ಶ್ರೀಕೃಷ್ಣಸಹಸ್ರನಾಮಸ್ತೋತ್ರಭಾಷ್ಯಮ್

श्रीकृष्णसहस्रनामस्तोत्रभाष्यम्
(ಶ್ರೀಕೃಷ್ಣಸಹಸ್ರನಾಮಸ್ತೋತ್ರಭಾಷ್ಯ)
ॐ॥श्री विघ्नेश्वराय नम:॥卐
ಓ೩ಮ್|| ಶ್ರೀ ವಿಘ್ನೇಶ್ವರಾಯ ನಮ: ||ಸ್ವಸ್ತಿ

(ध्यानम् ) ( ಧ್ಯಾನಮ್ )

श्रीकृष्णो मुरळीधरो गिरिधरो गोवर्धन: श्रीधरो
मायामोहनपूर्णविष्णुपरमो नारायण: केशव: ।
पूर्णज्ञानविशेषदिव्यपुरुष: श्रीदेवकीनन्दन:
पायान्न: शरणागतांश्च कृपया दीयात्परं मङ्गलम् ॥

( ಶ್ರೀಕೃಷ್ಣೋ  ಮುರಳೀಧರೋ ಗಿರಿಧರೋ ಗೋವರ್ಧನಶ್ಶ್ರೀಧರೋ
ಮಾಯಾಮೋಹನಪೂರ್ಣವಿಷ್ಣುಪರಮೋ ನಾರಾಯಣ: ಕೇಶವ: |
ಪೂರ್ಣಜ್ಞಾನವಿಶೇಷದಿವ್ಯಪುರುಷಶ್ಶ್ರೀದೇವಕೀನನ್ದನ:
ಪಾಯಾನ್ನಶ್ಶರಣಾಗತಾಂಶ್ಚ ಕೃಪಯಾ ದೀಯಾತ್ಪರಂ ಮಙ್ಗಲಮ್ || )

