ಶ್ರೀದೇವೀಸ್ರಗ್ಧರಾನವಕಸ್ತೋತ್ರರತ್ನಮ್

ಶ್ರೀದೇವೀಸ್ರಗ್ಧರಾನವಕಸ್ತೋತ್ರರತ್ನಮ್

(ಸ್ರಗ್ಧರಾವೃತ್ತಮ್)
ಸರ್ವಾನ್ ಲೋಕಾನಜೇನ ಪ್ರಕಟಿತವಿಭವಾಂ ವಿಷ್ಣುನಾ ಪಾಲನೀಯಾನ್ |
ಯಸ್ಯಾ: ಶಕ್ತ್ಯಾ ಹರೇಣಾಪ್ರತಿಹತಲಯಕಾರ್ಯಂ ಸದಾ ಸಾಧನೀಯಮ್ ||
ಮಾಯಾರೂಪಾಂ ತ್ರಿಮೂರ್ತಿಪ್ರಜನನನಿಯತಾಂ ಸುನ್ದರೀಂ ಭಾರತೇಡ್ಯಾಂ |
ವನ್ದೇ ಮಾತಸ್ತ್ರಿಲೋಕಾಂ ಸುರವರವಿನುತಾಂ  ಜ್ಞಾನದಾಮಾಶ್ರಿತಾನಾಮ್ ||೧||

  (ವಿಷ್ಣುನಾ ಪಾಲನೀಯಾನ್)ಸ್ಥಿತಿಕರ್ತೃವಾದ ವಿಷ್ಣುವಿನಿಂದ ಪಾಲಿಸಲ್ಪಡಬೇಕಾದ, (ಸರ್ವಾನ್ ಲೋಕಾನ್) ಸಮಸ್ತಲೋಕಗಳನ್ನು (ಅಜೇನ ಪ್ರಕಟಿತವಿಭವಾಂ) ಬ್ರಹ್ಮನಿಂದ ಸೃಷ್ಟಿಮೂಲಕ ಪ್ರಕಟಣೆಮಾಡಿಸುವ ವೈಭವ/ಯೋಗ್ಯತೆಯುಳ್ಳವಳಾದ, (ಯಸ್ಯಾ: ಶಕ್ತ್ಯಾ) ಯಾವಳ ಶಕ್ತಿಯ ಸಹಾಯದಿಂದ, (ಹರೇಣ ಅಪ್ರತಿಹತಲಯಕಾರ್ಯಂ) ರುದ್ರನಿಂದ ತಡೆಯಿಲ್ಲದ ಲಯಕಾರ್ಯವು (ಸದಾ ಸಾಧನೀಯಮ್) ಯಾವಾಗಲೂ ಸಾಧಿಸಲ್ಪಡಬೇಕೋ, (ಮಾಯಾರೂಪಾಂ)ಅಂತಹ ಮಹಾಮಾಯಾಸ್ವರೂಪಳೂ, (ತ್ರಿಮೂರ್ತಿಪ್ರಜನನನಿಯತಾಂ)ಕಾಲಕಾಲಕ್ಕೆ ತ್ರಿಮೂರ್ತಿಗಳ ನಿಯಮಿತವಾದ ಸೃಷ್ಟಿಯನ್ನು ಮಾಡುವವಳೂ, (ಸುನ್ದರೀಂ)ತ್ರಿಪುರಸುಂದರಿಯೂ, (ಭಾರತೇಡ್ಯಾಂ)ಜ್ಞಾನಿಗಳಿಂದ ಸ್ತುತಿಸಲ್ಪಡುವವಳೂ, ( ಆಶ್ರಿತಾನಾಂ ಜ್ಞಾನದಾಂ)ಶರಣಾಗತರಿಗೆ ಸುಜ್ಞಾನವನ್ನೀಯುವ, (ಸುರವರವಿನುತಾಂ)ಸುರಪತಿಯಿಂದ ನುತಿಗೈಯಲ್ಪಡುವ (ತ್ರಿಲೋಕಾಂ)ಮೂರುಲೋಕದ ರೂಪದಲ್ಲಿ ನಮ್ಮ ಕಣ್ಣಿಗೆ ಗೋಚರಿಸುವ,ತ್ರಿಲೋಕಸ್ವರೂಪೆಯಾದ, ಮೂರ್ಲೋಕವೇ ತನ್ನ ಶರೀರವಾಗಿರುವವಳಾದ, (ಮಾತ:)ಹೇ ತಾಯೇ! (ವನ್ದೇ)ನಿನ್ನನ್ನು ವಂದಿಸುತ್ತೇನೆ.

