ಸ್ತೋತ್ರಸಂಹಿತಾ ೫.೧ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)
ಖಕುನ್ತಲಃ ಖಗಾರೂಢಃ ಖಗೇನ್ದ್ರಧ್ವಜಸ್ಯನ್ದನಃ | ಖದ್ಯೋತಃ ಖಣ್ಡಪರಶುಃ ಖಣ್ಡೀ ಖರಣಸಃ ಖರಾ || ೧೩೩ || (೮೭೯) ಖಕುಂತಲ ಹರಿ ವಾಸುದೇವನೆ ಖಕುಂತಲನು ವ್ಯೋಮಕೇಶನು ಮುಕುಂದನೆ ಗಗನವ್ಯಾಪಿ ಕೇಶವಿರುವವನೆ | ವಿಕುಂಠನೆ ಗುಂಗುರಿನ ಕೇಶನೆ ಪ್ರಕಾಶನೆ ಕೇಶವನೆ ಕೃಷ್ಣನೆ ಸುಕೇಶನೆ ಮಾಧವನೆ ಗೀತಾಚಾರ್ಯ ಗೋವಿಂದ || ೮೭೨ || ಖಗಾರೂಢ ನೆ ಗರುಡವಾಹನ ಖಗವು ಗಗನದಿ ಗಮಿಪ ವಿಹಗವು ಗಗನದಲಿ ಖಗವೇರಿ ಗಮಿಸುವ ವಾಸುದೇವ ಹರಿ | ಬಗೆಬಗೆಯಲವತಾರ ತಾಳಿದ ಮಗುವಾಗಿ ದೇವಕಿಗೆ ಕೃಷ್ಣನು ನಗುಮೊಗದಿ ಸಕಲರನು ಕೈವಶಮಾಡಿದನು ಕೃಷ್ಣ || ೮೭೩ || ಖಗೇಂದ್ರಧ್ವಜಸ್ಯಂದನ ನೆ ಹರಿ ಖಗೇಂದ್ರನು ತಾ ಗರುಡನವನನು ಭಗವಂತ ತಾನೇರಿ ರಥಕೆ ಧ್ವಜವಮಾಡಿಹನು | ಖಗವಾಹನನೆ ಗರುಡನೇ ಧ್ವಜ ಮಗನು ಮನ್ಮಥ ಲೋಕಮಾಯೆಯು ನಗಧರನೆ ಜಗದೊಡೆಯ ಪರಬ್ರಹ್ಮಾತ್ಮ ಶ್ರೀಕೃಷ್ಣ || ೮೭೪ || ಖದ್ಯೋತ ನೆ ಶ್ರೀಕೃಷ್ಣದೇವನೆ ಖದ್ಯುತಿಯೆ ಬಾನುವನು ಬೆಳಗುವ ವಿದ್ಯೆಗಧಿಪತಿ ಜ್ಞಾನಸೂರ್ಯನೆ ಗಗನಸೂರ್ಯ ಹರಿ | ಸದ್ಯ ಮುಕ್ತಿಪ್ರದನೆ ಕೃಷ್ಣನೆ ಪದ್ಯಪ್ರೀಯನೆ ಗದ್ಯಪ್ರಿಯ ಹರಿ- -ಯಾದ್ಯ ಪೂಜಿತ ಪರಬ್ರಹ್ಮವೆ ರಕ್ಷಿಸನವರತ || ೮೭೫ || ಖಂಡಪರಶು ವೆ ಪರಶುರಾಮನೆ ಖಂಡಿಸಿದೆ ನೀ ದುಷ್ಟ ರಾಜರ ದಂಡಿಸಿದೆ ಚಂಡಾಡಿರುವೆ ಭಾರ್ಗವನೆ ಶ್ರೀಹರಿಯೆ | ಖಂಡ ಕೊಡಲಿಯ ತುಂಡ ಪಿಡಿಯುತ ಭಂಡ ಕ್ಷತ್ರಿಯರನ್ನು ದಂಡಿಸಿ ಚಂಡವಿಕ್ರಮಿಯೆನಿಸಿದಾವೇಶಾವತಾರಿ ವಿಭೋ || ೮೭೬ || ಖಂಡೀ ಹರಿ ಪರಬ್ರಹ್ಮವೆ ಖಂಡದಂತೆಯೆ ತೋರಿಕೊಂಡ...