पदविभाग: सान्वयार्थ:(ಅನ್ವಯಾರ್ಥ ಸಹಿತ ಪದವಿಭಾಗ):-
श्रीदेवकीनन्दन: (ಶ್ರೀದೇವಕೀನನ್ದನ:)- “देवकी ब्रह्मविद्येयं या वेदैरुपगीयते” इति श्रुते: तस्याम् ब्रह्मविद्यायां देवक्यां वा आविर्भूत: प्रकाशित: देवकीपुत्र: विद्यावेद्य: परमात्मा। तथा च देवक्या: सुत:, देवक्याम् आनन्दजनक: स्वलीलया इति पौराणिकादिमतम्। ( “ದೇವಕೀ ಬ್ರಹ್ಮವಿದ್ಯೇಯಂ ಯಾ ವೇದೈರುಪಗೀಯತೇ” ಎಂಬ ವೇದವಾಕ್ಯದ ಆಧಾರದಲ್ಲಿ, ದೇವಕಿ ಎಂದರೆ ಬ್ರಹ್ಮವಿದ್ಯೆ. ಬ್ರಹ್ಮವಿದ್ಯೆಯಲ್ಲಿ ಆವಿರ್ಭವಿಸಿದವನು, ಪ್ರಕಾಶಿತನಾದವನು ದೇವಕೀನಂದನನು, ದೇವಕೀಪುತ್ರನು. ಅವನು ಬ್ರಹ್ಮ/ವೇದವಿದ್ಯೆಯ ಮೂಲಕ ತಿಳಿಯಲ್ಪಡುವವನು, ಅವನೇ ವೇದಪ್ರತಿಪಾದ್ಯನಾದ ಪರಮಾತ್ಮನು. ಅಂತೆಯೇ, ದೇವಕಿಯ ಮಗ, ದೇವಕಿಗೆ ತನ್ನ ಲೀಲೆಗಳಿಂದ ಆನಂದವನ್ನು ಉಂಟುಮಾಡಿದವನು ಎಂಬುದು ಪುರಾಣಾದಿಗಳ ಅಭಿಪ್ರಾಯ/ಹೇಳಿಕೆ.)
मायामोहनपूर्णविष्णुपरम: (ಮಾಯಾಮೋಹನಪೂರ್ಣವಿಷ್ಣುಪರಮ:)- स्वमायाशक्त्या विमोहयत्यखिललोकं य: स: मायामोहन: । विश्वं व्याप्नोति प्रविशति चेति विष्णुस्तस्य पूर्णावताररूपीति पूर्णविष्णु:। परम् परत्वम् उत्कृष्टं वा माति इति परम: । आद्य:, प्रधानम्, प्रणव:/ओङ्कार:, अग्रेसर इति वा । मायामोहनश्चासौ पूर्णविष्णुश्च मायामोहनपूर्णविष्णु:। मायामोहनपूर्णविष्णुश्चासौ परमश्च मायामोहनपूर्णविष्णुपरम:। (ತನ್ನ ಮಾಯಾಶಕ್ತಿಯಿಂದ ಇಡಿಯ ಜಗತ್ತನ್ನೇ ವಶೀಕರಿಸಬಲ್ಲ ಮೋಹಕಶಕ್ತಿಯುತನು ಮಾಯಾಮೋಹನ ನು. ಸಮಗ್ರ ವಿಶ್ವವನ್ನು ವ್ಯಾಪಿಸಿ, ಅದನ್ನು ಸ್ವತ: ಪ್ರವೇಶಿಸಿದವನು ವಿಷ್ಣುವು. ವಿಷ್ಣುವಿನ ಪೂರ್ಣಾವತಾರರೂಪಿಯೆಂಬುದಕ್ಕಾಗಿ ಪೂರ್ಣವಿಷ್ಣು ವೇ ಕೃಷ್ಣನಾಗಿ ಧರೆಗಿಳಿದು ಬಂದನೆಂದು ಹೇಳಿದೆ. ಶ್ರೇಷ್ಠತಮನೆಂದೂ, ಪರತತ್ತ್ವವೆಂದೂ ಸಕಲರಿಂದ ಅಳೆಯಲ್ಪಟ್ಟವನು, ಪರಿಗಣಿಸಲ್ಪಟ್ಟವನು ಪರಮ ನು. ಆದ್ಯನು, ಮೂಲನು, ಪ್ರಧಾನನು, ಪ್ರಣವ/ಓಂಕಾರಸ್ವರೂಪನು, ಅಗ್ರೇಸರನು ಇತ್ಯಾದಿ.)
पूर्णज्ञानविशेषदिव्यपुरुष: (ಪೂರ್ಣಜ್ಞಾನವಿಶೇಷದಿವ್ಯಪುರುಷ:)- परिपूर्णज्ञानयुत: सर्वज्ञ:। अन्तेऽवसाने वर्त्तते इति विशेष: ; अन्त्य: यदपेक्षया विशेषो नास्तीत्यर्थ:। दीव्यति स्वप्रकाशेणेवेति दिवि भव: इति वा दिव्य:। पुरि देहे शेते इति पुरुष: आत्मा परमात्मा वा।
(ಪರಿಪೂರ್ಣಜ್ಞಾನಿಯೂ, ಸರ್ವಜ್ಞನೂ, ಮಹಾಪ್ರಳಯದ ಕೊನೆಯಲ್ಲೂ, ಸೃಷ್ಟಿಯೆಲ್ಲವೂ ಲಯಹೊಂದಿದಾಗಲೂ ಇರುವವನೂ, ಯಾವನನ್ನು ಹೊರತುಪಡಿಸಿ ಬೇರೆ ವಿಶೇಷವೇನೂ ಇಲ್ಲವೋ ಅಂಥವನೂ, ಸ್ವಪ್ರಕಾಶದಿಂದಲೇ ಪ್ರಕಾಶಿಸುವವನೂ/ದಿವ(ದಿವ್ಯ/ದೇವಲೋಕ)ದಲ್ಲಿ ಇರುವವನೂ, ಪುರವೆಂದು ಕರೆಯಲ್ಪಡುವ ದೇಹದಲ್ಲಿ ವಿಶ್ರಮಿಸುವ ಆತ್ಮಾ ಅಥವಾ ಪರಮಾತ್ಮನು.)
मुरळीधर:(ಮುರಳೀಧರ:)- मुरळी स्वकरयो: येन धार्यते स:। वंशीहस्त:। (ಕೊಳಲು ತನ್ನೆರಡು ಕರಗಳಲ್ಲಿ ಯಾವನಿಂದ ಧರಿಸಲ್ಪಡುತ್ತದೋ ಅವನು. ವಂಶೀಹಸ್ತನು.)
गिरिधर:(ಗಿರಿಧರ:)- गिरिं गोवर्धनं धृतवान् य: स:। साम्प्रदायिकं इन्द्रपूजां विहाय यदा गोपालकवंशज: श्रीकृष्ण: गोवर्धनगिरिं गोसन्ततिपोषकतृणादीनां मूलमिति मत्वा पूजयति, तदा प्ररुष्ट: इन्द्र: कुम्भद्रोणवर्षं वर्षति। तत्काले आपद्रक्षक: कृष्ण: गोवर्धनगिरिम् उत्तार्य गोवंशं गोपालकांश्च तदध: रक्षति।(ಗೋವರ್ಧನಗಿರಿಯನ್ನು ಎತ್ತಿ ಹಿಡಿದವನು. ಯಾವಾಗ ಗೋಪಾಲಕವಂಶಜನಾದ ಶ್ರೀಕೃಷ್ಣನು ಗೋವರ್ಧನಗಿರಿಯನ್ನು ತಮ್ಮ ಗೋಸಂತತಿಯ ಆಹಾರವಾದ ಹುಲ್ಲು ಮುಂತಾದ ಮೇವಿಗೆ ಆಶ್ರಯಸ್ಥಾನವೆಂದರಿತು, ಸಾಂಪ್ರದಾಯಿಕವಾಗಿ ತಲತಲಾಂತರಗಳಿಂದ ಮಾಡುತ್ತಾ ಬಂದಿದ್ದ ಇಂದ್ರಪೂಜೆಯನ್ನು ಬಿಟ್ಟು, ಗೋವರ್ಧನಗಿರಿಯನ್ನೇ ಪೂಜಿಸುತ್ತಾನೋ, ಆಗ ಬಹಳ ರೋಷಾನ್ವಿತನಾದ ಇಂದ್ರನು ಮುಸಲಧಾರೆಯಂತಹ ಭೀಕರ ಮಳೆಯನ್ನು ಧಾರಾಕಾರವಾಗಿ ಎಡೆಬಿಡದೆ ಸುರಿಸುತ್ತಾನೆ. ಆ ಸಂದರ್ಭದಲ್ಲಿ, ಆಪದ್ರಕ್ಷಕನಾದ ಕೃಷ್ಣನು ಇಡೀ ಗೋವರ್ಧನಗಿರಿಯನ್ನೇ ಮೇಲೆತ್ತಿ ಹಿಡಿದು, ಅದರಡಿಯಲ್ಲಿ ಸಮಸ್ತ ಗೋವುಗಳನ್ನೂ, ಗೋಪಾಲಕರನ್ನೂ ರಕ್ಷಿಸುತ್ತಾನೆ. ಇದರಿಂದ ಕೃಷ್ಣನಿಗೆ ಗಿರಿಧರ,ಗಿರಿಧಾರೀ ಎಂಬ ಹೆಸರುಗಳು ಬಂತು.)
गोवर्धन:(ಗೋವರ್ಧನ:)- गा: वर्द्धयति य: स: । गोपालक:, गोपति:, गोप:, गोपाल: इत्यादय:।(ಗೋವುಗಳನ್ನು ಸಾಕಿ, ಅವುಗಳ ವಂಶಾಭಿವೃದ್ಧಿಯನ್ನು , ಸಂಖ್ಯಾಭಿವೃದ್ಧಿಯನ್ನು ಹಾಗೂ ಗೋಸಂಪತ್ಸಮೃದ್ಧಿಯನ್ನು ಮಾಡುವವನು. ಗೋಪಾಲಕ, ಗೋಪತಿ, ಗೋಪ, ಗೋಪಾಲ…..ಇತ್ಯಾದಿ.)
श्रीधर:(ಶ್ರೀಧರ:)- श्री: सर्वा येन धार्यते, श्रिय: लक्ष्म्या: पति: इति वा।(ಸಕಲ ಸಿರಿಸಂಪದಗಳ ಮೂಲನು; ಶ್ರೀಪತಿ; ಲಕ್ಷ್ಮೀಪತಿ.)
नारायण:(ನಾರಾಯಣ:)- श्रीमन्नारायणस्य अवतारस्वरूप:। नारस्य मोक्षस्य अयनम् आश्रयस्थानम् वा। नारा: जलं अयनं स्थानं यस्य। नारस्य ज्ञानस्य अयनं प्राप्तिर्यस्मादिति वा। नराणां समूहं नारं तत्रायनं यस्य, सर्वप्राणिबुद्धिगुहाहृन्निवासात् शुद्धचैतन्यमित्यर्थ:। (ಶ್ರೀಮನ್ನಾರಾಯಣನ ಅವತಾರಿ; ನಾರ/ಮೋಕ್ಷ-ದ ಅಯನ/ ಆಶ್ರಯಸ್ಥಾನ; ನಾರಾ:=ಜಲವು ಯಾವನ ವಾಸಸ್ಥಾನವೋ ಅವನು. ನಾರ/ಜ್ಞಾನದ ಮೂಲ; ಜ್ಞಾನವು ಯಾರ ಅನುಗ್ರಹದಿಂದ ಪ್ರಾಪ್ತವಾಗುತ್ತದೋ ಅವನು; ನರರ ಸಮೂಹವು ನಾರವು, ಆ ಸಮೂಹದಲ್ಲಿ ವಾಸವಾಗಿರುವವನು, ಸರ್ವಪ್ರಾಣಿಗಳ ಬುದ್ಧಿಯಲ್ಲಿ, ಆಂತರ್ಯದಲ್ಲಿ , ಹೃದಯದಲ್ಲಿ ಆತ್ಮಸ್ವರೂಪಿಯಾಗಿರುವ ಶುದ್ಧಚೈತನ್ಯಸ್ವರೂಪಿ.)
केशव:(ಕೇಶವ:)- केशिनं वाति हन्ति वा। अभिरूपा: प्रशस्ता: केशा: सन्ति अस्य। कश्च अश्च ईशश्च केशा: त्रिमूर्तय: ; ते वशे वर्तन्ते यस्य स:। कश्च ईशश्च केशौ पुत्रपौत्रत्वेन भवतोऽस्य। के जले शववत् भातीति प्रलयकाले क्षीरोदशायित्वाद्वा। (ಕೇಶಿಯೆಂಬ ರಕ್ಕಸನನ್ನು ಕೊಂದವನು; ಸುಂದರವಾದ ತಲೆಗೂದಲುಗಳಿರುವವನು; ಕ-ಬ್ರಹ್ಮಾ, ಅ-ವಿಷ್ಣು ಹಾಗೂ ಈಶ-ಶಿವ, ಹೀಗೆ ಕ+ಅ+ಈಶ=ಕೇಶ ಎಂದರೆ ತ್ರಿಮೂರ್ತಿಸ್ವರೂಪ, ಮೂರೂ ಮೂರ್ತಿಗಳೂ ಯಾರ ವಶವರ್ತಿಗಳೋ ಅಂಥವನು; ಕ/ಬ್ರಹ್ಮಾ + ಈಶ/ರುದ್ರ- ಕೇಶರಿಬ್ಬರು ಕ್ರಮವಾಗಿ ಯಾವನಿಗೆ ಪುತ್ರ ಹಾಗೂ ಮೊಮ್ಮಗ(ಬ್ರಹ್ಮನ ಹಣೆಯಿಂದ ಮನ್ಯುರೂಪಿಯಾಗಿ ಜನಿಸಿದ್ದರಿಂದ)ನಾಗಿದ್ದಾರೋ ಅವನು; ಪ್ರಲಯಕಾಲದಲ್ಲಿ ಕ್ಷೀರಸಾಗರದಲ್ಲಿ/ಜಲರಾಶಿ(ಕ)ಯಲ್ಲಿ ಮಲಗಿದ್ದು, ಶವದಂತೆ ಕಾಣಿಸುವವನು.)
श्रीकृष्ण: (ಶ್ರೀಕೃಷ್ಣ:)- 
(१)कर्षत्यखिललोकं चराचरांश्चाकर्षतीति स्वमात्मानं प्रति कान्तवत्। (२)कर्षत्यरीन् महाप्रभावशक्त्या पतङ्गान् दीपवत् । 
(३)कर्षत्यात्मसात्करोति यावदानन्दत्वेन परिणमयति भक्तानां मन:। 
(४)कर्षति सर्वान् स्वकुक्षौ प्रलयकाले। 
(५)‘कर्षणात् कृष्णो रमणाद् रामो व्यापनाद् विष्णु:’ इति श्रुते: तथात्वम्। 
(६)कर्षति पापानि शरणागतानाम्। 
(७)कृषिर्भूवाचक: शब्दो णश्च निर्वृति(सुस्थिति)कारक:।
     तयोरैक्यात् परं ब्रह्म कृष्ण इत्यभिधीयते॥  इति श्रीधरस्वामी। 
(८)तथा च महाभारते-
कृषिर्भूवाचक: शब्दो णश्च निर्वृति(सुस्थिति)कारक:।
कृष्णस्तद्भावयोगाच्च कृष्णो भवति सात्त्वत:॥
(९)भगवदवतारविशेष:। 
[ (೧)ಸಮಸ್ತ ಲೋಕವನ್ನೂ,ಅದರಲ್ಲಿನ ಎಲ್ಲ ಚರ-ಅಚರಗಳನ್ನೂ ತನ್ನೆಡೆಗೆ ಅಯಸ್ಕಾಂತದ ಚುಂಬಕಶಕ್ತಿಯಂತೆ ಸೆಳೆದುಕೊಳ್ಳುವವ; 
( ೨)ತನ್ನ ಮಹಾ ಪ್ರಭಾವಯುತ ಶಕ್ತಿಯಿಂದ ಶತ್ರುಗಳನ್ನು, ದೀಪವು ಪತಂಗಗಳನ್ನು ಆಕರ್ಷಿಸುವಂತೆ, ತನ್ನೆಡೆಗೆ ಆಕರ್ಷಿಸಿ ನಾಶಮಾಡುವವನು; (೩)ಭಕ್ತರ ಮನಸ್ಸನ್ನು ತನ್ನೆಡೆಗೆ ಆಕರ್ಷಿಸಿ, ತನ್ನಲ್ಲೇ ಲೀನವಾಗಿಸಿ, ಪರಮಾನಂದದ ಫಲವನ್ನೀಯುವವನು;
(೪)ಪ್ರಳಯಕಾಲದಲ್ಲಿ ತನ್ನೊಡಲೊಳಗೆ ಎಲ್ಲವನ್ನೂ/ಸಮಗ್ರ ಸೃಷ್ಟಿಯನ್ನೂ ಆಕರ್ಷಿಸಿ, ಬ್ರಹ್ಮಾಂಡೋದರನಾಗುವವನು; 
(೫)‘ಕರ್ಷಣೆಯಿಂದ ಕೃಷ್ಣ, ರಮಿಸುವಿಕೆ/ಆನಂದವೀಯುವಿಕೆಯಿಂದ ರಾಮ, ವ್ಯಾಪಿಸುವಿಕೆಯಿಂದ ವಿಷ್ಣು’ ಎಂಬುದು ಶ್ರುತಿ/ವೇದದ ನಿರ್ವಚನ; 
(೬)ತನ್ನನ್ನು ಶರಣುಹೊಂದಿದವರ ಪಾಪಗಳನ್ನು ಭಸ್ಮಮಾಡುವವನು; (೭)‘ಕೃಷಿ’ಯು ಭೂವಾಚಕ, ‘ಣ’ಕಾರವು ಸುಸ್ಥಿತಿಕಾರಕ. ಇವೆರಡರ ಸೇರುವಿಕೆಯಿಂದ ಭೂಮಿಯೇ ಮುಂತಾದ ಸಕಲಸೃಷ್ಟಿಯನ್ನು ಸುಸ್ಥಿತಿಯಲ್ಲಿಡುವ ಪರಬ್ರಹ್ಮರೂಪನಾದ ಶ್ರೀ’ಕೃಷ್ಣ’ನೆಂಬ ಅರ್ಥ ಬರುತ್ತದೆ. ಇದು ಶ್ರೀಧರಸ್ವಾಮಿಯ ಅಭಿಮತ.
(೮)ಹಾಗೆಯೇ, ಮಹಾಭಾರತದ ಪ್ರಕಾರ- ‘ಕೃಷಿ’ಯು ಭೂವಾಚಕ, ‘ಣ’ಕಾರವು ಸುಸ್ಥಿತಿಕಾರಕ. ಇವೆರಡೂ ಶಬ್ದಗಳ ಭಾವಾರ್ಥಗಳ ಜೋಡಣೆಯಿಂದ ಸತ್ತ್ವಗುಣಭರಿತನಾದ, ಸಾತ್ತ್ವತ(ಯಾದವ)ಕುಲಸಂಭವನಾದ ‘ಕೃಷ್ಣ’ ಎಂಬ ಶಬ್ದವು ಸಿದ್ಧಿಸುವುದು.
(೯)ಭಗವಂತನ ಒಂದು ಅವತಾರವಿಶೇಷವು. ]
शरणागतान् न: पायात् च(ಶರಣಾಗತಾನ್ ನ: ಪಾಯಾತ್ ಚ)- स: श्रीकृष्ण: शरणं गतान् अस्मान् रक्षतु च। (ಅಂತಹ ಶ್ರೀಕೃಷ್ಣನು ಶರಣು ಹೊಂದಿರುವ ನಮ್ಮನ್ನು ರಕ್ಷಿಸಲಿ, ಹಾಗೂ)
परं मङ्गलं दीयात्(ಪರಂ ಮಂಗಲಂ ದೀಯಾತ್)- परमम् आत्यन्तिकं च शुभम् आतनोतु। (ಶ್ರೇಷ್ಠವಾದ ಹಾಗೂ ಅಂತಿಮ ಪರಗತಿಪ್ರದವಾದ ಮಂಗಲವನ್ನೀಯಲಿ.)
छन्दोविचारः(ಛಂದೋವಿಚಾರ)-
    ध्यानश्लोकमिदं शार्दूलविक्रीडितवृत्ते निबद्धम्। अस्य च लक्षणम्-
“सूर्याश्वैर्मसजस्ततास्सगुरव: शार्दूलविक्रीडितम् ”। 
मगण:(सर्वगुरु:),सगण:(अन्त्यगुरु:),जगण:(मध्यगुरु:),सगण:,तगण:(अन्त्यलघु:),तगण:,गुरु:। १९वर्णात्मकं वैदिक-शक्वरीच्छन्दोजातमिदं लौकिकं वृत्तम्।
गणनियम:-
आदिमध्यावसानेषु यरता यान्ति लाघवम्।
भजसा गौरवं यान्ति मनौ तु गुरुलाघवम्॥

