ವಿವಿಧದೇವತಾಸ್ತೋತ್ರಾಷ್ಟಕಮ್
ವಿವಿಧದೇವತಾಸ್ತೋತ್ರಾಷ್ಟಕಮ್
(ವಸನ್ತತಿಲಕಾವೃತ್ತಮ್)
ವಿದ್ಯಾಂ ಚ ಸರ್ವಸುಖದಂ ಪರಮಾತ್ಮತತ್ತ್ವಂ |
ದತ್ತ್ವಾ ವಿಮೋಚ್ಯ ನಿಖಿಲಂ ದುರಿತಾಘವೃನ್ದಮ್ ||
ರಕ್ಷ ತ್ವಮೇತದಖಿಲಂ ವಿನಿಹತ್ಯ ವಿಘ್ನಂ |
ವಿಘ್ನೇಶ್ವರ! ಪ್ರಥಮವನ್ದಿತ! ವಂದಿತೋsಸಿ ||೧||
(ಪ್ರಥಮವನ್ದಿತ) ಹೇ ಆದಿಪೂಜಿತನೇ! (ವಿಘ್ನೇಶ್ವರ)ಸಕಲ ವಿಘ್ನಗಳಿಗೆ ಒಡೆಯನೂ,ವಿಘ್ನನಿವಾರಕನೂ ಆದ ದೇವನೇ!(ವನ್ದಿತ: ಅಸಿ)ನೀನು ನಮ್ಮೆಲ್ಲರಿಂದ ವಂದಿಸಲ್ಪಟ್ಟವನೂ,ವಂದಿಸಲ್ಪಡುವವನೂ ಆಗಿದ್ದಿ. ಆದ್ದರಿಂದ,
(ಸರ್ವಸುಖದಂ)ಎಲ್ಲರೀತಿಯಿಂದ ಹಿತಕರವಾದ ಸುಖ-ಸಂತೋಷಗಳನ್ನು ನೀಡಬಲ್ಲ, (ವಿದ್ಯಾಂ ಚ)ಸದ್ವಿದ್ಯೆಯನ್ನು ಹಾಗೂ (ಪರಮಾತ್ಮತತ್ತ್ವಂ)ಬ್ರಹ್ಮಜ್ಞಾನವನ್ನು/ಆತ್ಮತತ್ತ್ವವನ್ನು (ದತ್ತ್ವಾ)ನೀಡಿ, (ನಿಖಿಲಂ ದುರಿತಾಘವೃನ್ದಮ್ )ಎಲ್ಲವಿಧದ ಪಾಪಸಮೂಹವನ್ನು (ವಿಮೋಚ್ಯ)ನಿವಾರಿಸಿ, (ಏತದಖಿಲಂ)ನಮ್ಮ ಸರ್ವಕಾರ್ಯಾದಿಗಳಿಗೆ ಅಡ್ಡಿಪಡಿಸುವಂಥ ಎಲ್ಲಾ (ವಿಘ್ನಂ ವಿನಿಹತ್ಯ)ವಿಘ್ನಗಳನ್ನು ನಿವಾರಿಸಿ,(ತ್ವಂ)ನೀನು ನಮ್ಮೆಲ್ಲರನ್ನು (ರಕ್ಷ)ಕಾಪಾಡು ದೇವ!
ಈಶಂ ತ್ವಶೇಷಜನವನ್ದ್ಯಪರಂ ಪುರಾರಿಂ |
ಸರ್ಪ: ಕೃತ: ಸ್ವಕಟಿಬನ್ಧಗುಣಸ್ತು ಯೇನ ||
ಕಾಶೀಶ್ವರಂ ಪ್ರಮಥಸೇವಿತಭೂತನಾಥಂ |
ರುದ್ರಂ ಶಿವಂ ಗರಳಕಣ್ಠಮಹೇಶಮೀಡೇ ||೨||
(ಸರ್ಪ:)ನಾಗರಹಾವು (ಯೇನ ತು)ಯಾವನಿಂದಲಾದರೋ(ಸ್ವಕಟಿಬನ್ಧಗುಣ:)ತನ್ನ ಸೊಂಟಪಟ್ಟಿಯನ್ನಾಗಿ (ಕೃತ:)ಮಾಡಲ್ಪಟ್ಟಿದೆಯೋ, ಅಂತಹ (ಅಶೇಷಜನವನ್ದ್ಯಪರಂ)ಸರ್ವ/ಎಲ್ಲ-ರಿಂದಲೂ ಸರ್ವದಾ/ಯಾವಾಗಲೂ ನಮಸ್ಕರಿಸಲ್ಪಡುತ್ತಿರುವ(ಅಶೇಷ=ನ ಶೇಷಮ್ ಅಸ್ತಿ,ಉಳಿಕೆಯಿಲ್ಲದ/ಬಾಕಿ ಇಲ್ಲದ),(ಪುರಾರಿಂ)ತ್ರಿಪುರಾಸುರರ ಸಂಹಾರಕನಾದ,(ಕಾಶೀಶ್ವರಂ)ಮೋಕ್ಷಪುರವಾದ ವಾರಾಣಸೀಕ್ಷೇತ್ರದ ಅಧಿಪತಿಯಾದ,(ಈಶಂ)ಎಲ್ಲಕ್ಕೂ ಒಡೆಯನಾದ,(ಪ್ರಮಥಸೇವಿತಭೂತನಾಥಂ)ವೀರಭದ್ರ,ಗಣಮಣಿಯೇ ಮೊದಲಾದ ಪ್ರಮಥ/ಶಿವ-ಗಣಗಳಿಂದ ಸೇವಿತನಾದ,ಸಕಲಭೂತಗಳ ಅಧಿಪತಿಯಾದ,(ರುದ್ರಂ)ರುದಾನ್ ತ್ರಾಯತೇ ಇತಿ ರುದ್ರ:-ದು:ಖತಪ್ತರಾಗಿ ಅಳುತ್ತಿರುವವರ ದು:ಖವನ್ನು ನಿವಾರಿಸಿ ಕಾಯುವವನಾದ,(ಶಿವಂ)ಮಂಗಳಕರನಾದ,(ಗರಳಕಣ್ಠಮಹೇಶಮ್ ಈಡೇ)ವಿಷಕಂಠನೂ,ಅಖಿಲಾಂಡಕೋಟಿಬ್ರಹ್ಮಾಂಡನಾಯಕನಾದ ಪರಮಜ್ಞಾನಪ್ರದನಾದ ಸದಾಶಿವನನ್ನು ಸ್ತುತಿಸುತ್ತೇನೆ.