ದೇವೀಂ ವಾಣೀಂ ಗೃಹಾಣಾಂ ಕರಕಮಲಯುಗೇ ಭಾರತೀಂ ಶ್ರೇಷ್ಠವೀಣಾಂ |
ವನ್ದೇನ್ದುಸ್ವಚ್ಛವರ್ಣಾಂ ಸಕಲನಿಗಮದಾಂ ಕಾವ್ಯಸಾಫಲ್ಯದಾಂ ತ್ವಾಮ್ ||
ವಾಗ್ದೇವೀಂ ಬ್ರಾಹ್ಮಣೀಂ ವಿಧೃತಸುಜಪಸರಾಂ ಶಾರದಾಂ ವೇದಮಾತ: |
ತ್ವಾಂ ಬ್ರಹ್ಮಾಣೀಂ ಸಸತ್ತ್ವಾಂ ವರಯತಿವರದಾಂ ಶೃಙ್ಗಗಿರ್ಯಾಖ್ಯಪೀಠಾಮ್ ||೨||

(ವಾಗ್ದೇವೀಂ)ಮಾತಿನ ಅಧಿದೇವತೆಯಾದ (ಬ್ರಾಹ್ಮಣೀಂ) ಬ್ರಹ್ಮಮಾನಸಸಂಭೂತೆಯಾದ (ಸಸತ್ತ್ವಾಂ)ಪರಮಸಾತ್ವಿಕಗುಣಭರಿತಳಾದ(ಸಕಲನಿಗಮದಾಂ)ಸಮಸ್ತವೇದಾದಿವಿದ್ಯೆಗಳನ್ನು ಅನುಗ್ರಹಿಸುವ( ಇನ್ದುಸ್ವಚ್ಛವರ್ಣಾಂ)ಚಂದ್ರನಂತಹ ಅಚ್ಚಬಿಳಿಯಾದ ಮೈಬಣ್ಣವುಳ್ಳ(ಕರಕಮಲಯುಗೇ ಶ್ರೇಷ್ಠವೀಣಾಂ ಗೃಹಾಣಾಂ)ತನ್ನ ಕೈದಾವರೆಗಳೆರಡರಲ್ಲಿ ಪರಮ ಶ್ರೇಷ್ಠವಾದ ದೈವೀವೀಣೆಯನ್ನು ಹಿಡಿದುಕೊಂಡಿರುವ(ವಿಧೃತಸುಜಪಸರಾಂ)ಜಪಮಾಲೆಯನ್ನೂ ಧರಿಸಿರುವ(ಕಾವ್ಯಸಾಫಲ್ಯದಾಂ)ಉತ್ತಮೋತ್ತಮಕಾವ್ಯರಚನೆಯ ಯಶಸ್ಸಿಗೆ ಕಾರಣಳಾದ(ಬ್ರಹ್ಮಾಣೀಂ)ಚತುರಾನನಬ್ರಹ್ಮನ ಸತಿಯಾದ(ವರಯತಿವರದಾಂ)ಯತಿಶ್ರೇಷ್ಠರೆನಿಸಿದ ಆದಿಶಂಕರಭಗವತ್ಪಾದರಿಗೊಲಿದ(ಶೃಙ್ಗಗಿರ್ಯಾಖ್ಯಪೀಠಾಮ್)ಶೃಂಗಗಿರಿ/ಶೃಂಗೇರಿಯ ಶಂಕರಪೀಠಾಧಿಪತಿಗಳಿಂದ ನಿತ್ಯಪೂಜೆಗೊಳ್ಳುವ
(ವೇದಮಾತ:)ಹೇ! ವೇದಮಾತೆಯೇ!(ವಾಣೀಂ ದೇವೀಂ ಶಾರದಾಂ)ವಾಣಿಯೆಂದೂ ಕರೆಯಲ್ಪಡುವ ದೇವಿಶಾರದೆಯಾದ(ತ್ವಾಂ)ನಿನ್ನನ್ನು(ವನ್ದೇ)ತ್ರಿಕರಣಪೂರ್ವಕ ವಂದಿಸುತ್ತೇನೆ.