य-र-त-गणानाम् अनुक्रमेण आदि-मध्य-अन्त्येषु लघु: भवति अन्यत्र च गुरू। यथा-
यगण:-ल,गु,गु। रगण:-गु,ल,गु। तगण:-गु,गु,ल।
भ-ज-स-गणानां तथैव गुरु:। यथा हि-
भ-गु,ल,ल। ज-ल,गु,ल। स-ल,ल,गु।
गुरुत्वसिद्धि:-
सानुस्वारश्च दीर्घी च विसर्गश्च गुरुर्भवेत्।
वर्ण: संयुक्तपूर्वश्च तत: पादान्तगोऽपि वा॥

अनुस्वारसहितवर्णा:, दीर्घवर्णा:, विसर्गयुक्ताक्षरा:, संयुक्ताक्षरात् पूर्वस्थवर्ण:, पद्येषु पादान्त्यस्थवर्ण: लघुश्चेदपि चैते गुरुत्वमाप्नुवन्ति।
(ಈ ಧ್ಯಾನಶ್ಲೋಕವು ಶಾರ್ದೂಲವಿಕ್ರೀಡಿತವೃತ್ತದಲ್ಲಿ ರಚಿಸಲ್ಪಟ್ಟಿದೆ. ಇದರ ಲಕ್ಷಣ-
“ಸೂರ್ಯಾಶ್ವೈರ್ಮಸಜಸ್ತತಾಸ್ಸಗುರವ: ಶಾರ್ದೂಲವಿಕ್ರೀಡಿತಮ್ ” |
ಮಗಣ(ಸರ್ವಗುರು),ಸಗಣ(ಅಂತ್ಯಗುರು),ಜಗಣ(ಮಧ್ಯಗುರು),ಸಗಣ,ತಗಣ(ಅಂತ್ಯಲಘು),ತಗಣ,ಗುರು| ೧೯ ಅಕ್ಷರಯುಕ್ತವಾದ ವೈದಿಕ ಶಕ್ವರೀಚ್ಛಂದಸ್ಸಿನಿಂದ ಹುಟ್ಟಿದ ಲೌಕಿಕವೃತ್ತವಿದು.
ಗಣನಿಯಮ-
ಆದಿಮಧ್ಯಾವಸಾನೇಷು ಯರತಾ ಯಾನ್ತಿ ಲಾಘವಮ್ |
ಭಜಸಾ ಗೌರವಂ ಯಾನ್ತಿ ಮನೌ ತು ಗುರುಲಾಘವಮ್ ||

ಯ-ರ-ತ-ಗಣಗಳಿಗೆ ಅನುಕ್ರಮವಾಗಿ ಆದಿ,ಮಧ್ಯ,ಅಂತ್ಯದಲ್ಲಿ ಲಘುವು ಬರುತ್ತದೆ ಮತ್ತು ಇತರೆಡೆ ಗುರುಗಳೆರಡು ಬರುವುದು. ಹೇಗೆಂದರೆ-
ಯಗಣ-ಲ,ಗು,ಗು. ರಗಣ-ಗು,ಲ,ಗು. ತಗಣ-ಗು,ಗು,ಲ.
ಭ-ಜ-ಸ-ಗಣಗಳಿಗೆ ಅದೇ ರೀತಿ ಗುರುವು ಬರುತ್ತದೆ. ಹೇಗೆಂದರೆ-
ಭ-ಗು,ಲ,ಲ. ಜ-ಲ,ಗು,ಲ. ಸ-ಲ,ಲ,ಗು.
ಗುರುತ್ವಸಿದ್ಧಿ-
ಸಾನುಸ್ವಾರಶ್ಚ ದೀರ್ಘೀ ಚ ವಿಸರ್ಗಶ್ಚ ಗುರುರ್ಭವೇತ್ |
ವರ್ಣ: ಸಂಯುಕ್ತಪೂರ್ವಶ್ಚ ತತ: ಪಾದಾನ್ತಗೋऽಪಿ ವಾ ||

ಅನುಸ್ವಾರಸಹಿತವರ್ಣಗಳು, ದೀರ್ಘವರ್ಣಗಳು, ವಿಸರ್ಗಯುಕ್ತಾಕ್ಷರಗಳು, ಒತ್ತಕ್ಷರದ ಹಿಂದಿನ ಅಕ್ಷರ, ಪದ್ಯಗಳಲ್ಲಿ ಪಾದದ ಕೊನೆಯ ವರ್ಣವು ಲಘುವಾಗಿದ್ದರೂ- ಇವುಗಳಿಗೆ ಗುರು ಪ್ರಸ್ತಾರ ಬರುತ್ತದೆ.)

देवकीनन्दनः कृष्णो वसुदेवात्मजो हरिः ।
अष्टमीतिथिसम्भूतश्श्रावणे कृष्णसम्भवः ॥१॥(१-६)
ದೇವಕೀನನ್ದನ: ಕೃಷ್ಣೋ ವಸುದೇವಾತ್ಮಜೋ ಹರಿ:|
ಅಷ್ಟಮೀತಿಥಿಸಮ್ಭೂತಶ್ಶ್ರಾವಣೇ ಕೃಷ್ಣಸಮ್ಭವ:||೧||(೧-೬)

१)देवकीनन्दन:(೧.ದೇವಕೀನಂದನ:)- देवकीदेव्या: तनुज:, तस्यामानन्दजनक: स्वलीलया च । देवतासम्बद्धा देवकी देवकीयमिति वा । तादृशं देवसम्बद्धं नन्दनवनमिव सर्वकामधुग् देवानाम् एष इति ॥ (ದೇವಕೀದೇವಿಯ ಮಗ; ಅವಳಿಗೆ ತನ್ನ ಲೀಲೆಗಳಿಂದ ಆನಂದವನ್ನುಂಟುಮಾಡಿದವನು. ದೇವತೆಗಳಿಗೆ ಸಂಬಂಧಿಸಿದವಳು ದೇವಕೀ ಅಥವಾ ದೇವಕೀಯವು. ಅಂತಹ ದೇವಸಂಬಂಧಿತ ನಂದನವನದಂತೆ ಬಯಸಿದ್ದನ್ನು ದೇವತೆಗಳಿಗೆ ಸುರಿಸುವವನೀತನೆಂಬುದಾಗಿ.) (1)
२)कृष्ण:(೨.ಕೃಷ್ಣ:)- सर्वाकर्षणात् पापभस्मीकरणात् स्थितिकर्तृत्वाच्च कृष्ण:। (ಎಲ್ಲರನ್ನೂ ತನ್ನೆಡೆಗೆ ಆಕರ್ಷಿಸುವವ, ಶರಣಾಗತರ ಪಾಪಗಳನ್ನು ಭಸ್ಮಮಾಡುವವ, ಸ್ಥಿತಿಕರ್ತೃ.) (2)
३)वसुदेवात्मज:(೩.ವಸುದೇವಾತ್ಮಜ:)- वसुदेवस्य यदुवंशीयस्य तनय:।(ಯದುವಂಶೀಯನಾದ ವಸುದೇವನ ಮಗ.) (3)
४)हरि:(೪.ಹರಿ:)- हरति पापानि इति। ( ಪಾಪಗಳನ್ನು ಪರಿಹರಿಸುವವನು,ನಾಶಮಾಡುವವನು) (4)
५)अष्टमीतिथिसम्भूत:(೫.ಅಷ್ಟಮೀತಿಥಿಸಂಭೂತ:)- अष्टम्यां तिथौ अवतारित:।(ಅಷ್ಟಮೀ ತಿಥಿಯಂದು ಅವತರಿಸಿದವನು) (5)
६)श्रावणे कृष्णसम्भव:(೬.ಶ್ರಾವಣೇ ಕೃಷ್ಣಸಂಭವ:)- श्रावणमासे कृष्णपक्षे जात:।(ಶ್ರಾವಣ ಮಾಸದ ಕೃಷ್ಣಪಕ್ಷದಲ್ಲಿ ಜನಿಸಿದವನು) (6)

विष्णुपूर्णावतारः को मथुरापुरजन्मभूः ।
वासुदेवो महातेजः कोटिसूर्यप्रभायुतः ॥२॥(७-१२)
ವಿಷ್ಣುಪೂರ್ಣಾವತಾರ: ಕೋ ಮಥುರಾಪುರಜನ್ಮಭೂ:|
ವಾಸುದೇವೋ ಮಹಾತೇಜ: ಕೋಟಿಸೂರ್ಯಪ್ರಭಾಯುತ:||೨||(೭-೧೨)

७)विष्णुपूर्णावतार:(೭.ವಿಷ್ಣುಪೂರ್ಣಾವತಾರ:)- विष्णो: पूर्णावतारस्वरूप:।(ವಿಷ್ಣುವಿನ ಪೂರ್ಣಾವತಾರಿಯು) (7)
८)क:(೮.ಕ:)- कचति दीप्यते स्वेन ज्योतिषा ज्योतिर्मयत्वात्। क: क्रो धीशो महाकाली कामदेव: प्रकाशक:। कपाली तेजस: शान्तिर्वासुदेवो जयानल:॥१॥ चक्री प्रजापति: सृष्टिर्दक्ष-स्कन्दो विशाम्पति:। अनन्त: पार्थिवोविन्दुस्तापिनी परमात्मक:॥२॥ वर्गाद्यश्च मुखी ब्रह्मा वर्णाद्योऽम्भ: शिवो जलम्। माहेश्वरो तुला पुष्पं मङ्गलश्चरणं कर:॥३॥ निव्या कामेश्वरी मुख्य: कामरूपो गजेन्द्रक:। श्री पुरं रमणो रङ्गकुसुमः प्रणवार्थक:॥४॥(ತನ್ನ ಸ್ವಂತ ಜ್ಯೋತಿಯಿಂದ/ಜ್ಯೋತಿರ್ಮಯತ್ವದಿಂದಾಗಿ ಬೆಳಗುವಂತಹ ಸ್ವರೂಪ) (8)
९)मथुरापुरजन्मभू:(೯.ಮಥುರಾಪುರಜನ್ಮಭೂ:)- मथुरापुरी यस्य जन्मभूमि: स:(कृष्ण)। यद्वा मथुरा नाम पुर्यां प्राप्तजन्म:।(ಮಥುರಾಪುರವು ಯಾರ ಜನ್ಮಭೂಮಿಯೋ ಅವನು(ಕೃಷ್ಣ)| ಮಥುರಾ ಪಟ್ಟಣದಲ್ಲಿ ಜನಿಸಿದವನು) (9)
१०)वासुदेव:(೧೦.ವಾಸುದೇವ:)- 
(१)  वसुदेवस्य अपत्यं पुमान्। 
(२) सर्वत्रासौ वसत्यात्मरूपेण विश्वम्भरत्वात्। 
(३)   “सर्वत्रासौ समस्तं च वसत्यत्रेति वै यत:।
      तत: स वासुदेवेति विद्वद्भि: परिपठ्यते॥”
      सर्वोऽत्र वसति सर्वत्रासौ वसतीति वा वासु:, वासुश्चासौ देवश्च। 
(४)   वसति वासं गच्छति वा इति वासु:। दीव्यति क्रीडति जिगीषते व्यवहरति                                                               गच्छति द्योतते,स्तूयते मुमुुक्षुभिर्वा इति देव:। वासुश्चासौ देवश्च वासुदेव:।
(५)   “छादयामि जगद्विश्वं भूत्या(मायया) सूर्य इवांशुभि:।
        सर्वभूताधिवासश्च वासुदेवस्तत: स्मृत:॥”
(६)   “वसनात्सर्वभूतानां वसुत्वाद्दवयोनित:।
         वासुदेवस्ततो ज्ञेयो योगिभिस्तत्त्ववादिभि:॥”
(७)    स च चतुर्व्यूहस्य नारायणाख्यस्य परमात्मन: अंशभेद इति वैष्णवा मन्यन्ते।
        “एकांशेन जगत्कृत्स्नं व्याप्य नारायण: स्थित:।
         चतुर्द्धावस्थितो व्याप्तो सगुणो निर्गुणोऽपि वा॥
         एका भगवतो मूर्तिर्ज्ञानरूपा शिवाऽमला।
         वासुदेवाभिधाना सा गुणातीता सुनिष्कला॥” 

अनिरुद्धः, प्रद्युम्नः, सङ्कर्षणः, पर-वासुदेवः च एतानि चत्वारि क्रमेण जीवस्य जाग्रत्-स्वप्न-सुषिप्ति-तुरीयेषु अवस्थासु सतः, अवतो भगवतः विष्णोः चतुर्व्यूहस्वरूपाङ्गानि ॥
(८)    “वासनाद्वासुदेवस्य वासितोऽयं जगत्त्रयम्।
         सर्वभूतनिवासोऽसि वासुदेव नमोऽस्तुते॥”