(ಟಿಪ್ಪಣಿ - “ಆರೋಗ್ಯಂ ಭಾಸ್ಕರಾದಿಚ್ಛೇತ್ | ಶ್ರಿಯಮಿಚ್ಛೇತ್ ಹುತಾಶನಾತ್|| ಜ್ಞಾನಂ ಮಹೇಶ್ವರಾದಿಚ್ಛೇತ್| ಮೋಕ್ಷಮಿಚ್ಛೇಜ್ಜನಾರ್ದನಾತ್||” ಸೂರ್ಯನಿಂದ ಆರೋಗ್ಯವನ್ನೂ, ಅಗ್ನಿಯಿಂದ ಸಂಪತ್ತನ್ನೂ, ಈಶ್ವರನಿಂದ ಸುಜ್ಞಾನವನ್ನೂ ಹಾಗೂ ವಿಷ್ಣುವಿನಿಂದ ಮೋಕ್ಷವನ್ನೂ ಬೇಡಿ ಪಡೆಯಬೇಕು.)
ವನ್ದೇ ಶಿವಾಮಖಿಲವಿಶ್ವನಿಧಾನಭೂತಾಂ |
ತ್ರೈಲೋಕ್ಯಮಾತರಮಿಮಾಂ ಬಹುಧಾ ಸುಪೂಜ್ಯಾಮ್ ||
ಬ್ರಹ್ಮೇಶವಿಷ್ಣುಜನನೀಂ ಸುರರಾಕ್ಷಸೇಡ್ಯಾಂ |
ಗೌರೀರಮಾವಿಧಿಸತೀತ್ರಿಗುಣಾತ್ಮರೂಪಾಮ್ ||೩||
(ಅಖಿಲವಿಶ್ವನಿಧಾನಭೂತಾಂ)ಇಡಿಯ ಜಗತ್ತಿಗೆ ಮೂಲಕಾರಣಸ್ವರೂಪಳೂ,ಆಶ್ರಯಸ್ಥಾನವೂ ಆದ,(ತ್ರೈಲೋಕ್ಯಮಾತರಂ)ಮೂರೂ ಲೋಕಗಳ ಜನನಿಯಾದ,(ಬಹುಧಾ)ಅನೇಕ ಪ್ರಕಾರಗಳಿಂದ,ಬಹುವಿಧಗಳಿಂದ,(ಸುಪೂಜ್ಯಾಮ್)ಪೂಜಿಸಲ್ಪಡುವ,(ಬ್ರಹ್ಮೇಶವಿಷ್ಣುಜನನೀಂ)ತ್ರಿಮೂರ್ತಿಗಳ ತಾಯಿಯಾದ,(ಸುರರಾಕ್ಷಸೇಡ್ಯಾಂ)ದೇವತೆಗಳಿಂದಲೂ,ರಾಕ್ಷಸರಿಂದಲೂ ಸ್ತುತಿಸಲ್ಪಡುವ,(ಗೌರೀರಮಾವಿಧಿಸತೀತ್ರಿಗುಣಾತ್ಮರೂಪಾಮ್)ತಮೋಗುಣಾಧಿಕಾರಿಣಿಯಾದ ಗೌರಿ/ಪಾರ್ವತಿ,ರಜೋಗುಣಪ್ರಕಟಪಡಿಸುವ ಲಕ್ಷ್ಮೀ,ಹಾಗೂ ಸತ್ತ್ವಗುಣಕ್ಕೆ ಅಧಿಕಾರಿಣಿಯಾದ ಬ್ರಹ್ಮನ ರಾಣಿ ಶಾರದೆ-ಈ ಮೂವರ ಮೂಲಸ್ವರೂಪಳಾದ,ತ್ರಿಗುಣಾತ್ಮಕಿಯಾದ,(ಇಮಾಂ ಶಿವಾಂ)ಈ ಆದಿಶಕ್ತಿರೂಪಿಣಿಯಾದ ಮಂಗಳಸ್ವರೂಪೆಯನ್ನು,(ವನ್ದೇ)ವಂದಿಸುತ್ತೇನೆ.