ವಿಷ್ಣೋರ್ಮಾಯಾಸ್ವರೂಪಾಂ ತ್ರಿಭುವನಜನನೀಂ ರಾಜಸಾಂ ಲೋಕವಂದ್ಯಾಂ |
ರತ್ನಪ್ರಾಯಾಂ ಗುಣಾಢ್ಯಾಮಗಣಿತಮಹಿಮಾಂ ಮಾಧವಾಂ ಪದ್ಮಸಂಸ್ಥಾಮ್ ||
ಸಂಪದ್ರೂಪಾಂ ವಿಶೇಷಾಂ ಜಲಧಿಮಥನಜಾಂ ಚಂದ್ರಮಾಸೋದರೀಂ ತಾಂ |
ವಂದೇ ದೇವಾಸುರೇಡ್ಯಾಮೃಷಿಕುಲವಿನುತಾಮಷ್ಟಲಕ್ಷ್ಮೀಸ್ವರೂಪಾಮ್ ||೩||

(ವಿಷ್ಣೋರ್ಮಾಯಾಸ್ವರೂಪಾಂ)ಮಹಾವಿಷ್ಣುವಿನ ಮಾಯಾಸ್ವರೂಪಳಾದ (ತ್ರಿಭುವನಜನನೀಂ)ಮೂರುಲೋಕಗಳಿಗೂ ತಾಯಿಯಾದ (ರಾಜಸಾಂ)ರಜೋಗುಣಪ್ರಕಟಕಳಾದ,(ಲೋಕವಂದ್ಯಾಂ)ಅಖಿಲಲೋಕವಂದಿತಳಾದ,(ರತ್ನಪ್ರಾಯಾಂ)ಹರಳುಗಳಲ್ಲಿ ಶ್ರೇಷ್ಠವಾದ ರತ್ನದಂತೆ, ದೇವಾನುದೇವತೆಗಳಲ್ಲಿ ಪರಮಶ್ರೇಷ್ಠಳಾದ,(ಗುಣಾಢ್ಯಾಮ್)ತನ್ನ ಲೋಕಲ್ಯಾಣಕಾರಕ,ಜನಹಿತಕಾರಕಗುಣಗಳಲ್ಲಿ ಆಢ್ಯಳಾದ,(ಅಗಣಿತಮಹಿಮಾಂ)ಗಣನೆಗೆ/ಲೆಕ್ಕಕ್ಕೆ ಸಿಗದಷ್ಟು ಮಹಿಮೆಗಳುಳ್ಳ,(ಮಾಧವಾಂ)ಮಾಧವನ ಭಾರ್ಯೆಯಾದ, (ಪದ್ಮಸಂಸ್ಥಾಮ್)ಕಮಲದಲ್ಲಿ ಸಂಸ್ಥಿತಳಾದ,(ಸಂಪದ್ರೂಪಾಂ)ಐಶ್ವರ್ಯಸ್ವರೂಪಳೂ,ಸಂಪತ್ಪ್ರದಾಯಕಳೂ ಆದ,(ವಿಶೇಷಾಂ)ವಿಶೇಷವಾಗಿ ಶೇಷತಲ್ಪದಲ್ಲೊರಗಿದ ಆದಿನಾರಾಯಣನ ಹೃತ್ಕಮಲವಾಸಿನಿಯಾದ,(ಜಲಧಿಮಥನಜಾಂ)ಕ್ಷೀರಸಾಗರಮಥನೋದ್ಭವೆಯಾದ, (ಚಂದ್ರಮಾಸೋದರೀಂ)ಅಮೃತ ಹಾಗೂ ಸ್ವರ್ಗಲೋಕದ ಸಕಲ ಸುವಸ್ತುಗಳಿಗಾಗಿ ಸುರಾಸುರರು ಮಂದರಪರ್ವತವನ್ನೇ ಕಡೆಗೋಲಾಗಿಯೂ,ಮಹಾವಿಷ್ಣುವಿನ ಕೂರ್ಮಾವತಾರವನ್ನೇ ಅದಕ್ಕೆ ಆಧಾರವಾಗಿಯೂ, ವಾಸುಕಿಯನ್ನೇ ಹಗ್ಗವಾಗಿಯೂ ಮಾಡಿಕೊಂಡು ನಡೆಸಿದ, ಮೊದಲು ಹುಟ್ಟಿದ ಕಾಲಕೂಟವೆಂಬ ಜಗನ್ನಾಶಕಾರಿಯಾದ ಭಯಂಕರ ವಿಷವನ್ನು ಕುಡಿದು ಶಿವನು ಲೋಕವುಳಿಸಿ ನಂಜುಂಡೇಶ್ವರನೂ ನೀಲಕಂಠನೂ ಗರಳಕಂಠನೂ ಎನಿಸಿದಂಥ ಸಮುದ್ರಮಥನದಿಂದ ಚಂದಿರನ ನಂತರ ಹುಟ್ಟಿದವಳಾದ, (ದೇವಾಸುರೇಡ್ಯಾಂ)ದೇವತೆಗಳಿಂದಲೂ, ರಾಕ್ಷಸರಿಂದಲೂ ಸ್ತುತಿಸಲ್ಪಡುವ,(ಋಷಿಕುಲವಿನುತಾಂ)ಋಷಿಮುನಿಗಳಿಂದಲೂ ವಿಶೇಷವಾಗಿ ನುತಿಗೈಯಲ್ಪಡುವ, (ಅಷ್ಟಲಕ್ಷ್ಮೀಸ್ವರೂಪಾಂ)ಆದಿಲಕ್ಷ್ಮಿ, ಧಾನ್ಯಲಕ್ಷ್ಮಿ, ಧೈರ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾಲಕ್ಷ್ಮಿ ಹಾಗೂ ಧನಲಕ್ಷ್ಮಿ- ಎಂಬ ೮ ರೂಪಗಳಿಂದ ಅಷ್ಟಲಕ್ಷ್ಮೀಸ್ವರೂಪಳಾದ,(ತಾಂ) ಆ ಮಹಾಲಕ್ಷ್ಮಿಯನ್ನು (ವನ್ದೇ) ವಂದಿಸುತ್ತೇನೆ.

ವಂದೇ ಕಾಳೀಂ ತಮೋಪೇತಗುಣಮಯಪರಾಂ ಯೋಗನಿದ್ರಾಸ್ವರೂಪಾಂ |
ದುರ್ಗಾಮೀಶಾಂ ಭವಾನೀಂ ವಿಧಿವರವಿನುತಾಂ ಚಂಡಿಕಾಸಪ್ತಶತ್ಯಾಮ್ ||
ಮಾರ್ಕಂಡೇಯಸ್ತುತಾಂ ರಾಜಸುರಥವರದಾಂ ಮೋಕ್ಷದಾಂ ವೈಶ್ಯಪೂಜ್ಯಾಂ |
ಶಕ್ತಿಂ ಮುಕ್ತಿಂ ಪ್ರದಾತ್ರೀಮಜಹರಿವರದಾಂ ಮಧ್ವರೀಂ ಕೈಟಭಾಂತ್ಯಾಮ್ ||೪||

(ತಮೋಪೇತಗುಣಮಯಪರಾಂ)  ಸಕಲಸೃಷ್ಟಿಯ ಮತ್ತು ಅದರ ಜಾಗ್ರತ್ (ಎಚ್ಚರದ) (ಜಾಗ್ರತ್-ಸ್ವಪ್ನ-ಸುಷುಪ್ತಿ, ಇವು ಅವಸ್ಥಾತ್ರಯಗಳು; ಎಚ್ಚರ-ಕನಸು-ಗಾಢನಿದ್ದೆ ಎಂಬುದಾಗಿ. ಈ ಮೂರೂ ಅವಸ್ಥೆಗಳನ್ನೂ ಮೀರಿದ್ದು ತುರೀಯ/ಚತುರ್ಥ/ನಾಲ್ಕನೆಯದಾದ ಸಮಾಧಿಸ್ಥಿತಿ, ಅಷ್ಟಾಂಗಯೋಗದಲ್ಲಿ ಶೇಷಾವತಾರಿ  ಮಹರ್ಷಿ ಪತಂಜಲಿಗಳು ಹೇಳಿದ ಯೋಗದ ೮ ಅಂಗಗಳಲ್ಲಿ ಅಂತಿಮವಾದದ್ದು.) ಅವಸ್ಥೆಯ ಸಂಹಾರಕ/ಲಯಕಾರಕವೂ ಆದ ಸರ್ವಾರೋಗ್ಯಕರವೂ, ವಿಶ್ರಾಂತಿಪ್ರದವೂ ಆದ ನಿದ್ರೆಯನ್ನುಂಟುಮಾಡುವ ಸತ್ತ್ವ-ರಜ-ತಮಗಳೆಂಬ ತ್ರಿಗುಣಗಳಲ್ಲಿ ಮೂರನೆಯದಾದ ತಮೋಗುಣದ ಪ್ರಧಾನಾಭಿವ್ಯಕ್ತಸ್ವರೂಪಳಾದ, (ಕಾಳೀಂ) ಕಪ್ಪು ಮೈಬಣ್ಣವುಳ್ಳವಳೂ ಕಾಳೀ ಎಂದು ಕರೆಯಲ್ಪಡುವವಳೂ ಆದ, (ಯೋಗನಿದ್ರಾಸ್ವರೂಪಾಂ) ಯೋಗನಿದ್ರಾದೇವಿಯೆನಿಸಿರುವ, (ದುರ್ಗಾಮ್) ದುರ್ಗತಿಯನ್ನೂ, ಕಷ್ಟಗಳನ್ನೂ ದೂರಮಾಡುವ, ದುರ್ಗಾಸುರನನ್ನು ಸಂಹರಿಸಿದವಳೂ ಆದ, (ಭವಾನೀಂ) ಭವ/ಸಂಸಾರಕ್ಕೆ,(ಮಾನಸಸೃಷ್ಟಿಗೆ ಪರ್ಯಾಯವಾಗಿ) ಮೈಥುನಸೃಷ್ಟಿಗೆ ಕಾರಣನಾದ ಶಿವನ ಪತ್ನಿಯಾದ, (ವಿಧಿವರವಿನುತಾಂ) ಜೀವಿಗಳ ವಿಧಿಲೇಖಕನಾದ ಚತುರ್ಮುಖಬ್ರಹ್ಮನಿಂದ ಚೆನ್ನಾಗಿ ಸ್ತುತಿಸಲ್ಪಡುವ, (ಈಶಾಂ) ಸಕಲಲೋಕದೊಡತಿಯಾದ, (ಚಂಡಿಕಾಸಪ್ತಶತ್ಯಾಮ್) ಮಾರ್ಕಂಡೇಯಪುರಾಣಾಂತರ್ಗತ ದುರ್ಗಾಸಪ್ತಶತಿಯಲ್ಲಿ, (ಮಾರ್ಕಂಡೇಯಸ್ತುತಾಂ) ಮೃಕಂಡುಮುನಿಗಳ ಮಗನಾದ ಮಾರ್ಕಂಡೇಯಮಹರ್ಷಿಗಳಿಂದ ಸ್ತುತಿಸಲ್ಪಟ್ಟ, (ರಾಜಸುರಥವರದಾಂ)
ರಾಜ್ಯಭ್ರಷ್ಟನಾಗಿದ್ದ ಸುರಥನೆಂಬ ರಾಜನು ಸುಮೇಧಾ ಮಹರ್ಷಿಗಳ ಪ್ರೇರಣೆಯಿಂದ ಮಾಡಿದ ತಪಸ್ಸಿಗೆ ಮೆಚ್ಚಿ ಮನುಪದವಿಯ ವರವನ್ನು ಪ್ರದಾನಮಾಡಿದ, (ವೈಶ್ಯಪೂಜ್ಯಾಂ) ಕುಟುಂಬಭ್ರಷ್ಟನಾಗಿ ಕಾಡುಮೇಡುಗಳಲ್ಲಿ ದಿಙ್ಮೂಢನಾಗಿ ಅಲೆದಾಡುತ್ತಿದ್ದ ಸಮಾಧಿಯೆಂಬ ವೈಶ್ಯನು ಸುಮೇಧಾ ಮಹರ್ಷಿಗಳ ಪ್ರೇರಣೆಯಿಂದ ದೇವಿಯ ಕುರಿತು ತಪಗೈಯಲು, (ಮೋಕ್ಷದಾಂ) ಅವನ ಇಚ್ಛೆಯಂತೆ ಮೋಕ್ಷವಿತ್ತ, ( ಮಧ್ವರೀಂ ಕೈಟಭಾಂತ್ಯಾಮ್) ಮಹಾವಿಷ್ಣುವಿನ ಕರ್ಣಕಿಲ್ಬಿಷದಿಂದ ಹುಟ್ಟಿದ ಮಧು-ಕೈಟಭರೆಂಬ ದುಷ್ಟರು ಲೋಕಕಂಟಕರಾಗಿ ಸೃಷ್ಟಿಕರ್ತಬ್ರಹ್ಮನನ್ನೇ ಪೀಡಿಸತೊಡಗಿದಾಗ, ಯೋಗಮಾಯೆಯಾಗಿ ಹರಿಗೆ ಪ್ರೇರಣೆನೀಡಿ ಅವರ ಅಂತ್ಯಕ್ಕೆ ಕಾರಣಳಾದ, (ಶಕ್ತಿಂ ಮುಕ್ತಿಂ ಪ್ರದಾತ್ರೀಮ್) ಶಕ್ತಿ-ಮುಕ್ತಿಗಳನ್ನು ದಯಪಾಲಿಸುವ, (ಅಜಹರಿವರದಾಂ) ಬ್ರಹ್ಮ-ವಿಷ್ಣುಗಳಿಗೆ ಸೃಷ್ಟಿ-ಸ್ಥಿತಿಶಕ್ತಿಗಳನ್ನು ಅನುಕ್ರಮವಾಗಿ ಅನುಗ್ರಹಿಸಿದ ಕಾಳಿರೂಪೆಯಾದ ಆದಿಮಾಯೆಯನ್ನು (ವಂದೇ) ವಂದಿಸುತ್ತೇನೆ.

