಚಂ ಧಾರ್ಯತಾಂ ನರೈಃ |
ಗುರೋರಮಿತರಕ್ಷಾರ್ಥಂ ಮಹಾಪ್ರಭಾವಸಂಯುತಮ್ ||೧೪||
(ಇತ್ಥಂ) ಈ ರೀತಿಯಾಗಿ, (ನರೈಃ) ಮನುಜರಿಂದ, (ಮಹಾಪ್ರಭಾವಸಂಯುತಮ್) ಮಹಾಪ್ರಭಾವಯುತವಾದ, (ಗುರೋಃ, ರಕ್ಷಾಕವಚಂ) ಗುರುಕವಚವು, (ಅಮಿತರಕ್ಷಾರ್ಥಂ) ಮಿತಿಯಿಲ್ಲದ ರಕ್ಷಣೆಗಾಗಿ, (ಪ್ರಕಲ್ಪ್ಯತಾಂ) ಪ್ರಕಲ್ಪಿಸಲ್ಪಟ್ಟು, (ಧಾರ್ಯತಾಂ) ಧಾರಣೆಮಾಡಿಕೊಳ್ಳಲ್ಪಡಬೇಕು.
ಸಕಲೇಷ್ಟಪ್ರದಂ ದಿವ್ಯಂ ನಿತ್ಯಂ ಭಕ್ತಿಸಮನ್ವಿತೈಃ |
ಆಯುರಾರೋಗ್ಯಮೈಶ್ವರ್ಯಂ ಮನಶ್ಶಾಂತಿಂ ಚ ಯಚ್ಛತಿ ||೧೫||
(ನಿತ್ಯಂ) ನಿತ್ಯವೂ, (ಭಕ್ತಿಸಮನ್ವಿತೈಃ) ಭಕ್ತಿಪೂರ್ವಕವಾಗಿ, (ಸಕಲೇಷ್ಟಪ್ರದಂ ದಿವ್ಯಂ) ಈ ಸಕಲ ಇಷ್ಟಾರ್ಥಗಳನ್ನೀಯಬಲ್ಲ ದಿವ್ಯವಾದ ಗುರುರಕ್ಷಾಕವಚವನ್ನು ಪಠಿಸಿದರೆ ಈ ದಿವ್ಯಮಂತ್ರವು, ("ಮನನಾತ್ ತ್ರಾಯತೇ ಇತಿ ಮನ್ತ್ರಃ"), (ಆಯುರಾರೋಗ್ಯಮೈಶ್ವರ್ಯಂ ಮನಃಶಾನ್ತಿಂ ಚ) ಆಯುಸ್ಸು, ಆರೋಗ್ಯ, ಐಶ್ವರ್ಯ ಹಾಗೂ ಮನಃಶಾಂತಿಯನ್ನು, (ಯಚ್ಛತಿ) ಉಂಟುಮಾಡುವುದು.
Comments
Post a Comment