ವಿಷ್ಣುಂ ತು ಶೇಷಶಯನಂ ಗರುಡಾಧಿರೂಢಂ |
ಕೃಷ್ಣಂ ಸುದರ್ಶನಯುತಂ ಮುರವೈರಿಮೀಶಮ್ ||
ಸತ್ತ್ವಂ ಶುಭಂ ಗುಣನಿಧಿಂ ರಘುವಂಶಕೀರ್ತಿಂ |
ವನ್ದೇ ಹರಿಂ ಗಜಗತಿಂ ಕಲಿಪಾಪನಾಶಮ್ ||೪||
(ಶೇಷಶಯನಂ)ಆದಿಶೇಷನ ಮೇಲೆ ಪವಡಿಸಿದ,(ಗರುಡಾಧಿರೂಢಂ)ವಿನುತೆಯ ಮಗನಾದ ವೈನತೇಯನೆಂಬ ಗರುಡನ ಬೆನ್ನೇರಿ ಸಂಚರಿಸುವ,ಗರುಡವಾಹನನಾದ,(ಸುದರ್ಶನಯುತಂ)ಸುದರ್ಶನಚಕ್ರವನ್ನು ತನ್ನ ಕರದಲ್ಲಿನ ಆಯುಧವನ್ನಾಗಿ ಧರಿಸಿದ,(ಮುರವೈರಿಮ್)ಮುರಾಸುರನೆಂಬ ದುಷ್ಟರಕ್ಕಸನನ್ನು ಕೊಂದ,(ಸತ್ತ್ವಂ)ಸಾತ್ವಿಕಗುಣಭರಿತನಾದ,(ಗುಣನಿಧಿಂ)ಸದ್ಗುಣಪೂರ್ಣನಾದ,(ಶುಭಂ)ಸದಾ ಸರ್ವರಿಗೂ ಮಂಗಳಕರನಾದ,(ರಘುವಂಶಕೀರ್ತಿಂ)ರಘುಕುಲಭೂಷಣನೆನಿಸಿದ ಶ್ರೀರಾಮಾವತಾರಿಯಾದ,(ಕೃಷ್ಣಂ)ಪೂರ್ಣಾವತಾರಿಯೆನಿಸಿದ ವಾಸುದೇವನಾದ,(ಗಜಗತಿಂ)ಮೊಸಳೆ ಹಿಡಿದೆಳೆದಾಗ ಪ್ರಾಣಭಯದಲ್ಲಿ ಹರಿಯನ್ನು ಗೋಗರೆದು ಶರಣಾದ ಗಜೇಂದ್ರನಿಗೆ ಮೋಕ್ಷವನಿತ್ತ,(ಹರಿಂ)ಶ್ರೀಹರಿಸ್ವರೂಪನಾದ,(ತು ಕಲಿಪಾಪನಾಶಮ್)ಕೇವಲ ತನ್ನ ನಾಮಸ್ಮರಣೆಮಾತ್ರದಿಂದಲೇ ಕಲಿಯುಗದ ಪಾಪಗಳನ್ನು ತೊಳೆಯುವ,(ವಿಷ್ಣುಮೀಶಂ)ವಿಷ್ಣು: ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ-ಸಮಸ್ತ ಜಗತ್ತನ್ನು ವ್ಯಾಪಿಸಿ,ಅದನ್ನು ಸ್ವತ: ಪ್ರವೇಶಿಸಿ,ಅದರೊಳಗಿರುವ ಮಹಾವಿಷ್ಣುಸ್ವರೂಪನೂ,ಜಗದೊಡೆಯನೂ ಆದವನನ್ನು (ವಂದೇ)ವಂದಿಸುತ್ತೇನೆ.
ಬ್ರಹ್ಮನ್! ವಿಧೀಶ! ವರದಂ ಚತುರಾನನಾಖ್ಯಂ |
ಸೃಷ್ಟಿಂ ವಿರಚ್ಯ ಜಗತಾಂ ಹರಿನಾಭಿದೇಶಮ್ ||
ಪದ್ಮಾಸನಂ ನಿಗಮದಂ ನಿಖಿಲಂ ಪುರಾಣಂ |
ತ್ವಾಂ ಶಾರದಾಪ್ರಿಯವರಂ ನಿಜಲೋಕಮೀಡೇ ||೫||
(ಚತುರಾನನಾಖ್ಯಂ)ಚತುರ್ಮುಖಬ್ರಹ್ಮನೆಂಬ ಹೆಸರಿನ ಸೃಷ್ಟಿಕರ್ತನಾದ(ಬ್ರಹ್ಮನ್)ಹೇ ಬ್ರಹ್ಮನೇ! (ವಿಧೀಶ)ವಿಧಿಬರಹದ ಲೇಖಕನೇ! ವಿಧಿ ನಿರ್ಣಯಕಾರನೇ! ವಿಧಾತನೇ! (ವರದಂ)ಬೇಡಿದವರಿಗೆ ಕೃಪಾಳುವಾಗಿ ವರವನ್ನು ನೀಡುವ, (ಸೃಷ್ಟಿಂ ವಿರಚ್ಯ ಜಗತಾಂ)ಈ ಪ್ರಪಂಚದ/ಬ್ರಹ್ಮಾಂಡದ ಸೃಷ್ಟಿಯನ್ನು ಮಾಡಿ, (ಹರಿನಾಭಿದೇಶಮ್ ಪದ್ಮಾಸನಂ)ಶ್ರೀಮನ್ನಾರಾಯಣನ ಹೊಕ್ಕುಳಲ್ಲಿರುವ ತಾವರೆಯಲ್ಲಿ ಪದ್ಮಾಸನನಾಗಿ ಆಸೀನನಾದ, (ನಿಖಿಲಂ ನಿಗಮದಂ ಪುರಾಣಂ)ಶ್ರೀಹರಿ ಹಾಗೂ ಆದಿಮಾಯೆಯನ್ನು ಕುರಿತು ತಪಗೈದು ಪಡೆದ ಸಕಲ ವೇದಪುರಾಣಾದಿಗಳನ್ನು ತನ್ನ ನಾಲ್ಕು ಮುಖ(ಬಾಯಿ)ಗಳಿಂದ ಲೋಕಮುಖಕ್ಕೆ ಪ್ರಪ್ರಥಮವಾಗಿ ಪ್ರಕಾಶಿಸಿ ಪಿತಾಮಹನೂ,ಪುರಾತನನೂ ಎಂದೆನಿಸಿದ, (ಶಾರದಾಪ್ರಿಯವರಂ)ವೀಣಾಪಾಣಿ-ಪನ್ನಗವೇಣಿ-ಕಲಕೀರವಾಣಿ-ಬ್ರಹ್ಮಾಣಿ(ಬ್ರಹ್ಮಸತಿ)ಯೂ ಬ್ರಾಹ್ಮಣಿ(ಬ್ರಹ್ಮಸುತೆ)ಯೂ ಆದ(ಏಕೆಂದರೆ ಎಲ್ಲರೂ ಬ್ರಹ್ಮಸೃಷ್ಟಿಯಾದುದರಿಂದ ಮನುಷ್ಯಲೋಕದೃಷ್ಟಿಯಿಂದ ಅವನಿಗೆ ಮಕ್ಕಳೇ ಆಗುತ್ತಾರೆ. ಆದರೆ “ನ ದೈವ ಚರಿತಂ ಚರೇತ್” ಎಂಬ ಪೂರ್ವೋಕ್ತಿಯಂತೆ ದೇವಲೋಕದವರ ನಡತೆಯನ್ನು ಅನುಸರಿಸತಕ್ಕದ್ದಲ್ಲ. ಮನುಷ್ಯಲೋಕದ ನಿಯಮಗಳು ದೇವಾದಿಗಳಿಗೆ ಅನ್ವಯಿಸುವುದಿಲ್ಲ.) ವಿದ್ಯಾಧಿದೇವತೆಯೆನಿಸಿದ ಸರಸ್ವತಿ/ಶಾರದೆಯ ಪ್ರಿಯರಮಣನಾದ, (ನಿಜಲೋಕಂ)ಸತ್ಯಲೋಕವಾಸಿಯಾದ (ತ್ವಾಂ ಈಡೇ)ನಿನ್ನನ್ನು ಸ್ತುತಿಸುತ್ತೇನೆ.
(ಉಪಜಾತಿವೃತ್ತಮ್)
ಷಾಣ್ಮಾತುರಂ ಶಿಖಿವಹಂ ಸುರಸೈನ್ಯಮುಖ್ಯಂ |
ರುದ್ರಾತ್ಮಜಂ ತನಯದಂ ಗಿರಿಜಾಪ್ರಸೂತಮ್ ||
ಶ್ರೀಕುಕ್ಕೆನಾಥಮರವಿನ್ದದಳಾಯತಾಕ್ಷಂ |
ವನ್ದೇ ಕುಮಾರಗಿರಿಸಾನುಪುರಾಧಿವಾಸಮ್ ||೬||
(ಷಾಣ್ಮಾತುರಂ)ಆರು ಮುಖಗಳಿಂದ ಆರು ಮಂದಿ ಕೃತ್ತಿಕಾದೇವಿಯರ ಸ್ತನ್ಯಪಾನಮಾಡಿ ಬೆಳೆದು ಆರು ತಾಯಂದಿರ ಶಿಶುವೆಂದು ಷಾಣ್ಮಾತುರನೆಂದೂ,ಆರು ಮೊಗದವನಾದ್ದರಿಂದ ಷಣ್ಮುಖನೆಂದೂ ಪ್ರಸಿದ್ಧನಾದ, (ಶಿಖಿವಹಂ)ನವಿಲನ್ನು ತನ್ನ ವಾಹನವಾಗಿ ಮಾಡಿಕೊಂಡ, (ಸುರಸೈನ್ಯಮುಖ್ಯಂ)ದೇವಸೈನ್ಯದ ಸೇನಾನಿಯಾಗಿ ಲೋಕಕಂಟಕನಾಗಿದ್ದ ತಾರಕಾಸುರನನ್ನು ಸಂಹರಿಸಿದ, (ರುದ್ರಾತ್ಮಜಂ)ಶಿವನ ನಂದನನಾದ,(ಗಿರಿಜಾಪ್ರಸೂತಮ್)ಪಾರ್ವತಿಯಲ್ಲಿ ಜನಿಸಿದ, (ತನಯದಂ)ತನ್ನ ಸೇವೆಗೈದು ಬೇಡಿದರೆ ಸಂತಾನವಾಗದವರಿಗೆ ಸತ್ಪುತ್ರಾದಿ ಸಂತತಿಯನ್ನು ದಯಪಾಲಿಸುವ,(ಕುಮಾರಗಿರಿಸಾನುಪುರಾಧಿವಾಸಮ್)ಕುಮಾರಪರ್ವತದ ಶ್ರೋಣಿ/ತಪ್ಪಲುಪ್ರದೇಶದಲ್ಲಿರುವ ಪ್ರಸಿದ್ಧವಾದ ಕುಮಾರಧಾರಾನದೀತೀರದ ಪುಣ್ಯತಮವಾದ ತೀರ್ಥಕ್ಷೇತ್ರದಲ್ಲಿ ನೆಲೆಸಿರುವ,(ಅರವಿನ್ದದಳಾಯತಾಕ್ಷಂ)ತಾವರೆಯ ಎಸಳಿನಂತಹ ಸುಂದರವಾದ,ಅಗಲವಾದ ನಯನಗಳಿಂದ ಕೂಡಿದ,(ಶ್ರೀಕುಕ್ಕೆನಾಥಂ)ಕುಕ್ಕೆಸುಬ್ರಮಣ್ಯಕ್ಷೇತ್ರಾಧಿಪತಿಯನ್ನು (ವನ್ದೇ)ವಂದಿಸುತ್ತೇನೆ.