{(೧) ವಸುದೇವನ ಮಗ.
 (೨) ವಿಶ್ವದಲ್ಲೆಲ್ಲ ತುಂಬಿಕೊಂಡು ಆತ್ಮರೂಪದಿಂದ ಎಲ್ಲೆಡೆಯೂ ವಾಸವಾಗಿರುವವನು.
 (೩) ಇವನು ಎಲ್ಲೆಲ್ಲೂ ವಾಸವಾಗಿದ್ದಾನೆ ಹಾಗೂ ಇವನಲ್ಲಿ ಸಮಸ್ತವೂ ನೆಲೆಗೊಂಡಿದೆ ಎಂಬುದರಿಂದಾಗಿ ವಾಸು:| ವಾಸುವೂ, ದೇವನೂ ಆದವನು ವಾಸುದೇವನು-ಎಂದು ವಿದ್ವಜ್ಜನರಿಂದ ಪ್ರಶಂಸಿತನಾದವನು.
 (೪) ವಾಸಿಸುತ್ತಾನೆ ಅಥವಾ ವಾಸವನ್ನು ಹೊಂದಿದ್ದಾನೆ ಎಂಬುದರಿಂದ ವಾಸು:| ಬೆಳಗುತ್ತಾನೆ, ಕ್ರೀಡಿಸುತ್ತಾನೆ, ಜಯಿಸುತ್ತಾನೆ, ವ್ಯವಹರಿಸುತ್ತಾನೆ, ಹೋಗುತ್ತಾನೆ, ಪ್ರಕಾಶಿಸುತ್ತಾನೆ, ಅಥವಾ ಮೋಕ್ಷಾಕಾಂಕ್ಷಿಗಳಿಂದ ಸ್ತುತಿಸಲ್ಪಡುತ್ತಾನೆ ಎಂಬುದರಿಂದ ದೇವನು. ಹೀಗೆ, ವಾಸುವೂ ದೇವನೂ ಆಗಿರುವವನು ವಾಸುದೇವನು.
 (೫) ಸೂರ್ಯನು ತನ್ನ ಕಿರಣಗಳಿಂದ ಜಗವಿಡೀ ಬೆಳಗಿದಂತೆ, ಇಡಿಯ ವಿಶ್ವವನ್ನು ತನ್ನ ವಿಭೂತಿ/ಮಹಿಮೆ/ಮಾಯೆಯಿಂದ ಆಚ್ಛಾದಿಸುವ, ಆವರಿಸಿರುವ ಹಾಗೂ ಸರ್ವ ಚರಾಚರಗಳ ಅಂತರ್ಯಾಮಿಯಾಗಿರುವವನು.
 (೬) ಸರ್ವಭೂತಗಳಲ್ಲಿ ವಾಸವಿರುವುದರಿಂದಲೂ, ವಸು(ರತ್ನ, ಧನ, ವೃದ್ಧೌಷಧ, ಶ್ಯಾಮಲ, ಹಾಟಕ/ಸ್ವರ್ಣ, ಜಲ)ತ್ವದಿಂದಲೂ, ಯಾದವಕುಲಸಂಭೂತನಾದುದರಿಂದಲೂ, ತತ್ವವೇತ್ತರಾದ ಯೋಗಿಗಳಿಂದ ವಾಸುದೇವನೆಂದು ಕರೆಯಲ್ಪಟ್ಟವನು.
 (೭) ಅವನು ಚತುರ್ವ್ಯೂಹನಾದ ಪರಮಾತ್ಮ ನಾರಾಯಣನ ಅಂಶಗಳಲ್ಲೊಬ್ಬ ಎಂಬುದು ವೈಷ್ಣವರ ಮತ. ನಾರಾಯಣನು ಸಗುಣನೂ ನಿರ್ಗುಣನೂ ಆಗಿ ನಾಲ್ಕು ತೆರನಾಗಿ ಇಡಿಯ ಜಗತ್ತನ್ನು ತನ್ನ ಒಂದಂಶದಿಂದ ವ್ಯಾಪಿಸಿದ್ದಾನೆ. ಅವುಗಳಲ್ಲಿ ಒಂದು ರೂಪ ವಾಸುದೇವ ಎಂಬುದು. ಇದು ಭಗವಂತನ ಜ್ಞಾನರೂಪ, ಮಂಗಲಸ್ವರೂಪ, ನಿರ್ಮಲರೂಪ, ಕಳಂಕರಹಿತವೂ, ಕಲಾ / ಅಂಶರಹಿತವಾಗಿ ಅಖಂಡವೂ, ತ್ರಿಗುಣಾತೀತವೂ ಆದುದು. ಅನಿರುದ್ಧ, ಪ್ರದ್ಯುಮ್ನ, ಸಂಕರ್ಷಣ ಹಾಗೂ ಪರ ವಾಸುದೇವ— ಇವು ಕ್ರಮವಾಗಿ ಜೀವನ ಜಾಗ್ರತ್, ಸ್ವಪ್ನ, ಸುಷುಪ್ತಿ ಹಾಗೂ ತುರೀಯಸ್ಥಿತಿಯಲ್ಲಿದ್ದು ರಕ್ಷಿಸುವ ಭಗವಂತ ವಿಷ್ಣುವಿನ ಚತುರ್ವ್ಯೂಹಸ್ವರೂಪಾಂಗಗಳು.
 (೮) ವಾಸುದೇವನ ಸುವಾಸನೆಯಿಂದ ಈ ಮೂರೂ ಲೋಕಗಳೂ ಸುಗಂಧಭರಿತವಾಗಿವೆ. ಸರ್ವಭೂತಗಳಲ್ಲೂ ನಿವಾಸನಾಗಿರುವ ವಾಸುದೇವನಿಗೆ ನಮಸ್ಕಾರ.}
११)महातेज:(೧೧.ಮಹಾತೇಜ:)- महत् च एतत् तेजश्च । महाज्योति: । तेजयति तेज्यते अनेन वा इति तेज:, दीप्ति:। महादीप्ति: । महाप्रभाव: । महापराक्रम: । महारेत: । महान् अग्नि: । महासार: । महानवनीतम् । महासुवर्णम् । महाऽसहनम् । विष्णु: । शिव: ॥ ( ದೊಡ್ಡದಾದ, ಮಹತ್ತ್ವಪೂರ್ಣವಾದ ತೇಜಸ್ಸು. ದೊಡ್ಡ ದೀಪ/ಪ್ರಕಾಶ. ಬೆಳಗಿಸುತ್ತದೆ ಅಥವಾ ಬೆಳಗಲ್ಪಡುತ್ತದೆ ಎಂಬುದರಿಂದಾಗಿ ತೇಜ/ದೀಪ್ತಿ/ಬೆಳಕು. ಬೃಹತ್ ಬೆಳಕು. ಮಹಾಪ್ರಭಾವ. ಮಹಾಪರಾಕ್ರಮ. ಮಹಾರೇತಸ್ಸು/ಮಹಾವೀರ್ಯ. ಮಹಾನ್ ಅಗ್ನಿ. ಮಹಾಸಾರ/ಸತ್ವ. ಮಹಾ ನವನೀತ/ಬೆಣ್ಣೆ/ಮೂಲದಿಂದ ಹೊಸತಾಗಿ ಕಂಡುಬಂದ ರೂಪ/ಅವತಾರ. ದೊಡ್ಡ ಹಾಗೂ ಚಿನ್ನದಂಥ. ಅಧರ್ಮದ ಬಗ್ಗೆ ಬಹಳ ಅಸಹನೆ. ವಿಷ್ಣು. ಶಿವ.)
१२)कोटिसूर्यप्रभायुत:(೧೨.ಕೋಟಿಸೂರ್ಯಪ್ರಭಾಯುತ:)- अनन्तसूर्यसमप्रभायुक्त: । 
“न तत्र सूर्यो भाति न चन्द्रतारकं नेमा विद्युतो भान्ति कुतोऽयमग्नि: ।
तमेव भान्तमनुभाति सर्वं  तस्य भासा सर्वमिदं विभाति ॥” इति श्रुति: ॥
(ಕೋಟ್ಯಂತರ ಸೂರ್ಯರಿಗೆ ಸಮನಾದ ಪ್ರಭೆಯುಳ್ಳವನು. ಅವನ ಪರಮಧಾಮದಲ್ಲಿ, ಸೂರ್ಯ, ಚಂದ್ರ, ತಾರೆಗಳು, ಮಿಂಚು/ವಿದ್ಯುತ್ತುಗಳು ಪ್ರಕಾಶಿಸುವುದಿಲ್ಲ. ಇನ್ನು ಈ ಅಗ್ನಿಯ ಮಾತೇನು? ಬೆಳಗುತ್ತಿರುವ ಆ ಪರಮಾತ್ಮನನ್ನನುಸರಿಸಿಯೇ ಇವೆಲ್ಲವೂ ಪ್ರಭಾಯುತವಾಗಿವೆ. ಅವನ ಬೆಳಕಿನಿಂದ ಇದೆಲ್ಲವೂ ಪ್ರಕಾಶಿಸುತ್ತವೆ. ಇದು ವೇದಾಂತ/ಉಪನಿಷದ್ವಚನ.)

अष्टमगर्भसम्भूतो जातरोहिणितारकः ।
नन्दगोपकुमारश्च गोकुलेशः प्रतापवान् ॥३॥(१३-१७)
ಅಷ್ಟಮಗರ್ಭಸಮ್ಭೂತೋ ಜಾತರೋಹಿಣಿತಾರಕ:|
ನನ್ದಗೋಪಕುಮಾರಶ್ಚ ಗೋಕುಲೇಶ: ಪ್ರತಾಪವಾನ್||೩||(೧೩-೧೭)

१३)अष्टमगर्भसम्भूत:(೧೩.ಅಷ್ಟಮಗರ್ಭಸಮ್ಭೂತ:)- देवक्या: अष्टमगर्भावस्थान्ते प्रसूत: । (ದೇವಕಿಯ ಎಂಟನೇ ಗರ್ಭಧಾರಣಾವಧಿಯ ಕೊನೆಯಲ್ಲಿ ಜನಿಸಿದವನು.)
१४) जातरोहिणितारकः (೧೪.ಜಾತರೋಹಿಣಿತಾರಕಃ) — रोहिणिनामके, अश्विनि-भरणि-कृत्तिकानाम् अनन्तरम् जायमाने चतुर्थे नक्षत्रे तारके वा जातः ॥ (ರೋಹಿಣಿ ಎಂಬ ಹೆಸರಿನ, ಅಶ್ವಿನಿ ಭರಣಿ ಕೃತ್ತಿಕೆಗಳ ಬಳಿಕ ಬರುವ ೪ನೆಯ ನಕ್ಷತ್ರದಲ್ಲಿ / ತಾರೆಯಲ್ಲಿ ಜನಿಸಿದವನು.)
१५) नन्दगोपकुमारः (೧೫.ನಂದಗೋಪಕುಮಾರಃ)— द्रोणाख्यवसोरंशस्य नन्दगोपस्य, धराख्यायाः द्रोणभार्यांशभूतायाश्च यशोदायाः सुत इव प्रवर्धितो नन्दगोकुले ॥ (ದ್ರೋಣ-ಧರಾ ವಸುದಂಪತಿಗಳೇ ನಂದ-ಯಶೋದೆಯರಾಗಿ ಜನಿಸಿದ್ದು, ಅವರ ಸಾಕುಮಗನಾಗಿ ನಂದಗೋಕುಲದಲ್ಲಿ ಬೆಳೆದವನು ಶ್ರೀಕೃಷ್ಣನು.)
च— ಹಾಗೆಯೇ,
१६) गोकुलेशः (೧೬.ಗೋಕುಲೇಶಃ)— 
ⅰ) गोकुलपुर्याः ईशः, अधिपतिः ।
ಗೋಕುಲವೆಂಬ ಪಟ್ಟಣದ (ಪುರಿಯ) ಅಧಿಪತಿ.