ವಂದೇ ಮೂಕಾಂಬಿಕಾಖ್ಯಾಮನುಪಮವಸನಾಂ ಮೂರ್ತಿವಂಶಪ್ರದೀಪಾಂ |
ಸ್ವರ್ಣರೇಖಾವಿಭೂಷಾಂ ವರಯತಿವಿನುತಾಂ ಶಂಕರಾಚಾರ್ಯದೃಷ್ಟಾಮ್ ||
ವಂದೇ ದೇವೀಂ ಸುರೇಡ್ಯಾಮಸುರಕುಲಗತಿಂ ನಿತ್ಯಕೊಲ್ಲೂರುವಾಸಾಂ |
ಸೇವೇ ಬ್ರಹ್ಮಾಂಡಲೀಲಾಂ ಶಿವಕೃತಸುಚಲಾಂ ಸುಂದರೀಂ ಪರ್ಣತೀರ್ಥಾಮ್ ||೫||

(ಮೂಕಾಂಬಿಕಾಖ್ಯಾಮ್) ಮೂಕಾಸುರನೆಂಬ ದುಷ್ಟನನ್ನು ಸಂಹರಿಸಿ ಮೂಕಾಂಬಿಕೆಯೆಂಬ ಹೆಸರಿನವಳಾದ, (ಅನುಪಮವಸನಾಂ) ಬೇರೆ ಉಪಮೆಯೇ ಇಲ್ಲದಂಥ ವಸ್ತ್ರಾಭರಣಗಳಿಂದ ಅತಿಶಯವಾಗಿ ಅಲಂಕೃತಳಾದ, (ಮೂರ್ತಿವಂಶಪ್ರದೀಪಾಂ) “ಮೂರ್ತಿ”ಮನೆತನದವರಿಂದ ತಲೆತಲಾಂತರದಿಂದ ನಿತ್ಯವೂ ಅಲಂಕೃತಳಾಗಿ ಉತ್ಸವಮೂರ್ತಿರೂಪದಲ್ಲಿ ಶಿರೋಧಾರ್ಯಳಾಗಿದ್ದು ಆ ವಂಶಕ್ಕೇ ದಾರಿದೀಪವಾಗಿರುವ ದೇವಿಯನ್ನು (ವಂದೇ) ವಂದಿಸುತ್ತೇನೆ. (ಸ್ವರ್ಣರೇಖಾವಿಭೂಷಾಂ) ಶಿಲಾಲಿಂಗ/ವಿಗ್ರಹದಲ್ಲಿ ಸಣ್ಣ ಬಲ/ಶಿವಭಾಗವನ್ನೂ ದೊಡ್ಡ ಎಡ/ಶಕ್ತಿಭಾಗವನ್ನೂ ಪ್ರತ್ಯೇಕಿಸುವ ಸ್ವರ್ಣರೇಖಾಂಕಿತೆಯಾದ(ಲಿಂಗದಲ್ಲಿ ವಿಭಾಜಕರೇಖೆಯ ಬಲಭಾಗ ಹೆಚ್ಚಿದ್ದರೆ ಅದು ಶಿವಲಿಂಗ; ಎಡಭಾಗ ಹೆಚ್ಚಿದ್ದರೆ ದೇವೀವಿಗ್ರಹ), (ವರಯತಿವಿನುತಾಂ) ಯತಿಶ್ರೇಷ್ಠರಾದ ಗೋಕರ್ಣಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳಿಂದ ವಿಶೇಷಪೂಜೆಗೊಳ್ಳುವ, (ಶಂಕರಾಚಾರ್ಯದೃಷ್ಟಾಮ್) ಆದಿಶಂಕರಭಗವತ್ಪಾದರಿಂದ ಕೊಡಚಾದ್ರಿಗಿರಿಯಲ್ಲಿ ತಪೋದ್ವಾರಾ ಪ್ರತ್ಯಕ್ಷೀಕರಿಸಲ್ಪಟ್ಟು, ಅದರ ತಪ್ಪಲಲ್ಲೇ ಪ್ರತಿಷ್ಠಾಪಿಸಲ್ಪಟ್ಟ, (ದೇವೀಂ ವಂದೇ) ಜಗನ್ಮಾತೆಯನ್ನು ನಮಸ್ಕರಿಸುತ್ತೇನೆ. (ಸುರೇಡ್ಯಾಮ್) ದೇವಾನುದೇವತೆಗಳಿಂದ ಸ್ತುತಿಸಲ್ಪಡುವ, (ಅಸುರಕುಲಗತಿಂ) ರಾಕ್ಷಸಾದಿಗಳಿಗೂ ಪರಾಗತಿಪ್ರದಳಾದ, (ಸುಂದರೀಂ) ತ್ರಿಪುರಸುಂದರಿಯೆನಿಸಿದ, (ಶಿವಕೃತಸುಚಲಾಂ) ಸ್ಥಾಣು/ಜಡವಾಗಿರುವ ಪರಶಿವನನ್ನೂ ಚಲನಶೀಲನನ್ನಾಗಿಸುವ ಚೈತನ್ಯ/ಶಕ್ತಿಸ್ವರೂಪಿಣಿಯಾದ, (ಬ್ರಹ್ಮಾಂಡಲೀಲಾಂ) ತನ್ಮೂಲಕ ಅಖಿಲ ಬ್ರಹ್ಮಾಂಡದಲ್ಲಿ ತನ್ನ ಲೀಲೆಯನ್ನು ತೋರುವ, (ಪರ್ಣತೀರ್ಥಾಮ್) ಸೌಪರ್ಣಿಕಾನದೀತೀರದಲ್ಲಿರುವ (ನಿತ್ಯಕೊಲ್ಲೂರುವಾಸಾಂ) ಕೊಲ್ಲೂರುಕ್ಷೇತ್ರದಲ್ಲಿ ಸದಾ ಸಾನ್ನಿಧ್ಯ ಹೊಂದಿರುವ ಜಗನ್ಮಾತೆಯನ್ನು, (ಸೇವೇ) ಭಕ್ತಿ-ಶ್ರದ್ಧೆಗಳಿಂದ ಸೇವೆಮಾಡುತ್ತೇನೆ.

ಶುಂಭಾಂತ್ಯಾಂ ತಾಂ ನಿಶುಂಭಾದ್ಯಸುರತತಿಗತಿಂ ಚಂಡಕೋದಂಡಹಸ್ತಾಂ |
ಧೂಮ್ರಾದೀನ್ರಕ್ತಬೀಜಪ್ರಮುಖಮಹಿಷಹಾಂ ದುಷ್ಟಹಾಂ ಶಿಷ್ಟರಕ್ಷಾಮ್ ||
ವಂದೇ ದೇವೀಂ ಪ್ರಸನ್ನಾsವತು ಸಕಲಚರಾನ್ನಿಶ್ಚರಾನ್ ಲೋಕಪೂಜ್ಯಾ |
ಘೋರಂ ರೂಪಂ ತ್ಯಕ್ತ್ವಾsವತು ವರವರದಾ ಶಾಂತಿದಾ ಶಾಂತರೂಪಾ ||೬||