(ಶಿಖರಿಣೀವೃತ್ತಮ್)
ಹರಿ: ಸ್ಮರ್ಯೋ ವೈದ್ಯೇ ಶಯನಸಮಯೇ ಮಾರುತಿವಿಭು: |
ಗುರು: ಸ್ತುತ್ಯೋ ಕಾವ್ಯೇ ಪ್ರಥಮಚರಣೇ ಶ್ರೀಗಣಪತಿ: ||
ಪರಾ ನುತ್ಯಾ ಕಾಲೇ ಸತಿ ಸುಮಧುರೇ ಭೋಜನಪರೇ |
ಪತಿಶ್ಚಿನ್ತ್ಯೋ ರತ್ಯೌ ಸರಸಸಹಿತೇ ಶ್ರೀಯುತಹರಿ: ||೭||
(ವೈದ್ಯೇ)ಅನಾರೋಗ್ಯದ ಚಿಕಿತ್ಸೆಗಾಗಿ ವೈದ್ಯರ ಭೇಟಿಮಾಡುವಾಗ/ ಔಷಧಿಮಾಡುವಾಗ, (ಹರಿ: ಸ್ಮರ್ಯ:) “ಶರೀರೇ ಜರ್ಝರೀಭೂತೇ ವ್ಯಾಧಿಗ್ರಸ್ತೇ ಕಲೇವರೇ | ಔಷಧೀ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿ: ||” “ಸಂಕಟ ಬಂದಾಗ ವೇಂಕಟರಮಣ” ಎಂಬಂತೆ ಶ್ರೀಹರಿಯನ್ನು ಸ್ಮರಿಸುತ್ತಿರಬೇಕು. (ಶಯನಸಮಯೇ)ಮಲಗುವ ಕಾಲದಲ್ಲಿ (ಮಾರುತಿವಿಭು:) “ರಾಮಂ ಸ್ಕನ್ದಂ ಹನೂಮನ್ತಂ ವೈನತೇಯಂ ವೃಕೋದರಮ್ | ಶಯನೇ ಯ: ಸ್ಮರೇನ್ನಿತ್ಯಂ ದು:ಸ್ವಪ್ನಂ ತಸ್ಯ ನಶ್ಯತಿ” “ಆಞ್ಜನೇಯಂ ಮಹಾವೀರಂ ಕೋವಿದಂ ರಿಪುಭೈರವಮ್ | ವಾನರಾಧ್ಯಕ್ಷಸಂಸೇವ್ಯಂ ರಾಮದೂತಂ ಸ್ಮರಾಮ್ಯಹಮ್” ಎಂಬಂತೆ ಹನೂಮಂತನ ಸ್ಮರಣೆ ಮಾಡಿದರೆ ದು:ಸ್ವಪ್ನಗಳು ಕಾಡುವುದಿಲ್ಲ. (ಕಾವ್ಯೇ ಪ್ರಥಮಚರಣೇ)ಯಾವುದೇ ಗ್ರಂಥಾದಿಗಳ ರಚನೆಯ ಆರಂಭದಲ್ಲಿ, (ಶ್ರೀಗಣಪತಿ:)ಸರ್ವವಿಘ್ನನಿವಾರಕನೂ,ಸರ್ವಕಾರ್ಯಾರ್ಥಸಾಧಕನೂ ಆದಿವಂದಿತನೂ ಆದ ಮಹಾಗಣಪತಿಯ ಹಾಗೂ (ಗುರು: ಸ್ತುತ್ಯ:) “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” “ಮನಶ್ಚೇನ್ನ ಲಗ್ನಂ ಗುರೋರಙ್ಘ್ರಿಪದ್ಮೇ ತತ: ಕಿಂ ತತ: ಕಿಂ ತತ: ಕಿಂ ತತ: ಕಿಮ್” ಎಂಬಂತೆ ಶ್ರೀಗುರುಚರಣಗಳ ಸ್ಮರಣೆ,ಸ್ತುತಿಗಳನ್ನು ಮಾಡಬೇಕು. (ಸುಮಧುರೇ ಭೋಜನಪರೇ ಕಾಲೇ ಸತಿ)ಮೃಷ್ಟಾನ್ನಭೋಜನವನ್ನು ಮಾಡುವ ಹೊತ್ತಿಗೆ (ಪರಾ ನುತ್ಯಾ)ಪರಾಶಕ್ತಿಯಾದ, ಶಿವನಿಗೂ ಭಿಕ್ಷೆ ನೀಡಿದ ಅನ್ನಪೂರ್ಣೆಯನ್ನು ಸ್ತುತಿಸಬೇಕು. (ಸರಸಸಹಿತೇ ರತ್ಯೌ)ಸರಸದಿಂದ ಕೂಡಿದ ಮೈಥುನಕಾಲದಲ್ಲಿ ( ಪತಿ: ಶ್ರೀಯುತಹರಿ: ಚಿನ್ತ್ಯ:) ತನ್ನ ಗಂಡನನ್ನು ಸಾಕ್ಷಾತ್ ಶ್ರೀಹರಿಸ್ವರೂಪನೆಂದು ಭಾವಿಸಬೇಕು.