ⅱ) गो इति ज्ञानम् , ज्ञानसमूहेश्वरः सर्वज्ञः ।
ಗೋ ಎಂದರೆ ಜ್ಞಾನ. ಜ್ಞಾನಸಮೂಹದ ಈಶ್ವರ, ಸರ್ವಜ್ಞ.

ⅲ) गो इति इन्द्रियम् , इन्द्रियाधिपो हृषीकानाम् ईशः हृषीकेशः श्रीकृष्णपरमात्मा ।
ಗೋ ಎಂದರೆ ಇಂದ್ರಿಯ. ಇಂದ್ರಿಯಸಮೂಹದ ಒಡೆಯ, ಹೃಷೀಕಗಳ ಅಧಿಪನಾದ ಹೃಷೀಕೇಶನೇ ಶ್ರೀಕೃಷ್ಣಪರಮಾತ್ಮನು.

ⅳ) गो इति पृथिवी, सकलग्रहनक्षत्रादियुक्तानां समस्तलोकानां ईशः, ब्रह्माण्डाधिपः ।
ಗೋ ಎಂದರೆ ಭೂಮಿ. ಎಲ್ಲ ಗ್ರಹ, ನಕ್ಷತ್ರಾದಿಗಳಿಂದ ಕೂಡಿದ ಸಮಸ್ತಲೋಕಗಳ ಈಶ, ಬ್ರಹ್ಮಾಂಡಾಧಿಪ.

ⅴ) गो नाम जलम् , जलसमूहः सागरः गोकुलः, तस्मिन् शयानस्य तदधिपस्य नारायणस्य पूर्णावतारी तदभिन्नः गोकुलेशः ।
ಗೋ ಎಂದರೆ ಜಲ, ನೀರು. ನೀರ ರಾಶಿ ಸಾಗರ. ಪ್ರಳಯಜಲಸಾಗರದಲ್ಲಿ ಮಲಗಿರುವ, ಅದರ ಅಧಿಪನೂ ಆದ ನಾರಾಯಣನ ಪೂರ್ಣಾವತಾರೀ, ಆತನಿಗಿಂತ ಬೇರೆಯಲ್ಲದವನೇ ಗೋಕುಲೇಶನು.

ⅵ) गो नाम बाणः, वज्रः च, तादृशानाम् आयुधानां समूहस्य गो-कुलस्य ईश्वरः गोकुलेशः । अथवा, बाणधारिणां, वज्रायुधधारिणामिन्द्राणां नानामन्वन्तराणां वा कुलस्य समूहस्य अधिपः ।
ಗೋ ಎಂದರೆ ಬಾಣ ಹಾಗೂ ವಜ್ರಾಯುಧ. ಅಂತಹ ಆಯುಧಗಳ ಸಮೂಹವಾದ ಗೋ-ಕುಲದ ಈಶ್ವರನೇ ಗೋಕುಲೇಶನು. ಅಥವಾ, ಬಾಣಧಾರಿಗಳ, ವಜ್ರಾಯುಧಧಾರಿಗಳಾದ ನಾನಾಮನ್ವಂತರಗಳ ಇಂದ್ರರ ಸಮೂಹದ ಅಧಿಪತಿಯು.

ⅶ) गो नाम किरणः, अनन्तचैतन्यकिरणसमूहस्य गो-कुलस्य ईशः, मूलसूर्यः, सर्वमूलज्योतिः, परंज्योतिः ।
ಗೋ ಎಂದರೆ ಕಿರಣ. ಅನಂತವಾದ ಚೈತನ್ಯದ ಕಿರಣಸಮೂಹವಾದ ಗೋ-ಕುಲದ ಈಶ, ಮೂಲಸೂರ್ಯ, ಸರ್ವಮೂಲಜ್ಯೋತಿ, ಪರಂಜ್ಯೋತಿ.

ⅷ) गो नाम ज्योत्स्ना (चन्द्रदीप्तिः), रवेरर्चिः (सूर्यप्रभा) च । परंज्योतिषा एव विभान्ति चन्द्रसूर्यादयः । अतः तेषां प्रभापुञ्जस्य गो-कुलस्य अपि ईश्वरः कृष्णः ।
ಗೋ ಎಂದರೆ ಬೆಳದಿಂಗಳು, ಜ್ಯೋತ್ಸ್ನಾ (ಚಂದ್ರನ ತಂಗದಿರು- ತಂಪಾದ ಕದಿರು) ಹಾಗೂ ರವಿಯ ಅರ್ಚಿ / ರಶ್ಮಿ (ಸೂರ್ಯನ ಪ್ರಭೆ). ಪರಂಜ್ಯೋತಿಯಿಂದಲೇ ಚಂದ್ರಸೂರ್ಯಾದಿಗಳು ಬೆಳಗುತ್ತಾರೆ. ಆದ್ದರಿಂದ, ಅವರೆಲ್ಲರ ಪ್ರಭಾಪುಂಜವಾದ ಗೋ-ಕುಲದ ಈಶ್ವರನೂ ಕೃಷ್ಣನೇ.

ⅸ) गो नाम धेनुः । धेनूनां संकुलस्य अधिपः गोपालकः गो-कुलेशः कृष्णः गोविन्दः ।
ಗೋ ಎಂದರೆ ಧೇನು, ಆಕಳು. ಗೋವುಗಳ ಸಂಕುಲದ ಅಧಿಪತಿಯಾದ ಗೋಪಾಲಕನಾದ ಗೋಕುಲೇಶನೇ ಕೃಷ್ಣನೂ ಗೋವಿಂದನೂ ಹೌದು.

ⅹ) गो नाम वृषभः । पुं-गवामधिपः गो-कुल-ईशः । तथा च, धर्मरूपी-वृषभवंश-मूलाधिपः, धर्माध्यक्षः, धर्माधीशः ।
ಗೋ ಎಂದರೆ ವೃಷಭ, ಹೋರಿ, ಎತ್ತು. ಗಂಡು ಗೋವುಗಳ ಅಧಿಪತಿ ಗೋಕುಲೇಶನು. ಹಾಗೆಯೇ, ಧರ್ಮರೂಪಿಯಾದ ವೃಷಭದ ವಂಶದ ಮೂಲ ಅಧಿಪತಿಯೂ, ಧರ್ಮಾಧ್ಯಕ್ಷನೂ, ಧರ್ಮಾಧೀಶನೂ ಗೋಕುಲೇಶನಾದ ಕೃಷ್ಣನೇ.

ⅺ) गो नाम पशुः । समस्तपशुसमूहस्य अधिपतिः गो-कुल-ईशः, अन्तरात्मरूपीनियामकत्वेन ।
ಗೋ ಎಂದರೆ ಪಶು. ಸಮಸ್ತ ಪಶುಸಮೂಹದ ಅಧಿಪತಿಯೇ ಎಲ್ಲದರ ಅಂತರಾತ್ಮರೂಪೀ ನಿಯಾಮಕನಾಗಿರುವ ಗೋ-ಕುಲ-ಈಶನು.