ವಂದೇ ಲಕ್ಷ್ಮೀಂ ಯತೀಡ್ಯಾಂ ಸಕಲದುರಿತಹಾಂ ಮಾಣಿಲೇ ಲೋಕಪೂಜ್ಯಾಂ |
ಚಂದ್ರಾಭಾಂ ಮೋಹನೇಡ್ಯಾಂ ವರಗುರುವಿನುತಾಮನ್ನಪೂರ್ಣಾಸಮೇತಾಮ್ ||
ಶ್ರೀಧಾಮೇ ನಿತ್ಯಪೂಜ್ಯಾಂ ನಿಖಿಲವಿಭವದಾಂ ಭಕ್ತಿಮುಕ್ತಿಪ್ರದಾಂ ತಾಂ |
ನಿತ್ಯಾನಂದಾಂ ಭಜೇsಹಂ ಸಕಲಜನನುತಾಂ ಸರ್ವದಾಮಾಶ್ರಿತಾನಾಮ್ ||೭||

ವಂದೇ ದೇವೀಂ ಪುರಾಣಾಂ ಪುಣಚಪುರಹಿತಾಂ ಕೃಷ್ಣಪೂಜ್ಯಾಂ ಜನೇಡ್ಯಾಂ |
ಸೂರ್ಯಾಭಾಂ ತಾಂ ತ್ರಿಣೇತ್ರಾಂ ಹರಿಹರಸಹಿತಾಮನ್ನಪೂರ್ಣಾಸಮೇತಾಮ್ ||
ಲಕ್ಷ್ಮೀರೂಪಾಂ ದಯಾರ್ದ್ರಾಮಸುರಮಹಿಷಹಾಂ ಸಿಂಹವಾಹಸ್ವರೂಪಾಂ |
ಹೇ ಮಾತಸ್ತ್ವಾಂ ಭವಾನೀಂ ಗಜಮುಖಸಹಿತಾಂ ಬ್ರಹ್ಮವಂದ್ಯಾಂ ಸುರೇಡ್ಯಾಮ್ ||೮||

ವಂದೇ ದುರ್ಗಾಂ ಸುತನ್ವೀಮಭಯವರಕರಾಂ ಶ್ರೀಕಟೀಲೇ ಸುವಾಸಾಂ |
ಅಸ್ರಣ್ಣೈರ್ನಿತ್ಯಸೇವ್ಯಾಮರುಣಭಯಹರಾಂ ಭ್ರಾಮರೀಮಾದಿಶಕ್ತಿಮ್ ||
ಜಾಯಾಮೀಶಾಂ ಪುರಾರೇರ್ಭವದುರಿತಹರಾಂ ಲೋಕವಂದ್ಯಾಂ ಸುರೇಡ್ಯಾಂ |
ಸೇವೇ ತಾಮನ್ನಪೂರ್ಣಾಂ ಘನಮಹಿಮಯುತಾಂ ಕೊಡ್ಯಪುರ್ಯಾಂ ಸುಪೂಜ್ಯಾಮ್ ||೯|

ಶ್ರೀದೇವೀಸ್ರಗ್ಧರಾಸ್ತೋತ್ರ | ರತ್ನಂ ನವಕಸಂಯುತಮ್ ||
ಸುಭಕ್ತ್ಯಾ ಯ: ಪಠೇನ್ನಿತ್ಯಂ | ಸರ್ವವಾಂಛಿತಮಾಪ್ನುಯಾತ್ ||೧೦||

ಇತಿ ಶ್ರೀದೇವೀಕೃಪಯಾ ಸದ್ಗುರುಪ್ರೇರಣಯಾ ಚ  ದಂಬೆಕೃಷ್ಣಮೂರ್ತಿವಿರಚಿತಮಿದಂ ಶ್ರೀದೇವೀಸ್ರಗ್ಧರಾನವಕಸ್ತೋತ್ರರತ್ನಮಿದಂ ಜಗದಂಬಾರ್ಪಣಮಸ್ತು ||
||ಶ್ರೀ ದೇವ್ಯೈ ಮಹಿಷಮರ್ದಿನ್ಯೈ ನಮ:||

Comments

Popular posts from this blog

ಸ್ತೋತ್ರಸಂಹಿತಾ ೫.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೫ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೩ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)