(ಶಾರ್ದೂಲವಿಕ್ರೀಡಿತವೃತ್ತಮ್)
ವನ್ದೇ ಹಸ್ತಿಮುಖಂ ಗುರುಂ ಸರಸಿಜಂ ವನ್ದೇ ಜಗತ್ಪಾಲಕಂ |
ವನ್ದೇ ಪನ್ನಗಭೂಷಣಂ ಗಿರಿಸುತಾಂ ವನ್ದೇ ರಮಾಂ ಶಾರದಾಮ್ ||
ವನ್ದೇ ಪನ್ನಗರೂಪಿಣಂ ಸುರಮುನಿಂ ವ್ಯಾಸಂ ಶುಕಂ ಶಙ್ಕರಂ |
ವನ್ದೇ ಯೋಗಿಭಿರನ್ತರಾತ್ಮಕುಹರೇ ಧ್ಯಾತಂ ಪರಂ ನಿರ್ಗುಣಮ್ ||೮||
(ಹಸ್ತಿಮುಖಂ)ಕರಿವದನನಾದ ಶ್ರೀಗಣೇಶನನ್ನು ಹಾಗೂ (ಗುರುಂ) ತ್ರಿಮೂರ್ತಿಸ್ವರೂಪನಾದ ದತ್ತಾತ್ರೇಯಾದಿ ಗುರುಪರಂಪರೆಯನ್ನು (ವನ್ದೇ)ವಂದಿಸುತ್ತೇನೆ. (ಸರಸಿಜಂ)ಪದುಮಸಂಭವನಾದ ಸೃಷ್ಟೀಶನೂ,ವಿಧೀಶನೂ ಆದ ಚತುರಾನನಬ್ರಹ್ಮನನ್ನೂ, (ಜಗತ್ಪಾಲಕಂ)ತ್ರೈಲೋಕನಾಥನೂ,ಸ್ಥಿತಿಕರ್ತನೂ ಆದ ಹರಿಯನ್ನೂ (ವನ್ದೇ) ವಂದಿಸುತ್ತೇನೆ. (ಪನ್ನಗಭೂಷಣಂ)ನಾಗಾಭರಣನಾದ, ಲಯಕರ್ತೃವಾದ ಪರಶಿವನನ್ನೂ (ಗಿರಿಸುತಾಂ) ಅವನ ಅರ್ಧಾಂಗಿನಿಯಾದ ಗಿರಿಜೆಯನ್ನೂ (ವನ್ದೇ)ನಮಿಸುತ್ತೇನೆ. (ರಮಾಂ)ಶ್ರೀಹರಿವಲ್ಲಭೆಯೂ, ಸರ್ವಸಂಪತ್ತಿಗೆ ಅಧಿದೇವತೆಯೂ ಆದ ಮಹಾಲಕ್ಷ್ಮಿಯನ್ನೂ (ಶಾರದಾಮ್)ಶರತ್ಕಾಲದ ಪೂರ್ಣಚಂದ್ರನ ಬೆಳದಿಂಗಳಂತಹ ವರ್ಣಯುತಳೂ, ವಿದ್ಯಾಧಿದೇವತೆಯೂ ಬ್ರಹ್ಮಾಣಿಯೂ ಆದ ಸರಸ್ವತಿಯನ್ನೂ (ವನ್ದೇ)ವಂದಿಸುತ್ತೇನೆ. (ಪನ್ನಗರೂಪಿಣಂ)ಸರ್ಪಾಕಾರದಲ್ಲಿ ಪೂಜಿತನಾದ, ಚರ್ಮಮಾನಸಿಕಾಧಿವ್ಯಾಧಿಗಳ ಪರಿಹಾರಕನೂ,ಸಂತಾನಪ್ರದನೂ,ಜಲಮೂಲದಾತೃವೂ ಆದ ಸುಬ್ರಹ್ಮಣ್ಯನನ್ನೂ, (ಸುರಮುನಿಂ)ಸದಾ ನಾರಾಯಣಮಂತ್ರಜಪಕರೂ, ತ್ರಿಲೋಕಸಂಚಾರಿಗಳೂ,ದೇವರ್ಷಿಗಳೂ, ಮೋಕ್ಷದಾಯಕರೂ(ನಾರಾ:- ಮೋಕ್ಷ , ದ- ದದಾತಿ,ಕೊಡುತ್ತಾರೆ)ಆದ ನಾರದಮುನಿಗಳನ್ನೂ, (ವ್ಯಾಸಂ)ಕಲಿಯುಗದ ಜನರು ಅಲ್ಪಮೇಧಾವಿಗಳೆಂದು, ಅವರ ಅನುಕೂಲಕ್ಕಾಗಿ, ಅನಂತವಾಗಿ,ಓತಪ್ರೋತವಾಗಿದ್ದ ವೇದರಾಶಿಯನ್ನು ಕ್ರಮಬದ್ಧವಾಗಿ ನಾಲ್ಕು ವೇದಗಳಾಗಿ ವಿಭಾಗಿಸಿದ, ವೇದಾಂತವನ್ನು/ವೇದಸಾರವನ್ನು ಬ್ರಹ್ಮಸೂತ್ರರೂಪದಲ್ಲಿ ನಿರ್ವಚಿಸಿದ, ಮತ್ತೂ ಅರ್ಥವಾಗದವರಿಗೆ “ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ | ಬಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರಹರೇದಿತಿ” ಎಂಬಂತೆ ವೇದವು ಅಲ್ಪಜ್ಞರ ಅಪಾರ್ಥಗಳಿಗೆ ಹೆದರಿ, ರಾಮಾಯಣ-ಮಹಾಭಾರತದಂತಹ ಇತಿಹಾಸಗಳು ಹಾಗೂ “ಮ-ದ್ವಯಂ ಭ-ದ್ವಯಂ ಚೈವ ಬ್ರ-ತ್ರಯಂ ವ-ಚತುಷ್ಟಯಮ್ | ಅ-ನಾ-ಪ-ಲಿಙ್-ಗ-ಕೂ-ಸ್ಕಾ-ನಿ ಪುರಾಣಾನಿ ಪ್ರಚಕ್ಷತೇ” ಎಂಬಂತೆ ಮತ್ಸ್ಯ-ಮಾರ್ಕಣ್ಡೇಯ, ಭವಿಷ್ಯ-ವಿಷ್ಣು/ದೇವೀಭಾಗವತ, ಬ್ರಹ್ಮ-ಬ್ರಹ್ಮವೈವರ್ತ-ಬ್ರಹ್ಮಾಣ್ಡ, ವರಾಹ-ವಾಮನ-ವಾಯು-ವಿಷ್ಣು, ಅಗ್ನಿ-ನಾರದ-ಪದ್ಮ-ಲಿಙ್ಗ-ಗರುಡ-ಕೂರ್ಮ-ಸ್ಕನ್ದಪುರಾಣಗಳೆಂಬ ಅಷ್ಟಾದಶ ಮಹಾಪುರಾಣಗಳು ಹಾಗೂ ಗಣೇಶ-ಪರಾಶರ-ಕಲ್ಕಿ-ಶಿವ-ಶಿವಧರ್ಮ-ಸನತ್ಕುಮಾರ-ನಾರಸಿಂಹ-ಆದಿ-ವಾಸಿಷ್ಠ-ಕಾಪಿಲ-ಮಾನವ-ಔಷನಸ-ವಾರುಣ-ಕಾಲಿಕಾ-ಸಾಮ್ಬ-ಸೌರ-ಮಾರೀಚ-ಭಾರ್ಗವಪುರಾಣಗಳೆಂಬ ೧೮ ಉಪಪುರಾಣಗಳ ಮೂಲಕ ವೇದಾರ್ಥವನ್ನರಿಯಬೇಕೆಂಬುದಾಗಿ, ಅಂತಹವುಗಳನ್ನು ಸರಳವಾಗಿ ವಿರಚಿಸಿ, ಕಥಾರೂಪದಲ್ಲಿ ವೇದತತ್ವವನ್ನು ನಿಹಿತಗೊಳಿಸಿದ, “ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ | ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮ: ||” ಎಂಬಂತೆ ಸಾಕ್ಷಾತ್ ಮಹಾವಿಷ್ಣುವಿನ ಅವತಾರಿಯಾದ, ಭಗವಾನ್ ಕೃಷ್ಣದ್ವೈಪಾಯನ ಬಾದರಾಯಣ ವೇದವ್ಯಾಸರನ್ನೂ, (ಶುಕಂ)ವ್ಯಾಸಪುತ್ರರೂ,ರುದ್ರಾಂಶರೂ,ಅರಣಿಮಥನ-ಘೃತಾಚೀ ಅಪ್ಸರಾಪ್ರೇರಣಾ ಸಂಭವರೂ, ನಿತ್ಯಮುಕ್ತರೂ, ಪರಮಭಾಗವತರೂ,ವಿರಕ್ತರೂ, ಭಾಗವತಪುರಾಣವನ್ನು ಪರೀಕ್ಷಿತಮಹಾರಾಜನಿಗೆ ಮೊತ್ತಮೊದಲಿಗೆ ಉಪದೇಶಿಸಿ, ಮೋಕ್ಷಪಥಪ್ರದರೂ ಆದ ಶುಕಮಹಾಮುನಿಗಳನ್ನೂ, (ಶಙ್ಕರಂ)ಅದ್ವೈತಸಿದ್ಧಾಂತಪ್ರತಿಷ್ಠಾಪನಾಚಾರ್ಯರೂ, ಶಿವಸ್ವರೂಪರೂ, ಗೋವಿಂದಭಗವತ್ಪಾದರ ಶಿಷ್ಯರೂ, ಅಸಂಖ್ಯದೇವ-ದೇವೀ-ಗುರು-ವೇದಾಂತಪರ ಸ್ತೋತ್ರಗಳು,ಪ್ರಕರಣಗ್ರಂಥಗಳು,ಪ್ರಸ್ಥಾನತ್ರಯಭಾಷ್ಯಗಳು ಮತ್ತಿತರ ಹಲವಾರು ಸಂಸ್ಕೃತಕೃತಿಗಳನ್ನು ರಚಿಸಿ, ಸೂರ್ಯಗಣಪತ್ಯಂಬಿಕಾಶಿವವಿಷ್ಣು-ಎಂಬ ಪಂಚಬ್ರಹ್ಮರ ಪಂಚಾಯತನ ಪೂಜಾಪದ್ಧತಿಯ ಮೂಲಕ ಸೈದ್ಧಾಂತಿಕ ಭೇದಭಾವ,ವಿದ್ವೇಷಗಳನ್ನು ತೊಡೆದುಹಾಕಿದವರೂ,ನಾಲ್ಕು ವೇದಗಳ ಸಂರಕ್ಷಣೆಗೆ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದವರೂ ಆದ ಪೂಜ್ಯ ಆದಿಶಂಕರಭಗವತ್ಪಾದರನ್ನೂ (ವನ್ದೇ)ನಮಿಸುತ್ತೇನೆ. (ಯೋಗಿಭಿರನ್ತರಾತ್ಮಕುಹರೇ ಧ್ಯಾತಂ)ಯೋಗಿಗಳಿಂದ ತಮ್ಮೊಳಗೆ ಧ್ಯಾನದಲ್ಲಿ ಕಂಡುಕೊಳ್ಳಲ್ಪಡುವ, (ಪರಂ ನಿರ್ಗುಣಮ್ )ಶ್ರೇಷ್ಠವಾದ ನಿರ್ಗುಣ,ನಿರಾಕಾರಪರಬ್ರಹ್ಮವನ್ನು (ವನ್ದೇ)ವಂದಿಸುತ್ತೇನೆ.