इत्थम् अनन्तार्थाः— गो (गोकुलेशः) नाम स्वर्गः (अनेकस्वर्गाधिपः), नेत्रम् (समस्तविश्वनेत्रेन्द्रियसमूहाधिपः, विश्वमार्गदर्शकः) , वचनम् (वाक्समूहेशः, वाचां पतिः) , दिक् (दशदिगीशः), हीरकः (वज्राख्यरत्नम्, तेषां समूहाधिपः), माता (मातृसमूहाधिपः सर्वमातृस्वरूपी), लोम (सर्वलोमसमूहेशः, "तेन विना लोमापि न चलति"), मेघविद्युत् (सर्वविद्युत्कुलेशः), समस्तचराः (गच्छतीति गो; सर्वचरजीवेशः), गव्योत्पन्नानि नवनीतादीनि (गव्येशः, नवनीतप्रियः), आकाशः (सर्वाकाशानामीशः), आकाशभागः (तोषामीशः, "आकाशस्याधिपो विष्णुः"), वा । तत्तदर्थानुसन्धानं मूलार्थाविरोधदृष्ट्या कुर्यात् । तादृश-गो-कुलानाम् ईशः, भगवान् श्रीकृष्णोऽत्र स्तुतः सहस्रनामरूपे ॥
ಹೀಗೆ, ಅನಂತಾರ್ಥಗಳಿವೆ— ಗೋ (ಗೋಕುಲೇಶ) ಎಂದರೆ ಸ್ವರ್ಗ (ಅನೇಕಸ್ವರ್ಗಗಳ ಅಧಿಪ), ಕಣ್ಣು (ಸಮಸ್ತವಿಶ್ವದಲ್ಲಿನ ಕಣ್ಣೆಂಬ ಇಂದ್ರಿಯಶಕ್ತಿಸಮೂಹಾಧಿಪ, ವಿಶ್ವಮಾರ್ಗದರ್ಶಕ), ವಚನ / ಮಾತು (ಮಾತುಗಳ ಸಮೂಹದ ಅಧಿಪತಿ, ಮಾತುಗಳ ಪತಿ), ದಿಕ್ಕು (ಹತ್ತು ದಿಕ್ಕುಗಳ ಸಮೂಹದ ಒಡೆಯ), ಹೀರಕ / ವಜ್ರ (ವಜ್ರವೆಂಬ ರತ್ನವಿಶೇಷ, ಅಂತಹ ಸಮಸ್ತ ವಜ್ರಸಮೂಹಾಧಿಪ), ಮಾತೆ / ತಾಯಿ (ಸಮಸ್ತಮಾತೃಸಮೂಹಾಧಿಪ, ಎಲ್ಲರ ಮಾತೃಸ್ವರೂಪನು), ಲೋಮ / ರೋಮ / ಕೂದಲು (ಎಲ್ಲ ಕೂದಲುಗಳ ಸಮೂಹದ ಈಶ, "ಅವನಿಂದಲ್ಲದೆ ಕೂದಲೂ ಅಲುಗಾಡದು"), ಮಿಂಚು (ಮಿಂಚೇ ಮುಂತಾದ ಎಲ್ಲ ವಿದ್ಯುತ್ಸಮೂಹದ ಅಧಿಪ), ಚಲನಶೀಲವಾದ ಎಲ್ಲ ಜೀವರು (ಗಮನಶೀಲವಾದದ್ದು ಗೋ, ಎಲ್ಲ ಚರಜೀವರ ಈಶ), ಗವ್ಯೋತ್ಪನ್ನಗಳಾದ ಬೆಣ್ಣೆ ಮುಂತಾದವು (ಗವ್ಸೋತ್ಪನ್ನಗಳಿಗೂ ಒಡೆಯ, ನವನೀತಪ್ರಿಯ), ಆಕಾಶ (ಎಲ್ಲದರೊಳಗಿನ ಅವಕಾಶಗಳ ಸಮೂಹಾಧಿಪ) ಅಥವಾ ಆಕಾಶದ ಭಾಗ (ಅಂತಹ ವಿವಿಧ ಆಕಾಶಭಾಗಗಳೊಡೆಯ, "ಆಕಾಶದ ಅಧಿಪತಿಯು ವಿಷ್ಣುವು"). ಆಯಾ ಅರ್ಥಗಳನ್ನು ಮೂಲಾರ್ಥಕ್ಕೆ ವಿರೋಧವಾಗದಂತೆ ಅನುಸಂಧಾನ ಮಾಡಬೇಕು. ಅಂತಹ ಗೋ-ಕುಲಗಳ ಈಶನಾದ ಭಗವಾನ್ ಶ್ರೀಕೃಷ್ಣನು ಇಲ್ಲಿ ಸಹಸ್ರನಾಮರೂಪದಲ್ಲಿ ಸ್ತುತಿಸಲ್ಪಟ್ಟಿರುವನು. 

१७) प्रतापवान् (೧೭.ಪ್ರತಾಪವಾನ್)— 
कोष-दण्डजतेजः अस्य अस्तीति (राजा)। कोषो धनं दण्डो दमः तद्धेतुत्वात् सैन्यमपि दण्डः ताभ्यां यत्तेजो जायते सः । प्रभाववान् । तेजोवान् । पौरुषवान् । स्मृतिमात्रेण रिपुहृदयविदारणक्षमं पौरुषं प्रतापः, तद्वान् । आतपवान् । तापवान् । शक्तिमान् । बलवान् । वीर्यवान् । प्रकृष्टं तापम् अस्य दुष्टनिग्रहे ॥

ಕೋಷ ಹಾಗೂ ದಂಡದ ತೇಜಸ್ಸಿವನಿಗಿದೆಯೆಂಬುದಾಗಿ (ರಾಜನು). ಕೋಷವು ಧನ, ದಂಡವೇ ದಮ (ಇಂದ್ರಿಯನಿಗ್ರಹ) ಹಾಗೂ ಇವುಗಳಿಂದಾದ ಸೈನ್ಯವೂ ಕೂಡ. ಇವುಗಳಿಂದುಂಟಾದ ತೇಜಸ್ಸುಳ್ಳವನು. ಪ್ರಭಾವಶಾಲಿ. ತೇಜೋವಂತ. ಪೌರುಷವಂತ. ನೆನಪುಮಾತ್ರದಿಂದಲೇ ಶತ್ರುಹೃದಯಭೇದನಸಾಮರ್ಥ್ಯವೆಂಬ ಪೌರುಷವಿರುವವನು. ಬಿಸಿಲನ್ನು ಉಳ್ಳವನು. ಬಿಸಿಯಾಗಿರುವವನು. ಶಕ್ತಿವಂತ. ಬಲವಂತ. ವೀರ್ಯವಂತ. ಶತ್ರುನಿಗ್ರಹದಲ್ಲಿ ಪ್ರಕೃಷ್ಟವಾದ (ಉತ್ಕೃಷ್ಟವಾದ, ಶ್ರೇಷ್ಠವಾದ) ಬಿಸಿಮುಟ್ಟಿಸುವ ಶಕ್ತಿ (ಭಯಹುಟ್ಟಿಸುವ ಸಾಮರ್ಥ್ಯ) ಉಳ್ಳವನು.


शशिकोटिमनोह्लादी मायामोहननाटक:|
पूतनादत्तविषभुक् पूतनादेहनाशन:||४||(१७-२१)


ಶಶಿಕೋಟಿಮನೋಹ್ಲಾದೀ ಮಾಯಾಮೋಹನನಾಟಕ:|
ಪೂತನಾದತ್ತವಿಷಭುಕ್ ಪೂತನಾದೇಹನಾಶನ:||೪||(೧೭-೨೧)


१७) शशिकोटिमनोह्लादी (೧೭.ಶಶಿಕೋಟಿಮನೋಹ್ಲಾದೀ)— अनन्तचन्द्रज्योत्स्नया मनसः आह्लादं कियत् भवेत् तादृशानन्दजनकः ब्रह्मानन्दस्वरूपः श्रीकृष्णः । ಲೆಕ್ಕವಿಲ್ಲದಷ್ಟು ಚಂದ್ರರು ಒಮ್ಮೆಲೇ ಉದಿಸಿದರೆ ಉಂಟಾಗುವ ಬೆಳದಿಂಗಳಿನಿಂದ ಮನಸ್ಸಿಗೆ ಎಷ್ಟು ಆಹ್ಲಾದವಾಗಬಹುದೋ ಅಷ್ಟು ಆನಂದವನ್ನು ಉಂಟುಮಾಡುವವನೇ ಬ್ರಹ್ಮಾನಂದಸ್ವರೂಪನಾದ ಶ್ರೀಕೃಷ್ಣನು.


१८) मायामोहननाटकः (೧೮.ಮಾಯಾಮೋಹನನಾಟಕಃ)— स्वमायाशक्त्या समस्तसृष्टिं मोहयन् जगन्नाटकरूपेण अपि भाति श्रीकृष्णः, पात्रधारश्च सूत्रधारश्च भूत्वा । ತನ್ನ ಮಾಯಾಶಕ್ತಿಯಿಂದ ಸಮಸ್ತಸೃಷ್ಟಿಯನ್ನು ಮೋಹಗೊಳಿಸುತ್ತಾ, ಜಗನ್ನಾಟಕರೂಪದಿಂದಲೂ, ಅದರ ಸೂತ್ರಧಾರನೂ ಪಾತ್ರಧಾರನೂ ತಾನೇ ಆಗಿ ಬೆಳಗುತ್ತಾನೆ ಶ್ರೀಕೃಷ್ಣಪರಮಾತ್ಮನು.
१९) पूतना-दत्त-विष-भुक् (೧೯.ಪೂತನಾ-ದತ್ತ-ವಿಷ-ಭುಕ್)— दैत्यराजस्य विरोचनस्य पुत्रः बलिः । तस्य तनया रत्नमाला यदाऽपश्यद्वामनं वटुं पुत्रप्रीतिरजायत तस्याम् । सा तस्मै स्वस्तन्यं पाययितुमैच्छत् । परन्तु यदा स वामनरूपी श्रीहरिरभवत् त्रिविक्रमः, स्वपिता बलिरपि तेन सुतले बद्धस्तदा साऽचिन्तयत्तस्मै विषं पाययितुम् । एतयोर्द्वयोरपि वाञ्छयोः पूरणार्थं श्रीहरिस्तस्यै पूतनाजन्म दत्तवान् । कंसप्रेरिता सा पूतना शिशुकृष्णाय स्वस्याः विषस्तन्यं पाययति । तदपि भुक्त्वाऽन्ते तस्यै स्वपदं वैकुण्ठं ददाति श्रीहरिः । अतः सः पूतनादत्तविषभुक् ॥

ದೈತ್ಯರಾಜನಾದ ವಿರೋಚನನ ಪುತ್ರ ಬಲಿ. ಆತನ ಮಗಳಾದ ರತ್ನಮಾಲಾಳಿಗೆ ತಂದೆಯು ಆಚರಿಸುತ್ತಿದ್ದ ಅಶ್ವಮೇಧಯಾಗಸಂದರ್ಭದಲ್ಲಿ ಬಂದ ವಟು (ಬ್ರಹ್ಮಚಾರಿ) ವಾಮನನ್ನು ಕಂಡು ಪುತ್ರವಾತ್ಸಲ್ಯವು ಉಕ್ಕಿತು. ಆತನಿಗೆ ಹಾಲುಣಿಸಬೇಕೆಂಬ ಮಮತೆ, ಮಾತೃತ್ವ ಆಕೆಗೆ ಮೂಡಿತು. ಆದರೆ, ಯಾವಾಗ ವಾಮನನು ತ್ರಿವಿಕ್ರಮನಾಗಿ ಬಲಿಯನ್ನು ಸುತಲಲೋಕದಲ್ಲಿ ಬಂಧಿಸಿದನೋ ಆಗ ಆಕೆಗೆ ಆತನಿಗೆ ವಿಷವಿಕ್ಕಬೇಕೆಂಬ ರೋಷವುಂಟಾಯಿತು. ಇವೆರಡೂ ಬಯಕೆಗಳನ್ನೀಡೇರಿಸಲು ಹರಿಯು ಆಕೆಗೆ ಪೂತನಾಜನ್ಮವನ್ನಿತ್ತ. ಕಂಸನ ಪ್ರೇರಣೆಯಂತೆ ಆಕೆ ಬಾಲಕೃಷ್ಣನಿಗೆ ತನ್ನ ವಿಷದ ಮೊಲೆಯೂಡುತ್ತಾಳೆ. ಅದನ್ನೂ ಉಂಡು, ಪೂತನಿಗೆ ಕೊನೆಗೆ ತನ್ನ ಪರಮಪದವಾದ ವೈಕುಂಠವನ್ನೇ ದಯಪಾಲಿಸುತ್ತಾನೆ ಶ್ರೀಹರಿ. ಹೀಗಾಗಿ ಶ್ರೀಕೃಷ್ಣನು ಪೂತನಾ ಕೊಟ್ಟ ವಿಷವನ್ನು ಭುಂಜಿಸಿದ್ದರಿಂದ ಪೂತನಾ-ದತ್ತ-ವಿಷ-ಭುಕ್ ಎನಿಸುತ್ತಾನೆ.


२०) पूतनादेहनाशनः (೨೦.ಪೂತನಾ-ದೇಹ-ನಾಶನಃ)— पूतनायाः स्थूल-सूक्ष्म-कारणदेहत्रयमपि नाशयित्वा मोक्षं दत्तवान् श्रीकृष्णः । ಪೂತನೆಯ (ಪೂತನಾ-ಳ) ಸ್ಥೂಲ-ಸೂಕ್ಷ್ಮ-ಕಾರಣವೆಂಬ ದೇಹತ್ರಯವನ್ನೂ ನಾಶಮಾಡಿ, ಆಕೆಗೆ ಶಾಶ್ವತವಾದ ಮೋಕ್ಷವನ್ನು ಕೊಟ್ಟನು ಶ್ರೀಕೃಷ್ಣನು.


शकटासुरसंहारी यशोदानन्दन: प्रभु:|
गोपिकावल्लभो गोपो यादववंशभूषण:||५||(२०-२७)


ಶಕಟಾಸುರಸಂಹಾರೀ ಯಶೋದಾನನ್ದನ: ಪ್ರಭು:|
ಗೋಪಿಕಾವಲ್ಲಭೋ ಗೋಪೋ ಯಾದವವಂಶಭೂಷಣ:||೫||(೨೦-೨೭)


२०) शकटासुरसंहारी (೨೦.ಶಕಟಾಸುರಸಂಹಾರೀ)— शक्नोति भारं वोढुम् इति शकटः । यानविशेषः । शकटाकारवान् असुरः, राक्षसः शकटासुरः । कंसप्रेषितः सः कृष्णेन संहृतः । अतः कृष्णः शकटासुरसंहारी ॥ ಭಾರವನ್ನು ಹೊರಲು ಶಕ್ತವೆಂಬುದರಿಂದ ಗಾಡಿಯು ಶಕಟವೆನಿಸಿದೆ. ಪ್ರಯಾಣೋಪಯೋಗಿ ವಾಹನ ಪ್ರಭೇದ. ಅಂತಹ ಶಕಟದ ಆಕಾರವುಳ್ಳ ಅಸುರ, ರಾಕ್ಷಸನೇ ಶಕಟಾಸುರ. ಕಂಸನಿಂದ ಕಳುಹಿಸಲ್ಪಟ್ಟ ಅವನು ಕೃಷ್ಣನಿಂದ ಸಂಹರಿಸಲ್ಪಟ್ಟದ್ದರಿಂದ ಕೃಷ್ಣನು ಶಕಟಾಸುರಸಂಹಾರೀ.


२१) यशोदानन्दनः (೨೧. ಯಶೋದಾನಂದನಃ)— नन्दपत्न्यां यशोदायां यः आनन्दं जनयति, तां नन्दयति आनन्दयुतां करोति, देवक्याः सुतोऽपि सन् यशोदायाः सुत इति प्रसिद्धश्च इति वा श्रीकृष्णः "यशोदा-आनन्दनः / यशोदा-नन्दनः" ॥

ಗೋಕುಲದ ನಂದರಾಜನ ಪತ್ನಿಯಾದ ಯಶೋದೆಯಲ್ಲಿ ಯಾವನು ಆನಂದವನ್ನುಂಟುಮಾಡುತ್ತಾನೋ, ಆಕೆಯನ್ನು ಸಂತೋಷಪಡಿಸುತ್ತಾನೋ, ಆನಂದಯುಕ್ತಳನ್ನಾಗಿ ಮಾಡುತ್ತಾನೋ ಹಾಗೂ ದೇವಕಿಯ ಪುತ್ರನಾದರೂ ಯಶೋದೆಯ ಸುತನೆಂದೇ ಪ್ರಸಿದ್ಧನಾದವನೆಂಬುದರಿಂದಾಗಿಯೋ, ಶ್ರೀಕೃಷ್ಣನು "ಯಶೋದಾ-ಆನಂದನನು / ಯಶೋದಾ-ನಂದನನು".


२२) प्रभुः (೨೨. ಪ್ರಭುಃ)— "प्रभवतीति प्रभुः" । प्रकृष्टेन सर्वोत्कृष्टतया वा भवति इति । विष्णुः । शिवः । पारदः । शब्दः । स्वामी । "निग्रहानुग्रहे शक्तः प्रभुरित्यभिधीयते " । प्रकर्षेण भवनात् प्रभुः । सर्वासु क्रियासु सामर्थ्यातिशयात् प्रभुः । अधिपतिः । लोकनायकः । लोकपालकः । नित्यः, सदा सर्वदा भवतीति । शक्तः । श्रेष्ठः । समृद्धः । सनातनः । अनन्तः । प्रशास्ता । स्थिरः । प्रधानः । अत्र परमात्मनः पूर्णावतारी श्रीकृष्णः ॥ " ಚೆನ್ನಾಗಿ ಇರುತ್ತಾನಾದ್ದರಿಂದ ಪ್ರಭುವು". ಪ್ರಕೃಷ್ಟವಾಗಿ ಅಥವಾ ಸರ್ವೋತ್ಕೃಷ್ಟವಾಗಿ ಇರುತ್ತಾನೆ ಎಂಬುದಾಗಿ. ವಿಷ್ಣು. ಶಿವ. ಪಾದರಸ. ಶಬ್ದ. ಸ್ವಾಮಿ / ಒಡೆಯ. "ನಿಗ್ರಹಿಸಲೂ ಅನುಗ್ರಹಿಸಲೂ ಶಕ್ತನಾದವನೇ ಪ್ರಭುವು". ಪ್ರಕರ್ಷದಿಂದ ಇರುವಿಕೆಯಿಂದಾಗಿ ಪ್ರಭುವು. ಎಲ್ಲ ಕ್ರಿಯೆಗಳಲ್ಲೂ ಅತ್ಯಧಿಕ ಸಾಮರ್ಥ್ಯದಿಂದಾಗಿ ಪ್ರಭುವು. ಅಧಿಪತಿ. ಲೋಕನಾಯಕ. ಲೋಕಪಾಲಕ. ನಿತ್ಯನು, ಯಾವಾಗಲೂ ಇರುವವನು. ಸರ್ವಶಕ್ತನು. ಸರ್ವಶ್ರೇಷ್ಠನು. ಸಮೃದ್ಧನು. ಸನಾತನನು. ಅನಂತನು. ಆಳುವವನು. ಸ್ಥಿರನು. ಪ್ರಧಾನನು. ಇಲ್ಲಿ, ಪರಮಾತ್ಮನ ಪೂರ್ಣಾವತಾರಿಯಾದ ಶ್ರೀಕೃಷ್ಣನು.
        

Comments

Popular posts from this blog

ಸ್ತೋತ್ರಸಂಹಿತಾ ೫.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೫ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೩ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)