(ಅನುಷ್ಟುಪ್ ಛನ್ದ:)
ವಿವಿಧದೇವಪಾರಮ್ಯಂ | ಅಷ್ಟಕಂ ದು:ಖನಾಶನಮ್ ||
ಸರ್ವವಾಞ್ಛಿತಸಿದ್ಧ್ಯರ್ಥಂ | ಪಠೇನ್ನಿತ್ಯಂ ಸುಭಕ್ತಿತ: ||೯||
(ದು:ಖನಾಶನಂ ವಿವಿಧದೇವಪಾರಮ್ಯಂ ಅಷ್ಟಕಂ)ಸರ್ವದು:ಖಾಪಹಾರಿಯಾದ, ಈ ವಿವಿಧದೇವಾನುದೇವತೆಗಳ ಮಹಿಮೆಯನ್ನು ವರ್ಣಿಸುವ ಅಷ್ಟಕವನ್ನು (ಸರ್ವವಾಞ್ಛಿತಸಿದ್ಧ್ಯರ್ಥಂ)ಸಕಲ ಇಷ್ಟಾರ್ಥಗಳ ಪ್ರಾಪ್ತಿಗಾಗಿ (ನಿತ್ಯಂ ಸುಭಕ್ತಿತ:)ಪ್ರತಿದಿನವೂ ಒಳ್ಳೆಯ ಶ್ರದ್ಧಾಭಕ್ತಿಗಳಿಂದ (ಪಠೇತ್) ಓದಬೇಕು, ಪಠಣ ಮಾಡಬೇಕು.
ಧರ್ಮಾರ್ಥಕಾಮಮೋಕ್ಷಾಖ್ಯಂ | ಚತುರ್ವಿಧಫಲಪ್ರದಮ್ ||
ಪ್ರಭಾತೇ ಚ ಪಠೇತ್ಯ: ಸ: | ಸರ್ವವೇದಾರ್ಥವಿದ್ಭವೇತ್ ||೧೦||
ಇದರಿಂದ ಪ್ರಸನ್ನರಾಗಿ(ಧರ್ಮಾರ್ಥಕಾಮಮೋಕ್ಷಾಖ್ಯಂ)ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ (ಚತುರ್ವಿಧಫಲಪ್ರದಮ್)ನಾಲ್ಕುವಿಧವಾದ ಪುರುಷಾರ್ಥಗಳನ್ನು ಈ ಸ್ತೋತ್ರಪ್ರತಿಪಾದ್ಯದೇವತೆಗಳು ಪಾಠಕನಿಗೆ ದಯಪಾಲಿಸುತ್ತಾರೆ. (ಚ ಪ್ರಭಾತೇ ಯ: ಪಠೇತ್ ಸ:)ಹಾಗೆಯೇ, ಪ್ರಾತ:ಕಾಲದಲ್ಲಿ ಶುದ್ಧಮನಸ್ಸಿನಿಂದ ಯಾರು ಇದನ್ನು ನಿತ್ಯವೂ ಓದುತ್ತಾನೋ, ಅವನು (ಸರ್ವವೇದಾರ್ಥವಿದ್ಭವೇತ್)ಸಕಲವೇದಸಾರವನ್ನು ಬಲ್ಲ ಸುಜ್ಞಾನಿಯಾಗುವುದರಲ್ಲಿ ಸಂಶಯವಿಲ್ಲ.
ಇತಿ ಶ್ರೀ ಸದ್ಗುರುಪ್ರೇರಣಯಾ ದಮ್ಬೆಕೃಷ್ಣಮೂರ್ತಿವಿರಚಿತಮಿದಂ ವಿವಿಧದೇವತಾಷ್ಟಕಸ್ತೋತ್ರಂ ಸದ್ಗುರುಚರಣಯುಗೇ ಸಮರ್ಪಿತಮಸ್ತು ||
||ಶ್ರೀಗುರುಭ್ಯೋ ನಮ:||
||ಹರೇ ರಾಮ||
Comments
Post a Comment